ವಿಶೇಷ – Peepal Media

ಟಾಕ್ಸಿಕ್ “ಟಿಕೆಟ್” ಬಾಲಕ ಕಬೀರ್ ಪಹ್ವಾ
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಾಲ ನಟ ಕಬೀರ್ ಪಹ್ವಾ ಬಗ್ಗೆ ತಿಳಿದುಕೊಳ್ಳಬೇಕಾದ ಒಂದಷ್ಟು ವಿಷಯಗಳಿವೆ, ಬನ್ನಿ ಇವರ ಬಗ್ಗೆ ತಿಳಿಯೋಣ.. ಆಝಾದ್ ಕಂಡಿಗ ಅವರ ಬರಹದಲ್ಲಿ

ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿ ಬಂದ ಪ್ಯಾನ್ ಇಂಡಿಯಾ ಸಿನಿಮಾ “ಟಾಕ್ಸಿಕ್” ಬಗ್ಗೆ ಪರ ವಿರೋಧಗಳ ಭರಾಟೆಯ ನಡುವೆ ಪ್ರೇಕ್ಷಕರ ಮನಗೆದ್ದು ಸಿನಿಮಾ ಲೋಕದಲ್ಲಿ ಮನೆ ಮಾತಾಗಿರುವ ಬಾಲ ನಟ ಕಬೀರ್ ಪಹ್ವಾ ಬಗ್ಗೆ ತಿಳಿದುಕೊಳ್ಳಬೇಕಾದ ಒಂದಷ್ಟು ವಿಷಯಗಳಿವೆ, ಬನ್ನಿ ಇವರ ಬಗ್ಗೆ ತಿಳಿಯೋಣ.

ಬೇಡಿಕೆಯ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಪುಟ್ಟ ಪ್ರತಿಭೆಗಳ ಸಾಲಿನಲ್ಲಿ ಸದ್ಯ ಅತಿ ಹೆಚ್ಚು ಚರ್ಚೆಗೊಳಗಾಗುತ್ತಿರುವ ಹೆಸರು ಕಬೀರ್ ಪಹ್ವಾ. ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ, ರಾಕಿಂಗ್ ಸ್ಟಾರ್ ಯಶ್ ನಾಯಕತ್ವದಲ್ಲಿ ಮೂಡಿಬಂದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾದಲ್ಲಿ ಬಾಲ ನಟನಾಗಿ ಕಬೀರ್ ಕಾಣಿಸಿಕೊಳ್ಳುತ್ತಿರುವುದು ಇಡೀ ದೇಶದ ಸಿನಿಪ್ರಿಯರ ಕಣ್ಣು ಈ ಪುಟಾಣಿಯತ್ತ ನೆಟ್ಟಿದೆ.

ಹತ್ತರ ಹರೆಯದ ದೆಹಲಿ ಮೂಲದ ಕಬೀರ್ ಪಹ್ವಾ ಅವರ ನಟನಾ ಪಯಣವು ಅತ್ಯಂತ ರೋಚಕವಾಗಿದೆ. ದೊಡ್ಡವರಂತೆ ಗಂಭೀರವಾಗಿ ಯೋಚಿಸುವ ಕಣ್ಣುಗಳು, ಕ್ಯಾಮೆರಾ ಎದುರು ಯಾವುದೇ ಮುಜುಗರವಿಲ್ಲದೆ ಪ್ರದರ್ಶಿಸುವ ಸ್ವಾಭಾವಿಕ ಹಾವಭಾವಗಳು ಇವರನ್ನು ಇತರ ಬಾಲ ಕಲಾವಿದರಗಿಂತ ಭೇದಿಸಿ ತೋರಿಸುತ್ತವೆ.
ಈ ಹುಡುಗ ಭವಿಷ್ಯದ ಇರ್ಫಾನ್ ಖಾನ್ ಆಗೋದ್ರಲ್ಲಿ ಎರಡು ಮಾತಿಲ್ಲ ಅನ್ನುತ್ತಿದೆ ಇಂಡಿಯಾ ಸಿನಿಮಾ ಇಂಡಸ್ಟ್ರಿ.

ಕಬೀರ್ ಆರಂಭದಲ್ಲಿ ಸಣ್ಣಪುಟ್ಟ ಮಾಡಲಿಂಗ್ ಹಾಗೂ ಜಾಹೀರಾತುಗಳ ಮೂಲಕ ಗ್ಲಾಮರ್ ಲೋಕಕ್ಕೆ ಕಾಲಿಟ್ಟ ಈ ಬಾಲಕ, ನಂತರದ ದಿನಗಳಲ್ಲಿ ವಿಭಿನ್ನ ಹಾಗೂ ಚಾಲೆಂಜಿಗ್ ಪಾತ್ರಗಳ ಮೂಲಕ ಚಿತ್ರರಂಗದ ದಿಗ್ಗಜರ ಗಮನ ಸೆಳೆದರು.

ಕಬೀರ್ ಪಹ್ವಾ ಅವರ ನಟನಾ ಪ್ರತಿಭೆಗೆ ಮೊದಲ ದೊಡ್ಡ ಮೈಲಿಗಲ್ಲು ಸಿಕ್ಕಿದ್ದು ‘ಓಪಿಯಮ್’ ಚಿತ್ರದ ಮೂಲಕ. ಅಮನ್ ಸಚ್‌ದೇವ್ ನಿರ್ದೇಶನದ ಈ ಕಲಾತ್ಮಕ ಆಂಥಾಲಜಿ ಚಿತ್ರದಲ್ಲಿ ಕಬೀರ್ ನಿರ್ವಹಿಸಿದ ಪಾತ್ರ ಅತ್ಯಂತ ಪ್ರಭಾವಶಾಲಿಯಾಗಿತ್ತು. ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದು, ಪ್ರತಿಷ್ಠಿತ ‘ಟೋಕಿಯೋ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ ಹಾಗೂ ಭಾರತದ ಹೆಸರಾಂತ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಾಗ ಕಬೀರ್ ಅವರ ಮುಖಪುಟದ ಅಭಿನಯ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಕಬೀರ್ ಅವರ ವೃತ್ತಿಜೀವನದಲ್ಲಿ ದೊಡ್ಡ ತಿರುವು ನೀಡಿದ ಚಿತ್ರ 2023ರಲ್ಲಿ ಬಿಡುಗಡೆಯಾದ ‘ಶಾಸ್ತ್ರಿ ವಿರುದ್ ಶಾಸ್ತ್ರಿ’. ಬಾಲಿವುಡ್‌ನ ಹಿರಿಯ ದಿಗ್ಗಜ ನಟ ಪರೇಶ್ ರಾವಲ್ ಮತ್ತು ನೀನಾ ಕುಲಕರ್ಣಿ ಅವರಂತಹ ಅನುಭವಿ ಕಲಾವಿದರ ಜೊತೆ ತೆರೆ ಹಂಚಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ, ಚಿತ್ರದಲ್ಲಿ ಯಮನ್ ಅಲಿಯಾಸ್ ‘ಮೊಮೋಜಿ’ ಎಂಬ ಸಂಕೀರ್ಣ ಭಾವನೆಗಳ ಪಾತ್ರಕ್ಕೆ ಕಬೀರ್ ಜೀವ ತುಂಬಿದ ರೀತಿ ಅದ್ಭುತವಾಗಿತ್ತು.

ಪೋಷಕರು ಮತ್ತು ಅಜ್ಜ-ಅಜ್ಜಿಯರ ನಡುವಿನ ಕಾನೂನು ಹೋರಾಟದ ನಡುವೆ ಸಿಲುಕುವ ಮಗುವಿನ ಮಾನಸಿಕ ತುಮುಲಗಳನ್ನು ಕಬೀರ್ ಬಹಳ ಪರಿಣಾಮಕಾರಿಯಾಗಿ ತೆರೆಮೇಲೆ ತಂದರು. ಈ ಚಿತ್ರ ಇವರಿಗೆ ವಿಮರ್ಶಕರ ಮೆಚ್ಚುಗೆಯನ್ನು ತಂದುಕೊಟ್ಟಿತು.

ಸದ್ಯ ಇಡೀ ಭಾರತೀಯ ಚಿತ್ರರಂಗ ಕಾಯುತ್ತಿದ್ದ ‘ಟಾಕ್ಸಿಕ್’ ಚಿತ್ರದಲ್ಲಿ ಕಬೀರ್ ಪಹ್ವಾ ನಟಿಸುತ್ತಿರುವುದು ಇವರ ವೃತ್ತಿಜೀವನದ ಬಿಗ್ ಬ್ರೇಕ್ ಎಂದೇ ಹೇಳಬಹುದು. ಚಿತ್ರದಲ್ಲಿ ಯಶ್ (ರಾಯಾ) ಅವರ ಮಗನ ಬಾಲ್ಯದ ಹಂತದಲ್ಲಿ ಟಿಕೇಟ್ ಆಗಿ ಕಬೀರ್ ಕಾಣಿಸಿಕೊಂಡಿದ್ದಾರೆ. ಯಶ್ ಅವರ ಗಲಾಟೆ ತುಂಬಿದ, ಕತ್ತಲೆಯ ಲೋಕದ ಎಪಾಸಿಕ್ ದೃಶ್ಯಗಳಲ್ಲಿ ಈ ಬಾಲಕನ ಮುಖದ ಗಂಭೀರ ಕಳೆ ಮತ್ತು ನಿಗೂಢ ಹಾವಭಾವಗಳು ಟೀಸರ್‌ನಲ್ಲೇ ರೋಮಾಂಚನ ಮೂಡಿಸಿವೆ.

ಪ್ಯಾನ್ ಇಂಡಿಯಾ ಮಟ್ಟದ ದೊಡ್ಡ ಬ್ಯಾನರ್ ಸಿನಿಮಾವೊಂದರಲ್ಲಿ ಈ ಮಟ್ಟದ ಪ್ರಮುಖ ಪಾತ್ರ ಸಿಕ್ಕಿರುವುದು ಕಬೀರ್ ಪ್ರತಿಭೆಗೆ ಸಿಕ್ಕ ದೊಡ್ಡ ಗೌರವ.

ಸಿನಿಮಾಗಳಷ್ಟೇ ಅಲ್ಲದೆ, ಒಟಿಟಿ ಪ್ಲಾಟ್‌ಫಾರ್ಮ್‌ಗಳ ವೆಬ್ ಸೀರೀಸ್‌ಗಳಲ್ಲೂ ಬ್ಯುಸಿಯಾಗಿರುವ ಕಬೀರ್ ಪಹ್ವಾ, ಕೇವಲ ವಯಸ್ಸಿನಲ್ಲಿ ಚಿಕ್ಕವರಾದರೂ ನಟನೆಯಲ್ಲಿ ಪರಿಪಕ್ವತೆಯನ್ನು ಸಾಧಿಸಿದ್ದಾರೆ. ನಿರ್ದೇಶಕರ ಕಲಾವಿದ ಎಂದೇ ಕರೆಸಿಕೊಳ್ಳುವ ಈ ಮುದ್ದು ಬಾಲಕ, ಮುಂದಿನ ದಿನಗಳಲ್ಲಿ ಭಾರತೀಯ ಚಿತ್ರರಂಗದ ಸ್ಟಾರ್ ನಟರ ಸಾಲಿನಲ್ಲಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಬಾಲಿವುಡ್ ಹಿರಿಯ ನಟ ದಿ. ಇರ್ಫಾನ್ ಖಾನ್ ನಂತೆ ತೆರೆಯ ಮೇಲೆ ತನ್ನ ಕಣ್ಣುಗಳ ಮೂಲಕವೇ ನಟಿಸುವ ಈ ಪುಟ್ಟ ಪ್ರತಿಭೆಯು ಭವಿಷ್ಯದ ಉತ್ತಮ ನಟನಾಗಲಿದ್ದಾರೆ ಎಂಬುವುದು ಸಿನಿ ಪ್ರಿಯರ ಅಭಿಪ್ರಾಯ.

~ ಆಝಾದ್ ಕಂಡಿಗ

ಗಾಯತ್ರಿ ಶಾಂತೇಗೌಡ ಹಾಗೂ ಎಂ ಕೆ ಪ್ರಾಣೇಶ್ ಪ್ರಕರಣ: ತೀರ್ಪಿನ ನಂತರವೂ ಉಳಿದೇ ಹೋದ ಕೆಲವು ಪ್ರಶ್ನೆಗಳು
ಈ ತೀರ್ಪು ಚುನಾವಣಾ ಕಾನೂನು, ನ್ಯಾಯಾಂಗದ ವಿಳಂಬ, ಸಾರ್ವಜನಿಕ ಹಣದ ದುರ್ಬಳಕೆ, ರಾಜಕೀಯ ನೈತಿಕತೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಪಕ್ಷದ ಮೇಲಿರುವ ಗಂಭೀರ ಆರೋಪ “ಓಟ್ ಚೋರಿ” (ಮತಕಳ್ಳತನ)ಕುರಿತು ಹಲವು ಗಂಭೀರ ಪ್ರಶ್ನೆಗಳನ್ನು ಸಮಾಜದ ಮುಂದೆ ತಂದಿಟ್ಟಿದೆ.

ಕರ್ನಾಟಕ ರಾಜಕೀಯದಲ್ಲಿ ಮಹತ್ವದ ತಿರುವು ಮೂಡಿಸಿರುವ ತೀರ್ಪೊಂದನ್ನು ಸುಪ್ರೀಂ ಕೋರ್ಟ್ ನೀಡಿದೆ. ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರ ಸದಸ್ಯತ್ವವನ್ನು ದೇಶದ ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದ್ದು, ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ನಾಲ್ಕು ವರ್ಷಗಳ ಕಾನೂನು ಹೋರಾಟಕ್ಕೆ ಅಂತಿಮ ಜಯ ದೊರೆತಿದೆ.

ಆದರೆ ಇದು ಕೇವಲ ಒಬ್ಬ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದ ಪ್ರಕರಣವಾಗಿ ಮಾತ್ರ ನೋಡದೇ, ಈ ತೀರ್ಪು ಚುನಾವಣಾ ಕಾನೂನು, ನ್ಯಾಯಾಂಗದ ವಿಳಂಬ, ಸಾರ್ವಜನಿಕ ಹಣದ ದುರ್ಬಳಕೆ, ರಾಜಕೀಯ ನೈತಿಕತೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಪಕ್ಷದ ಮೇಲಿರುವ ಗಂಭೀರ ಆರೋಪ “ಓಟ್ ಚೋರಿ” (ಮತಕಳ್ಳತನ)ಕುರಿತು ಹಲವು ಗಂಭೀರ ಪ್ರಶ್ನೆಗಳನ್ನು ಸಮಾಜದ ಮುಂದೆ ತಂದಿಟ್ಟಿದೆ.

ಪ್ರಕರಣದ ಹಿನ್ನೆಲೆ
2021ರ ಡಿಸೆಂಬರ್‌ನಲ್ಲಿ ನಡೆದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಒಟ್ಟು 2,410 ಮತಗಳು ಚಲಾವಣೆಯಾಗಿದ್ದವು. ಅವುಗಳಲ್ಲಿ 39 ಮತಗಳು ಅಸಿಂಧುವಾಗಿದ್ದವು. ಅಂತಿಮ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ 1,188 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರನ್ನು ಕೇವಲ 6 ಮತಗಳ ಅಂತರದಿಂದ ಸೋಲಿಸಿದ್ದರು. ಗಾಯತ್ರಿ ಶಾಂತೇಗೌಡ 1,182 ಮತಗಳನ್ನು ಪಡೆದಿದ್ದರು.

ಈ ಫಲಿತಾಂಶದ ಬಳಿಕ ಚುನಾವಣೆಯಲ್ಲಿ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಹಾಗೂ ಮೂಡಿಗೆರೆ ಪಟ್ಟಣ ಪಂಚಾಯಿತಿಗಳ 12 ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸಿರುವುದು ವಿವಾದದ ಕೇಂದ್ರಬಿಂದುವಾಯಿತು.

ವಿವಾದದ ಮೂಲ
ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕೇ ಇಲ್ಲ ಎಂಬ ವಾದವನ್ನು ಮುಂದಿಟ್ಟು ಗಾಯತ್ರಿ ಶಾಂತೇಗೌಡ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ನಾಮನಿರ್ದೇಶಿತ ಸದಸ್ಯರ ಮತದಾನ ಕಾನೂನುಬಾಹಿರ ಎಂದು ತೀರ್ಪು ನೀಡಿತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಎಂ.ಕೆ. ಪ್ರಾಣೇಶ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೂ, ಸರ್ವೋಚ್ಚ ನ್ಯಾಯಾಲಯವೂ ಹೈಕೋರ್ಟ್ ಆದೇಶವನ್ನೇ ಎತ್ತಿಹಿಡಿದು ಮೇಲ್ಮನವಿಯನ್ನು ವಜಾಗೊಳಿಸಿತು. ಪರಿಣಾಮವಾಗಿ ಪ್ರಾಣೇಶ್ ಅವರ ಸದಸ್ಯತ್ವ ರದ್ದಾಯಿತು.

ಗಾಯತ್ರಿ ಶಾಂತೇಗೌಡಗೆ ಸಿಕ್ಕಿ ನ್ಯಾಯ.. ಆದರೆ!
ಈ ಪ್ರಕರಣದ ಅತ್ಯಂತ ದೊಡ್ಡ ವಿಷಾದವೆಂದರೆ ನ್ಯಾಯ ಸಿಕ್ಕ ಸಮಯ. ಚುನಾವಣೆ ನಡೆದಿದ್ದು 2021ರಲ್ಲಿ. ಅಂತಿಮ ತೀರ್ಪು ಬಂದಿರುವುದು ಸುಮಾರು ನಾಲ್ಕು ವರ್ಷಗಳ ನಂತರ. ವಿಧಾನ ಪರಿಷತ್ ಸದಸ್ಯರ ಅವಧಿ ಆರು ವರ್ಷಗಳಾಗಿದ್ದರೂ, ಈಗ ಗಾಯತ್ರಿ ಶಾಂತೇಗೌಡ ಅವರಿಗೆ ಉಳಿದಿರುವುದು ಕೇವಲ ಸುಮಾರು ಒಂದೂವರೆ ವರ್ಷಗಳ ಅವಧಿ ಮಾತ್ರ.

ಅಂದರೆ, ನ್ಯಾಯಾಲಯ ಅವರ ವಾದವನ್ನು ಒಪ್ಪಿಕೊಂಡಿದ್ದರೂ, ಅವರು ಕಳೆದುಕೊಂಡ ನಾಲ್ಕು ವರ್ಷಗಳ ಶಾಸಕತ್ವದ ಅವಕಾಶವನ್ನು ಯಾರೂ ಮರಳಿ ನೀಡಲು ಸಾಧ್ಯವಿಲ್ಲ. ಈ ಕಾರಣದಿಂದಲೇ “ತಡವಾದ ನ್ಯಾಯವೂ ಒಂದು ರೀತಿಯ ಅಪೂರ್ಣ ನ್ಯಾಯ” ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಚುನಾವಣಾ ವ್ಯಾಜ್ಯಗಳು ಇಷ್ಟು ವರ್ಷ ಏಕೆ?
ಈ ಪ್ರಕರಣದ ಮತ್ತೊಂದು ಮೂಲಭೂತ ಪ್ರಶ್ನೆ ಏನೆಂದರೆ, ಚುನಾವಣಾ ಫಲಿತಾಂಶವನ್ನು ಪ್ರಶ್ನಿಸುವ ಅರ್ಜಿಗಳು ವರ್ಷಗಳ ಕಾಲ ನ್ಯಾಯಾಲಯಗಳಲ್ಲಿ ಬಾಕಿ ಉಳಿದರೆ, ಅಂತಿಮವಾಗಿ ನಿಜವಾದ ಹಕ್ಕುದಾರನಿಗೆ ಸಿಗುವ ನ್ಯಾಯ ಎಷ್ಟು ಪರಿಣಾಮಕಾರಿ?

ಪ್ರಕರಣದ ಅಂತಿಮ ತೀರ್ಪು ಬರುವಷ್ಟರಲ್ಲಿ ಅಧಿಕಾರಾವಧಿಯ ಬಹುಪಾಲು ಮುಗಿದು ಹೋಗುವ ಪರಿಸ್ಥಿತಿ ಪ್ರಜಾಪ್ರಭುತ್ವದ ಉದ್ದೇಶವನ್ನೇ ದುರ್ಬಲಗೊಳಿಸುವುದಿಲ್ಲವೇ ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.

ಪ್ರಾಣೇಶ್ ಅನುಭವಿಸಿದ ಸವಲತ್ತುಗಳ ಬಗೆಗಿನ ಕಾನೂನಾತ್ಮಕ ಪ್ರಶ್ನೆಗಳಿವು
ಸುಪ್ರೀಂ ಕೋರ್ಟ್ ತೀರ್ಪಿನಿಂದ ಪ್ರಾಣೇಶ್ ಅವರ ಆಯ್ಕೆ ಅಸಿಂಧು ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಮತ್ತೊಂದು ಪ್ರಮುಖ ಪ್ರಶ್ನೆ ಎದುರಾಗಿದೆ. 2021ರಿಂದ ಇಲ್ಲಿಯವರೆಗೆ ಅವರು ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಉಪಸಭಾಪತಿಯಾಗಿ ವೇತನ, ಭತ್ಯೆ, ಸರ್ಕಾರಿ ವಾಹನ, ಸಿಬ್ಬಂದಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದಿದ್ದಾರೆ. ಈಗ ಅವರ ಸದಸ್ಯತ್ವವೇ ರದ್ದಾಗಿರುವ ಹಿನ್ನೆಲೆಯಲ್ಲಿ ಆ ಅವಧಿಯಲ್ಲಿ ಪಡೆದ ಸರ್ಕಾರಿ ಸೌಲಭ್ಯಗಳ ಕುರಿತು ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸಿದೆ.

ಆದಾಗ್ಯೂ, ಈ ಕುರಿತು ಸುಪ್ರೀಂ ಕೋರ್ಟ್ ಯಾವುದೇ ನಿರ್ದೇಶನ ನೀಡಿಲ್ಲ. ಹೀಗಾಗಿ ಸವಲತ್ತುಗಳನ್ನು ವಾಪಸ್ ಪಡೆಯುವ ಅಥವಾ ವಸೂಲಿ ಮಾಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಹೇಳಲು ಸಾಧ್ಯವಿಲ್ಲ. ಇದು ಮುಂದಿನ ದಿನಗಳಲ್ಲಿ ಪ್ರತ್ಯೇಕ ಕಾನೂನು ಚರ್ಚೆಯ ವಿಷಯವಾಗುವ ಸಾಧ್ಯತೆ ಇದೆ.

ರಾಜಕೀಯ ನೈತಿಕತೆ
ಈ ಪ್ರಕರಣ ರಾಜಕೀಯ ನೈತಿಕತೆಯ ಕುರಿತ ಚರ್ಚೆಯನ್ನೂ ಹುಟ್ಟುಹಾಕಿದೆ. ನಾಮನಿರ್ದೇಶಿತ ಸದಸ್ಯರ ಮತದಾನದ ಮಾನ್ಯತೆಯ ಕುರಿತ ಕಾನೂನು ವಿವಾದ ಇದ್ದರೂ, ಆ ಮತಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿವೆ ಎಂದು ನ್ಯಾಯಾಲಯಗಳು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಇಂತಹ ವಿವಾದಾತ್ಮಕ ಪರಿಸ್ಥಿತಿಗಳನ್ನು ತಪ್ಪಿಸಲು ಹೆಚ್ಚಿನ ಎಚ್ಚರಿಕೆ ವಹಿಸಬೇಕಿತ್ತೇ ಎಂಬುದು ಈಗ ಎದ್ದಿರುವ ಪ್ರಶ್ನೆ.

ಇನ್ನೊಂದೆಡೆ, ಕಾಂಗ್ರೆಸ್ ಈ ಪ್ರಕರಣವನ್ನು ಬಿಜೆಪಿ ವಿರುದ್ಧ ತೀವ್ರ ರಾಜಕೀಯ ಅಸ್ತ್ರವಾಗಿ ಬಳಸಲು ಮುಂದಾಗಿದೆ. ದೇಶದಲ್ಲಿ ಬಿಜೆಪಿ ಮೇಲಿರುವ ಗಂಭೀರ ಆರೋಪವಾದ ಓಟ್ ಚೋರಿ(ಮತಕಳ್ಳತನ) ಗೆ ಸ್ಪಷ್ಟ ಉದಾಹರಣೆ ಎಂದು ಕಾಂಗ್ರೆಸ್ ವಾದಿಸಲು ಮುಂದಾಗಿದೆ.

ಕೆಲವೇ ದಿನಗಳ ಹಿಂದೆ ಶೃಂಗೇರಿ ಕ್ಷೇತ್ರದ ಅಂಚೆ ಮರುಮತ ಎಣಿಕೆ ಸಂದರ್ಭದಲ್ಲಿ ಬಿಜೆಪಿ ನಡೆಸಿದ ಹೈಡ್ರಾಮಾ ಮತ್ತು ರಾಜ್ಯಪಾಲರ ಮುಂದಿಟ್ಟುಕೊಂಡು ಬಿಜೆಪಿ ಪರಾಜಿತ ಅಭ್ಯರ್ಥಿ ಡಿಎನ್ ಜೀವರಾಜ್ ತರಾತುರಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ಮತ್ತು ಸರ್ವೋಚ್ಚ ನ್ಯಾಯಾಲಯ ಕಾಂಗ್ರೆಸ್ ಹಾಲಿ ಶಾಸಕ ಟಿಡಿ ರಾಜೇಗೌಡರ ಪರವಾಗಿ ಕೊಟ್ಟ ತೀರ್ಪನ್ನೂ ಕಾಂಗ್ರೆಸ್ ಮರು ಪ್ರಸ್ತಾಪಿಸಲು ಹೊರಟಿದೆ.

ಆದರೆ ಬಿಜೆಪಿ ಮಾತ್ರ ಇದನ್ನು ಕಾನೂನು ವ್ಯಾಖ್ಯಾನದ ವಿಷಯ ಎಂದು ಸಮರ್ಥಿಸಿಕೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಈ ಚರ್ಚೆ ಮುಂದಿನ ದಿನಗಳಲ್ಲಿಯೂ ರಾಜಕೀಯವಾಗಿ ಮುಂದುವರಿಯುವ ಎಲ್ಲಾ ಲಕ್ಷಣಗಳು ಮುನ್ನೆಲೆಗೆ ಬಂದಿದೆ.

ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ!
ಈ ಪ್ರಕರಣ ಮತ್ತೊಂದು ಮಹತ್ವದ ವಿಚಾರವನ್ನೂ ನೆನಪಿಸಿದೆ. ಚುನಾವಣಾ ವ್ಯಾಜ್ಯಗಳನ್ನು ನಿಗದಿತ ಕಾಲಮಿತಿಯೊಳಗೆ ಇತ್ಯರ್ಥಪಡಿಸುವ ವ್ಯವಸ್ಥೆ ಬೇಕೇ? ಚುನಾವಣೆಗೆ ಸಂಬಂಧಿಸಿದ ಪ್ರಕರಣಗಳನ್ನು ವಿಶೇಷ ನ್ಯಾಯಪೀಠಗಳ ಮೂಲಕ ತ್ವರಿತವಾಗಿ ವಿಚಾರಣೆ ನಡೆಸಬೇಕೇ? ನ್ಯಾಯ ತಡವಾಗುವುದರಿಂದ ಪ್ರಜಾಪ್ರಭುತ್ವದ ಆಶಯವೇ ಕುಂದುತ್ತಿದೆಯೇ?
ಇವು ಕೇವಲ ಈ ಒಂದು ಪ್ರಕರಣಕ್ಕೆ ಸೀಮಿತವಾದ ಪ್ರಶ್ನೆಗಳಲ್ಲ. ದೇಶದ ಚುನಾವಣಾ ವ್ಯವಸ್ಥೆಯ ಭವಿಷ್ಯದ ಕುರಿತ ಚರ್ಚೆಗಳಾಗಿವೆ. ಬಿಜೆಪಿ ಇಂತಹ ಸಣ್ಣಪುಟ್ಟ (ಗಂಭೀರ) ಲೋಪಗಳನ್ನೇ ತನ್ನ ಅಧಿಕಾರ ಹಿಡಿಯುವ ದಾರಿಯ ಮೂಲವಾಗಿಸುವಲ್ಲಿ ಯಶಸ್ವಿಯಾಗಿದೆ. ದೇಶಾದ್ಯಂತ ಇರುವ ಚುನಾವಣಾ ರಾಜಕೀಯ ವ್ಯಾಜ್ಯಗಳ ಹಿನ್ನೆಲೆ ಹುಡುಕಿದರೂ ಬಹುತೇಕ ಇದೇ ಮಾದರಿಯ ವ್ಯವಸ್ಥೆಯನ್ನು ಬಿಜೆಪಿ ದುರುಪಯೋಗ ಪಡಿಸಿಕೊಂಡು ಅಧಿಕಾರ ಅನುಭವಿಸುತ್ತಿದೆ.

ಸಧ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಕೆ. ಪ್ರಾಣೇಶ್ ಅವರ ಸದಸ್ಯತ್ವ ರದ್ದು ಮತ್ತು ಗಾಯತ್ರಿ ಶಾಂತೇಗೌಡ ಅವರಿಗೆ ದೊರೆತ ತಡವಾದ ನ್ಯಾಯ ಕರ್ನಾಟಕ ರಾಜಕೀಯದ ಮಹತ್ವದ ಬೆಳವಣಿಗೆಯಾಗಿದೆ. ಆದರೆ ಈ ತೀರ್ಪು ಒಂದೇ ವೇಳೆ ಅನೇಕ ಪ್ರಶ್ನೆಗಳನ್ನೂ ಸಾರ್ವಜನಿಕವಾಗಿ ಮುಂದಿಟ್ಟಿದೆ.

ನ್ಯಾಯ ಸಿಕ್ಕರೂ ಅದು ನಾಲ್ಕು ವರ್ಷಗಳ ನಂತರ ಸಿಕ್ಕರೆ ಅದನ್ನು ಸಂಪೂರ್ಣ ನ್ಯಾಯ ಎಂದು ಕರೆಯಲಾದೀತೇ? ಅನರ್ಹ ಎಂದು ನಂತರ ಘೋಷಿಸಲ್ಪಟ್ಟ ಆಯ್ಕೆಯ ಆಧಾರದಲ್ಲಿ ಪಡೆದ ಅಧಿಕಾರ ಮತ್ತು ಸವಲತ್ತುಗಳ ಬಗ್ಗೆ ಕಾನೂನು ಏನು ಹೇಳುತ್ತದೆ? ಚುನಾವಣಾ ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕೆ ಹೊಸ ವ್ಯವಸ್ಥೆ ಅಗತ್ಯವಿದೆಯೇ? ರಾಜಕೀಯ ಪಕ್ಷಗಳ ನೈತಿಕ ಹೊಣೆಗಾರಿಕೆ ಎಲ್ಲಿಂದ ಆರಂಭವಾಗುತ್ತದೆ? ಓಟ್ ಚೋರಿ ಬಗೆಗಿನ ಬಿಜೆಪಿ ಮೇಲಿರುವ ಆರೋಪಕ್ಕೆ ಚುನಾವಣಾ ಆಯೋಗದ ಉತ್ತರವೇ ಅಂತಿಮ. ಆದರೆ ಚುನಾವಣಾ ಆಯೋಗ ಈ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸೂಕ್ತ ಮತ್ತು ಕಾನೂನು ಬದ್ಧ ಉತ್ತರ ನೀಡುತ್ತದೆ ಎಂಬ ನಂಬಿಕೆ ಈಗ ದೇಶದ ಜನರಿಗೆ ಇಲ್ಲವೇ ಇಲ್ಲ. ಅದು ಎಷ್ಟರ ಮಟ್ಟಿಗೆ ಎಂದರೆ ನೀವು ಎಷ್ಟೇ ಮತ ಪಡೆದರೂ ಅಧಿಕಾರ ಅನುಭವಿಸುವುದು ಬಿಜೆಪಿ ಮಾತ್ರ ಎಂಬ ರೀತಿಯಲ್ಲಿ ಹೊಸ (ಅ)ವ್ಯವಸ್ಥೆ ರೂಪುಗೊಂಡಿತಾಗಿದೆ.

ಈ ಮೇಲೆ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಸಿಗುವುದು ಮುಂದಿನ ಕಾನೂನು ಬೆಳವಣಿಗೆಗಳು, ಸರ್ಕಾರದ ನಿಲುವು ಮತ್ತು ರಾಜಕೀಯ ಪಕ್ಷಗಳ ಪ್ರತಿಕ್ರಿಯೆಗಳ ಮೇಲೆ ಅವಲಂಬಿತವಾಗಿದೆ. ಆದರೆ ಒಂದು ವಿಷಯ ಮಾತ್ರ ಸ್ಪಷ್ಟ.. ಈ ತೀರ್ಪು ಕರ್ನಾಟಕದ ರಾಜಕೀಯ ಮತ್ತು ಚುನಾವಣಾ ಕಾನೂನು ಚರ್ಚೆಯಲ್ಲಿ ದೀರ್ಘಕಾಲ ನೆನಪಿನಲ್ಲಿ ಉಳಿಯುವ ಮಹತ್ವದ ಮೈಲಿಗಲ್ಲಾಗಿ ದಾಖಲಾಗಲಿದೆ.

ಬೆಂಗಳೂರು ಮುಖ್ಯ ಪೋಸ್ಟ್ ಆಫೀಸ್‌ನಲ್ಲಿ ಫಿಲಾಟೆಲಿ ಪಾಸ್‌ಪೋರ್ಟ್‌ಗೆ ಬೆಳಗ್ಗೆಯೇ ಸಾಲುಗಟ್ಟಿ ನಿಂತ ಯುವಕರು
ಬೆಂಗಳೂರು : ಪ್ರವಾಸ, ಪರಂಪರೆ ಮತ್ತು ಅಂಚೆ ಸಂಗ್ರಹವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಇಂಡಿಯಾ ಪೋಸ್ಟ್‌ನ ‘ಕರ್ನಾಟಕ ಫಿಲಾಟೆಲಿ ಪಾಸ್‌ಪೋರ್ಟ್- ವರ್ಶನ್ 3.0’ ಬಿಡುಗಡೆಗೆ ಶುಕ್ರವಾರ ಬೆಂಗಳೂರಿನ ಕಬ್ಬನ್ ಪಾರ್ಕ್ ಸಮೀಪದ ಜನರಲ್ ಪೋಸ್ಟ್ ಆಫೀಸ್ (ಜಿಪಿಒ)ನಲ್ಲಿ ಪಾಸ್‌ಪೋರ್ಟ್ ಖರೀದಿಸಲು ಬೆಳಗ್ಗೆ 8.30 ಗಂಟೆಯಿಂದಲೇ ನೂರಾರು ಜನರು ಸರದಿಯಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಕಂಡುಬಂತು.

ಮಾರಾಟ ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದರೂ, ಸೀಮಿತ ಸಂಖ್ಯೆಯಲ್ಲಿ ಮಾತ್ರ ಪಾಸ್‌ಪೋರ್ಟ್ ಲಭ್ಯವಿರುವ ಹಿನ್ನೆಲೆಯಲ್ಲಿ ಯುವಕರು, ಬೈಕ್ ರೈಡರ್‌ಗಳು, ಪ್ರವಾಸಾಸಕ್ತರು, ಫೋಟೋಗ್ರಾಫರ್‌ಗಳು, ವಿದ್ಯಾರ್ಥಿಗಳು ಹಾಗೂ ಫಿಲಾಟೆಲಿ ಸಂಗ್ರಹಕಾರರು ಮುಂಜಾನೆಯೇ ಪೋಸ್ಟ್ ಆಫೀಸ್‌ಗೆ ಆಗಮಿಸಿದ್ದರು. ಮೊದಲ ದಿನವೇ ಉದ್ದನೆಯ ಸಾಲು ನಿರ್ಮಾಣವಾಗಿದೆ.

ಈ ಫಿಲಾಟೆಲಿ ಪಾಸ್‌ಪೋರ್ಟ್ ಯಾವುದೇ ಅಧಿಕೃತ ಪ್ರಯಾಣದ ದಾಖಲೆಯಲ್ಲ. ಕರ್ನಾಟಕದ ವಿವಿಧ ಪ್ರವಾಸಿ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ತಾಣಗಳಿಗೆ ಭೇಟಿ ನೀಡುವವರು ಅಲ್ಲಿನ ಅಂಚೆ ಕಚೇರಿಗಳಲ್ಲಿ ದೊರೆಯುವ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ (PPC) ಎಂಬ ವಿಶೇಷ ಅಂಚೆ ಮುದ್ರೆಗಳನ್ನು ಈ ಪಾಸ್‌ಪೋರ್ಟ್‌ನಲ್ಲಿ ಸಂಗ್ರಹಿಸಿಕೊಳ್ಳುವ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ. ಇದನ್ನು ಪ್ರವಾಸದ ನೆನಪುಗಳನ್ನು ಶಾಶ್ವತವಾಗಿ ದಾಖಲಿಸುವ ವಿಶಿಷ್ಟ ಸಂಗ್ರಹ ಪುಸ್ತಕವೆಂದೂ ಪರಿಗಣಿಸಲಾಗುತ್ತಿದೆ.

ಈ ಆವೃತ್ತಿಯಲ್ಲಿ ಕರ್ನಾಟಕದ ಸುಮಾರು 100 ಪ್ರಮುಖ ಪ್ರವಾಸಿ ಹಾಗೂ ಪರಂಪರೆಯ ತಾಣಗಳಿಗೆ ಸಂಬಂಧಿಸಿದ ಪುಟಗಳನ್ನು ಸೇರಿಸಲಾಗಿದ್ದು, ಪ್ರತಿಯೊಂದು ಪುಟದಲ್ಲೂ ಸ್ಥಳದ ಚಿತ್ರ, ಸಂಕ್ಷಿಪ್ತ ಪರಿಚಯ ಹಾಗೂ ವಿಶೇಷ ಮುದ್ರೆ ಹಾಕಲು ಅವಕಾಶ ಕಲ್ಪಿಸಲಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಜೊತೆಗೆ ರಾಜ್ಯದ ಪರಂಪರೆ ಮತ್ತು ಅಂಚೆ ಇಲಾಖೆಯ ಇತಿಹಾಸವನ್ನು ಯುವಜನರಿಗೆ ಪರಿಚಯಿಸುವುದು ಈ ಯೋಜೆಯ ಪ್ರಮುಖ ಉದ್ದೇಶವಾಗಿದೆ.

ಈ ಬಾರಿ ಬೆಂಗಳೂರು ಜಿಪಿಒದಲ್ಲಿ 1,000, ಮೈಸೂರು ಮತ್ತು ಮಂಗಳೂರು ಹೆಡ್ ಪೋಸ್ಟ್ ಆಫೀಸ್‌ಗಳಲ್ಲಿ ತಲಾ 200 ಸೇರಿದಂತೆ ಒಟ್ಟು 1,400 ಪ್ರತಿಗಳನ್ನು ಮಾತ್ರ ಭೌತಿಕ ಮಾರಾಟಕ್ಕೆ ಬಿಡುಗಡೆ ಮಾಡಲಾಗಿದೆ. ಜುಲೈ 10 ಮತ್ತು 11ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಅಥವಾ ಸ್ಟಾಕ್ ಇರುವವರೆಗೆ ಮಾರಾಟ ನಡೆಯಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಪಾಸ್‌ಪೋರ್ಟ್ ಕುರಿತು ವ್ಯಾಪಕ ಪ್ರಚಾರವಾಗಿರುವುದು, ಹಿಂದಿನ ಆವೃತ್ತಿಗಳ ಯಶಸ್ಸು ಹಾಗೂ ಸಂಗ್ರಹಿಸಬಹುದಾದ ವಿಶೇಷ ಆವೃತ್ತಿ ಎಂಬ ಕಾರಣಗಳಿಂದ ಮೊದಲ ದಿನವೇ ಭಾರೀ ಬೇಡಿಕೆ ಕಂಡುಬಂದಿದೆ. ಪ್ರವಾಸವನ್ನು ಕೇವಲ ಛಾಯಾಚಿತ್ರಗಳಿಗೆ ಸೀಮಿತಗೊಳಿಸದೆ, ವಿಶೇಷ ಅಂಚೆ ಮುದ್ರೆಗಳ ಮೂಲಕ ನೆನಪಾಗಿ ಉಳಿಸಿಕೊಳ್ಳುವ ಹೊಸ ಪರಿಕಲ್ಪನೆಗೆ ಯುವಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿರುವುದು ಗಮನಾರ್ಹವಾಗಿದೆ.

ರೊನಾಲ್ಡೊ ವಿದಾಯ ಘೋಷಣೆ; ಬ್ರೆಜಿಲ್ ಸೋಲಿನ ಬಳಿಕ ನೇಮರ್ ಕೂಡಾ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಗುಡ್‌ಬೈ
2026ರ ಫಿಫಾ ವಿಶ್ವಕಪ್ ತನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ಪೋರ್ಚುಗಲ್‌ನ ದಿಗ್ಗಜ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅಧಿಕೃತವಾಗಿ ಘೋಷಿಸಿದ್ದಾರೆ. ಸ್ಪೇನ್ ವಿರುದ್ಧ ನಡೆಯಲಿರುವ 16ರ ಸುತ್ತಿನ ಮಹತ್ವದ ನಾಕೌಟ್ ಪಂದ್ಯಕ್ಕೂ ಮುನ್ನ ಮಾತನಾಡಿದ ಅವರು, ವಿಶ್ವಕಪ್‌ನಲ್ಲಿ ಪ್ರತಿಯೊಂದು ಕ್ಷಣವನ್ನೂ ಸವಿಯಲು ಬಯಸುತ್ತೇನೆ ಎಂದು ಭಾವುಕರಾಗಿ ಹೇಳಿದರು.

41 ವರ್ಷದ ರೊನಾಲ್ಡೊ, “ಇದು ನನ್ನ ಕೊನೆಯ ವಿಶ್ವಕಪ್. ಆದರೆ ಸ್ಪೇನ್ ವಿರುದ್ಧದ ಪಂದ್ಯವೇ ನನ್ನ ಕೊನೆಯ ಪಂದ್ಯವಾಗಬಾರದು ಎಂದು ಆಶಿಸುತ್ತೇನೆ. ಸಾಧ್ಯವಾದಷ್ಟು ದೂರ ತಂಡವನ್ನು ಮುನ್ನಡೆಸಲು ಬಯಸುತ್ತೇನೆ. ಈ ವಿಶ್ವಕಪ್‌ನ ಪ್ರತಿಯೊಂದು ಕ್ಷಣವನ್ನೂ ಆನಂದಿಸಲು ಇಚ್ಛಿಸುತ್ತೇನೆ” ಎಂದು ಹೇಳಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಈಗಾಗಲೇ ಮೂರು ಗೋಲುಗಳನ್ನು ದಾಖಲಿಸಿರುವ ರೊನಾಲ್ಡೊ, ಪೋರ್ಚುಗಲ್ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದು, ತಂಡದ ಯಶಸ್ಸೇ ತನ್ನ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಮೆಸ್ಸಿ ಮೊದಲ ಸ್ಥಾನದಲ್ಲಿದ್ದು, ಅವರು 30 ಪಂದ್ಯಗಳನ್ನು ಆಡಿದ್ದಾರೆ. ರೊನಾಲ್ಡೊ 26 ಪಂದ್ಯಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್ ಗೋಲುಗಳ ಪಟ್ಟಿಯಲ್ಲೂ ಮೆಸ್ಸಿ 20 ಗೋಲುಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ರೊನಾಲ್ಡೊ 11 ಗೋಲುಗಳನ್ನು ಗಳಿಸಿದ್ದಾರೆ.

ಇತ್ತ ಬ್ರೆಜಿಲ್ ಫುಟ್‌ಬಾಲ್ ಅಭಿಮಾನಿಗಳಿಗೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. 16ರ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್ ತಂಡ ನಾರ್ವೆ ವಿರುದ್ಧ ಅಚ್ಚರಿಯ ಸೋಲು ಅನುಭವಿಸಿದ ಬೆನ್ನಲ್ಲೇ ತಂಡದ ಸ್ಟಾರ್ ಆಟಗಾರ ನೇಮರ್ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ.

68ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ನೇಮರ್, ಹೆಚ್ಚುವರಿ ಸಮಯದಲ್ಲಿ (90+10ನೇ ನಿಮಿಷ) ಗೋಲು ಬಾರಿಸಿದರೂ ಬ್ರೆಜಿಲ್‌ಗೆ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಪಂದ್ಯದ ಅಂತ್ಯದಲ್ಲಿ ಕಣ್ಣೀರಿಡುತ್ತಿದ್ದ ನೇಮರ್ ಅವರ ದೃಶ್ಯ ಅಭಿಮಾನಿಗಳ ಮನಸ್ಸನ್ನು ಮುಟ್ಟಿದ್ದು, ಬ್ರೆಜಿಲ್ ಫುಟ್‌ಬಾಲ್‌ನ ಒಂದು ಸುವರ್ಣ ಅಧ್ಯಾಯಕ್ಕೆ ತೆರೆ ಬಿದ್ದಂತಾಗಿದೆ.

ಎಪ್ಸ್ಟೀನ್‌ ಫೈಲ್ಸ್ ವಿವಾದಕ್ಕೆ ಹೊಸ ತಿರುವು: ‘ವೈಯಕ್ತಿಕ ಸಂಬಂಧಗಳ ಮಾಹಿತಿಯ ಬಳಸಿ ಪರೋಕ್ಷ ಬ್ಲಾಕ್ಮೇಲ್’; ಬಿಲ್ ಗೇಟ್ಸ್ ಸ್ಪೋಟಕ ಹೇಳಿಕೆ
ವಾಷಿಂಗ್ಟನ್: ಅಮೆರಿಕ ಮೂಲದ ಉದ್ಯಮಿ ಹಾಗೂ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರು ಜೆಫ್ರಿ ಎಪ್ಸ್ಟೀನ್‌ ಕುರಿತು ನೀಡಿರುವ ಹೇಳಿಕೆ ಅಮೆರಿಕದ ರಾಜಕೀಯ ಮತ್ತು ಉದ್ಯಮ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅಮೆರಿಕದ ಹೌಸ್‌ ಓವರ್‌ಸೈಟ್‌ ಸಮಿತಿಯ ಮುಂದೆ ನೀಡಿದ ಸಾಕ್ಷ್ಯದಲ್ಲಿ, ತಮ್ಮ ವೈಯಕ್ತಿಕ ಜೀವನದ ಮಾಹಿತಿಯನ್ನು ಆಧರಿಸಿ ಎಪ್ಸ್ಟೀನ್‌ ತಮ್ಮ ಮೇಲೆ ಒತ್ತಡ ಹೇರಲು ಬ್ಲಾಕ್ಮೇಲ್ ಮಾಡಲು ಪ್ರಯತ್ನಿಸಿದ್ದ ಸಾಧ್ಯತೆಯ ಬಗ್ಗೆ ಗೇಟ್ಸ್‌ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್‌ ಸಮಿತಿಯ ವಿಚಾರಣೆಯ ವೇಳೆ ಬಿಲ್ ಗೇಟ್ಸ್‌ ತಮ್ಮ ವೈವಾಹಿಕ ಜೀವನದ ಅವಧಿಯಲ್ಲಿ ಮೂವರು ಮಹಿಳೆಯರೊಂದಿಗೆ ವೈಯಕ್ತಿಕ ಸಂಬಂಧ ಹೊಂದಿದ್ದ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆ ಪೈಕಿ ಇಬ್ಬರು ಮಹಿಳೆಯರು ಎಪ್ಸ್ಟೀನ್‌ ಪರಿಚಯದ ವಲಯದಲ್ಲಿದ್ದ ಕಾರಣ, ತಮ್ಮ ಖಾಸಗಿ ಜೀವನದ ಮಾಹಿತಿಯು ಎಪ್ಸ್ಟೀನ್‌ಗೆ ತಿಳಿದಿತ್ತು ಎಂದು ಅವರು ಹೇಳಿದ್ದಾರೆ.

ಗೇಟ್ಸ್‌ ಅವರ ಪ್ರಕಾರ, ಎಪ್ಸ್ಟೀನ್‌ ಬಳಿ ಇದ್ದ ಕೆಲವು ಮಾಹಿತಿಗಳು ಮತ್ತು ನಂತರ ನಡೆದ ಇ-ಮೇಲ್‌ ಸಂವಹನಗಳು ತಮ್ಮ ಮೇಲೆ ಪ್ರಭಾವ ಬೀರುವ ಅಥವಾ ಒತ್ತಡ ಹೇರುವ ಉದ್ದೇಶವಿರಬಹುದೆಂಬ ಅನುಮಾನವನ್ನು ಹುಟ್ಟುಹಾಕಿವೆ. ಆದರೆ ತಮಗೆ ನೇರವಾಗಿ ಬ್ಲ್ಯಾಕ್‌ಮೇಲ್‌ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ, ಎಪ್ಸ್ಟೀನ್‌ ಅವರ ಅಪರಾಧ ಚಟುವಟಿಕೆಗಳೊಂದಿಗೆ ತಮಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಗೇಟ್ಸ್‌ ಪುನರುಚ್ಚರಿಸಿದ್ದಾರೆ. ಅವರೊಂದಿಗೆ ಸಂಪರ್ಕ ಮುಂದುವರಿಸುವುದು ಸೂಕ್ತವಲ್ಲ ಎಂಬ ಅರಿವಾದ ಬಳಿಕ ಸಂವಹನವನ್ನು ಸ್ಥಗಿತಗೊಳಿಸಿದ್ದಾಗಿ ತಿಳಿಸಿದ್ದಾರೆ.

ಸಮಿತಿಯ ಪರಿಶೀಲನೆಯ ವೇಳೆ ಗೇಟ್ಸ್‌ ಮತ್ತು ಎಪ್ಸ್ಟೀನ್‌ ನಡುವಿನ ಹಿಂದಿನ ಭೇಟಿಗಳು, ವೀಡಿಯೊ ಕರೆಗಳು ಹಾಗೂ ಗೇಟ್ಸ್‌ ಫೌಂಡೇಶನ್‌ಗೆ ಸಂಬಂಧಿಸಿದ ಕೆಲವು ಇ-ಮೇಲ್‌ ಸಂವಹನಗಳ ವಿಚಾರವೂ ಚರ್ಚೆಗೆ ಬಂದಿದೆ. ಇದರಿಂದ ಎಪ್ಸ್ಟೀನ್‌ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಸಂಪರ್ಕಗಳ ಕುರಿತು ಮತ್ತಷ್ಟು ಪರಿಶೀಲನೆ ನಡೆಯುವ ಸಾಧ್ಯತೆ ಇದೆ.

ಇದೇ ವೇಳೆ, ಎಪ್ಸ್ಟೀನ್‌ ಫೈಲ್ಸ್‌ ಕುರಿತ ತನಿಖೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕದ ಹಲವು ಪ್ರಭಾವಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಸಂಪರ್ಕಗಳ ಕುರಿತು ಹೊಸ ಮಾಹಿತಿಗಳು ಹೊರಬರುವ ನಿರೀಕ್ಷೆ ವ್ಯಕ್ತವಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಬಿಲ್‌ ಗೇಟ್ಸ್‌ ಅವರ ಇತ್ತೀಚಿನ ಹೇಳಿಕೆಗಳು ಮತ್ತಷ್ಟು ಕುತೂಹಲ ಮೂಡಿಸಿದೆ.

ರಕ್ತದ ಬೆಲೆಯ ಶಾಂತಿ: ಅಮೆರಿಕ-ಇರಾನ್ ಯುದ್ಧದ ಸಂಪೂರ್ಣ ವರದಿ
107 ದಿನಗಳ ಮಹಾಯುದ್ಧಕ್ದರೆ ಗಾಯಗಳು ಮಾಯಲು ದಶಕಗಳೇ ಬೇಕಾದೀತು

ಆರಂಭ: ಫೆಬ್ರವರಿ 28ರ ಅನಿರೀಕ್ಷಿತ ದಾಳಿ
2026ರ ಫೆಬ್ರವರಿ 28ರ ಮುಂಜಾನೆ ಜಗತ್ತು ಎಚ್ಚರಗೊಂಡಾಗ, ಇತಿಹಾಸ ಒಂದು ಹೊಸ ಅಧ್ಯಾಯ ಬರೆದುಕೊಳ್ಳುತ್ತಿತ್ತು. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ್ದವು. ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿ ಮತ್ತು ಪ್ರಮುಖ ತೈಲ ರಾಷ್ಟ್ರದ ನಡುವಿನ ಈ ಮುಖಾಮುಖಿ ಇಡೀ ಜಗತ್ತನ್ನು ಆತಂಕಕ್ಕೆ ದೂಡಿತು.

107 ದಿನಗಳ ಕಾಲ ನಿರಂತರವಾಗಿ ಉರಿದ ಈ ಯುದ್ಧದ ಜ್ವಾಲೆ ಕೊನೆಗೂ ಶಾಂತಿ ಒಪ್ಪಂದದ ಮೂಲಕ ತಣ್ಣಗಾಗಿದೆ. ಜೂನ್ 19ರಂದು ಅಧಿಕೃತ ಶಾಂತಿ ಒಪ್ಪಂದಕ್ಕೆ ಸಹಿ ಬೀಳಲಿದೆ. ಆದರೆ ಈ ಮೂರೂವರೆ ತಿಂಗಳಲ್ಲಿ ಜಗತ್ತು ಕಳೆದುಕೊಂಡಿದ್ದು ಮಾತ್ರ ಅಳೆಯಲಾಗದ ನಷ್ಟ.

ಮೊದಲ 15 ದಿನಗಳಲ್ಲೇ ಮರಣ ಮೃದಂಗ
ಯುದ್ಧ ಆರಂಭವಾದ ಮೊದಲ ಎರಡು ವಾರಗಳಲ್ಲಿಯೇ, ಅಂದರೆ ಮಾರ್ಚ್ 15ರ ಒಳಗಾಗಿಯೇ ಭೀಕರ ಸಾವು-ನೋವುಗಳ ಚಿತ್ರಣ ಹೊರಬಿತ್ತು. ಈ ಆರಂಭಿಕ ಹಂತದಲ್ಲಿ ಮಾತ್ರ 390 ನಾಗರಿಕರು ಹಾಗೂ 3,910 ಸೈನಿಕರು ಪ್ರಾಣ ತೆತ್ತಿದ್ದರು. ಯುದ್ಧ ಇನ್ನೂ ಆರಂಭಗೊಂಡ ಹದಿನೈದು ದಿನಗಳಲ್ಲೇ ಸಾವಿನ ಸಂಖ್ಯೆ ನಾಲ್ಕು ಸಾವಿರದ ಗಡಿ ದಾಟಿದ್ದು ಮುಂದೆ ಇನ್ನೆಷ್ಟು ಭೀಕರ ಅಧ್ಯಾಯಗಳು ಬರಲಿವೆ ಎಂಬ ಆತಂಕ ಮೂಡಿಸಿತ್ತು.

ಶಾಲಾ ಮಕ್ಕಳ ಮೇಲೆ ಬಾಂಬು: ಯುದ್ಧದ ಅತ್ಯಂತ ಕರಾಳ ಅಧ್ಯಾಯ
ಈ ಯುದ್ಧದ ಅತ್ಯಂತ ಹೃದಯವಿದ್ರಾವಕ ಘಟನೆ ನಡೆದದ್ದು ಇರಾನ್‌ನ ಹಾರ್ಮುಜ್ ಪ್ರಾಂತ್ಯದಲ್ಲಿ. ಅಲ್ಲಿನ ‘ಶಜರೆಹ್ ತಯ್ಯೆಬೆಹ್’ ಬಾಲಕಿಯರ ಶಾಲೆಯ ಮೇಲೆ ನಡೆದ ವೈಮಾನಿಕ ಬಾಂಬ್ ದಾಳಿಯಲ್ಲಿ ಅಂದಾಜು 175 ಮುಗ್ಧ ಬಾಲಕಿಯರು ಸಜೀವವಾಗಿ ಬಲಿಯಾದರು. ಪಠ್ಯಪುಸ್ತಕ ಹಿಡಿದು ಶಾಲೆಗೆ ಹೋಗಬೇಕಿದ್ದ ಆ ಮಕ್ಕಳ ಕನಸುಗಳು ಬಾಂಬಿನ ಹೊಗೆಯಲ್ಲಿ ಶಾಶ್ವತವಾಗಿ ಅಡಗಿಹೋದವು. ಈ ದಾಳಿ ಜಾಗತಿಕವಾಗಿ ತೀವ್ರ ಆಕ್ರೋಶ ಮತ್ತು ತೀವ್ರ ಖಂಡನೆಗೆ ಗುರಿಯಾಯಿತು.

107 ದಿನಗಳ ಯುದ್ಧ: ಸಂಪೂರ್ಣ ಅಂಕಿ-ಅಂಶ

ಇರಾನ್‌ಗೆ ಆದ ಒಟ್ಟು ನಷ್ಟ

ಇಸ್ರೇಲ್ ಮತ್ತು ಅಮೆರಿಕಕ್ಕೆ ಆದ ನಷ್ಟ

ಜಾಗತಿಕ ಆರ್ಥಿಕತೆಗೆ ಬಿದ್ದ ಭಾರಿ ಪೆಟ್ಟು
ಯುದ್ಧ ಎಂದರೆ ಕೇವಲ ಸಾವು-ನೋವಲ್ಲ; ಅದು ದೇಶಗಳ ಆರ್ಥಿಕ ಬೆನ್ನೆಲುಬನ್ನೇ ಮುರಿಯುತ್ತದೆ ಎಂಬುದಕ್ಕೆ ಈ ಯುದ್ಧ ಮತ್ತೊಮ್ಮೆ ಸಾಕ್ಷಿಯಾಯಿತು.

ಅಮೆರಿಕದ ಯುದ್ಧ ವೆಚ್ಚ: ₹ 1.12 ಟ್ರಿಲಿಯನ್ ಡಾಲರ್

ಜಾಗತಿಕ ವಾರ್ಷಿಕ ನಷ್ಟ: 2.2 ಟ್ರಿಲಿಯನ್ ಡಾಲರ್

ಯುದ್ಧ ಮುಂದುವರಿದಿದ್ದರೆ ಆಗುತ್ತಿದ್ದ ನಷ್ಟ: 3.5 ಟ್ರಿಲಿಯನ್ ಡಾಲರ್

ಶತಕೋಟಿ ಡಾಲರ್ ಮೌಲ್ಯದ ಮೂಲಸೌಕರ್ಯ ಮತ್ತು ಆಸ್ತಿಪಾಸ್ತಿಗಳು ಬೂದಿಯಾದವು. ಜಾಗತಿಕ ಮಾರುಕಟ್ಟೆ ಹಣದುಬ್ಬರದ ಬಿಸಿಗೆ ತತ್ತರಿಸಿತು. ಹಾರ್ಮುಜ್ ಜಲಸಂಧಿ ಮುಚ್ಚಿಹೋದ ಕಾರಣ ಜಾಗತಿಕ ತೈಲ ಪೂರೈಕೆ ಏರುಪೇರಾಗಿ ಸಾಮಾನ್ಯ ಜನರ ಜೀವನ ದುಸ್ತರವಾಯಿತು.

ಟ್ರಂಪ್ ಘೋಷಣೆ: “ಎಂಜಿನ್ ಪ್ರಾರಂಭಿಸಿ, ತೈಲ ಹರಿಯಲಿ”
ಶಾಂತಿ ಒಪ್ಪಂದ ಘೋಷಣೆಯಾಗುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಜಾಲತಾಣದಲ್ಲಿ “ವಿಶ್ವದ ಹಡಗುಗಳೇ, ನಿಮ್ಮ ಎಂಜಿನ್ ಪ್ರಾರಂಭಿಸಿ, ತೈಲ ಹರಿಯಲಿ” ಎಂದು ಪೋಸ್ಟ್ ಮಾಡಿದರು. ಈ ಮೂಲಕ ಜಾಗತಿಕ ತೈಲ ಮಾರುಕಟ್ಟೆಗೆ ಮರಳಿ ಚಾಲನೆ ನೀಡಿದ್ದಾರೆ. ಯುದ್ಧ ನಿಂತ ತಕ್ಷಣ ಆರ್ಥಿಕ ಲೆಕ್ಕಾಚಾರ ಶುರುವಾಗುತ್ತದೆ ಎಂಬ ಕಟು ವಾಸ್ತವವನ್ನು ಈ ಪೋಸ್ಟ್ ಬಹಿರಂಗಪಡಿಸಿತು.

ಶಾಂತಿ ಒಪ್ಪಂದ ಮತ್ತು ಮುಂದಿನ ದಾರಿ
ಜೂನ್ 19ರಂದು ಅಧಿಕೃತ ಶಾಂತಿ ಒಪ್ಪಂದಕ್ಕೆ ಸಹಿ ಬೀಳಲಿದ್ದು, ಅದರ ಬಳಿಕ ವ್ಯಾಪಾರ-ವಹಿವಾಟು ಹಳಿಗೆ ಮರಳಬಹುದು, ಜಗತ್ತು ಮತ್ತೆ ಸಹಜ ಸ್ಥಿತಿಗೆ ತರಳಬಹುದು. ಆದರೆ ಈ ಯುದ್ಧ ಕಲಿಸಿದ ಅತ್ಯಂತ ಮಹತ್ವದ ಪಾಠ ಒಂದಿದ್ದರೆ ಅದು ಶಸ್ತ್ರಾಸ್ತ್ರಗಳು ಎಂದಿಗೂ ಶಾಶ್ವತ ಪರಿಹಾರ ನೀಡಲಾರವು.

ಹಾರ್ಮುಜ್‌ನ ಶಾಲೆಯ ಅವಶೇಷಗಳಲ್ಲಿ ಹೂತುಹೋದ 175 ಮಕ್ಕಳ ಕನಸುಗಳು, 39 ಲಕ್ಷ ನಿರಾಶ್ರಿತರ ಬಿಕ್ಕಳಿಕೆ, ಮತ್ತು ಸಾವಿರಾರು ಕುಟುಂಬಗಳ ಒಡೆದ ಬದುಕುಗಳು.. ಇವು ಯಾವ ಶಾಂತಿ ಒಪ್ಪಂದದಿಂದಲೂ ಮರಳಿ ಬರಲಾರವು. ಇತಿಹಾಸದ ಪುಟಗಳಲ್ಲಿ ಈ ಗಾಯಗಳು ಶಾಶ್ವತವಾಗಿ ಉಳಿದುಕೊಳ್ಳುತ್ತವೆ.

ಅಮೆರಿಕ–ಇರಾನ್ ಶಾಂತಿ ಒಪ್ಪಂದದ ಘೋಷಣೆ ಬೆನ್ನಲ್ಲೇ ಕಚ್ಛಾ ತೈಲ ಬೆಲೆಯಲ್ಲಿ ಭಾರಿ ಕುಸಿತ
ವಾಷಿಂಗ್ಟನ್/ಟೆಹ್ರಾನ್ : ಹಲವು ತಿಂಗಳುಗಳಿಂದ ಉದ್ವಿಗ್ನತೆಗೆ ಕಾರಣವಾಗಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡುವ ಮಹತ್ವದ ಶಾಂತಿ ಒಪ್ಪಂದ ಪ್ರಕಟವಾಗಿದ್ದು, ಇದರ ಪರಿಣಾಮವಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ತೀವ್ರ ಕುಸಿತ ಕಂಡಿವೆ.

ಉಭಯ ರಾಷ್ಟ್ರಗಳು ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಹಾಗೂ ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪನೆಗೆ ಒಪ್ಪಿಗೆ ಸೂಚಿಸಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಏಷ್ಯಾದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (WTI) ಕಚ್ಚಾ ತೈಲದ ಬೆಲೆ ಶೇ.4ಕ್ಕೂ ಹೆಚ್ಚು ಕುಸಿದು ಪ್ರತಿ ಬ್ಯಾರೆಲ್‌ಗೆ 81.15 ಡಾಲರ್‌ಗೆ ಇಳಿಕೆಯಾಗಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳಿಗೆ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನ, ಲೆಬನಾನ್ ಸೇರಿದಂತೆ ಪ್ರದೇಶದ ವಿವಿಧ ಸಂಘರ್ಷಗಳಿಗೆ “ತಕ್ಷಣದ ಮತ್ತು ಶಾಶ್ವತ” ಅಂತ್ಯ ತರಲು ಒಪ್ಪಂದ ರೂಪುಗೊಂಡಿದೆ ಎಂದು ಘೋಷಿಸಿದೆ. ಈ ಘೋಷಣೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆದಾರರ ವಿಶ್ವಾಸ ಹೆಚ್ಚಿದ್ದು, ಹಲವು ದೇಶಗಳ ಷೇರುಪೇಟೆಗಳಲ್ಲಿ ಏರಿಕೆ ದಾಖಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಿ ಒಪ್ಪಂದವನ್ನು ಅಧಿಕೃತವಾಗಿ ದೃಢಪಡಿಸಿದ್ದು, ಜಾಗತಿಕ ಇಂಧನ ಪೂರೈಕೆಗೆ ಅತ್ಯಂತ ಮಹತ್ವದ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯನ್ನು ಮರುತೆರೆಯುವುದಾಗಿ ತಿಳಿಸಿದ್ದಾರೆ. ವಿಶ್ವದ ಒಟ್ಟು ಕಚ್ಚಾ ತೈಲ ಸಾಗಣೆಯ ಸುಮಾರು 20 ಪ್ರತಿಶತ ಈ ಜಲಸಂಧಿಯ ಮೂಲಕವೇ ನಡೆಯುತ್ತಿರುವುದರಿಂದ, ಈ ನಿರ್ಧಾರ ಜಾಗತಿಕ ಇಂಧನ ಮಾರುಕಟ್ಟೆಗೆ ಮಹತ್ವದ ಉತ್ತೇಜನ ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತೈಲ ಪೂರೈಕೆಯ ಮೇಲಿನ ಅನಿಶ್ಚಿತತೆ ಕಡಿಮೆಯಾಗಿರುವುದರಿಂದ ಇಂಧನ ಬೆಲೆಗಳ ಮೇಲಿನ ಒತ್ತಡ ಇಳಿಕೆಯಾಗುವ ನಿರೀಕ್ಷೆ ವ್ಯಕ್ತವಾಗಿದ್ದು, ಜಾಗತಿಕ ಆರ್ಥಿಕತೆಯ ಮೇಲೂ ಇದರ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಶಾಂತಿ ಒಪ್ಪಂದದ ಸಂಪೂರ್ಣ ಷರತ್ತುಗಳು ಮತ್ತು ಅನುಷ್ಠಾನದ ವಿವರಗಳು ಇನ್ನೂ ಬಹಿರಂಗವಾಗಬೇಕಿರುವುದರಿಂದ ಮುಂದಿನ ಬೆಳವಣಿಗೆಗಳತ್ತ ವಿಶ್ವದ ಗಮನ ನೆಟ್ಟಿದೆ.

ಅಮೆರಿಕ-ಇರಾನ್ ಶಾಂತಿ ಒಪ್ಪಂದ: ಭಾನುವಾರವೇ ಸಹಿ, ಹಾರ್ಮುಜ್ ಜಲಸಂಧಿ ಮುಕ್ತ ಎಂದ ಟ್ರಂಪ್: ಎಚ್ಚರಿಕೆ ನಡೆ ಇಟ್ಟ ಇರಾನ್
ವಾಷಿಂಗ್ಟನ್/ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ತಿಂಗಳುಗಳ ಕಾಲದ ಸಂಘರ್ಷಕ್ಕೆ ಅಂತ್ಯ ಕಾಣಿಸುವ ಲಕ್ಷಣಗಳು ದಟ್ಟವಾಗಿವೆ. ಬಹುನಿರೀಕ್ಷಿತ ಶಾಂತಿ ಒಪ್ಪಂದಕ್ಕೆ ಭಾನುವಾರ ಸಹಿ ಬೀಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.

ತಮ್ಮ ಟ್ರುತ್ ಸೋಶಿಯಲ್ ಖಾತೆಯಲ್ಲಿ ಬರೆದುಕೊಂಡಿರುವ ಟ್ರಂಪ್, ಒಪ್ಪಂದಕ್ಕೆ ಸಹಿಯಾದ ಕೂಡಲೇ ಜಾಗತಿಕ ಇಂಧನ ಸಾಗಣೆಯ ಪ್ರಮುಖ ಜಲಮಾರ್ಗ ‘ಸ್ಟ್ರೇಟ್ ಆಫ್ ಹಾರ್ಮುಜ್’ ಅನ್ನು ಎಲ್ಲಾ ರಾಷ್ಟ್ರಗಳ ಹಡಗು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಹೇಳಿದ್ದಾರೆ. ಇರಾನ್ ಇನ್ಮುಂದೆ ಅಣ್ವಸ್ತ್ರ ಹೊಂದುವುದಿಲ್ಲ ಮತ್ತು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಈ ಪ್ರಕ್ರಿಯೆ ಸುಲಭವಾಗಿ ನಡೆಯಲಿದ್ದು, ಸಾಧ್ಯವಾಗದಿದ್ದರೆ ಪರ್ಯಾಯ ಮಾರ್ಗವೂ ಸಿದ್ಧವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಬೆಳವಣಿಗೆಯನ್ನು ಸ್ವಾಗತಿಸಿದ್ದು, 24 ಗಂಟೆಗಳಲ್ಲಿ ಒಪ್ಪಂದ ಅಂತಿಮಗೊಂಡು ವಿದ್ಯುನ್ಮಾನ ವಿಧಾನದ ಮೂಲಕ ಸಹಿ ಹಾಕುವ ಸಾಧ್ಯತೆ ಇದೆ ಎಂದಿದ್ದಾರೆ. ಪಾಕಿಸ್ತಾನದ ಉಪ ಪ್ರಧಾನಿ ಮೊಹಮ್ಮದ್ ಇಷಾಕ್ ದಾರ್ ಸೌದಿ ಅರೇಬಿಯಾ ವಿದೇಶಾಂಗ ಸಚಿವರೊಂದಿಗೂ ಈ ಕುರಿತು ಮಾತುಕತೆ ನಡೆಸಿದ್ದಾರೆ.

ಆದರೆ ಒಪ್ಪಂದದ ಸಮಯದ ಬಗ್ಗೆ ಇರಾನ್ ಎಚ್ಚರಿಕೆಯ ನಡೆ ಪ್ರದರ್ಶಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೇಯ್, ಭಾನುವಾರವೇ ಸಹಿ ಪ್ರಕ್ರಿಯೆ ನಡೆಯುವುದು ಅನುಮಾನ ಎಂದಿದ್ದಾರೆ. ಪ್ರಸ್ತುತ ಮಾತುಕತೆಗಳು ಯುದ್ಧ ಅಂತ್ಯಗೊಳಿಸುವತ್ತ ಮಾತ್ರ ಕೇಂದ್ರೀಕೃತವಾಗಿದ್ದು, ಅಣ್ವಸ್ತ್ರ ವಿಷಯ ಮುಂದಿನ ಹಂತದ ಚರ್ಚೆಗೆ ಮುಂದಿಡಲಾಗುವುದು ಎಂದು ಇರಾನ್ ಸ್ಪಷ್ಟಪಡಿಸಿದೆ. ಒಪ್ಪಂದದ ಭಾಗವಾಗಿ ಅಮೆರಿಕ ತನ್ನ ನೌಕಾ ದಿಗ್ಬಂಧನ ಹಿಂತೆಗೆದುಕೊಳ್ಳಲಿದ್ದು, ಮುಟ್ಟುಗೋಲು ಹಾಕಲಾದ ಇರಾನ್‌ನ ಶತಕೋಟಿ ಡಾಲರ್ ಆಸ್ತಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಈ ಸುದ್ದಿ ಜೂನ್ 13-14, 2026ರ ಬೆಳವಣಿಗೆಯ ಆಧಾರಿತ. ಆದರೆ ಹಿಂದಿನ ತಿಂಗಳುಗಳಲ್ಲಿ ಇದೇ ರೀತಿಯ “ಒಪ್ಪಂದ ಸಮೀಪ” ಎಂಬ ಘೋಷಣೆಗಳು ಹಲವು ಬಾರಿ ಬಂದಿದ್ದು, ಅಂತಿಮಗೊಳ್ಳದ ಇತಿಹಾಸವಿದೆ.

ಜಗತ್ತಿನ ಮೊಟ್ಟಮೊದಲ ಟ್ರಿಲಿಯನೇರ್ ಆದ ಎಲಾನ್ ಮಸ್ಕ್; ಸ್ಪೇಸ್‌ಎಕ್ಸ್ ಐಪಿಒ ಹೊಸ ದಾಖಲೆ
ವಾಷಿಂಗ್ಟನ್: ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು ಜಗತ್ತಿನ ಇತಿಹಾಸದಲ್ಲೇ ಮೊದಲ ಟ್ರಿಲಿಯನೇರ್ ಎಂಬ ಅಪೂರ್ವ ದಾಖಲೆಗೆ ಪಾತ್ರರಾಗಿದ್ದಾರೆ. ಅವರ ಬಾಹ್ಯಾಕಾಶ ಸಂಸ್ಥೆಯಾದ ಸ್ಪೇಸ್ ಎಕ್ಸ್ ನಡೆಸಿದ ಐತಿಹಾಸಿಕ ಐಪಿಒ (Initial Public Offering) ಯಶಸ್ಸಿನ ಬಳಿಕ ಮಸ್ಕ್ ಅವರ ಒಟ್ಟು ಆಸ್ತಿ ಮೌಲ್ಯವು 1.1 ಟ್ರಿಲಿಯನ್ ಡಾಲರ್ ಗಡಿ ದಾಟಿದೆ ಎಂದು ವರದಿಯಾಗಿದೆ.

ಸ್ಪೇಸ್‌ಎಕ್ಸ್ ನಾಸ್ದಾಕ್ ಷೇರು ಮಾರುಕಟ್ಟೆಯಲ್ಲಿ “SPCX” ಸಂಕೇತದಡಿ ವಹಿವಾಟು ಆರಂಭಿಸಿದ್ದು, ಪ್ರತಿ ಷೇರಿಗೆ 135 ಡಾಲರ್ ದರ ನಿಗದಿಪಡಿಸಿ ಒಟ್ಟು 555.6 ಮಿಲಿಯನ್ ಷೇರುಗಳನ್ನು ಮಾರಾಟ ಮಾಡಿದೆ. ಇದರ ಮೂಲಕ ಕಂಪನಿಯು ಸುಮಾರು 75 ಬಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸಿದ್ದು, ಇದು ಜಾಗತಿಕ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಎಂದು ದಾಖಲಾಗಿದೆ.

ಐಪಿಒ ಬಳಿಕ ಸ್ಪೇಸ್‌ಎಕ್ಸ್ ಷೇರುಗಳು ಮೊದಲ ದಿನವೇ ಭಾರೀ ಏರಿಕೆ ಕಂಡು ಕಂಪನಿಯ ಮೌಲ್ಯವು 2 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚಾಗಿದೆ. ಕಂಪನಿಯಲ್ಲಿ ಸುಮಾರು 82 ಶೇಕಡಾ ಪಾಲುದಾರಿಕೆ ಹೊಂದಿರುವ ಮಸ್ಕ್ ಅವರ ಸಂಪತ್ತಿನಲ್ಲಿ ಭಾರೀ ಏರಿಕೆ ಕಂಡಿದ್ದು, ಅವರ ನಿವ್ವಳ ಆಸ್ತಿ ಮೌಲ್ಯವು 1.1 ಟ್ರಿಲಿಯನ್ ಡಾಲರ್ ತಲುಪಿದೆ.

ಈ ಬೆಳವಣಿಗೆಯೊಂದಿಗೆ ಮಸ್ಕ್ ಅವರು ವಿಶ್ವದ ಇತರ ಶ್ರೀಮಂತರನ್ನು ಬಹಳ ಹಿಂದಿಕ್ಕಿದ್ದಾರೆ. ಗೂಗಲ್ ಸಹ-ಸ್ಥಾಪಕ ಲ್ಯಾರಿ ಪೇಜ್ ಸೇರಿದಂತೆ ವಿಶ್ವದ ಪ್ರಮುಖ ಶ್ರೀಮಂತರಿಗಿಂತಲೂ ಮಸ್ಕ್ ಅವರ ಆಸ್ತಿ ಹಲವು ಪಟ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.

ಐಪಿಒ ಯಶಸ್ಸಿನಿಂದಾಗಿ ಸ್ಪೇಸ್‌ಎಕ್ಸ್‌ನ ಸಾವಿರಾರು ಉದ್ಯೋಗಿಗಳಿಗೂ ಲಾಭವಾಗಿದ್ದು, ಸುಮಾರು 4,400ಕ್ಕೂ ಹೆಚ್ಚು ಪ್ರಸ್ತುತ ಮತ್ತು ಮಾಜಿ ಉದ್ಯೋಗಿಗಳು ಮಿಲಿಯನೇರ್‌ಗಳಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಭವಿಷ್ಯದಲ್ಲಿ ಸ್ಟಾರ್‌ಲಿಂಕ್ ಉಪಗ್ರಹ ಜಾಲದ ವಿಸ್ತರಣೆ, ಸ್ಟಾರ್‌ಶಿಪ್ ಯೋಜನೆ ಹಾಗೂ ಬಾಹ್ಯಾಕಾಶ ಆಧಾರಿತ ಎಐ ಮೂಲಸೌಕರ್ಯ ನಿರ್ಮಾಣಕ್ಕಾಗಿ ಅಗತ್ಯವಿರುವ ಬಂಡವಾಳ ಸಂಗ್ರಹಿಸುವ ಉದ್ದೇಶದಿಂದ ಕಂಪನಿಯನ್ನು ಸಾರ್ವಜನಿಕ ವಲಯಕ್ಕೆ ತರಲಾಗಿದೆ ಎಂದು ಮಸ್ಕ್ ತಿಳಿಸಿದ್ದಾರೆ.

ಯುವಜನರಿಗೆ ಉಚಿತ ಫಿಲ್ಮ್ ಮೇಕಿಂಗ್ ಕೋರ್ಸ್: ಅರ್ಜಿ ಆಹ್ವಾನ
ಸಿನಿಮಾ, ಡಾಕ್ಯುಮೆಂಟರಿ, ವೆಬ್ ಸೀರೀಸ್, ಯೂಟ್ಯೂಬ್ ಕಂಟೆಂಟ್ ನಿರ್ಮಾಣ ಸೇರಿದಂತೆ ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವಜನರಿಗೆ ಉಚಿತವಾಗಿ ತರಬೇತಿ ನೀಡುವ ಉದ್ದೇಶದಿಂದ ಸಂವಾದ ಬದುಕು – ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ಸಂಸ್ಥೆ ಆರು ತಿಂಗಳ ಫಿಲ್ಮ್ ಮೇಕಿಂಗ್ ಕೋರ್ಸ್ ಆಯೋಜಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಕೋರ್ಸ್ನಲ್ಲಿ ಸಿನಿಮಾ ನಿರ್ಮಾಣದ ವಿವಿಧ ಹಂತಗಳ ಕುರಿತು ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಸ್ಕ್ರೀನ್ ರೈಟಿಂಗ್, ನಿರ್ದೇಶನ, ಕ್ಯಾಮೆರಾ ನಿರ್ವಹಣೆ, ಲೈಟಿಂಗ್, ಸೌಂಡ್ ಡಿಸೈನ್, ವಿಡಿಯೋ ಎಡಿಟಿಂಗ್, ಗ್ರಾಫಿಕ್ ಡಿಸೈನ್, ಪೋಸ್ಟ್ ಪ್ರೊಡಕ್ಷನ್ ಹಾಗೂ ಫಿಲ್ಮ್ ಮಾರ್ಕೆಟಿಂಗ್ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಒಳಗೊಂಡಿರಲಿದೆ ಎಂದು ಸಂಸ್ಥೆ ತಿಳಿಸಿದೆ.

ಸಿನಿಮಾ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಪದವೀಧರರು, ಸ್ನಾತಕೋತ್ತರ ಪದವೀಧರರು ಮತ್ತು ವೃತ್ತಿಪರ ಶಿಕ್ಷಣ ಪಡೆದವರು ಕೋರ್ಸ್ಗೆ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ ಅವಧಿಯಲ್ಲಿ ಉದ್ಯಮದ ಅನುಭವಿ ನಿರ್ದೇಶಕರು, ಬರಹಗಾರರು ಹಾಗೂ ತಾಂತ್ರಿಕ ತಜ್ಞರೊಂದಿಗೆ ನೇರ ಸಂವಾದ ಮತ್ತು ಮಾರ್ಗದರ್ಶನ ಪಡೆಯುವ ಅವಕಾಶವೂ ಕಲ್ಪಿಸಲಾಗಿದೆ.

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉಚಿತ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಜೊತೆಗೆ ಮಾಧ್ಯಮ ಹಾಗೂ ಸಿನಿಮಾ ಸಂಬಂಧಿತ ಕ್ಷೇತ್ರಗಳಲ್ಲಿ ಇಂಟರ್ನ್ಶಿಪ್ ಅವಕಾಶಗಳನ್ನು ಒದಗಿಸಲಾಗುತ್ತದೆ. ಗ್ರಾಮೀಣ ಹಾಗೂ ಹಿಂದುಳಿದ ಹಿನ್ನೆಲೆಯ ಯುವಜನರಿಗೆ ಆದ್ಯತೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಜೂನ್ 25ರಿಂದ ಕೋರ್ಸ್ ಆರಂಭವಾಗಲಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಸಿನಿಮಾ ಅಥವಾ ಕಥೆಯ ಕುರಿತ ಗುರಿ, ಕನಸು ಅಥವಾ ಅನುಭವವನ್ನು 300ರಿಂದ 500 ಪದಗಳಲ್ಲಿ ಬರೆದು ಗೂಗಲ್ ಫಾರ್ಮ್ ಮೂಲಕ ಅರ್ಜಿ ಸಲ್ಲಿಸಬೇಕು. ಕೇವಲ 25 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ಶೀಘ್ರ ಅರ್ಜಿ ಸಲ್ಲಿಸುವಂತೆ ಸಂಸ್ಥೆ ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ 99720 89471 ಅಥವಾ 99450 65060 ಸಂಖ್ಯೆಗೆ ಸಂಪರ್ಕಿಸಬಹುದು.
ಅರ್ಜಿ ಸಲ್ಲಿಸಲು ಲಿಂಕ್: https://forms.gle/jaBSGKZrrP4X66uF6
massmedia@samvadabaduku.org ಇ-ಮೇಲ್ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ.