Peepal Media

ನಟ ಶಿವರಾಜ್‌ಕುಮಾರ್ ಮನೆಗೆ ತೆರಳಿ ಎಸ್‌ಐಆರ್ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು ಜನಸಾಮಾನ್ಯರ ಬಳಿಗೂ ಹೋಗಲಿ: ಕಾಂಗ್ರೆಸ್‌ ಮುಖಂಡ ಇನಾಯತ್ ಅಲಿ
ನಟ ಶಿವರಾಜ್‌ಕುಮಾರ್ ಅವರಿಗೆ ಎಸ್‌ಐಆರ್ ನೋಟಿಸ್ ನೀಡಲಾದ ಪ್ರಕರಣ ಹಾಗೂ ಅದಕ್ಕೆ ಅಧಿಕಾರಿಗಳು ಸ್ಪಂದಿಸಿದ ರೀತಿಗೆ ಸಂಬಂಧಿಸಿದಂತೆ ಇನಾಯತ್ ಅಲಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಆಡಳಿತ ವ್ಯವಸ್ಥೆಯ ಇಬ್ಬಗೆಯ ನೀತಿಯನ್ನು ನೇರವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ 2002ರ ಮತದಾರರ ಪಟ್ಟಿಯ ದಾಖಲೆಗಳಿಗೆ ಗಣತಿ ನಮೂನೆಯು ಮ್ಯಾಪಿಂಗ್ ಆಗದ ಕಾರಣ ಹಿರಿಯ ನಟ ಶಿವರಾಜ್‌ಕುಮಾರ್ ಅವರಿಗೆ ಎಸ್‌ಐಆರ್ ನೋಟಿಸ್ ನೀಡಲಾಗಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಖುದ್ದು ಅವರ ಮನೆಗೇ ಭೇಟಿ ನೀಡಿ, ಅವರ ಪಾಸ್‌ಪೋರ್ಟ್ ಪರಿಶೀಲಿಸಿ, ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸರಿಪಡಿಸುವ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದ್ದಾರೆ.

ಈ ಸಮಸ್ಯೆ ಸುಖಾಂತ್ಯ ಕಂಡಿರುವುದು ಸಂತಸದ ವಿಷಯ. ಈ ಪ್ರಕ್ರಿಯೆಯಿಂದ ಬಾಧಿತರಾದ ಪ್ರತಿಯೊಬ್ಬ ನಾಗರಿಕನಿಗೂ ವ್ಯವಸ್ಥೆ ಇದೇ ರೀತಿಯಲ್ಲಿಯೇ ಕಾರ್ಯನಿರ್ವಹಿಸಬೇಕು. ಆಡಳಿತ ವ್ಯವಸ್ಥೆಯ ಅಧಿಕಾರಿಯೊಬ್ಬರು ಖುದ್ದಾಗಿ ಸ್ಥಳಕ್ಕೆ ಧಾವಿಸಿ, ಜನರ ಅಹವಾಲು ಆಲಿಸಿ, ದಾಖಲೆಗಳನ್ನು ಪರಿಶೀಲಿಸಿ, ಗೌರವಯುತವಾಗಿ ಸಮಸ್ಯೆಯನ್ನು ಇತ್ಯರ್ಥಪಡಿಸುವುದು ನಿಜಕ್ಕೂ ಶ್ಲಾಘನೀಯ.

ಆದರೆ ಈ ಬೆಳವಣಿಗೆಯು ಅತ್ಯಂತ ಸರಳ ಮತ್ತು ನೇರವಾದ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ. ಪ್ರಸ್ತುತ ಕರ್ನಾಟಕದಲ್ಲಿ ಯಾವುದೇ ಮ್ಯಾಪಿಂಗ್ ಇಲ್ಲ ಎಂಬ ಇದೇ ಮಾದರಿಯ ನೋಟಿಸ್ ಹಿಡಿದುಕೊಂಡು ಎಷ್ಟು ಜನಸಾಮಾನ್ಯರು ಕಂಗಾಲಾಗಿ ಕುಳಿತಿದ್ದಾರೆ? ಅವರ ಮನೆ ಬಾಗಿಲಿಗೆ ಯಾವ ಅಧಿಕಾರಿಯೂ ಭೇಟಿ ನೀಡುತ್ತಿಲ್ಲ, ಯಾರೊಬ್ಬರೂ ಖುದ್ದು ದಾಖಲೆ ಪರಿಶೀಲಿಸುತ್ತಿಲ್ಲ ಮತ್ತು ಮುಂದೇನು ಮಾಡಬೇಕೆಂಬ ಕನಿಷ್ಠ ಸ್ಪಷ್ಟತೆಯೂ ಅವರಿಗಿಲ್ಲ.

ವಿಚಾರಣೆಗಾಗಿ ದೂರದ ಕಚೇರಿಗಳಿಗೆ ಪ್ರಯಾಣಿಸಲು ಶಕ್ತಿ ಇಲ್ಲದ ವೃದ್ಧ ಪೋಷಕರು, ಕಚೇರಿಯ ಸರತಿ ಸಾಲಿನಲ್ಲಿ ನಿಂತರೆ ಒಂದು ದಿನದ ಆದಾಯವನ್ನೇ ಕಳೆದುಕೊಳ್ಳುವ ಬಡ ದಿನಗೂಲಿ ಕಾರ್ಮಿಕರು ಹಾಗೂ ಸಿಇಒ ವೆಬ್‌ಸೈಟ್‌ ಪರಿಶೀಲಿಸಲು ಸ್ಮಾರ್ಟ್‌ಫೋನ್ ಸೌಲಭ್ಯವೇ ಇಲ್ಲದ ಅಸಹಾಯಕರು ಇಂದು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆಡಳಿತ ವ್ಯವಸ್ಥೆಯು ಇಂತಹ ಒಂದು ಪ್ರಕರಣವನ್ನು ಇಷ್ಟೊಂದು ಕ್ಷಿಪ್ರವಾಗಿ ಮತ್ತು ಖುದ್ದಾಗಿ ಇತ್ಯರ್ಥಪಡಿಸಲು ಸಾಧ್ಯವೆಂಬುದನ್ನು ಸಾಬೀತುಪಡಿಸಿದೆ. ಆದರೆ ಇದೇ ರೀತಿಯ ಕಾಳಜಿ ಮತ್ತು ತುರ್ತು ಸ್ಪಂದನೆ ಅದೇ ನೋಟಿಸ್ ಹಿಡಿದಿರುವ ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ತಲುಪಲಿದೆಯೇ? ಅಥವಾ ಅಧಿಕಾರಿಗಳು ಖುದ್ದು ಮನೆಗೆ ತೆರಳಲು ಆ ವ್ಯಕ್ತಿ ಸಮಾಜದಲ್ಲಿ ಪ್ರಸಿದ್ಧ ಮುಖವೇ ಆಗಿರಬೇಕೇ ಎಂಬುದು ಇಂದಿನ ಅಸಲಿ ಪ್ರಶ್ನೆಯಾಗಿದೆ.

ಕೇವಲ ಪ್ರಸಿದ್ಧರಲ್ಲದ ಕಾರಣಕ್ಕಾಗಿ ಅಥವಾ ಜನಪ್ರಿಯ ಮುಖ ಹೊಂದಿಲ್ಲದ ಕಾರಣಕ್ಕೆ ಸಾಮಾನ್ಯ ನಾಗರಿಕರು ಯಾವುದೇ ರೀತಿಯಲ್ಲೂ ಈ ಗೌರವ ಮತ್ತು ಹಕ್ಕಿನಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ಇನಾಯತ್ ಅಲಿ ಅಭಿಪ್ರಾಯಪಟ್ಟಿದ್ದಾರೆ.

ಯತ್ನಾಳ್‌ ವಿಜಯೇಂದ್ರ ವಿರುದ್ಧ ಆರೋಪ ಮಾಡಿದಾಗ ಸುಮ್ಮನಿದ್ದ ಇಡಿ ಈಗ ಕರ್ನಾಟಕ್ಕೆ ಬಂದಿದೆ: ಪ್ರಿಯಾಂಕ್‌ ಖರ್ಗೆ
ದಾಖಲೆಗಳಿದ್ದರೆ ಇಡಿ ಬಿಡುಗಡೆ ಮಾಡಲಿ, ಕೇವಲ ಬೆದರಿಸುವ ತಂತ್ರಕ್ಕೆ ನಾವು ಹೆದರಲ್ಲ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಗಾಳಿಸುದ್ದಿಗಳಿಗೆಲ್ಲ ಉತ್ತರಿಸಲು ಸಾಧ್ಯವಿಲ್ಲ; ಜಾರಿ ನಿರ್ದೇಶನಾಲಯದ (ಇಡಿ) ಬಳಿ ದಾಖಲೆಗಳಿದ್ದರೆ ಅಥವಾ ಮನಿ ಟ್ರಯಲ್ ಸಾಬೀತಾಗಿದ್ದರೆ ಅದನ್ನು ಬಹಿರಂಗಪಡಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ. ಯಾವುದೇ ಗುತ್ತಿಗೆಯಲ್ಲಿ ಹಣ ಪಡೆದು ಬೇರೆಡೆ ಹೂಡಿಕೆ ಮಾಡಲಾಗಿದೆ ಎಂಬುದಕ್ಕೆ ಸಾಕ್ಷ್ಯಗಳೇ ಇಲ್ಲದೆ ಕೇವಲ ಸುಳ್ಳು ಪ್ರಚಾರ ನಡೆಸಲಾಗುತ್ತಿದೆ ಎಂದು ಅವರು ಕಿಡಿಕಾರಿದರು.

ಇಡಿ ಈಗಾಗಲೇ ನೂರಾರು ಪತ್ರಿಕಾ ಪ್ರಕಟಣೆಗಳನ್ನು ಬಿಡುಗಡೆ ಮಾಡಿದೆ, ಆದರೆ ಅವುಗಳಲ್ಲಿ ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ (ಕನ್ವಿಕ್ಷನ್) ಎಂದು ಪ್ರಶ್ನಿಸಿದ ಅವರು, ವಿರೋಧ ಪಕ್ಷಗಳನ್ನು ಹೆದರಿಸುವುದು ಮತ್ತು ಬೆದರಿಸುವುದೇ ತನಿಖಾ ಸಂಸ್ಥೆಗಳ ಮುಖ್ಯ ಕೆಲಸವಾಗಿದೆ ಎಂದು ಟೀಕಿಸಿದರು.

ವಿಜಯೇಂದ್ರ ಅವರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪಗಳನ್ನು ಮಾಡಿದಾಗ ಯಾವುದೇ ಐಟಿ ಅಥವಾ ಇಡಿ ದಾಳಿಗಳು ನಡೆಯಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ನೆನಪಿಸಿದರು. ವಿದೇಶ ಪ್ರವಾಸಗಳ ಕುರಿತು ಮಾತನಾಡಿದ ಅವರು, “ಬಿಜೆಪಿಯ ಶಾಸಕರು ಮತ್ತು ಮಾಜಿ ಸಚಿವರು ತಮ್ಮ ಪಾಸ್‌ಪೋರ್ಟ್‌ಗಳನ್ನು ತನಿಖೆಗೆ ನೀಡಲಿ; ದುಬೈ ಹಾಗೂ ಮಾರಿಷಸ್‌ಗೆ ಯಾರೆಲ್ಲಾ ಎಷ್ಟು ಬಾರಿ ಹೋಗಿ ಬಂದಿದ್ದಾರೆ ಎಂಬುದು ತನಿಖೆಯಾಗಲಿ, ನಾವೂ ನಮ್ಮ ಪಾಸ್‌ಪೋರ್ಟ್ ನೀಡಲು ಸಿದ್ಧರಿದ್ದೇವೆ,” ಎಂದು ಸವಾಲೆಸೆದರು. ಬಿಜೆಪಿಗೆ ಹೋದ ತಕ್ಷಣವೇ ಭ್ರಷ್ಟ ರಾಜಕಾರಣಿಗಳು ‘ಗಂಗಾಜಲ’ದಲ್ಲಿ ಮುಳುಗೆದ್ದು ಪವಿತ್ರರಾಗುತ್ತಾರೆ ಮತ್ತು ಅವರ ಎಲ್ಲ ತಪ್ಪುಗಳೂ ಮನ್ನಾಗುತ್ತವೆ ಎಂದು ಅವರು ವ್ಯಂಗ್ಯವಾಡಿದರು.

ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬದ ವಿರುದ್ಧ ಇಷ್ಟೆಲ್ಲಾ ಆಧಾರರಹಿತ ಆರೋಪಗಳನ್ನು ಮಾಡಿ ಚಾರಿತ್ರ್ಯವಧೆ ನಡೆಸಿದ ಬಳಿಕ, ನ್ಯಾಯಾಲಯದಲ್ಲಿ ಯಾವುದೂ ಸಾಬೀತಾಗದಿದ್ದಾಗ ಕೇಂದ್ರ ಸರ್ಕಾರವಾಗಲಿ ಅಥವಾ ಬಿಜೆಪಿಯವರಾಗಲಿ ಕ್ಷಮೆ ಕೇಳಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು. ಕೇಂದ್ರ ಸರ್ಕಾರದ ನೀತಿಗಳು, ನಿರುದ್ಯೋಗ, ಆರ್ಥಿಕ ವೈಫಲ್ಯಗಳನ್ನು ನಾವು ಬಹಿರಂಗವಾಗಿ ಪ್ರಶ್ನಿಸುತ್ತಿರುವುದಕ್ಕೆ ಹಾಗೂ ಆರ್‌ಎಸ್‌ಎಸ್ ಅಸ್ತಿತ್ವ ಮತ್ತು ನೋಂದಣಿ ವಿಚಾರವಾಗಿ ನೇರ ಸವಾಲು ಹಾಕುತ್ತಿರುವುದಕ್ಕೆ ನಮ್ಮನ್ನು ವ್ಯವಸ್ಥಿತವಾಗಿ ಗುರಿಯಾಗಿಸಿ ರಾಜಕೀಯ ಪ್ರೇರಿತ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಯುದ್ಧ ಯಾರಿಗೂ ಒಳ್ಳಯದಲ್ಲ ಟ್ರಂಪ್ ವಿರುದ್ಧ ಚೀನಾ ಅಧ್ಯಕ್ಷ – ಜಿನ್‌ಪಿಂಗ್ ವಾಗ್ದಾಳಿ
ನವದೆಹಲಿ: ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್‌ ಶೃಂಗಸಭೆಯಲ್ಲಿ (BRICS Summit) ಭಾಗವಹಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping), ಫೆಬ್ರವರಿ ಕೊನೆಯಲ್ಲಿ ಆರಂಭವಾದ ಮಧ್ಯಪೂರ್ವ ಸಂಘರ್ಷವು ಯಾವುದೇ ಉದ್ದೇಶವನ್ನಾಗಲಿ ಅಥವಾ ಜಾಗತಿಕ ಹಿತಾಸಕ್ತಿಯನ್ನಾಗಲಿ ಈಡೇರಿಸುತ್ತಿಲ್ಲ ಎಂದು ಹೇಳುವ ಮೂಲಕ ಅಮೆರಿಕ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಈ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಮತ್ತು ಇರಾನ್ ಅಧ್ಯಕ್ಷ ಡಾ. ಮಸೂದ್ ಪೆಜೆಶ್ಕಿಯನ್ ಸೇರಿದಂತೆ ಹಲವು ಜಾಗತಿಕ ನಾಯಕರು ಈ ಶೃಂಗಸಭೆಯಲ್ಲಿ ಉಪಸ್ಥಿತರಿದ್ದಾರೆ.ಮಧ್ಯಪೂರ್ವ ಮತ್ತು ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಈ ಯುದ್ಧವು ಇಡೀ ಪ್ರದೇಶದ ಜನರಿಗೆ ತೀವ್ರ ನಷ್ಟವನ್ನುಂಟು ಮಾಡಿದೆ ಎಂದು ಶಿನಾ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. ಇದು ಅಂತರರಾಷ್ಟ್ರೀಯ ಸಮುದಾಯದ ಸಾಮಾನ್ಯ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳು ಸಾರ್ವಭೌಮತೆಯ ಉಲ್ಲಂಘನೆಯನ್ನು ವಿರೋಧಿಸಬೇಕು ಮತ್ತು ಜಾಗತಿಕ ಶಾಂತಿ ಕಾಪಾಡಲು ಒಟ್ಟಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದ್ದಾರೆ. ಎರಡು ದಿನಗಳ ಭಾರತದ ಭೇಟಿಯಲ್ಲಿರುವ ಕ್ಸಿ ಜಿನ್‌ಪಿಂಗ್, ಯಾವುದೇ ದೇಶವು ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವನ್ನು ಸಹಿಸಬಾರದು ಎಂದರು. ಅಲ್ಲದೆ, ಜಾಗತಿಕ ಬಿಕ್ಕಟ್ಟುಗಳನ್ನು ಪರಿಹರಿಸುವಲ್ಲಿ ರಚನಾತ್ಮಕವಾಗಿ ಪಾಲ್ಗೊಳ್ಳುವಂತೆ ಒತ್ತಾಯಿಸಿದರು.ಜತೆಗೆ ಎಲ್ಲಾ ರೂಪದ ರಕ್ಷಣಾತ್ಮಕ ವ್ಯಾಪಾರ ನೀತಿಯನ್ನು ಬ್ರಿಕ್ಸ್‌ ರಾಷ್ಟ್ರಗಳು ಬಲವಾಗಿ ವಿರೋಧಿಸಬೇಕು ಎಂದ ಅವರು, ವಿಶ್ವ ವ್ಯಾಪಾರ ಸಂಸ್ಥೆಯನ್ನು (WTO) ಕೇಂದ್ರವಾಗಿಟ್ಟುಕೊಂಡು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ಬೆಂಬಲಿಸಬೇಕಿದೆ ಎಂದು ಪ್ರತಿಪಾದಿಸಿದರು.

ಅಮೆರಿಕ-ಚೀನಾ ವಾಣಿಜ್ಯ ಪೈಪೋಟಿ ಹಾಗೂ ಇರಾನ್ ಬಿಕ್ಕಟ್ಟು
ಚೀನಾ ಅಧ್ಯಕ್ಷರು ಸುಮಾರು ಎರಡು ವಾರಗಳಲ್ಲಿ ವಾಷಿಂಗ್ಟನ್‌ಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆಯು ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಚೀನಾ ಮತ್ತು ಅಮೆರಿಕ ದೀರ್ಘಕಾಲದಿಂದ ವ್ಯಾಪಾರಿ ಪ್ರತಿಸ್ಪರ್ಧಿಗಳಾಗಿದ್ದು, ಇರಾನ್ ಜತೆಗಿನ ಸಂಘರ್ಷದ ವಿಚಾರವಾಗಿ ಬೀಜಿಂಗ್ ಈಗಾಗಲೇ ವಾಷಿಂಗ್ಟನ್ ಅನ್ನು ಬಹಿರಂಗವಾಗಿ ಟೀಕಿಸುತ್ತಾ ಬಂದಿದೆ.ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಇರಾನ್ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡಿದೆ. ಇರಾನ್‌ಗೆ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಹೊಂದಲು ಅವಕಾಶ ನೀಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ವಿಶ್ವದ ಒಟ್ಟು ಕಚ್ಚಾ ತೈಲ ಪೂರೈಕೆಯ ಐದನೇ ಒಂದು ಭಾಗ ಸಾಗುವ, ಇರಾನ್ ಮತ್ತು ಒಮಾನ್ ನಡುವಿನ ಕಿರಿದಾದ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವಂತೆ ಟ್ರಂಪ್ ಆಡಳಿತ ಇರಾನ್‌ಗೆ ತಾಕೀತು ಮಾಡಿದೆ.ಆದರೆ, ಹಾರ್ಮುಜ್ ಜಲಸಂಧಿ ತನ್ನ ನಿಯಂತ್ರಣದಲ್ಲಿದೆ ಎಂದು ಇರಾನ್ ಸಮರ್ಥಿಸಿಕೊಂಡಿದೆ. ಜತೆಗೆ ತನ್ನ ಪರಮಾಣು ಕಾರ್ಯಕ್ರಮವು ಸಂಪೂರ್ಣವಾಗಿ ನಾಗರಿಕ ಬಳಕೆಗೆ ಮಾತ್ರ ಎಂದು ಸ್ಪಷ್ಟಪಡಿಸಿರುವ ಇರಾನ್, ತನ್ನ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸದಂತೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

ಇ.ಡಿಗೆ ನನ್ನ ವಿರುದ್ಧ ದೂರು ಕೊಟ್ಟಿದ್ದು ಯಾರೆಂದು ಚೆನ್ನಾಗಿ ಗೊತ್ತಿದೆ – ಸತೀಶ್ ಜಾರಕಿಹೊಳಿ
ಬೆಂಗಳೂರು : ಜಾರಿ ನಿರ್ದೇಶನಾಲಯದ (ED) ತನಿಖೆಗೆ ಒಳಗಾಗಿರುವ ಸಚಿವ ಸತೀಶ್ ಜಾರಕಿಹೊಳಿ (Satish jarakiholi) ತಮ್ಮ ವಿರುದ್ಧ ದೂರು ನೀಡಿದ ವ್ಯಕ್ತಿಯ ಸಂಪೂರ್ಣ ಮಾಹಿತಿ ತಮಗೆ ತಿಳಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ರಹಸ್ಯ ಮಾಹಿತಿಯನ್ನು ಈಗಾಗಲೇ ಮುಖ್ಯಮಂತ್ರಿಗಳ (CM) ಗಮನಕ್ಕೆ ತರಲಾಗಿದ್ದು, ಮುಂದಿನ ಹಂತದ ಪರಿಶೀಲನೆಗೆ ವಹಿಸಲಾಗಿದೆ.

ಇನ್ನು ದೂರುದಾರರು ಕಾಂಗ್ರೆಸ್ ಪಕ್ಷದವರೇ ಅಥವಾ ವಿರೋಧ ಪಕ್ಷದವರೇ ಎಂಬ ಗೊಂದಲಕ್ಕೆ ಉತ್ತರಿಸಿದ ಅವರು, ಆ ವ್ಯಕ್ತಿಗೆ ಕಾಂಗ್ರೆಸ್ ಜೊತೆ ಸಂಪರ್ಕವಿದ್ದರೂ ಮತದಾರರ ಪಟ್ಟಿಯ ಪ್ರಕಾರ ಅವರು ಬಿಜೆಪಿಗೆ ಸೇರಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಆರೋಪ ಮಾಡುವ ಮತ್ತು ದೂರು ನೀಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಈ ದೂರಿನ ಹಿಂದೆ ಯಾವುದೇ ಉದ್ದೇಶವಿದ್ದರೂ ಅದನ್ನು ಕಾನೂನಾತ್ಮಕವಾಗಿ ಎದುರಿಸಲಾಗುವುದು. ಸೂಕ್ತ ದಾಖಲೆಗಳು ಮತ್ತು ಸತ್ಯಾಂಶಗಳೊಂದಿಗೆ ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಸಚಿವರು ತಿಳಿಸಿದ್ದಾರೆ. ಇನ್ನು ದೂರು ಕೊಟ್ಟವರ ಬಗ್ಗೆ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಗಳೇ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಟಿಂಡರ್‌ ಡೇಟ್‌ ವಂಚನೆ!‌ ಬೆಂಗಳೂರಿನ ವಸಾಬಿ ಲಾಂಜ್ ಪಬ್‌ ಶಾಮೀಲು?
ಬೆಂಗಳೂರಿನಲ್ಲಿ ಡೇಟಿಂಗ್‌ ಆಪ್‌ಗಳ ಮೂಲಕ ಅನೇಕ ವಂಚನೆಯ ಜಾಲಗಳು ಜನರಿಂದ ಸಾವಿರಾರು ರುಪಾಯಿಗಳನ್ನು ದೋಚುತ್ತಿವೆ. ಯುವತಿಯರನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಈ ವಂಚನೆಗಳಲ್ಲಿ ಪಬ್‌ಗಳೂ ಭಾಗಿಯಾಗಿರುವ ಅನುಮಾನಗಳು ವ್ಯಕ್ತವಾಗಿವೆ. ಬೆಂಗಳೂರಿನಲ್ಲಿ ಇನ್ನೂ ಈ ಬಗ್ಗೆ ಸಮರ್ಪಕವಾದ ಪೊಲೀಸ್ ತನಿಖೆಗಳು ನಡೆದಿಲ್ಲ

ಜನರು ಟಿಂಡರ್‌, ಬಂಬಲ್‌ಗಳಂತಹ ಡೇಟಿಂಗ್‌ ಆಪ್‌ಗಳನ್ನು ಜನರು ಪರಸ್ಪರ ಪರಿಚಯವಾಗಲು, ಸಂಗಾತಿಗಳನ್ನು ಹುಡುಕಲು ಬಳಸುತ್ತಾರೆ. ಆದರೆ ಇವನ್ನು ಮೋಸ ಮಾಡಿ, ದುಡ್ಡು ದೋಚಲು ಬಳಸಿದರೆ ಹೇಗೆ? ಇಂತಹ ಅನೇಕ ಕರಾಳ ಜಾಲಗಳು ಬೆಂಗಳೂರಿನಾದ್ಯಂತ ಸಕ್ರಿಯವಾಗಿವೆ. ಈ ಜಾಲಗಳಲ್ಲಿ ಯುವತಿಯರೊಂದಿಗೆ ಪಬ್‌ಗಳೂ ಶಾಮೀಲಾಗಿವೆ.

ಸೆಪ್ಟೆಂಬರ್‌ 10, 2026 ರಂದು ವಂಚನೆಗೆ ಒಳಗಾಗಿರುವ ವ್ಯಕ್ತಿಯೊಬ್ಬರು (30) ಪೀಪಲ್‌ ಮೀಡಿಯಾವನ್ನು ಸಂಪರ್ಕಿಸಿದ್ದಾರೆ. ಟಿಂಡರ್‌ ಮೂಲಕ ಪರಿಚಯವಾದ ರಿಯಾ ಎಂಬ ಹೆಸರಿನ ಯುವತಿಯು ಇವರನ್ನು ಎಂ.ಜಿ ರೋಡ್‌ನಲ್ಲಿರುವ ʼವಸಾಬಿ ಲಾಂಜ್ʼ ಎಂಬ ಪಬ್‌ಗೆ ಕರೆತಂದು, ಕೇವಲ ಒಂದು ಗಂಟೆಯೊಳಗೆ 22,838 ರುಪಾಯಿ ಬಿಲ್‌ ಮಾಡಿಸಿ ಪರಾರಿಯಾಗಿದ್ದಾಳೆ. ಇದರ ಹಿಂದೆ ಪಬ್‌ ಕೂಡ ಶಾಮೀಲಾಗಿದೆಯೇ ಎಂಬ ಅನುಮಾನದ ಸುತ್ತ ಸದ್ಯ ವರದಿಯಾಗಿರುವ ಪ್ರಕರಣಗಳನ್ನು ಈ ವರದಿಯಲ್ಲಿ ದಾಖಲಿಸಲಾಗಿದೆ.

ವಂಚಕರ ಮೋಡಸ್‌ ಒಪರಾಂಡಿ:

ಬೆಂಗಳೂರಿನ ಯುವಕನೊಬ್ಬನಿಗೆ ಟಿಂಡರ್‌ನಲ್ಲಿ ಹುಡುಗಿಯೊಬ್ಬಳ ಪರಿಚಯವಾಗುತ್ತದೆ. ಆಕೆ ತಾನು ಬೆಂಗಳೂರಿಗೆ ಹೊಸಬಳು ಎಂದು ಪರಿಚಯ ಮಾಡಿಕೊಳ್ಳುತ್ತಾಳೆ. ಸ್ವಲ್ಪ ಹೊತ್ತು ಟಿಂಡರ್‌ನಲ್ಲಿ ಚಾಟ್‌ ನಡೆಸಿದ ನಂತರ, ವಾಟ್ಸಾಪ್‌ ಚಾಟ್‌ ಆರಂಭಿಸುತ್ತಾಳೆ. ತಕ್ಷಣ ಆಕೆ ನೇರವಾಗಿ ಯುವಕನನ್ನು ಮುಖತಃ ಭೇಟಿಯಾಗುವ ಇಚ್ಚೆಯನ್ನು ವ್ಯಕ್ತಪಡಿಸುತ್ತಾಳೆ.

ಆಕೆ ಯುವಕನನ್ನು ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಭೇಟಿಯಾಗುತ್ತಾಳೆ. ಆದರೆ ಫೋಟೋದಲ್ಲಿರುವ ಮಹಿಳೆಗೂ ಈಕೆಗೂ ವ್ಯತ್ಯಾಸ ಕಂಡು ಬಂದಾಗ ಯುವಕ ಆಕೆಯನ್ನು ಪ್ರಶ್ನಿಸಿದ್ದಾನೆ. ಆಕೆ “ಅವು ಫಿಲ್ಟರ್‌ ಮಾಡಿದ ಫೋಟೋಗಳು!” ಎಂದು ಸಮಜಾಯಿಷಿ ಕೊಟ್ಟಿದ್ದಾಳೆ.

ಈ ಯುವಕ ತಾನು ಸಾಮಾನ್ಯವಾಗಿ ಹೋಗುವ ನಿರ್ದಿಷ್ಟ ಪಬ್‌ಗೆ ಹೋಗೋಣವೆಂದು ಹೇಳಿದಾಗ, ಆಕೆ ನಿರಾಕರಿಸಿದ್ದಾಳೆ. ಆಕೆಯೇ ಒಂದು ಪಬ್‌ ಹೆಸರನ್ನು ಸೂಚಿಸಿ, ಅಲ್ಲಿಗೇ ಹೋಗೋಣವೆಂದು ಒತ್ತಾಯ ಮಾಡಿದ್ದಾಳೆ. ಆಕೆ ಸೂಚಿಸಿದ ಎಂ.ಜಿ ರೋಡ್‌ನಲ್ಲಿ ಇರುವ “ವಸಾಬಿ ಲಾಂಜ್”‌ ಎಂಬ ಪಬ್‌ಗೆ ಹೋಗುತ್ತಾರೆ. (ಈ ಪಬ್‌ನ ನಾಮ ಫಲಕವನ್ನು ಗುಪ್ತವಾಗಿ ಇಟ್ಟಿರುವಂತೆ ಕಂಡು ಬಂದಿದ್ದು, ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ.)

ಪಬ್‌ ಒಳಗೆ ಬಂದಂತೆ ಈ ಯುವಕನನ್ನು ತನ್ನ ಪಕ್ಕದಲ್ಲೇ ಕುಳಿತುಕೊಳ್ಳಲು ಹೇಳಿದ್ದಾಳೆ. ಆದರೆ, ಮುಖಾಮುಖಿ ಮಾತುಕತೆಗಾಗಿ ಆಕೆಯ ಎದುರಿನ ಕುರ್ಚಿಯಲ್ಲಿ ಯುವಕ ಕುಳಿತುಕೊಳ್ಳುತ್ತಾನೆ. ಆಕೆ ತರಾತುರಿಯಲ್ಲಿ ತನಗೆ ಬೇಕಾದ ವಿಸ್ಕಿ, ಬಿಯರ್‌, ಚಿಕನ್‌ ಕಬಾಬ್‌, ಜ್ಯೂಸ್‌ ಮತ್ತು ಸಿಗರೇಟ್‌ ಪ್ಯಾಕೇಟ್‌ ಆರ್ಡರ್‌ ಮಾಡಿದ್ದಾಳೆ.

ಈ ಮಧ್ಯೆ ಪಬ್‌ನ ಸಿಬ್ಬಂದಿ ಯುವಕನ ಬಳಿಗೆ ಬಂದು, “ನಿಮ್ಮ ಬಿಲ್‌ ಈಗಾಗಲೇ 20,000 ರುಪಾಯಿ ಆಗಿದೆ!” ಎಂದು ಹೇಳಿದರು. ಕೇವಲ ಒಂದು ಗಂಟೆಯಲ್ಲಿ ಇಷ್ಟು ದೊಡ್ಡ ಮೊತ್ತದ ಬಿಲ್‌ ಆಗಿರುವುದನ್ನು ಕಂಡ ಯುವಕನಿಗೆ ತಾನು ಮೋಸ ಹೋಗಿರುವ ಅನುಮಾನ ಬಂದಿದೆ. ಯುವಕ ಬಿಲ್‌ ಪಾವತಿ ಮಾಡಲು ನಿರಾಕರಿಸಿದಾಗ ಆಕೆ, “ನನ್ನ ಮೇಲೆ ಅಸಭ್ಯವಾಗಿ ವರ್ತಿಸಿದ್ದೀಯ ಎಂದು ಪೊಲೀಸರಿಗೆ ದೂರು ನೀಡುತ್ತೇನೆ,” ಎಂದು ಬೆದರಿಕೆ ಹಾಕಿದ್ದಾಳೆ.

“ಪಬ್‌ ಸಿಬ್ಬಂದಿ ನೀಡಿದ ಬಿಲ್‌ನಲ್ಲಿ ಖರೀದಿಸಿದ ಸಿಗರೇಟ್‌ ಪ್ಯಾಕೆಟ್‌ ಅನ್ನು ಸೇರಿಸಿರಲಿಲ್ಲ, ಎರಡು ಬಿಯರ್‌ ತೆಗೆದುಕೊಂಡಿದ್ದೆವು. ಆದರೆ ಬಿಲ್‌ನಲ್ಲಿ ಇದ್ದಿದ್ದು ಒಂದೇ ಬಿಯರ್. ಹೀಗಾಗಿ ಬಿಲ್‌ನಲ್ಲಿದ್ದ ಐಟಂಗಳು ನಿಜವಾಗಿಯೂ ನಾನು ಆರ್ಡರ್‌ ಮಾಡಿದ್ದೇನೆಯೇ ಎಂಬ ಅನುಮಾನ ಬಂತು,” ಎಂದು ಯುವಕ ಪೀಪಲ್‌ ಮೀಡಿಯಾಗೆ ತಿಳಿಸಿದ್ದಾನೆ.

ಯುವಕ ತನ್ನ ಸ್ನೇಹಿತರನ್ನು ಸಂಪರ್ಕಿಸಿದಾಗ, ಅವರು ಬಿಲ್‌ ಹಣ ನೀಡದಂತೆ ಮತ್ತು ಪೊಲೀಸರಿಗೆ ಕರೆ ಮಾಡುವಂತೆ ಸಲಹೆ ನೀಡಿದರು. ಯುವಕ 112 ಗೆ ಕರೆ ಮಾಡಿ ಹೊಯ್ಸಳ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಪಬ್‌ಗೆ ಬಂದ ಪೊಲೀಸರು, ಯುವಕ ಮತ್ತು ಪಬ್‌ನ ಸಿಬ್ಬಂದಿಯ ನಡುವೆ ಮಾತುಕತೆ ನಡೆದಿದೆ. ಈ ಮಧ್ಯೆ ಆ ಯುವತಿ ಪಬ್‌ನಿಂದ ಪಲಾಯನ ಮಾಡಿದ್ದಾಳೆ. ಯುವಕ ಪೊಲೀಸರೊಂದಿಗೆ ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ಬಂದು, ನಡೆದ ಘಟನೆಯ ಬಗ್ಗೆ ತನ್ನ ಹೇಳಿಕೆಗಳನ್ನು ನೀಡಿದ್ದಾನೆ. ಪೊಲೀಸರು ವಸಾಬಿ ಲಾಂಜ್‌ ಪಬ್‌ನ ಇಬ್ಬರು ಸಿಬ್ಬಂದಿಯನ್ನು ಕರೆಸಿಕೊಂಡು, ಅವರ ಮೂಲಕ ಸಿಸಿಟಿವಿ ದೃಶ್ಯಾವಳಿಗಳನ್ನು ತರಿಸಿಕೊಂಡಿದ್ದಾರೆ.

ಯುವಕ ತನಗಾಗಿರುವ ವಂಚನೆಯ ಬಗ್ಗೆ ಸಪ್ಟೆಂಬರ್‌ 12, 2026 ರಂದು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ಲಿಖಿತ ದೂರನ್ನು ನೀಡಿದ್ದಾನೆ. ಇಂತಹ ಅನೇಕ ದೂರುಗಳು ಈಗಾಗಲೇ ಪೊಲೀಸರು ಬಳಿ ಇವೆ.

ಪೀಪಲ್‌ ಮೀಡಿಯಾ ಆ ಯುವತಿಯ ಮೊಬೈಲ್‌ ಸಂಖ್ಯೆಯನ್ನು (9315299905) ಪರಿಶೀಲಿಸಿದಾಗ, ಅದರಲ್ಲಿ ಮಿ.ರಾಹುಲ್‌ ಎಂಬ ಹೆಸರು ಇರುವುದು ಕಂಡು ಬಂದಿದೆ. ಆದರೆ ಪೊಲೀಸರು, “ಇದೊಂದು ಉತ್ತರ ಭಾರತದವರ ಮೊಬೈಲ್‌ ಸಂಖ್ಯೆ. ಇವರು ದುರ್ಬಳಕೆ ಮಾಡಿಕೊಂಡಿದ್ದಾರೆ,” ಎಂದು ತಿಳಿಸಿದ್ದಾರೆ. ಆದರೆ ಆ ಸಂಖ್ಯೆಯಲ್ಲಿ ರಾಹುಲ್‌ ಎಂಬ ಹೆಸರಿನಲ್ಲಿ ಗೂಗಲ್‌ ಪೇ ಸಕ್ರಿಯವಾಗಿದೆ. ಈಕೆಯ ಮೊಬೈಲ್‌ ಸಂಖ್ಯೆಯ ಪರಿಶೀಲಿಸಿದರೆ, ಈ ಜಾಲವನ್ನು ಪತ್ತೆ ಮಾಡಬಹುದು.

“ಘಟನೆ ನಡೆದ ಮರುದಿನ, ಸಪ್ಟೆಂಬರ್‌ 11 ರಂದು ನಾನು ಅದೇ ಯುವತಿಯ ಸಂಜೆ 5:48 ಗಂಟೆಗೆ ಬ್ರಿಗೇಡ್‌ ರೋಡ್‌ ಸಿಗ್ನಲ್‌ ಬಳಿ ಇರುವ ಟ್ರಾಫಿಕ್‌ ಪೊಲೀಸ್‌ ಬೂತ್‌ ಪಕ್ಕದಲ್ಲಿ ನಡೆದುಕೊಂಡು ಬರುತ್ತಿರುವುದನ್ನು ನೋಡಿದ್ದೇನೆ,” ಎಂದು ಯುವಕ ಪೀಪಲ್‌ ಮೀಡಿಯಾಗೆ ತಿಳಿಸಿದ್ದಾನೆ.

ಈ ಘಟನೆ ನಡೆದ ಎರಡು ದಿನಗಳ ಬಳಿಕ, ವಸಾಬಿ ಲಾಂಜ್‌ನಲ್ಲಿ ಮತ್ತೊಂದು ಘಟನೆ ನಡೆದಿದೆ. ಬೆಂಗಳೂರಿನ ಯುವಕನೊಬ್ಬನಿಗೆ ಬಂಬಲ್‌ ಮೂಲಕ ಪರಿಚಯವಾದ ಯುವತಿ ಆತನನ್ನು ವಸಾಬಿ ಲಾಂಜ್‌ಗೆ ಕರೆದುಕೊಂಡು ಹೋಗಿದ್ದಾಳೆ. ಸ್ವಲ್ಪ ಹೊತ್ತಿನ ನಂತರ ಆತನಿಗೆ 51,204 ರುಪಾಯಿ ಬಿಲ್‌ ನೀಡಲಾಗಿದೆ. ಈ ಬಗ್ಗೆ ಇಂದು, ಸಪ್ಟೆಂಬರ್‌ 12 ರಂದು ಬೆಳಗ್ಗೆ  ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ಹೋಗಿ ತಮ್ಮ ಹೇಳಿಕೆಯನ್ನು ಮೌಖಿಕವಾಗಿ ನೀಡಿದ್ದಾರೆ. ಈ ವಂಚನೆಯನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.

ಪೊಲೀಸರು ಈ ಸಮಸ್ಯೆಯನ್ನು ಪಬ್‌ನವರೊಂದಿಗೆ ಮಾತನಾಡಿ ಸರಿಪಡಿಸಿಕೊಳ್ಳುವಂತೆ ತಿಳಿಸಿದರು. ಹೀಗಾಗಿ ಈ ದಿನವೇ ಸಂಜೆ ಅವರು ಪಬ್‌ಗೆ ಹೋಗಿ ಮಾತನಾಡಿದ್ದು, “ಮೊದಲ ಬಿಲ್‌ ಬಂದ ಮೇಲೂ ನೀವು ಯಾಕೆ ಆರ್ಡರ್‌ ಮಾಡಿದ್ದೀರಿ?” ಎಂಬ ಪ್ರಶ್ನೆಯನ್ನು ಪಬ್‌ ಸಿಬ್ಬಂದಿ ಈ ಯುವಕನಿಗೆ ಕೇಳಿದ್ದಾರೆ. ನಂತರ ಮೊದಲ ಬಿಲ್‌ನ 23,000 ವನ್ನು ವಾಪಾಸ್‌ ಮಾಡಿ, “ಈ ಪ್ರಕರಣವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಡಿ ಎಂದರು,” ಎಂದು ವಂಚನೆಗೆ ಒಳಗಾದ ವ್ಯಕ್ತಿ ಪೀಪಲ್‌ ಮೀಡಿಯಾಗೆ ತಿಳಿಸಿದ್ದಾರೆ.

ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಇಂತಹ 12 ರಷ್ಟು ದೂರುಗಳು ಬಂದಿವೆ. ಅನೇಕ ಯುವಕರು ಭಯಭೀತರಾಗಿ ಪಬ್‌ ನೀಡಿದ ಬಿಲ್‌ನಲ್ಲಿರುವ ಮೊತ್ತದ ಹಣವನ್ನು ನೀಡಿ ಮೋಸ ಹೋಗಿದ್ದಾರೆ. ವರದಿಗಾರರಿಗೆ ಪೊಲೀಸರು ನೀಡಿದ ಮಾಹಿತಿಯಂತೆ, ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ವಸಾಬಿ ಲಾಂಜ್ ನಲ್ಲಿ ಇದೇ ರೀತಿಯ ವಂಚನೆ ನಡೆದಿರುವ ಪ್ರಕರಣಗಳು ಈ ಹಿಂದೆಯೂ ಬಂದಿವೆ.

ಈ ಹಿನ್ನಲೆಯಲ್ಲಿ ಪೀಪಲ್‌ ಮೀಡಿಯಾ ವಸಾಬಿ ಲಾಂಜ್‌ನ ಜೊಮಾಟೋ ರಿವ್ಯೂಗಳನ್ನು ಪರಿಶೀಲಿಸಿದೆ. ಇದರಲ್ಲಿ ಅನೇಕ ಮಂದಿ ತಮಗೂ ಈ ರೀತಿಯ ವಂಚನೆಯಾಗಿರುವುದನ್ನು ದಾಖಲಿಸಿದ್ದಾರೆ.

ಈ ಮೋಸದಲ್ಲಿ ಎಂ.ಜಿ ರೋಡ್‌ ವಸಾಬಿ ಲಾಂಜ್‌ ಪಬ್‌ ಶಾಮೀಲು?

ಬೆಂಗಳೂರಿನ ಅನೇಕ ಪಬ್‌ಗಳು ಇಂತಹ ಕೃತ್ಯದಲ್ಲಿ ಶಾಮೀಲಾಗಿವೆ. ಈ ಪ್ರಕರಣಗಳಲ್ಲಿ ಮಹಿಳೆಯರು ಯುವಕರನ್ನು ಎಂ.ಜಿ ರೋಡ್‌ನ ವಸಾಬಿ ಲಾಂಜ್‌ ಎಂಬ ಪಬ್‌ಗೆ ಕರೆದುಕೊಂಡು ಹೋಗಿದ್ದಾರೆ. ಇಂತಹ ಅನೇಕ ಘಟನೆಗಳು ಇದೇ ಪಬ್‌ನಲ್ಲಿ ನಡೆದಿವೆ. ಜೊಮ್ಯಾಟೋವಿನಲ್ಲಿ ವಸಾಬಿ ಲಾಂಜ್‌ಗೆ ಗ್ರಾಹಕರು ನೀಡಿರುವ ಅಭಿಪ್ರಾಯಗಳು ಬೆಚ್ಚಿಬೀಳಿಸುವಂತಿವೆ.

“ನಿಕಿತಾ ಸಿಂಗ್ ಎಂಬ ಹುಡುಗಿ ಇದ್ದಾಳೆ. ನೀವು ಅವಳನ್ನು ಬಂಬಲ್‌ನಲ್ಲಿ ನೋಡಬಹುದು. ಅವಳು ನಿಮ್ಮನ್ನು ಅಲ್ಲಿಗೆ (ವಸಾಬಿ ಲಾಂಜ್) ಕರೆದುಕೊಂಡು ಹೋಗಿ ರಾಯಲ್ ಅಬ್ಸೊಲ್ಯೂಟ್ ಮತ್ತು ಬ್ಲೂ ಲೇಬಲ್ 60 ಎಂ.ಎಲ್‌ ನಂತಹ ಎಲ್ಲಾ ಪ್ರೀಮಿಯಂ ಡ್ರಿಂಕ್‌ಗಳನ್ನು ಕುಡಿಯುತ್ತಾಳೆ. ನಂತರ ಅವರು (ಪಬ್‌) ನಿಮಗೆ ಕೆಲವೇ ನಿಮಿಷಗಳಲ್ಲಿ 20 30 ಸಾವಿರ ಬಿಲ್ ಮಾಡುತ್ತಾರೆ. ನೋಡಲು ಕುಳ್ಳಿಗಿನ ದೇಹದ, ಕೂದಲು ಸ್ಟ್ರೈಟ್‌ ಮಾಡಿಸಿಕೊಂಡಿರುವ ಯುವತಿ. ಅವಳ ಬಲೆಗೆ ಬೀಳಬೇಡಿ. ನಿಮ್ಮ ಡೇಟ್ ಮುಗಿದ ತಕ್ಷಣ ಅವಳು ವಾಶ್‌ರೂಮ್‌ಗೆ ಹೋಗುತ್ತಾಳೆ. ಮಾಲೀಕನ ಹೆಸರು ಸಂತೋಷ್ ನಾಯಕ. ಅವನೊಬ್ಬ ಮೋಸಗಾರ,” ಎಂದು ಲಕ್ಕಿ ಎಂಬ ವ್ಯಕ್ತಿ ರಿವ್ಯೂ ನೀಡಿದ್ದಾರೆ.

ನವೀನ್‌ ಪೌಲ್‌ ಎಂಬ ವ್ಯಕ್ತಿ, “ನಿಕಿತಾ ಸಿಂಗ್ ಈ ಹಗರಣದಲ್ಲಿ ಭಾಗಿಯಾಗಿದ್ದಾಳೆ. ಬಂಬಲ್ ಆ್ಯಪ್ ಮೂಲಕ ವ್ಯಕ್ತಿಯನ್ನು ಭೇಟಿ ಮಾಡಿ, ಅವರ ಜೊತೆಗೆ ಡ್ರಿಂಕ್‌ ಕುಡಿದು, 4 ವಿಸ್ಕಿ ಮತ್ತು 3 ಟಕಿಲಾ ಶಾಟ್‌ಗಳಿಗೆ 26000 ಬಿಲ್‌ ಬರುವಂತೆ ಮಾಡಿದಳು. ಇವರೆಲ್ಲಾ ವಂಚಕರು ……” ಎಂದು ರಿವ್ಯೂ ನೀಡಿದ್ದಾರೆ.

ಅರುಷಿ ಎಂಬವರು, “ದಯವಿಟ್ಟು ಇವರನ್ನು (ವಸಾಬಿ ಲಾಂಜ್) ಪೋರ್ಟಲ್‌ನಿಂದ ತೆಗೆದುಹಾಕಿ. ಹುಡುಗಿಯರು ಹುಡುಗರನ್ನು‌ ಇಲ್ಲಿಗೆ ಡೇಟ್‌ಗೆ ಕರೆತರುವಂತೆ ಮಾಡಿ, ಅವರಿಗೆ ದೊಡ್ಡ ಮೊತ್ತದ ಬಿಲ್ ನೀಡಿ ಸ್ಕ್ಯಾಮ್‌ ಮಾಡುತ್ತಿದ್ದಾರೆ,” ಎಂದು ಜೊಮ್ಯಾಟೋಗೆ ಮನವಿ ಮಾಡಿದ್ದಾರೆ.

ಇದೇ ವಸಾಬಿ ಲಾಂಜ್‌ನಲ್ಲಿ 8,000 ರುಪಾಯಿಯ ಮೋಸ ನಡೆದಿರುವ ಬಗ್ಗೆ ಟೈಮ್ಸ್‌ ನೌ ವರದಿ ಮಾಡಿದೆ. ರೆಡ್‌ಇಟ್‌ ಪೋಸ್ಟ್‌ ಒಂದರಲ್ಲಿ ಬಂಬಲ್‌ ಡೇಟ್‌ನಲ್ಲಿ ಪರಿಚಯವಾದ ಮಹಿಳೆಯ ಮೂಲಕ ಬೆಂಗಳೂರಿನ ವಸಾಬಿ ಲಾಂಚ್‌ನಲ್ಲಿ ಮೋಸ ನಡೆದಿರುವುದು ಉಲ್ಲೇಖವಾಗಿದೆ. ಆ ಮಹಿಳೆ ಮೆನು ನೋಡದೆ ದುಬಾರಿ ಡ್ರಿಂಕ್ಸ್‌ಗಳನ್ನು ಆರ್ಡರ್ ಮಾಡಿದ್ದಾಳೆ. ಕೊನೆಗೆ, ನಿರೀಕ್ಷೆಗಿಂತ ಹೆಚ್ಚು, ಸುಮಾರು 8,000 ರುಪಾಯಿಗಳ ಬಿಲ್‌ ಆಗಿರುವುದನ್ನು 2026 ರ ಜನವರಿ 25 ರಂದು ಟೈಮ್ಸ್‌ ನೌ ವರದಿ ಮಾಡಿದೆ.

ಈ ರೀತಿಯ ವಂಚನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳ ಮೂಲಕ ಜನರು ಮಾಹಿತಿಯನ್ನು ನೀಡಿದ್ದಾರೆ: ವೀಡಿಯೋ 1 ಮತ್ತು ವೀಡಿಯೋ 2

ಈ ರೀತಿಯ ವಂಚನೆಗಳಲ್ಲಿ ವಸಾಬಿ ಲಾಂಜ್‌ನಂತಹ ಬೆಂಗಳೂರಿನ ಅನೇಕ ಪಬ್‌ಗಳು ಭಾಗಿಯಾಗಿರುವ ಅನುಮಾನಗಳು ಕಾಡುತ್ತಿವೆ. ಪಬ್‌ಗಳು ಇದಕ್ಕಾಗಿಯೇ ಹುಡುಗಿಯನ್ನು ನೇಮಿಸಿಕೊಳ್ಳುತ್ತವೆ. ಈ ಹುಡುಗಿಯರು ಟಿಂಡರ್‌, ಬಂಬಲ್‌ಗಳಂತಹ ಡೇಟಿಂಗ್‌ ಆಪ್‌ಗಳಲ್ಲಿ ಪುರುಷರನ್ನು ಹುಡುಕಿ ಅವೇ ಪಬ್‌ಗಳಿಗೆ ಕರೆದುಕೊಂಡು ಬರುತ್ತಾರೆ. ವಂಚನೆಯ ತಂತ್ರ ಯಶಸ್ವಿಯಾದಂತೆ ಈ ಹುಡುಗಿಯರಿಗೆ ಪಬ್‌ನವರು 20% ನಷ್ಟು ಕಮಿಷನ್‌ ಕೊಡುತ್ತಾರೆ.

2024 ರ ಜೂನ್‌ನಲ್ಲಿ ಹೈದರಾಬಾದ್‌ನಲ್ಲಿ ಡೇಟಿಂಗ್‌ ಆಪ್‌ ವಂಚನೆಯ ಜಾಲವನ್ನು ನಡೆಸುತ್ತಿದ್ದ ಏಳು ಜನರನ್ನು ಬಂಧಿಸಲಾಗಿತ್ತು. ದೆಹಲಿಯಲ್ಲಿ ನೈಟ್ ಕ್ಲಬ್ ಹೊಂದಿದ್ದ ಆರೋಪಿಗಳು ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಇದೇ ರೀತಿಯ ಕೃತ್ಯ ಎಸಗಿದ್ದರು. ಇವರು ಸಾಮಾನ್ಯವಾಗಿ ನಷ್ಟದಲ್ಲಿ ಓಡುತ್ತಿರುವ ಮತ್ತು ಆನ್‌ಲೈನ್‌ನಲ್ಲಿ ಕಳಪೆ ರೇಟಿಂಗ್ ಹೊಂದಿರುವ ಪಬ್‌ಗಳನ್ನು ಆಯ್ಕೆ ಮಾಡುತ್ತಿದ್ದರು.

🚨 NEW DATING SCAM ALERT IN BENGALURU

Several men are reportedly being targeted through Tinder and Bumble.

The pattern is simple: after matching, the woman agrees to meet but first asks the guy to pay for her cab. Later, she claims she doesn’t trust him and asks him to pay the… pic.twitter.com/TmBlm5PXTO
— Ghar Ke Kalesh (@gharkekalesh) August 12, 2026

2026 ರ ಮಾರ್ಚ್‌ನಲ್ಲಿ ಬೆಳ್ಳಂದೂರಿನಲ್ಲಿ ನಡೆದ ಒಂದು ಪ್ರಕರಣದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ ಒಬ್ಬರಿಗೆ ಪಬ್ ಸಿಬ್ಬಂದಿ 65,000 ರುಪಾಯಿ ಬಿಲ್ ನೀಡಿದ್ದರು. ಕೆಲವೇ ಕೆಲವು ಡ್ರಿಂಕ್‌ಗಳಿಗೆ ಇಷ್ಟು ಮೊತ್ತದ ಬಿಲ್‌ ಆಗಿದ್ದನ್ನು ಕಂಡ ಆ ವ್ಯಕ್ತಿ ಸಿಬ್ಬಂದಿಯನ್ನು ಪ್ರಶ್ನಿಸಿದರು. ಸಿಬ್ಬಂದಿ ಆ ವ್ಯಕ್ತಿಗೆ ಬಿಲ್ ಪಾವತಿಸಲು ನಿರಾಕರಿಸಿದರೆ ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಕೊನೆಗೆ ಮುಜುಗರ ಮತ್ತು ಹೆಚ್ಚಿನ ತೊಂದರೆಗೆ ಹೆದರಿ, ಅವರು ಬಿಲ್ ಅನ್ನು ಇತ್ಯರ್ಥಪಡಿಸಿ ಹೊರಟುಹೋಗಿದ್ದರು.

ಇನ್ನೊಬ್ಬ ವ್ಯಕ್ತಿಗೆ 37,000 ರುಪಾಯಿ ಬಿಲ್ ನೀಡಲಾಗಿತ್ತು. ತಕ್ಷಣವೇ ಅವರು 112 ಗೆ ಕರೆ ಮಾಡಿ ಹೊಯ್ಸಳ ಪೊಲೀಸರನ್ನು ಸಂಪರ್ಕಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಆದಾಗ್ಯೂ, ಯಾವುದೇ ಔಪಚಾರಿಕ ದೂರು ದಾಖಲಾಗಿರಲಿಲ್ಲ.

ಕೋರಮಂಗಲದ ಮಿರರ್‌ ಎಂಬ ಪಬ್‌ನಲ್ಲಿಯೂ ಗ್ರಾಹಕರು ಈ ರೀತಿ ಮೋಸ ಹೋಗಿರುವ ಬಗ್ಗೆ ಅಭಿಪ್ರಾಯಗಳು ವರದಿಯಾಗಿವೆ. ಬೆಂಗಳೂರಿನಲ್ಲಿರುವ ಕೆಲವು ಕೆಫೆಗಳಲ್ಲೂ ಇಂತಹ ಘಟನೆಗಳು ನಡೆದಿವೆ. ಮಹಿಳೆಯೊಬ್ಬರು ಬಂಬಲ್‌ ಮೂಲಕ ಯುವಕನಿಂದ ಮೋಸ ಹೋಗಿರುವದುನ್ನು r/Bengaluru ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಎಂ.ಜಿ ರೋಡ್‌ನಲ್ಲಿರುವ ಸ್ಕೈಡೆಕ್‌ ಬೈ ಶೆರ್ಲಾಕ್‌ ಕೆಫೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆ 8,500 ರುಪಾಯಿ ಬಿಲ್‌ ಪಾವತಿಸಿ ಬಂದಿದ್ದರು.

ಮುಂಬೈ ಮತ್ತು ಬೆಂಗಳೂರಿನಲ್ಲಿ ಟಿಂಡರ್, ಬಂಬಲ್, ಹಿಂಜ್, ಓಕೆಕ್ಯುಪಿಡ್ ಮತ್ತು ಐಸಲ್ ನಂತಹ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ನಕಲಿ ಪ್ರೊಫೈಲ್‌ಗಳ ಮೂಲಕ ಅನೇಕ ಜಾಲಗಳು ಜನರನ್ನು ರೆಸ್ಟೋರೆಂಟ್‌ಗಳಿಗೆ ಆಕರ್ಷಿಸುತ್ತಿವೆ. ಇಲ್ಲಿ ಆ ರೆಸ್ಟೋರೆಂಟ್‌ಗಳಿಗೂ, ವಂಚಕರಿಗೂ ಸಂಬಂಧ ಇರುತ್ತದೆ. ವಂಚಕರು ಗ್ರಾಹಕರನ್ನು ಇಲ್ಲಿಗೆ ಕರೆತಂದು, ಬ್ಲೂ ಲೇಬಲ್ ವಿಸ್ಕಿ ಅಥವಾ ಹುಕ್ಕಾದಂತಹ ಮೆನುವಿನಲ್ಲಿ ಇಲ್ಲದ ಐಟಂಗಳನ್ನು ಆರ್ಡರ್‌ ಮಾಡುತ್ತಾರೆ. ಗ್ರಾಹಕರಿಗೆ 61,000 ರುಪಾಯಿ ವರೆಗೆ ಬಿಲ್‌ ಬಂದಾಗ ತಾವು ಮೋಸ ಹೋಗಿರುವ ಅರಿವಾಗುತ್ತದೆ. 2026 ರ ಜನವರಿಯಲ್ಲಿ ಮುಂಬೈ ಪೊಲೀಸರು ರೆಸ್ಟೋರೆಂಟ್ ಮ್ಯಾನೇಜರ್ ಸೇರಿದಂತೆ 22 ಜನರ ಗುಂಪನ್ನು ಬಂಧಿಸಿದ್ದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂತಹ ಘಟನೆಗಳು ಪೊಲೀಸ್‌ ದೂರು ನೀಡುವಲ್ಲಿಗೇ ಮುಗಿಯುತ್ತಿವೆ. ಅನೇಕ ಪ್ರಕರಣಗಳಲ್ಲಿ ದೂರುಗಳನ್ನೂ ನೀಡಲಾಗುತ್ತಿಲ್ಲ. ಠಾಣೆಗಳಿಗೆ ಬಂದ ಪ್ರಕರಣಗಳ ಬಗ್ಗೆ ತನಿಖೆಗಳೂ ನಡೆಯುತ್ತಿಲ್ಲ. ಈ ಜಾಲದಲ್ಲಿ ಪಬ್‌, ಯುವತಿಯರು, ವಂಚನೆಯ ಜಾಲಗಳ ಜೊತೆಗೆ ಬೇರೆ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ಇಂತಹ ವಂಚನೆಯ ಜಾಲಗಳು ಇನ್ನೂ ಪೊಲೀಸರ, ಕಾನೂನಿನ ಭಯವಿಲ್ಲದೆ ಯಾವ ಧೈರ್ಯದಲ್ಲಿ ಸಕ್ರಿಯವಾಗಿವೆ?

ಕೋಲ್ಕತ್ತಾದಲ್ಲಿ ಮುಸ್ಲಿಂ ಉಪ ಪ್ರಾಂಶುಪಾಲೆಗೆ ಒತ್ತಾಯಪೂರ್ವಕ ರಾಜೀನಾಮೆ: ಕೊಠಡಿಗೆ ಗಂಗಾಜಲ ಸಿಂಪಡಿಸಿ ‘ಶುದ್ಧೀಕರಣ’ ಮಾಡಿದ ಎಬಿವಿಪಿ ವಿದ್ಯಾರ್ಥಿಗಳು
ಕೋಲ್ಕತ್ತಾದ ಸುರೇಂದ್ರನಾಥ್ ಲಾ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಮೊಹಮ್ಮದಿ ತರನ್ನುಮ್ ಅವರನ್ನು 23 ಗಂಟೆಗಳ ಕಾಲ ಅಕ್ರಮವಾಗಿ ಕೂಡಿಹಾಕಿ (ಘೇರಾವ್), ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆದ ನಂತರ, ಎಬಿವಿಪಿ (ABVP) ಸಂಘಟನೆಯ ವಿದ್ಯಾರ್ಥಿಗಳು ಅವರ ಕಚೇರಿ ಕೊಠಡಿಗೆ ಗಂಗಾಜಲ ಸಿಂಪಡಿಸಿ ಧೂಪ ಹಾಕಿ ‘ಶುದ್ಧೀಕರಣ’ ನಡೆಸಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದಿನ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ಪ್ರಭಾವವನ್ನು ತೊಡೆದುಹಾಕಲು ಈ ಕ್ರಮ ಕೈಗೊಂಡಿರುವುದಾಗಿ ಪ್ರತಿಭಟನಾಕಾರರು ಸಮರ್ಥಿಸಿಕೊಂಡಿದ್ದಾರೆ.

ಸೆಮಿಸ್ಟರ್ ಪರೀಕ್ಷೆಗಳಿಗೆ ಹಾಜರಾಗಲು ಕನಿಷ್ಠ ಶೇಕಡಾ 75ರಷ್ಟು ಹಾಜರಾತಿ ಕಡ್ಡಾಯಗೊಳಿಸಿ ಕಾಲೇಜು ಆಡಳಿತ ಮಂಡಳಿ ನೋಟಿಸ್ ಜಾರಿ ಮಾಡಿದ್ದೇ ಈ ವಿವಾದಕ್ಕೆ ಕಾರಣವಾಗಿತ್ತು. ಕಠಿಣ ನಿಯಮ ಜಾರಿಯಾದರೆ 900 ವಿದ್ಯಾರ್ಥಿಗಳ ಪೈಕಿ ಸುಮಾರು 600 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಲಿದ್ದಾರೆ ಎಂದು ಆರೋಪಿಸಿ ಎಬಿವಿಪಿ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಉಪ ಪ್ರಾಂಶುಪಾಲರ ಕೊಠಡಿಯ ವಿದ್ಯುತ್, ಫ್ಯಾನ್ ಸಂಪರ್ಕ ಕಡಿತಗೊಳಿಸಿ, ಆಹಾರ ಮತ್ತು ಕುಡಿಯುವ ನೀರು ನೀಡದೆ ತೀವ್ರ ಕಿರುಕುಳ ನೀಡಲಾಯಿತು ಎಂದು ಡಾ. ತರನ್ನುಮ್ ಆರೋಪಿಸಿದ್ದಾರೆ. ತೀವ್ರ ಒತ್ತಡಕ್ಕೆ ಮಣಿದು ರಾಜೀನಾಮೆ ಪತ್ರ ನೀಡಿದರೂ, ಪೊಲೀಸ್ ರಕ್ಷಣೆಯಲ್ಲಿ ಕ್ಯಾಂಪಸ್‌ನಿಂದ ಹೊರಬರುವ ವೇಳೆ “ನಾನು ರಾಜೀನಾಮೆ ನೀಡಿಲ್ಲ, ನನ್ನನ್ನು ಪಿತೂರಿಯ ಸಂತ್ರಸ್ತೆಯನ್ನಾಗಿಸಲಾಗಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಮತ್ತು ವಕೀಲ ಕೌಸ್ತವ್ ಬಾಗ್ಚಿ ಅವರು ಮಧ್ಯಪ್ರವೇಶಿಸಿ, ಸ್ವಯಂ-ಘೋಷಣೆಯ ಆಧಾರದ ಮೇಲೆ ಪರೀಕ್ಷೆ ಬರೆಯಲು ಅವಕಾಶ ನೀಡುವ ಬಗ್ಗೆ ಚರ್ಚಿಸಿದ್ದರೂ ಪ್ರತಿಭಟನೆ ನಿಲ್ಲಲಿಲ್ಲ. ತರನ್ನುಮ್ ಅವರು ವಿದ್ಯಾರ್ಥಿ ವಿರೋಧಿ ಧೋರಣೆ ಹೊಂದಿದ್ದಾರೆ ಎಂದು ಬಾಗ್ಚಿ ಆರೋಪಿಸಿದ್ದರು.

ಆದರೆ, ವಿದ್ಯಾರ್ಥಿಗಳಲ್ಲಿ ಶಿಸ್ತು ಕಾಪಾಡಲು ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಯತ್ನಿಸಿದ್ದಕ್ಕೆ ತಮ್ಮನ್ನು ಗುರಿಯಾಗಿಸಲಾಗಿದೆ ಎಂದು ತರನ್ನುಮ್ ಹೇಳಿದ್ದು, ಉನ್ನತ ಶಿಕ್ಷಣ ಇಲಾಖೆ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ. ಉಪ ಪ್ರಾಂಶುಪಾಲರ ರಾಜೀನಾಮೆಯನ್ನು ‘ವಿದ್ಯಾರ್ಥಿ ಹಕ್ಕುಗಳ ಗೆಲುವು’ ಎಂದು ಎಬಿವಿಪಿ ಬಣ್ಣಿಸಿದೆ.

সুরেন্দ্রনাথ আইন কলেজে ‘চোর চোর’ স্লোগান | পদত্যাগের পর উপাধ্যক্ষের বিস্ফোরক দাবি
সুরেন্দ্রনাথ আইন কলেজে উপস্থিতির হার নিয়ে পড়ুয়াদের বিক্ষোভকে কেন্দ্র করে উত্তেজনা। পড়ুয়াদের অভিযোগ, উপস্থিতির হার ৪০ শতাংশের নীচে থাকায় বহু ছাত্রছাত্রীকে পরীক্ষায় বসতে দেওয়া হবে না বলে… pic.twitter.com/la0GSzfHz8
— সাবির (@SabirAl72017365) September 12, 2026

ಉತ್ತರ ಪ್ರದೇಶ ಸರ್ಕಾರ ಗೂಂಡಾ ಕಾಯ್ದೆಯನ್ನು ದಬ್ಬಾಳಿಕೆಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ: ಅಲಹಾಬಾದ್ ಹೈಕೋರ್ಟ್ ಕಳವಳ
ಉತ್ತರ ಪ್ರದೇಶ ಸರ್ಕಾರವು ನ್ಯಾಯಾಲಯಗಳ ನಿರಂತರ ಎಚ್ಚರಿಕೆಗಳ ನಡುವೆಯೂ ‘ಯುಪಿ ಕಂಟ್ರೋಲ್ ಆಫ್ ಗೂಂಡಾಸ್ ಆಕ್ಟ್, 1970’ ಅನ್ನು ದಮನಕಾರಿ ಮತ್ತು ದಬ್ಬಾಳಿಕೆಯ ಅಸ್ತ್ರವಾಗಿ ನಿರಂತರವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅಲಹಾಬಾದ್ ಹೈಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ. ಗೋಂಡಾ ಜಿಲ್ಲಾಧಿಕಾರಿ ಜಾಹಿದ್ ಅಲಿ ಎಂಬುವವರನ್ನು ‘ಗೂಂಡಾ’ ಎಂದು ಘೋಷಿಸಿ, ಆರು ತಿಂಗಳ ಕಾಲ ಜಿಲ್ಲೆಯಿಂದ ಗಡೀಪಾರು ಮಾಡಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸುವ ವೇಳೆ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಗೂಂಡಾ ಕಾಯ್ದೆಯು ಸಮಾಜಘಾತುಕರನ್ನು ನಿಯಂತ್ರಿಸುವ ಅತ್ಯಂತ ಪ್ರಬಲ ಅಸ್ತ್ರವಾಗಿದ್ದು, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಸ್ಪಷ್ಟ ಭಂಗ ಉಂಟಾಗುವ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಇದನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು ಎಂದು ನ್ಯಾಯಾಲಯ ಪುನರುಚ್ಚರಿಸಿದೆ. ಯಾವುದೇ ವ್ಯಕ್ತಿಯ ಮೇಲಿನ ಅಪರಾಧ ಸಾಬೀತಾಗುವ ಮೊದಲೇ ಶಿಕ್ಷೆ ವಿಧಿಸುವುದು ಈ ಕಾಯ್ದೆಯ ಉದ್ದೇಶವಲ್ಲ; ನಿರಪರಾಧಿಗಳ ವಿರುದ್ಧ ಇದನ್ನು ದೌರ್ಜನ್ಯದ ಸಾಧನವಾಗಿ ಬಳಸಬಾರದು ಎಂದು ನ್ಯಾಯಾಲಯಗಳು ಪದೇಪದೇ ನೆನಪಿಸುತ್ತಿದ್ದರೂ, ಸರ್ಕಾರ ಅದೇ ಹಾದಿಯಲ್ಲಿ ಮುಂದುವರಿದಿದೆ ಮತ್ತು ಪ್ರಸ್ತುತ ಪ್ರಕರಣವು ಈ ಕಾಯ್ದೆಯ ದುರುಪಯೋಗಕ್ಕೆ ಅತ್ಯಂತ ಸ್ಪಷ್ಟ ನಿದರ್ಶನವಾಗಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಪೊಲೀಸರು ದಾಖಲಿಸಿದ್ದ ಎರಡು ಪ್ರಕರಣಗಳ ಪೈಕಿ ಒಂದರಲ್ಲಿ ಜಾಹಿದ್ ಅಲಿ ಈಗಾಗಲೇ ಖುಲಾಸೆಗೊಂಡಿದ್ದರು ಎಂಬುದನ್ನು ಗಮನಿಸಿದ ಹೈಕೋರ್ಟ್, ಖುಲಾಸೆಯಾದ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ವ್ಯಕ್ತಿಯನ್ನು ಗೂಂಡಾ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಪೊಲೀಸರಿಗೆ ಆತನ ಖುಲಾಸೆಯ ಮಾಹಿತಿ ಇದ್ದರೂ, ಜಿಲ್ಲಾಧಿಕಾರಿಗಳ ಮುಂದೆ ತಪ್ಪು ಚಿತ್ರಣ ನೀಡುವ ಉದ್ದೇಶದಿಂದಲೇ ಹಳೆಯ ಪ್ರಕರಣವನ್ನು ಪ್ರಸ್ತಾಪಿಸಲಾಗಿದೆ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

ಮೇಲ್ಮನವಿ ವಿಚಾರಣೆ ನಡೆಸಿದ ಕಮಿಷನರ್ ಕೂಡ ಈ ಅಂಶವನ್ನು ಸೂಕ್ತವಾಗಿ ಪರಿಶೀಲಿಸದೆ ಆದೇಶ ಎತ್ತಿಹಿಡಿದಿರುವುದು ತಪ್ಪು ಎಂದು ತಿಳಿಸಿತು. 2020 ರಲ್ಲಿ ದಾಖಲಾದ ಒಂದೇ ಒಂದು ಹಳೆಯ ಪ್ರಕರಣದ ಆಧಾರದ ಮೇಲೆ, ಆರು ವರ್ಷಗಳ ಸುದೀರ್ಘ ಅಂತರದ ನಂತರ 2026 ರಲ್ಲಿ ಒಬ್ಬ ವ್ಯಕ್ತಿಯನ್ನು ಗೂಂಡಾ ಎಂದು ಘೋಷಿಸಿ ಗಡೀಪಾರು ಮಾಡುವುದಕ್ಕೆ ಯಾವುದೇ ತಾರ್ಕಿಕ ಸಂಬಂಧವಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ, ಗೋಂಡಾ ಜಿಲ್ಲಾಧಿಕಾರಿ ಮತ್ತು ದೇವಿಪಟಣ ಮಂಡಲ ಕಮಿಷನರ್ ಹೊರಡಿಸಿದ್ದ ಎರಡೂ ಆದೇಶಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿತು.

ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಜಪ್ತಿ ಪ್ರಕರಣ: ಫೋರೆನ್ಸಿಕ್ ಪರಿಶೀಲನೆಯಲ್ಲಿ 140ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು, ಒಟಿಟಿ ಕಂಟೆಂಟ್ ಪತ್ತೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್‌ನ ಫೋರೆನ್ಸಿಕ್ ವಿಶ್ಲೇಷಣೆ ಪೂರ್ಣಗೊಂಡಿದ್ದು, ಅದರಲ್ಲಿ ಭಾರಿ ಪ್ರಮಾಣದ ಅಶ್ಲೀಲ ವಿಡಿಯೋಗಳು ಮತ್ತು ಒಟಿಟಿ ಕಂಟೆಂಟ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಜೈಲಿನ ಆವರಣದೊಳಗೆ ಮೊಬೈಲ್ ಫೋನ್ ಅಕ್ರಮವಾಗಿ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಮತ್ತು ಸಹ ಆರೋಪಿ ಪ್ರತಾಪ್ ರೈ ವಿರುದ್ಧ ಪ್ರಕ್ರಿಯೆಗಳು ಜಾರಿಯಲ್ಲಿವೆ.

ಆರಂಭದಲ್ಲಿ ಪ್ರಜ್ವಲ್ ರೇವಣ್ಣ ಈ ಫೋನ್ ತನಗೆ ಸೇರಿದ್ದಲ್ಲ ಎಂದು ನಿರಾಕರಿಸಿದ್ದು, ಅದನ್ನು ಹಲವರು ಸರದಿಯ ಆಧಾರದಲ್ಲಿ ಬಳಸುತ್ತಿದ್ದರು ಎಂದು ಹೇಳಿಕೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಫೋರೆನ್ಸಿಕ್ ತನಿಖಾ ವರದಿಯ ಪ್ರಕಾರ, ಜಪ್ತಿ ಮಾಡಲಾದ ಮೊಬೈಲ್‌ನಲ್ಲಿ 140ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ತುಣುಕುಗಳು ಪತ್ತೆಯಾಗಿದ್ದು, ಪೆನ್‌ಡ್ರೈವ್ ಒಂದರಲ್ಲಿ ಹಲವು ಒಟಿಟಿ ಶೋಗಳು ಹಾಗೂ ವೆಬ್ ಸಿರೀಸ್‌ಗಳನ್ನು ಸಂಗ್ರಹಿಸಿಟ್ಟಿರುವುದು ದೃಢಪಟ್ಟಿದೆ.

ಜೈಲಿನ ಒಳಗಿನಿಂದ ಈ ಮೊಬೈಲ್ ಮೂಲಕ ಯಾರನ್ನೆಲ್ಲ ಸಂಪರ್ಕಿಸಲಾಗಿತ್ತು ಎಂಬ ಕರೆ ವಿವರಗಳನ್ನು ಆಧರಿಸಿ, ಆ ಸಂಬಂಧಿತ ಫೋನ್ ನಂಬರ್‌ಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲು ತನಿಖಾಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ಎಸ್‌ಐಆರ್‌ ನೋಟಿಸ್:‌ ಚುನಾವಣಾ ಆಯೋಗದಿಂದ ಬಡವನಿಗೆ ದೊಣ್ಣೆ, ವಿಐಪಿಗಳಿಗೆ ಬೆಣ್ಣೆ ನೀತಿ
ಇತ್ತೀಚೆಗೆ ರಾಜ್ಯದ ತುಂಬಾ ಎಸ್‌ಐಆರ್‌ ನೋಟಿಸಿನದೇ ಸುದ್ದಿ. ಕೆಲವರಿಗೆ ಹೆಸರು ಸರಿಯಿಲ್ಲ ಎನ್ನುವ ಕಾರಣಕ್ಕೆ ನೋಟೀಸ್ ಬಂದಿದ್ದರೆ, ಇನ್ನೂ ಕೆಲವರಿಗೆ ಹುಟ್ಟಿದ ದಿನ ಸರಿಯಿಲ್ಲ ಎನ್ನುವ ಕಾರಣಕ್ಕೆ ನೋಟಿಸ್‌ ಬಂದಿದೆ. ಮತ್ತೆ ಕೆಲಸವರಿಗೆ ಹಲವು ಕಾರಣಗಳಿಗೆ ನೋಟಿಸ್‌ ಬಂದಿದೆ. ಇದೆಲ್ಲದರ ನಡುವೆ ಶಿಫ್ಟೆಡ್‌ ಇತ್ಯಾದಿ ಕಾರಣ ಕೊಟ್ಟು ಮತ್ತಷ್ಟು ಜನರನ್ನು ಮತದಾರರ ಪಟ್ಟಿಯಿಂದಲೇ ಹೊರಹಾಕಲಾಗಿದೆ.

ಈಗಾಗಲೇ ತಾರೀಖು 12 ದಾಟಿದೆ, ಆದರೆ ಸಾಕಷ್ಟು ಜನರಿಗೆ ನೋಟಿಸ್‌ ಇನ್ನೂ ತಲುಪಿಲ್ಲ. ನೋಟಿಸ್‌ ತಲುಪಿರುವ ಜನರು ಈ ದಾಖಲೆಗಳನ್ನು ಎಲ್ಲಿಂದ ತರುವುದಪ್ಪಾ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಮುಂದಿನ ಅಕ್ಟೋಬರ್‌ ತಿಂಗಳ 22 ಎಸ್‌ಐಆರ್‌ ಹಿಯರಿಂಗಿನ ಕೊನೆಯ ದಿನವಾಗಿರಲಿದೆ. ಈಗ ಜನಸಾಮಾನ್ಯರು ತಮ್ಮ ಹೊಟ್ಟೆಪಾಡಿನ ಕೆಲಸಗಳನ್ನು ಬಿಟ್ಟು ಸರ್ಕಾರಿ ಕಚೇರಿಗಳ ಮೆಟ್ಟಿಲು ಹತ್ತಿಳಿಯುವ ಸರ್ಕಸ್ಸಿಗೆ ತಯಾರಾಗಬೇಕಿದೆ.

ಆದರೆ ಇನ್ನೊಂದೆಡೆ ಇದೇ ಆಯೋಗ ಖ್ಯಾತನಾಮರಿಗೆ ನೋಟಿಸ್‌ ಕೊಟ್ಟು, ಮತ್ತೆ ಜೀ ಹುಜೂರ್‌ ತಪ್ಪಾಯಿತು ಎಂದು ಅವರ ಮನೆ ಬಾಗಿಲನ್ನು ತಲುಪಿ, ಅವರ ವೋಟರ್‌ ಲಿಸ್ಟಿನಲ್ಲಿರುವ ತಪ್ಪುಗಳನ್ನು ತಾನೇ ಸ್ವತಃ ಸರಿಪಡಿಸಿಕೊಡಲು ಮುಂದಾಗಿದೆ. ಆದರೆ ಅಶಕ್ತ ಜನರು ಮಾತ್ರ ಚುನಾವಣಾ ಆಯೋಗ ನೀಡಿರುವ ನೋಟಿಸ್‌ ಹಿಡಿದುಕೊಂಡು ಮುಂದೇನು ಮಾಡಬೇಕೆನ್ನುವುದನ್ನು ತಿಳಿಯದೇ ಕಂಗಾಲಾಗಿದೆ.

ಎಲ್ಲ ಮತಾದಾರರೂ ಸಮಾನರು, ಪ್ರಜಾಪ್ರಭುತ್ವದಲ್ಲಿ ಎಲ್ಲರ ವೋಟಿಗೂ ಒಂದೇ ಬೆಲೆಯೆನ್ನುವ ಆಯೋಗ ಎಸ್‌ಐಆರ್‌ ವಿಷಯದಲ್ಲಿ ಮಾತ್ರ ವಿಐಪಿ ವೋಟರ್ಸ್‌ ಎನ್ನುವ ವಿಭಾಗವನ್ನು ಮಾಡಿಕೊಂಡು ಅವರಿಗೆ ಮನೆ ಮನೆ ಸೇವೆ ನೀಡುತ್ತಿದೆ.

ಇತ್ತೀಚೆಗೆ‌ ಭಾರತರತ್ನ ವಿಜೇತ ವಿಜ್ಙಾನಿ ಪ್ರೊ. ಸಿಎನ್‌ಆರ್‌ ರಾವ್ ಅವರ ಹೆಸರು ಮತದಾರರ ಪಟ್ಟಿಯಲ್ಲಿ ತಪ್ಪಾಗಿ ನಮೂದಾದ ಕಾರಣ ಅವರಿಗೆ ನೋಟಿಸ್‌ ಹೋಗಿದೆ ಎಂದು ಸುದ್ದಿಯಾಗಿತ್ತು. ಆದರೆ ಕೂಡಲೇ ಎಚ್ಚೆತ್ತ ಆಯೋಗ ನಾವು ಅವರಿಗೆ ನೋಟಿಸ್‌ ಕೊಟ್ಟಿಲ್ಲ ಎಂದು, ಅವರ ಮನೆಗೆ ಹೋಗಿ ಎಪಿಕ್‌ ಕಾರ್ಡಿನಲ್ಲಿನ ತಪ್ಪನ್ನು ಸರಿಪಡಿಸಿಕೊಟ್ಟಿದ್ದೇವೆ ಎಂದೂ ಪತ್ರಿಕಾ ಹೇಳಿಕೆ ಕೊಟ್ಟಿತ್ತು.

ಇದೀಗ ಹಿರಿಯ ನಟ ಡಾ. ಶಿವರಾಜ್‌ ಕುಮಾರ್‌ ಅವರಿಗೆ ನೋಟಿಸ್‌ ಹೋಗಿರುವ ಬಗ್ಗೆ ಸುದ್ದಿಯಾಗಿದ್ದು, ಕೂಡಲೇ ಅಲರ್ಟ್‌ ಆದ ಆಯೋಗ, “ಆಯೋಗದ ಪರಿಷ್ಕೃತ ವೇಳಾಪಟ್ಟಿಯಂತೆ ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಹಾಗೂ ವಿಚಾರಣೆ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಈ ಪ್ರಕ್ರಿಯೆಯ ವೇಳೆ ನಟ ಶಿವರಾಜ್‌ಕುಮಾರ್ ಅವರು ತಮ್ಮ ಗಣತಿ ನಮೂನೆಯಲ್ಲಿ (Enumeration Form) 2002ರ ಹಿಂದಿನ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ವಿವರಗಳನ್ನು ನಮೂದಿಸದ ಕಾರಣ ತಂತ್ರಾಂಶದಲ್ಲಿ ‘No Mapping’ ಎಂದು ಗುರುತಿಸಲ್ಪಟ್ಟು, ಸ್ವಯಂಚಾಲಿತವಾಗಿ ನೋಟಿಸ್ ಸೃಷ್ಟಿಯಾಗಿತ್ತು” ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಅಲ್ಲದೆ ಸಮಾಜ ಸೇವಕರಾದ ಹಾಜಬ್ಬನವರಿಗೂ ನೋಟಿಸ್‌ ಜಾರಿಯಾಗಿದ್ದು ಸುದ್ದಿಯಾದ ನಂತರ ಅದನ್ನು ವಾಪಸ್‌ ಪಡೆದಿರುವುದಾಗಿ ಆಯೋಗ ಹೇಳಿರುವುದು ಸಹ ಸುದ್ದಿಯಾಗಿದೆ.

ಅಂದರೆ ಖ್ಯಾತನಾಮರು ಮತ್ತು ಧನಿಕರ ನೋಟಿಸ್‌ ಹಿಂಪಡೆಯವುದು ಮತ್ತು ಅವರಿಗೆ ಇದ್ದಲ್ಲೇ ಸೇವೆ ನೀಡಲು ಆಯೋಗಕ್ಕೆ ಸಾಧ್ಯವಾಗುತ್ತದೆ, ಆದರೆ ಬಡಜನರು ಮಾತ್ರ ಇಲ್ಲದ ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳನ್ನು ಅಲೆದು ಪರದಾಡಬೇಕು. ಹಿಯರಿಂಗ್‌ ದಿನ ಸಲ್ಲಿಸಲು ದಾಖಲೆಗಳನ್ನು ಒಟ್ಟು ಮಾಡಲು ಈ ಜನರು ದಿನಗಟ್ಟಲೆ ತಮ್ಮ ಕೂಲಿ ಕೆಲಸ ಬಿಟ್ಟು ತಿರುಗಾಡಬೇಕಿದೆ.

ದೊಡ್ಡವರಿಗೆ ನೋಟಿಸ್‌ ಕೊಟ್ಟು ವಾಪಸ್‌ ಪಡೆಯಬಹುದಾದರೆ ಈ ಬಡಜನರಿಗೆ ಕೊಟ್ಟ ನೋಟಿಸುಗಳನ್ನು ವಾಪಸ್‌ ಪಡೆದು ಅದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಚಿಂತಿಸಲು ಆಯೋಗಕ್ಕೆ ಏಕೆ ಸಾಧ್ಯವಿಲ್ಲ? ಈ ಆನ್ಲೈನ್‌ ಕಾಲದಲ್ಲಿ ದೂರದ ಊರುಗಳಲ್ಲಿ ದುಡಿಯುವ ಜನರು ಏಕೆ ಪದೇ ಪದೇ ಪ್ರಯಾಣದ ಖರ್ಚು ಭರಿಸಿ ಊರಿಗೆ ಅಲೆಯಬೇಕು? ವಿದೇಶದಲ್ಲಿರುವವರಿಗೆ ಅವರ ಮನೆಯವರು ದಾಖಲೆಗಳನ್ನು ಒದಗಿಸಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಮತ್ತೆ ಸೇರಿಸಿಕೊಳ್ಳಲು ಸಾಧ್ಯವಾಗಬಹುದಾದರೆ ದೂರದ ಊರುಗಳಲ್ಲಿರುವ ಜನರಿಗೆ ಏಕೆ ಈ ಸೌಲಭ್ಯವಿಲ್ಲ?
ನೋಟ್‌ ಬ್ಯಾನ್‌ ಸಂದರ್ಭದಲ್ಲೂ ಹೀಗೆ ಬೀದಿಯಲ್ಲಿ ನಿಂತವರು ಜನಸಾಮಾನ್ಯರು ಮಾತ್ರ ಎನ್ನುವುದು ನಮಗೆ ನೆನಪಿರಬೇಕು. ಸರ್ಕಾರಿ ವ್ಯವಸ್ಥೆಗಳು ಹೀಗೆ ಪಕ್ಷಪಾತಿತನದಿಂದ ಕೂಡಿರುವುದು ನಿಜಕ್ಕೂ ದುರಂತ.

ಗಣೇಶ ಹಬ್ಬಕ್ಕೆ KSRTC ಯಿಂದ – 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ
ಬೆಂಗಳೂರು: ಗೌರಿ – ಗಣೇಶ ಹಬ್ಬದ ಹಿನ್ನೆಲೆ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ 2,400 ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದೆ.ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸೆಪ್ಟೆಂಬರ್ 11 ರಿಂದ ಸೆಪ್ಟೆಂಬರ್ 13ರ ವರೆಗೆ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ ಎಂದು ಮಾಹಿತಿ ನೀಡಿದೆ. ಹೆಚ್ಚುವರಿಯಾಗಿ 270 ರಿಸರ್ವೇಶನ್ ಬಸ್‌ಗಳನ್ನ ನಿಯೋಜಿಸಲಾಗಿದ್ದು, ಬೆಂಗಳೂರಿನಲ್ಲಿ 240 ಬಿಎಂಟಿಸಿ ಬಸ್‌ಗಳನ್ನ ಕಾರ್ಯಾಚರಣೆಗೆ ಸಿದ್ಧವಾಗಿರಿಸಲಾಗಿದೆ.

ಮೆಜೆಸ್ಟಿಕ್, ಸ್ಯಾಟಲೈಟ್‌ (ಮೈಸೂರು ರಸ್ತೆ) ಹಾಗೂ ಶಾಂತಿನಗರ ಬಸ್ ನಿಲ್ದಾಣಗಳಿಂದ ಹೆಚ್ಚುವರಿ ಸೇವೆಗಳನ್ನು ನಿರ್ವಹಿಸಲಾಗುತ್ತದೆ. ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಕಲಬುರಗಿ ಸೇರಿದಂತೆ ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಹಲವು ಪ್ರಮುಖ ಮಾರ್ಗಗಳಿಗೆ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ.ಹಬ್ಬ ಮುಗಿದ ಬಳಿಕ ಊರುಗಳಿಂದ ಬೆಂಗಳೂರಿಗೆ ಮರಳುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆ ಸೆಪ್ಟೆಂಬರ್ 14 ರಿಂದ ಬೆಂಗಳೂರಿಗೆ ವಾಪಸ್ ಬರುವ ಪ್ರಯಾಣಿಕರಿಗಾಗಿ ಕೂಡ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್ ಆರ್ ಟಿಸಿ ಮಾಹಿತಿ ನೀಡಿದೆ.