ಮಧ್ಯಪ್ರದೇಶದ ಭೋಪಾಲ್ನ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ನನಗೆ ಚಿತ್ರಹಿಂಸೆ ನೀಡಿದೆ. ಅದು ನನ್ನನ್ನು ಎಟಿಎಸ್ ಕಸ್ಟಡಿಗೆ ಕಳುಹಿತ್ತು. ಈ ಹಿಂಸೆ ನನ್ನನ್ನು ಜೀವನ ಪರ್ಯಂತ ಕಾಡುತ್ತಿದೆ. ಇದರಿಂದಾಗಿ ಮೆದುಳಿನಲ್ಲಿ ಊತ, ದೃಷ್ಟಿ ದೋಷ, ಕಿವುಡುತನ, ಮಾತಿನಲ್ಲಿ ಅಸಮತೋಲನದ ಜೊತೆಗೆ ಸ್ಟೀರಾಯ್ಡ್ ಮತ್ತು ನ್ಯೂರೋ ಡ್ರಗ್ಸ್ ಪರಿಣಾಮದಿಂದಾಗಿ ಇಡೀ ದೇಹ ಊದಿಕೊಂಡಿದೆ ಎಂದು ಪ್ರಜ್ನಾ ಸಿಂಗ್ ಹೇಳಿದ್ದಾರೆ.
ಆದರೆ, ಬದುಕಿದ್ದರೆ ಖಂಡಿತಾ ನ್ಯಾಯಾಲಯದ ವಿಚಾರಣೆಗೆ ಹೋಗುತ್ತೇನೆ ಎಂದು ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಫೋಟೋದಲ್ಲಿ ಅವರ ಮುಖ ಊದಿಕೊಂಡಿದೆ.
ಅವರು 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ವೈದ್ಯಕೀಯ ಚಿಕಿತ್ಸೆ ಹೆಸರಲ್ಲಿ ಕಳೆದ ಕೆಲವು ತಿಂಗಳಿಂದ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ. ಈ ಪ್ರಕರಣದಲ್ಲಿ ಎನ್ಐಎ ಅವರಿಗೆ ಜಾಮೀನು ನೀಡಬಹುದಾದ ವಾರಂಟ್ ಜಾರಿ ಮಾಡಿದೆ. ಈ ಪ್ರಕರಣದ ಅಂತಿಮ ವಾದಗಳು ನಡೆಯುತ್ತಿವೆ ಹೀಗಾಗಿ ಸಾಧ್ವಿ ಪ್ರಜ್ಞಾ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಇತ್ತೀಚೆಗೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹಿಂದೂಯೇತರ ಅಂಗಡಿಯವರು ತಮ್ಮ ವ್ಯಾಪಾರ ಸಂಸ್ಥೆಗಳ ಮೇಲೆ ತಮ್ಮ ಹೆಸರುಗಳನ್ನು ಬರೆಯಬೇಕೆಂದು ಒತ್ತಾಯಿಸಿದ್ದರು. ನಂತರ ಉತ್ತರಪ್ರದೇಶ ಸರ್ಕಾರ ಈ ನಿಟ್ಟಿನಲ್ಲಿ ಆದೇಶವನ್ನೂ ನೀಡಿತ್ತು. ನಂತರ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಈ ಆದೇಶವನ್ನು ತಡೆಹಿಡಿದಿತ್ತು,