ಮತ್ತೊಂದು ರೈಲು ದುರಂತ: ಅಸ್ಸಾಂನಲ್ಲಿ ಹಳಿ ತಪ್ಪಿದ ‘ಲೋಕಮಾನ್ಯ ಟರ್ಮಿನಲ್ ಎಕ್ಸಪ್ರೆಸ್’
P
ಲಿಂಕ್ ನಕಲಿಸಲಾಗಿದೆ ✓

ಅಸ್ಸಾಂ ರಾಜ್ಯದಲ್ಲಿ ಮುಂಬೈಗೆ ತೆರಳುತ್ತಿದ್ದ ಲೋಕಮಾನ್ಯ ಟರ್ಮಿನಲ್ ಎಕ್ಸ್ಪ್ರೆಸ್ ರೈಲಿನ ಎಂಟು ಬೋಗಿಗಳು ಹಳಿ ತಪ್ಪಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ರೈಲಿನ ಪವರ್ ಕಾರ್ ಮತ್ತು ಇಂಜಿನ್ ಸೇರಿದಂತೆ ಒಟ್ಟು 8 ಬೋಗಿಗಳು ಹಳಿ ತಪ್ಪಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಅಗರ್ತಲಾ-ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ಅಸ್ಸಾಂನ ದಿಬಾಲೋಂಗ್ ನಿಲ್ದಾಣದಲ್ಲಿ ಮಧ್ಯಾಹ್ನ 3:55ರ ಸುಮಾರಿಗೆ ಹಳಿ ತಪ್ಪಿದ ಬಗ್ಗೆ ರೈಲ್ವೇ ಇಲಾಖೆ ತಿಳಿಸಿದೆ. ಘಟನೆಯಲ್ಲಿ ಪ್ರಯಾಣಿಕರಲ್ಲಿ ಯಾವುದೇ ಗಂಭೀರ ಸಾವುನೋವುಗಳು ವರದಿಯಾಗಿಲ್ಲ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.
“ಪವರ್ ಕಾರ್ ಮತ್ತು ರೈಲಿನ ಎಂಜಿನ್ ಸೇರಿದಂತೆ ಎಂಟು ಬೋಗಿಗಳು ಹಳಿ ತಪ್ಪಿವೆ. ಆದಾಗ್ಯೂ, ಯಾವುದೇ ಸಾವುನೋವು ಅಥವಾ ದೊಡ್ಡ ಗಾಯಗಳು ವರದಿಯಾಗಿಲ್ಲ ಎಂದು ಈಶಾನ್ಯ ಗಡಿನಾಡಿನ ರೈಲ್ವೆ ವಲಯದ ಸಿಪಿಆರ್ಒ ತಿಳಿಸಿದ್ದಾರೆ.
P
Peepal Media Desk
Peepal Media · ದೇಶ ವಿಭಾಗ
ಹಿಂದಿನ ಸುದ್ದಿ
