ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಇಂದೋರ್‌ನಲ್ಲಿ 1.36 ಲಕ್ಷ ಮತದಾರರ ಹೆಸರು ಡಿಲೀಟ್; ಡಿಜಿಟಲ್ ದಾಖಲೆಗಳೇ ಇಲ್ಲವೆಂಬ RTI ಉತ್ತರ

P

Peepal Media Desk • ದೇಶ

• 2 ನಿಮಿಷದ ಓದು

ಇಂದೋರ್‌ನಲ್ಲಿ 1.36 ಲಕ್ಷ ಮತದಾರರ ಹೆಸರು ಡಿಲೀಟ್; ಡಿಜಿಟಲ್ ದಾಖಲೆಗಳೇ ಇಲ್ಲವೆಂಬ RTI ಉತ್ತರ

ಇಂದೋರ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ 2022ರ ಅವಧಿಯಲ್ಲಿ ಮತದಾರರ ಪಟ್ಟಿಯಿಂದ 1.36 ಲಕ್ಷಕ್ಕೂ ಅಧಿಕ ಹೆಸರುಗಳನ್ನು ತೆಗೆದುಹಾಕಿದ ಪ್ರಕ್ರಿಯೆಗೆ ಸಂಬಂಧಿಸಿದ ಡಿಜಿಟಲ್ ದಾಖಲೆಗಳು ಲಭ್ಯವಿಲ್ಲ ಎಂಬ ಮಾಹಿತಿ ಆರ್‌ಟಿಐ ಮೂಲಕ ಬಹಿರಂಗವಾಗಿದೆ. ಮತದಾರರ ಹೆಸರುಗಳನ್ನು ಪರಿಶೀಲಿಸಲು ಹಾಗೂ ಪರಿಷ್ಕರಿಸಲು ಬಳಸಲಾಗಿದ್ದ ‘ಗರೂಡ’ ಆ್ಯಪ್ ಮತ್ತು ERO Netನಲ್ಲಿ ನಡೆದ ನಮೂದುಗಳಿಗೆ ಸಂಬಂಧಿಸಿದ ಬ್ಯಾಕಪ್, ವೀಡಿಯೋ ಹಾಗೂ ಇತರೆ ಡಿಜಿಟಲ್ ದಾಖಲೆಗಳನ್ನು ಕಚೇರಿಯಲ್ಲಿ ಸಂರಕ್ಷಿಸಿಲ್ಲ ಎಂದು ಸಂಬಂಧಿತ ಚುನಾವಣಾಧಿಕಾರಿಗಳು ಉತ್ತರಿಸಿದ್ದಾರೆ.

ಮಾಜಿ ಕಾರ್ಪೊರೇಟರ್ ದಿಲೀಪ್ ಕೌಶಲ್ ಅವರು 2022ರ ಜನವರಿ 5ರಿಂದ ಅಕ್ಟೋಬರ್ 15ರವರೆಗೆ ಇಂದೋರ್ ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 1,36,552 ಹೆಸರುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದರು. ಗರೂಡ ಆ್ಯಪ್ ಮತ್ತು ERO Netನಲ್ಲಿ ನಡೆದ ನಮೂದುಗಳು, ಹೆಸರುಗಳನ್ನು ತೆಗೆದುಹಾಕಲು ಅಧಿಕಾರಿಗಳು ಕೈಗೊಂಡ ಕ್ರಮ, ಫೀಲ್ಡ್ ವೆರಿಫಿಕೇಶನ್ ಹಾಗೂ ಸಂಬಂಧಿತ ಬ್ಯಾಕಪ್ ದಾಖಲೆಗಳನ್ನೂ ಅವರು ಕೋರಿದ್ದರು.

ಆದರೆ ಇಂದೋರ್ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಂದ ಬಹುತೇಕ ಒಂದೇ ರೀತಿಯ ಉತ್ತರ ಬಂದಿದ್ದು, ಗರೂಡ ಆ್ಯಪ್ ಅಥವಾ ERO Netಗೆ ಸಂಬಂಧಿಸಿದ ಡಿಜಿಟಲ್ ದಾಖಲೆಗಳನ್ನು ಕಚೇರಿಯಲ್ಲಿ ಸಂರಕ್ಷಿಸಿಲ್ಲ ಎಂದು ತಿಳಿಸಲಾಗಿದೆ. ಕೆಲವು ಕಚೇರಿಗಳು ಆ ಅವಧಿಯಲ್ಲಿ ಡಿಜಿಟಲ್ ದಾಖಲೆ ಸಂಗ್ರಹಿಸುವ ಕುರಿತು ಚುನಾವಣಾ ಆಯೋಗದಿಂದ ನಿರ್ದಿಷ್ಟ ಸೂಚನೆ ಇರಲಿಲ್ಲ ಎಂದು ಹೇಳಿವೆ.

ಆರ್‌ಟಿಐನಲ್ಲಿ ಗರೂಡ ಆ್ಯಪ್ ಮತ್ತು ERO Netನ ನಮೂದುಗಳ ಜೊತೆಗೆ ಅಧಿಕಾರಿಗಳ ನಿರ್ಧಾರಗಳ ದಾಖಲೆ, ವೀಡಿಯೋ, ಪೆನ್‌ಡ್ರೈವ್, ಇ-ಮೇಲ್ ಅಥವಾ ಬ್ಯಾಕಪ್ ಮಾಹಿತಿ, ಸಂಬಂಧಿತ ತಂತ್ರಾಂಶ ನಿರ್ವಹಿಸಿದ ಗುತ್ತಿಗೆ ಸಂಸ್ಥೆ, ಕಾರ್ಯಾದೇಶ ಹಾಗೂ ಒಪ್ಪಂದದ ವಿವರಗಳನ್ನೂ ಕೇಳಲಾಗಿತ್ತು. ಆದರೆ ಈ ಮಾಹಿತಿಯ ಬಹುಪಾಲು ತಮ್ಮ ಕಚೇರಿಯ ವ್ಯಾಪ್ತಿಗೆ ಸಂಬಂಧಿಸಿಲ್ಲ ಎಂಬ ಉತ್ತರ ನೀಡಲಾಗಿದೆ ಎಂದು ವರದಿಯಾಗಿದೆ.

ಯಾವ ಕ್ಷೇತ್ರದಲ್ಲಿ ಎಷ್ಟು ಹೆಸರುಗಳು?
ಆರ್‌ಟಿಐ ಮೂಲಕ ಲಭ್ಯವಾದ ಮಾಹಿತಿಯ ಪ್ರಕಾರ, ಇಂದೋರ್-4 ಕ್ಷೇತ್ರದಲ್ಲಿ 28,391, ಇಂದೋರ್-5ರಲ್ಲಿ 28,091 ಹಾಗೂ ರಾವ್ ಕ್ಷೇತ್ರದಲ್ಲಿ 21,346 ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ. ಇಂದೋರ್-2ರಲ್ಲಿ 19,983, ಇಂದೋರ್-1ರಲ್ಲಿ 12,102, ಇಂದೋರ್-3ರಲ್ಲಿ 8,107, ಸಾಂವೇರ್ನಲ್ಲಿ 8,531 ಹಾಗೂ ದೇವಪಾಲ್ಪುರದಲ್ಲಿ 2,214 ಹೆಸರುಗಳು ಸೇರಿವೆ. ಒಟ್ಟು ಸಂಖ್ಯೆ 1,36,552ಕ್ಕೆ ತಲುಪುತ್ತದೆ.

ಈ ಬೆಳವಣಿಗೆಯ ಬೆನ್ನಲ್ಲೇ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಸಂದರ್ಭದಲ್ಲಿ ಕೈಗೊಳ್ಳಲಾದ ಪರಿಶೀಲನಾ ಕ್ರಮಗಳ ದಾಖಲೆಗಳನ್ನು ಎಷ್ಟು ಅವಧಿಗೆ ಮತ್ತು ಯಾವ ರೀತಿಯಲ್ಲಿ ಸಂರಕ್ಷಿಸಲಾಗಿದೆ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

ಹೈಕೋರ್ಟ್ ಮೆಟ್ಟಿಲೇರಿದ್ದ RTI ಪ್ರಕರಣ
ಮಾಹಿತಿ ಪಡೆಯಲು ಸಲ್ಲಿಸಿದ್ದ ಮೇಲ್ಮನವಿ ದೀರ್ಘಕಾಲ ಬಾಕಿ ಉಳಿದ ಹಿನ್ನೆಲೆಯಲ್ಲಿ ದಿಲೀಪ್ ಕೌಶಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಲಭ್ಯವಿರುವ ವರದಿಗಳ ಪ್ರಕಾರ, ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠವು ರಾಜ್ಯ ಮಾಹಿತಿ ಆಯೋಗದಲ್ಲಿ ಬಾಕಿ ಇರುವ ಎರಡನೇ ಮೇಲ್ಮನವಿಯನ್ನು 45 ದಿನಗಳೊಳಗೆ ಕಾನೂನಿನನ್ವಯ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದೆ.

ಇದಕ್ಕೂ ಮುನ್ನ 2025ರ ಡಿಸೆಂಬರ್‌ನಲ್ಲಿ ಕೌಶಲ್ ಅವರು ಮಧ್ಯಪ್ರದೇಶದ 230 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಹೆಸರುಗಳಿಗೆ ಸಂಬಂಧಿಸಿದ ಬೂತ್‌ವಾರು ಮಾಹಿತಿಯನ್ನು RTI ಮೂಲಕ ಕೇಳಿದ್ದರು. ಆ ಮಾಹಿತಿಯನ್ನು ಆಂತರಿಕ ಬಳಕೆಯದ್ದು ಎಂದು ಹೇಳಿ ನಿರಾಕರಿಸಲಾಗಿತ್ತು. ನಂತರ ರಾಜ್ಯ ಮಾಹಿತಿ ಆಯೋಗಕ್ಕೆ ಸಲ್ಲಿಸಿದ ಎರಡನೇ ಮೇಲ್ಮನವಿಯ ವಿಚಾರಣೆ ವಿಳಂಬವಾದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ಗೆ ತೆರಳಿದ್ದರು.

ಇದೇ ವೇಳೆ, 2022ರಲ್ಲಿ ಗರೂಡ ಆ್ಯಪ್ ಬಳಸಿ ಫೋಟೋ ಅಥವಾ ಡೇಟಾ ಸಾಮ್ಯತೆಯಿರುವ ಮತದಾರರ ದಾಖಲೆಗಳ ಫೀಲ್ಡ್ ವೆರಿಫಿಕೇಶನ್ ನಡೆಸುವಂತೆ ಮಧ್ಯಪ್ರದೇಶದ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಸೆಪ್ಟೆಂಬರ್ ಹಾಗೂ ಡಿಸೆಂಬರ್ 2022ರಲ್ಲಿ ಸುತ್ತೋಲೆಗಳು ಹೊರಡಿಸಿದ್ದವು ಎಂಬ ಮಾಹಿತಿಯೂ ವರದಿಯಾಗಿದೆ. ಹೀಗಾಗಿ, ಆ ಪ್ರಕ್ರಿಯೆಯಲ್ಲಿ ಸೃಷ್ಟಿಯಾಗಿದ್ದ ಡಿಜಿಟಲ್ ದಾಖಲೆಗಳ ಸಂರಕ್ಷಣೆ ಕುರಿತು ಮುಂದಿನ ದಿನಗಳಲ್ಲಿ ಸ್ಪಷ್ಟತೆ ದೊರೆಯಬೇಕಿದೆ.

ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ ಎಂಬುದನ್ನು ಈ ದಾಖಲೆಗಳ ಕೊರತೆಯೊಂದರಿಂದಲೇ ನಿರ್ಧರಿಸಲು ಸಾಧ್ಯವಿಲ್ಲ. ಆದರೆ, ಹೆಸರುಗಳ ಅಳಿಸುವಿಕೆಗೆ ಸಂಬಂಧಿಸಿದ ಪರಿಶೀಲನಾ ದಾಖಲೆಗಳು ಮತ್ತು ಡಿಜಿಟಲ್ ಮಾಹಿತಿ ಲಭ್ಯವಿಲ್ಲದಿರುವುದು ಚುನಾವಣಾ ಪ್ರಕ್ರಿಯೆಯ ದಾಖಲೆ ಸಂರಕ್ಷಣೆ ಹಾಗೂ ಪಾರದರ್ಶಕತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

P

Peepal Media Desk

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version