ವಿರೋಧಿ ಒಕ್ಕೂಟದ ಟೀಕೆ: ನಿಮ್ಮ ಪಕ್ಷದ ಟ್ವಿಟರ್ ಹ್ಯಾಂಡಲ್ಲಿನಲ್ಲೂ INDIA ಇದೆಯೆಂದು ಮೋದಿ ಕಾಲೆಳೆದ ನೆಟ್ಟಿಗರು
ಲಿಂಕ್ ನಕಲಿಸಲಾಗಿದೆ ✓

ಇಂದು ಬೆಳಗ್ಗೆ ಮೋದಿ ವಿರೋಧ ಪಕ್ಷಗಳು ತಮ್ಮ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಸಿರುವುದನ್ನು ಟೀಕಿಸುತ್ತಾ ಇಂಡಿಯನ್ ಮುಜಾಹಿದ್ದೀನ್, ಈಸ್ಟ್ ಇಂಡಿಯಾ ಕಂಪನಿಗಳ ಹೆಸರಿನಲ್ಲು ಇಂಡಿಯಾ ಇತ್ತು ನಿಮ್ಮದೂ ಅಂತಹದ್ದೇ ಗುಂಪು ಎಂದು ತೀಕ್ಷ್ಣವಾಗಿ ಟೀಕಿಸಿದ್ದರು.
ಇದಕ್ಕೆ ಬಗೆ ಬಗೆಯಾಗಿ ಪ್ರತಿಕ್ರಿಯಿಸಿರುವ ನೆಟ್ಟಿಗರು ಖೇಲೋ ಇಂಡಿಯಾ, ಡಿಜಿಟಲ್ ಇಂಡಿಯಾ ಹಲವು ಯೋಜನೆಗಳಲ್ಲೂ ಇಂಡಿಯಾ ಹೆಸರಿದೆ ಹಾಗಿದ್ದರೆ ಅದನ್ನೂ ನೀವು ಅದೇ ಯೋಚನೆಯಿಂದ ಇಟ್ಟಿದ್ದೀರ ಎಂದು ಕೇಳಿದ್ದಾರೆ.
ಕೆಲವರು ಇನ್ನೂ ಮುಂದುವರೆದು, “ನಿಮ್ಮ ಪಕ್ಷದ ಟ್ವಿಟರ್ ಹ್ಯಾಂಡಲ್ ಐಡಿ ಕೂಡಾ ಬಿಜೆಪಿ ಫಾರ್ ಇಂಡಿಯಾ ಅಂತಿದೆ” ಎಂದು ಕಿಚಾಯಿಸಿದ್ದಾರೆ.
ವಿಪಕ್ಷಗಳು ತಮ್ಮ ಒಕ್ಕೂಟಕ್ಕೆ I.N.D.I.A. ಎಂದು ಹೆಸರಿಟ್ಟ ದಿನ ಅಸ್ಸಾಮ್ ಮುಖ್ಯಮಂತ್ರಿ ತಮ್ಮ ಟ್ವಿಟರ್ ಬಯೋ ಅನ್ನು ಇಂಡಿಯಾದಿಂದ ಭಾರತಕ್ಕೆ ಬದಲಾಯಿಸಿ ಟ್ರೋಲ್ ಆಗಿದ್ದರು. ನಂತರ ನಾನು ಅದನ್ನು ಎಂದೋ ಬದಲಿಸಬೇಕಿತ್ತು ಇಂದು ಬದಲಾಯಿಸಿದೆ. ಭಾರತ ಗೆಲ್ಲಬೇಕು ಮತ್ತು ಗೆಲ್ಲುತ್ತದೆ ಎಂದು ಸಮಜಾಯಿಷಿ ಕೊಟ್ಟಿದ್ದರು. ಇಂದು ಮತ್ತೆ ನರೇಂದ್ರ ಮೋದಿ ಇದೇ ವಿಷಯಕ್ಕೆ ಟ್ರೋಲ್ ಆಗುತ್ತಿದ್ದಾರೆ.
Peepal Media Desk
Peepal Media · ದೇಶ ವಿಭಾಗ
