ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಜನವರಿಯಲ್ಲಿ 570 ಕೋಟಿಯ ಎಲೆಕ್ಟೋರಲ್ ಬಾಂಡ್‌ಗಳ ಮಾರಾಟಹಣ ಮಾಡ್ತಾ ಇದ್ಯಾ ಬಿಜೆಪಿ?

C

Charan Aivarnad • ದೇಶ

• 2 ನಿಮಿಷದ ಓದು

ಜನವರಿಯಲ್ಲಿ 570 ಕೋಟಿಯ ಎಲೆಕ್ಟೋರಲ್ ಬಾಂಡ್‌ಗಳ ಮಾರಾಟಹಣ ಮಾಡ್ತಾ ಇದ್ಯಾ ಬಿಜೆಪಿ?

2024 ರ ಜನವರಿ 2 ರಿಂದ ಜನವರಿ 11 ರವರೆಗೆ ನಡೆದ ಚುನಾವಣಾ ಬಾಂಡ್ ಮಾರಾಟದ ಇತ್ತೀಚಿನ ಹಂತದಲ್ಲಿ 570 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳು ಮಾರಾಟವಾಗಿವೆ ಎಂಬ ಮಾಹಿತಿ ಸಾಮಾಜಿಕ ಕಾರ್ಯಕರ್ತ ಕಮೋಡೋರ್ ಲೋಕೇಶ್ ಬಾತ್ರಾ ಅವರು ಮಾಹಿತಿ ಹಕ್ಕು (ಆರ್‌ಟಿಐ) ಅಡಿಯಲ್ಲಿ ಸಲ್ಲಿಸಿದ ಪ್ರಶ್ನೆಗೆ ಉತ್ತರವಾಗಿ ಬಹಿರಂಗವಾಗಿದೆ.

ಇದು ಕಳೆದ ವರ್ಷ ನವೆಂಬರ್‌ನಲ್ಲಿ ಈ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಾಲ್ಕು ಅರ್ಜಿಗಳನ್ನು ವಿಚಾರಣೆ ಮಾಡಲು ಪ್ರಾರಂಭಿಸಿದ ನಂತರ ಮಾರಾಟವಾದ ಎರಡನೇ ಬ್ಯಾಚ್‌ನ ಎಲೆಕ್ಟೋರಲ್ ಬಾಂಡ್‌ಗಳಾಗಿದ್ದು, 2018 ರಲ್ಲಿ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ಮಾರಾಟವಾದ 30 ನೇ ಬ್ಯಾಚ್ ಆಗಿದೆ.

ಬಾತ್ರಾ ಅವರ ಪ್ರಶ್ನೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೀಡಿದ ಉತ್ತರದ ಪ್ರಕಾರ, ಬೆಂಗಳೂರು, ಜೈಪುರ, ಚೆನ್ನೈ, ಗಾಂಧಿನಗರ, ಕೋಲ್ಕತ್ತಾ, ಹೈದರಾಬಾದ್, ನವದೆಹಲಿ, ವಿಶಾಖಪಟ್ಟಣಂ, ಮುಂಬೈ ಮತ್ತು ಎಸ್‌ಬಿಐ ಶಾಖೆಗಳಲ್ಲಿ 5,71,80,03,000 ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ.

897 ಬಾಂಡ್‌ಗಳಲ್ಲಿ 1,000, 10,000, 1 ಲಕ್ಷ ಮತ್ತು ರೂ 1 ಕೋಟಿ ರುಪಾಯಿ ಮುಖಬೆಲೆಯಲ್ಲಿ ಮಾರಾಟವಾದ 415, ಅಂದರೆ ಸುಮಾರು ಅರ್ಧದಷ್ಟು ಕೋಲ್ಕತ್ತಾದಲ್ಲಿ ಮಾರಾಟವಾಗಿದೆ.

ಗರಿಷ್ಠ ಸಂಖ್ಯೆಯ ಬಾಂಡ್‌ಗಳಲ್ಲಿ (540) ಒಂದು ಕೋಟಿ ರುಪಾಯಿ ಮುಖಬೆಲೆಯ 161 ಬಾಂಡ್‌ಗಳು ಕೋಲ್ಕತ್ತಾದಲ್ಲಿ ಮಾರಾಟವಾಗಿದೆ. ಇದರ ನಂತರ ಹೈದರಾಬಾದ್ (131) ಮತ್ತು ಚೆನ್ನೈಯಲ್ಲಿ (73) ಮಾರಾಟವಾಗಿವೆ. ಈ ಹಂತದಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಚಲಾವಣೆಯಲ್ಲಿರುವ ಒಟ್ಟು ಹಣದ 94.4% ರಷ್ಟು 1 ಕೋಟಿ ರುಪಾಯಿ ಮುಖಬೆಲೆಯದ್ದು.


ಈ ಅವಧಿಯಲ್ಲಿ ಮಾರಾಟವಾದ ಸುಮಾರು 92% ಬಾಂಡ್‌ಗಳು ಕೇವಲ 10 ಲಕ್ಷ ರೂಪಾಯಿಗಳ 25 ಬಾಂಡ್‌ಗಳೊಂದಿಗೆ ನಗದೀಕರಿಸಲ್ಪಟ್ಟಿವೆ ಮತ್ತು 1 ಲಕ್ಷ ರುಪಾಯಿ ಮುಖಬೆಲೆಯವು ಬಳಕೆಯಾಗದೆ ಉಳಿದಿವೆ. ಬಾಂಡ್ ಮಾರಾಟದ ಮುಂದಿನ ಹಂತವು ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ನಡೆಯುವ ಸಾಧ್ಯತೆಯಿದೆ.

ಚುನಾವಣಾ ಬಾಂಡ್‌ ವಿವಾದ

ಚುನಾವಣಾ ಬಾಂಡ್ ಯೋಜನೆಯನ್ನು ಅಪಾರದರ್ಶಕ ಮತ್ತು ಲೆಕ್ಕಕ್ಕೆ ಸಿಗದ ಹಣವನ್ನು ರಾಜಕೀಯ ಪಕ್ಷಗಳಿಗೆ ರವಾನೆ ಮಾಡಲು ತರಲಾಯಿತು.

ನವೆಂಬರ್ 2, 2023 ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದ ಎರಡು ದಿನಗಳ ನಂತರ ಕೊನೆಯ ಸುತ್ತಿನ ಎಲೆಕ್ಟೋರಲ್ ಬಾಂಡ್ ಮಾರಾಟವನ್ನು ಘೋಷಿಸಲಾಯಿತು.

2017 ರಲ್ಲಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಮೊದಲ ಅರ್ಜಿ ಮತ್ತು 2023 ರಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸುತ್ತಿರುವ ಪ್ರಕರಣದ ನಡುವೆ ಇರುವ ಆರು ವರ್ಷಗಳ ಅಂತರದ ಬಗ್ಗೆ ಲೋಕೇಶ್ ಬಾತ್ರಾ ಗಮನ ಸೆಳೆದಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ದೊಡ್ಡ ದೊಡ್ಡ ಉದ್ಯಮಿಗಳು, ಕಾರ್ಪೊರೇಟ್ ದಾನಿಗಳ ಗೌಪ್ಯತೆಯ ಹಕ್ಕನ್ನು ರಕ್ಷಿಸಲು ಸರ್ಕಾರವು ಮನವಿ ಮಾಡಿತು. ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಚುನಾವಣಾ ಬಾಂಡ್ ಫಂಡ್‌ಗಳ ಮೂಲಗಳನ್ನು ತಿಳಿದುಕೊಳ್ಳಲು ನಾಗರಿಕರಿಗೆ ಯಾವುದೇ ಮೂಲಭೂತ ಹಕ್ಕಿಲ್ಲ ಎಂದು ಹೇಳಿದರು.

ಚುನಾವಣಾ ಬಾಂಡ್ ದಾನಿಗಳ ಮಾಹಿತಿ ಆರ್‌ಟಿಐನಿಂದ ಪಡೆಯಲು ಸಾಧ್ಯವಿಲ್ಲದಂತೆ ಮಾಡಿದ್ದರೂ, ಎಸ್‌ಬಿಐನಂತಹ ಸಾರ್ವಜನಿಕ ಬ್ಯಾಂಕ್‌ನಿಂದ ಡೇಟಾವನ್ನು ಪಡೆಯಲು ಮತ್ತು ದಾನಿಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಬಹುದಾದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಳವಳವಿದೆ.

ಹಣ ಯಾರಿಗೆ ಹೋಗುತ್ತಿದೆ?

ಮಾರ್ಚ್ 2022 ಮತ್ತು ಮಾರ್ಚ್ 2023 ರ ನಡುವೆ ರೂ 2,800 ಕೋಟಿ ರುಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳು ಮಾರಾಟವಾಗಿವೆ. ಇವುಗಳಲ್ಲಿ ಸುಮಾರು 46% ಅಥವಾ ರೂ 1,294 ಕೋಟಿ ರುಪಾಯಿ ಬಿಜೆಪಿಗೆ ಹೋಗಿವೆ ಎಂದು ಪತ್ರಕರ್ತ ಅರವಿಂದ್ ಗುಣಶೇಖರ್ ಎಕ್ಸ್‌ನಲ್ಲಿನ ತಿಳಿಸಿದ್ದಾರೆ.

2018 ರಲ್ಲಿ ಯೋಜನೆಯನ್ನು ಪರಿಚಯಿಸಿದಾಗಿನಿಂದ ಚುನಾವಣಾ ಬಾಂಡ್‌ಗಳ ಲಾಭವನ್ನು ಬಿಜೆಪಿ ಪಡೆಯುತ್ತಲೇ ಬಂದಿದೆ. 2018-2023ರ ನಡುವೆ ಮಾರಾಟವಾದ 12,008 ಕೋಟಿ ಮೌಲ್ಯದ ಬಾಂಡ್‌ಗಳಲ್ಲಿ ಸುಮಾರು 55% ಅಥವಾ 6,564 ಕೋಟಿ ರುಪಾಯಿ ಬಿಜೆಪಿಗೆ ಹೋಗಿದೆ. ಐದು ವರ್ಷಗಳ ಅವಧಿಯಲ್ಲಿ 1,135 ಕೋಟಿ ರುಪಾಯಿಗಳಲ್ಲಿ ಮಾರಾಟವಾದ ಎಲ್ಲಾ ಬಾಂಡ್‌ಗಳಲ್ಲಿ ಕಾಂಗ್ರೆಸ್ ಕೇವಲ 9.5% ಅನ್ನು ಪಡೆದುಕೊಂಡಿದೆ.

C

Charan Aivarnad

Peepal Media · ದೇಶ ವಿಭಾಗ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಜಾನಪದ, ಇತಿಹಾಸ, ರಾಜಕೀಯ, ಸಾಂಸ್ಕೃತಿಕ ಅಧ್ಯಯನ, ಸಬಾಲ್ಟರ್ನ್‌ ಸ್ಟಡೀಸ್, ಭಾಷೆ, ಸಾಂಸ್ಕೃತಿಕ ರಾಜಕಾರಣ ಇವರ‌ ಆಸಕ್ತಿಯ ಕ್ಷೇತ್ರಗಳು.

ಸಂಬಂಧಿತ ಸುದ್ದಿಗಳು

Exit mobile version