ಬಿಜೆಪಿಗೆ ಗುಡ್ ಬೈ ಹೇಳಿದ ಸರಿತಾ ಫೋಗಟ್: ಆಪ್ ಸೇರ್ಪಡೆ
P
ಲಿಂಕ್ ನಕಲಿಸಲಾಗಿದೆ ✓

ಹೊಸದೆಹಲಿ: ರಾಜಧಾನಿಯಲ್ಲಿ ಬಿಜೆಪಿಗೆ ಹೊಡೆತ ಬಿದ್ದಿದೆ. ಎರಡು ವಾರಗಳ ಹಿಂದೆ ಬಿಜೆಪಿ ಸೇರಿದ ಮಾಳವೀಯ ನಗರ ವಾರ್ಡ್ ಕೌನ್ಸಿಲರ್ ಸರಿತಾ ಫೋಗಟ್ ಅವರು ಪಕ್ಷಕ್ಕೆ ಗುಡ್ ಬೈ ಹೇಳಿ ಮತ್ತೆ ಎಎಪಿಗೆ ಸೇರ್ಪಡೆಗೊಂಡರು.
ಸ್ಥಾಯಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸಭೆ ನಡೆಸಿತು. ಇದಕ್ಕೂ ಒಂದು ದಿನ ಮೊದಲು, ಸರಿತಾ ಫೋಗಟ್ ಮತ್ತು ಇತರ ಇಬ್ಬರು ಕೌನ್ಸಿಲರ್ಗಳು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡರು. ಇದರಿಂದ ಪಾಲಿಕೆಯಲ್ಲಿ ಎಎಪಿ ಬಹುಮತ ಕಳೆದುಕೊಂಡಿದೆ.
ಸರಿತಾ ಪೋಗಟ್ ಅವರನ್ನು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪಕ್ಷಕ್ಕೆ ಆಹ್ವಾನಿಸಿದ್ದರು. ಅರವಿಂದ್ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
P
Peepal Media
Peepal Media · ದೇಶ ವಿಭಾಗ
ಹಿಂದಿನ ಸುದ್ದಿ
