ಸದ್ಯದಲ್ಲೇ ಮೋದಿಯವರಿಗೆ ತನ್ನ ಶೂ ಪಾಲಿಷ್ ಮಾಡಲು ಟ್ರಂಪ್ ಅನುಮತಿ ನೀಡಿದ್ದಾರೆನ್ನುವ ಸುದ್ದಿಯೂ ಬರಬಹುದು: ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯ
P
ಲಿಂಕ್ ನಕಲಿಸಲಾಗಿದೆ ✓

ಇತ್ತೀಚೆಗೆ ಸದಾ ತನ್ನ ಮಾತಿನ ಕೋವಿಯನ್ನು ಪ್ರಧಾನಿ ಮೋದಿಯವರ ಕಡೆಗೆ ತಿರುಗಿಸಿಟ್ಟಕೊಳ್ಳುವ ಬಿಜೆಪಿ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿಯವರು ಇಂದು ಮೋದಿಯವರತ್ತ ಇನ್ನೊಂದು ವ್ಯಂಗ್ಯದ ಗುಂಡನ್ನು ಹಾರಿಸಿದ್ದಾರೆ.
ಟ್ರಂಪ್ ಗೆದ್ದ ತಕ್ಷಣ ತೆಗೆದುಕೊಂಡ ಟೆಲಿಫೋನ್ ಕರೆಗಳಲ್ಲಿ ಮೂರನೆಯದು ಮೋದಿಯವರದಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿರುವುದು ಇಂದಿನ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ವರದಿಯಾಗಿದೆ.
ಅದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಸ್ವಾಮಿ “ಹಾಗಿದ್ದ ಮೊದಲ ಎರಡು ಕರೆ ಯಾರದ್ದು? 143 ಕೋಟಿ ಜನರಿರುವ ದೇಶದಲ್ಲಿ ಇದೂ ಒಂದು ಮುಖ್ಯ ಸುದ್ದಿಯೇ?” ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು ಜೈಶಂಕರ್ ಅವರ ಉಡುಪನ್ನು ವ್ಯಂಗ್ಯ ಮಾಡುತ್ತಾ “ಮುಂದೇ ಈ ವೈಟರ್ ಟ್ರಂಪ್ ತನ್ನ ಶೂ ಪಾಲಿಷ್ ಮಾಡುವುದಕ್ಕೆ ಮೋದಿಯವರಿಗೆ ಅನುಮತಿ ನೀಡಿದ್ದಾರೆ” ಎಂದೂ ಹೇಳಿಕೆ ನೀಡಬಹುದು ಎಂದು ವ್ಯಂಗ್ಯವಾಡಿದ್ದಾರೆ.
P
Peepal Media
Peepal Media · ದೇಶ ವಿಭಾಗ
ಹಿಂದಿನ ಸುದ್ದಿ
