ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಬಾಂಗ್ಲಾ ವಿಚಾರ| ಮೋದಿ ಹೇಡಿಯಂತೆ ವರ್ತಿಸುತ್ತಿದ್ದಾರೆ, ಅವರಿಂದ ರಾಜೀನಾಮೆ ಪಡೆಯಿರಿ: ಸುಬ್ರಮಣಿಯನ್‌ ಸ್ವಾಮಿ ಆಗ್ರಹ

P

Peepal Media • ದೇಶ

• 1 ನಿಮಿಷದ ಓದು

ಬಾಂಗ್ಲಾ ವಿಚಾರ| ಮೋದಿ ಹೇಡಿಯಂತೆ ವರ್ತಿಸುತ್ತಿದ್ದಾರೆ, ಅವರಿಂದ ರಾಜೀನಾಮೆ ಪಡೆಯಿರಿ: ಸುಬ್ರಮಣಿಯನ್‌ ಸ್ವಾಮಿ ಆಗ್ರಹ

ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಸದಾ ಹರಿಹಾಯುವ ಸುಬ್ರಮಣಿಯಮ್‌ ಸ್ವಾಮಿ ಇನ್ನೊಮ್ಮೆ ತಮ್ಮ ಮಾತಿನ ಚಾಟಿಯನ್ನು ಬೀಸಿದ್ದಾರೆ.

ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಟ್ವೀಟ್‌ ಮಾಡಿರುವ ಅವರು, ಮೋದಿಯವರಿಂದ ರಾಜೀನಾಮೆ ರಾಜೀನಾಮೆ ಪಡೆಯಬೇಕೆಂದು ಪಕ್ಷವನ್ನು ಆಗ್ರಹಿಸಿದ್ದಾರೆ.

ಈ ಕುರಿತು ತಮ್ಮ ಟ್ವಿಟರ್‌ ಹೇಳಿಕೆಯಲ್ಲಿ “ಲಡಾಖ್‌ ಪ್ರದೇಶದಲ್ಲಿ ಭಾರತದ 4067 ಚದರ KM ಭೂಮಿಯನ್ನು ಚೀನಾ ಆಕ್ರಮಿಸಿದಾಗ ಮೋದಿ ಹೇಡಿಯಂತೆ ಇದ್ದರು. ಮಾಲ್ಡೀವ್ಸ್‌ ನಾಯಕರು ಭಾರತೀಯರು ತಮ್ಮ ದೇಶವನ್ನು ತೊರೆಯುವಂತೆ ಕರೆ ನೀಡಿದಾಗ ಮೋದಿ ಅಲುಗಾಡಲಿಲ್ಲ. ಈಗ ಬಾಂಗ್ಲಾ ಪ್ರಧಾನಿಯನ್ನು ಮುಸ್ಲಿಮರು ಬೆನ್ನಟ್ಟುತ್ತಿರುವಾಗ ನಡುಗುತ್ತಿದ್ದಾರೆ. ಇನ್ನು ನೇಪಾಳದ ವಿಷಯ ಕೇಳಲೇಬೇಡಿ.. ಮೋದಿಯ ಬಳಿ ರಾಜೀನಾಮೆ ಕೇಳಬೇಕಿದೆ” ಎಂದಿದ್ದಾರೆ.

ಬಾಂಗ್ಲಾ ದೇಶದ ರಾಜಕೀಯ ಪಲ್ಲಟಗಳ ಕುರಿತು ಮೋದಿ ಬಾಯಿ ಬಿಡುತ್ತಿಲ್ಲ. ಚೀನಾ, ಪಾಕಿಸ್ತಾನದ ಸರ್ಕಾರಗಳು ಬಾಂಗ್ಲಾ ಸರ್ಕಾರ ರಚನೆಯಲ್ಲಿ ಪಾತ್ರವಹಿಸುತ್ತಿವೆ. ಇಷ್ಟೆಲ್ಲ ನಡೆಯುತ್ತಿದ್ದರೂ ಮೋದಿ ಏನು ನಡೆದಿಲ್ಲವೆನ್ನುವಂತೆ ಮೌನವಾಗಿದ್ದಾರೆ. ಶೇಖ್‌ ಹಸೀನಾ ಅವರ ಕೈ ಬಿಡುವ ಉದ್ದೇಶವನ್ನೇನಾದರೂ ಮೋದಿ ಹೊಂದಿದ್ದಾರೆಯೇ? ಎಂದು ಸುಬ್ರಮಣಿಯನ್‌ ಸ್ವಾಮಿ ಪ್ರಶ್ನಿಸಿದ್ದಾರೆ.

ಬಾಂಗ್ಲಾದೇಶದ ವಿಚಾರದಲ್ಲೂ ʼಯಾರೂ ಬಂದಿಲ್ಲʼ ಎನ್ನುವ ರೀತಿಯ ಧೋರಣೆ ಸರಿಯಲ್ಲ, ಮೋದಿಯಾಗಲೀ, ವಿದೇಶಾಂಗ ಸಚಿವರಾಗಲೀ ಈ ಕುರಿತು ಇದುವರೆಗೆ ಒಂದು ಹೇಳಿಕೆಯನ್ನು ಸಹ ನೀಡಿಲ್ಲ. ಏಷ್ಯಾ ಖಂಡದಲ್ಲಿ ಭಾರತದ ಸ್ಥಾನಮಾನದ ಪ್ರಶ್ನೆಯಿದು ಎನ್ನುವ ಅರ್ಥದಲ್ಲಿ ಸುಬ್ರಮಣಿಯನ್‌ ಸ್ವಾಮಿ ಪ್ರಶ್ನಿಸಿದ್ದಾರೆ.

ಕಳೆದ ಒಂದೆರಡು ವರ್ಷಗಳಿಂದ ಸುಬ್ರಮಣಿಯನ್‌ ಸ್ವಾಮಿ ಸರ್ಕಾರದ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಲೇ ಇದ್ದಾರೆ. ಆದರೆ ಪಕ್ಷ ಮತ್ತು ಸರ್ಕಾರ ಎರಡೂ ಅವರನ್ನು ಪೂರ್ತಿಯಾಗಿ ನಿರ್ಲಕ್ಷಿಸಿವೆ.

P

Peepal Media

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version