ಪ್ಯಾರಿಸ್ ಒಲಿಂಪಿಕ್ಸ್ ನ ಮಹಿಳೆಯರ ಕುಸ್ತಿಯ 50 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಕನಸು ಭಗ್ನಗೊಂಡಿದೆ. ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ.
ಈ ನಿರ್ಧಾರದ ವಿರುದ್ಧ ಭಾರತ ಪ್ರತಿಭಟನೆ ನಡೆಸಿದೆ. ಮಾಧ್ಯಮ ವರದಿಗಳ ಪ್ರಕಾರ, ಅಧಿಕ ತೂಕದ ಕಾರಣ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ.
ವಿನೇಶ್ ಫೋಗಟ್ 50 ಕೆಜಿ ತೂಕದ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕಕ್ಕಾಗಿ ಇಂದು ಸಂಜೆ ಸೆಣಸುವವರಿದ್ದರು. ಆದರೆ ಅವರ ತೂಕದಲ್ಲಿ 50 ಕೇಜಿಗಿಂತಲೂ 100 ಗ್ರಾಂ ಹೆಚ್ಚಳ ಕಂಡುಬಂದ ಕಾರಣ ಅವರನ್ನು ಅನರ್ಹಗೊಳಿಸಲಾಗಿದೆ. ಆದರೆ ಭಾರತ ಇದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದೆ.
ಭಾರತದ ಪರ ಒಂದು ಚಿನ್ನ ಅಥವಾ ಬೆಳ್ಳಿಯ ಕನಸು ಛಿದ್ರವಾಗುವುದರ ಜೊತೆಗೆ ವಿನೇಶ್ ಫೋಗಟ್ ಅವರ ಇದುವರೆಗಿನ ಈ ಕೂಟದಲ್ಲಿ ಅಷ್ಟೂ ಶ್ರಮ ವ್ಯರ್ಥವಾಗಿದೆ.