ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಮೇ.12 ರಂದು ಬುದ್ಧ ಪೂರ್ಣಿಮಾ ಮೆರವಣಿಗೆ – ಕಾರ್ಯಕ್ರಮ: ಹೆಚ್.ಟಿ. ಬಸವರಾಜು

ರ

ರಮೇಶ್‌ ಹಾಸನ್‌ • ರಾಜ್ಯ

• 2 ನಿಮಿಷದ ಓದು

ಮೇ.12 ರಂದು ಬುದ್ಧ ಪೂರ್ಣಿಮಾ ಮೆರವಣಿಗೆ – ಕಾರ್ಯಕ್ರಮ: ಹೆಚ್.ಟಿ. ಬಸವರಾಜು

ಹಾಸನ : 2569ನೇ ಪವಿತ್ರ ವೈಶಾಖ ಬುದ್ಧ ಪೂರ್ಣಿಮಾವನ್ನು ಮೇ.12 ರಂದು ಸೋಮವಾರ ಪ್ರತಿಮೆ, ಬಾವಿಚಿತ್ರದೊಂದಿಗೆ ರಥದ ಮೆರವಣಿಗೆ ನಂತರ ಹಾಸನಾಂಬ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ಹೆಚ್.ಟಿ. ಬಸವರಾಜು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ರಿ.ಪೂ. 623ನೇ ವೈಶಾಖ ಹುಣ್ಣಿಮೆಯ ದಿನದಂದು ಸಿದ್ದಾರ್ಥ ಗೌತಮರ ಜನನವಾಗುತ್ತದೆ. ಯುವಕ ಸಿದ್ದಾರ್ಥ ಗೌತಮರು ಸಮಾಜದಲ್ಲಿನ ತಾರತಮ್ಯ, ಅಸಮಾನತೆ, ಮೇಲುಕೀಳು, ಮೌಡ್ಯಗಳ ನಿವಾರಣೆಗಾಗಿ 29ನೇ ವಯಸ್ಸಿನಲ್ಲಿ ತನ್ನ ಸಂಸಾರಿಕ ಜೀವನ, ಸಂಪತ್ತು, ರಾಜ್ಯಾಧಿಕಾರ ತೊರೆದು ಸುಮಾರು 6 ವರ್ಷಗಳ ಸತತ ಧ್ಯಾನದ ಮೂಲಕ ತನ್ನ 35ನೇ ವಯಸ್ಸಿನಲ್ಲಿ ಪ್ರಾಕೃತಿಕ ಜ್ಞಾನೋದಯ ಪಡೆಯುತ್ತಾರೆ. ಮನುಷ್ಯನ ದುಃಖ ವಿನಾಶಕ್ಕೆ ಪಂಚಶೀಲ, ಅಷ್ಟಾಂಗ ಮಾರ್ಗಗಳನ್ನು ಬೋಧಿಸಿ ಸಂತೋಷಮಯ ಜೀವನ ನಡೆಸಲು ದಾರಿ ತೋರುತ್ತಾರೆ. ಜಗತ್ತಿನಲ್ಲಿ ಮನುಷ್ಯನ ದುಃಖಕ್ಕೆ ಮದ್ದನ್ನು ಕಂಡು ಹಿಡಿದ ಮೊದಲ ವೈದ್ಯರಾಗುತ್ತಾರೆ ಎಂದರು.

ನಮಗೆ ಯುದ್ಧ ಬೇಡ ಬುದ್ಧ ಬೇಕು ಎನ್ನುವಷ್ಟರ ಮಟ್ಟಿಗೆ ಬುದ್ಧರ ಪ್ರೀತಿ, ಕರುಣೆ, ಮೈತ್ರಿ, ಸಮಾನತೆ, ಅನುಕಂಪ ಜಗತ್ತಿನಲ್ಲೆಡೆ ಪ್ರಕಸರ ಬೆಳಕಾಗಿ ಬೆಳಗುತ್ತಿದೆ. ಬುದ್ಧದ ಜ್ಞಾನೋದಯ ದಿನ ವೈಖಾಖ ಹುಣ್ಣಿಮೆಯಾಗಿತ್ತು. ಬುದ್ಧರು ತನ್ನ 80ನೇ ವಯಸ್ಸಿನಲ್ಲಿ ಮಹಾಪರಿ ನಿಬ್ಬಾಣ ಹೊಂದುತ್ತಾರೆ. ಅಂದು ಸಹ ವೈಶಾಖ ಹುಣ್ಣಿಮೆಯಾಗಿತ್ತು. ಭಗವಾನ್ ಬುದ್ಧರ ಜೀವನದಲ್ಲಿ ಅವರ ಹುಟ್ಟು, ಜ್ಞಾನೋದಯ ಮತ್ತು ಮಹಾಪರಿನಿಬ್ಬಾಣ ಈ ಮೂರು ಘಟನೆಗಳು ವೈಶಾಖ ಹುಣ್ಣಿಮೆಯಂದೇ ನಡೆದಿರುವುದರಿಂದ ಬುದ್ಧ ಪೂರ್ಣಿಮೆ''ಯು ಪ್ರಪಂಚದ ಎಲ್ಲಾ ಬೌದ್ಧರಿಗೂ ಅತ್ಯಂತ ಪವಿತ್ರ ದಿನವಾಗಿರುತ್ತದೆ.

ಪ್ರಪಂಚದ ಸುಮಾರು 30 ರಾಷ್ಟçಗಳಲ್ಲಿ ರಾಷ್ಟಿçಯ ಹಬ್ಬವಾಗಿ ಆಚರಣೆಯಾಗಿ ಮಾಡಲಾಗುತ್ತಿದೆ ಎಂದರು. 1935ನೇ ಇಸವಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರವರು "ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ'' ಎಂದು ಶಪಥ ಮಾಡಿದ ನಂತರ ಸುಮಾರು 22 ವರ್ಷಗಳ ಕಾಲ ಎಲ್ಲಾ ಧರ್ಮಗಳನ್ನು ಸತತವಾಗಿ ಅಧ್ಯಯನ ಮಾಡಿ 1956 ಅಕ್ಟೋಬರ್ 14ರಂದು ಮಹಾರಾಷ್ಟçದ ನಾಗಪುರದಲ್ಲಿ ಸುಮಾರು ಎಂಟುವರೆ ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮಕ್ಕೆ ಮರಳುತ್ತಾರೆ. ಕಾರಣ, ಬೌದ್ಧ ಧಮ್ಮ, ಭಾರತೀಯ ಧಮ್ಮ, ಬೌದ್ಧಧಮ್ಮದಲ್ಲಿ ಸಮಾನತೆ, ಸೋದರತೆ, ಸಹಬಾಳ್ವೆ, ಪ್ರೀತಿ, ಕರುಣೆ, ಮೈತ್ರಿ ಹಾಗೂ ಮಾನವೀಯತೆಗೆ ಪ್ರಾಮುಖ್ಯತೆ ಇರುವುದರಿಂದ ನನ್ನ ಜನರಿಗೆ ಇದು ಸೂಕ್ತವಾಗಿದೆ ಎಂದು ತಿಳಿದು ಬೌದ್ಧಧಮ್ಮ ಸ್ವೀಕರಿಸುತ್ತಾರೆ.

ಸಾಮಾನ್ಯ ಜನರ ತಿಳುವಳಿಕೆಗಾಗಿ "ಬುದ್ಧ ಮತ್ತು ಅವರ ಧಮ್ಮ ಕೃತಿ ರಚಿಸಿ ನೀಡಿರುತ್ತಾರೆ. ಬೌದ್ಧ ಧಮ್ಮದ ಬೆಳವಣಿಗೆಗಾಗಿಭಾರತೀಯ ಬೌದ್ಧ ಮಹಾಸಭಾ ಸಂಸ್ಥೆಯನ್ನು 1954 ಮೇ 4ರಂದು ಸ್ಥಾಪಿಸಿ, ಸ್ವತಃ ತಾವೇ ಅಧ್ಯಕ್ಷರಾಗುತ್ತಾರೆ. ಅವರ ಕೊನೆಯ ಆಸೆ. ಬೌದ್ಧ ಧಮ್ಮದ ಉಳಿವಿಗಾಗಿ ನನ್ನ ಜನ ಯಾವ ರೀತಿಯ ತ್ಯಾಗವನ್ನಾದರೂ ಮಾಡುತ್ತಾರೆಂದು ನಂಬಿಕೆ ಇಡುತ್ತಾರೆ. ಬನ್ನಿ, ಬಾಬಾಸಾಹೇಬರ ಅನುಯಾಯಿಗಳು, ಅಭಿಮಾನಿಗಳು, ಹಿತೈಷಿಗಳಾದ ನಾವು ಅವರ ನಂಬಿಕೆಯನ್ನು ಉಳಿಸಿಕೊಳ್ಳೋಣ. ಬಾಬಾಸಾಹೇಬರು ತೋರಿದ ಧಮ್ಮದ ಹಾದಿಯಲ್ಲಿ ನಡೆಯುವ ಮೂಲಕ ಅವರ ಆಶಯವನ್ನು ಈಡೇರಿಸೋಣ ಎಂದು ಕರೆ ನೀಡಿದರು. ಬುದ್ಧ ಪೂರ್ಣಿಮೆ, ನಮ್ಮ ಮನೆಯ ಉತ್ಸವ ಅದರಲ್ಲಿ ಭಾಗವಹಿಸುವ ಮೂಲಕ ಬಾಬಾಸಾಹೇಬರ ಋಣವನ್ನು ಸ್ವಲ್ಪವಾದರೂ ತೀರಿಸಲು ಪ್ರಯತ್ನಿಸೋಣ. ದಯವಿಟ್ಟು ಬನ್ನಿ, ಭಾಗವಹಿಸಿ, ಯಶಸ್ವಿಗೊಳಿಸಿ ಎಂದು ಪತ್ರಿಕಾ ಗೋಷ್ಠಿಯ ಮೂಲಕ ಒಕ್ಕೂಟವು ಮನವಿ ಮಾಡಿಕೊಳ್ಳುತ್ತದೆ. ಮೆರವಣಿಗೆಯು ದಿನಾಂಕ:12.05.2025ರ ಸೋಮವಾರದಂದು ಜಿಲ್ಲಾಧಿಕಾರಿಗಳ ಕಛೇರಿಯಿಂದ ಕಲಾಭವನದವರೆಗೆ ಬುದ್ದರ ರಥದೊಂದಿಗೆ ಬೌದ್ಧ ಧರ್ಮಿಯರು ಮೆರವಣಿಗೆಯಲ್ಲಿ ಭಾಗವಹಿಸಲು ಒಕ್ಕೂಟವು ಕೋರುತ್ತದೆ. ನಂತರ ಕಲಾಭವದಲ್ಲಿ ಜಿಲ್ಲಾಡಳಿತ, ಹಾಸನ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಹಾಸನ ಇವರ ಸಹಯೋಗದಲ್ಲಿ ಬುದ್ಧ ಜಯಂತಿಯ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಕ್ಕೂಟವು ಕೋರುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮುಯತ್ರೆಯ ಬುದ್ಧ ವಿಹಾರ ಅಧ್ಯಕ್ಷ ಟಿ. ಅನಂತಸ್ವಾಮಿ, ಬೌದ್ಧ ಮಹಾಸಭಾ ಅಧ್ಯಕ್ಷ ಮಲ್ಲಯ್ಯ ಬೌದ್, ಭಾರತೀಯ ಬೌದ್ಧಮಹಾಸಭಾ ಕಾರ್ಯದರ್ಶಿ ಕುಮಾರ್ ಗೌರವ್, ಕೆ.ಸಿ. ನಾಗರಾಜು ಇತರರು ಉಪಸ್ಥಿತರಿದ್ದರು.

ವಿಷಯಗಳು: #news #peepalmedia
ರ

ರಮೇಶ್‌ ಹಾಸನ್‌

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version