ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಬೂತಾರಾಧನೆ ಮೂಲನಿವಾಸಿಗಳದ್ದೇ : ನಟ ಚೇತನ್‌ ಮಾತಿಗೆ ಸಮರ್ಥನೆ ನೀಡಿದ ಸಂತೋಷ್‌ ಗುರೂಜಿ ಹೇಳಿಕೆ

P

Peepal Media • ರಾಜ್ಯ

• 1 ನಿಮಿಷದ ಓದು

ಬೂತಾರಾಧನೆ ಮೂಲನಿವಾಸಿಗಳದ್ದೇ : ನಟ ಚೇತನ್‌ ಮಾತಿಗೆ ಸಮರ್ಥನೆ ನೀಡಿದ ಸಂತೋಷ್‌ ಗುರೂಜಿ ಹೇಳಿಕೆ

ಬೆಂಗಳೂರು: ಕಾಂತಾರಾ ಸಿನಿಮಾದಲ್ಲಿ ತೋರಿಸಲಾಗಿರುವ ಬೂತಾರಾದನೆ ಹತ್ತು ಹಲವು ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಖ್ಯಾತ ಚಿತ್ರನಿಟ ಚೇತನ್‌ ಅಹಿಂಸಾ ಅವರು ʼಭೂತಾರಾಧನೆ ಹಿಂದೂ ಸಂಸ್ಕೃತಿಯ ಭಾಗವಲ್ಲ ಅದು ಮೂಲನಿವಾಸಿ ಸಮುದಾಯಗಳ ಸಂಸ್ಕೃತಿʼ ಎಂದು ಟ್ವೀಟ್‌ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಚೇತನ್‌ ಅವರ ಹೇಳಿಕೆ ಬಲಪಂಥೀಯರಿಂದ ಸಾಕಷ್ಟು ಟ್ರೋಲ್‌ಗೆ ಒಳಗಾಗುತ್ತಿರುವಾಗಲೇ ಬಾರ್ಕೂರು ಸಂಸ್ಥಾನದಲ್ಲಿ ಆಶ್ರಮ ಹೊಂದಿರುವ ಸಂತೋಷ್‌ ಗುರೂಜಿ ಚೇತನ್‌ ಮಾತುಗಳಿಗೆ ಪೂರಕವೆಂಬಂತೆ ಹೇಳಿಕೆ ನೀಡಿದ್ದಾರೆ. ಅವರು ತುಳುನಾಡಿನ ಬೂತಾರಾಧನೆ ಕುರಿತು ಮಾತನಾಡುತ್ತಾ, ಬೂತಾರಾಧನೆ ಕರಾವಳಿಯ ಮೂಲನಿವಾಸಿ ಬುಡಕಟ್ಟುಗಳದ್ದೇ ಹೊರತು ಗುಡಿಗಳಲ್ಲಿ ದೇವರುಗಳನ್ನು ಪೂಜೆ ಮಾಡುವವರದ್ದಲ್ಲ ಎಂದಿದ್ದಾರೆ. ʼಕರಾವಳಿಯಲ್ಲಿ ಮೂಲನಿವಾಸಿಗಳು ಬುಡಕಟ್ಟು ಜನಾಂಗ ಮತ್ತು ಆದಿಜನಾಂಗದವರು ಅವರನ್ನು ನಾವು ಶೂದ್ರರು ಎಂದು ದೇವರಿಂದ ದೂರ ಮಾಡಿದಾಗ  ಅವರು ಈ ದೈವಶಕ್ತಿಯ ಅನುಭವದಿಂದ ಆರಾಧನೆ ಮಾಡಲು ಶುರುಮಾಡಿದ್ದರು. ಬೂತಾರಾಧನೆ ಅವರ ಸಂಪತ್ತಾಗಿತ್ತು. ಅದು ಅವರ ಆರಾಧನಾ ಪದ್ದತಿಯಾಗಿತ್ತು. ಯಾಕೆಂದರೆ ದೇವರನ್ನುಮುಟ್ಲಿಕ್ಕಿಲ್ಲ, ದೇವರ ಪ್ರಸಾದವನ್ನು ಮುಟ್ಲಿಕ್ಕಿಲ್ಲ, ತೀರ್ಥವನ್ನೂ ಸಹ ಸರಿಯಾಗಿ ಮುಟ್ಲಿಕ್ಕಿಲ್ಲ ಎಂದಾಗ ನಮಗೆ ಇವೇನೂ ಬೇಕಾಗಿಲ್ಲ ಬೂತಗಳನ್ನೇ ನಾವು ಪೂಜೆ ಮಾಡ್ತೀವಿ ಎಂದು ಹೇಳಿ ಬೂತಾರಾದನೆ ಮಾಡಿದ್ರು. ಈ ಆದಿ ಸಮುದಾಯ ಏನಿತ್ತು ಇವರೇ ತನಗೆ ಇಷ್ಟವಾದ ರೀತಿಯಲ್ಲಿ ಆರಾಧನೆ ಮಾಡಿಕೊಂಡಿದ್ದರು. ಅಡಿಕೆ ಹಾಳೆಯಲ್ಲಿ ಹಂದಿ ಮುಖವಾಡಿ ಹಾಕಿಕೊಂಡು ಆರಾಧನೆ ಮಾಡ್ತಾ ಇದ್ರು. ಈ ಬುಡಕಟ್ಟು ಜನಾಂಗದವರು ಮಾಡುತ್ತಿದ್ದ ದೈವಾರಾಧನೆಗೆ ರಾಜಾಶ್ರಯ ನೀಡಿದವರು ಅಲುಪ ಅರಸರು. ಆಮೇಲೆ ಬೂತಗಳಿಗೆ ರಾಜನ್‌ ದೈವಗಳ ಸ್ಥಾನಮಾನ ಅವರು ಕೊಟ್ಟರುʼ ”  ಎಂದು ಸಂತೋಷ್‌ ಗುರೂಜಿ ತಮ್ಮ ಅಬಿಪ್ರಾಯ ಹೇಳಿದ್ದಾರೆ. ಈಗ ಬಲಪಂಥೀಯ್‌ ಟ್ರೋಲ್‌ಗಳು ಏನು ಹೇಳುತ್ತಾರೆ ಎಂಬ ಪ್ರಶ್ನೆ ಜನಸಾಮಾನ್ಯರದ್ದಾಗಿದೆ.

P

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version