Home LGBTQ+ LGBTQ+ ಗಳನ್ನು ಮಾನಸಿಕ ರೋಗಿಗಳೆಂದು ಅವಮಾನಿಸಲು ಮೆಟಾ ಅನುಮತಿ!

LGBTQ+ ಗಳನ್ನು ಮಾನಸಿಕ ರೋಗಿಗಳೆಂದು ಅವಮಾನಿಸಲು ಮೆಟಾ ಅನುಮತಿ!

0

ಬೆಂಗಳೂರು: ಮೆಟಾದ ಹೊಸ ಮಾರ್ಗಸೂಚಿಯಲ್ಲಿ ( Guideline) ಬಳಕೆದಾರರಿಗೆ ಅವರ ಲೈಂಗಿಕತೆ ಅಥವಾ ಲಿಂಗ ಗುರುತನ್ನು ಆಧರಿಸಿ ಮಾನಸಿಕ ಅಸ್ವಸ್ಥರೆಂದು ಕರೆಯಲು ಅನುವು ಮಾಡಿಕೊಡುತ್ತದೆ. 

ಮಂಗಳವಾರದಂದು ನವೀಕರಿಸಲಾದ ಮಾರ್ಗಸೂಚಿಗಳು, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಥ್ರೆಡ್‌ಗಳ ಬಳಕೆದಾರರಿಗೆ ಅವರ ಮಾನಸಿಕ ಆರೋಗ್ಯದ ಆಧಾರದ ಮೇಲೆ ಜನರನ್ನು ಅವಮಾನಿಸಲು ಇನ್ನೂ ಅನುಮತಿಸುವುದಿಲ್ಲ. “ಆದರೆ ಲಿಂಗ ಮತ್ತು ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಒಬ್ಬರನ್ನು ಮಾನಸಿಕ ರೋಗಿ ಅಥವಾ ಅಸಹಜ/ಅನೈಸರ್ಗಿಕ ಎಂದು ಕರೆಯುವುದು, ಸಮಲೈಂಗಿಕತೆ ಮತ್ತು ಟ್ರಾನ್ಸ್‌ಜೆಂಡರಿಸಂ ಬಗ್ಗೆ ರಾಜಕೀಯ ಮತ್ತು ಧಾರ್ಮಿಕ ಚರ್ಚೆ ಮಾಡಲು, ಅವರನ್ನು ʼವಿಲಕ್ಷಣ- weird’ ಎಂದು ಕರೆಯಲು ಅನುಮತಿ ನೀಡುತ್ತೇವೆ,” ಎಂದು ಮೆಟಾ ಹೇಳಿದೆ.

ತನ್ನ ಪರಿಷ್ಕೃತ ಮಾರ್ಗಸೂಚಿಯಲ್ಲಿ ಹೀಗೆ ಹೇಳಿದೆ:

Mental characteristics, including, but not limited to, allegations of stupidity, intellectual capacity and mental illness, and unsupported comparisons between PC groups on the basis of inherent intellectual capacity. We do allow allegations of mental illness or abnormality when based on gender or sexual orientation, given political and religious discourse about transgenderism and homosexuality and common non-serious usage of words such as “weird”.

ದ್ವೇಷದ ಭಾಷಣದ ಸುತ್ತಲಿನ ಹೊಸ ಮಾರ್ಗಸೂಚಿಗಳಲ್ಲಿ ಮೆಟಾ ಪ್ರಮುಖ ಬದಲಾವಣೆಗಳನ್ನು ತಂದಿದೆ. ಮಂಗಳವಾರ, CEO ಮಾರ್ಕ್ ಜುಕರ್‌ಬರ್ಗ್ ಅವರು ಮೆಟಾದಲ್ಲಿರುವ ಸತ್ಯ-ಪರಿಶೀಲನಾ ವಿಭಾಗವನ್ನು ತೆಗೆದು ಹಾಕುವುದಾಗಿ ಹೇಳಿದ್ದರು. ಈ ವ್ಯವಸ್ಥೆಯನ್ನು ಕೆಲವು ವಿಶ್ವಾಸಾರ್ಹ ಸಂಸ್ಥೆಗಳ ಸಹಯೋಗದಿಂದ ನಡೆಸಲಾಗುತ್ತಿತ್ತು. X ನ ಸಮುದಾಯ ಮಾರ್ಗಸೂಚಿಗಳಂತೆ ಥರ್ಡ್‌-ಪಾರ್ಟಿ-ಫ್ಯಾಕ್ಟ್‌ ಚೆಕಿಂಗ್‌ ಸೇವೆಯನ್ನು ಮೆಟಾ ತೆಗೆದು ಹಾಕಿದೆ.

X ತನ್ನ ಬಳಕೆದಾರರಿಗೆ ಇತರರ ವಿಚಾರದ ಮೇಲೆ ಸೂಚಿಸಲಾದ “ಟಿಪ್ಪಣಿಗಳನ್ನು” ಪೋಸ್ಟ್‌ ಮಾಡಲು ಅನುಮತಿ ನೀಡುತ್ತದೆ. ಇದರಲ್ಲಿ. ಈ ಟಿಪ್ಪಣಿಯನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಲು ಅನುಮತಿ ನೀಡಬೇಕೆ, ಅಥವಾ ಬೇಡವೇ ಎಂಬ ಬಗ್ಗೆ ವೋಟಿಂಗ್‌ ಮಾಡುವ ವ್ಯವಸ್ಥೆ ಇದೆ.

ಇದರಿಂದಾಗಿ, ಯಾವುದೇ ಬಳಕೆದಾರನಿಗೆ ಸುಲಭವಾಗಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಲು ಸಾಧ್ಯವಾಗುತ್ತದೆ. ಈ ಸುಳ್ಳನ್ನು ಬೆಂಬಲಿಸುವವರು ಈ ಸುದ್ದಿಯನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಲು ಪ್ರೋತ್ಸಾಹ ನೀಡುತ್ತಾರೆ.

ಇದರ ಬೆನ್ನಲ್ಲೇ, ಮೆಟಾ ತನ್ನ ಹೊಸ ಮಾರ್ಗಸೂಚಿಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಮಾನಸಿಕ ರೋಗಿಗಳು ಎಂದು ಕರೆಯಲು ಅನುಮತಿ ನೀಡಿರುವುದು ಜಾಗತಿಕ ವಿರೋಧಕ್ಕೆ ಕಾರಣವಾಗಿದೆ. ಇದರಿಂದ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಪ್ರಪಂಚದಾದ್ಯಂತ ನಡೆಯುತ್ತಿರುವ ಹೋರಾಟಗಳನ್ನು ಹತ್ತಿಕ್ಕಲು ಯತ್ನಿಸಿದಂತಾಗುತ್ತದೆ.

ಟ್ರಾನ್ಸ್ಜೆಂಡರ್ ಹಕ್ಕುಗಳು, ವಲಸೆ ಅಥವಾ ಸಮಲೈಂಗಿಕತೆಯ ಬಗ್ಗೆ ರಾಜಕೀಯ ಅಥವಾ ಧಾರ್ಮಿಕ ವಿಚಾರಗಳನ್ನು ಚರ್ಚಿಸುವ ಸಂದರ್ಭದಲ್ಲಿ ಅವರನ್ನು ಅಂಚಿಗೆ ತಳ್ಳುತ್ತಾರೆ ಅಥವಾ ಅವಮಾನಕರ ಭಾಷೆಯನ್ನು ಬಳಸುತ್ತಾರೆ. ಕೆಲವೊಮ್ಮೆ ಜನರು ಪ್ರೇಮ ಸಂಬಂಧ ಮುರಿದಾಗ (ಬ್ರೇಕಪ್) ಲಿಂಗತ್ವವನ್ನು ಶಪಿಸುತ್ತಾರೆ. ಈ ರೀತಿಯ ಭಾಷಣಕ್ಕೆ ಅವಕಾಶ ನೀಡುವಂತೆ ನಮ್ಮ ನೀತಿಗಳನ್ನು ವಿನ್ಯಾಸಗೊಳಿಸಲಾಗಿದೆ,” ಎಂದು ಮೆಟಾ ಹೇಳಿದೆ.

They call for exclusion or use insulting language in the context of discussing political or religious topics, such as when discussing transgender rights, immigration or homosexuality. Finally, sometimes people curse at a gender in the context of a romantic break-up. Our policies are designed to allow room for these types of speech.

ಇದರಿಂದ, ಜಾಗತಿಕವಾಗಿ ವಲಸಿಗರ, ಲೈಂಗಿಕ ಅಲ್ಪಸಂಖ್ಯಾತರನ್ನು ಅವಮಾನಿಸುವ, ಅವರ ವಿರುದ್ಧ ದ್ವೇಷ ಹರಡುವವರಿಗೆ ತಮ್ಮ ಕೃತ್ಯವನ್ನು ಎಸಗಲು ಗ್ರೀನ್‌ ಸಿಗ್ನಲ್‌ ಸಿಕ್ಕಿದಂತಾಗಿದೆ.

ಟೆಕ್ ಕಂಪನಿಗಳು ಮತ್ತು ಇತರ ಕಂಪನಿಗಳ ಸಿಇಒಗಳು ಮತ್ತು ಉದ್ಯಮಿಗಳು ಅಮೇರಿಕಾದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅನ್ನು ಓಲೈಸಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸುತ್ತಿವೆ. ಇದರಲ್ಲಿ ಅಮೆಜಾನ್, ಆಪಲ್ ಸಿಇಒ ಟಿಮ್ ಕುಕ್ ಮತ್ತು ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್‌ಮ್ಯಾನ್ ಜೊತೆಗೆ ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ ಹಲವಾರು ಟೆಕ್ ಕಂಪನಿಗಳು ಮತ್ತು ಸಿಇಒಗಳು ಇದ್ದಾರೆ. ಕಳೆದ ಕೆಲವು ವಾರಗಳ ಹಿಂದೆ ಇವರೆಲ್ಲಾ ಸೇರಿ ಟ್ರಂಪ್‌ರ ಎರಡನೇ ಉದ್ಘಾಟನಾ ನಿಧಿಗೆ 1 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದರು. ಟ್ರಂಪ್ ಬೆಂಬಲಿಗ ಯುಎಫ್‌ಸಿಯ ಡಾನಾ ವೈಟ್‌ ಅನ್ನು  ತನ್ನ ಮಂಡಳಿಗೆ ಸೇರಿಸಿರುವುದಾಗಿ ಮೆಟಾ ಜೂನ್‌ 6, 2025 ಮಂಗಳವಾರ ಘೋಷಿಸಿತ್ತು.

You cannot copy content of this page

Exit mobile version