Zee5ನಲ್ಲಿ ʼDD ನೆಕ್ಸ್ಟ್ ಲೆವೆಲ್ʼಗೆ ಭರ್ಜರಿ ರೆಸ್ಪಾನ್ಸ್
ಲಿಂಕ್ ನಕಲಿಸಲಾಗಿದೆ ✓

ತಮಿಳುನಟ ಸಂತಾನಂ ನಟನೆಯ ಡಿಡಿ ನೆಕ್ಸ್ಟ್ ಲೆವೆಲ್ ಸಿನಿಮಾಗೆ ಒಟಿಟಿಯಲ್ಲಿ ಅದ್ಭುತ ಮೆಚ್ಚುಗೆ ಸಿಗುತ್ತಿದೆ. ಜೂನ್ 13ರಂದು Zee5ಯಲ್ಲಿ ಸ್ಟ್ರೀಮಿಂಗ್ ಆದ ಚಿತ್ರ ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ. ದಿಲ್ಲುಕು ದುಡ್ಡು ಫ್ರ್ಯಾಂಚೈಸ್‌ನ ನಾಲ್ಕನೇ ಅಧ್ಯಾಯವಾದ ʼDD ನೆಕ್ಸ್ಟ್ ಲೆವೆಲ್ ಗೆ ಪ್ರೇಮ್ ಆನಂದ್ ಆಕ್ಷನ್ ಕಟ್ ಹೇಳಿದ್ದರು.
ಚಿತ್ರದಲ್ಲಿ ಸೆಲ್ವರಾಘವನ್, ಗೌತಮ್ ವಾಸುದೇವ್ ಮೆನನ್ ಮತ್ತು ಗೀತಿಕಾ ತಿವಾರಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆಕ್ಷನ್-ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ DD ನೆಕ್ಸ್ಟ್ ಲೆವೆಲ್ ಗೆ ದಿ ಶೋ ಪೀಪಲ್ ಮತ್ತು ನಿಹಾರಿಕಾ ಎಂಟರ್‌ಟೈನ್‌ಮೆಂಟ್ ಬಂಡವಾಳ ಹೂಡಿದೆ.
ದಕ್ಷಿಣ ಭಾರತದ ಭಾಷೆಗಳಲ್ಲಿ ಡಿಡಿ ನೆಕ್ಸ್ಟ್ ಲೆವೆಲ್ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ zee5 ಒಟಿಟಿಯಲ್ಲಿ ರಿಲೀಸ್ ಆಗಿದೆ.
Murali Maluru
Peepal Media · ಸಿನಿಮಾ ವಿಭಾಗ
Murali MV is a Reporter at Peepal Media. An avid reader, he reports on Sports and Political issues.
