ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಬ್ರಾಹ್ಮಣರ ರಕ್ಷಣೆಗಾಗಿ ಹಿಂದೂ ಮುಸ್ಲಿಂ ದ್ವೇಷ ಮತ್ತು ಸೌಹಾರ್ದತೆಯನ್ನು ಏಕಕಾಲದಲ್ಲಿ ಬಳಸುವ ಹಿಂದುತ್ವ ! 

N

Naveen Soorinje • ಅಂಕಣ

• 2 ನಿಮಿಷದ ಓದು

ಬ್ರಾಹ್ಮಣರ ರಕ್ಷಣೆಗಾಗಿ ಹಿಂದೂ ಮುಸ್ಲಿಂ ದ್ವೇಷ ಮತ್ತು ಸೌಹಾರ್ದತೆಯನ್ನು ಏಕಕಾಲದಲ್ಲಿ ಬಳಸುವ ಹಿಂದುತ್ವ ! 

ಅರ್ಚಕರನ್ನು ಹುಲಿ ಉಗುರು ಸಂಗ್ರಹ ಸಂಬಂಧ ಬಂಧಿಸಿದಾಗ ನವಿಲು ಗರಿ ಬಳಕೆ ಮಾಡುವ ದರ್ಗಾದ ಇಮಾಮ್ ರನ್ನು ಯಾಕೆ ಬಂಧಿಸಲ್ಲ ಎಂದು ಕೇಳುವ ಅರಗ ಜ್ಞಾನೇಂದ್ರರು, ಬ್ರಾಹ್ಮಣರನ್ನು ಬಂಧಿಸಬಾರದು ಎನ್ನುವುದಕ್ಕೆ ಹಣಗೆರೆಯ ದರ್ಗಾದ ಸೌಹಾರ್ದತೆಯನ್ನು ಗುರಾಣಿಯಾಗಿ ಬಳಸುತ್ತಾರೆ– ನವೀನ್ ಸೂರಿಂಜೆ

ಹುಲಿ ಉಗುರು ಬಳಕೆ ಮತ್ತು  ಮಾರಾಟ ಮಾಡುವವರನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಏಕಾಏಕಿ ಬಂಧಿಸುವುದನ್ನು ವಿರೋಧಿಸಿದ್ದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಅಲ್ಲೂ ಹಿಂದೂ ಮುಸ್ಲಿಂ ದ್ವೇಷವನ್ನು ಮುಂದೆ ತಂದಿದ್ದರು. “ಮುಸ್ಲೀಮರ ದರ್ಗಾದಲ್ಲಿ ಇಮಾಮ್ ಗಳು ಆಶೀರ್ವಾದ ಮಾಡಲು ನವಿಲು ಗರಿ ಬಳಸುತ್ತಾರೆ. ಅವರನ್ಯಾಕೆ ಬಂಧಿಸುವುದಿಲ್ಲ?” ಎಂದು ಪ್ರಶ್ನಿಸಿದ್ದರು.

ಚಿಕ್ಕಮಗಳೂರಿನ ಖಾಂಡ್ಯ ಗ್ರಾಮದ ಮಾರ್ಕಂಡೇಶ್ವರ ದೇವಾಲಯದ ಅರ್ಚಕರಾದ ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ್ ಎಂಬವರಿಂದ ಹುಲಿ ಉಗುರಿನ ಮೂರು ಲಾಕೆಟ್ ವಶಕ್ಕೆ ಪಡೆದು ಬಂಧಿಸಿದ ಸಂದರ್ಭದಲ್ಲಿ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರರು ಇಮಾಮ್ ಗಳು ಮತ್ತು ದರ್ಗಾದ ನವಿಲು ಗರಿಯ ಚರ್ಚೆಯನ್ನು ಮುನ್ನಲೆಗೆ ತಂದಿದ್ದರು.

ಅಕ್ಟೋಬರ್ 01 ಬುಧವಾರದಂದು ತೀರ್ಥಹಳ್ಳಿಯ ಬಸವನಗದ್ದೆಯ ಬ್ರಾಹ್ಮಣ ಕುಟುಂಬದ ಪ್ರಸನ್ನ ಅವರ ಮನೆಯಲ್ಲಿ ಜಿಂಕೆ ಮತ್ತು ಕಾಡುಕೋಣದ ಕೊಂಬುಗಳಿದ್ದು, ಅದರ ಜೊತೆಗೆ ಹಲವಾರು ಗಂಧದ ಕೊರಡುಗಳಿದ್ದವು. ಇವೆಲ್ಲವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡು ಮನೆಯ ಸದಸ್ಯರನ್ನು ಬಂಧಿಸಲು ಮುಂದಾಗಿದ್ದರು. ತಕ್ಷಣ ಸ್ಥಳಕ್ಕೆ ಬಂದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅರಣ್ಯಾಧಿಕಾರಿಗಳ ಈ ನಡೆ ಖಂಡಿಸಿ, ಗ್ರಾಮಸ್ಥರೊಂದಿಗೆ ಪ್ರತಿಭಟಿಸಿದರು. ಈ ವೇಳೆ ಅಧಿಕಾರಿಗಳ ಜೊತೆ ಮಾತನಾಡಿದ ಅರಗ ಜ್ಞಾನೇಂದ್ರ “ಜಿಂಕೆ ಕೊಂಬುಗಳು ಇವರ ಅಜ್ಜನ ಕಾಲದ್ದು. ಜಿಂಕೆ ಕೊಂದು ಕೊಂಬು ತಂದಿದ್ದಲ್ಲ. ಪ್ರಾಯವಾದ ಜಿಂಕೆಗಳು ತಮ್ಮ ಕೊಂಬನ್ನು ತಾವೇ ಉದುರಿಸುತ್ತವೆ. ಅದನ್ನು ಹೆಕ್ಕಿ ತಂದಿದ್ದು. ಇನ್ನು, ಗಂಧದ ಕೊರಡು ಮಾರಾಟಕ್ಕಾಗಿ ತಂದಿರುವುದಲ್ಲ. ತೀರ್ಥಹಳ್ಳಿಯ ಹಣಗೆರೆಯಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ದರ್ಗಾ ಇದೆ. ಆ ದರ್ಗಾಕ್ಕೆ ಗಂಧ ಈ ಬ್ರಾಹ್ಮಣರ ಮನೆಯಿಂದಲೇ ಹೋಗಬೇಕು. ಅದಕ್ಕಾಗಿ ಗಂಧದ ಕೊರಡು ಶೇಖರಿಸಿಡಲಾಗಿದೆ” ಎಂದರು. 

ಅರ್ಚಕರನ್ನು ಹುಲಿ ಉಗುರು ಸಂಗ್ರಹ ಸಂಬಂಧ ಬಂಧಿಸಿದಾಗ ನವಿಲು ಗರಿ ಬಳಕೆ ಮಾಡುವ ದರ್ಗಾದ ಇಮಾಮ್ ರನ್ನು ಯಾಕೆ ಬಂಧಿಸಲ್ಲ ಎಂದು ಕೇಳುವ ಅರಗ ಜ್ಞಾನೇಂದ್ರರು, ಬ್ರಾಹ್ಮಣರನ್ನು ಬಂಧಿಸಬಾರದು ಎನ್ನುವುದಕ್ಕೆ ಹಣಗೆರೆಯ ದರ್ಗಾದ ಸೌಹಾರ್ದತೆಯನ್ನು ಗುರಾಣಿಯಾಗಿ ಬಳಸುತ್ತಾರೆ. 

ತೀರ್ಥಹಳ್ಳಿ ತಾಲೂಕು ಹಜರತ್ ಸೈಯ್ಯದ್ ಸಾದತ್ ಸ್ವಾಮಿ ದರ್ಗಾ, ಚೌಡೇಶ್ವರಿ ದೇವಸ್ಥಾನ ಹಣಗೆರೆ ಕಟ್ಟೆಯಲ್ಲಿ ಗಂಧ ಉತ್ಸವ ಮತ್ತು ಉರುಸ್ ಉತ್ಸವ ಪ್ರತೀ ವರ್ಷ ನಡೆಯುತ್ತಿದೆ. ಅಂದು ಸಂಜೆ ಬಸವನಗದ್ದೆ ಬಿ.ಪಿ. ತಿಮ್ಮಪ್ಪಯ್ಯನವರ ಮನೆಯಲ್ಲಿ ತೇಯ್ದ ಶ್ರೀಗಂಧ ಪ್ರಸಾದ ತಂದ ಬಳಿಕ ಸಂಜೆ 7 ಗಂಟೆಗೆ ನಮಾಜ್ ನಂತರ ಗಂಧ ಏರಿಸಲ್ಪಡುವ ಮೂಲಕ ಉರೂಸ್ ಆರಂಭಗೊಳ್ಳುತ್ತದೆ. ಇದು ಈ ನೆಲದ ನಿಜವಾದ ಸಂಸ್ಕೃತಿ. ಸೈಯ್ಯದ್ ಸಾದತ್ ಮತ್ತು ಚೌಡೇಶ್ವರಿ ಒಟ್ಟಿಗಿದ್ದು ಆರಾಧನೆಗೊಳ ಪಡುವುದೇ ನಮ್ಮ ನೆಲದ ಸೌಂದರ್ಯ. ಈ ರೀತಿಯ ಸೌಹಾರ್ದತೆಯನ್ನು ಹಾಳುಗೆಡಹುವ ಮೂಲಕವೇ ರಾಜಕಾರಣ ಮಾಡುವವರು ತಮ್ಮ ರಕ್ಷಣೆಗಾಗಿ ಮಾತ್ರ ಅದೇ ಸೌಹಾರ್ದತೆಯನ್ನು ಬಳಸಿಕೊಳ್ಳುತ್ತಾರೆ. 

ಕೋಮು ರಾಜಕಾರಣಕ್ಕಾಗಿ ಅನಾವಶ್ಯಕವಾಗಿ ದರ್ಗಾವನ್ನೋ, ಮಸೀದಿಯನ್ನೋ, ಮಂದಿರ, ಚರ್ಚ್ ಗಳನ್ನೋ ಎಳೆದು ತರುವುದು ಯಾಕೆ ? ಯಾವುದೋ ಅರ್ಚಕನನ್ನು ಹುಲಿ ಉಗುರು ಪ್ರಕರಣಕ್ಕೆ ಬಂಧಿಸಿದರೆ, ಆ ಆರ್ಚಕನಿಗೆ ಸಂಬಂಧವೇ ಇಲ್ಲದ ದರ್ಗಾದ ಇಮಾಮ್ ರನ್ನು ಯಾಕೆ ಬಂಧಿಸಬೇಕು ? ಸುಖಾಸುಮ್ಮನೆ ರಾಜಕಾರಣದಲ್ಲಿ ಮುಸ್ಲೀಮರನ್ನು ಎಳೆದು ತರುವ ಚಾಳಿಯಿದು. ಆದರೆ ತಮ್ಮನ್ನು ರಕ್ಷಿಸಿಕೊಳ್ಳಲು ಅದೇ ಮುಸ್ಲೀಮರ ಭಾವೈಕ್ಯತಾ ಕೇಂದ್ರಗಳನ್ನು ಹಿಂದುತ್ವವಾದಿಗಳು ಬಳಸಿಕೊಳ್ಳುತ್ತಾರೆ. ಬ್ರಾಹ್ಮಣರು ಮಾತ್ರವಲ್ಲ, ನಾವು ನೀವು ಎಲ್ಲರೂ ಬದುಕಿ ಕೊಳ್ಳಲು, ದೌರ್ಜನ್ಯಗಳಿಂದ ಬಚಾವಾಗಲು ಸೌಹಾರ್ದತೆಯೊಂದೇ ದಾರಿ ಎಂಬುದನ್ನು ಹಿಂದುತ್ವವಾದಿಗಳು ಅರ್ಥ ಮಾಡಿಕೊಳ್ಳಬೇಕು.

ನವೀನ್‌ ಸೂರಿಂಜೆ

ಪತ್ರಕರ್ತರು

ಇದನ್ನೂ ಓದಿ- ಶಿವಮೊಗ್ಗದ ಕೋಮುಹಿಂಸೆಗೆ ಕಾರಣ ಯಾರು? ಸೌಹಾರ್ದತೆ ಕದಡಲು  ಕಾಯುತ್ತಿದ್ದಾರೆ ಮತಾಂಧರು !

ವಿಷಯಗಳು: #india #kannada #karnataka #peepal #peepalmedia
N

Naveen Soorinje

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version