ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಜೋಶಿ ಉತ್ತರ ಹಾಸ್ಯಾಸ್ಪದ: ಬಿ.ಎಂ.ಹನೀಫ್

P

Peepal Media • ಅಂಕಣ

• 2 ನಿಮಿಷದ ಓದು

ಜೋಶಿ ಉತ್ತರ ಹಾಸ್ಯಾಸ್ಪದ: ಬಿ.ಎಂ.ಹನೀಫ್

ಮಂಗಳೂರು: “ರಥ ಸಿದ್ದಪಡಿಸಿದವರು, ರಥದ ಡ್ರೈವರ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಸ್ವಾಗತ, ವಂದನಾರ್ಪಣೆ, ನಿರೂಪಣೆ ಮಾಡುವವರೆಲ್ಲ ಸೇರಿ ಒಟ್ಟು 13 ಮುಸ್ಲಿಮರಿಗೆ ಹಾವೇರಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ಕೊಟ್ಟಿದ್ದೇವೆ” ಎನ್ನುವ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರ ಹಾಸ್ಯಾಸ್ಪದ ಹೇಳಿಕೆಯು ಕನ್ನಡ ಸಾಹಿತ್ಯದ ಕುರಿತ ಅವರ ಅಪಕ್ವ ತಿಳುವಳಿಕೆಯನ್ನು ಎತ್ತಿ ತೋರಿಸಿದೆ.

ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಮುಸ್ಲಿಂ ಕವಿಗಳು, ಸಾಹಿತಿಗಳು ಎಷ್ಟು ಮಂದಿ ಮುಖ್ಯ ವೇದಿಕೆಯ ವಿಚಾರ ಗೋಷ್ಠಿ, ಕವಿ ಗೋಷ್ಠಿ ಮತ್ತು ಸನ್ಮಾನಿತರ ಪಟ್ಟಿಯಲ್ಲಿ ಇದ್ದಾರೆ… ಎನ್ನುವ ನನ್ನ ಪ್ರಶ್ನೆಗೆ ನೇರವಾದ ಉತ್ತರ ಕೊಡಿ. ಒಬ್ಬರೂ ಇಲ್ಲ ಎನ್ನುವುದು ನಿಮಗೆ ನಾಚಿಕೆ ತಂದಿಲ್ಲದಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ.

ವೇದಿಕೆಗೆ ಶಿಶುನಾಳ ಷರೀಫರ ಹೆಸರು ಮತ್ತು ಆಹ್ವಾನ ಪತ್ರಿಕೆಯಲ್ಲಿ ಸರ್ ಮಿರ್ಜಾ ಇಸ್ಮಾಯಿಲ್ ಅವರ ಭಾವಚಿತ್ರ ಹಾಕಿರುವುದರ ಬಗ್ಗೆ ಜೋಶಿ ಹೇಳಿದ್ದಾರೆ. ಆದರೆ ಕನ್ನಡದಲ್ಲಿ ಬಹುದೊಡ್ಡ ಕಾವ್ಯ ಮತ್ತು ಕಥಾ ಪರಂಪರೆಯನ್ನು ಹುಟ್ಟು ಹಾಕಿರುವ ಹಿರಿಯ ಮುಸ್ಲಿಂ ಸಾಹಿತಿಗಳನ್ನು ಸಮ್ಮೇಳನದಿಂದ ದೂರ ಇಡಲಾಗಿದೆ. ಮಾತ್ರವಲ್ಲ ಕಿರಿಯರನ್ನೂ ನಿರ್ಲಕ್ಷಿಸಲಾಗಿದೆ. 2022 ರಲ್ಲಿ ಹಲವು ಕಥೆ, ಕಾವ್ಯ ಮತ್ತು ಪುಸ್ತಕ ಬಹುಮಾನಗಳನ್ನು ಗೆದ್ದಿರುವ ಯಾವ ಯುವ ಮುಸ್ಲಿಂ ಸಾಹಿತಿಗಳಿಗೂ ಮುಖ್ಯ ವೇದಿಕೆಯ ಗೋಷ್ಠಿಗಳಲ್ಲಿ ಅವಕಾಶ ನೀಡಿಲ್ಲ. ಇತ್ತೀಚೆಗಷ್ಟೆ ತಮ್ಮ ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ದಾದಾಪೀರ್ ಜೈಮನ್ ಅವರ ಹೆಸರೂ ಜೋಶಿಗೆ ನೆನಪಾಗಿಲ್ಲ. ಇದು ಕನ್ನಡದ ಮುಸ್ಲಿಂ ಸಾಹಿತಿಗಳ ಕುರಿತ ಅವರ ಅಜ್ಞಾನವನ್ಬು ಎತ್ತಿ ತೋರಿಸುತ್ತದೆ.

ಜನಸಾಹಿತ್ಯ ಸಮ್ಮೇಳನ ನನ್ನದಲ್ಲ: “ಹನೀಫ್ ಅವರು ತಮಗೆ ಅವಕಾಶ ಸಿಕ್ಕಿಲ್ಲವೆಂದು ಪ್ರತಿಭಟನೆಗಾಗಿ ಜನ ಸಾಹಿತ್ಯ ಸಮ್ಮೇಳನ ಯೋಜಿಸಿದ್ದಾರೆ” ಎಂಬ ಮಹೇಶ ಜೋಶಿಯವರ ಹೇಳಿಕೆಯೂ ಹಾಸ್ಯಾಸ್ಪದ. ಜನ ಸಾಹಿತ್ಯ ಸಮ್ಮೇಳನಕ್ಕೂ ನನಗೂ ಸಂಬಂಧವಿಲ್ಲ. ನಾನು ಅದರಲ್ಲಿ ಭಾಗವಹಿಸುತ್ತಲೂ ಇಲ್ಲ. ಅದನ್ನು ಯೋಜಿಸಿದವರು ತಮ್ಮ ಹೆಸರುಗಳನ್ನು ಬಹಿರಂಗವಾಗಿಯೇ ಪ್ರಕಟಿಸಿದ್ದಾರೆ. ಮಾಧ್ಯಮರಂಗದಲ್ಲಿ ಭಾರೀ ದೊಡ್ಡ ಹುದ್ದೆ ನಿರ್ವಹಿಸಿದ್ದೇನೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಜೋಶಿಯವರು ಫ್ಯಾಕ್ಟ್ ಚೆಕ್ ಮಾಡಿಕೊಳ್ಳಲಿ. ಈ ಬಗ್ಗೆ ತಪ್ಪು ಅಥವಾ ಸುಳ್ಳು ಮಾಹಿತಿ ಹರಡುವುದು ಬೇಡ.

ಕನ್ನಡ ಸಾಹಿತ್ಯ ಪರಿಷತ್ತು ಹಲವು ಪ್ರಾತಃಸ್ಮರಣೀಯ ಹಿರಿಯರ ಶ್ರಮದಿಂದ ಕಟ್ಟಿದ ಸಂಸ್ಥೆ. ನಾನು ಹಿಂದೆಯೂ ಕಸಾಪ ಸಮ್ಮೇಳನಗಳಲ್ಲಿ ವೇದಿಕೆಯಲ್ಲಿ ಭಾಗವಹಿಸಿದ್ದೇನೆ. ಗಂಗಾವತಿ ಸಮ್ಮೇಳನದಲ್ಲಿ ನನಗೆ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸೇವೆಗಾಗಿ ಸನ್ಮಾನವನ್ನೂ ಮಾಡಲಾಗಿದೆ. ಹಿಂದಿನ ಬಹುತೇಕ ಸಮ್ಮೇಳನಗಳಲ್ಲಿ ವೇದಿಕೆಯಲ್ಲಿ ಅವಕಾಶ ಇಲ್ಲದಿದ್ದರೂ ಸಭಿಕನಾಗಿಯೂ ನಾನು ಭಾಗವಹಿಸಿದ್ದೇನೆ. 38 ವರ್ಷಗಳ ಕಾಲ ಕನ್ನಡ ಪತ್ರಕರ್ತನಾಗಿ ಕೆಲಸ ಮಾಡಿರುವ ನಾನು ಜೋಶಿಯವರಿಂದ ಕನ್ನಡ ಪ್ರೇಮ ಕಲಿತುಕೊಳ್ಳಬೇಕಿಲ್ಲ. ಮುಸ್ಲಿಮರು, ದಲಿತರು ಮತ್ತು ಮಹಿಳೆಯರನ್ನು ಕಡೆಗಣಿಸಿರುವ ಮಹೇಶ ಜೋಶಿ ಹಾವೇರಿ ಸಮ್ಮೇಳನವನ್ನು ಕೋಮುವಾದೀ ಕರಣಗೊಳಿಸಿದ್ದಾರೆ. ಇದರ ವಿರುದ್ಧ ನನ್ನ ಪ್ರತಿಭಟನೆ ದಾಖಲಿಸಿದ್ದೇನೆಯೇ ಹೊರತು ಇನ್ಯಾವ‌ ವೈಯಕ್ತಿಕ ದ್ವೇಷವೂ ನನ್ನದಲ್ಲ.

ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಮಿರ್ಜಾ ಇಸ್ಮಾಯಿಲ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಮಧ್ಯೆ ಚಾಮರಾಜಪೇಟೆ ಗಣಪತಿ ಗಲಭೆಯ ಮೂಲಕ ಬತ್ತಿ ಇಡಲು ಹಿಂದೊಮ್ಮೆ ಕೆಲವರು ಯತ್ನಿಸಿದ್ದರು. ಆದರೆ ಒಡೆಯರ್ ಅವರು ಆ ಪಿತೂರಿಗೆ ಬಲಿ ಬೀಳಲಿಲ್ಲ. ಈಗ ಮಹೇಶ ಜೋಶಿ ಕಸಾಪವನ್ನು ಕೋಮುವಾದೀಕರಣ ಗೊಳಿಸುವ ನಿಟ್ಟಿನಲ್ಲಿ ಅದೇ ರೀತಿಯ ಹೆಜ್ಜೆ ಇಟ್ಟಿದ್ದಾರೆ. ಪ್ರಾಜ್ಞ ಕನ್ನಡಿಗರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ನಂಬಿಕೆ ನನ್ನದು.

– ಬಿ. ಎಮ್.‌ ಹನೀಫ್‌

ಹಿರಿಯ ಪತ್ರಕರ್ತರು

P

Peepal Media

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version