ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಬೇಕಾದದ್ದು ಪೋಸ್ಟ್ ಮಾರ್ಟೆಂ ಅಲ್ಲ ಪ್ರಾಗ್ನೋಸಿಸ್

P

Peepal Media Desk • ಅಂಕಣ

• 1 ನಿಮಿಷದ ಓದು

ಬೇಕಾದದ್ದು ಪೋಸ್ಟ್ ಮಾರ್ಟೆಂ ಅಲ್ಲ ಪ್ರಾಗ್ನೋಸಿಸ್

“..ಜನ “ಗುಂಪು” ಆದಾಗ, ಆ ಗುಂಪಿಗೆ ಮೆದುಳು ಇರುವುದಿಲ್ಲ. ಅಲ್ಲಿ “ವಿವೇಕ” ಅಗತ್ಯವಿರುತ್ತದೆ. ಈ ವಿವೇಕವನ್ನು ಅಗತ್ಯ ಇರುವವರಿಗೆ ಕಲಿಸಬೇಕಿದೆ..” ಚಿಂತಕರಾದ ರಾಜಾರಾಂ ತಲ್ಲೂರು ಅವರ ಬರಹದಲ್ಲಿ

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ಸಾವುಗಳಲ್ಲಿ “ಯಾರದ್ದು ತಪ್ಪು” ಎಂಬ ಕರಟ ಹೆರೆಯುವ ಕೆಲಸವನ್ನು ರಾಜಕೀಯವಾಗಿ “ಸ್ಕೋರ್” ಆಗಬೇಕಿರುವ ಹಪಾಹಪಿಯವರೆಲ್ಲ ಮಾಡಿಕೊಳ್ಳಲಿ. ಈಗ ಕೋಟೆ ಬಾಗಿಲು ಸೂರೆ ಹೋದಮೇಲೆ, ಸರ್ಕಾರ ದೊಡ್ಡ ಗಾತ್ರದಲ್ಲಿ ಜನ ಸೇರಿದರೆ SoP ಏನಿರಬೇಕು ಎಂದು ನಿರ್ಧರಿಸುತ್ತೇವೆ ಎಂದು ಹೇಳಿಕೊಂಡಿದೆ. ಅದೂ ಸಂತೋಷವೇ.

ಇದೆಲ್ಲಕ್ಕಿಂತ ಮಿಗಿಲಾಗಿ ಆಗಬೇಕಿರುವ ಕೆಲಸವೊಂದಿದೆ. ಜನರ ಜೀವಗಳು ಅಮೂಲ್ಯ ಎಂಬುದು ಸರ್ಕಾರಕ್ಕೆ ಖಚಿತವಿದ್ದರೆ, ಸ್ವಲ್ಪ ಕಷ್ಟಪಟ್ಟಾದರೂ ಇದನ್ನು ಅವರು ಮಾಡಬೇಕು ಮತ್ತು ಮಾಡುವಂತೆ ಸಾರ್ವಜನಿಕರು ಸರ್ಕಾರದ, ಕಾರ್ಯಾಂಗದ ಮೇಲೆ ಒತ್ತಾಯ ತರಬೇಕು. ಇದು ಯಾಕೆ ಅಗತ್ಯ ಎಂದರೆ, ಬೆಂಗಳೂರಿನಲ್ಲಿ ಹೀಗೆ ಜನಜಂಗುಳಿ ನಿಯಂತ್ರಣ ತಪ್ಪುತ್ತಿರುವುದು ಇದೇ ಮೊದಲಲ್ಲ. ನಾನು ಈಗಾಗಲೇ ಹೇಳಿರುವಂತೆ ಜನ “ಗುಂಪು” ಆದಾಗ, ಆ ಗುಂಪಿಗೆ ಮೆದುಳು ಇರುವುದಿಲ್ಲ. ಅಲ್ಲಿ “ವಿವೇಕ” ಅಗತ್ಯವಿರುತ್ತದೆ. ಈ ವಿವೇಕವನ್ನು ಅಗತ್ಯ ಇರುವವರಿಗೆ ಕಲಿಸಬೇಕಿದೆ.

ಈ ಜನಜಂಗುಳಿಯಲ್ಲಿ “ಬಾರ್ಡರ್‌ಲೈನ್ ಪರ್ಸನಾಲಿಟಿ”ಗಳಿರುತ್ತವೆ. ಅವರು ಯಾರೆಂದು ಗುರುತಿಸುವುದು ಕಷ್ಟ. ಆದರೆ, ಜನ ಸೇರಿದಾಗ, ಗುಂಪಿನ ವಿವೇಕವನ್ನು ಅವರು ಹೈಜಾಕ್ ಮಾಡಿಬಿಟ್ಟಿರುತ್ತಾರೆ. ಇದನ್ನು ತಪ್ಪಿಸುವುದಕ್ಕೆ ಜನರಿಗೆ ತರಬೇತಿ ಅಗತ್ಯವಿದೆ.  ಬೆಂಗಳೂರಿನಂತಹ ಅತಿಸಂದಣಿಯ ಮಹಾನಗರಗಳಲ್ಲಿಯಂತೂ ಇದು ಬಹಳ ಅಗತ್ಯ.

ಸರ್ಕಾರ ಏನು ಮಾಡಬಹುದೆಂದರೆ, ಇಂದು ಲಭ್ಯವಿರುವ ಟೆಕ್ನಾಲಜಿ ಬಳಸಿಕೊಂಡು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನೆರೆದಿರುವ ಪ್ರತಿಯೊಬ್ಬರನ್ನೂ ಅವರ ಮೊಬೈಲ್ ಫೋನ್ ನಂಬರ್ ಮೂಲಕ ಗುರುತಿಸುವುದು ಸಾಧ್ಯ ಇದೆ (ಅಲ್ಲಿ ಮೊಬೈಲ್ ಇಲ್ಲದೇ ಬಂದಿರುವವರ ಸಂಖ್ಯೆ ಬಹುತೇಕ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ!). GPS, ಟವರ್ ಡಂಪಿಂಗ್, ಇತ್ಯಾದಿ ಹತ್ತು ಹಲವು ತಂತ್ರಜ್ಞಾನಗಳು ಸರ್ಕಾರದ ಕೈಯೆಟುಕಿನಲ್ಲೇ ಲಭ್ಯವಿವೆ. ಇವುಗಳನ್ನು ಬಳಸಿಕೊಂಡು, ಅಲ್ಲಿ ಅಂದು ನೆರೆದಿದ್ದ 2 ಲಕ್ಷ ಮಂದಿಯನ್ನು ಗುರುತಿಸಬೇಕು ಮತ್ತು ಅವರನ್ನು ಎಲ್ಲರನ್ನೂ ಸಂಪರ್ಕಿಸಿ, ಅವರಿಗೆ ಅವರ ಉದ್ಯೋಗದ ಸ್ಥಳದಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಅಥವಾ ಇಂತಹ ಒಂದು ಕನ್ಸಿಡರೆಬಲ್ ಗುಂಪು ಲಭ್ಯವಾಗುವ ಯಾವುದೇ ಜಾಗದಲ್ಲಿ  ಅವರಿಗೆ ಗುಂಪು ವರ್ತನೆಗಳ ಬಗ್ಗೆ ಕೌನ್ಸೆಲಿಂಗ್ ನೀಡಬೇಕು, ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಬೇಕು ಮತ್ತು ಅಪಾಯ ಸನ್ನಿವೇಶಗಳಲ್ಲಿ ಏನು ಪರಿಹಾರ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ತಿಳಿವಳಿಕೆ ನೀಡಬೇಕು.

ಇನ್ನು ನನ್ನ ಕಣ್ಣಿಗೆ ಬಿದ್ದ ಕೆಲವು ವೀಡಿಯೊಗಳಲ್ಲೇ, ಚಿನ್ನಸ್ವಾಮಿ ಗೇಟನ್ನು ಮುರಿಯಲು ಪ್ರಯತ್ನಿಸುತ್ತಿರುವ, ಹೈಕೋರ್ಟ್ ಕಟ್ಟಡ ಹತ್ತಿರುವ, ಮರ ಹತ್ತಿರುವ, ಎತ್ತರದ ಕಂಪೌಂಡ್ ಗೋಡೆಗಳನ್ನು ಹತ್ತಿರುವ ಇತ್ಯಾದಿ ಅಸಹಜ ಸಾಮಾಜಿಕ ವರ್ತನೆ ತೋರಿರುವ ಹಲವರನ್ನು ಗುರುತಿಸುವಷ್ಟು ಸ್ಪಷ್ಟವಾದ ವೀಡಿಯೊಗಳು ಇವೆ. ಟೆಲಿವಿಷನ್ ಚಾನೆಲ್‌ಗಳಲ್ಲಿ, ಸಿಸಿಟಿವಿಗಳಲ್ಲಿ ಇವು ಲಭ್ಯವಿರಬಹುದು. ಇವರಲ್ಲಿ  “ಬಾರ್ಡರ್‌ಲೈನ್ ಪರ್ಸನಾಲಿಟಿ”ಗಳನ್ನು ಅಥವಾ ಬೇರೆ ಮಾನಸಿಕ ಸಮಸ್ಯೆಗಳು, ಮದ್ಯ/ಮಾದಕ ವ್ಯಸನಿಗಳನ್ನು ಗುರುತಿಸಿ,  ಅವರಿಗೆ ಅಗತ್ಯ ವೈದ್ಯಕೀಯ ನೆರವನ್ನು ಒದಗಿಸಬೇಕು.

ಸರ್ಕಾರ ಇಷ್ಟು ಮಾಡಿದರೆ, ಇನ್ನು ಮುಂದೆಯಾದರೂ ಬೆಂಗಳೂರಿನಲ್ಲಿ ಜನಸಂದಣಿ ಸೇರಿದಾಗ ಸಾಮಾನ್ಯ ನಾಗರಿಕರು ತಾವು ಸ್ವಲ್ಪ ಸುರಕ್ಷಿತ ಭಾವನೆ ತಳೆಯಬಹುದು.

P

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version