ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಪ್ರತಿರೋಧ ಹತ್ತಿಕ್ಕಲೆಂದೇ ‘ದಿಮಾಗೀ ನಕ್ಸಲ್’ ಪದ ಬಳಕೆ: ಪ್ರಧಾನಿ ಮೋದಿ ಭಾಷಣದ ವಿರುದ್ಧ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ವಾಗ್ದಾಳಿ

P

Peepal Media • ರಾಜಕೀಯ

• 1 ನಿಮಿಷದ ಓದು

ಪ್ರತಿರೋಧ ಹತ್ತಿಕ್ಕಲೆಂದೇ ‘ದಿಮಾಗೀ ನಕ್ಸಲ್’ ಪದ ಬಳಕೆ: ಪ್ರಧಾನಿ ಮೋದಿ ಭಾಷಣದ ವಿರುದ್ಧ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ವಾಗ್ದಾಳಿ

ನಾಯಕತ್ವವಿಲ್ಲದ, ಮೀಮ್‌ಗಳ ಆಧಾರಿತ ಯುವಜನರ ಪ್ರತಿಭಟನೆಗೆ ಮಣಿಯುವಂತಾದ ಬಿಜೆಪಿ ಸರ್ಕಾರವು, ಕಾನೂನುಬದ್ಧ ಪ್ರತಿಭಟನೆಯ ವ್ಯಾಪ್ತಿಯನ್ನು ಕುಗ್ಗಿಸಲು ಮೊದಲೇ ಪದಜಾಲವನ್ನು ಸಿದ್ಧಪಡಿಸಿಕೊಂಡು ಕೆಂಪುಕೋಟೆಯ ವೇದಿಕೆಯನ್ನು ಬಳಸಿಕೊಂಡಿದೆ ಎಂದು ಖ್ಯಾತ ಲೇಖಕ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ‘ದ ವೈರ್’ ವೆಬ್‌ಸೈಟ್‌ನಲ್ಲಿ ಬರೆದ ಲೇಖನದಲ್ಲಿ ಟೀಕಿಸಿದ್ದಾರೆ. ಅವರ ವಿಶ್ಲೇಷಣೆಯ ಪ್ರಕಾರ, ಸ್ವಾತಂತ್ರ್ಯ ದಿನದಂದು ವಿಜಯಗರ್ವದೊಂದಿಗೆ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರ 75 ನಿಮಿಷಗಳ ಮಾತುಗಳು ಸ್ವಾವಲಂಬನೆ, ತಂತ್ರಜ್ಞಾನ, ಉತ್ಪಾದನೆ, ರಕ್ಷಣೆ ಮತ್ತು ಸಪ್ತಧಾರಾ ಕಾರ್ಯತಂತ್ರಗಳ ಸುತ್ತಲೇ ಸುತ್ತಿದವು.

ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಿಂದ ಸುಮಾರು 47.85 ಲಕ್ಷ ಕೋಟಿ ರೂಪಾಯಿ ಮೌಲ್ಯದ ಇಂಧನ, ವಾಯುಯಾನ ಮತ್ತು ತಾಂತ್ರಿಕ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಫೆಬ್ರವರಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದರೂ ಭಾಷಣದಲ್ಲಿ ಆತ್ಮನಿರ್ಭರತೆಯ ಬಗ್ಗೆ ಮಾತನಾಡಲಾಗಿದೆ. ವಿಶೇಷವಾಗಿ ಯುವಜನತೆಯಲ್ಲಿ ಹೆಚ್ಚುತ್ತಿರುವ ಅಸಮಾಧಾನವನ್ನು ಹತ್ತಿಕ್ಕಲು ಪ್ರಧಾನಿಯವರು ‘ದಿಮಾಗೀ ನಕ್ಸಲ್ಸ್’ (ಮಾನಸಿಕ ನಕ್ಸಲರು) ಎಂಬ ಪದವನ್ನು ಪ್ರಯೋಗಿಸಿ ವಿಮರ್ಶೆಗೆ ಗುರಿಯಾಗಿದ್ದಾರೆ. ‘ಕಾಕ್ರೋಚ್ ಮೂವ್‌ಮೆಂಟ್’ ಎಂದೂ ಕರೆಯಲ್ಪಡುವ ವಿದ್ಯಾರ್ಥಿ ಚಳವಳಿಯು ಬಿಜೆಪಿ ಸರ್ಕಾರವನ್ನು ಮೊದಲ ಬಾರಿಗೆ ತಲೆಬಾಗುವಂತೆ ಮಾಡಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಮುಂದಿನ 21 ವರ್ಷಗಳವರೆಗೆ ನೀವೇ ಅಧಿಕಾರದಲ್ಲಿರುತ್ತೀರಾ?

ಎಲೆಕ್ಟ್ರಾನಿಕ್ಸ್ ಉತ್ಪಾದನೆ 7 ಪಟ್ಟು ಮತ್ತು ರೈಲು ಕೋಚ್‌ಗಳ ತಯಾರಿಕೆ 21 ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿಕೊಂಡಿದ್ದಾರಾದರೂ ಪ್ರಮುಖ ವೈಫಲ್ಯಗಳನ್ನು ಮರೆಮಾಚಿದ್ದಾರೆ. ಭಾರತದ ಜಿಡಿಪಿಯಲ್ಲಿ ಉತ್ಪಾದನಾ ಕ್ಷೇತ್ರದ ಪಾಲು ಕಳೆದ 60 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟವಾದ ಶೇ. 13ಕ್ಕೆ ಕುಸಿದಿರುವ ಮಹತ್ವದ ಅಂಶವನ್ನು ಅವರು ಪ್ರಸ್ತಾಪಿಸಿಲ್ಲ. ಜನಾದೇಶವು ಐದು ವರ್ಷಗಳ ಆಡಳಿತಕ್ಕೆ ಮಾತ್ರವೇ ಹೊರತು 21 ವರ್ಷಗಳಿಗಲ್ಲ. ಹಾಗಿರುವಾಗ 2047ರವರೆಗೂ ತಾವೇ ಅಧಿಕಾರದಲ್ಲಿರುತ್ತೇವೆ ಎಂಬಂತೆ 21 ವರ್ಷಗಳ ನಂತರದ ಗುರಿಗಳ ಬಗ್ಗೆ ಮಾತನಾಡುವ ಬದಲು, ಇಂದಿನ ನೈಜ ಸಮಸ್ಯೆಗಳಿಗೆ ಉತ್ತರಿಸಬೇಕಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಶ್ನಿಸುವವರೆಲ್ಲರೂ ನಕ್ಸಲರೇ?

ನಾಗರಿಕರ ಸಮಸ್ಯೆಗಳು ಮತ್ತು ಕಳವಳಗಳ ಕುರಿತು ಮಾತನಾಡುವ ಬದಲು, ಪ್ರಧಾನಿಯವರು ಯಾವುದೋ ಶತ್ರುವಿನ ವಿರುದ್ಧ ಹೋರಾಡುತ್ತಿರುವಂತೆ ಮಾತನಾಡಿದ್ದಾರೆ. ತಮ್ಮನ್ನು ಪ್ರಶ್ನಿಸುವ ಪ್ರತಿಯೊಬ್ಬರನ್ನೂ ಶತ್ರುಗಳೆಂಬಂತೆ ಬಿಂಬಿಸಲಾಗುತ್ತಿದ್ದು, ರಾಜಕೀಯವಾಗಿ ಧ್ವನಿ ಎತ್ತುತ್ತಿರುವ ಜೆನ್-ಝಡ್ (Gen-Z) ಮತ್ತು ಜೆನ್ ಆಲ್ಫಾ (Gen-Alpha) ಪೀಳಿಗೆಯವರೇ ತಮ್ಮ ವಿರೋಧಿಗಳು ಎಂಬ ಪರೋಕ್ಷ ಸಂದೇಶ ನೀಡಿದ್ದಾರೆ. ಮೋದಿ ಬಳಸಿದ ‘ದಿಮಾಗೀ ನಕ್ಸಲ್ಸ್’ ಪದವು ವಿವಾದಿತ ‘ಅರ್ಬನ್ ನಕ್ಸಲ್’ ಎಂಬ ಹಣೆಪಟ್ಟಿಯನ್ನೇ ಹೋಲುತ್ತದೆ. ಕಳೆದ ಕೆಲವು ವರ್ಷಗಳಿಂದ ಶಿಕ್ಷಣ ತಜ್ಞರು ಮತ್ತು ವಿಮರ್ಶಕರ ಮೇಲೆ ಇಂತಹ ಹಣೆಪಟ್ಟಿ ಕಟ್ಟಿ ಟೀಕಿಸಲಾಗುತ್ತಿದೆ ಎಂದು ತೇಲ್ತುಂಬ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

P

Peepal Media

Peepal Media · ರಾಜಕೀಯ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version