ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಪಶ್ಚಿಮ ಘಟ್ಟದ ಸಮಸ್ಯೆಗಳಿಗೆ ಯುಪಿಎ ರಚಿಸಿದ – ಗಾಡ್ಗೀಳ್ ವರದಿಯೇ ಮೂಲ ಕಾರಣ ಅಶೋಕ್

ರ

ರಮೇಶ್‌ ಹಾಸನ್‌ • ರಾಜಕೀಯ, ರಾಜ್ಯ

• 2 ನಿಮಿಷದ ಓದು

ಪಶ್ಚಿಮ ಘಟ್ಟದ ಸಮಸ್ಯೆಗಳಿಗೆ ಯುಪಿಎ ರಚಿಸಿದ – ಗಾಡ್ಗೀಳ್ ವರದಿಯೇ ಮೂಲ ಕಾರಣ ಅಶೋಕ್

ಬೆಂಗಳೂರು :  ಪಶ್ಚಿಮ ಘಟ್ಟ (Western Ghats) ಸಂರಕ್ಷಣೆ ವಿಚಾರದಲ್ಲಿ ಎದುರಾಗಿರುವ ಪ್ರಸ್ತುತ ಬಿಕ್ಕಟ್ಟಿಗೆ ಅಂದಿನ ಯುಪಿಎ ಸರ್ಕಾರ (UPA Govt) ರಚಿಸಿದ ಮಾಧವ ಗಾಡ್ಗೀಳ್ (Madhav Gadgil) ವರದಿಯೇ ಮೂಲ ಕಾರಣ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್(R Ashok) ಆರೋಪಿಸಿದ್ದಾರೆ.ಕಸ್ತೂರಿ ರಂಗನ್ ವರದಿ ಕುರಿತು ವಿಧಾನಸಭೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವರದಿಯ ಪರಿಣಾಮಗಳ ಕುರಿತು ಕಳವಳ ವ್ಯಕ್ತಪಡಿಸುವುದರ ಜತೆಗೆ ರಾಜ್ಯ ಸರ್ಕಾರಕ್ಕೆ ಮೂರು ಪ್ರಮುಖ ಸಲಹೆಗಳನ್ನು ನೀಡಿದರು.

ಸರ್ಕಾರಕ್ಕೆ ವಿಪಕ್ಷ ನಾಯಕ ನೀಡಿದ 3 ಪ್ರಮುಖ ಸಲಹೆಗಳು!

ಕಸ್ತೂರಿ ರಂಗನ್ ಸಮಿತಿ ಸ್ಯಾಟಲೈಟ್ ಮೂಲಕ ಸಮೀಕ್ಷೆ ನಡೆಸಿದೆ. ಕರ್ನಾಟಕ ಸರ್ಕಾರವು ತಕ್ಷಣವೇ ವಾಸ್ತವಿಕ ಸ್ಥಿತಿ ತಿಳಿಯಲು ಭೌತಿಕ ಸಮೀಕ್ಷೆ ನಡೆಸಬೇಕು. ಇದೇ ರೀತಿ ಮಾಡಿ ಕೇರಳ ಸರ್ಕಾರವು ತನ್ನ ಬಫರ್ ಜೋನ್ ಅನ್ನು ಶೂನ್ಯ ಮಾಡಿಕೊಂಡಿದೆ.ವಾಸ್ತವ ಸ್ಥಿತಿಯ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಈ ಸಂಬಂಧ ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ವಿಪಕ್ಷವೂ ಸಿದ್ಧವಿದೆ.

ಅತ್ಯುತ್ತಮ ವಕೀಲರ ತಂಡವನ್ನು ರಚಿಸಿ ಸುಪ್ರೀಂ ಕೋರ್ಟ್‌ನಲ್ಲಿ ಬಲವಾದ ಕಾನೂನು ಸಮರ ನಡೆಸಬೇಕು. ಈ ಮೂಲಕ ರೈತರ ಮತ್ತು ಸ್ಥಳೀಯ ಜನರ ಹಿತರಕ್ಷಣೆ ಮಾಡಬೇಕು.

ಗಾಡ್ಗೀಳ್ ವರದಿಯೇ ಮೂಲ ಸಮಸ್ಯೆ!

ತಾಪಿ ನದಿಯಿಂದ ಕನ್ಯಾಕುಮಾರಿವರೆಗೆ ಹರಡಿರುವ 1,400 ಕಿ.ಮೀ ಉದ್ದದ ಪಶ್ಚಿಮ ಘಟ್ಟವು 40 ಲಕ್ಷ ಟನ್ ಕಾರ್ಬನ್ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, 320ಕ್ಕೂ ಹೆಚ್ಚು ಜೀವಪ್ರಭೇದಗಳು ಹಾಗೂ 75ಕ್ಕೂ ಹೆಚ್ಚು ಉಭಯಚರ ಪ್ರಭೇದಗಳಿಗೆ ಆಶ್ರಯ ತಾಣವಾಗಿದೆ. ಇಲ್ಲಿನ 39 ತಾಣಗಳು ಯುನೆಸ್ಕೋ ಪಟ್ಟಿಗೆ ಸೇರಿವೆ. ಈ ಪರಿಸರ ಉಳಿಯಬೇಕು ಎಂಬುದು ಪರಿಸರವಾದಿಗಳ ವಾದ.2010ರಲ್ಲಿ ಯುಪಿಎ ಸರ್ಕಾರದ ಅರಣ್ಯ ಸಚಿವರಾಗಿದ್ದ ಜೈರಾಮ್ ರಮೇಶ್(Jairam Ramesh) ಅವರು ಮಾಧವ ಗಾಡ್ಗೀಳ್ ನೇತೃತ್ವದಲ್ಲಿ 15 ಸದಸ್ಯರ ಸಮಿತಿ ರಚಿಸಿದ್ದರು. ಸುಪ್ರೀಂ ಕೋರ್ಟ್ ಸೂಚಿಸದಿದ್ದರೂ ಯುಪಿಎ ಸರ್ಕಾರವೇ ಈ ಸಮಿತಿ ರಚಿಸಿತ್ತು ಎಂದು ಅಶೋಕ್ ವಿವರಿಸಿದರು.ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್(Kasturirangan Report) ಎರಡೂ ವರದಿಗಳು ರಾಜ್ಯದ 10 ಜಿಲ್ಲೆಗಳಿಗೆ ಅತ್ಯಂತ ಮಾರಕವಾಗಿವೆ, ಈ ವರದಿ ಜಾರಿಯಾದರೆ ಯಾವುದೇ ವಿದ್ಯುತ್ ಸ್ಥಾವರ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.

10 ಜಿಲ್ಲೆಗಳ 1,540 ಹಳ್ಳಿಗಳಿಗೆ ಕಂಠಕ!

ವರದಿಯನ್ವಯ ರಾಜ್ಯದ 20,668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ಇಎಸ್‌ಝಡ್) ಎಂದು ಗುರುತಿಸಲಾಗಿದೆ. ಇದರಲ್ಲಿ 10 ಜಿಲ್ಲೆಗಳ 1,540 ಗ್ರಾಮಗಳು ಹಾಗೂ ಕಾಡಂಚಿನ ಪ್ರದೇಶಗಳು ಒಳಪಡುತ್ತವೆ. ಸಮಿತಿಯು ಕೇವಲ ಸ್ಯಾಟಲೈಟ್ ಮೂಲಕ ಸಮೀಕ್ಷೆ ನಡೆಸಿ, ಹಸಿರು ಕಂಡ ಜಾಗಗಳನ್ನೆಲ್ಲ—ಕಾಫಿ ತೋಟಗಳನ್ನೂ ಒಳಗೊಂಡಂತೆ—ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿದೆ. ಇದು ಜನಸಾಮಾನ್ಯರಿಗೆ ಮತ್ತು ರೈತರಿಗೆ ದೊಡ್ಡ ಸಮಸ್ಯೆಯಾಗಲಿದೆ.ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಪಶ್ಚಿಮ ಘಟ್ಟಗಳ ಪರಿಸರ ನಾಶವನ್ನು ತಡೆಯಲು ಮೊದಲು 2011 ರಲ್ಲಿ ಪ್ರೊ. ಮಾಧವ್ ಗಾಡ್ಗೀಳ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಗಾಡ್ಗೀಳ್ ವರದಿ ತೀರಾ ಕಠಿಣವಾಗಿದೆ ಮತ್ತು ಅಭಿವೃದ್ಧಿಗೆ ಮಾರಕವಾಗಿದೆ ಎಂದು ಪಶ್ಚಿಮ ಘಟ್ಟ ವ್ಯಾಪ್ತಿಯ 6 ರಾಜ್ಯಗಳು ವಿರೋಧಿಸಿದಾಗ, ಆ ವರದಿಯನ್ನು ಪರಿಶೀಲಿಸಿ ಪ್ರಾಯೋಗಿಕ ಪರಿಹಾರ ಹುಡುಕಲು ಕಸ್ತೂರಿ ರಂಗನ್ ಸಮಿತಿಯನ್ನು ರಚಿಸಲಾಯಿತು. ಅಂದರೆ ಗಾಡ್ಗೀಳ್ ವರದಿಯ ಮುಂದುವರಿದ ಅಥವಾ ಮಾರ್ಪಡಿಸಿದ ರೂಪವೇ ಕಸ್ತೂರಿ ರಂಗನ್ ವರದಿಯಾಗಿದೆ.ಗೋವಾ ಫೌಂಡೇಶನ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಗಾಡ್ಗೀಳ್ ವರದಿ ಜಾರಿಗೆಯೇ ಹೊರತು ಕಸ್ತೂರಿ ರಂಗನ್ ವರದಿಯ ಜಾರಿಗೆ ಅಲ್ಲ. ಹೀಗಾಗಿ ಗಾಡ್ಗೀಳ್ ವರದಿಯೇ ಇಡೀ ಸಮಸ್ಯೆಗೆ ಮೂಲ. ಈ ಚರ್ಚೆಯೇ ಅನವಶ್ಯಕ ಎಂದಾದರೆ ಸಿಎಂ ವಿಶೇಷ ಚರ್ಚೆ ಕರೆದಿರುವುದೂ ಅನವಶ್ಯಕವೇ? ಎಂದು ಪ್ರಶ್ನಿಸಿದರು.

ವಿಷಯಗಳು: #karnataka #news
ರ

ರಮೇಶ್‌ ಹಾಸನ್‌

Peepal Media · ರಾಜಕೀಯ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version