ಚುನಾವಣೆಗೂ ಮೊದಲೇ ಸಿಎಮ್ ಕುರ್ಚಿಯ ಮೇಲೆ ಟವೆಲ್ ಹಾಕಿದ ಬಿಜೆಪಿ ನಾಯಕ
ಲಿಂಕ್ ನಕಲಿಸಲಾಗಿದೆ ✓

ಅಂಬಾಲಾ: ಮುಂದಿನ ತಿಂಗಳು 5ರಂದು ಹರಿಯಾಣ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಆಡಳಿತಾರೂಢ ಬಿಜೆಪಿಗೆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಅನಿಲ್ ವಿಜ್ ಶಾ ಶಾಕ್ ನೀಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ತನಗೇ ಸಿಎಂ ಸ್ಥಾನ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಹರಿಯಾಣದಲ್ಲಿ ನಾಯಬ್ ಸಿಂಗ್ ಸೈನಿ ಗೆದ್ದರೆ ಅವರೇ ಮತ್ತೆ ಸಿಎಂ ಆಗುತ್ತಾರೆ ಎಂದು ಬಿಜೆಪಿ ನಾಯಕತ್ವ ಈಗಾಗಲೇ ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ಭಾನುವಾರ ಅನಿಲ್ ವಿಜ್ ಅವರು, ‘ಇದುವರೆಗೂ ನಾನು ಪಕ್ಷದಿಂದ ಏನನ್ನೂಬಯಸಿಲ್ಲ. ಅಂಬಾಲ ಹಾಗೂ ರಾಜ್ಯದ ಜನ ನನ್ನ ಬಳಿ ಬಂದು ನೀವು ಇಷ್ಟು ಸೀನಿಯರ್ ಆಗಿದ್ದು ಯಾಕೆ ಸಿಎಂ ಆಗಲಿಲ್ಲ ಎಂದು ಕೇಳುತ್ತಿದ್ದಾರೆ. ಜನರ ಬೇಡಿಕೆ ಹಾಗೂ ಹಿರಿತನದ ಆಧಾರದಲ್ಲಿ ಈ ಬಾರಿ ನಾನು ಸಿಎಂ ಆಗುತ್ತೇನೆ’ ಎಂದರು. ತನ್ನನ್ನು ಸಿಎಂ ಮಾಡಿದರೆ ಹರ್ಯಾಣದ ಚಹರೆಯನ್ನೇ ಬದಲಾಯಿಸುವುದಾಗಿ ಅವರು ಹೇಳಿದರು.
ನಾಯಬ್ ಸಿಂಗ್ ಮುಖ್ಯಮಂತ್ರಿ ಅಭ್ಯರ್ಥಿ
ಹರಿಯಾಣದಲ್ಲಿ ಬಿಜೆಪಿ ಗೆದ್ದರೆ ಹಾಲಿ ಸಿಎಂ ನೈಬ್ ಸಿಂಗ್ ಸೈನಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹರಿಯಾಣ ಪಕ್ಷದ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ. ಅನಿಲ್ ವಿಜ್ ಹೇಳಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ನಾಯಕನಾಗಿ ಅವರು ಹಾಗೆ ಮಾತನಾಡಿರಬಹುದು ಎಂದು ಹೇಳಿದರು.
Peepal Media
Peepal Media · ರಾಜಕೀಯ ವಿಭಾಗ
