ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಅಡ್ವೊಕೇಟ್ ಜನರಲ್ ನೇಮಕ ; ಬಿಜೆಪಿ ಬಗೆಗಿನ ಮೃದು ಧೋರಣೆಯವರ ಅವಶ್ಯಕತೆ ಇತ್ತೇ?

P

Peepal Media Desk • ರಾಜಕೀಯ

• 1 ನಿಮಿಷದ ಓದು

ಅಡ್ವೊಕೇಟ್ ಜನರಲ್ ನೇಮಕ ; ಬಿಜೆಪಿ ಬಗೆಗಿನ ಮೃದು ಧೋರಣೆಯವರ ಅವಶ್ಯಕತೆ ಇತ್ತೇ?

ಸಿದ್ದರಾಮಯ್ಯ ಸರ್ಕಾರ ರಚನೆಯಾಗಿ 50 ದಿನಗಳ ದಾಟಿ ಮುಂದೆ ಹೋಗ್ತಿದೆ. ಕೊಟ್ಟ ಭರವಸೆಗಳನ್ನ ಒಂದೊಂದಾಗಿ ಪೂರೈಸುವ ಪ್ರಯತ್ನದಲ್ಲಿದ್ದಾರೆ. ಇದರ ಜೊತೆ ಜೊತೆಗೆ ಆಯಕಟ್ಟಿನ ಜಾಗಗಳಲ್ಲಿ ತಮಗೆ ಬೇಕಾದ ವ್ಯಕ್ತಿಗಳನ್ನು ತಮಗೆ ಬೇಕಾದ ಜಾಗಗಳಲ್ಲಿ ಕೂರಿಸುವ ಕೆಲಸ ಕೂಡಾ ಭರದಿಂದಲೇ ಸಾಗಿದೆ. ಆದರೆ ಸರ್ಕಾರ ಆಯಕಟ್ಟಿನ ಜಾಗದಲ್ಲಿ ಬಿಜೆಪಿ ಪಕ್ಷದ ಬಗೆಗಿನ ಮೃದು ಧೋರಣೆ ಇರುವ ವ್ಯಕ್ತಿಯ ಆಯ್ಕೆ ಯಾಕೆ ಮಾಡಿದೆ ಎಂಬ ಅಪಸ್ವರ ಕಾಂಗ್ರೆಸ್ ಪಾಳಯದಿಂದಲೇ ಕೇಳಿ ಬರುತ್ತಿದೆ.

ಅಂದಹಾಗೆ 03.07.2023 ಕ್ಕೆ ಅನ್ವಯವಾಗುವಂತೆ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರನ್ನು ಆಯ್ಕೆ ಮಾಡಿದೆ. ಅವರಲ್ಲಿ ಪ್ರಮುಖವಾಗಿ ಶ್ರೀ ವಿಕ್ರಮ್ ಹುಯಿಲ್ ಗೋಳ, ಶ್ರೀ ಕೆಂಪಣ್ಣ, ಶ್ರೀ ಸಂತೋಷ್ ಎಸ್.ಗೋಗಿ, ಶ್ರೀಮತಿ ಪ್ರತಿಮಾ ಹೊನ್ನಾಪುರ, ಶ್ರೀ ಎಸ್.ಇಸ್ಮಾಯಿಲ್ ಜಬಿವುಲ್ಲಾ ಇವರುಗಳು ಸೋಮವಾರದ ದಿನ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡಿದ್ದಾರೆ.

ಇದರಲ್ಲಿ ಸಂತೋಷ್ ಎಸ್ ಗೋಗಿ ಅವರ ಬಗ್ಗೆ ಕಾಂಗ್ರೆಸ್ ಪಾಳಯದಲ್ಲೇ ಹೆಚ್ಚು ಅಪಸ್ವರ ಕೇಳಿ ಬಂದಿದೆ. ಇದಕ್ಕೆ ಮುಖ್ಯ ಕಾರಣ ಏನೆಂದರೆ ಈ ವ್ಯಕ್ತಿಯ ಬಿಜೆಪಿ ಮೇಲಿನ ಮೃದು ಧೋರಣೆ. ಅದೂ ಬಹಿರಂಗವಾಗಿ ತೋರಿಸಿಕೊಂಡಂತೆ ಇವರ ಟ್ವಿಟ್ಟರ್ ಖಾತೆಯೇ ಸಾಕ್ಷಿಯಾಗಿ ನಿಲ್ಲುತ್ತದೆ.

ಸಂತೋಷ್ ಗೋಗಿಯವರ ಟ್ವಿಟ್ಟರ್ ಖಾತೆ ಮತ್ತು ಅವರು ಅನುಸರಿಸುವ (ಫಾಲೋ Follow) ವ್ಯಕ್ತಿಗಳು ಬಹುತೇಕ ಬಿಜೆಪಿ ಮಂದಿಯೇ ಆಗಿದ್ದಾರೆ. ಅಲ್ಲಲ್ಲಿ ಅರವಿಂದ್ ಕೇಜ್ರಿವಾಲ್, ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿಯಂತಹ ವ್ಯಕ್ತಿಗಳನ್ನು ಹೊರತುಪಡಿಸಿ ಉಳಿದ 90 ಪ್ರತಿಶತ ಮಂದಿ ಬಿಜೆಪಿಯವರೇ ಎಂಬುದು ಆಶ್ಚರ್ಯಕರ ವಿಚಾರ.

ಅದರಲ್ಲಿ ನರೇಂದ್ರ ಮೋದಿ, ಅಮಿತ್ ಷಾ, ಜೆಪಿ ನಡ್ಡಾ, ಬಿ.ಎಲ್.ಸಂತೋಷ್, ಸ್ಮೃತಿ ಇರಾನಿ, ಸುಬ್ರಮಣಿಯನ್ ಸ್ವಾಮಿ, ಭಾಸ್ಕರ್ ರಾವ್, ಸದಾನಂದ ಗೌಡ, ಪಿಯೂಶ್ ಗೋಯಲ್, ಪ್ರಕಾಶ್ ಜಾವಡೇಕರ್, ನಳಿನ್ ಕುಮಾರ್ ಕಟೀಲ್, ದಿಗ್ವಿಜಯ್ ಸಿಂಗ್, ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್, ರಾಜನಾಥ್ ಸಿಂಗ್‌.. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಕೇವಲ ಫಾಲೋ ಮಾಡಿದ್ದರೂ ಸರಿ, ಹೋಗಲಿ ಎಂದು ಸುಮ್ಮನಾಗಬಹುದು. ಅವರು ಲೈಕ್ (Like) ಮಾಡಿರುವ ಪಟ್ಟಿಯನ್ನು ಹೋಗಿ ತಡಕಾಡಿದರೂ ಅಲ್ಲಿ ಸಿಗುವುದು ಕೂಡಾ ಬಿಜೆಪಿ ಮಂದಿಯದ್ದೇ.

ಅದೂ ಸರಿಯೆಂದುಕೊಂಡರೂ ಬಿ.ಎಲ್.ಸಂತೋಷ್ ರಂತಹ ವ್ಯಕ್ತಿ ಮಾಡಿದ ಟ್ವಿಟ್ ಗಳೂ ಸಹ ಸಂತೋಷ್ ಗೋಗಿಯವರ ಟ್ವಿಟ್ಟರ್ ಖಾತೆಯಲ್ಲಿ ರಿಟ್ವಿಟ್ (Re tweet) ಆಗಿರುವುದು ಸ್ಪಷ್ಟವಾಗಿ ಈ ವ್ಯಕ್ತಿ ಬಿಜೆಪಿ ಪರವಾಗಿರುವ ಮೃದು ಧೋರಣೆ ಹೊಂದಿದ ವ್ಯಕ್ತಿ ಎಂಬುದನ್ನು ಸಾಭೀತುಪಡಿಸುತ್ತಿದೆ. ‌ಸರ್ಕಾರಿ ಹುದ್ದೆ ಅದರಲ್ಲೂ ಅಡ್ವೊಕೇಟ್ ಜನರಲ್ ಹುದ್ದೆಗೆ ಆಯ್ಕೆ ಆಗುವಂತಹ ವ್ಯಕ್ತಿಗಳು ರಾಜಕೀಯವಾಗಿ ಇಷ್ಟು ಬಹಿರಂಗವಾಗಿ ಗುರುತಿಸಿಕೊಂಡಿರುವಾಗ ಕಾಂಗ್ರೆಸ್ ಸರ್ಕಾರದ ಆಯ್ಕೆಯ ಬಗ್ಗೆ ಸಹಜವಾಗಿ ಅಪಸ್ವರದ ಮಾತು ಕಾಂಗ್ರೆಸ್ ನ ಒಳಗೇ ಕೇಳಿ ಬಂದಿದೆ.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವಾಗಲೂ ಕಂಡೂ ಕಂಡು ಇಂತಹ ವ್ಯಕ್ತಿಗಳನ್ನೇ ಆಯ್ಕೆ ಮಾಡಿರುವುದು ಗೊತ್ತಿಲ್ಲದೆ ಮಾಡಿದೆಯೋ ಅಥವಾ ಗೊತ್ತಿದ್ದೇ ಮಾಡಿದೆಯೋ ಎಂಬ ಅನುಮಾನ ಕಾಡದಿರದು.

P

Peepal Media Desk

Peepal Media · ರಾಜಕೀಯ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version