ಸೆ.11 ಕ್ಕೆ ʼಅಪ್ಪುʼ ಕುರಿತ ಕವನ ಸಂಕಲನ ಬಿಡುಗಡೆ
ಲಿಂಕ್ ನಕಲಿಸಲಾಗಿದೆ ✓

ಬೆಂಗಳೂರು: ಡಾ. ಪುನೀತ್ ರಾಜ್‌ಕುಮಾರ್ ಕುರಿತ ಕವಿತೆ-ಗೀತೆಗಳ ಸಂಕಲನ ʼಶಿವ ಮೆಚ್ಚಿದ ಬೆಟ್ಟದ ಹೂʼ ಕೃತಿ ಸೆ. 11ರಂದು ಬಿಡುಗಡೆಯಾಗಲಿದೆ.
ರವಿರಾಜ್ ಸಾಗರ್ ಅವರ ಸಂಪಾದನೆಯ ʼಶಿವ ಮೆಚ್ಚಿದ ಬೆಟ್ಟದ ಹೂʼ ಕೃತಿಯನ್ನು ಅಶ್ವಿನಿ ಪುನೀತ್‌ರಾಜ್‌ಕುಮಾರ್ ಮತ್ತು ಪೂರ್ಣಿಮ ರಾಜ್‌ಕುಮಾರ್ ಅವರು ನಗರದಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಮದ್ಯಾಹ್ನ 2.30ರಿಂದ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಎಂದು ಈ ಕುರಿತು ರವಿರಾಜ್ ಸಾಗರ್ ತಿಳಿಸಿದ್ದಾರೆ.
ಅಪ್ಪು ಅಭಿಮಾನಿ ಸಾಹಿತಿಗಳ ಬಳಗ ಮತ್ತು ಕರ್ನಾಟಕ ಹಸೆ ಚಿತ್ತಾರ ಪರಿಷತ್ತು (ರಿ) ಸಹಭಾಗಿತ್ವದಲ್ಲಿ ನಡೆಯಲಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಐ ಎ ಎಸ್ ಅಧಿಕಾರಿಗಳೂ, ಸಿನಿಮಾ ನಿರ್ಮಾಪಕರೂ ಆದ ಡಾ.ಶಿವಪ್ಪ ಅವರು ವಹಿಸಿಕೊಳ್ಳಲಿದ್ದಾರಲ್ಲದೆ ಪುಸ್ತಕದ ಪರಿಚಯ ಮಾಡಿಕೊಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ, ಪ್ರಸಿದ್ಧ ಚಲನಚಿತ್ರ ಗೀತ ರಚನೆಕಾರರಾದ ಕವಿರಾಜ್, ಹೃದಯ ಶಿವ, ಶ್ರೀ ಶ್ರೀಧರ ವಿ ಸಂಭ್ರಮ, ಕಸಾಪದ ಮಾಜಿ ಗೌರವ ಕಾರ್ಯದರ್ಶಿಗಳಾದ ವ.ಚ.ಚನ್ನೇಗೌಡ, ನೇಕಾರ ಪ್ರಕಾಶನದ ರಾಮಕೃಷ್ಣ, ಹಿರಿಯ ಮಾರ್ಕೆಟಿಂಗ್ ಎಕ್ಸೆಕ್ಯುಟಿವ್ ಹರೀಶ್ ಕೆ ಎಚ್, ಸಿನಿಮಾ ನಟ ವೀರೆನ್ ಕೇಶವ, ಲೇಖಕರು, ಶಿಕ್ಷಕಕರು ಡಾ. ಸುನಿಲ್ ಕುಮಾರ್ ಪರೀಟ, ಲೇಖಕರಾದ ಡಾ.ಮಲಕಪ್ಪ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಅಪ್ಪು ನುಡಿನಮನ, ಗೀತಗಾಯನ, ಅಪ್ಪು ಚಿತ್ರೋತ್ಸವ ಮತ್ತು ಹಸೆ ಚಿತ್ತಾರ ಪ್ರದರ್ಶನ ನಡೆಯಲಿದೆ.
Peepal Media
Peepal Media · ಅಂಕಣ ವಿಭಾಗ
