ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಚನ್ನದಾಸರ ಜನಾಂಗದ ಬುರ್ರಕಥೆ ಕಲಾವಿದ ಎ. ಎಲ್. ವೆಂಕಟೇಶ್ 2026 ರ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

P

Peepal Media Desk • ವಿಶೇಷ

• 1 ನಿಮಿಷದ ಓದು

ಚನ್ನದಾಸರ ಜನಾಂಗದ ಬುರ್ರಕಥೆ ಕಲಾವಿದ ಎ. ಎಲ್. ವೆಂಕಟೇಶ್ 2026 ರ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

ಚಿಂತಾಮಣಿ ಅ.20: ಮೂಲತಃ ಕೋಲಾರ ಜಿಲ್ಲೆಯ ಗಡಿಗ್ರಾಮವಾದ ಅವಗಾನಪಲ್ಲಿ(ಅವಗಾನಹಳ್ಳಿ) ಗ್ರಾಮದ ಖ್ಯಾತ ಬುರ್ರಕಥೆ ಕಲಾವಿದ ಎ. ಎಲ್ ವೆಂಕಟೇಶ್ ಬುರ್ರಕಥಾ ಕಲಾವಿದರು ಕೋಲಾರ ಜಿಲ್ಲೆ. ಶ್ರೀನಿವಾಸಪುರ ತಾಲೂಕು, ಗೌನಿಪಲ್ಲಿ ಅಂಚೆಯವರಾದ *ಇವರು ಅಲೆಮಾರಿ ಬುಡಕಟ್ಟು ಜನಾಂಗದ ಚನ್ನದಾಸರ ಸಮುದಾಯದವರು. ಪ್ರಸ್ತುತ ಕರ್ನಾಟಕದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕೈವಾರ ತಾತಯ್ಯನ ಮಠದಲ್ಲಿ (ಶ್ರೀ ಯೋಗಿ ನಾರೇಯಣ ಮಠ, ಕೈವಾರ) ಎರಡೂವರೆ ದಶಕಗಳಿಂದ ಆಸ್ಥಾನ ಗಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2026 ನೇ ಸಾಲಿನ ಜನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.

‘ಬುರ್ರ’ ಎಂಬ ಪದವು ‘ತಂಬೂರಿ’ ಯನ್ನು ಸೂಚಿಸುತ್ತದೆ. ಇದು ಪ್ರದರ್ಶಕನ ಭುಜದ ಮೇಲೆ ಧರಿಸುವ ತಂತಿ ವಾದ್ಯವಾಗಿದೆ. ಬುರ್ರಕಥೆಗಳ ಕಥೆಗಳು ಮೂರು ವರ್ಗಗಳಾಗಿ ವಿಂಗಡಣೆಯಾಗಿವೆ. ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ರಾಜಕೀಯ. ಈ ಕಲಾ ರೂಪವನ್ನು ಮೂಲತಃ ಸಾಂಸ್ಕೃತಿಕ ಪಲ್ಲಟಕ್ಕೆ ಒಳಪಡಿಸಿದ್ದರೂ, ಇಂದು ಜನಪ್ರಿಯ ಕಥೆಗಳನ್ನು ಬರೆದು ಇವರು ಪ್ರದರ್ಶಿಸಿ ಸ್ಮರಣೆಯಲ್ಲಿಡುವಲ್ಲಿಯೂ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.

ಬುರ್ರಕಥೆ ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಜನಪ್ರಿಯ ಜಾನಪದ ಕಲೆಯಾಗಿದೆ. ಇದು ಪ್ರಾರ್ಥನೆಗಳು, ಏಕವ್ಯಕ್ತಿ ನಾಟಕ, ನೃತ್ಯ, ಹಾಡುಗಳು, ಕವಿತೆಗಳು ಮತ್ತು ಹಾಸ್ಯಗಳನ್ನು ಒಳಗೊಂಡಿರುವ ಒಂದು ನಿರೂಪಣಾ ಮನರಂಜನೆಯಾಗಿದೆ. ವಿಷಯವು ಹಿಂದೂ ಪೌರಾಣಿಕ ಕಥೆ ಅಥವಾ ಸಮಕಾಲೀನ ಸಾಮಾಜಿಕ ಸಮಸ್ಯೆಯಾಗಿರುತ್ತವೆ ಎಂದು ಅವಗಾನಹಳ್ಳಿಯ ಬುರ್ರಕಥಾ ಕಲಾವಿದ ಎ.ಎಲ್ ವೆಂಕಟೇಶ್ ಹೇಳುತ್ತಾರೆ.

ಇದುವರೆಗೂ 2260 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕಾಶಿ, ಅಯೋಧ್ಯಾ, ಮಥುರಾ, ದ್ವಾರಕಾ, ದೆಹಲಿ, ಸೋಮನಾಥ ಜ್ಯೋತಿರ್ಲಿಂಗ ಹೀಗೆ ಅನೇಕ ಕಡೆಗಳಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಜೊತೆಗೆ ಹ್ಯುಮನ್ ಗ್ಲೋಬಲ್ ಯೂನಿವರ್ಸಿಟಿ ದೆಹಲಿ ಗೌರವ ಡಾಕ್ಟರೇಟ್ ನೀಡಿ ಕೂಡ ಗೌರವಿಸಿದೆ ಎಂದು ಸ್ಮರಿಸುತ್ತಾರೆ.

ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು,* ಡಾ. ಎಂ. ಬೈರೇಗೌಡ ಹಾಗೂ ಡಾ. ವ್ಹಿ.ಎಲ್‌. ಪಾಟೀಲ ಅವರು ‘ಜಾನಪದ ತಜ್ಞ ಪ್ರಶಸ್ತಿ’ ಗೆ ಆಯ್ಕೆಯಾಗಿದ್ದಾರೆ. ವಾರ್ಷಿಕ ಗೌರವ ಪ್ರಶಸ್ತಿಗೆ 31 ಜಿಲ್ಲೆಗಳಿಂದ 30 ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ಇಪ್ಪತೈದು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. *ಮಂಡ್ಯದಲ್ಲಿ ಅಕ್ಟೋಬರ್‌ ತಿಂಗಳಾಂತ್ಯದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಚನ್ನದಾಸರ ಜನಾಂಗದ ಬುರ್ರಕಥೆ ಕಲಾವಿದ ಎ. ಎಲ್. ವೆಂಕಟೇಶ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ರಿಜಿಸ್ಟ್ರಾರ್ ಶೃತಿ ಎಂ ಅವರು ತಿಳಿಸಿದರು.

ಮಾಹಿತಿ: ಶಿವರಾಜ್ ಮೋತಿ, ವಕೀಲರು

P

Peepal Media Desk

Peepal Media · ವಿಶೇಷ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version