ಭಾರತಕ್ಕೆ ಮತ್ತೊಂದು ಪ್ರಶಸ್ತಿ ಗಿಟ್ಟಿಸಿಕೊಡುವ ಭರವಸೆಯಲ್ಲಿ ಕನ್ನಡಿಗ ಶ್ರೀಹರಿ
P
ಲಿಂಕ್ ನಕಲಿಸಲಾಗಿದೆ ✓

ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ ವಿಭಾಗದ 50 ಮೀ. ಬ್ಯಾಕ್ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್ ಫೈನಲ್ ಪ್ರವೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಭಾರತವು ಮತ್ತೊಂದು ಪ್ರಶಸ್ತಿ ತನ್ನದಾಗಿಸಿಕೊಳ್ಳುವ ಭರವಸೆ ಹೊಂದಿದೆ.
ಬೆಂಗಳೂರಿನ 21 ವರ್ಷದ ಈಜುಪಟು ಶ್ರೀಹರಿ 25.38 ಸೆಕೆಂಡ್ಗಳಲ್ಲಿ ಗುರಿ ತಲುಪಿ ಹೀಟ್ಸ್ನಲ್ಲಿ 8ನೇ ಸ್ಥಾನ ಪಡೆದುಕೊಂಡು ಫೈನಲ್ ಪ್ರವೇಶಿಸಿದರು. ಈ ಮೂಲಕ ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿಯೇ 100 ಮತ್ತು 50 ಮೀ. ಬ್ಯಾಕ್ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ವಿಷಯಗಳು:
#bengalure
#commanwealth game 2022
#games
#india
#kannada
#karnataka
#peepal
#peepalmedia
#writing
P
Peepal Media
Peepal Media · ಕ್ರೀಡೆ ವಿಭಾಗ
ಹಿಂದಿನ ಸುದ್ದಿ
