ಸೆಮಿ ತಲುಪಿದ ಲಕ್ಷ್ಯ ಸೇನ್: ಇತಿಹಾಸ ಸೃಷ್ಟಿಸಿದ ಯುವ ಶಟ್ಲರ್
ಲಿಂಕ್ ನಕಲಿಸಲಾಗಿದೆ ✓

ಭಾರತದ ಯುವ ಶಟ್ಲರ್ ಲಕ್ಷ್ಯ ಸೇನ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿದ ಮೊದಲ ಭಾರತೀಯ ಪುರುಷ ಷಟ್ಲರ್ ಎಂಬ ದಾಖಲೆಯನ್ನು ಅವರು ನಿರ್ಮಿಸಿದರು.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಲಕ್ಷ್ಯ ಸೇನ್ ಅವರು ಚೈನೀಸ್ ತೈಪೆಯ ಚೌ ತಿಯೆನ್ ಚೆನ್ ಅವರನ್ನು ಸೋಲಿಸಿದರು. ಭಾರಿ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಸೇನ್ 19-22, 21-15, 21-12 ಸೆಟ್ ಮೂಲಕ ಚೆನ್ ಅವರನ್ನು ಕಟ್ಟಿಹಾಕಿದರು.
16ನೇ ಸುತ್ತಿನ ಪಂದ್ಯದಲ್ಲಿ ಭಾರತದ ಎಚ್ಎಚ್ಎಸ್ ಪ್ರಣೋಯ್ ವಿರುದ್ಧ ಗೆದ್ದು ಕ್ವಾರ್ಟರ್ನಲ್ಲಿ ಲಕ್ಷ್ಯ ಸೇನ್ ಗರ್ಜಿಸಿದರು. ಮೊದಲ ಸೆಟ್ನಲ್ಲಿ ಹಿನ್ನಡೆ ಕಂಡಿದ್ದ ಭಾರತದ ಅಲೆ ಎರಡನೇ ಸೆಟ್ನಲ್ಲಿ ಪಂಜ ಎಸೆದರು. ಅವರು 21-15ರಿಂದ ಚೆನ್ ಮೇಲೆ ಪ್ರಾಬಲ್ಯ ಸಾಧಿಸಿದರು.
ವಿಜೇತರನ್ನು ನಿರ್ಧರಿಸುವ ಮೂರನೇ ಸೆಟ್ನಲ್ಲೂ ಲಕ್ಷ್ಯ ಸೇನ್ ಅದೇ ಆಕ್ರಮಣಕಾರಿ ಆಟ ಪ್ರದರ್ಶಿಸಿ ಎದುರಾಳಿಯನ್ನು ಮಣಿಸಿದರು. ಈ ಮೂಲಕ ಸೆಮೀಸ್ಗೆ ತಲುಪಿದ ಭಾರತದ ಮೂರನೇ ಷಟ್ಲರ್ ಎನಿಸಿಕೊಂಡರು. ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಅವರಿಗಿಂತ ಮೊದಲು ಈ ಸಾಧನೆ ಮಾಡಿದ್ದರು.
Peepal Media
Peepal Media · ಕ್ರೀಡೆ ವಿಭಾಗ
