ಪ್ರಗತಿ ಕಾಣದ ರಷ್ಯಾ–ಉಕ್ರೇನ್ ಶಾಂತಿ ಮಾತುಕತೆ: ಕೈದಿಗಳ ವಿನಿಮಯಕ್ಕೆ ಒಪ್ಪಿಗೆ

ಅಬುಧಾಬಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ಅಂತ್ಯ ಹಾಡುವ ಉದ್ದೇಶದಿಂದ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಅಬುಧಾಬಿಯಲ್ಲಿ ನಡೆದ ಎರಡು ದಿನಗಳ ತ್ರಿಪಕ್ಷೀಯ ಮಾತುಕತೆ ಯಾವುದೇ ಮಹತ್ವದ ಒಪ್ಪಂದವಿಲ್ಲದೆ ಮುಕ್ತಾಯಗೊಂಡಿದೆ. ಆದರೆ, ಎರಡೂ ದೇಶಗಳ ನಡುವೆ ದೊಡ್ಡ ಪ್ರಮಾಣದ ಯುದ್ಧ ಕೈದಿಗಳ ವಿನಿಮಯಕ್ಕೆ ಒಪ್ಪಿಗೆ ವ್ಯಕ್ತವಾಗಿದ್ದು, ಮುಂದಿನ ಹಂತದ ಮಾತುಕತೆಗೆ ಇದು ದಾರಿ ಮಾಡಿಕೊಡುವ ನಿರೀಕ್ಷೆಯಿದೆ. ಸುಮಾರು ಒಂಬತ್ತು ತಿಂಗಳ ಬಳಿಕ ರಷ್ಯಾ, ಉಕ್ರೇನ್ ಮತ್ತು ಅಮೆರಿಕದ ಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ನಡೆಸಿದ ಈ ಮಾತುಕತೆಯಲ್ಲಿ ಯುದ್ಧಾನಂತರದ ಯುರೋಪಿನ … Continue reading ಪ್ರಗತಿ ಕಾಣದ ರಷ್ಯಾ–ಉಕ್ರೇನ್ ಶಾಂತಿ ಮಾತುಕತೆ: ಕೈದಿಗಳ ವಿನಿಮಯಕ್ಕೆ ಒಪ್ಪಿಗೆ