ಬೇಲೂರು ಚನ್ನಕೇಶವ ದೇವಸ್ಥಾನ – Peepal Media

ಬೇಲೂರು ಚನ್ನಕೇಶವ ದೇವಸ್ಥಾನದಲ್ಲಿ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ
ಬೇಲೂರು : ಬೇಲೂರು ಹೇಳಿಕೇಳಿ ಪ್ರವಾಸಿಗರ ತಾಣ, ಪ್ರತಿದಿನ ಸಾವಿರಾರು ಪ್ರವಾಸಿಗರು ಬೇಟಿ ನೀಡಿ ಶ್ರೀ ಚನ್ನಕೇಶವನ ದರ್ಶನ ಪಡೆದು ಪುನೀತರಾಗಿ ಶಿಲ್ಪಕಲೆಗೆ ಮನಸೋತು ಕಣ್ತುಂಬಿಕೊಂಡು ಸಂತೋ಼ಷವಾಗಿ ತೆರಳುತ್ತಾರೆ. ಇಂತಹ ಶಿಲ್ಪಕಲೆಗಳ ತವರೂರಿಗೆ ಬರುವಂತಹ ಭಕ್ತ ಸಮೂಹ,ಪ್ರವಾಸಿಗರಿಗೆ ಅನೂಕೂಲವಾಗಲೆಂದು ದೇವಸ್ಥಾನದ ಆಡಳಿತ ಮಂಡಳಿಯಿಂದ ಸುಮಾರು 3 ಲಕ್ಷ ವೆಚ್ಚದಲ್ಲಿ ದೇವಾಲಯದ ಹಿಂಬಾಗ ಶುದ್ಧ ಕುಡಿವ ನೀರಿನ ಘಟಕ ನಿರ್ಮಿಸಲಾಗಿತ್ತು. ಆದರೆ ಈ ನೀರಿನ ಘಟಕವು ಪ್ರವಾಸಿಗರಿಗೆ ಬಳಕೆ ಆಗುವುದಕ್ಕಿಂತ ದುರಸ್ತಿ ಕಂಡಿದ್ದೇ ಹೆಚ್ಚಾಗಿದ್ದು ಬರುವ ಪ್ರವಾಸಿಗರು ಶುದ್ದವಾದ ನೀರು ಕುಡಿಯಲು ಪರದಾಡುವ ಪರಿಸ್ಥಿತಿ ನಿಮಾರ್ಣವಾಗಿದೆ ಈ ನೀರಿನ ಘಟಕವು ಸುಮಾರು 1 ವರ್ಷದಿಂದ ಕಾರ್ಯ ನಿರ್ವಹಿಸದೇ ಇರುವುದರಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಘಟಕದ ಯಂತ್ರೋಪಕರಣಗಳು ತುಕ್ಕು ಹಿಡಿಯುವಂತಹ ಪರಿಸ್ಥಿತಿ ನಿರ್ಮಾಣ ವಾಗಿದ್ದು ಯಾವ ಅಧಿಕಾರಿಗಳು ಅದರ ಬಗ್ಗೆ ಗಮನ ಹರಿಸದಿರುವುದು ವಿಪರ್ಯಾಸವಾಗಿದೆ. ಈಗಾಗಲೇ ಬೇಸಿಗೆ ಪ್ರಾರಂಭವಾಗಿದೆ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆ ಮುಗಿದು ರಜಾ ನೀಡಲಾಗುತ್ತಿದೆ, ಹಾಗೇಯೆ ಯುಗಾದಿ ಹಬ್ಬದಿಂದ 15 ಕ್ಕೂ ಹೆಚ್ಚು ದಿನ ವಿಶ್ವವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ಜಾತ್ರೆ ಶುರುವಾಗಿದೆ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ಬೇಟಿ ನೀಡುತ್ತಿದ್ದಾರೆ ಇಂತಹ ಸಂದರ್ಭದಲ್ಲಾದರೂ ಶುದ್ಧ ನೀರಿನ ಘಟಕ ಸರಿಪಡಿಸಿ ಬರುವ ಭಕ್ತಾಧಿಗಳಿಗೆ, ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಲ್ಲಿ ಜನಪ್ರದಿನಿಧಿಗಳು ಹಾಗೂ ಆಡಳಿತ ಮಂಡಳಿ ಮುಂದಾಗಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಶುದ್ಧ ಕುಡಿವ ನೀರಿನ ಘಟಕದ ನಿರ್ಮಾಣ ಮಾಡುವಾಗ ಕುಡಿಯಲು ಶುದ್ಧವಾದ ಬಿಸಿನೀರು ಮತ್ತು ತಣ್ಣೀರಿಗೆ ಪ್ರತ್ಯೇಕವಾದ ಯಂತ್ರ ಅಳವಡಿಸುತ್ತೇವೆ ಎಂದು ಹೇಳಲಾಗಿತ್ತು ಆದರೆ ಅದರಲ್ಲಿ ಬಿಸಿನೀರಿನ ಯಂತ್ರ ಜೋಡನಣೆಯೇ ಆಗಿರಲಿಲ್ಲ ಇನ್ನು ಇದರ ನಿರ್ವಹಣೆಯನ್ನು ಖಾಸಗಿಯವರಿಗೆ ಆಡಳಿತ ಮಂಡಳಿಯವರು ನೀಡಿದ್ದರು ಅವರು ಸರಿಯಾಗಿ ನಿರ್ವಹಸದೇ ಈ ರೀತಿಯಾಗಿದೆ. ಇನ್ನೇನೂ ಕೆಲವೇ ದಿನದಲ್ಲಿ ಶ್ರೀಯವರ ಜಾತ್ರೆ ಶುರು ಆಗುತ್ತಿದೆ ಲಕ್ಷಾಂತರ ಭಕ್ತಾಧಿಗಳು ಸೇರುತ್ತಾರೆ ಅಷ್ಟರೋಳಗೆ ಇದಕ್ಕೆ ಸಂಭಂದಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಬೇಗ ಇದನ್ನು ಸರಿ ಪಡಿಸಿ ವ್ಯವಸ್ಥಿತವಾಗಿ ಈ ಘಟಕವನ್ನು ದುರಸ್ತಿಗೊಳಿಸಿ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿದೆ.