000 people have been bitten by dogs – Peepal Media

40 ಸಾವಿರ ಜನರಿಗೆ `ನಾಯಿ ಕಡಿತ’ : ಆರೋಗ್ಯ ಇಲಾಖೆಯಿಂದ ಸ್ಪೋಟಕ ಮಾಹಿತಿ
ಬೆಂಗಳೂರು : ರಾಜ್ಯದಲ್ಲಿ ಪ್ರತಿ ತಿಂಗಳು ಸುಮಾರು 40,000 ನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತಿವೆ, ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮುಂದಿನ 3 ತಿಂಗಳವರೆಗೆ ಆಂಟಿ ರೇಬಿಸ್ ಲಸಿಕೆ ಮತ್ತು ರೇಬೀಸ್ ಇಮ್ಯುನೊಗ್ಲೋಬ್ಯುಲಿನ್ ಔಷಧಿಯ ಕೊರತೆಯಿಲ್ಲ ಎಂಬುದಾಗಿ ಸರ್ಕಾರ ಸ್ಪಷ್ಟ ಪಡಿಸಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ ‘ರೇಬೀಸ್’ ಅನ್ನು ‘ಅಧಿಸೂಚಿತ ರೋಗ’ (‘notifiable disease) ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿ ಪ್ರತಿ ತಿಂಗಳು ಐಎಚ್‌ಐಪಿ (ಇಂಟಿಗ್ರೇಟೆಡ್ ಹೆಲ್ತ್‌ ಇನ್ಸಾರ್ಮೇಶನ್ ಪ್ಲಾಟಾರ್ಮ್) ನಲ್ಲಿ ಸುಮಾರು 40,000 ನಾಯಿ ಕಡಿತದ ಪ್ರಕರಣಗಳು ವರದಿಯಾಗುತ್ತದೆ, ಈ ಎಲ್ಲಾ ಪುಕರಣಗಳಿಗೆ ಮಾರ್ಗಸೂಚಿಗಳ ಪ್ರಕಾರ ಜೀವ ಉಳಿಸುವ ಆಂಟಿ ರೇಬಿಸ್ ಲಸಿಕೆ ಮತ್ತು ರೇಬೀಸ್ ಇಮ್ಯುನೊಗ್ಲೋಬ್ಯುಲಿನ್ ಒದಗಿಸುವುದು ಕಷ್ಟಸಾದ್ಯವಾಗಿರುತ್ತದೆ ಎಂದಿದೆ.

ರಾಜ್ಯದ ಎಲ್ಲಾ ಆರೋಗ್ಯ ಸಂಸ್ಥೆಗಳಿಗೆ ಎಲ್ಲಾ ಔಷಧಿಗಳು ಮತ್ತು ಬಳಕೆಯ ವಸ್ತುಗಳನ್ನು ಒದಗಿಸಲು ಕೆಎಸ್‌ಎಂಎಸ್‌ಎಲ್ ನೋಡಲ್ ಏಜೆನ್ಸಿಯಾಗಿದೆ. ಎಆರ್‌ವಿ ಮತ್ತು ರೇಬೀಸ್ ಇಮ್ಯುನೊಗ್ಲೋಬುಲಿನ್ ರಾಜ್ಯದಲ್ಲಿ (“Essential Drug List ) ನ ಪಟ್ಟಿಯಲ್ಲಿ ಇರುತ್ತವೆ ಎಂದು ಹೇಳಿದೆ.

ರಾಜ್ಯದ “ಔಷಧ’ ತಂತ್ರಾಂಶದ ಮಾಹಿತಿಯ ಪ್ರಕಾರ, ಪ್ರಸ್ತುತ ರಾಜ್ಯದಾದ್ಯಂತ ಆಸ್ಪತ್ರೆಗಳಲ್ಲಿ 1,45,684 vials ಎಆರ್‌ವಿ ಲಭ್ಯವಿದೆ (ವರದಿಗಳನ್ನು ಲಗತ್ತಿಸಲಾಗಿದೆ) ಮತ್ತು ಕೆಎಸ್‌ಎಂಎಸ್‌ಸಿಎಲ್ ಸಂಸ್ಥೆಯು ಮುಂದಿನ ಎರಡು ವಾರಗಳಲ್ಲಿ 89,389 vials ರೇಬೀಸ್ ಇಮ್ಯುನೊಗ್ಲೋಬ್ಯುಲಿನ್ ಪೂರೈಕೆಗಾಗಿ ಅಧಿಕೃತ ಆದೇಶವನ್ನು ಹೊರಡಿಸಿದೆ. ಆದ್ದರಿಂದ ಈ ಆಂಟಿ ರೇಬಿಸ್ ಲಸಿಕೆ ಮತ್ತು ಇಮ್ಯುನೊಗ್ಲೋಬುಲಿನ್ ನ ಗರಿಷ್ಠ ಬಳಕೆ ಮತ್ತು ನಿರಂತರ ಪೂರೈಕೆಗಳ ಬಗ್ಗೆ ರಾಜ್ಯದ ಕಾರ್ಯಕ್ರಮ ವಿಭಾಗವು ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ನಿಯಮಿತವಾಗಿ ಜ್ಞಾಪನ ಪತ್ರಗಳನ್ನು ಹೊರಡಿಸಿದೆ. ಈ ಜೀವ ರಕ್ಷಕ ಲಸಿಕೆಗಳ ಸೂಕ್ತ ಬಳಕೆಗಾಗಿ ಹಾಗೂ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು ಆಸ್ಪತ್ರೆಗಳು ಸ್ಥಳೀಯವಾಗಿಯೇ ಖರೀದಿಸಬಹುದಾಗಿದೆ. (ಸುತ್ತೋಲೆ ಲಗತ್ತಿಸಲಾಗಿದೆ) ಕರ್ನಾಟಕ ರಾಜ್ಯದಲ್ಲಿ ರೇಬಿಸ್‌ ನಿರೋಧಕ ಲಸಿಕೆ ಅಥವಾ ರೇಬೀಸ್ ಇಮ್ಯುನೊಗೊಬ್ಯುಲಿನ್ ಕೊರತೆಯಿರುವುದಿಲ್ಲ. ಹಾಗೂ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

ಆದ್ದರಿಂದ ರಾಜ್ಯದಲ್ಲಿ ಎಆರ್‌ವಿ ಹಾಗೂ ರೇಬಿಸ್ ಇಮ್ಯುನೊಗ್ಲೋಬುಲಿನ್ ನ್ನು ಕೊರತೆ ಇಲ್ಲದಂತೆ ಹಾಗೂ ರಾಜ್ಯದ ಆಸ್ಪತ್ರೆಗಳಿಗೆ ಇವುಗಳ ಸರಬರಾಜು ನಿರಂತರವಾಗಿ ಇರುವಂತೆ ಇಲಾಖೆಯು ಸೂಕ್ತ ಕ್ರಮ ವಹಿಸಿದೆ ಎಂದಿದೆ.ಎರಡೂ ಔಷಧಿಗಳ ಪೂರೈಕೆಗೆ ರಾಜ್ಯದ ಆಸ್ಪತ್ರೆಗಳಲ್ಲಿ ಮುಂದಿನ 3 ತಿಂಗಳವರೆಗೆ ಯಾವುದೇ ಕೊರತ ಇರುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.