2022 – Peepal Media

ನಾಡಹಬ್ಬದ ಸಂಭ್ರಮದಲ್ಲಿ ಮೈಸೂರು
ಮೈಸೂರು: ಸಾಂಸ್ಕೃತಿಕ ನಗರ ಮೈಸೂರು ಅಲ್ಲದೆ, ನಾಡಿನಾದ್ಯಾಂತ ದಸರಾ ಹಬ್ಬದ ಸಂಭ್ರಮವನ್ನು ಕಳೆಗಟ್ಟಿದೆ. ವಿವಿಧ ಜಾನಪದ ಕಲಾತಂಡಗಳು ಉತ್ಸವದ ಮೆರುಗು ಹೆಚ್ಚಿಸಲಿವೆ.

ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ದಸರಾ ಉತ್ಸವದ ಪ್ರಮುಖ ಆಕರ್ಷಣೆ ಎಂದರೆ ಅದು ವಿಶ್ವವಿಕ್ಯಾತ ಜಂಬೂಸವಾರಿ ಮೆರವಣಿಗೆ.

ಅ.5ರಂದು ನಡೆಯಲಿರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿಯ ಸವಾರಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ನಮಿಸಲು, ಮೆರವಣಿಗೆ ವೈಭವ ಕಣ್ಣುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ.

ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.36ರಿಂದ 2.50ರೊಳಗೆ ನಂದಿಧ್ವಜ ಪೂಜೆ ನಡೆಯಲಿದೆ. ಸಂಜೆ 5.07ರಿಂದ 5.18ರೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಂಬೂಸವಾರಿಯನ್ನು ಉದ್ಘಾಟಿಸಲಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ಓದಿ: ಬಾಬಾಬುಡನ್ ಗಿರಿಯಲ್ಲಿ ಅರಳಿ ನಿಂತ ಗಿರಿಕನ್ಯೆ

ಮಲೆನಾಡಿನ ಬೆಟ್ಟ ಸಾಲಿನಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಿ ಕುರಿಂಜೆ ಅರಳಿದೆ. ತಂಡೋಪತಂಡವಾಗಿ ಪ್ರವಾಸಿಗರು ಇದನ್ನು ನೋಡಲು ಹೋಗಿ ಬರುತ್ತಿದ್ದಾರೆ. ನೀಲಿ ಕುರಿಂಜೆ ನೋಡಿದಾಗ ಆಗುವ ಅನುಭವವಾದರೂ ಎಂತಹುದು? ಹೂವುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ದಾಕ್ಷಾಯಿಣಿ ದಾಚಿ ಅವರು ತಮ್ಮ ಹೂವನುಭವವನ್ನು ಪೀಪಲ್‌ ಮೀಡಿಯಾ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ಪೀಪಲ್ ಮೀಡಿಯಾ ವಿಶೇಷ
ದಾಕ್ಷಾಯಿಣಿ ದಾಚಿ

https://peepalmedia.com/neelikurinje-flower-in-bababudangiri/

ಬಾಬಾಬುಡನ್‌ ಗಿರಿಯಲ್ಲಿ ಅರಳಿ ನಿಂತ ಗಿರಿಕನ್ಯೆ

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಡಿಸೆಂಬರ್ ಅಂತ್ಯದೊಳಗೆ BBMP ಚುನಾವಣೆ ನಡೆಸಿ : ಹೈಕೋರ್ಟ್ ಆದೇಶ
ಇದೇ ವರ್ಷದ (2022) ನವಂಬರ್‌ 3ರಷ್ಟರಲ್ಲಿ ಮೀಸಲಾತಿ ಪಟ್ಟಿಯನ್ನು ಸರಿಪಡಿಸಿ, ಡಿಸೆಂಬರ್‌ 31ರ ಒಳಗೆ ಚುನಾವಣೆ ನಡೆಸುವಂತೆ ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.

ಬಿಬಿಎಂಪಿ ವಾರ್ಡ್‌ ಪುನರ್ವಿಂಗಡಣೆಯಲ್ಲಿ ವಾರ್ಡ್ ವಾರು ಮೀಸಲು ನಿಗದಿಯಲ್ಲಿ ತಾರತಮ್ಯ ಆಗಿದೆ ಎಂಬ ರಿಟ್‌ ಅರ್ಜಿಗಳನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರ್ಕಾರ ಒಬಿಸಿ (ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿ) ಆಯೋಗಕ್ಕೆ ಅಂಕಿ ಅಂಶ ಒದಗಿಸಬೇಕು. 2022ರ ನವೆಂಬರ್ 30ರೊಳಗೆ ಮೀಸಲಾತಿ ಪಟ್ಟಿಯನ್ನು ಸರಿಪಡಿಸಿ ಪ್ರಕಟಿಸಬೇಕು ಮತ್ತು ಡಿಸೆಂಬರ್ 31ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ಆದೇಶಿಸಿದೆ.

ಬಿಬಿಎಂಪಿ ಚುನಾವಣೆ 2022 ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಸರ್ಕಾರ ಈ ಮೊದಲು ಹೊರಡಿಸಿದ್ದ 243 ವಾರ್ಡ್‌ಗಳ ಮೀಸಲು ಪಟ್ಟಿಯ ಅಧಿಸೂಚನೆಯನ್ನು ರದ್ದುಪಡಿಸಿದೆ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ 2022 ಮಂಡನೆ
ಬೆಂಗಳೂರು: ರಾಜ್ಯ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಎಸ್‌ಎಸ್‌ಎಲ್‌ಸಿ ವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಧ್ಯಯನ ಮಾಡಿ, ಉತ್ತೀರ್ಣರಾಗಿರುವುದನ್ನು ಕಡ್ಡಾಯಗೊಳಿಸುವ ಕುರಿತು ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ 2022 ನ್ನು ವಿಧಾನಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರು ಸದನದಲ್ಲಿ ಮಸೂದೆಯನ್ನು ಮಂಡಿಸಿದರು ಮಂಡಿಸಿದರು.

ಕನ್ನಡವನ್ನು ಅಧಿಕೃತ ರಾಜ್ಯ ಭಾಷೆ ಎಂದು ತೀರ್ಮಾನಿಸುವ ಪ್ರಸ್ತಾವ ಈ ಮಸೂದೆಯಲ್ಲಿದೆ. ಒಬ್ಬ ವ್ಯಕ್ತಿ ಅಥವಾ ಆತನ ಪೋಷಕರು 15 ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದಲ್ಲಿ, ಅವರಿಗೆ ಕನ್ನಡ ಓದಲು ಹಾಗೂ ಬರೆಯಲು ಬರುತ್ತಿದ್ದಲ್ಲಿ ಆತ ಕನ್ನಡಿಗ” ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಏನಿದೆ ಮಸೂದೆಯಲ್ಲಿ

ಕನ್ನಡ ಬಳಕೆ ಉಲ್ಲಂಘಿಸಿದರೆ 20 ಸಾವಿರರುಗಳ ದಂಡ

ಕನ್ನಡ ಭಾಷೆಯ ಬಳಕೆ ವಿಚಾರದಲ್ಲಿ ನಿಯಮ ಉಲ್ಲಂಘನೆಗೆ  20,000 ದವರೆಗೂ ದಂಡ.

ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಕನ್ನಡ ಭಾಷೆಯ ಬಳಕೆಗೆ ಉತ್ತೇಜನ.

ಎಸ್ಎಸ್ಎಲ್‌ಸಿವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡ್ಡಾಯ.

ಎಸ್ಎಸ್ಎಲ್‌ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣದಲ್ಲಿ ಮೀಸಲಾತಿ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು, ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲ ಕಡೆಗಳಲ್ಲಿ ಕನ್ನಡ ಭಾಷೆಯ ಪ್ರಚಾರಕ್ಕೆ ಉತ್ತೇಜನ.

ಇ- ಆಡಳಿತ ಮತ್ತು ಇ-ಟೆಂಡರ್ ಪ್ರಕ್ರಿಯೆಯಲ್ಲಿ ಕನ್ನಡದ ಬಳಕೆ.

ಕನ್ನಡಿಗರಿಗೆ ನಿಗದಿತ ಪ್ರಮಾಣದ ಉದ್ಯೋಗ ನೀಡುವ ಉದ್ದಿಮೆಗಳಿಗೆ ಜಮೀನು ಮಂಜೂರಾತಿ ಮತ್ತು ತೆರಿಗೆ ರಿಯಾಯಿತಿ

ಕನ್ನಡ ಕಲಿತರಷ್ಟೇ ಸರ್ಕಾರಿ ಉದ್ಯೋಗ: ಮಸೂದೆ ಮಂಡಿಸಿದ ಸರ್ಕಾರ #kannada #govtjob #karnatakahttps://t.co/C4DY7eUXZF
— Prajavani (@prajavani) September 23, 2022

ಇದನ್ನೂ ನೋಡಿ: https://www.youtube.com/watch?v=B6oAtXdzn-0

ಹಿಂಸಾ ಜಗತ್ತಿಗೆ ಬೇಕಿದೆ ಬುದ್ಧನ ಶಾಂತಿ ಮಂತ್ರ
ನಮ್ಮ ಸುತ್ತ ಹಬ್ಬುತ್ತಿರುವ ಯುದ್ಧ, ದೇವರು-ಧರ್ಮ ಮುಂತಾದ ಭಾವನೆಗಳನ್ನು ಕೆರಳಿಸುವ ವಿಷಯಗಳ ಮೇಲೆ ಜಗಳ- ಇಂಥ ಸೂಕ್ಷ್ಮ ಸಮಸ್ಯೆಗಳಿಗೆ ಪರಿಹಾರ ಬೇಕೆಂದರೆ ನಾವು ಒಮ್ಮೆ ಬುದ್ಧ ಚಿಂತನೆಯತ್ತ ನಮ್ಮ ಮನಸನ್ನು ಹೊರಳಿಸಿ ಮೌನವಾಗಿ ವಸ್ತುನಿಷ್ಠವಾಗಿ ಚಿಂತಿಸಬೇಕು ಎನ್ನುತ್ತಾರೆ ವಿಶ್ವ ಶಾಂತಿ ದಿನ (ಸೆ.೨೧)ದ ನೆನಪಲ್ಲಿ ಉಪನ್ಯಾಸಕಿ, ಕವಯಿತ್ರಿ ಜ್ಯೋತಿ ಗುರುಪ್ರಸಾದ್. ಓದಿ..ಪೀಪಲ್‌ ಮೀಡಿಯಾ ವಿಶೇಷ ಲೇಖನ.

2500 ವರ್ಷಗಳ ಹಿಂದೆಯೇ ಜೀವಿಸಿ, ಆ ಕಾಲದಲ್ಲೇ ಮನುಜ ಕುಲ ಶಾಂತಿಯಿಂದ ಜೀವಿಸ ಬಹುದಾದ ಜೀವನ ಕಲೆಯನ್ನು ಅನ್ವೇಷಿಸಿ ಸಾಧಿಸಿ ತೋರಿಸಿದವನು ಗೌತಮ ಬುದ್ಧ. ಈತನದು ಸಂತನ ಅರಿವು ಹಾಗೂ ವಿಜ್ಞಾನಿಯ ತರ್ಕಶುದ್ಧಿ ಬೆರೆತ ಧರ್ಮ ಮಾರ್ಗ.

ಸಂತನ ಅರ್ಹತೆ ಪಡೆದವನು ಬುದ್ಧ

ಧರ್ಮ ಎಂದರೆ ಧರ್ಮವಾಗಿರುವುದು ಎಂದಷ್ಟೇ ಅರ್ಥ. ಅದನ್ನೇ ಬುದ್ಧ ತನ್ನ ಸ್ಥಳೀಯ ಪಾಲಿ ಭಾಷೆಯಲ್ಲಿ ಬರೆದದ್ದು ‘ಧಮ್ಮ’ ಎಂದು. ಅಷ್ಟೇ ಹೊರತು, ಬುದ್ಧ ಮನುಷ್ಯ- ಮನುಷ್ಯರ ಸೌಹಾರ್ದ ಸಂಬಂಧವನ್ನು ಒಡೆಯುವಂತಹ ಯಾವ ಮತ ಪ್ರಚಾರಕನೂ ಆಗಿರಲಿಲ್ಲ. ತನ್ನನ್ನು ತಾನು ಅರಿಯುವ ಮನುಷ್ಯ ತನ್ನ ಮನೋ ವಿಕಾರಗಳಿಂದ  ಮುಕ್ತನಾಗಿ ಸ್ವಸ್ಥವಾದ ಜೀವನವನ್ನು ನಡೆಸುವಂತಾದರೆ, ಅದೇ ಜೀವಿತವಾಗಿರುವಾಗಲೇ ಸಿಗುವಂತಹ ಮುಕ್ತಿ, ಶಾಂತಿಗೆ ಸೇತು ಎಂಬುದೇ ಬುದ್ಧ ನೀಡಿದ ಸಾಧನೆಯ ತತ್ತ್ವ. ಈ ಸಾಧನೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟು ಸಾಮಾನ್ಯ ಮನುಷ್ಯನನ್ನು ದುಃಖದಿಂದ ಬಿಡುಗಡೆ ಗೊಳಿಸುವ ಉನ್ನತ ಮಾರ್ಗಕ್ಕಾಗಿ ಶ‍್ರಮಿಸಿದವನು. ಮತ್ತೊಬ್ಬರನ್ನು ದುಃಖದಿಂದ ಬಿಡುಗಡೆ ಗೊಳಿಸುವುದು ಎಂದರೆ, ನಾವು ಮೊದಲು ದುಃಖದಿಂದ ಬಿಡುಗಡೆ ಹೊಂದಿದವರಾಗಿ ಸಾಧಕರಾಗಿರಬೇಕು. ಬುದ್ಧ ಇಂತಹ ಪ್ರಯೋಗ ಶೀಲತೆಯನ್ನು ಹೊಂದಿದ್ದವನು. ಅರಮನೆಯ ಭೋಗದಲ್ಲಿ ರಾಜಕುಮಾರನಾಗಿ  ಮೆರೆಯ ಬಹುದಾಗಿದ್ದರೂ, ಅವನ ಅಂತರಂಗದ ಅರಿವಿನ ಕಣ್ಣು ಇದಕ್ಕೆ ಆಸ್ಪದ ಕೊಡದೆ, ಆ ಸುಖ ಭೋಗವನ್ನು ತ್ಯಜಿಸಿ, ಸರಳವಾದ ವಿರಕ್ತ ಜೀವನವನ್ನು ನಡೆಸಿ, ತನ್ನ ಸುತ್ತಲಿನ ದುಃಖಿತ ಜನರಿಗೆ ಮಾರ್ಗ ತೋರಲು ಅರ್ಹತೆ ಪಡೆಯಬೇಕೆಂದು  ಹೇಳಿಕೊಟ್ಟಿತು. ಹೀಗೆ ಸಂತನ  ಅರ್ಹತೆ ಪಡೆದವನು ಬುದ್ಧ.

ಎರಡು ರಾಜ್ಯಗಳ ನಡುವೆ ನೀರಿಗಾಗಿ ವ್ಯಾಜ್ಯವಿದ್ದು, ರಕ್ತಪಾತ ಸಂಭವಿಸುವಂತಹ ಚಿಂತಾಜನಕ ಸ್ಥಿತಿ ಸಂಭವಿಸಿದಾಗ, ತಾನು ಮೊದಲು ತನ್ನ ಸಿಂಹಾಸನವನ್ನು ಬಿಟ್ಟುಕೊಟ್ಟು, ಒಬ್ಬ ಸಾಮಾನ್ಯನಾಗಿ ಅವನು ಚಿಂತಿಸಿದನು. ನೀರು ಎರಡೂ ರಾಜ್ಯಗಳಿಗೂ ಮುಖ್ಯ; ಅದು ತಾಯಿಯಂತೆ. ತಾಯಿಯನ್ನು ಅರ್ಧ ಮಾಡಿಕೊಳ್ಳಲು ಸಾಧ್ಯವೇ? ಒಂದು ಮನೆಯ ಸಹೋದರರಾಗಿ ಮಾತ್ರ ಎರಡೂ ರಾಜ್ಯದವರು ಒಂದಾಗಿ ಬದುಕಲು ಕಲಿಯಬೇಕು ಎಂಬ ಸೌಹಾರ್ದ ತತ್ತ್ವವನ್ನು ಸಕಾಲದಲ್ಲಿ  ಅರ್ಹನಾಗಿ ಬೋಧಿಸಿ ಯುದ್ಧವನ್ನು ನಿಲ್ಲಿಸಿ ಜೀವದಾಯಿಯಾಗಿ ಶಾಂತಿ ಕಾಪಾಡಿದವನು ಗೌತಮ ಬುದ್ಧ.

ಅವನೇನು ಹುಟ್ಟುತ್ತಲೇ ಬುದ್ಧನಾಗಿರಲಿಲ್ಲ!

ಅವನೇನೂ ಹುಟ್ಟುತ್ತಲೇ ಬುದ್ಧನಾಗಿರಲಿಲ್ಲ; ಶಾಂತಿ ದೂತನೂ ಆಗಿರಲಿಲ್ಲ. ಆದರೆ, ಬೆಳೆಯುತ್ತ, ತನ್ನ ಸುತ್ತಲನ್ನು ಗಮನಿಸುತ್ತ, ತನ್ನ ಒಳಗನ್ನೂ ಗಮನಿಸಿಕೊಳ್ಳುತ್ತಾ, ಅವನು ‘ಮನುಷ್ಯ ದುಃಖಿತನಾಗಿದ್ದಾನೆ, ಆ ದುಃಖದ ಬಿಡುಗಡೆಗೆ ಅವನೇ ಸ್ವಂತ ಪ್ರಯತ್ನ ಮಾಡಬೇಕು’ ಎಂಬ ಕಾರಣವನ್ನು ಕಂಡುಕೊಂಡ. ನಿಸರ್ಗದ ನಡುವೆ ಅರಳಿ ಮರದ ಕೆಳಗೆ ಎರಡು ಕಾಲನ್ನು ಮಡಿಸಿ ಏಕಾಗ್ರತೆಯಲ್ಲಿ ಕಣ್ಣು ಮುಚ್ಚಿ ಕುಳಿತು ಸಂವೇದನೆಗಳನ್ನು ಗಮನಿಸಲು ಕಲಿತ ಗೌತಮನಿಗೆ ಧ್ಯಾನವೆಂದರೇನೆಂದು ತಿಳಿಯಿತು. ದುಃಖದ ಬಿಡುಗಡೆಗೆ ಮಾರ್ಗವೂ ಹೊಳೆಯಿತು. ಒಲುಮೆಯ ಹೆಂಡತಿ ಯಶೋಧರೆ, ಮುದ್ದಾದ ಮಗ ರಾಹುಲ, ಅರಮನೆಯ ವೈಭೋಗ ಎಲ್ಲವನ್ನೂ ತ್ಯಜಿಸಿ ಬುದ್ಧನಾಗಲು ಹೊರಟ ಸಿದ್ಧಾರ್ಥ ಗೌತಮನು ಪರೋಪಕಾರಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಡುವ ದೃಢ ನಿರ್ಧಾರ ಮಾಡಿದ್ದ. ಇಂತಹ ದೃಢ ಚಿತ್ತ ಸಿದ್ಧಿಯಾಗದೆ, ಯಾವುದೇ ತಪಸ್ಸು  ಸಾಧ್ಯವೇ?  ಸಂತನಾಗಲು ಋಷಿಯಾಗಲು ಸಾಧ್ಯವೇ? ತಾನು ಜ್ಞಾನೋದಯ ಪಡೆದುಕೊಂಡ ಮೇಲೆ ಮಾತ್ರ ಬುದ್ಧನೆನೆಸಿಕೊಂಡು ಅವನ ಪ್ರವಚನ ಬೋಧನೆ ಸುತ್ತಲಿನ ಪರಿಸರದ ಮೇಲೆ ಪ್ರಭಾವವಾಗಿ, ಶಿಷ್ಯ ವೃಂದ ಹುಟ್ಟಿಕೊಂಡಿತೇ ವಿನಃ ಗೌತಮಬುದ್ಧ ಯಾವುದೇ ಮಠ ಕಟ್ಟಲಿಲ್ಲ. ಯಾವ ಮಠದ ಪದವಿಯನ್ನೂ ಬಯಸಲಿಲ್ಲ. ಪಾರದರ್ಶಕವಾಗಿ ತನ್ನ ಶುದ್ಧ ನಡೆ ನುಡಿಯುಳ್ಳವನಾಗಿ ಪ್ರಪಂಚಕ್ಕೆ ‘ವಿಪಶ‍್ಶನ’ ಸಾಧನಾ ತತ್ತ್ವವನ್ನು ಒದಗಿಸಿದ.

‘ವಿಪಶ್ಶನ’ ಎಂದರೆ..

ʼವಿಪಶ್ಶನ’ ಎಂದರೆ ಇರುವುದನ್ನು ಇರುವ ಹಾಗೆಯೇ ನೋಡುವುದು ಎಂದರ್ಥ. ಇಂತಹ ನೋಟ ಅನುಭವಕ್ಕೆ ಬಂದಾಗ ಮನುಷ್ಯನಿಗೆ ತನ್ನ ಮಿತಿ ಅರ್ಥವಾಗಿ, ಅತಿಯಾಸೆಯ ಮನೋವಿಕಾರವನ್ನು ತನಗೆ ತಾನೇ ತ್ಯಜಿಸುತ್ತಾನೆ. ಮತ್ತೊಬ್ಬರಿಗೆ ಕೇಡು, ವಂಚನೆ ಮಾಡುವ ದಾರಿಯನ್ನು ಬಿಟ್ಟು ತನ್ನ ಪರಿಸರಕ್ಕೆ ಯಾವುದು ಒಳಿತೋ, ತನಗೆ ಯಾವುದು ಒಳಿತೋ, ಅದನ್ನು ಆಯ್ದುಕೊಂಡು ದುಃಖ ರಹಿತನಾಗಿ ಜೀವನ ಸಾಗಿಸಲು ಕಲಿಯುತ್ತಾನೆ. ಇಂತಹ ಬೋಧೆಯನ್ನು ಬುದ್ಧ ಕಿಸಾ ಗೌತಮಿಗೆ ಕಲಿಸಿ ಅವಳು ತನ್ನ ಮಗು ಸತ್ತ ಮೇಲೂ ವ್ಯರ್ಥವಾಗಿ ದುಃಖಿಸುವುದನ್ನು ಬಿಡಿಸಿದ. ‘ಈ ದೇಹ ಶಾಶ್ವತವಲ್ಲ, ಸಾವು ಎಲ್ಲರಿಗೂ ನಿಶ್ಚಿತ’ ಎಂಬ ವಾಸ್ತವ ಸತ್ಯವನ್ನು ಕಲಿಸಿದ. ಅಂಗುಲಿಮಾಲ ಎಂಬ ಕ್ರೂರಿಗೆ ಪ್ರೀತಿಯ ಅಪ್ಪುಗೆ ಕೊಟ್ಟು, ಮನುಷ್ಯನನ್ನು ಕೊಂದು ಜೀವಿಸುವ ರಾಕ್ಷಸತನ ಒಡ್ಡುವ ಅರಿವು ಮಾಡಿಕೊಟ್ಟು, ಅವನಲ್ಲಿ ಶಾಂತಿ ನೆಲೆಸುವಂತೆ ಮಾಡಿದ. ಚಕ್ರವರ್ತಿ ಅಶೋಕನಿಗೆ ಯುದ್ಧದ ಭೀಕರತೆಗೆ ರಕ್ತಪಾತದ ಶೋಕವನ್ನು ಅರಿವು ಮಾಡಿಕೊಟ್ಟು, ಯುದ್ಧವನ್ನು ತ್ಯಜಿಸುವಂತೆ ಮಾಡಿದ್ದು  ಬುದ್ಧನ ಶಾಂತಿ ಮಂತ್ರ.

ಬುದ್ಧ ಪ್ರಸ್ತುತವಾಗುವುದು ಹೀಗೆ..

ವಿಶ್ವಶಾಂತಿಯ ದಿನವಾಗಿ, ಅಹಿಂಸಾ ದಿನವಾಗಿ ಈ ಸೆಪ್ಟಂಬರ್ 21 ರಂದು ಬುದ್ಧ ಪ್ರಸ್ತುತವಾಗುವುದು ಅವನು ಅನುಸರಿಸಿದ ‘ಬೋಧ’ ಮಾರ್ಗದಿಂದಲೇ. ಅವನ ಪಾರದರ್ಶಕ ವ್ಯಕ್ತಿತ್ವ ಶಾಂತಿ ಮೂಲದ್ದಾಗಿತ್ತು. ದುಃಖ ಒಡ್ಡುವ ಸಂಗತಿಗಳಿಗೆ ಆತನ ಪ್ರತಿಕ್ರಿಯೆಯೇ ಇರುತ್ತಿರಲಿಲ್ಲ. ಈಗಲೂ ನಮ್ಮ ಸುತ್ತ ಹಬ್ಬುತ್ತಿರುವ ಯಾವುದೇ ಅಶಾಂತಿಗೆ, ಎಂದರೆ ಯುದ್ಧ, ʼದೇವರು-ಧರ್ಮʼ ಮುಂತಾದ ಭಾವನೆಗಳನ್ನು ಕೆರಳಿಸುವ ವಿಷಯಗಳ ಮೇಲೆ ಜಗಳ-ಇಂಥ ಸೂಕ್ಷ್ಮ ಸಮಸ್ಯೆಗಳಿಗೆ ಪರಿಹಾರ ಬೇಕೆಂದರೆ ನಾವು ಒಮ್ಮೆ ಬುದ್ಧ ಚಿಂತನೆಯತ್ತ ನಮ್ಮ ಮನಸನ್ನು ಹೊರಳಿಸಿ ಮೌನವಾಗಿ ವಸ್ತುನಿಷ್ಠವಾಗಿ ಚಿಂತಿಸಬೇಕು. ಆಗ ನಮ್ಮಲ್ಲಿ ಮಾನವತೆಯ ಅರ್ಥ ಹೊಳೆಯುತ್ತದೆ. ಬುದ್ಧನ ಮುಖವಾಡ ಹಾಕಿಕೊಂಡರೆ ನಾವು ಬುದ್ಧರಾಗಲು ಸಾಧ್ಯವಿಲ್ಲ. ಪ್ರತಿಮೆಗಳನ್ನು ಸೃಷ್ಟಿಸಬಹುದು. ಆದರೆ ಒಳಗಿಂದ ನಾವೇ ಆ ಪ್ರತಿಮೆಗಳಾಗುವುದು ಮುಖ್ಯ. ತೆರೆದ ಮನಸಿನಿಂದ ಅನಿಕೇತನರಾಗುವುದು ಮುಖ್ಯ. ಒಳಗೆ ನೂರೆಂಟು ರಾಜಕೀಯ ಪದವಿ, ಪಟ್ಟ, ಗದ್ದುಗೆಗಳ ಆಸ್ತಿ, ಅಂತಸ್ತುಗಳ ಅತಿಯಾಸೆ, ಕ್ರೌರ್ಯಗಳನ್ನು ಇಟ್ಟುಕೊಂಡು ಹೊರಗೆ ಮಾತ್ರ ಜನಹಿತಕ್ಕೆ ತಾನು ಬದ್ಧ ಎಂಬ ಸರಳತೆಯ ಮಾತಿನ ವೇಷ ಹಾಕಿದರೆ ಬರೀ ಪೊಳ್ಳು ಮಾತುಗಳಿಂದ ಶಾಂತಿ ಉಳಿಯುವುದಿಲ್ಲ. ಪ್ಲಾಸ್ಟಿಕ್ ಬೀಜ ಬಿತ್ತಿ ಭೂಮಿ ತಾಯಿಯ ಒಡಲಿನಿಂದ ಫಲ ತೆಗೆಯಲು ಸಾಧ‍್ಯವಿಲ್ಲ. ಅದು ಚಿಗುರದು. ಫಲ ತೆಗೆಯಬಲ್ಲ ಫಲವತ್ತಾದ ಶಾಂತಿ ಬೀಜವೇ ಬುದ್ಧ ಚಿಂತನೆ. ಅದೇ ಕರುಣೆ ತುಂಬಿದ ಹೃದಯ. ಇರುವುದೊಂದೇ ಭೂಮಿ. ಈ ಭೂಮಿಯ ಮೇಲಿನ ಸಮಸ್ತ ಜನರು ಶಾಂತಿಯಿಂದ ಇರಬೇಕೆಂದರೆ ಮೊಟ್ಟ ಮೊದಲು ‘ನಾವೆಲ್ಲರೂ ಮನುಜರು’ ಎಂಬ ಸೌಹಾರ್ದ ಭಾವ ಮೊಳೆಯಬೇಕು. ಕ್ರೌರ್ಯದ ಬೆಂಕಿಯನ್ನು ಶಮನ ಮಾಡುವ ಕರುಣೆಯ ಅಂತರ್ಜಲ ಸ್ಫುರಿಸಬೇಕು. ‘ಅಗ್ನಿಪಥ’ ಕ್ಕಿಂತ ಮುಖ್ಯವಾಗಿ ಇಂದು ‘ಬುದ್ಧಪಥ’ದ ಅಗತ್ಯ ಖಂಡಿತ ಇದೆ ಎಂದು ನನಗನಿಸುತ್ತದೆ. ಆಗ ದೇಶ ದೇಶಗಳ ನಡುವೆ ಯುದ್ಧಕ್ಕೆ ರಕ್ಷಣೆಯ ತಂತ್ರ ರೂಪಿಸುವ ಬದಲು ಶಾಂತಿ ಸಂಧಾನ ಮಾತುಕತೆಗೆ ಪ್ರಾಧಾನ್ಯತೆ ಸಿಗುತ್ತದೆ. ಆಗ ಬಡವರು, ದೀನ ದಲಿತರು ಮುಂತಾದ ನೊಂದವರಿಗೆ ನ್ಯಾಯ ಸಿಕ್ಕಿ ಸಮಾನತೆಯ ಹೂವು ಅರಳುತ್ತದೆ. ಆಗ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಪದಗಳು ತಮ್ಮ ಶೀಲವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ; ಪ್ರಜಾಪ್ರಭುತ್ವದ ಸತ್ವ ಉಳಿಯುತ್ತದೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಜ್ಯೋತಿ ಗುರುಪ್ರಸಾದ್‌
ಉಪನ್ಯಾಸಕಿ, ಕವಯಿತ್ರಿ, ಲೇಖಕಿ

2022 ಸರಣಿಯ ಎಲ್ ಜಿ ಗ್ರಾಮ್ ಲ್ಯಾಪ್ ಟಾಪ್ ಸರಣಿ ಮಾರುಕಟ್ಟೆಗೆ
ಬ್ಯಾಟರಿ ಬಾಳಿಕೆಗೆ ಹೆಸರಾದ ಗ್ರಾಮ್

ಏಪ್ರಿಲ್ 2022 ರಲ್ಲಿ ಪ್ರಾರಂಭವಾದ ಜಾಗತಿಕ ರೋಲ್‌ಔಟ್ ನಂತರ ಎಲ್ ಜಿ ಕಂಪನಿ  ತನ್ನ ಉನ್ನತ-ಮಟ್ಟದ, ಗ್ರಾಮ್ ಸರಣಿಯ ಹೊಸ ಮಾದರಿಯ ಲ್ಯಾಪ್ ಟಾಪ್ ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಮಾದರಿಗಳು ಅಲ್ಟ್ರಾ-ಲೈಟ್ ವಿನ್ಯಾಸಗಳು ಮತ್ತು ಅತ್ಯಾಧುನಿಕ ಸಾಫ್ಟ್‌ವೇರ್ ಮತ್ತು ತಂತ್ರಜ್ಞಾನದೊಂದಿಗೆ ಹಕರಿಗೆ ಅಸಾಧಾರಣ ಪೋರ್ಟಬಿಲಿಟಿಯ ಒಒದಗಿಸುತ್ತವೆ.

ನಾಲ್ಕು ಹೊಸ ಮಾದರಿಗಳು LG ಗ್ರಾಮ್ 2022 ಲ್ಯಾಪ್‌ಟಾಪ್ ಶ್ರೇಣಿಯಲ್ಲಿವೆ. LG ಗ್ರಾಮ್ 17, LG ಗ್ರಾಮ್ 16, LG ಗ್ರಾಮ್ 16T90Q-2in1, ಮತ್ತು LG ಗ್ರಾಮ್ 14 (ಮಾದರಿ 14T90Q) (ಮಾದರಿ 14Z90Q). LG G-ಸರಣಿಯಲ್ಲಿನ ಪ್ರತಿಯೊಂದು ಲ್ಯಾಪ್‌ಟಾಪ್ 12 ನೇ ಜೆನರೇಶನ್ ನ ಇಂಟೆಲ್ ಕೋರ್ CPU ಅನ್ನು ಹೊಂದಿವೆ.

ಈ ಲ್ಯಾಪ್‌ಟಾಪ್‌ಗಳು ಕಡಿಮೆ-ವೋಲ್ಟೇಜ್ ನ LPDDR5 RAM ಮತ್ತು Gen4 NVMe SSD ಗಳನ್ನು ಒಳಗೊಂಡಿರುತ್ತವೆ.  ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಇದು ಲ್ಯಾಪ್ ಟಾಪ್ ಕಾರ್ಯಕ್ಷಮತೆಯನ್ನು 22% ರಷ್ಟು ಹೆಚ್ಚಿಸುತ್ತದೆ. Intel Evo ಪ್ಲಾಟ್‌ಫಾರ್ಮ್ ಪ್ರಮಾಣೀಕೃತ 2022 LG ಗ್ರಾಮ್‌ನಲ್ಲಿ ದೀರ್ಘ ಬ್ಯಾಟರಿ ಬಾಳಿಕೆ ಆಕರ್ಷಕ ಅಂಶ ಎನ್ನಬಹುದು.

LG ಯ ಈ ಪ್ರೀಮಿಯಂ ಲ್ಯಾಪ್‌ಟಾಪ್‌ಗಳು  WQXGA (2,560 x 1,600) ರೆಸಲ್ಯೂಶನ್ IPS ಪ್ಯಾನೆಲ್, 16:10 ಆಕಾರ ಅನುಪಾತ ಮತ್ತು 99 ಪ್ರತಿಶತ DCI-P3 ಬಣ್ಣದ ಹರವು ನೀಡುತ್ತವೆ. LG ಯ ಈ IPS ಪ್ಯಾನೆಲ್‌ಗಳು ಈಗ ಆಂಟಿ-ಗ್ಲೇರ್ ಆಗಿದ್ದು, ಇವು ಪ್ರತಿಫಲನಗಳನ್ನು ಕಡಿಮೆ ಮಾಡುತ್ತದೆ ಮತ್ತು ಎಲ್ಲಾ ಬೆಳಕಿನ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತವೆ.

LG ಗ್ರಾಮ್ 2022 ಸರಣಿಯ ಲ್ಯಾಪ್ ಟಾಪ್ ಗಳು ವೀಡಿಯೊ ಕಾನ್ಫರೆನ್ಸಿಂಗ್ ಮತ್ತು ಪೂರ್ಣ HD ವೆಬ್‌ಕ್ಯಾಮ್‌ಗಳಿಗಾಗಿ ಫೇಸ್-ಲಾಗ್-ಇನ್ ಅನ್ನು ಒಳಗೊಂಡಿವೆ.

ಇವುಗಳ ಸಣ್ಣ, ಅತಿ ಹಗುರವಾದ ವಿನ್ಯಾಸಗಳು, ಕಾರ್ಯಕ್ಷಮತೆ ಅಥವಾ ಬಾಳಿಕೆಗೆ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರತಿ ಮಾದರಿಯು ಅದರ ಹೆಚ್ಚಿನ ಸ್ಕ್ರೀನ್-ಟು-ಬಾಡಿ ಅನುಪಾತಗಳು ಮತ್ತು ಬಾಳಿಕೆಯ ಕಾರಣದಿಂದಾಗಿ ಗಮನ ಸೆಳೆಯುತ್ತವೆ. ಎಲ್ಲಾ 2022 LG ಗ್ರಾಂ ಉತ್ಪನ್ನಗಳು ಪರಿಸರ ಸ್ನೇಹಿ ಪ್ಯಾಕೇಜಿಂಗ್‌ನಲ್ಲಿ ಬರುತ್ತವೆ, ಅದನ್ನು ತೆರೆದ ನಂತರ ಡೆಸ್ಕ್ ಕ್ಯಾಲೆಂಡರ್ ಮತ್ತು ಪೆನ್ಸಿಲ್ ಹೋಲ್ಡರ್ ಆಗಿ ಬಳಸಬಹುದು ಅನ್ನೋದು ಇನ್ನೊಂದು ವಿಶೇಷ.

ಹೊಸ LG Gram 2-in-1 16 ಇಂಚಿನ ಪರದೆಯ ಮಾಡೆಲ್, LG ಸ್ಟೈಲಸ್ ಪೆನ್ (Wacom AES 2.0) ಗೆ ಹೊಂದಿಕೆಯಾಗುವ ಸ್ಕೆಚಿಂಗ್ ಮತ್ತು ನೋಟ್-ಟೇಕಿಂಗ್ ಸಾಫ್ಟ್‌ವೇರ್ ನೊಂದಿಗೆ ಸಿಗಲಿದೆ.