40% govt – Peepal Media

40% ಕಮಿಷನ್ ಸರ್ಕಾರ ಕಿತ್ತೊಗೆಯಲು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವಂತೆ ಶ್ರಮಿಸಿ: ಮಲ್ಲಿಕಾರ್ಜುನ್‌ ಖರ್ಗೆ
ಬೆಂಗಳೂರು: 40% ಕಮಿಷನ್ ಸರ್ಕಾರ ಕಿತ್ತೊಗೆಯಲು, ಕಾಂಗ್ರಸ್‌ ಸರ್ಕಾರ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಕಾಂಗ್ರೆಸ್‌ ಪಕ್ಷದ ನಾಯಕರು, ಸದಸ್ಯರು ಹಾಗೂ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಈ ಕುರಿತು ಸರ್ವೋದಯ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಒಬ್ಬ ಕಾರ್ಮಿಕ ಕುಟುಂಬದಲ್ಲಿ ಹುಟ್ಟಿ ಬೆಳೆದು, ವಿದ್ಯಾರ್ಥಿ ಸಂಘಟನೆ ಕಟ್ಟಿ ಅದರ ಅಧ್ಯಕ್ಷನಾಗಿ ಜವಳಿ ಕಾರ್ಮಿಕರ ಸಂಘಗಳ ಜತೆ ಕೆಲಸ ಮಾಡಿ ಅಲ್ಲಿ ಆರಿಸಿ ಬಂದಿದ್ದೆ. ನಾವು ನಮ್ಮ ಸ್ವಂತ ಶಕ್ತಿ ಮೇಲೆ ಮುಂದೆ ಬಂದಾಗ ಬೇರೆಯವರು ಅದನ್ನು ಗುರುತಿಸುತ್ತಾರೆ. ಆಗ ನಿಮ್ಮಲ್ಲಿರುವ ಶಕ್ತಿಗೆ ಬೆಂಬಲ ಸಿಗುತ್ತದೆ ಎಂದು ಹೇಳಿದರು.

ನನ್ನ ಸಂಘಟನೆ ನೋಡಿ ಕಾಂಗ್ರೆಸ್ 1969ರಲ್ಲೀ ಇಬ್ಬಾಗ ಆದಾಗ ನಮ್ಮ ಜಿಲ್ಲೆಯ ಕನ್ವೀನರ್ ಧರ್ಮರಾವ್ ಅವರು ಗುಲ್ಬರ್ಗಾ ಬ್ಲಾಕ್ ಅಧ್ಯಕ್ಷರಾಗಿ ಪಕ್ಷ ಕಟ್ಟಲು ನೇರವಾಗಿ. ನಿಮಗೆ ಇತ್ತ ಭವಿಷ್ಯ ಇದೆ ಎಂದು ಪ್ರೋತ್ಸಾಹ ನೀಡಿದರು.

ದೇಶದಲ್ಲಿ ಕಾಂಗ್ರೆಸ್ ಬಲವಾಗಿ ಅಧಿಕಾರಕ್ಕೆ ಬರಲಿದೆ. ಇಂದಿರಾ ಗಾಂಧಿ ಅವರು ಬೆಳೆಯುತ್ತಾರೆ. ನೀವು ಪ್ರಮುಖರಾಗಿ ಇರಬೇಕು ಎಂದರು. ದೇವರಾಜ ಅರಸು ಅವರು ಕನ್ವೀನರ್ ಆಗಿದ್ದಾಗ ನಾನು, ಧರ್ಮ ಸಿಂಗ್ ಸೇರಿದಂತೆ 10-15 ಯುವಕರನ್ನು ಕರೆದು ಪಕ್ಷದ ಕೆಲಸ ಮಾಡಿ ನಿಮಗೆ ಪಕ್ಷದಿಂದ ಟಿಕೆಟ್ ನೀಡುವುದಾಗಿ ಭರವಸೆ ನೀಡಿದರು.

1969ರಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾದೆ ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ, ಕೆಪಿಸಿಸಿ ಉಪಾಧ್ಯಕ್ಷನಾಗಿ, ಕೆಪಿಸಿಸಿ ಅಧ್ಯಕ್ಷನಾಗಿ, ಸಿಡಬ್ಲ್ಯೂಸಿ ಸದಸ್ಯನಾಗಿ ಹಾಗೂ ಈಗ ಎಐಸಿಸಿ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ.

ನಾನು ಒಂದೇ ಬಾರಿಗೆ ಈ ಸ್ಥಾನಕ್ಕೆ ಜಿಗಿದಿಲ್ಲ. ಹಂತ ಹಂತವಾಗಿ ಬೆಳೆದಿದ್ದೇನೆ. ಎಲ್ಲವೂ ಒಂದೇ ಬಾರಿಗೆ ಆಗುವುದಿಲ್ಲ. ಇಂತಹ ಚಿಂತನೆ ಇರಬಾರದು. ಸೇವೆ ಮಾಡಬೇಕು, ಗುರಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ನಾವು ಅಧಿಕಾರಕ್ಕೆ ಪಕ್ಷ ಸೇರುವುದಿಲ್ಲ. ಪಕ್ಷದ ತತ್ವ ಸಿದ್ಧಾಂತ ಅರಿತು ಪಕ್ಷ ಅಧಿಕಾರಕ್ಕೆ ಬಂದಾಗ ಅದನ್ನು ಜಾರಿಗೊಳಿಸಲು ಕೆಲಸ ಮಾಡಬೇಕು. ಪಕ್ಷದ ತತ್ವ ಸಿದ್ಧಾಂತ ಬೆಳೆಸಲು ಶ್ರಮಿಸಬೇಕು. ನೆಹರೂ, ಅಂಬೇಡ್ಕರ್, ಗಾಂಧಿ ಅವರ ವಿಚಾರ ಅರಿಯದಿದ್ದರೆ ಮನಬಂದಂತೆ ನಡೆದುಕೊಳ್ಳುತ್ತಾರೆ. ಯಾರಿಗೆ ಬದ್ಧತೆ, ನಂಬಿಕೆ ಇರುತ್ತದೆಯೋ ಅವರು ಎಂದಿಗೂ ಪಕ್ಷ ಬಿಡುವುದಿಲ್ಲ ಎಂದರು.

ಹಲವು ಜನ ಮಂತ್ರಿ ಸ್ಥಾನ, ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂದು ಪಕ್ಷ ಬಿಡುತ್ತಾರೆ. ನಾವು ಕುರ್ಚಿಗಾಗಿ ಪಕ್ಷ ಸೇರಬಾರದು. ನಾವು ಇಂದು ನಂಬಿರುವ ತತ್ವ ಉಳಿಸಿ ಬೆಳೆಸಿಕೊಂಡು ಹೋಗಬೇಕು. ಆಮೂಲಕ ಪಕ್ಷಕ್ಕೆ ಶಕ್ತಿ ತುಂಬಬೇಕು. ನಮ್ಮ ವಿಚಾರಧಾರೆಗೆ ಧಕ್ಕೆ ಆದಾಗ ನನ್ನ ನೋವುಗಳನ್ನು ಬದಿಗಿಟ್ಟು ಪಕ್ಷದ ಜತೆಗೆ ಇರುತ್ತೇನೆ. ಇದನ್ನು ನಾವು ತಿಳಿಯಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಬಹಳ ಮಂದಿ ನೀವು 70 ವರ್ಷದಲ್ಲಿ ಏನು ಮಾಡಿದ್ದೀರಿ ಎಂದು ಕೇಳುತ್ತಾರೆ. ನಾವು 70 ವರ್ಷದಲ್ಲಿ ಏನೂ ಮಾಡದಿದ್ದರೆ ದೇಶ ಇಷ್ಟು ಗಟ್ಟಿಯಾಗಿ ಒಂದಾಗಿರಲು ಸಾಧ್ಯವಾಗುತ್ತಿರಲಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಆಳವಾಗಿ ಬೇರೂರಿರುವುದು, ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ಉಳಿಯಬೇಕು. ಆಗ ಮೋದಿ, ಶಾ ಉಳಿಯುತ್ತಾರೆ. ನಿಮಗೆ ಹಕ್ಕು, ಮೂಲಭೂತ ಅಧಿಕಾರ ಸಿಗುತ್ತದೆ. ನಾವು ಹೆದರಿ ಮನೆಯಲ್ಲಿ ಕೂತರೆ ಏನೂ ಆಗುವುದಿಲ್ಲ. ಈ ದೇಶ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಬೇಕಾದರೆ ನೀವು ಜನರನ್ನು ಸಂಘಟಿಸಬೇಕು. ಆಗ ದೇಶದಲ್ಲಿರುವ ಕೆಟ್ಟ ಸರ್ಕಾರ ಕಿತ್ತೊಗೆಯಲು ಸಾಧ್ಯ ಎಂದರು.

ಮೋದಿ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಮನಬಂದಂತೆ ಮಾತನಾಡುತ್ತಾರೆ. ಇವರು ಮೋದಿ ಅವರ ಶಾಲೆಯಲ್ಲಿ ಕಲಿತವರೆ? ಇವರು ನಾವು ಮಾಡಿರುವ ಶಾಲೆ, ಕಾಲೇಜಿನಲ್ಲಿ ಓದಿ, ನಮ್ಮ ಸಾರ್ವಜನಿಕ ಉದ್ದಿಮೆಯಲ್ಲಿ ದುಡಿದು ಬೆಳೆದಿದ್ದಾರೆ. ಆದರೂ ಇವರು ನೀವು ಏನು ಮಾಡಿದ್ದೀರಿ ಎಂದು ಕೇಳುತ್ತಾರೆ ಎಂದು ಕಿಡಿಕಾರಿದರು.

ನಾವು ದೇಶ ರಕ್ಷಣೆ ಮಾಡಿ ದೇಶವನ್ನು ಒಗ್ಗಟ್ಟಾಗಿ ಇಟ್ಟಿದ್ದೇವೆ. ಬಾಂಗ್ಲಾ ಪ್ರತ್ಯೇಕ ದೇಶ ಮಾಡಿದ್ದು ಇಂದಿರಾ ಗಾಂಧಿ. ದೇಶದ ವಿದೇಶಾಂಗ ನೀತಿ ಮಾಡಿದ್ದು ನೆಹರೂ ಅವರು. ಪದೇ ಪದೇ ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಏನು ಮಾಡಿದ್ದಾರೆ ಎಂದು ಟೀಕೆ ಮಾಡುವುದಲ್ಲ. ಸೋನಿಯಾ ಗಾಂಧಿ ಅವರು ಮಾಡಿರುವ ತ್ಯಾಗ ನೀವು ಮಾಡಿಲ್ಲ. ಯುಪಿಎ ಮೊದಲ ಸರ್ಕಾರ ಸಮಯದಲ್ಲಿ ಸೋನಿಯಾ ಗಾಂಧಿ ಅವರಿಗೆ ಪ್ರಧಾನಿ ಆಗುವಂತೆ ಕೇಳಿದಾಗ ನಾನು ಪ್ರಧಾನಿ ಆಗುವುದಿಲ್ಲ ಎಂದು, ದೇಶದ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಸ್ಥಾನ ತ್ಯಾಗ ಮಾಡಿದರು ಎಂದು ಹೇಳಿದರು.

ನಾವು ಒಂದು ಚೇರ್ಮನ್, ಮಂತ್ರಿ ಸ್ಥಾನ, ಪಕ್ಷದ ಹುದ್ದೆ ಸಿಗಲಿಲ್ಲ ಎಂದರೆ ಮುನಿಸಿಕೊಳ್ಳುತ್ತೇವೆ. ಆ ಕುಟುಂಬದ ತ್ಯಾಗ ಬಲಿದಾನ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಪ್ರಾಣತ್ಯಾಗ, ರಾಜಕೀಯದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ತ್ಯಾಗ ಮಾಡಿದ್ದಾರೆ. ಅವರು ಪ್ರಧಾನಿ ಆಗಬಹುದಿತ್ತು ಆದರೆ ಆಗಲಿಲ್ಲ. ಗಾಂಧಿ ಕುಟುಂಬ ಸದಸ್ಯರೇ ಅಧ್ಯಕ್ಷರಾಗಿ ಇರಬೇಕು ಎಂದು ಕೇಳಿದೆವು. ಆಗ ನಾವು ಆಗುವುದಿಲ್ಲ. ನೀವು ಚುನಾವಣೆ ನಡೆಸಿ ಅಲ್ಲಿ ಗೆಲ್ಲುವವರು ಪಕ್ಷದ ಅಧ್ಯಕ್ಷರಾಗುತ್ತಾರೆ ಎಂದು ಹೇಳಿದವರು ತ್ಯಾಗಮೂರ್ತಿ ಸೋನಿಯಾ ಗಾಂಧಿ  ಎಂದು ಮಲ್ಲಿಕಾರ್ಜುನ್‌ ಖರ್ಗೆ ತಿಳಿಸಿದರು.

ಅವರು ಪಕ್ಷದಲ್ಲಿ ಒಗ್ಗಟ್ಟು ಇರಬೇಕು, ಬೆಳೆಯಬೇಕು ಎಂದು ಈ ತ್ಯಾಗ ಮಾಡಿದ್ದಾರೆ. ಇಂದು ಆರ್ ಎಸ್ ಎಸ್, ಮೋದಿ, ಶಾ ಅವರು ಕಿರುಕುಳ ನೀಡುತ್ತಿದ್ದಾರೆ. ಪದೇ ಪದೆ ನಮ್ಮ ಪಕ್ಷದ ವಿರುದ್ಧ ಮಾತನಾಡುತ್ತಾರೆ. ಗಾಂಧಿ ಕುಟುಂಬ ಈ ಚುನಾವಣೆ ನಿಲ್ಲಲಿಲ್ಲ, ಆದರೂ ಬಿಜೆಪಿ ಅವರು ಮಾತನಾಡುವುದು ನಿಲ್ಲಿಸಲ್ಲ. ನಮ್ಮ ಪಕ್ಷದ ಬಗ್ಗೆ ನಿಮಗೆ ಯಾಕೆ ಚಿಂತೆ? ದೇಶ ಮುನ್ನಡೆಸುವ ಬಗ್ಗೆ ಗಮನಹರಿಸಿ ಎಂದು ಹೇಳಿದರು.

ಈ ದೇಶದಲ್ಲಿ  ಸ್ವತಂತ್ರ್ಯ ಸಿಗುವ ಮುನ್ನ 400 ಕಾಲೇಜು ಇದ್ದವು. ಇಂದು 11 ಲಕ್ಷ ಶಾಲೆ ಕಾಲೇಜು ಇವೆ. 1947ದಲ್ಲಿ 2 ಲಕ್ಷ ಪ್ರಾಥಮಿಕ ಶಾಲೆ ಇದ್ದವು. 2014ರಲ್ಲ 7 ಲಕ್ಷ ಪ್ರಾಥಮಿಕ ಶಾಲೆ ಇದ್ದವು. 877 ಹೈಸ್ಕೂಲ್ ಇದ್ದವು ಇಂದು 1 ಲಕ್ಷ ಹೈಸ್ಕೂಲ್ ಇದ್ದಾವೆ. 27 ವಿವಿ ಇದ್ದವು ಇಂದು 723 ವಿವಿ ಗಳಿವೆ ಎಂದು ಮಾಹಿತಿ ನೀಡಿದರು.

ಅಕ್ಷರಸ್ಥ ಪ್ರಮಾಣ ಶೇ16 ರಷ್ಟಿತ್ತು 2014ರಲ್ಲಿ ಇದು ಶೇ.74 ರಷ್ಟು ಆಯಿತು. ಪರಿಶಿಷ್ಟ ಜಾತಿ ಪಂಗಡದವರು 08%ರಷ್ಟು ಅಕ್ಷರಸ್ಥರು ಇದ್ದರು. ಇಂದು 67% ಇದ್ದಾರೆ ಎಂದರು.

ಸ್ವಾತಂತ್ರ ಪೂರ್ವದಲ್ಲಿ 4 ಲಕ್ಷ ಕಿಮೀ ಇದ್ದ ರಸ್ತೆ ಇಂದು 54 ಲಕ್ಷ ಕಿಮೀ ರಸ್ತೆ ಮಾಡಿದ್ದೇವೆ. ಸರ್ಕಾರಿ ನೌಕರಿ ವಿಚಾರ. ವಾಡಿ ಗದಗ 2200 ಕೋಟಿ ಯೋಜನೆಗೆ ನಾವು ನಿರ್ಧರಿಸಿದೆವು. ಅದಕ್ಕೆ ಅಂದಿನ ಸಿಎಂ ಸಿದ್ದರಾಮಯ್ಯ ಅಡಿಗಲ್ಲು ಹಾಕಬೇಕಿತ್ತು. ಆಗ ನಾನು ಈ ಯೋಜನೆಗೆ ಗೈರಾದೆ. ಕಾರಣ ಕೋಲಾರದಲ್ಲಿ ರೈಲ್ವೆ ಬೋಗಿ ಯೋಜನೆ ಮಂಜೂರು ಮಾಡಲು ಗೈರಾದೆ. ಆದರೆ ಮೋದಿ ಒಂದು ರೈಲು ಚಾಲನೆಗೂ ಹೋಗಿ ಪ್ರಚಾರ ಪಡೆಯುತ್ತಾರೆ. ನನ್ನ ಕಾಲದಲ್ಲಿ ಅಂತಹ 27 ರೈಲು ಆರಂಭಿಸಿದ್ದೇನೆ. ಇಂತಹ ದೊಡ್ಡ ಯೋಜನೆ ಕೊಟ್ಟರೂ ಪ್ರಚಾರ ಪಡೆಯಲಿಲ್ಲ ಎಂದು ಹೇಳಿದರು.

ಗುಜರಾತ್ ಚುನಾವಣೆಯಲ್ಲಿ ಕಳೆದ 9 ದಿನದಿಂದ ಪ್ರಚಾರ ಮಾಡುತ್ತಿದ್ದಾರೆ. ಯಾವ ಮಟ್ಟಕ್ಕೆ ಎಂದರೆ ಮೋರ್ಬಿ ಸೇತುವೆ ರಿಪೇರಿಗೆ 2 ಕೋಟಿ ನೀಡಲಾಗಿತ್ತು. ಇವರು 2 ಕೋಟಿ ಯೋಜನೆ ಉದ್ಘಟನೆ ಮಾಡಿದರು. ಇವರ ಕೈಗುಣವೋ ಏನೋ ಉದ್ಘಾಟನೆ ಮಾಡಿದ 5 ದಿನದಲ್ಲೇ ಸೇತುವೆ ಬಿದ್ದು ಹೋಯಿತು. 138 ಜನ ಸತ್ತರು. ಇದಕ್ಕೆ ಯಾರು ಜವಾಬ್ದಾರಿ ಹೊತ್ತರು? ಯಾರಾದರೂ ರಾಜೀನಾಮೆ ಕೊಟ್ಟರು? ಅದೇ ಪಶ್ಚಿಮ ಬಂಗಾಲದಲ್ಲಿ ಸೇತುವೆ ಬಿದ್ದಾಗ ದೇವರು ಇವರ ಆಡಳಿತ ನೋಡಿ ಬೇಸತ್ತು ಸೇತುವೆ ಕೆಡವಿದ್ದಾನೆ ಎಂದು ಹೇಳಿದ್ದರು ಎಂದರು.

ನಾವು ಮಾಡಿದ ಪ್ರತಿ ಕೆಲಸಕ್ಕೆ ಅಡ್ಡಗಾಲು ಹಾಕಿದ್ದಾರೆ. ಹೆಸರು ಬದಲಿಸುತ್ತಾರೆ. ನೀವು ಸತ್ಯನಾಶ ಮಾಡುತ್ತಿದ್ದೀರಿ. ನಾವು ಸತ್ಯದ ಪರವಾಗಿದ್ದೇವೆ. ನೀವು ಸುಳ್ಳು ಹೇಳಿ ಬದುಕುತ್ತಿದ್ದೀರಿ. ಮತ ಪಡೆಯಲು ಜಾತಿ ಧರ್ಮ ನಡುವೆ ದ್ವೇಷ ಬಿತ್ತುತ್ತಿದ್ದಾರೆ. ಮಹಿಳೆ ಮೇಲಿನ ದೌರ್ಜನ್ಯ ವಿರುದ್ಧ ಒಂದು ದಿನ ಧ್ವನಿ ಎತ್ತಿಲ್ಲ. ಮಾತೆತ್ತಿದರೆ ಗುಹೆ, ಮಂದಿರದಲ್ಲಿ ಪ್ರಾರ್ಥನೆ ಮಾಡುವುದಾಗಿದೆ. ದೇವರ ಪೂಜೆ ನಿಮ್ಮ ಮನೆಯಲ್ಲಿ ಮಾಡಿ. ಉಪವಾಸದಲ್ಲಿ ಜನ ಸಾಯಿತ್ತಿದ್ದು, ನಿರುದ್ಯೋಗ ಹೆಚ್ಚುತ್ತಿದೆ. ಬೆಲೆ ಏರಿಕೆಯಾಗಿದೆ. ರೂಪಾಯಿ ಮೌಲ್ಯ ಕುಸಿಯುತ್ತಿದೆ. ಈ ಬಗ್ಗೆ ಮಾತನಾಡುವ ಬದಲು ಕಾಂಗ್ರೆಸ್ ವಿರುದ್ಧ ಮಾತನಾಡುತ್ತಾರೆ ಎಂದು ಟೀಕಿಸಿದರು.

ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು 3500 ಕಿಮೀ ಪಾದಯಾತ್ರೆ ಆರಂಭಿಸಿದ ನಂತರ ಬಿಜೆಪಿಗೆ ನಡುಕ ಹುಟ್ಟಿದೆ. ಈಗ ರಾಹುಲ್ ಗಾಂಧಿ ಅವರ ಬಗ್ಗೆ ಜನರ ಪ್ರೀತಿ ಕಂಡು ದಿಗಿಲು ಹುಟ್ಟಿದೆ.

ನೀವು ಕಾಂಗ್ರೆಸ್ ಪಕ್ಷದ ಬಗ್ಗೆ ಯೋಚಿಸಬೇಡಿ. ನಾವು ಒಟ್ಟಾಗಿದ್ದೇವೆ. ನಮ್ಮನ್ನು ಬೇರೆ ಮಾಡಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಎಲ್ಲಾ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಸರ್ಕಾರಿ ಹುದ್ದೆ ತುಂಬುತ್ತೆವೆ. ನಾವು ಅಧಿಕಾರದಲ್ಲಿದ್ದಾಗ ಶಿಕ್ಷಣ ಇಲಾಖೆಯಲ್ಲಿ 18 ಸಾವಿರ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡಿದ್ದೆವು. ದೇಶದಲ್ಲಿ 14 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇವೆ. ಅವುಗಳನ್ನು ಯಾಕೆ ತುಂಬುತ್ತಿಲ್ಲ. ಕಾರಣ ಬಡವರು ದಲಿತರಿಗೆ ಉದ್ಯೋಗ ಸಿಗುತ್ತದೆ. ಹೀಗಾಗಿ ಅವರು ತುಂಬಲ್ಲ ಎಂದು ಹೇಳಿದರು.

ಯುವಕರಿಗೆ ಕೆಲಸ ಕೊಡಿ. ಬಡವರಿಗೆ ಹಣ ಬಂದರೆ ಅವರು ಹೊಟ್ಟೆ ತುಂಬಾ ಊಟ ಮಾಡುತ್ತಾರೆ. ರೈಲ್ವೆಯಲ್ಲಿ 1.34 ಲಕ್ಷ ಹುದ್ದೆ ತುಂಬುವುದಾಗಿ ಹೇಳಿದ್ದಾರೆ. ಈ ಹುದ್ದೆ ಹಲವು ವರ್ಷಗಳಿಂದ ಖಾಲಿ ಇದ್ದರೂ ತುಂಬಲಿಲ್ಲ. ಆದರೆ ಸಂಸತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈಗ ತುಂಮಬುವುದಾಗಿ ಹೇಳುತ್ತಿದ್ದಾರೆ ಎಂದರು.

ಹಿಮಾಚಲ, ಗುಜರಾತ್, ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿ ಹೇಳುತ್ತಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. 8 ವರ್ಷದಲ್ಲಿ 16 ಕೋಟಿ ಉದ್ಯೋಗ ಎಲ್ಲಿ? ಹೊಸ ಉದ್ಯೋಗ ಸೃಷ್ಟಿಸುವುದಿರಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳೇ ತುಂಬುತ್ತಿಲ್ಲ ಎಂದು ವ್ಯಂಗಿಸಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಬೇಕಾದ ಅನುದಾನ, ಸಿದ್ದರಾಮಯ್ಯ ಅವರ ಕಾಲದಲ್ಲಿ ತರಲಾದ ಎಸ್ ಸಿಪಿ ಟಿಎಸ್ ಪಿ ಯೋಜನೆ ಅನುದಾನ ನೀಡದೆ, ಅವುಗಳನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು

ನನಗೆ ಇಂದು ನೀವು ಗೌರವಿಸಿ ಅಭಿನಂದಿಸಲು ಈ ಕಾರ್ಯಕ್ರಮ ಮಾಡುತ್ತಿದ್ದೀರಿ. ನೀವು ನನಗೆ ಯಾವಾಗ ಗೌರವ ನೀಡುತ್ತೀರಿ ಎಂದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಾಗ ಗೌರವ ಸಲ್ಲಿಸಿದಂತೆ ಆಗುತ್ತದೆ. ಈ ಹಾರ ತುರಾಯಿ ಸಾಮಾನ್ಯ. ನನಗೆ ನಿಜವಾಗಿ ಗೌರವ ಸಲ್ಲುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ. ಹೀಗಾಗಿ ವೇದಿಕೆ ಮೇಲೆ ಇರುವ ನಾಯಕರು ತಮ್ಮ ಸಣ್ಣ ಪುಟ್ಟ ವ್ಯತ್ಯಾಸ ಮರೆತು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

40% ಕಮಿಷನ್ ಸರ್ಕಾರ ಕಿತ್ತೊಗೆಯಲು ನಮ್ಮ ಸರ್ಕಾರ ಬರಬೇಕು. ಅದಕ್ಕಾಗಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು. ಅನೇಕ ಕಾರ್ಯಕ್ರಮಗಳು ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ನೀಡಿದ್ದೀರಿ. ಈಗ ಮತ್ತೆ ಅದೇ ಕೆಲಸ ಮಾಡಬೇಕು ಎಂದರು.

ನಾವು ಒಗ್ಗಟ್ಟಾಗಿ ಮುಂದೆ ಸಾಗಿದರೆ ಇದನ್ನು ಸಾಧಿಸಬಹುದು. ಮುನಿಸಿಕೊಂಡಿರುವವರು, ನಮ್ಮಿಂದ ದೂರ ಆಗಿರುವವರು, ಹೊಸ ಯುವಕರನ್ನು ಪಕ್ಷಕ್ಕೆ ಕರೆ ತನ್ನಿ. ಪಕ್ಷದ ಅಧ್ಯಕ್ಷನಾದ ನಂತರ ನಾನು ಮಾಡಬೇಕಾದ ಕೆಲಸಗಳು ಇವೆ. ಉದಯಪುರ ಸಭೆ ನಿರ್ಣಯಗಳನ್ನು ಕಾರ್ಯಕ್ರಮಗಳನ್ನು ಜಾರಿ ತರಲು ಆರಂಭಿಸಿದ್ದು, ಎಲ್ಲವನ್ನೂ ಒಂದೊಂದಾಗಿ ಅನುಷ್ಟಾನಕ್ಕೆ ತರಲು ಮುಂದಾಗಿದ್ದೇನೆ ಎಂದು ತಿಳಿಸಿದರು.

ಯುವಕರಿಗೆ 50%, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಎಲ್ಲಾ ಘಟಕಗಳಿಗೆ ಜವಾಬ್ದಾರಿ ನೀಡಿ. ಸಂಘಟನೆಗೆ ಅವಕಾಶ ನೀಡಿ ಎಂದರು.

ಮಾಧ್ಯಮಗಳಲ್ಲಿ ನಮ್ಮ ವಿಚಾರ ಹೆಚ್ಚು ಪ್ರಚಾರ ಆಗುವುದಿಲ್ಲ. ಹೀಗಾಗಿ ಮನೆ ಮನೆಗೆ ಹೋಗಿ ಪಕ್ಷದ ಪರ ಪ್ರಚಾರ ಮಾಡಿ. ನಾವು ಪಟ್ಟಣ ಬಿಟ್ಟು ಹಳ್ಳಿ ಹಳ್ಳಿಗೆ ಹೋಗಿ ಜನರಿಗೆ ಮನವರಿಕೆ ಮಾಡಿದಾಗ ಮಾತ್ರ ಬಿಜೆಪಿ ಎದುರಿಸಲು ಸಾಧ್ಯ. ಪಕ್ಷಕ್ಕೆ ಶಕ್ತಿ ತುಂಬಲು ಸಾಧ್ಯ. ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯಿಂದ ಸಿಗುತ್ತಿರುವ ಲಾಭವನ್ನು ಸರಿಯಾಗಿ ಬಳಸಿಕೊಳ್ಳಬೇಕು. ರಾಜ್ಯದ ಯಾತ್ರೆ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಹೇಳಿದ ಅವರು, ಅದ್ದೂರಿ ಸ್ವಾಗತ ಮಾಡಿದ ಎಲ್ಲಾ ನಾಯಕರಿಗೆ ಧನ್ಯವಾದ ಅರ್ಪಿಸಿದರು.

ಲಂಪಿವೈರಸ್‌| ಇದೇನಾ ಬಿಜೆಪಿಯ ಗೋರಕ್ಷಣೆ: ಕಾಂಗ್ರೆಸ್‌ ಟೀಕೆ
ಬೆಂಗಳೂರು: ರಾಜ್ಯದ ಕೆಲವೊಂದು ತಾಲ್ಲೂಕುಗಳಲ್ಲಿ ಪಶು ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಕಂಡುಬಂದಿರು ಹಿನ್ನಲೆಯಲ್ಲಿ 40% ಸರ್ಕಾರಕ್ಕೆ ʼಭ್ರಷ್ಟಗಂಟುʼ ಹೊಡೆಯುವ ರೋಗವಿರುವಾಗ, ಜಾನುವಾರುಗಳ ಚರ್ಮಗಂಟು ರೋಗ ಕಾಣುವುದೇ? ಎಂದು ರಾಜ್ಯ ಸರ್ಕಾರವನ್ನು ಕುರಿತು ರಾಜ್ಯ ಕಾಂಗ್ರೆಸ್‌ ಘಟಕ ಟೀಕಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ರಾಜ್ಯದಲ್ಲೂ ಲಂಪಿ ವೈರಸ್‌ ತಾಂಡವವಾಡುತ್ತಿದ್ದು, ರಾಜ್ಯದಲ್ಲಿರುವ ಕೆಲವೊಂದು ಜಿಲ್ಲಾ ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ ಮತ್ತು ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಪಶು ಇಲಾಖೆಯಲ್ಲಿ 70% ಹುದ್ದೆಗಳು ಖಾಲಿ ಇದೆ. ಆದರೂ ಕೂಡ ರಾಜ್ಯದಲ್ಲಿ ವೈದ್ಯರ ಕೊರತೆ ಇದೆ. ರಾಜ್ಯದಲ್ಲಿ ಜಾನೂವಾರಗಳ ಚರ್ಮರೋಗಕ್ಕೆ ಲಸಿಕೆಗಲಿಲ್ಲ. ಹೀಗಾಗಿ ಗೋರಕ್ಷಕರು ಎಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರಕ್ಕೆ ಗೋವುಗಳ ಆಕ್ರಂದನ ಕೇಳುತ್ತಿಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಗೋರಕ್ಷಕರು ಎಂದುಕೊಳ್ಳುವ ಬಿಜೆಪಿ ಸರ್ಕಾರ ಜಾನುವಾರಗಳ ಚರ್ಮಗಂಟು ರೋಗ ನಿರ್ವಹಿಸಲು ಸಿದ್ಧಗೊಂಡಿಲ್ಲ. ಇದೇನಾ ಬಿಜೆಪಿಯ ಗೋರಕ್ಷಣೆ? ಎಂದು ರಾಜ್ಯ ಕಾಂಗ್ರೆಸ್‌ ಘಟಕ ವಾಗ್ದಾಳಿ ನಡೆಸಿದೆ.

ಮುಂಬರುವ ಚುನಾವಣೆಯಲ್ಲಿ 40% ಸರ್ಕಾರವನ್ನು ಕಿತ್ತೊಗೆಯಬೇಕೆಂಬುವುದೇ ʼಜನ ಸಂಕಲ್ಪʼ: ಸಿದ್ದರಾಮಯ್ಯ
ಬಳ್ಳಾರಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 40% ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎನ್ನುವುದೇ ʼಜನ ಸಂಕಲ್ಪʼ ಎಂದು ವಿರೋಧ ಪಕ್ಷದ ನಾಯಕ ಸಿದದ್ದರಾಮಯ್ಯ ಟೀಕಿಸಿದರು.

ಬಳ್ಳಾರಿಯಲ್ಲಿ ನಡೆದ ಭಾರತ ಐಕ್ಯತಾ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಪಾದಯಾತ್ರೆ. ರಾಜಕೀಯ ಅಧಿಕಾರ ಗಳಿಸುವ ಉದ್ದೇಶದಿಂದ ಕೈಗೊಂಡ ಪಾದಯಾತ್ರೆ ಇದಲ್ಲ. ಜಾತಿ, ಧರ್ಮ, ವರ್ಗಗಳ ಆಧಾರದಲ್ಲಿ ಒಡೆದಿರುವ ಭಾರತವನ್ನು ಒಂದುಗೂಡಿಸುವ  ರಾಷ್ಟ್ರೀಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಪ್ರಯತ್ನವೇ ಭಾರತಐಕ್ಯತಾಯಾತ್ರೆ ಎಂದು ಹೇಳಿದರು.

ಏಕಕಾಲದಲ್ಲಿ ಸುಮಾರು 3,570 ಕಿ.ಮೀ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪ್ರವಾಸ ಕೈಗೊಂಡಿರುವುದು ಇದೇ ಮೊದಲು. ಈಗಾಗಲೇ 1,000 ಕಿ.ಮೀ ನಡಿಗೆಯನ್ನು ರಾಹುಲ್‌ ಗಾಂಧಿ ಅವರು ಯಶಸ್ವಿಯಾಗಿ ಮುಗಿಸಿದ್ದಾರೆ. ಅತೀ ಮುಖ್ಯವಾಗಿ ಪಾದಯಾತ್ರೆಗೆ ನಿರೀಕ್ಷೆಗೂ ಮೀರಿದ ಜನಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಬಿಜೆಪಿಯ ದ್ವೇಷ, ಹಿಂಸೆ, ಧರ್ಮ ರಾಜಕಾರಣದಿಂದ ದಲಿತರು, ಮಹಿಳೆಯರು, ಶೋಷಿತರು, ಅಲ್ಪಸಂಖ್ಯಾತ ಸಮುದಾಯದ ಜನ ಭಯದಲ್ಲಿ ಬದುಕುವಂತಾಗಿದೆ. “ಸರ್ವಜನಾಂಗದ ಶಾಂತಿಯ ತೋಟ”ವೆಂಬ ಕುವೆಂಪು ಅವರ ಆಶಯಕ್ಕೆ ವಿರುದ್ಧ ದಿಕ್ಕಿನಲ್ಲಿ ದೇಶ ಸಾಗುತ್ತಿದೆ ಎಂದರು.

ದೇಶದ ಸ್ವಾತಂತ್ರ್ಯ ಕಾಂಗ್ರೆಸ್ ನ ಹೋರಾಟದ ಫಲ. ಮಹಾತ್ಮ ಗಾಂಧಿ, ನೆಹರು ಆದಿಯಾಗಿ ನಮ್ಮ ಪಕ್ಷದ ಅನೇಕರ ತ್ಯಾಗ, ಬಲಿದಾನ, ಜೈಲುವಾಸದಿಂದ ನಮಗೆ ಸ್ವಾತಂತ್ರ್ಯ ದಕ್ಕಿದೆ. 1925ರಲ್ಲಿ ಆರಂಭವಾದ ಆರ್‌,ಎಸ್‌,ಎಸ್‌ ನವರಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಒಬ್ಬನೇ ಒಬ್ಬ ವ್ಯಕ್ತಿ ಇದ್ದಾರ? ಎಂದು ವಾಗ್ದಾಳಿ ನಡಿಸಿದರು.

1977ರಲ್ಲಿ ವಿಜಯನಗರ ಉಕ್ಕಿನ ಕಾರ್ಖಾನೆಯನ್ನು ಸ್ಥಾಪನೆ ಮಾಡಿ, ಇಂದು ಸಾವಿರಾರು ಜನರಿಗೆ ಉದ್ಯೋಗ, ಆ ಮೂಲಕ ಅನ್ನಕ್ಕೆ ದಾರಿ ಆಗಿದ್ದರೆ ಅದಕ್ಕೆ ಇಂದಿರಾ ಗಾಂಧಿ ಅವರು ಕಾರಣ. ಗಣಿ ಲೂಟಿ ಮಾಡಿದ್ದೇ ಬಳ್ಳಾರಿಗೆ ಬಿಜೆಪಿ ಕೊಡುಗೆ ಸೋನಿಯಾ ಗಾಂಧಿ ಅವರು 1999ರಲ್ಲಿ ಬಳ್ಳಾರಿಯಿಂದ ಸ್ಪರ್ಧೆ ಮಾಡಿ ಲೋಕಸಭಾ ಸದಸ್ಯರಾದ ಮೇಲೆ 3,300 ಕೋಟಿಯ ಕುಡತಿನಿ ವಿದ್ಯುತ್‌ ಯೋಜನೆ ಜಾರಿ ಮಾಡಿದ್ದರು. ಆದರೆ ಕಳೆದ ಎಂಟು ವರ್ಷಗಳಿಂದ  ನರೇಂದ್ರ ಮೋದಿ ಸರ್ಕಾರ ಬಳ್ಳಾರಿಗೆ ಯಾವ ಕೊಡುಗೆ ನೀಡಿದೆ? ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರು ಬಳ್ಳಾರಿಯಿಂದ ದೋಚಿದ್ದು ಬಿಟ್ಟರೆ, ಬಳ್ಳಾರಿಗೆ ನೀಡಿರುವ ಕೊಡುಗೆ ಶೂನ್ಯ. ಬೇಕಿದ್ದರೆ ಬಳ್ಳಾರಿಯ ಅಭಿವೃದ್ಧಿ ವಿಚಾರಗಳ ಬಗ್ಗೆ ಸಚಿವ ಬಿ ಶ್ರೀರಾಮುಲು ಅವರು ನಮ್ಮ ಪಕ್ಷದ ಉಗ್ರಪ್ಪನವರ ಜೊತೆ ಬಹಿರಂಗ ಚರ್ಚೆಗೆ ಬರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆಯೇರಿಕೆ, ದ್ವೇಷರಾಜಕಾರಣ, ಸಾಮಾಜಿಕ ಅಶಾಂತಿಯಿಂದ ನೊಂದಿರುವ ಜನ ಪ್ರವಾಹದಂತೆ ಬಂದು ನಮ್ಮ ಪಾದಯಾತ್ರೆಯನ್ನು ಕೂಡಿಕೊಳ್ಳುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ 40% ಕಮಿಷನ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು “ಜನ ಸಂಕಲ್ಪ” ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ರಾಹುಲ್‌ ಗಾಂಧಿ  ಮತ್ತು ಸೋನಿಯಾ ಗಾಂಧಿ ಅವರು ನನಗೆ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ಮುಕ್ತ ಅವಕಾಶ ಕೊಟ್ಟಿದ್ದರು. ನಮ್ಮ ಸರ್ಕಾರ ಜನರಿಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿ, ನುಡಿದಂತೆ ನಡೆದಿದೆ. ಆದರೆ ಬಿಜೆಪಿ ತನ್ನ ಪ್ರಣಾಳಿಕೆಯ 10% ಭರವಸೆಯನ್ನೂ ಈಡೇರಿಸಿಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ನೀಡಿದ್ದ ಪ್ರತಿ ಭರವಸೆಯೂ ಹುಸಿಯಾಗಿದ್ದು, ಬೆಲೆಯೇರಿಕೆ, ನಿರುದ್ಯೋಗ, ಬಡತನ ಇಂಥಾ ಹತ್ತಾರು ಸಮಸ್ಯೆಗಳು ದೇಶದ ಜನರ ಬದುಕು ಕಸಿದಿದೆ. ಈ ಉದ್ದೇಶಕ್ಕಾಗಿಯೇ ರಾಹುಲ್ ಗಾಂಧಿ ಅವರು ಭಾರತ‌ಐಕ್ಯತಾಯಾತ್ರೆ ಮೂಲಕ ಸಂಕಷ್ಟದಲ್ಲಿರುವ ಜನರ ಜೊತೆ ನಿಂತಿದ್ದಾರೆ. ಹೀಗಾಹಿ ರಾಹುಲ್‌ ಗಾಂಧಿ ಅವರು ಭಾರತ‌ ಐಕ್ಯತಾ ಯಾತ್ರೆ ಎಂಬ ಬಹುದೊಡ್ಡ ಸಾಹಸಕ್ಕೆ ಕೈ ಹಾಕಿರುವುದಕ್ಕಾಗಿ ಅವರಿಗೆ ತುಂಬುಹೃದಯದ ಧನ್ಯವಾದ ಅರ್ಪಿಸುತ್ತೇನೆ. ದೇಶ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗೆ ಈ ಯಾತ್ರೆಯ ಅನಿವಾರ್ಯತೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು.

40% ಆಡಳಿತದಲ್ಲಿ ದುಡ್ಡಿದ್ರೆ ಸರ್ಕಾರಿ ಹುದ್ದೆ ಇಲ್ಲದಿದ್ದರೆ ನಿರುದ್ಯೋಗ: ರಾಹುಲ್‌ ಗಾಂಧಿ
ಬಳ್ಳಾರಿ: 40% ಆಡಳಿತದಿಂದ ರಾಜ್ಯದಲ್ಲಿ ಹಣ ನೀಡಿದರೆ ಸರ್ಕಾರಿ ಹುದ್ದೆ, ಹಣವಿಲ್ಲದಿದ್ದರೆ ಜೀವನಪೂರ್ತಿ ನಿರುದ್ಯೋಗಿಗಳಾಗಿರಬೇಕು ಎಂದು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್‌ ಗಾಂಧಿ ಟೀಕಿಸಿದರು.

ದೇಶದ 45 ವರ್ಷಗಳ ಇತಿಹಾಸದಲ್ಲೇ ಗರಿಷ್ಠ ನಿರುದ್ಯೋಗವಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ಇದ್ದ ಉದ್ಯೋಗಗಳೂ ನಾಶವಾಗಿವೆ! ಹಾಗೂ ನೋಟು ರದ್ದತಿ, ಜಿಎಸ್ ಟಿ, ಕೋವಿಡ್ ಸಮಯದಲ್ಲಿನ ನೀತಿಯಿಂದ 12.5 ಕೋಟಿ ಜನ ನಿರುದ್ಯೋಗಿಗಳಾಗಿದ್ದಾರೆ ಎಂದು ಹಾಹುಲ್‌ ಗಾಂಧಿಯವರು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪೊಲೀಸ್ ಇಲಾಖೆ ಸೇರಬೇಕಾದರೆ ₹80 ಲಕ್ಷ ಲಂಚ ನೀಡಬೇಕು.  ಬಿಜೆಪಿ ಸರ್ಕಾರದ ಆಡಳಿತದಲ್ಲಿ ಹಣವಿದ್ದರೆ ಸರ್ಕಾರಿ ಹುದ್ದೆ ಖರೀದಿಸಬಹುದು. ಹಣವಿಲ್ಲದಿದ್ದರೆ ಜೀವನಪೂರ್ತಿ ನಿರುದ್ಯೋಗಿಗಳಾಗಿರಬೇಕು. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂದೇ ಬಿರುದು ನೀಡಲಾಗಿದೆ! ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರು ದೇಶಭಕ್ತರೂ ಅಲ್ಲ, ಧರ್ಮ ರಕ್ಷಕರೂ ಅಲ್ಲ, 40% ಕಮಿಷನ್ ಕಳ್ಳರು: ರಾಹುಲ್‌ ಗಾಂಧಿ
ಮೈಸೂರು: ಬಿಜೆಪಿಯವರು ದೇಶಭಕ್ತರೂ ಅಲ್ಲ, ಧರ್ಮ ರಕ್ಷಕರೂ ಅಲ್ಲ, 40% ಕಮಿಷನ್‌ ಕಳ್ಳರು ಎಂದು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿನ ಭಾರತ ಐಕ್ಯತಾ ಯಾತ್ರೆಯ ಎರಡನೇ ದಿನ(ಶನಿವಾರ) ಬೇಗೂರಿನಿಂದ ನಂಜನಗೂಡು ಮೂಲಕ ತಾಂಡವಪುರ ಗ್ರಾಮಕ್ಕೆ ಆಗಮಿಸಿದ ಅವರು ವರುಣಾ ಕ್ಷೇತ್ರದ ಚಿಕ್ಕಯ್ಯನ ಚತ್ರ ಗ್ರಾಮದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ದೇಶದ ಮತ್ತು ಧರ್ಮದ ರಕ್ಷಣೆ ಹೆಸರಲ್ಲಿ ಮೂರನೇ ವ್ಯಕ್ತಿಗಳು ಬರುತ್ತಾರೆ. ನಿಮ್ಮ ಕುಟುಂಬವನ್ನು ಹೊಡೆಯುವ ಕೆಲಸ ಮಾಡುತ್ತಾರೆ ಮತ್ತೆ ನಿಮ್ಮ ಮನೆಗೆ ಬಂದು 40% ಹಣವನ್ನು ತೆಗೆದುಕೊಂಡು ಹೋಗುತ್ತಾರೆ. ಆ ವ್ಯಕ್ತಿಗಳನ್ನು ನೀವು ದೇಶ ಭಕ್ತರು ಎಂದು ಕರಿಯುತ್ತೀರೋ, ಧರ್ಮ ರಕ್ಷಕರು ಎಂದು ಕರಿಯುತ್ತಿರೋ ಅಥವಾ ಕಳ್ಳರೆಂದು ಕರಿಯುತ್ತಿರೋ ಎಂದು ಬಿಜೆಪಿ ಪಕ್ಷದ ಕುರಿತು ರಾಹುಲ್‌ ಗಾಂಧಿ ಟೀಕಿಸಿದರು.

ಮುಂದುವರೆದು ಮಾತನಾಡಿದ ಅವರು, ಇಲ್ಲಿ ಯಾರು ರಾಜಕೀಯ ಮಾಡುತ್ತಿದ್ದಾರೋ ಅವರೆಲ್ಲ ದೇಶ ಭಕ್ತರಲ್ಲ ಹಾಗೆ ಧರ್ಮ ರಕ್ಷಕರೂ ಅಲ್ಲಾ 40% ಕಳ್ಳರು ಎಂದು ರಾಹುಲ್‌ ಗಾಂಧಿ ಹೇಳಿದರು.

40% ಸರ್ಕಾರಕ್ಕೆ ಲಂಚವೇ ಸರ್ವಸ್ವ: ಕಾಂಗ್ರೆಸ್
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಹುದ್ದೆಗಳ ಭರ್ತಿಯಲ್ಲಿ ಸಾಲು ಸಾಲು ಹಗರಣಗಳು ಬೆಳಕಿಗೆ ಬಂದಿರುವ ಹಿನ್ನಲೆ, ಲಂಚ ಪಡಿದುಕೊಂಡಾದರು ಉದ್ಯೋಗ ನೀಡಿ ಎಂದು ಟ್ವೀಟ್‌ ಮಾಡುವ ಮೂಲಕ ವಿರೋಧ ಪಕ್ಷ ಕಾಂಗ್ರೆಸ್‌ ರಾಜ್ಯ ಸರ್ಕಾರವನ್ನು ಟೀಕಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಉದ್ಯೋಗಾಕಾಂಕ್ಷಿಗಳು ನೋಟಿಫಿಕೇಶನ್‌ಗಾಗಿ ಕಾಯುತ್ತಿದ್ದಾರೆ. ಮಂಜೂರಾದ ಕೆಲವೇ ಹುದ್ದೆಗಳು ಮಾರಾಟವಾಗುತ್ತಿವೆ. ಪೆನ್, ಪುಸ್ತಕಗಳೇ ಅಭ್ಯರ್ಥಿಗಳ ಆಸ್ತಿ. ಲಂಚವಿಲ್ಲದೆ ಕೆಲಸ ಮಾಡದ 40% ಸರ್ಕಾರಕ್ಕೆ ಅವುಗಳೇ ಲಂಚವಾಗಿ ನೀಡುತ್ತಿದ್ದಾರೆ. ಈ ಲಂಚ ಪಡೆದಾದರೂ ಕೆಲಸ ಕೊಡಿ ಬೊಮ್ಮಾಯಿ ಅವರೇ! ಎಂದು ರಾಜ್ಯ ಕಾಂಗ್ರೆಸ್‌ ಘಟಕ ವ್ಯಂಗಿಸಿದೆ.

40% ಸರ್ಕಾರದಲ್ಲಿ ಲಂಚವೇ ಸತ್ಯ, ಲಂಚಕ್ಕೇ ಪ್ರಾಶಸ್ತ್ಯ, ಲಂಚವೇ ದೇವರು, ಲಂಚವೇ ಸರ್ವಸ್ವ, ಲಂಚವೇ ಸರ್ವವ್ಯಾಪಿ, ನಿದ್ದೆ, ಊಟ ಬಿಟ್ಟು, ಸರ್ಕಾರಿ ನೌಕರಿಗಾಗಿ ಭವಿಷ್ಯ ಪಣಕ್ಕಿಟ್ಟು ಓದಿ ಪರೀಕ್ಷೆ ಬರೆದು ಉದ್ಯೋಗಾಕಾಂಕ್ಷಿಗಳು ಕಾಯ್ತಾ ಇದಾರೆ, ಲಂಚ ಪಡೆದಾದ್ರೂ ಕೆಲಸ ಕೊಡಿ ಎನ್ನುತ್ತಿದ್ದಾರೆ. ಬೊಮ್ಮಾಯಿ ಅವರೇ. ಬನ್ನಿ ಅವರ ಅಳನ್ನು ಕೇಳಿಸಿಕೊಳ್ಳಿ  ಎಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತ ಪಡಿಸಿದೆ.

#40PercentSarkara ದಲ್ಲಿ
ಲಂಚವೇ ಸತ್ಯ,
ಲಂಚಕ್ಕೇ ಪ್ರಾಶಸ್ತ್ಯ,
ಲಂಚವೇ ದೇವರು,
ಲಂಚವೇ ಸರ್ವಸ್ವ,
ಲಂಚವೇ ಸರ್ವವ್ಯಾಪಿ,

ನಿದ್ದೆ, ಊಟ ಬಿಟ್ಟು, ಸರ್ಕಾರಿ ನೌಕರಿಗಾಗಿ ಭವಿಷ್ಯ ಪಣಕ್ಕಿಟ್ಟು ಓದಿ ಪರೀಕ್ಷೆ ಬರೆದು ಉದ್ಯೋಗಾಕಾಂಕ್ಷಿಗಳು ಕಾಯ್ತಾ ಇದಾರೆ,
ಲಂಚ ಪಡೆದಾದ್ರೂ ಕೆಲಸ ಕೊಡಿ ಎನ್ನುತ್ತಿದ್ದಾರೆ.@BSBommai ಅವರೇ. ಕೇಳಿಸಿಕೊಳ್ಳಿ. pic.twitter.com/WrVCkE9Anq
— Karnataka Congress (@INCKarnataka) September 20, 2022

ಕಾಂಗ್ರೆಸ್‌ ಟ್ವೀಟ್

ವೇದಿಕೆ ಹುಲಿ  ಬೊಮ್ಮಾಯಿ ಅವರೇ, ಬನ್ನಿ KPSC ಅಭ್ಯರ್ಥಿಗಳ ಎದುರು ನಿಂತು ನಿಮ್ಮ ದಮ್ಮು ತಾಕತ್ತು ತೋರಿಸಿ. ಬಿಜೆಪಿಯ ‘ಡಾನ್ಸಿಂಗ್ ಸ್ಟಾರ್ಸ್’ ಸಚಿವರೇ, ಬನ್ನಿ ಪ್ರತಿಭಟನಾ ನಿರತ ಅಭ್ಯರ್ಥಿಗಳ ಎದುರು ನಿಮ್ಮ ನೃತ್ಯ ಕೌಶಲ್ಯ ತೋರಿಸಿ. ಜನಸ್ಪಂದನೆ ಎಂಬ ಜಾತ್ರೆ ಮಾಡಿದ 40% ಸರ್ಕಾರ ಈ ಯುವ ಸಮುದಾಯಕ್ಕೆ ಸ್ಪಂದನೆ ಮಾಡ್ತಿಲ್ಲ ಏಕೆ? ಎಂದು ಕಾಂಗ್ರೆಸ್‌ ಗುಡುಗಿದೆ.

ಲಂಚ ಪಡೆದು PSI ಪರಿಕ್ಷಾರ್ಥಿಗಳಿಗೆ ಬ್ಲೂಟೂತ್ ನೀಡಿದ 40% ಸರ್ಕಾರಕ್ಕೆ ಲಂಚ ಕೊಡಲಾಗದ ಅಭ್ಯರ್ಥಿಗಳು ಬ್ಲೂಟೂತ್ ಅನ್ನೇ ಲಂಚವಾಗಿ ಕೊಡ್ತಿದಾರೆ. ಪವರ್ ಲೆಸ್ ಸಿಎಂಗೆ ಅಭ್ಯರ್ಥಿಗಳು ಪವರ್ ಬ್ಯಾಂಕ್ ನೀಡಲು ತಯಾರಿದ್ದಾರೆ, ಅದನ್ನು ಪಡೆದಾದರೂ ಉದ್ಯೋಗ ನೀಡುವ ಪವರ್ ತೋರಿಸುವಿರಾ ಬೊಮ್ಮಾಯಿ ಅವರೇ? ನಿಮ್ಮ ‘ಜನಸ್ಪಂದನೆ’ ತೋರುವಿರಾ? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

40% ಸರ್ಕಾರ ಕ್ಕೆ ಲಂಚ ಕೊಡಲು ರೊಕ್ಕವಿಲ್ಲ ನಮ್ಮ ಪಾಲಿನ ರೊಟ್ಟಿಯಾದರೂ ಕೊಡುತ್ತೇವೆ ಕೆಲಸ ಕೊಡಿ ಎಂಬುದು ಅಭ್ಯರ್ಥಿಗಳ ವೇದನೆ, ನಿವೇದನೆ ಎಲ್ಲವೂ. ಬೊಮ್ಮಾಯಿ ಅವರೇ, ಈ ರೊಟ್ಟಿಯ ಲಂಚದಲ್ಲಿ ಯುವಕರ ಬದುಕಿನ ಕನಸಿದೆ, ಭವಿಷ್ಯದ ಆತಂಕವಿದೆ, ಶ್ರಮವಿದೆ, ಪ್ರಾಮಾಣಿಕತೆಯಿದೆ. ಇದನ್ನು ಪಡೆದಾದರೂ ಉದ್ಯೋಗ ನೀಡಿ ಎಂದು ಕಾಂಗ್ರೆಸ್‌ ಕಿಡಿಕಾರಿದೆ.