adarsh huchhadakatte – Peepal Media

ಆಶ್ರಯ, ಅಕ್ಷಯ, ಅಕ್ಷರ, ಆರಾಧನಾ, ವಿಶ್ವ ಪಂಚಮಂತ್ರದ ತಂತ್ರಗಾರ.. ಸಾರೇಕೊಪ್ಪದ ‘ಬಂಗಾರ’
ಎಸ್ ಬಂಗಾರಪ್ಪ ಎಂಬ ಮಹಾನ್ ಮೇಧಾವಿ, ಸ್ವಾಭಿಮಾನಿ, ಅದ್ಭುತ ಹಾಡುಗಾರ, ಡೊಳ್ಳು ಕುಣಿತದ ಪಂಟರ್, ಗ್ರಾಮೀಣ ಸೊಗಡಿನ ಪ್ರತಿಭೆ, ಸಮಾಜವಾದಿ ನೆಲದ ಹೋರಾಟಗಾರ, ಹಠಕ್ಕೆ ಇನ್ನೊಂದು ಹೆಸರಿನಂತಿದ್ದ ಕನ್ನಡ ನಾಡು ಕಂಡ ಕಲರ್ ಫುಲ್ ರಾಜಕಾರಣಿ. ಬದುಕಿದ್ದರೆ ಇಂದಿಗೆ ತೊಂಬತ್ತು ತುಂಬುತ್ತಿತ್ತು. ನಾಡು ಅವರನ್ನು ಕಳೆದುಕೊಂಡು ಹನ್ನೊಂದು ವರ್ಷವೇ ಆದರೂ ಇಂದಿಗೂ ಮಲೆನಾಡಿನ ಜನಮಾನಸದಲ್ಲಿ‌ ಬಂಗಾರಪ್ಪ ಉಸಿರಾಡುತ್ತಲೇ ಇದ್ದಾರೆ.

ವಿಧಾನಸಭೆಯ ಸದನದಲ್ಲಿ ಚರ್ಚೆಗೂ ಒಳಪಡಿಸದೇ, ಮಲೆನಾಡು ಭಾಗದ ಜನಪ್ರತಿನಿಧಿಗಳಿಗೆ ಕನಿಷ್ಟ ಅವಗಾಹನೆಗೂ ತರದೇ ಸರ್ಕಾರ ರದ್ದು ಮಾಡಿರುವ ಡೀನೋಟಿಫಿಕೇಷನ್ ಇಂದ ಶರಾವತಿ ಮುಳುಗಡೆಯ ಭೂಸಂತ್ರಸ್ತರು ಭೂಮಿಯ ಹಕ್ಕು ಕಳೆದುಕೊಂಡಿರುವ ಸಂಕಷ್ಟದ ಘಳಿಗೆಯಲ್ಲಿ, ಮಲೆನಾಡು ಕಂಡು ಕೇಳರಿಯದ ಎಲೆಚುಕ್ಕಿ ರೋಗಕ್ಕೆ ತನ್ನ ಆರ್ಥಿಕ ಸಂಪತ್ತಾದ ಅಡಿಕೆ ತೋಟವನ್ನು ಬಲಿಕೊಡುತ್ತಾ ಯಾವ ಪರಿಹಾರವೂ ಸರ್ಕಾರದ ವತಿಯಿಂದ ಬಾರದೇ ಜನರು ಕಂಗಾಲಾಗಿರುವಾಗ, ಅವರೊಬ್ಬರಿರಬೇಕಿತ್ತು ಸ್ವಾಭಿಮಾನಕ್ಕಾಗೇ ಬದುಕಿದ ಸಾರೇಕೊಪ್ಪ ಬಂಗಾರಪ್ಪ.
ಜನರ ಏಳಿಗೆ ಬಯಸಿ ಸರ್ವ ಆಡಳಿತಕ್ಕೂ ಸೆಡ್ಡು ಹೊಡೆಯಬಲ್ಲ ಗಟ್ಟಿ ನಾಯಕತ್ವದ ನಾಯಕರ ಬರ ಅನುಭವಿಸುತ್ತಿರುವ ಮಲೆನಾಡಿಗೆ ಬಂಗಾರಪ್ಪನವರ ನಂತರ ಸೃಷ್ಟಿಯಾದ ಶೂನ್ಯ ಬಹುದೊಡ್ಡ ನಷ್ಟವೇ ಸರಿ. ಮಲೆನಾಡಿಗರ ಕಣ್ಣಲ್ಲಿ ಊರೂರಲ್ಲಿ ಹತ್ತು ಜನರ ಹೆಸರು ಹಿಡಿದು ಹೇಳಬಲ್ಲ, ಪ್ರತಿ ಊರಿನ ನಾಡಿ ಮಿಡಿತ ಬಲ್ಲ ನಾಯಕರೆಂದರೆ ಅದು ಸಾರೆಕೊಪ್ಪದ ಬಂಗಾರಪ್ಪ ಮಾತ್ರ.

ಎಸ್ ಬಂಗಾರಪ್ಪ ಎಂಬ ಬಡ ಕುಟುಂಬದ ಲಾಯರ್ ರಾತ್ರೋರಾತ್ರಿ ನಾಯಕರಾಗಿ ರೂಪುಗೊಂಡವರಲ್ಲ. ಕಾಗೋಡು ಸತ್ಯಾಗ್ರಹದ ನಂತರದ ಗೇಣಿ ಹೋರಾಟಗಳಲ್ಲಿ ರೈತರ ಮೇಲೆ ಕೇಸ್ ಮೇಲೆ ಕೇಸ್ ಹಾಕಿ ಸರ್ಕಾರ ಒಳಗಟ್ಟುತ್ತಿದ್ದರೆ, ಒಬ್ಬೊಬ್ಬ ರೈತನ ಕೇಸ್ ಗೂ ಉಚಿತವಾಗಿ, ಸಮರ್ಥವಾಗಿ ವಾದ ಮಂಡಿಸಿ ರೈತರ ಮನೆ ಜಪ್ತು, ಆಸ್ತಿ ಜಪ್ತು ಹಾಗೂ ಆರೋಪಿತ ರೈತರು ಜೈಲು ಪಾಲಾಗದಂತೆ ಕಾಪಾಡುತ್ತಿದ್ದ ಯುವ ಲಾಯರ್ ರೈತರ ಪಾಲಿನ ಆಶಾಕಿರಣವಾಗಿದ್ದರು. ಬಡವರಿಗಾಗಿ, ರೈತರಿಗಾಗಿ ತುಡಿಯುತ್ತಿದ್ದ ಸೊರಬದ ಯುವ ಲಾಯರ್, ಶಾಂತವೇರಿ ಗೋಪಾಲಗೌಡರ ಕಣ್ಣಿಗೆ ಬಿದ್ದ ಮೇಲೆ ಸಂಯುಕ್ತ ಸಮಾಜವಾದಿ ಪಾರ್ಟಿಯ ಸೊರಬ ಕ್ಷೇತ್ರದ ಉಮೇದುವಾರಿಕೆಗೆ ಏಕ ಮಾತ್ರ ಆಯ್ಕೆಯಾಗಿದ್ದರು.
ರಾಜಕೀಯ ಗುರುವಿನ ನಂಬಿಕೆ ಉಳಿಸುವಂತೆ ಮೊದಲ ಯತ್ನದಲ್ಲೇ 1967ರಲ್ಲಿ ಸೊರಬದಿಂದ ಶಾಸಕರಾಗಿ ಅಯ್ಕೆಯಾಗಿದ್ದರು ಎಸ್ ಬಂಗಾರಪ್ಪ.

ಶಾಂತವೇರಿ ಗೋಪಾಲಗೌಡರ ಅಕಾಲಿಕ ಮರಣದಿಂದ ಬಡವರ ಪರ, ರೈತರ ಪರ ಧ್ವನಿಯಾಗಬಲ್ಲ ನಾಯಕನ‌ ಕೊರತೆಯನ್ನು ನಾಡು ಎದುರಿಸುತ್ತಿತ್ತು. ದೇವರಾಜ ಅರಸರಿಗೂ ಒಬ್ಬ ಹಿಂದುಳಿದ ವರ್ಗದ ಗಟ್ಟಿ ನಾಯಕನ ಜೊತೆಗಾರಿಕೆ ಅವಶ್ಯವಾಗಿತ್ತು. ದೇವರಾಜ ಅರಸರು ಎಸ್ ಬಂಗಾರಪ್ಪರನ್ನು ಮಂತ್ರಿ ಮಾಡಿ ಪಕ್ಕದಲ್ಲಿ ಕೂರಿಸಿಕೊಂಡರು. ಬಂಗಾರಪ್ಪ ಎಂಬ ಯುವ ರಾಜಕಾರಣಿಗೆ ಮಂತ್ರಿಗಿರಿಯ ಕೆಲಸಗಳಿಂದ ಮನ‌ಮನೆಗೆ ತಲುಪಲು ಹೆಚ್ಚು ಕಷ್ಟವಾಗಲಿಲ್ಲ. 1967ರಿಂದ ನಂತರ ಸರಿಸುಮಾರು ಇಪ್ಪತೊಂಬತ್ತು ವರ್ಷ ಸತತ ಏಳು ಬಾರಿ ಶಾಸಕರಾಗಿ ಅಯ್ಕೆಯಾಗುತ್ತಲೇ ಹೋದರು. ಎಷ್ಟೋ ಬಾರಿ ನಾಮಿನೇಷನ್ ಮಾಡಿದ್ದು ಬಿಟ್ಟರೆ ಕ್ಷೇತ್ರಕ್ಕೂ ಕಾಲಿಟ್ಟು ವೋಟ್ ಕೇಳದೇನೆ ಗೆದ್ದು ಹೋದ ಉದಾಹರಣೆಯೂ ಇದೆ. ಸೊರಬದ ಜನಕ್ಕೆ ಬಂಗಾರಪ್ಪ ಅನ್ನುವ ಹೆಸರಷ್ಟೇ ಸಾಕಿತ್ತು ಗೆಲ್ಲಿಸಲು.

ರಾಜಕಾರಣದ ಆರಂಭ ಸಂಯುಕ್ತ ಸೋಷಿಯಲ್ ಪಾರ್ಟಿಯಿಂದ ಆರಂಭಿಸಿದರೂ ಅತಿ ಹೆಚ್ಚು ಸಮಯ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಬಂಗಾರಪ್ಪ ಎಂಬ ರಾಜಕಾರಣಿಯನ್ನು ಯಾವತ್ತೂ ಒಂದು‌ ಪಕ್ಷದ ಪರಿಧಿಯಲ್ಲಿ ಕಟ್ಟಿ ಹಾಕುವುದು ಕಷ್ಟ ಸಾಧ್ಯ. ತನ್ನ‌ ಮೊದಲ ದಿನದಿಂದಲೂ ಹೃದಯದ ಮಾತು ಕೇಳಿ ಸ್ವಾಭಿಮಾನದ ರಾಜಕಾರಣ ಮಾಡಿದರೇ ಹೊರತೂ ಕಾಲಕ್ಕೆ ತಕ್ಕಂತ ವೇಷ ಹಾಕಿ ಕೂರುವ ಮೆದುಳಿನ ರಾಜಕಾರಣಕ್ಕೆ ಎಂದು ಬೆಲೆ‌ಕೊಡಲಿಲ್ಲ. ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗ ಮತ್ತು ದಲಿತರ ಆಶಾಕಿರಣವಾಗಿ ಇಡೀ ನಾಡಿನಲ್ಲಿ‌ ತುಳಿತಕ್ಕೆ ಒಳಗಾದ ದೀವರ ಸಮುದಾಯದ ದೇವರಂತೆ ರಾಜಕಾರಣದಲ್ಲಿ‌ ಹೆಜ್ಜೆ ಗುರುತು ಮೂಡಿಸುತ್ತಾ ಮುನ್ನಡೆದರು. ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಿದ್ದಂತೆ ಹೊಸ ಪಕ್ಷ ಕಟ್ಟಿ ತನ್ನ ಖದರ್ ತೋರಿಸುತ್ತಿದ್ದ ಸಾರೆಕೊಪ್ಪದ ಬಂಗಾರಪ್ಪ ಕೊನೆಯ ಉಸಿರಿನವರೆಗೂ ಸ್ವಾಭಿಮಾನಿಯಾಗೇ ಉಳಿದು ಹೋದರು.

ಮೊದಲು ಕಟ್ಟಿದ್ದು ಕರ್ನಾಟಕ ಕ್ರಾಂತಿ ರಂಗ, ಆನಂತರ ಕರ್ನಾಟಕ ಕಾಂಗ್ರೆಸ್ ಪಕ್ಷ, ಹಾಗೇ ಮುಂದುವರೆದಂತೆ ಕರ್ನಾಟಕ ವಿಕಾಸ ಪಾರ್ಟಿ, ಸಮಾಜವಾದಿ ಪಾರ್ಟಿ. ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ ಅಸಮಾಧಾನಕ್ಕೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಗೆ ಕರ್ನಾಟಕದಲ್ಲಿ ಮೂರು ಬಾರಿ ತನ್ನದೇ ಪಾರ್ಟಿ ಕಟ್ಟಿ ಅಧಿಕಾರ ಕಳೆದಿದ್ದು, ಅದೇ ಕಾಂಗ್ರೆಸ್ ಪಕ್ಷವನ್ನು ಮೂರು ಬಾರಿ ಮತ್ತೆ ಸೇರಿ ಅಧಿಕಾರಕ್ಕೆ ತಂದಿದ್ದು. ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿದ್ದ ಯಡ್ಯೂರಪ್ಪ, ಮಂತ್ರಿಗಿರಿಯ ಕನಸು ಕಾಣುತ್ತಿದ್ದ ಈಶ್ವರಪ್ಪನವರನ್ನು ಶಿಕಾರಿಪುರ, ಶಿವಮೊಗ್ಗದ ಅಖಾಡದಲ್ಲಿ ಸೋಲಿಸಿ ಮಕಾಡೆ ಮಲಗಿಸಿದ್ದು. ತದನಂತರದ ಬೆಳವಣಿಗೆಯಲ್ಲಿ ಅದೇ ಭಾರತೀಯ ಜನತಾ ಪಾರ್ಟಿ ಸೇರಿ ಮೇಲ್ವರ್ಗದ ಜನರ ಪಕ್ಷ ಎಂಬ ಟ್ಯಾಗ್ ಇಟ್ಟುಕೊಂಡು ನಲವತ್ತರ ಆಸುಪಾಸಿನಲ್ಲಿದ್ದ ಪಕ್ಷಕ್ಕೆ ಹಿಂದುಳಿದ ವರ್ಗಗಳ ಬೆಂಬಲ ಕೊಡಿಸಿ ಎಂಬತ್ತಕ್ಕೇರಿಸಿದ್ದು, ಮುಖ್ಯಮಂತ್ರಿ‌ ಹುದ್ದೆ ಎರಡು ಬಾರಿ ತಪ್ಪಿಸಿದ ದೇವೇಗೌಡರಿಗೆ, ಡಿಕೆ ಶಿವಕುಮಾರ್ ಎಂಬ ಹುಡುಗನನ್ನು ನಿಲ್ಲಿಸಿ ಸೋಲುಣಿಸಿದ್ದು. ಜೀವಿತಾವಧಿಯ ಸಂಧ್ಯಾಕಾಲದಲ್ಲಿ ಅವರದೇ ಪಕ್ಷ ಜಾತ್ಯಾತೀತ ಜನತಾದಳ ಸೇರಿ ತನ್ನ ಮಗನನ್ನು ಶಾಸಕ ಮಾಡಿದ್ದು ಎಲ್ಲವೂ ಇವರ ರಾಜಕೀಯ ಜೀವನದ ಟ್ವಿಸ್ಟ್ ಮತ್ತು ಟರ್ನ್ಸ್.

ಸಾರೆಕೊಪ್ಪದ ಬಂಗಾರಪ್ಪನವರ ದೊಡ್ಡತನವಿದ್ದುದೇ ನಾಯಕರನ್ನು ಸೃಷ್ಟಿ ಮಾಡುವ ವಿಷಯದಲ್ಲಿ. ಅಧಿಕಾರವಿರಲಿ ಬಿಡಲಿ ಬಂಗಾರಪ್ಪ ತಾವು ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿಯ ಲೋಕಲ್ ಮುಖಂಡತ್ವಕ್ಕೆ ಮೊದಲ ಆದ್ಯತೆ. ಊರಿನ್ನೂ ಹತ್ತಿಪ್ಪತ್ತು ಕಿ.ಮಿ ಇರುವಾಗಲೇ ಊರಿನ ನಾಯಕರ ದಂಡನ್ನು ಕರೆಸಿಕೊಂಡು ಗಾಡಿ ಹತ್ತಿಸಿಕೊಂಡು, ತಮ್ಮ ಗನ್ ಮ್ಯಾನ್, ಹಿಂಬಾಲಕರು ಕೊನೆಗೆ ಡ್ರೈವಿಂಗ್ ಗೊತ್ತಿದ್ದ ಸ್ಥಳೀಯ ನಾಯಕರಿದ್ದರೆ ಡ್ರೈವರ್ ಗೂ ಎಸ್ಕಾರ್ಟ್ ಗಾಡಿ ಹತ್ತಿಕೊಳ್ಳುವ ಭಾಗ್ಯ. ಪ್ರದೇಶದ ಸಮಸ್ಯೆ, ನಾಯಕತ್ವ, ಹೇಳಬೇಕಾದ್ದು, ಹೇಳಬಾರದ್ದು ಎಲ್ಲದರ ಮಾಹಿತಿ ಪಡೆದು ಭಾಷಣಕ್ಕೆ ನಿಂತರೆ ಇಡೀ ಊರಿನ‌ ಮುಕ್ಕಾಲು ಪಾಲು ಜನರ ಹೆಸರು ಹೇಳಿ, ಉಭಯಕುಶಲೋಪರಿ ನಡೆಸಿಯೇ ಭಾಷಣ ಆರಂಭವಾಗುತ್ತಿತ್ತು. ಲೋಕಲ್ ಸಮಸ್ಯೆಯನ್ನು ರಾಜ್ಯ ರಾಜಕಾರಣಕ್ಕೆ ರಾಷ್ಟ್ರ ರಾಜಕಾರಣಕ್ಕೆ ಸಮೀಕರಿಸಿ ಸರಳಗೊಳಿಸಿ ಬಂಗಾರಪ್ಪ ವಾಗ್ಝರಿ ಹರಿಸುತ್ತಿದ್ದರೆ ಮನೆಯ ಮಗನ ಮಾತು ಕೇಳುವಂತೆ ಸಭೆ ಮಂತ್ರ ಮುಗ್ಧ. ಅಲ್ಲಿಂದ ಹೊರಡುವಾಗಲೂ ಲೋಕಲ್ ನಾಯಕರ ಹೆಸರಿಡಿದೇ ಮಾತಾಡಿ ವಿದಾಯ ಹೇಳಿಯೇ ಹೊರಡುವುದು ಬಂಗಾರಪ್ಪನವರ ವಾಡಿಕೆ. ಇನ್ನೂ ಹತ್ತಾರು ವರ್ಷ ಕಳೆದರೂ ಆ ಹೆಸರುಗಳು ಸ್ಮೃತಿಪಟಲದಿಂದ ಮಾಯವಾಗುತ್ತಿರಲಿಲ್ಲ. ಬಂಗಾರಪ್ಪನವರ ಕೊನೆ ದಿನಗಳಲ್ಲಿ ಟಿವಿ9 ಸುದ್ದಿ ವಾಹಿನಿಗಾಗಿ ಮರೆಯಲಾರೆ ಕಾರ್ಯಕ್ರಮದ ತಯಾರಿ ನಡೆಸುವಾಗ ಇಳಿವಯಸ್ಸು ತಲುಪಿ ದೈಹಿಕವಾಗಿ ಸುಸ್ತಾಗಿದ್ದಂತೆ ಕಂಡರೂ ಮನಸ್ಸು ಮಾತು ನವತರುಣನದೇ ಆಗಿತ್ತು. ಒಮ್ಮೆ ಯಾವೂರು ಅಂದವರಿಗೆ ಸಾರ್ ನಮ್ಮದು ತೀರ್ಥಹಳ್ಳಿಯ ಬಳಿ ಹುಂಚದಕಟ್ಟೆ ಎಂದಿದ್ದೆ. ಆ ನಂತರ ಅಲ್ಲಿ ಯಾರು- ಎತ್ತ ಎಂದು ವಿಚಾರಿಸಿ ಅಪ್ಪನ ಹೆಸರು ಕೇಳಿ, ಆ ಹೆಸರಿನರು ಮೂರ್ನಾಲ್ಕು ಜನರ ಪಟ್ಟಿ ಮಾಡಿ ಅದರಲ್ಲಿ ಯಾರು ಅಂತಾ ಕೇಳಿ ಸುಳುಗೋಡು ನಾರಾಯಣ, ಜಿ ಡಿ ನಾರಾಯಣಪ್ಪನ ಜೊತೆ ಬರ್ತಿದ್ನಲ್ಲಾ ಅವನೇ ಎನಾ ಅಂತಾ ಕೇಳಿ ಹೌದು ಅಂದ ಮೇಲೆ ಹೇ ನಂಗೊತ್ತು ತಗಾ ನಿಮ್ಮಪ್ಪ ಅಂತಾ ಪ್ರೀತಿ ತೋರಿದ್ದರು.

ಬಂಗಾರಪ್ಪ ಹೆಕ್ಕಿ ತೆಗೆದು ಬೆಳೆಸಿದ ನಾಯಕರ ಪಟ್ಟಿ ದೊಡ್ಡದಿದೆ. ಮೂರು ಪಕ್ಷಗಳಲ್ಲೂ ತಮ್ಮ ನೆಲೆ ಕಂಡುಕೊಂಡಿರುವ ನಾಯಕರು ಅಂದಿಗೂ ಇಂದಿಗೂ ನಾವು ಬಂಗಾರಪ್ಪನವರ ಗರಡಿಯ ರಾಜಕಾರಣಿಗಳು ಎಂದು ಹೇಳಿಕೊಳ್ಳಲು ಹೆಮ್ಮೆ ಪಟ್ಟು ಕೊಳ್ಳುತ್ತಾರೆ. ಜೊತೆಗಿದ್ದಾಗಲೂ, ಬಿಟ್ಟು ಹೋದಾಗಲೂ ತಾನು ಬೆಳೆಸಿದ ನಾಯಕರ ಜೊತೆಗೆ ದ್ವೇಷಕ್ಕೆ ಬೀಳದೆ ಗುರು ಶಿಷ್ಯರ ಸಂಬಂಧ ಕಾಪಾಡಿಕೊಂಡು ಬಂದಿದ್ದು ಅಷ್ಟೇ ದಿಟ. ಬಂಗಾರಪ್ಪನವರ ಗರಡಿಯಲ್ಲಿ‌ ಪಳಗಿದ ರಾಮಲಿಂಗಾರೆಡ್ಡಿ, ಡಿ ಕೆ ಶಿವಕುಮಾರ್, ಜಾರಕೀಹೊಳಿ ಬ್ರದರ್ಸ್, ಕೆ ಜೆ ಜಾರ್ಜ್, ಆರ್ ವಿ ದೇವರಾಜ್, ಡಿ ಸುಧಾಕರ್, ರಮೇಶ್ ಜಿಗಜಿಣಗಿ, ಕುಮಾರ್ ಬಂಗಾರಪ್ಪ, ಗೋವಿಂದ ಕಾರಜೋಳ, ದಿವಂಗತ ಸಿ ಎಸ್ ಶಿವಳ್ಳಿ, ಬೀಮಣ್ಣ ನಾಯ್ಕ್, ಮಧು ಬಂಗಾರಪ್ಪ, ಹರತಾಳು ಹಾಲಪ್ಪ, ದಿವಂಗತ ಪೂರ್ಯಾ ನಾಯ್ಕ್ , ಶಾರದಾ ಪೂರ್ಯನಾಯ್ಕ್, ಬೇಳೂರು ಗೋಪಾಲಕೃಷ್ಣ, ಜಿ ಡಿ ನಾರಾಯಣಪ್ಪ, ಡಿ ಲಕ್ಷ್ಮಣ, ಕಬಸೆ ಅಶೋಕಮೂರ್ತಿ.. ಪಟ್ಟಿ ಮಾಡುತ್ತಾ ಹೋದರೆ ಪುಟ ಸಾಲದು. ಶ್ರೀಯುತ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಕಾಲದಲ್ಲಿ ಹನ್ನೆರಡಕ್ಕೂ ಹೆಚ್ಚು ಮಂತ್ರಿಗಳು ಬಂಗಾರಪ್ಪನ ಗರಡಿಯವರಾಗಿದ್ದರು ಎಂಬುದು ಬಂಗಾರಪ್ಪನವರ ಮೈಲಿಗಲ್ಲಿಗೆ ಸಾಕ್ಷಿ.

ಆಶ್ರಯ, ಅಕ್ಷರ, ಅರಾಧನ, ಅಕ್ಷರ ವಿಶ್ವ ದಂತಹ ಪಂಚ ಯೋಜನೆಗಳನ್ನು ನೀಡಿ ಬಡವರ ಜೀವನಕ್ಕೆ ಆಧಾರವಾದ ಕನಸುಗಾರ, ರಾಜಕೀಯದ ಎಲ್ಲಾ ಪಟ್ಟುಗಳನ್ನು ಅರಿತು ಪಕ್ಕಾ ರಾಜಕಾರಣಿಯೇ ಅದರೂ ವಾತ್ಸಲ್ಯಮಯಿ ತಾಯಿಯಂತಹ ಮೃದು ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸಲು ಹಿಂದೆ ಬಿದ್ದವರಲ್ಲ.

ಒಟ್ಟಿನಲ್ಲಿ ಸೊರಬದ ಕುಬಟೂರಿನ ಬಡ ಗೇಣಿದಾರನ ಮಗನೊಬ್ಬ ಗೇಣಿ ರೈತರಿಗೆ ನ್ಯಾಯ ಕೊಡಿಸುತ್ತಾ ಒಂದೊಂದೇ ಹೆಜ್ಜೆ ಮೇಲೇರುತ್ತಾ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಸ್ವಾಭಿಮಾನದ ಎದುರು ಯಾವ ಹುದ್ದೆಯೂ ನಿಕೃಷ್ಟ ಅನ್ನುತ್ತಾ ಈ ನೆಲದ ಮಕ್ಕಳ ಕಷ್ಟಕ್ಕೆ ದನಿಯಾಗುತ್ತಾ ಇಡೀ ಜೀವಿತದಲ್ಲಿ ಹಿಂದುಳಿದ ವರ್ಗವನ್ನು ಮುನ್ನೆಲೆಗೆ ತಂದು ಸಮಾನತೆಯ ಕನಸು ಕಾಣುವಷ್ಟು ಪ್ರಬಲಗೊಳಿಸಿದ ಹೋರಾಟದ ಬದುಕು ಅಜರಾಮರ.

ಅನಕ್ಷರಸ್ಥರ ಬಾಳಿಗೆ ಅಕ್ಷರ ತುಂಗಾ
ಹಸಿದವರ ಪಾಲಿಗೆ ಅನ್ನ, ವಿದ್ಯೆಯ ಅಕ್ಷಯ ಪಾತ್ರೆ ಬಡವರ ಪಾಲಿಗೆ ನೆರಳು ಕೊಟ್ಟ ಆಶ್ರಯದಾತ. ಬಡ ಚೌಡಿ ದೈವ ಭೂತಗಳಿಗೆ ನೆಲೆ ಕೊಟ್ಟ ಆರಾಧಕ
ಮಧ್ಯಮವರ್ಗದ ಗುಡಿ ಕೈಗಾರಿಕೆಗಳಿಗೆ ಚೈತನ್ಯದ ವಿಶ್ವ ಶಕ್ತಿಯ ಹರಿಕಾರನ ಜಯಂತ್ಯೋತ್ಸವ.

ಸಮಾಜವಾದಿ, ಸಮಾನತಾವಾದಿ, ಸಹಬಾಳ್ವೆಯ, ಸಹಿಷ್ಣುತೆಯ, ಸರ್ವರ ಸ್ವಾತಂತ್ರ್ಯದ ಹರಿಕಾರನಿಗೆ
ಕರುನಾಡ ಬಂಗಾರ ಎಸ್ ಬಂಗಾರಪ್ಪನವರಿಗೆ ಹುಟ್ಟು ಹಬ್ಬದ ಶುಭಾಷಯಗಳು.

ಪುರಂದರ ದಾಸರು ವಿಜಯನಗರ ಸಾಮ್ರಾಜ್ಯದ ಆಸ್ಥಾನ ಪ್ರಮುಖರಾಗಿ ಹೊರಹೊಮ್ಮಿದ್ದು ಹೇಗೆ?
ಆರಗದ ಪುರಂದರ ದಾಸರು ವಿಜಯನಗರ ಸಾಮ್ರಾಜ್ಯದ ಮೇರು ಕವಿಯಾಗಿ, ಹರಿಕೀರ್ತನೆಗಳ ಮೂಲಕ ಇಡಿ ವಿಜಯನಗರ ಸಾಮ್ರಾಜ್ಯದ ಆಸ್ಥಾನ ಪ್ರಮುಖರಾಗಿ ಹೊರಹೊಮ್ಮಿದ್ದು ಹೇಗೆ ಎನ್ನುವುದು ಬಹುದಿನಗಳ ಪ್ರಶ್ನೆಯಾಗಿತ್ತು.

ಎಲ್ಲಿಯ ಆರಗ? ಎಲ್ಲಿಯ ವಿಜಯನಗರ? ಎಲ್ಲಿಯ ಶ್ರೀನಿವಾಸ ನಾಯಕ? ಎಲ್ಲಿಯ ಹಂಪೆಯ ಅರಸರು? ಎನ್ನುವ ಪ್ರಶ್ನೆ ಮೂಡುತ್ತಿತ್ತು. ಆದರೆ ಇತಿಹಾಸದ ಪುಟದ ಆಳಕ್ಕೆ ಇಳಿದಂತೆ ಶ್ರೀನಿವಾಸ ನಾಯಕರಿಗಿಂತಾ ಬಹುಮುಂಚೆಯೆ ಆರಗ ಗುತ್ತಿ ಸಾಮ್ರಾಜ್ಯದ ಹತ್ತು ಹಲವು ಸಂಗತಿಗಳಿಂದ ಆರಗವು ಇತಿಹಾಸದ ಪುಟದಲ್ಲಿ ಚರಿತ್ರಾರ್ಹ ದಾಖಲೆಗೊಳೊಂದಿಗೆ ಸಮೃದ್ದ ಊರಾಗಿತ್ತು ಎನ್ನುವ ಮಹತ್ವದ ಸಂಗತಿ ಬಯಲಾಗುತ್ತದೆ.

ವಿಶೇಷವೆಂದರೆ ಪುರಂಧರದಾಸರು ಹುಟ್ಟುವ ನೂರು ವರ್ಷ ಮುಂಚೆಯೆ ಅಂದರೆ 1362ರ ಸುಮಾರಿಗೆ ಆರಗ – ಗುತ್ತಿ (ಈಗಿನ ಚಂದ್ರಗುತ್ತಿ) ಜಂಟಿ ರಾಜ್ಯವಾಗಿ ವಿಜಯನಗರದ ಆಳ್ವಿಕೆ ನಡೆಸುತ್ತಿದ್ದ ಸಂಗಮ ದೊರೆಗಳ ಅಧಿನದಲ್ಲಿತ್ತು. ವಿಜಯನಗರದ ಅರಸರು ತಮ್ಮ ಸಾಮ್ರಾಜ್ಯವನ್ನು ಹಲವು ರಾಜ್ಯಗಳಾಗಿ ವಿಂಗಡಿಸಿ ಸಂಗಮ ಸಹೋದರರಿಗೆ ಪಟ್ಟ ಕಟ್ಟಲಾಗಿತ್ತು ಅಂಥಹದೆ ಒಂದು ರಾಜ್ಯವಾಗಿ ಆರಗ ಗುತ್ತಿ ರಾಜ್ಯವೂ ವಿಜಯನಗರದ ಅಧೀನ ರಾಜ್ಯವಾಗಿ ಆರಗದ ಹದಿನೆಂಟು ಕಂಪಣ, ಗುತ್ತಿಯ ಹದಿನೆಂಟು ಕಂಪಣದ ಒಟ್ಟು ರಾಜ್ಯವಾಗಿ ಸಂಗಮ ದೊರೆಗಳ ಸಹೋದರರಲ್ಲೆ ಒಬ್ಬರಾದ ಮಾರಪ್ಪರಾಯನ ಆಡಳಿತಕ್ಕೆ ಒಳಪಟ್ಟಿತ್ತು.

ದಾಸಶ್ರೇಷ್ಠ ಶ್ರೀ ಪುರಂದರ ದಾಸರು

ಈಗಿನ ಶಿವಮೊಗ್ಗದ ತೀರ್ಥಹಳ್ಳಿ, ಹೊಸನಗರ,ಶಿವಮೊಗ್ಗ,ಸಾಗರ ಚಿಕ್ಕಮಗಳೂರಿನ ಬಹುತೇಕ ಭಾಗಗಳಿಗೆ ಆರಗ ರಾಜಧಾನಿಯಾಗಿಯೂ, ಉತ್ತರ ಕನ್ನಡ ಮತ್ತು ಶಿವಮೊಗ್ಗದ ಸೊರಬ ಭಾಗಗಳಿಗೆ ಚಂದ್ರಗುತ್ತಿ ರಾಜಧಾನಿಯಾಗಿಯೂ ಆಡಳಿತಕ್ಕೊಳಪಟ್ಟಿತ್ತು. ಆಗಿನ ಪೊಂಬುರ್ಚಪುರ ಈಗಿನ ಹೊಂಬುಜದ ಸಾಂತರ( ಸಾಂತಳಿಕೆ, ಸಾಂತಳಿಗೆ -1000) ಜೈನ ಸಾಮ್ರಾಜ್ಯವು ಮೇರು ಪಥದಲ್ಲಿರುವವರೆಗೆ ಆರಗಕ್ಕೆ ಅಂಥಹ ಪ್ರಾಮುಖ್ಯತೆ ಸಿಕ್ಕಿರಲಿಲ್ಲಾ, ಸಾಂತರರು ಹೊಂಬುಜದಿಂದ ಹೊಸಗುಂದ ಅಲ್ಲಿಂದ ಕಳಸದೆಡೆಗೆ ಸಾಗಿದ ಮೇಲೆ ಹೊಯ್ಸಳರ ಕಾಲಘಟ್ಟದಲ್ಲೂ ಆರಗ ಎಲ್ಲಿಯೂ ಕಣ್ಣಿಗೆ ಬೀಳುವುದಿಲ್ಲಾ ಆದರೆ ವಿಜಯನಗರದ ಆರಂಭದೊಂದಿಗೆ ಹೊಂಬುಜ ಮರೆಯಾಗಿ ಸಂಗಮ ದೊರೆ ಮಾರಪ್ಪರಾಯ ಆರಗ ಗುತ್ತಿಯ ರಾಜ್ಯಾಧಿಕಾರ ಪಡೆಯುವುದರೊಂದಿಗೆ ಆರಗ ಪ್ರಾಮುಖ್ಯತೆ ಪಡೆದುಕೊಳ್ಳುತ್ತಾ ಸಾಗುತ್ತದೆ. ಆರಗ ರಾಜ್ಯವನ್ನು ಮಧುವಂಕ ನಾಡು ಎಂದು ಕರೆಯಲಾಗಿದೆ . ಈ ಮಧುವಂಕ ನಾಡು ಎಂಬುದು ಬನವಾಸಿಯ ಮಧುಕೇಶ್ವವರನಿಗೆ ಸಂಬಂಧಿಸಿದ್ದು ಎನ್ನುವವರು ಇದ್ದಾರಾದರು ದಾಖಲೆಗಳಿಲ್ಲಾ. ಇನ್ನು ವಿಜಯನಗರ ಕಾಲದ ರಾಜ್ಯವಾಗುವ ಮುಂಚೆಯೆ ಮಧುವಂಕ ನಾಡು ಅಸ್ತಿತ್ವದಲ್ಲಿರಲು ಬಹುದಾದರು ಆರಗ ಗುತ್ತಿ ರಾಜ್ಯಕ್ಕೆ ಮಧುವಂಕ ನಾಡಾಗಿ ಶಾಸನ, ದಾಖಲೆಗಳಲ್ಲಿ ಮಾನ್ಯತೆ ದೊರೆತಿದ್ದು ವಿಜಯನಗರ ಸಾಮ್ರಾಜ್ಯದಲ್ಲೆ.

ಆರಗ ರಾಜ್ಯವನ್ನು ಉಲ್ಲೇಖಿಸುವ ಶಾಸನಗಳು 1362 ರಿಂದ ಆರಂಭವಾಗಿ ವಿಜಯನಗರದ ಕೊನೆಯ ಕಾಲಘಟ್ಟವಾದ 1665ರವರೆಗೆ ಇದೆ. ವಿಜಯನಗರದ ಆಡಳಿತದ ನಂತರವು ಬಹುತೇಕ ಆರಗ ರಾಜ್ಯವು ಕೆಳದಿಯ ಅರಸರ ಆಡಳಿತಕ್ಕೆ ಒಳಪಟ್ಟಿದ್ದು ಕವಲೇದುರ್ಗ, ಬಿದನೂರು ಪ್ರಾಮುಖ್ಯತೆ ಪಡೆಯುವುದರೊಂದಿಗೆ ಆರಗದ ಪ್ರಾಮುಖ್ಯತೆ ಅಂತ್ಯವಾಗಿದೆ. ಈ ಆರಗ ರಾಜ್ಯದಲ್ಲಿ 18 ಕಂಪಣಗಳು ಹಾಗೂ ಮೂರು ಪಟ್ಟಣಗಳು ಇದ್ದವು ಎಂದು ಬಹುತೇಕ ಶಾಸನಗಳು ತಿಳಿಸುತ್ತವೆ. ಒಳಗೋಡಿನ ಕ್ರಿ.ಶ.1560ರ ಶಾಸನವೊಂದು ಆರಗ ರಾಜ್ಯದಲ್ಲಿ 50 ನಾಡುಗಳು(ಊರು) ಅಂತರ್ಗತವಾಗಿದ್ದವು ಎಂದು ತಿಳಿಸುತ್ತದೆ. ಭಾರತೀಪುರ ಹಾಗೂ ಹುಂಚದಕಟ್ಟೆಯ ಶಾಸನಗಳು ಆರಗ ರಾಜ್ಯದಲ್ಲಿ ಪ್ರಮುಖವಾದ 60 ಅಗ್ರಹಾರಗಳಿದ್ದವು ಎಂದು ತಿಳಿಸುತ್ತದೆ.

ಆರಗದ ಐವತ್ತು ನಾಡುಗಳ ಬಹು ಪ್ರದೇಶವು ಇಂದಿನ ತೀರ್ಥಹಳ್ಳಿಯ ಈಗಿನ ಊರುಗಳ ಹೆಸರೆ ಹೊಂದಿವೆ. ಅತ್ತಿಗಾರು, ಅಲುಗವಳ್ಳಿ, ಬಾಳಗೋಡು, ಮಳಲಿ, ಜಂಬೆ, ಬಸವನ ಕಲ್ಲು, ನೆರಟೂರು, ಹೊರಣಿ, ಶಿವರಾಜಪುರ, ಯಡೆಹಳ್ಳಿ, ಸಾಲೂರು, ಕೊಡಸಗೊಳಿ, ಬಳ್ಳೂರು, ಸೂರಳಿ, ಮರಗಳಲೆ, ಜೆಗಟಿಗಾರೆ, ಮಹಿಷಿ, ಕೂಳೂರು, ಬಿಕ್ಕನೂರು, ಬಸವಾನಿ, ಮತ್ತೂರು ಮುಂತಾದ ಊರುಗಳ ಆರಗ ರಾಜ್ಯದ ನಾಡುಗಳ ಪ್ರಸ್ತಾಪದಲ್ಲಿದೆ. ರಾಜಧಾನಿ ಆರಗವು ತುಂಗಾ ನದಿಯ ತಟದಲ್ಲಿ ಕುಶಾವತಿಯ ದಡದಿಂದ ಗೋಪಿನಾಥ ಹೊಳೆಯವರೆಗಿತ್ತು ಎನ್ನುವ ಪ್ರಸ್ತಾಪ ನೊಡಿದರೆ ತೀರ್ಥರಾಜಪುರ (ತೀರ್ಥಹಳ್ಳಿ) ವೂ ಆರಗದಲ್ಲಿ ಸೇರಿ ಹೊಗಿತ್ತು ಎನ್ನಬಹುದು.

ಇನ್ನೂ ಹಲವು ಗ್ರಾಮಗಳ ಗುಂಪಿಗೆ ಭಾಗೆ ಎಂತಲೂ ಮೇಲುಬಾಗೆಯಲ್ಲಿ ಬೊಂದಿ, ಕಲ್ಲಿನಾಥಪುರ, ತೊರಗಲೆಗಳಿದ್ದವು. ಸಾಲೂರು ಬಾಗೆಯಲ್ಲಿ ಸಿಂಗಪೊಟ್ಟಣ, ಸಾಲೂರು, ಕೋಳೂರುಗಳಿದ್ದವು. ಬೆಳ್ಳುರು ಬಾಗೆಯಲ್ಲಿ ಭಾರತೀಪುರ ಹಾಗೂ ಭಾವರಸನ ಕೊಪ್ಪ ಗ್ರಾಮಗಳಿದ್ದವು.

ಮಧುವಂಕ ನಾಡಿನಲ್ಲಿ ಕೆಲವು ಪಟ್ಟಡಿಗಳಿದ್ದವು. ಈ ಪಟ್ಟಡಿಗಳು ಕಂದಾಯ ವ್ಯವಸ್ಥೆಯ ಕೇಂದ್ರಭಾಗವಾಗಿದ್ದವು. ಕೊಡಸಗೊಳಿ ಪಟ್ಟಡಿಯಲ್ಲಿ ಬೊಬ್ಬಳ್ಳಿ, ವಡದಕೆರೆ ಗ್ರಾಮ, ಹಿಂಡಚವಳ್ಳಿ, ಕುಕ್ಕರಿ ಗ್ರಾಮ, ಮಾವಕೋಡು ಗ್ರಾಮ ಹಾಗೂ ಕೇದಗೆ ಬಯಲು ಗ್ರಾಮಗಳಿದ್ದವು. ಜಂಬೇ ಪಟ್ಟಡಿಯಲ್ಲಿ ಮರಗಳಲೆ, ನಿರಜವಳ್ಳಿ ಹಾಗೂ ಬಸವನಕಲ್ಲು ಗ್ರಾಮಗಳಿದ್ದವು. ವಂಬೀ ಪಟ್ಟಡಿಯಲ್ಲಿ ಬಸವನಕಲ್ಲು ಗ್ರಾಮವಿತ್ತು. ನೆರಟೂರು ಪಟ್ಟಿಡಿಯಲ್ಲಿ ಸೂರಳಿ ಗ್ರಾಮವಿತ್ತು.

ಆರಗ ರಾಜ್ಯದಲ್ಲಿನ ಆರ್ಥಿಕ ಚಟುವಟಿಕೆಗಳ ಮೂಲ ಕೇಂದ್ರವಾಗಿದ್ದುದು ಪೇಟೆಗಳು. ಸಮುದ್ರದಿಂದ ಬರುತ್ತಿದ್ದ ಪದಾರ್ಥಗಳಿಗೆ ಆರಗವು ಮುಖ್ಯ ನೆಲೆಯಾಗಿತ್ತು. ಆಂತರಿಕ ವ್ಯಾಪಾರ ಹಾಗೂ ವಿದೇಶಿ ವ್ಯಾಪಾರಗಳಿಗೆ ಇದು ಕೇಂದ್ರವಾಗಿತ್ತು. ಯಥೇಚ್ಛವಾಗಿ ಬೆಳೆಯುತ್ತಿದ್ದ ಮಲೆನಾಡಿನ ಪದಾರ್ಥಗಳಿಗೆ ವಿದೇಶದ ಮಾರುಕಟ್ಟೆಗಳಲ್ಲಿಯೂ ವಿಶೇಷವಾದ ಬೆಲೆಯಿತ್ತು. ಆರಗ ರಾಜ್ಯದಲ್ಲಿ ಇಂತಹ ಎಂಟು ಪೇಟೆಗಳನ್ನು ಶಾಸನಗಳಲ್ಲಿ ದಾಖಲಾಗಿವೆ.

ಆರಗದ ವೇಂಟೆ (ರಾಜಧಾನಿ) ಯಲ್ಲಿ 8 ಪೇಟೆಗಳು ಇದ್ದವು ಕವಲೇದುರ್ಗದ 1674ರ ಶಾಸನವು ಹೀಗೆ ದಾಖಲಿಸುತ್ತದೆ. “ಆರಗದ ವೆಂಟೆಯಕೆ ಸಲುವ ಆರಗ ಕೊಡಲೂರು, ಯೆಡೆಹಳ್ಳಿ, ಅವಿನಹಳ್ಳಿ, ಕಾರೂರು, ಬಿದರೂರು, ಮೊಸರೂರು ಮಾಳೇನಹಳ್ಳಿ ಸಹಾ ಎಂಟು ಪೇಟೆಗಳಲ್ಲಿ ಅರಮನೆಯ ಸುಂಕಕೆ…’’ ಈ ಎಂಟು ಪೇಟೆಗಳಲ್ಲಿ ನಾನಾ ರೀತಿಯ ತೆರಿಗೆಗಳನ್ನು ಅರಮನೆಯವರಿಗೆ ಕಟ್ಟಬೇಕಾಗಿತ್ತು.
“ಈ ಪೇಟೆಗಳಲ್ಲಿ ಅಡಕೆ, ಮೆಣಸು, ಝಲಿಪಟಿ, ಖೊಬರಿ, ಕವಾಡ ಮುಂತಾದ ಗಡಿಸಿನ ಸರಕು ಹೊರತಾಗಿ ಅಕ್ಕಿ, ಭತ್ತ, ರಾಗಿ, ಎಣ್ಣೆ, ತುಪ್ಪ, ಕಾಯಿ, ಬೆಲ್ಲ ಮುಂತಾಗಿ’’ ವಸ್ತುಗಳು ವಿಕ್ರಯವಾಗುತ್ತಿತ್ತು.

ಇನ್ನೂ ಆರಗ – ಗುತ್ತಿ ಯ ರಾಜರಾಗಿ ಮಾರಪ್ಪರಾಯರಿದ್ದರು ಆರಗ ಗುತ್ತಿ ರಾಜ್ಯದ ಅಧಿನದಲ್ಲಿದ್ದ ಮಧುವಂಕ ನಾಡನ್ನು ವಿಜಯನಗರದ ಅರಸ ವೀರ ಬುಕ್ಕಣ್ಣ ಒಡೆಯನ ಮಗ ವಿರುಪಾಕ್ಷರಾಯ (1362-1382) ಅಥವಾ ವಿರುಪಣ್ಣ ಒಡೆಯ ಆಳಿದ ಮೊದಲಿಗ. ಈ ವಿರುಪಾಕ್ಷರಾಯನ ಹೆಸರಿನಲ್ಲೆ ಈಗಿನ ವಿರುಪಾಕ್ಷ ಪುರ ಅಥವಾ ವಿರುಪಾಪುರ ಎಂಬ ಹೆಸರು ಗ್ರಾಮಕ್ಕಿಡಲಾಗಿದೆ ಎನ್ನುತ್ತಿವೆ ಆಕರಗಳು.
ನಂತರ ಸೋರಣ್ಣ ಒಡೆಯ, ಜನ್ನರಸ ರಾಯ, ವಿಠ್ಟಪ್ಪ ಒಡೆಯ, ಲಿಂಗಣ್ಣ ಒಡೆಯ, ಸಿರಿಗಿರಿನಾಥ ಒಡೆಯ, ದೇವಪ್ಪ ದಣ್ಣನಾಯಕ ಸೇನಭೋವ (ಸೇನಾಪತಿ ಮತ್ತು ಮಂತ್ರಿ) ಹರಿಯಪ್ಪ, ಸಿಂಗರಸರ ಹೆಸರು ಶಾಸನಗಳಲ್ಲಿವೆ ಹೀಗೆ ಮುಂದುವರೆದು ಹತ್ತು ಹಲವಾರು ಒಡೆಯರ ಆಳ್ವಿಕೆಗೊಳಪಟ್ಟಿದೆಯಾದರು ವಿಜಯನಗರದ ಅವನತಿಯ ನಂತರ ಆರಗ ರಾಜ್ಯದ ಪ್ರಸ್ತಾಪ ಅಲ್ಲಲ್ಲಿದ್ದರು ಕೆಳದಿಯ ಸಾಮ್ರಾಜ್ಯದ ಪ್ರಾಮುಖ್ಯತೆ ಹೆಚ್ಚಾಗಿ ಆರಗ ಪ್ರಾಮುಖ್ಯತೆ ಕಳೆದುಕೊಳ್ಳುತ್ತಾ ಪಕ್ಕದ ಪ್ರದೇಶವಾದ ಕವಲೆದುರ್ಗ ಪ್ರಾಮುಖ್ಯತೆ ಪಡೆಯುತ್ತಾ ಸಾಗಿದಂತೆ ಕಾಣುತ್ತದೆ.

ವಿಜಯನಗರ ಸಾಮ್ರಾಜ್ಯದ ಪ್ರಮುಖ ರಾಜ್ಯ ವ್ಯಾಪಾರಿ‌ ಕೇಂದ್ರವಾಗಿದ್ದ ಆರಗದಲ್ಲಿ ಹುಟ್ಟಿದ ಪುರಂಧರ ದಾಸರು ಪ್ರಮುಖ ವ್ಯಾಪಾರಿಯ ಮಗನಾಗಿ ,ಅಗರ್ಭ ಶ್ರೀಮಂತರ ಮಗನಾಗಿ ಆರಗದಲ್ಲಿ ತಮ್ಮ ಜೀವನ ನಡೆಸಿ ನಂತರದಲ್ಲಿ ವೈರಾಗ್ಯ ಮೂಡಿ ಎಲ್ಲವ ತ್ಯಜಿಸಿ ಕೀರ್ತನೆಕಾರರಾಗಿ, ಕರ್ನಾಟಕ ಸಂಗೀತಕ್ಕೆ ಹೊಸ ಭಾಷ್ಯೆ ಬರೆಯುತ್ತಾ ವಿಜಯನಗರ ಸಾಮ್ರಾಜ್ಯದ ಆಸ್ಥಾನದ ಆಸ್ತಿಯಾಗುವಲ್ಲಿ ಆರಗ ಆ ಕಾಲಕ್ಕೆ ವಿಜಯನಗರ ಸಾಮ್ರಾಜ್ಯದ ಪ್ರಮುಖ ರಾಜ್ಯದ ರಾಜಧಾನಿಯಾಗಿದ್ದು ಪೂರಕವಾಗಿ ಕೆಲಸ ಮಾಡಿದ್ದು ಕಾರಣವಾಗಿರುವುದಂತೂ ಹೌದು……

“Powerful people comes from powerful places”
ಎಂಬಂತೆ ಮಧುವಂಕರ ನಾಡು ಆರಗ ಸೀಮೆಯಿಂದ ಹುಟ್ಟಿದ ಪುರಂಧರ ದಾಸರು ಆರಗ ಸೀಮೆಯ ಖ್ಯಾತಿ ನಾಡಿನೆಲ್ಲೆಡೆ ಪಸರುವಂತೆ ಮಾಡಿದರು. ಮಧುವಂಕರ ನಾಡು ಆರಗದ ಪುರಂಧರ ದಾಸರು ತೀರ್ಥಹಳ್ಳಿಯ ಹೆಮ್ಮೆ…

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಆದರ್ಶ ಹುಂಚದಕಟ್ಟೆ
ಚಿಂತಕರು, ಬರಹಗಾಗರು