adjp alok kumar – Peepal Media

ಕುಕ್ಕರ್‌ ಬಾಂಬ್‌ ಸ್ಫೋಟ: ಆರೋಪಿ ಪತ್ತೆ ಹಚ್ಚಿದ ಪೊಲೀಸರು
ಮಂಗಳೂರು: ನಗರದ ಗರೋಡಿಯಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದು, ಆರೋಪಿಯು ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ನಿವಾಸಿ ಶಾರೀಕ್‌ ಎಂದು ಗುರುತಿಸಿದ್ದಾರೆ.

ಶಂಕಿತ ಆರೋಪಿಯು ನಗರದಲ್ಲಿ ಆಟೋ ರಿಕ್ಷಾ ಮೂಲಕ ಕುಕ್ಕರ್‌ ಬಾಂಬ್‌ ಸಾಗುಸುತ್ತಿದ್ದ ವೇಳೆ ಬಾಂಬ್‌ ಸ್ಫೋಟಗೊಂಡು ಗಾಯಗೊಂಡಿದ್ದ ಕಾರಣ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಹೀಗಾಗಿ ಆತ ಯಾರೆಂಬ ಪ್ರಶ್ನೆ ಪೊಲೀಸರಿಗೆ ಕಾಡುತಿತ್ತು. ಇದೀಗ ಆ ಪ್ರಶ್ನೆಗೆ ಬ್ರೇಕ್‌ ಬಿದ್ದಂತಾಗಿದ್ದು, ವ್ಯಕ್ತಿಯು ಶಾರೀಕ್‌ ಎಂದು ಆತನ ಕುಟುಂಬದವರು ದೃಢ ಪಡಿಸಿದ್ದಾರೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ. ಆದರೆ ಈ ಕೃತ್ಯದ ಹಿಂದೆ ನಿಜಕ್ಕೂ ಯಾರಿದ್ದಾರೆ ಎಂದು ತನಿಖೆ ಜಾರಿಯಲ್ಲಿದೆ.

ಶಾರೀಕ್‌

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶನಿವಾರ ನಗರದ ಗರೋಡಿಯಲ್ಲಿ ರಿಕ್ಷಾ ಮೂಲಕ ಕುಕ್ಕರ್‌ ಬಾಂಬ್‌ ಸಾಗಿಸುತ್ತಿರುವ ಸಂದರ್ಭದಲ್ಲಿ ಬಾಂಬ್‌ ಸ್ಫೋಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿಯು ನಗರದ ಖಾಸಗಿ ಆಸ್ಪತ್ರೆಯಲ್ಲಿ (ಮಲ್ಲರ್‌ ಆಸ್ಪತ್ರೆ) ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಯಾರೆಂಬುವುದನ್ನು ತಿಳಿಯಲು ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಬಳಿಕ ಆ ವ್ಯಕ್ತಿಯು ಶಾರೀಕ್‌ ಎಂದು ಆತನ ಕುಟುಂಬದವರು ಖಚಿತಪಡಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬಾಂಬ್‌ ಸ್ಪೋಟಿಸಿದ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ಮೈಸೂರಿನ ಲೋಕನಾಯಕ ನಗರ, ಮೇಟಗಳ್ಳಿಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಶಂಕಿತ ಆರೋಪಿ ವಾಸವಾಗಿದ್ದ ಎಂದು ಸುಳಿವು ತಿಳಿದುಬಂದಿದೆ. ಆಗ ಸ್ಫೋಟದಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ಪೋಟೋವನ್ನು  ಮನೆಯ ಮಾಲಿಕನಿಗೆ ತೋರಿಸಿದಾಗ ಆತನು, ಅದೇ ಮನೆಯಲ್ಲಿ ವಾಸವಿದ್ದ ಎಂದು ಹೇಳಿದ್ದಲ್ಲದೆ ನಂತರ ಪೊಲೀಸರು ಮನೆಯ ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ, ಆತನ ಕೋಣೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ, ಜೊತೆಗೆ ಎರೆಡು ನಕಲಿ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಮೊಬೈಲ್‌, ದೊರಕಿವೆ ಎಂದು ತಿಳಿಸಿದ್ದಾರೆ.

‘ಮನೆ ಬಾಡಿಗೆ ತೆದುಕೊಳ್ಳುವಾಗ ನೀಡಿದ ಮನೆ ವಿಳಾಸವನ್ನು ವಿಚಾರಿಸಿದಾಗ, ಆತ ನೀಡಿರುವ ವಿಳಾಸ ಸುಳ್ಳು, ಹಾಗೂ  ಶಾರೀಕ್  ಅಂತರಾಷ್ಟ್ರೀಯ ಮಟ್ಟದಲ್ಲಿರುವ ಉಗ್ರ ಸಂಘಟನೆಯೊಂದರಿಂದ ಪ್ರೇರಣೆ ಹೊಂದಿದ್ದ ಎಂದು ತಿಳಿದು ಬಂದಿದೆ’ ಎಂದು ಪೊಲೀಸರು ಶಂಕಿಸಿದ್ದಾರೆ.

‘ಶಾರೀಕ್‌, ನಗರದಲ್ಲಿ ಸ್ಪೋಟಿಸುವ ಉದ್ದೇಶದಿಂದಾಗಿ ಕುಕ್ಕರ್‌ ಬಾಂಬ್‌ ಸಾಗಿಸುತ್ತಿದ್ದ, ಆದರೆ ಬಾಂಬ್‌ ತಯಾರಿಯಲ್ಲಿ ಅಷ್ಟೋಂದು ಪರಿಣಿತಿ ಇಲ್ಲದ ಕಾರಣ, ಬಾಂಬ್‌ ಸ್ಫೋಟಗೊಳಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ’ ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಶಾರೀಕ್‌ ಆರೋಪಿ ಎಂದು ಗುರುತಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದವರು ಎಂದು ಆರೋಪಿಸಲಾದ ಇನ್ನೂ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿಲಾಗುತ್ತಿದೆ.

ಪ್ರವೀಣ್‌ ನೆಟ್ಟಾರು ಹತ್ಯೆಯ ಪ್ರಮುಖ 3 ಆರೋಪಿಗಳ ಬಂಧನ
ಮಂಗಳೂರು: ರಾಜ್ಯಾದಂತ ಸಂಚಲನ ಮೂಡಿಸಿದ ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನ ಪೋಲಿಸರು ಇಂದು ಬಂಧಿಸಿದ್ದಾರೆ.

ಹತ್ಯೆಗೆ ಸಂಬಂಧಿಸಿದ ಏಳು ಜನರನ್ನ ಈಗಾಗಲೇ ಬಂಧಿಸಲಾಗಿದ್ದು, ಇನ್ನೂ ಮೂವರು ಪ್ರಮುಖ ಆರೋಪಿಗಳಾದ ಶಿಯಾಬುದ್ದಿನ್‌ ಅಲೀ, ರೀಯಾಝ್‌ ಅಂಕತಡ್ಕ, ಬಶೀರ್‌ ಎಂಬುವರನ್ನು ತಲಾಪಡಿ ಚೆಕ್‌ ಪೋಸ್ಟ್‌ ಬಳಿ ಬಂಧಿಸಲಾಗಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದರು.

ನಾಳೆಯಿಂದ ಒಂದು ವಾರ ಬೈಕ್‌ ಹಿಂಬದಿ ಸವಾರರಿಗೆ ನಿರ್ಬಂಧ: ಎಡಿಜಿಪಿ ಅಲೋಕ್ ಕುಮಾರ್
ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಮೊಹಮದ್ ಫಾಝಿಲ್ ಹತ್ಯೆ ಬಳಿಕ ಹೇರಲಾಗಿದ್ದ ಸೆಕ್ಷನ್ 144 ನಿಷೇಧಾಜ್ಞೆಯನ್ನು ಸಡಿಲಿಸುವಂತೆ ಎಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ದು, ಬೈಕ್‌ ಸವಾರರಿಗೆ ಹೊಸ ನಿರ್ಬಂಧ ಹೇರಲಾಗಿದೆ ಎಂದರು.

ಮಂಗಳೂರು ನಗರದಲ್ಲಿ ಹೇರಲಾಗಿದ್ದ ನಿಷೇಧಾಜ್ಞೆಗೆ ಸಂಬಂಧಿಸಿದಂತೆ ಇಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೈಕ್‌ ಹಿಂಬದಿ ಸವಾರರ ನಿರ್ಬಂಧದ ಕುರಿತು ಸೂಚನೆ ನೀಡಿರುವ ಎಡಿಜಿಪಿ ಅಲೋಕ್ ಕುಮಾರ್,  ಫಾಝಿಲ್ ಹತ್ಯೆಯ ಹಿನ್ನೆಲೆಯಲ್ಲಿ ಅಹಿತಕರ ಘಟನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರ ಆಯುಕ್ತರು ಜುಲೈ 28 ರಿಂದ ಆಗಸ್ಟ್ 5 ರವರೆಗೆ ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯ ವರೆಗೆ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು.ಈ ಮಧ್ಯೆ ಮಂಗಳೂರು ನಗರ ಸಹಜ ಸ್ಥಿತಿಗೆ ಬರುತ್ತಿರುವ ಕಾರಣ ಆಗಸ್ಟ್ 5ರ ಬಳಿಕ ಹಂತ ಹಂತವಾಗಿ ನಿಷೇಧಾಜ್ಞೆಯನ್ನು ಸಡಿಲಗೊಳಿಸುವಂತೆ ಹೇಳಿದ್ದು, ನಿಷೇಧಾಜ್ಞೆಯನ್ನು ಸಡಿಲಿಸಿದ ಬಳಿಕ ಒಂದು ವಾರದ ಕಾಲ ಬೈಕ್’ನಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ ಹೇರಲಾಗಿದೆ. ಆದರೆ 18 ವರ್ಷದ ಒಳಗಿನವರು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಈ ರೂಲ್ಸ್ ನಿಂದ ವಿನಾಯತಿ ನೀಡಲಾಗಿದೆ.

ಎಂದು ತಿಳಿಸಿದರು. ಈ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.