Adjustment Politics – Peepal Media

ಚುನಾಯಿತ ಪ್ರತಿನಿಧಿಗಳ ವಿದ್ಯಾರ್ಹತೆಯ ಸುತ್ತಮುತ್ತ..
ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ

ಎನ್‍ಡಿಎ ಸರ್ಕಾರದ ಹೊಸ ಮಂತ್ರಿಮಂಡಲದಲ್ಲಿ ಸಾವಿತ್ರಿ ಠಾಕೂರ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಇದೇ ಜೂನ್ 18ರಂದು, ‘ಸ್ಕೂಲ್ ಚಲೋ ಅಭಿಯಾನ್’ ಅಂಗವಾಗಿ ಅವರು ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಒಂದು ಸರ್ಕಾರಿ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರ ಅಂಗವಾಗಿ ಅವರು ಒಂದು ಫಲಕದ ಮೇಲೆ ಕೇಂದ್ರ ಸರ್ಕಾರದ ಮಹತ್ವದ ಘೋಷಣೆಯಾದ, ‘ಬೇಟಿ ಬಚಾವೋ, ಬೇಟಿ ಪಢಾವೋ’ ಅನ್ನು ಹಿಂದಿ ಭಾಷೆಯಲ್ಲಿ ಬರೆಯಬೇಕಾಗಿತ್ತು. ಆದರೆ, ಅದನ್ನು ಅವರು ತಪ್ಪುತಪ್ಪಾಗಿ ಬರೆದು ಅಪಹಾಸ್ಯಕ್ಕೆ ಈಡಾದರು.

ಸಂಸದರಾಗಿ ಆಯ್ಕೆಯಾಗುವವರಲ್ಲಿ ಸಾಕ್ಷರತೆ ಇರಲೇಬೇಕೇ? ಇಲ್ಲ. ಸಂವಿಧಾನದ 84ನೇ ವಿಧಿ ಪ್ರಕಾರ, ಸಂಸದರಾಗಲು ಅಗತ್ಯವಾದ ಅರ್ಹತೆ ಎಂದರೆ ಭಾರತೀಯ ನಾಗರಿಕರಾಗಿರಬೇಕು, ವಯಸ್ಸು ಕನಿಷ್ಠ 25 ವರ್ಷ ಆಗಿರಬೇಕು, ಘೋಷಿತ ಕ್ರಿಮಿನಲ್ ಆಗಿರಬಾರದು ಎಂದಿದೆ. ಇಲ್ಲಿ ಶಿಕ್ಷಿತರಾಗಿರಬೇಕು ಎಂದೇನೂ ಇಲ್ಲ. ಎಂದರೆ, ಅವರಿಗೆ ಸರಿಯಾಗಿ ಬರೆಯಲು ಬಾರದೇ ಇದ್ದರೂ ಸಾವಿತ್ರಿ ಠಾಕೂರ್ ಅವರಿಗೆ ಸಂಸದೆ, ಸಚಿವೆ ಆಗುವ ಎಲ್ಲಾ ಹಕ್ಕಿದೆ ಎಂದಾಯಿತು. ಆದರೆ, ಈ ವಿಧಿಯನ್ನು ರೂಪಿಸಿದ್ದು ಸಂವಿಧಾನದ ಜಾರಿಯ ಆರಂಭದಲ್ಲಿ. ಆಗ ದೇಶವು ಅದೇ ತಾನೆ ವಸಾಹತುಶಾಹಿಯಿಂದ ಮುಕ್ತಿ ಪಡೆದಿತ್ತು.

1947ರಲ್ಲಿ ದೇಶದ ಸಾಕ್ಷರತಾ ಪ್ರಮಾಣ ಬರೀ ಶೇಕಡ 12ರಷ್ಟು ಇತ್ತು. ಮಹಿಳಾ ಸಾಕ್ಷರತೆ ಪ್ರಮಾಣ ಇನ್ನೂ ಕಡಿಮೆ, ಸುಮಾರು ಶೇ 9ರಷ್ಟು ಇತ್ತು. ಇನ್ನು ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳಲ್ಲಿ ಅನಕ್ಷರರ ಪ್ರಮಾಣವೇ ಹೆಚ್ಚಾಗಿತ್ತು. ಹೀಗಾಗಿ, ಶಾಸಕರು, ಸಂಸದರಾಗಿ ಆಯ್ಕೆಯಾಗುವುದಕ್ಕೆ ಶಿಕ್ಷಣದ ಮಟ್ಟವನ್ನು ನಿಗದಿ ಮಾಡಿಬಿಟ್ಟರೆ, ದೇಶದ ಬಹುತೇಕ ಜನರನ್ನು ಇದರಿಂದ ವಂಚಿತರನ್ನಾಗಿ ಮಾಡಿದಂತಾಗುತ್ತದೆ. ಎಲ್ಲರನ್ನೊಳಗೊಳ್ಳುವ ಜನತಂತ್ರದ ಆಶಯಕ್ಕೆ ಧಕ್ಕೆ ಬರುತ್ತದೆ ಎಂಬುದು ಸಂವಿಧಾನ ರಚನೆಕಾರರ ಕಳವಳವಾಗಿತ್ತು.

ಆ ಹೊತ್ತಿಗೆ ಇದು ಅತ್ಯಂತ ಸಮಂಜಸವಾದ ತೀರ್ಮಾನವಾಗಿತ್ತು. ಆದರೆ, ಸ್ವಾತಂತ್ರ್ಯಾನಂತರ ಪಂಚವಾರ್ಷಿಕ ಯೋಜನೆಗಳಲ್ಲಿ ಒಟ್ಟಾರೆ ಶಿಕ್ಷಣ, ಅದರಲ್ಲೂ ಮುಖ್ಯವಾಗಿ ಸಾಕ್ಷರತೆ, ವಯಸ್ಕರ ಶಿಕ್ಷಣ, ತೆರೆದ ಶಾಲೆಗಳು ಇತ್ಯಾದಿ ಯೋಜನೆಗಳ ಫಲವಾಗಿ ಸಾಕ್ಷರತೆ ಪ್ರಮಾಣವು ಕ್ರಮೇಣ ಏರುತ್ತಾ ಬಂತು. ಈಗ ಸಾಕ್ಷರತೆ ಪ್ರಮಾಣವು ಪುರುಷರಲ್ಲಿ ಶೇ 85ರಷ್ಟು ಇದೆ, ಮಹಿಳೆಯರಲ್ಲಿ ಶೇ 72ಕ್ಕೆ ತಲುಪಿದೆ. ಈಗಲೂ ಜನಪ್ರತಿನಿಧಿಗಳಿಗೆ ಸಾಕ್ಷರತೆ, ಶಿಕ್ಷಣ ಇಲ್ಲದಿದ್ದರೂ ನಡೆಯುತ್ತದೆ ಎಂದು ಹೇಳುವುದು ಸರಿಯೇ? ಹಾಗೆ ನೋಡಿದರೆ, 46 ವರ್ಷದ, ಧಾರ್‌ನಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸಾವಿತ್ರಿ ಠಾಕೂರ್ ಅವರು 2024ರ ಚುನಾವಣೆಗಾಗಿ ನಾಮಪತ್ರ ಸಲ್ಲಿಸುವಾಗ ತಾವು, 2018ರಲ್ಲಿ ಉರ್ದು ಎಜುಕೇಷನ್ ಬೋರ್ಡಿನ 12ನೇ ತರಗತಿಯನ್ನು ಪಾಸು ಮಾಡಿರುವುದಾಗಿ ದಾಖಲಿಸಿದ್ದಾರೆ. ನಮ್ಮಲ್ಲಿ ಕೆಲವು ಪ್ರಮುಖ ಸಚಿವರನ್ನೂ ಒಳಗೊಂಡ ಹಾಗೆ ಹಲವು ಜನಪ್ರತಿನಿಧಿಗಳು ತಾವು ಹೊಂದಿರುವುದಾಗಿ ಹೇಳಿಕೊಂಡಿರುವ ಶೈಕ್ಷಣಿಕ ಅರ್ಹತೆಗಳು ಅನೇಕ ವಿವಾದಗಳನ್ನು ಹುಟ್ಟುಹಾಕಿರುವುದೂ ಇದೆ.

ಹಿಂದುಳಿದ ವರ್ಗಗಳಿಗೆ, ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎನ್ನುವುದನ್ನು ಒಪ್ಪುವುದಾದರೂ ಅವರು ವಹಿಸಬೇಕಾಗಿರುವ ಜವಾಬ್ದಾರಿಯ ಕುರಿತೂ ಲಕ್ಷ್ಯ ಇರಬೇಕಾಗುತ್ತದೆ. ಸಾವಿತ್ರಿ ಠಾಕೂರ್‌ ಅವರು ಒಂದು ಉದಾಹರಣೆಯಷ್ಟೆ. ಈಗ ಇವರು ತಮ್ಮ ಸಚಿವೆ ಸ್ಥಾನದಿಂದ ಸುಮಾರು ₹36 ಸಾವಿರ ಕೋಟಿ ಮೊತ್ತದ ಬಜೆಟ್ಟನ್ನು ನಿರ್ವಹಿಸಬೇಕಾಗುತ್ತದೆ. ನಿತ್ಯ ಹತ್ತಾರು ಕಡತಗಳನ್ನು ಓದಿ, ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಘಟಾನುಘಟಿ ಐಎಎಸ್ ಅಧಿಕಾರಿಗಳನ್ನು ನಿಭಾಯಿಸಬೇಕಾಗುತ್ತದೆ. ದೇಶದ ಕೋಟ್ಯಂತರ ಮಕ್ಕಳ ಮತ್ತು ಮಹಿಳೆಯರ, ಶೋಷಿತರ, ಹಿಂದುಳಿದವರ ಧ್ವನಿಯಾಗಬೇಕಾಗುತ್ತದೆ. ಇಂಥ ಒಬ್ಬ ವ್ಯಕ್ತಿ ತಮ್ಮ ಖಾತೆಯ ವ್ಯಾಪ್ತಿಗೊಳಪಡುವ ಅದರಲ್ಲೂ ಭಾರಿ ಪ್ರಚಾರ ಪಡೆದಿರುವ ಒಂದು ಘೋಷಣೆಯನ್ನೂ ಸರಿಯಾಗಿ ಬರೆಯಲು ಸಾಧ್ಯವಾಗದಿದ್ದರೆ ಹೇಗೆ ಎಂದು ವಿರೋಧ ಪಕ್ಷಗಳ ಪ್ರತಿನಿಧಿಗಳು ತೀವ್ರವಾಗಿ ಟೀಕಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂವಿಧಾನದ ವಿಧಿ 84ರ ತಿದ್ದುಪಡಿಯಾಗಬೇಕು, ಎಲ್ಲ ಹಂತಗಳಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸಬೇಕು ಎಂಬುದೂ ಕೆಲವರ ವಾದವಾಗಿದೆ. ಶಿಕ್ಷಣವು ಚುನಾಯಿತ ಪ್ರತಿನಿಧಿಗಳಲ್ಲಿ ನಿರ್ದಿಷ್ಟ ಮಟ್ಟದ ಸಾಮರ್ಥ್ಯ, ತಿಳಿವಳಿಕೆ ಮತ್ತು ವಿಶ್ಲೇಷಣೆಯ ಕೌಶಲವನ್ನು ನೀಡುತ್ತದೆ. ವಸ್ತುನಿಷ್ಠ ಮಾಹಿತಿಯನ್ನು ಆಧರಿಸಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಷಮತೆಯು ದಕ್ಷ ಆಡಳಿತದಲ್ಲಿ ದೀರ್ಘಕಾಲೀನ ಪರಿಣಾಮಗಳನ್ನು ಬಿರುತ್ತದೆ ಎನ್ನುವುದು ಇದರ ಪ್ರತಿಪಾದಕರ ವಾದ. ಇವತ್ತಿನ ಶಿಕ್ಷಣದ ಸ್ಥಿತಿಗತಿಗಳನ್ನು ನೋಡಿದಾಗ, ಔಪಚಾರಿಕ ವ್ಯವಸ್ಥೆಯಲ್ಲಿ ಸಿಗುವ ಭಾಷೆ ಮತ್ತು ಸಂವಹನ ಕೌಶಲಗಳು, ಆಡಳಿತ, ನ್ಯಾಯಾಂಗ, ವಾಣಿಜ್ಯ, ವ್ಯವಹಾರ, ಮಾಧ್ಯಮ ಇತ್ಯಾದಿ ಯಾವುದೇ ಕ್ಷೇತ್ರಕ್ಕೆ ಅಗತ್ಯವಾದ ಸಾಮರ್ಥ್ಯವನ್ನು ನೀಡುವುದಿಲ್ಲ, ಜನತಂತ್ರದ ಜೀವಾಳವಾದ ವೈಚಾರಿಕತೆ, ವೈಜ್ಞಾನಿಕ ಮನೋವೃತ್ತಿ, ಪ್ರಶ್ನೆ ಕೇಳುವ ಸ್ವಭಾವ… ಇಂಥವುಗಳನ್ನು ಬೆಳೆಸುವುದಿಲ್ಲ. ಶಿಕ್ಷಣದ ಸುಧಾರಣೆಯಾಗಬೇಕು, ಅದು ಸಶಕ್ತ ನಾಗರಿಕರನ್ನು ಸೃಜಿಸುವಲ್ಲಿ ಸಫಲವಾಗಬೇಕು ಎನ್ನುವ ಮಾತನ್ನು ಒಪ್ಪಿಕೊಳ್ಳುತ್ತಲೇ, ಇರುವ ಹಾಗೆಯೇ ಶಿಕ್ಷಣವು ವ್ಯಕ್ತಿತ್ವದ ಒಂದು ಗುಣವಾಗಿದೆ. ಭಾರತದ 18ನೇ ಲೋಕಸಭೆ ಇದರ ಸಾಧಕಬಾಧಕಗಳನ್ನು ಚರ್ಚಿಸಲಿ.

ಅಡ್ಜಸ್ಟಮೆಂಟ್ ಪಾಲಿಟಿಕ್ಸ್ ; ಯತ್ನಾಳ್ ವಿರುದ್ಧ ಮತ್ತೆ ಗುಡುಗಿದ ನಿರಾಣಿ
ರಾಜ್ಯ ಬಿಜೆಪಿ ಈಗ ಅಕ್ಷರಶಃ ಒಡೆದ ಮನೆಯಂತಾಗಿದ್ದು ಪಕ್ಷದ ಒಳಗಿನ ಒಳಜಗಳ ಬೀದಿಗೆ ಬಂದು ನಿಂತಿದೆ. ಎರಡು ದಿನಗಳ ಹಿಂದಷ್ಟೇ ಬಾಗಲಕೋಟೆಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮುರುಗೇಶ್ ನಿರಾಣಿಯ ಪರೋಕ್ಷ ವಾಕ್ಸಮರದ ಮುಂದುವರಿದ ಭಾಗವಾಗಿ ಈಗ ಮುರುಗೇಶ್ ನಿರಾಣಿ ಯತ್ನಾಳ್ ವಿರುದ್ಧ ನೇರವಾಗಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಅಡ್ಜಸ್ಟಮೆಂಟ್ ಪಾಲಿಟಿಕ್ಸ್ ನ ಕೂಗಿನ ನಡುವೆ ಈಗ ನಿರಾಣಿ ಹಾಕಿರುವ ಬಾಂಬ್ ಪಕ್ಷದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪಾಪದ ಕೊಡ ತುಂಬಿದೆ. ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಯತ್ನಾಳ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮುರುಗೇಶ್‌ ನಿರಾಣಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಒಂದು ಕಾಲದಲ್ಲಿ ಜೆಡಿಎಸ್ ಸೇರಿ, ಮುಸಲ್ಮಾನರ ಟೋಪಿ ದರಿಸಿ ನಮಾಜ್ ಮಾಡಿದ ವ್ಯಕ್ತಿ ಈಗ ಹಿಂದೂ ಹುಲಿ ಎಂದು ಬಿಂಬಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಇಂತಹ ವ್ಯಕ್ತಿಗಳು ಎಲ್ಲಿ ಇರುತ್ತಾರೋ ಅಲ್ಲಿಯ ವಾತಾವರಣಕ್ಕೆ ಬೇಗನೆ ಬದಲಾಗುತ್ತಾರೆ. ಇಂತಹ ವ್ಯಕ್ತಿಗಳ ಸೈದ್ಧಾಂತಿಕ ಬದ್ಧತೆ ಬಗ್ಗೆ ಸದಾ ಅನುಮಾನ ಇರಬೇಕು ಎಂಬುದಾಗಿ ನೇರವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಕಿಡಿಕಾರಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ 28 ಅಭ್ಯರ್ಥಿಗಳನ್ನು ಗೆಲ್ಲಿಸಲು ಕೆಲಸ ಮಾಡುತ್ತೇವೆ. ಆದರೆ ಅಡ್ಜಸ್ಟಮೆಂಟ್ ಪಾಲಿಟಿಕ್ಸ್ ಮಾಡುವ ಬಸನಗೌಡ ಯತ್ನಾಳ್ ಗೆ ಇದರ ಜವಾಬ್ದಾರಿ ಕೊಟ್ಟರೆ ತನ್ನ ಉದ್ದೇಶಪೂರ್ವಕ ಡ್ಯಾಮೇಜಿಂಗ್ ಸ್ಟೇಟ್ಮೆಂಟ್ ಗಳಿಂದಲೇ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣರಾಗುತ್ತಾರೆ. ನನ್ನ ಮೇಲೆ ಸಂದರ್ಭದಲ್ಲಿ ಆರೋಪ ಮಾಡುವ ಯತ್ನಾಳ್, ಮುರುಗೇಶ್ ನಿರಾಣಿ ಎಷ್ಟು ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆರೋಪಿಸಿದ್ದಾರೆ.

2012 ರ ಸಾಲಿನಲ್ಲಿ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದಾಗಲೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ವಿಜಯಪುರ ಜಿಲ್ಲೆಯ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅತಿ ಹೆಚ್ಚು ಸದಸ್ಯರು ಆಯ್ಕೆ ಆಗುವಂತೆ ಮಾಡಿದ್ದೆ. ಹಿಂದೂ ಹುಲಿ ಎಂದು ಕರೆಸಿಕೊಳ್ಳುವ ಯತ್ನಾಳ್ ಇಂತಹ ಯಾವ ಕೆಲಸ ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ನೇರವಾಗಿ ಆರೋಪಿಸಿದ್ದಾರೆ.

ಇದೇ ಯತ್ನಾಳ್ ಹಿಂದೆ ಕೇಂದ್ರ ಸಚಿವರಾಗಿದ್ದಾಗ ಅವರಿಗೆ ಕೊಟ್ಟ ಖಾತೆಗಳಾದ ಜವಳಿ ಮತ್ತು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲೂ ಯಾವುದೇ ಕೆಲಸ ಮಾಡಲಿಲ್ಲ. ಅಧಿಕಾರ ಇದ್ದಾಗ ಕೆಲಸದ ಮೂಲಕ ನಮ್ಮ ಸಾಮರ್ಥ್ಯ ತೋರಿಸಬೇಕು. ಅದು ಬಿಟ್ಟು ಪಕ್ಷಕ್ಕೆ ಒಡಕು ಮೂಡಬಹುದಾದ ಸ್ಟೇಟ್ಮೆಂಟ್ ನೀಡಿದರೆ ಪಕ್ಷಕ್ಕೇ ಹೊಡೆತ. ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಯತ್ನಾಳ್ ಕಡೆಯಿಂದ ಪಕ್ಷಕ್ಕೆ ಯಾವ ಕೆಲಸ ಆಗಿದೆ ಎಂಬುದು ಮುಖ್ಯ ಪ್ರಶ್ನೆ ಎಂದು ಯತ್ನಾಳ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ಯತ್ನಾಳ್ ಈ ವರೆಗೂ ಬೇರೆ ಪಕ್ಷಗಳ ನಾಯಕರ ವಿರುದ್ಧ ಮಾತನಾಡಿದ್ದೇ ಕಡಿಮೆ. ಅವರು ಈವರೆಗೂ ಟೀಕಿಸಿರುವುದು ಯಡಿಯೂರಪ್ಪ, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ, ವಿಜಯ ಸಂಕೇಶ್ವರರಂತಹ ಸ್ವಪಕ್ಷೀಯ ನಾಯಕರನ್ನು. ಈಗ ಈ ಸಾಲಿನಲ್ಲಿ ನಾನು ಇದ್ದೇನೆ. ಇದರಿಂದ ಪಕ್ಷಕ್ಕೇ ಕೆಟ್ಟ ಹೆಸರು ಎಂಬುದರ ಅರಿವು ಈ ವ್ಯಕ್ತಿಗೆ ಇಲ್ಲವಾಗಿದೆ. ಹಾಗಾಗಿ ಈ ವ್ಯಕ್ತಿ ಯಾವೊಬ್ಬ ಬಿಜೆಪಿ ನಾಯಕರ ಗೆಲುವಿಗೂ ಕಾರಣರಾಗಿಲ್ಲ ಎಂಬುದು ಸ್ಪಷ್ಟ ಎಂದು ಕಿಡಿಕಾರಿದ್ದಾರೆ.

ಒಟ್ಟಾರೆ ಬಿಜೆಪಿ ಪಕ್ಷದ ಒಳಗಿರುವ ಜಗಳ ಈಗ ಬೀದಿಗೆ ಬಂದು ನಿಂತಿದೆ. ಪ್ರತಾಪ್ ಸಿಂಹ ಮತ್ತು ಸಿ.ಟಿ.ರವಿ ಸಿಡಿಸಿರುವ ಅಡ್ಜಸ್ಟಮೆಂಟ್ ಪಾಲಿಟಿಕ್ಸ್ ನ ಬಾಂಬ್ ಈಗ ಯತ್ನಾಳ್ ಮತ್ತು ನಿರಾಣಿ ನಡುವಿನ ವಾಕ್ಸಮರಕ್ಕೆ ದೊಡ್ಡ ವೇದಿಕೆಯಾಗಿದೆ. ಇದರ ನಡುವೆ ಬಿಜೆಪಿ ಪಕ್ಷದ ಒಳಗಿನ ನಾಯಕತ್ವದ ಕೊರತೆಯಿಂದ ಈಗ ಪಕ್ಷ ಒಡೆದ ಮನೆಯಾಗಿದೆ. ಇನ್ನು ಈ ಒಳಜಗಳ ಎಲ್ಲಿಗೆ ಬಂದು ನಿಲ್ಲುತ್ತೋ ಕಾದು ನೋಡಬೇಕಿದೆ.