AIADMK – Peepal Media

ಜಯಲಲಿತಾ ಸಾವಿನ ವರದಿ ತನಿಖೆಗೆ ಆದೇಶಿಸಿದ ಎ.ಆರ್ಮುಘಸ್ವಾಮಿ ಆಯೋಗ
ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು AIADMK ನಾಯಕಿ ಜೆ.ಜಯಲಲಿತಾ ಅವರ ಸಾವಿನ ಸುತ್ತಲಿನ ಸನ್ನಿವೇಶಗಳನ್ನು ಪರಿಶೀಲಿಸುವ ಪ್ರತ್ಯೇಕ ತನಿಖಾ ವರದಿಗಳನ್ನು ತಮಿಳುನಾಡು ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದೆ.

ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸಿದ ಸಮಿತಿಯಲ್ಲಿ ಎ. ಅರ್ಮುಘಸ್ವಾಮಿ ಆಯೋಗವೂ ಒಂದು. ಆಯೋಗವು ಜಯಲಲಿತಾ ಅವರ ಆಪ್ತ ಸಹಾಯಕಿ ವಿ.ಕೆ. ಶಶಿಕಲಾ, ಮಾಜಿ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್, ಡಾ ಶಿವಕುಮಾರ್ (ಜಯಲಲಿತಾ ಅವರ ಆಪ್ತ ವೈದ್ಯ ಮತ್ತು ಶಶಿಕಲಾ ಅವರ ಸಂಬಂಧಿ) ಮತ್ತು ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಸಾವಿನ ಪ್ರಕರಣದ ತನಿಖೆಗೆ ಮನವಿ ಮಾಡಿತು.

ಜಯಲಲಿತಾ ಅವರ ಆಪ್ತರಾಗಿದ್ದ ಶಶಿಕಲಾ ಅವರ ಅನುಮಾನಾಸ್ಪದ ನಡೆ ಮತ್ತು ತನಿಖೆಗೆ ಅವರು ಸ್ಪಂದಿಸಿದ ರೀತಿಯನ್ನು ಪತ್ತೆ ಹಚ್ಚಿ ತನಿಖೆಗೆ ಆದೇಶಿಸಬೇಕು ಎಂದು ಎ.ಆರ್ಮುಘಸ್ವಾಮಿ ಅವರನ್ನು ಒಳಗೊಂಡ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಸಾವಿನ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ನ ವೈದ್ಯಕೀಯ ಮಂಡಳಿಯನ್ನು ರಚಿಸಿತ್ತು. ಮಂಡಳಿಯು ಈ ವರ್ಷದ ಆರಂಭದಲ್ಲಿ ನ್ಯಾಯಮೂರ್ತಿ ಎ.ಆರ್ಮುಘ ಸ್ವಾಮಿ ಆಯೋಗಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿತು. ಚೆನ್ನೈನ ಅಪೋಲೋ ಆಸ್ಪತ್ರೆಗಳ ಮನವಿಯ ಆಧಾರದ ಮೇಲೆ ಮಂಡಳಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಏಮ್ಸ್‌ಗೆ ಸೂಚಿಸಿತ್ತು.

ಜಯಲಲಿತಾ ಅವರು ಡಿಸೆಂಬರ್ 5, 2016 ರಂದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯ ಮತ್ತು ಇನ್ನಿತರ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಅರ್ಮುಘ ಸ್ವಾಮಿ ತನಿಖಾ ಆಯೋಗಕ್ಕೆ ಹಿಂದಿನ ಎಐಎಡಿಎಂಕೆ ಸರ್ಕಾರ ಆದೇಶ ನೀಡಿತ್ತು. ಜಯಲಲಿತಾ ಅವರು ನಿಧನರಾಗುವವರೆಗೆ 75 ದಿನಗಳ ಕಾಲ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲೇ ದಾಖಲಾಗಿದ್ದರು. ಬಹು ಮುಖ್ಯ ಅಂಶವೆಂದರೆ, AIADMK ನಾಯಕ ಮತ್ತು ಅಂದಿನ ವಿಧಾನಸಭಾ ಸ್ಪೀಕರ್ ಪಿ.ಎಚ್.ಪಾಂಡಿಯನ್ ಅವರು ಕೂಡಾ ಜಯಲಲಿತಾ ಸಾವಿನ ಸುತ್ತ ನಿಗೂಢ ವಿಚಾರಗಳಿವೆ ಎಂದು ಆರೋಪಿಸಿದ್ದರು.

ಸಧ್ಯ ಆರ್ಮುಘಸ್ವಾಮಿ ಅವರನ್ನು ಒಳಗೊಂಡ ಆಯೋಗ ಜಯಲಲಿತಾ ಆಪ್ತೆ ಶಶಿಕಲಾ ಸೇರಿದಂತೆ ಎಐಎಡಿಎಂಕೆ ಪಕ್ಷದ ಪ್ರಮುಖ ನಾಯಕರ ಮೇಲೆ ತನಿಖೆಗೆ ಆದೇಶಿಸಿದೆ.

ವಿದ್ಯತ್‌ ದರ ಏರಿಕೆ ವಿರೋಧಿಸಿ ರಾಜ್ಯಾದ್ಯಂತ ಎಐಎಡಿಎಂಕೆ ಪ್ರತಿಭಟನೆ
ಚೆನ್ನೈ: ವಿದ್ಯುತ್ ದರ ಏರಿಕೆ ಮಾಡಿರುವ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ)ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಹಂಗಾಮಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದಲ್ಲಿ ಪ್ರಮುಖ ಪ್ರತಿಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು.

ಮಾಜಿ ಸಚಿವರು ಸೇರಿದಂತೆ ಎಐಎಡಿಎಂಕೆ ಕಾರ್ಯಕರ್ತರು ತಮ್ಮ ತಮ್ಮ ಪ್ರದೇಶಗಳಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಹೊಸ ವಿದ್ಯುತ್ ದರವನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ  ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ

ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಳನಿಸ್ವಾಮಿ, ಡಿಎಂಕೆ ಸರ್ಕಾರವು ವಿದ್ಯುತ್ ಶುಲ್ಕವನ್ನು ಹೆಚ್ಚಿಸುವುದಲ್ಲದೆ, ಜನರ ತಲೆಯ ಮೇಲೆ ಭಾರೀ ಆಸ್ತಿ ತೆರಿಗೆಯನ್ನು ವಿಧಿಸುವ ಮೂಲಕ ಜನರ ಮೇಲೆ ಹೊರೆ ಹೇರುವುದನ್ನು ಮುಂದುವರೆಸಿದೆ ಎಂದು ದೂರಿದ್ದಾರೆ.

ಆಸ್ತಿ ತೆರಿಗೆಯನ್ನು ದೇಶೀಯ ಸಂಸ್ಥೆಗಳಿಗೆ 100% ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಸುಮಾರು 150% ವರೆಗೆ ಹೆಚ್ಚಿಸಲಾಗಿದೆ ಎಂದು ಪ್ರತಿಪಾದಿಸಿದ ಎಐಎಡಿಎಂಕೆ ನಾಯಕ, ಗುಡಿಸಲುಗಳಲ್ಲಿ ವಾಸಿಸುವ ಜನರು ಸಹ ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಅಸಮಧಾನ ವ್ಯಕ್ತ ಪಡಿಸಿದರು.