ajith pawar – Peepal Media

‘ಮಹಾ’ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ; ಅಜಿತ್ ಪವಾರ್ ತಗಾದೆ ಏನು?
ಇನ್ನೇನು ಎಲ್ಲಾ ತಿಳಿಯಾಯಿತು ಎನ್ನುವಾಗಲೇ ಮಹಾರಾಷ್ಟ್ರ ಸರ್ಕಾರದ ಬುಡ ಮತ್ತೆ ಅಲುಗಾಡಲು ಶುರುವಾಗಿದೆ. ಏಕನಾಥ್ ಶಿಂಧೆ ಬಣದ ಶಿವಸೇನೆ ಹಾಗೂ ಅಜಿತ್ ಪವಾರ್ ಬಣದ NCP ಸೇರಿ ಇತ್ತೀಚೆಗೆ ಸರ್ಕಾರ ರಚನೆಯ ಭಾಗವಾಗಿದ್ದವು. ಆದರೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಈಗ ಮತ್ತೆ ಈ ಎರಡು ಬಣಗಳ ನಡುವೆ ಶೀತಲ ಸಮರ ಏರ್ಪಟ್ಟಿದೆ.

ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರಕ್ಕೆ ಹೊಸದಾಗಿ ಸೇರಿಕೊಂಡಿರುವ NCPಯ ಅಜಿತ್‌ ಪವಾರ್‌ ಬಣ ಇಡುತ್ತಿರುವ ಬೇಡಿಕೆಗಳು ಈಗ ಏಕನಾಥ್ ಶಿಂಧೆ ಬಣಕ್ಕೆ ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದೆ. ಸಂಪುಟ ವಿಸ್ತರಣೆಯಿಂದ ಹಿಡಿದು, ರಾಜ್ಯದ ವಿವಿಧ ಭಾಗಗಳಲ್ಲಿ ತನಗೆ ಬೇಕಾದ ಅಧಿಕಾರದ ವಿಚಾರದಲ್ಲಿ NCP ಪದೇಪದೆ ಕಿರಿಕ್ ತಗೆಯುತ್ತಿರುವುದು ಶಿವಸೇನೆಗೆ ನುಂಗಲಾರದ ತುತ್ತಾಗಿದೆ.

ಇತ್ತ ಏಕನಾಥ್ ಶಿಂಧೆ ಬಣದ ಜೊತೆಗೆ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ಪಕ್ಷ, ಸರ್ಕಾರಕ್ಕೆ NCP ಪಕ್ಷದ ಆಗಮನದ ನಂತರ ಹೇಳ ಹೆಸರಿಲ್ಲದಂತೆ ಮೂಲೆಗುಂಪಾಗಿದೆ. ಇದೇ ಕಾರಣಕ್ಕೆ ದೇವೇಂದ್ರ ಫಡ್ನವೀಸ್ ಕೂಡಾ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅಲ್ಲಿಗೆ ಬಿಜೆಪಿ ಯಾವ ಉದ್ದೇಶ ಇಟ್ಟು ಅಜಿತ್ ಪವಾರ್ ಬಣವನ್ನು ಆಪರೇಷನ್ ಮಾಡಿತೋ, ಅದರ ಸಂಪೂರ್ಣ ಲೆಕ್ಕಾಚಾರ ಉಲ್ಟಾ ಆದಂತಿದೆ.

ಸಧ್ಯ ಎದ್ದಿರುವ ಹೊಸ ತಲೆನೋವು ಅಂದರೆ, ಉಪ ಮುಖ್ಯಮಂತ್ರಿಯಾಗಿರುವ ಅಜಿತ್‌ ಪವಾರ್‌ ಈಗ ಸಿಎಂ ಸ್ಥಾನಕ್ಕೆ ಹಠ ಹಿಡಿದಿದ್ದಾರೆ ಎನ್ನಲಾಗಿದೆ. ಇದು ಜಿಗರಿ ದೋಸ್ತ್ ನಂತೆ ಇದ್ದ ಶಿವಸೇನೆ ಮತ್ತು ಬಿಜೆಪಿ ಮಧ್ಯೆ ಬಿರುಕು ಮೂಡಿಸಿದೆ. ‘ಅಜಿತ್ ಪವಾರ್ ಹಿರಿಯ ನಾಯಕರಿದ್ದಾರೆ. ನಮ್ಮದೂ ತಕ್ಕ ಮಟ್ಟಿಗೆ ಹೆಚ್ಚು ಶಾಸಕರ ಬಲವಿದೆ. ಅಜಿತ್ ಪವಾರ್ ಮುಖ್ಯಮಂತ್ರಿ ಆಗುವುದರಲ್ಲೂ ನ್ಯಾಯ ಇದೆ’ ಎನ್ನುವಂತೆ NCP ನಾಯಕರು ತೆರೆಮರೆಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ಬೇಡಿಕೆ ಈಗ ಯಾವ ಮಟ್ಟಕ್ಕೆ ಏರಿದೆ ಎಂದರೆ ತಮಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಲೇಬೇಕೆಂದು ಅಜಿತ್‌ ಪವಾರ್‌ ಹಠ ಹಿಡಿದಿದ್ದಾರೆ ಎಂಬ ಸುದ್ದಿ ಮಹಾರಾಷ್ಟ್ರ ಕಡೆಯಿಂದ ಕೇಳಿ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್, ಅಜಿತ್ ಪವಾರ್ ಜನಪ್ರಿಯ ನಾಯಕರಾಗಿದ್ದಾರೆ. ಅವರು ಮಹಾರಾಷ್ಟ್ರದ ಸಿಎಂ ಆಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಅಜಿತ್‌ ಪವಾರ್‌ ಅವರ ದೀರ್ಘ ಕಾಲದ ಕನಸಾಗಿದೆ. ಅದನ್ನು ನನಸು ಮಾಡಿಕೊಳ್ಳಲು ಅವರು ಮಹಾರಾಷ್ಟ್ರ ಸರ್ಕಾರದ ಭಾಗವಾಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಶರದ್ ಪವಾರ್ ನಾಯಕತ್ವದಲ್ಲಿ ಇದ್ದಾಗ ಮುಖ್ಯಮಂತ್ರಿ ಗಾದಿ ಕನಸಿನ ಮಾತಾಗಿತ್ತು. ಮೇಲಾಗಿ ಸೈದ್ಧಾಂತಿಕ ವಿರೋಧಿಗಳ ಜೊತೆಗೆ ಕೈ ಜೋಡಿಸಲು ಶರದ್ ಪವಾರ್ ಅಡ್ಡಗಾಲಾಗಿದ್ದರು. ಹಾಗಾಗಿ ಈಗ ಸಿಕ್ಕ ಅವಕಾಶವನ್ನು ಪಡೆದೇ ತೀರುವ ನಿರ್ಧಾರಕ್ಕೆ ಅಜಿತ್ ಪವಾರ್ ಬಂದಿದ್ದಾರೆ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಪವಾರ್‌ ಅವರು ಶಿಂಧೆ ಅವರ ಸ್ಥಾನಕ್ಕೆ ಬಂದು ಕುಳಿತುಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ದೇವೇಂದ್ರ ಫಡ್ನವೀಸ್‌ ಅವರು ಇದೆಲ್ಲವೂ ಊಹಾಪೋಹವೆಂದು ಹೇಳಿದ್ದರು. ಆದರೆ, ಈಗ ಮತ್ತೆ ಅಜಿತ್‌ ಪವಾರ್‌ ಮುಖ್ಯಮಂತ್ರಿಯಾಗುವ ಕುರಿತು ವರದಿಗಳು ಪ್ರಕಟವಾಗಿವೆ.

ಈ ನಡುವೆ ಈ ಬಿಕ್ಕಟ್ಟಿಗೆ ಬಿಜೆಪಿಯೇ ನೇರ ಕಾರಣ ಎನ್ನಲಾಗಿದೆ. NCP ಪಕ್ಷವನ್ನು ಇಬ್ಬಾಗ ಮಾಡುವ ಉದ್ದೇಶ ಹೊಂದಿದ್ದ ಬಿಜೆಪಿ ಅಜಿತ್ ಪವಾರ್ ಗೆ ಮುಖ್ಯಮಂತ್ರಿ ಹುದ್ದೆಯ ಆಸೆ ತೋರಿಸಿಯೇ ಆಪರೇಷನ್ ಮಾಡಲಾಗಿತ್ತು ಎಂಬ ಇನ್ನೊಂದು ಸುದ್ದಿ ಎದುರಾಗಿದೆ. ಅಜಿತ್‌ ಪವಾರ್‌ ಅವರನ್ನು ಮುಖ್ಯಮಂತ್ರಿಯಾಗಿ ಮಾಡುತ್ತೇವೆಂದು ಬಿಜೆಪಿ ಕೇಂದ್ರ ನಾಯಕತ್ವ ಭರವಸೆ ನೀಡಿದೆ ಎಂಬ ಮಾತುಗಳು ಕೇಳಿಬಂದಿವೆ. ಇದು ಬಿಕ್ಕಟ್ಟನ್ನು ಮತ್ತಷ್ಟು ಜಠಿಲಗೊಳಿಸಿದೆ.

‘ಬಿಜೆಪಿಯ ಉನ್ನತ ನಾಯಕತ್ವವು ಅಜಿತ್ ಪವಾರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವುದಾಗಿ ಭರವಸೆ ನೀಡಿದೆ. ಕೇಂದ್ರ ಸರ್ಕಾರದಲ್ಲಿ ಎರಡು ಕ್ಯಾಬಿನೆಟ್ ಮಂತ್ರಿಗಳ ಸ್ಥಾನಗಳನ್ನು ಎನ್‌ಸಿಪಿಗೆ ನೀಡಬೇಕೆಂದು ಬೇಡಿಕೆ ಕೂಡಾ NCP ಇಟ್ಟಿತ್ತು. ಅದಕ್ಕೂ ಬಿಜೆಪಿ ನಾಯಕತ್ವ ಒಪ್ಪಿಕೊಂಡಿದೆ’ ಎಂದು ಎನ್‌ಸಿಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಈ ನಡುವೆ ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಬಣ ಅವಕಾಶವನ್ನು ನಿಧಾನಕ್ಕೆ ಉಪಯೋಗಿಸಿಕೊಳ್ಳಲು ಶುರು ಮಾಡಿವೆ. ಕಾಂಗ್ರೆಸ್ ಕೂಡಾ ‘ಆಗಸ್ಟ್‌ 10 ರಂದು ಅಜಿತ್‌ ಪವಾರ್‌ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ನಿರ್ಧರಿಸಿದೆ. ಲೋಕಸಭೆ ಚುನಾವಣೆಯನ್ನು ಎದುರಿಸಲು ಏಕನಾಥ ಶಿಂಧೆ ಅನರ್ಹರು ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಂಡಿದೆ’ ಎಂಬ ಹೇಳಿಕೆಯನ್ನು ಹರಿಬಿಟ್ಟಿದೆ. ಇನ್ನೊಂದು ಕಡೆ ಶಿಂಧೆ ಅವರ ಪರಮಾಧಿಕಾರವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಶಿವಸೇನಾ ನಾಯಕರು ಆಕ್ರೋಶಗೊಂಡಿದ್ದಾರೆ.

ಒಟ್ಟಾರೆ ಈ ಎಲ್ಲಾ ಬೆಳವಣಿಗೆ ನೋಡಿದರೆ ಸರ್ಕಾರದ ಭಾಗವಾಗಿರುವ ಶಿವಸೇನೆ ಬಿಜೆಪಿ ಮತ್ತು NCP ಮೂರೂ ಪಕ್ಷಗಳು ಮೂರು ದಿಕ್ಕಿಗೆ ಮುಖ ಮಾಡಿವೆ. ಮೂರೂ ಪಕ್ಷಗಳ ಒಳಗೂ ‘ವಚನ ಭ್ರಷ್ಟತೆ’ ಮಾತುಗಳು ಕೇಳಿ ಬಂದಿವೆ. ಇವೆಲ್ಲಕ್ಕೂ ಸೂತ್ರದಾರನಾಗಿದ್ದ ಬಿಜೆಪಿ ಅಷ್ಟೂ ಲೆಕ್ಕಾಚಾರ ಇನ್ನು ಕೆಲವೇ ದಿನಗಳಲ್ಲಿ ತಲೆಕೆಳಗಾದರೂ ಆಶ್ಚರ್ಯವಿಲ್ಲ.

ಸಂಚಲನ ಮೂಡಿಸಿದ ಅಜಿತ್ ಪವಾರ್-ಉದ್ಧವ್ ಠಾಕ್ರೆ ಭೇಟಿ: ಏನು ನಡೆಯುತ್ತಿದೆ ಮಹಾರಾಷ್ಟ್ರದಲ್ಲಿ?
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಶಿವಸೇನೆ (ಉದ್ಧವ್ ಬಣ) ನಾಯಕರನ್ನು ಭೇಟಿ ಮಾಡಿದ್ದಾರೆ. ಇದರಲ್ಲಿ ಶಿವಸೇನೆಯ ಉದ್ಧವ್ ಬಣದ ಶಾಸಕರೊಂದಿಗೆ ಸ್ವತಃ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಭಾಗಿಯಾಗಿದ್ದರು.

ಈ ಸಭೆಯ ನಂತರ ಮಹಾರಾಷ್ಟ್ರ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗುವ ಸಾಧ್ಯತೆಗಳ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಶಿವಸೇನೆ ಮತ್ತು ರಾಷ್ಟ್ರೀಯ ಪಕ್ಷಗಳ ನಡುವೆ ಒಡಕು ಉಂಟಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಈ ಸಭೆ ಮಹಾರಾಷ್ಟ್ರದ ರಾಜಕಾರಣಕ್ಕೆ ಯಾವ ರಂಗು ತರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.

ವಿಧಾನ ಭವನದಲ್ಲಿ ಅಜಿತ್ ಪವಾರ್ ಮತ್ತು ಉದ್ಧವ್ ಠಾಕ್ರೆ ಭೇಟಿಯ ನಂತರ ಉದ್ಧವ್ ಅವರು ಸಭೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಜಿತ್ ಪವಾರ್ ನನ್ನೊಂದಿಗೆ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಮತ್ತು ಅವರ ಕಾರ್ಯಶೈಲಿ ನನಗೆ ತಿಳಿದಿದೆ ಎಂದು ಠಾಕ್ರೆ ಹೇಳಿದರು. ಈ ಕಾರಣಕ್ಕಾಗಿಯೇ ನಾನು ಸಭೆಯಲ್ಲಿ ರಾಜ್ಯದ ನಾಗರಿಕರು ಮತ್ತು ರೈತರ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದೆ. ಅಜಿತ್ ಪವಾರ್ ಅವರು ಪ್ರಸ್ತುತ ಉಪ ಮುಖ್ಯಮಂತ್ರಿಯಾಗಿ ಹಣಕಾಸು ಮತ್ತು ಯೋಜನಾ ಸಚಿವಾಲಯದ ಜವಾಬ್ದಾರಿಯನ್ನು ಹೊಂದಿದ್ದಾರೆ. ರಾಜ್ಯಕ್ಕಾಗಿ ಒಳ್ಳೆಯ ಕೆಲಸ ಮಾಡುವಂತೆ ನಾನು ಅವರನ್ನು ಕೇಳಿಕೊಂಡಿದ್ದೇನೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಖಜಾನೆಯ ಕೀಲಿಕೈಗಳು ಅಜಿತ್ ಪವಾರ್ ಬಳಿ ಇರುವುದರಿಂದ ರಾಜ್ಯದ ಜನತೆಗೆ ಸಾಕಷ್ಟು ನೆರವು ಸಿಗಲಿದೆ ಎಂದು ಠಾಕ್ರೆ ವಿಶ್ವಾಸ ವ್ಯಕ್ತಪಡಿಸಿದರು.

ಎರಡು ಹೋಳಾಗಿರುವ ಶಿವಸೇನೆ-ಎನ್‌ಸಿಪಿ

ಶಿವಸೇನೆಯ ಬಗ್ಗೆ ಮಾತನಾಡುವುದಾದರೆ ಹಾಲಿ ಸಿಎಂ ಏಕನಾಥ್ ಶಿಂಧೆಯವರು ಶಿವಸೇನೆ ವಿರುದ್ಧ ಬಂಡಾಯವೆದ್ದು ಬಿಜೆಪಿ ಜೊತೆ ಸೇರಿ ಹೊಸ ಸರ್ಕಾರ ರಚಿಸಿದ್ದಾರೆ. ಶಿಂಧೆ ಶಿವಸೇನೆ ಪಕ್ಷ ಮತ್ತು ಚುನಾವಣಾ ಚಿಹ್ನೆಯ ಮೇಲೆ ಹಕ್ಕು ಸಾಧಿಸಿದ್ದಾರೆ. ಮತ್ತೊಂದೆಡೆ, ಅಜಿತ್ ಪವಾರ್ ಕೆಲವು ದಿನಗಳ ಹಿಂದೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯವೆದ್ದು, ಪಕ್ಷದ ಹೆಚ್ಚಿನ ಶಾಸಕರೊಂದಿಗೆ ಬಿಜೆಪಿ ಸರ್ಕಾರಕ್ಕೆ ಸೇರಿದ್ದಾರೆ. ಅವರನ್ನು ರಾಜ್ಯದ ಉಪ ಮುಖ್ಯಮಂತ್ರಿಯನ್ನಾಗಿಯೂ ಮಾಡಲಾಗಿದೆ.

ಶರದ್ ಪವಾರ್ ಮತ್ತು ಉದ್ಧವ್ ನಡುವೆ ಏನಾದರೂ ನಡೆದಿದೆಯೇ?

ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ವಿರೋಧ ಪಕ್ಷಗಳ ಸಭೆಯಲ್ಲಿ ಎರಡನೇ ದಿನ ಶರದ್ ಪವಾರ್ ಕೂಡ ಭಾಗವಹಿಸಿದ್ದರು. ಈ ಸಭೆಯಲ್ಲಿ ಉದ್ಧವ್ ಠಾಕ್ರೆ ಈಗಾಗಲೇ ಉಪಸ್ಥಿತರಿದ್ದರು. ಇಬ್ಬರು ನಾಯಕರು ಸೇರಿ ರಾಜ್ಯಕ್ಕೆ ಹೊಸ ಸಮೀಕರಣ ಸಿದ್ಧಪಡಿಸಿರಬಹುದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಈಗ ಉದ್ಧವ್ ಮತ್ತು ಅಜಿತ್ ಪವಾರ್ ಭೇಟಿಯ ನಂತರ, ಅಂತಹ ಚರ್ಚೆಗಳು ಬಲಗೊಳ್ಳಲು ಪ್ರಾರಂಭಿಸಿವೆ.

ಮಹಾರಾಷ್ಟ್ರದಲ್ಲಿ ವೈರಲ್ ಆಗ್ತಿದೆ ಬಾಹುಬಲಿ – ಕಟ್ಟಪ್ಪ ಪೋಸ್ಟರ್
ಮಹಾರಾಷ್ಟ್ರದ NCP ಪಕ್ಷದ ಬಣ ವೈಷಮ್ಯವು ಚುನಾವಣಾ ಆಯೋಗದ ಬಾಗಿಲನ್ನು ತಲುಪುತ್ತಿದ್ದಂತೆ, ಪಕ್ಷದ ಹಿರಿಯ ನಾಯಕ ಶರದ್ ಪವಾರ್ ವಿರುದ್ಧ ಅಜಿತ್ ಪವಾರ್ ಅವರು ಬಂಡಾಯವೆದ್ದಿರುವುದನ್ನು ಉಲ್ಲೇಖಿಸಿ ಎನ್‌ಸಿಪಿಯ ವಿದ್ಯಾರ್ಥಿ ಘಟಕವು ದೆಹಲಿ ಕಚೇರಿಯ ಹೊರಗೆ “ಗದ್ದಾರ್” (ದೇಶದ್ರೋಹಿ) ಪೋಸ್ಟರ್ ಅನ್ನು ಹಾಕಿರುವುದು ಈಗ ಮಹಾರಾಷ್ಟ್ರದಾದ್ಯಂತ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇವು ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಕುರಿತಾಗಿ ಎದ್ದಿರುವ ಟ್ರೋಲ್ ವಿಚಾರವಾಗಿದ್ದು, ಒಂದಕ್ಕಿಂತ ಒಂದು ಹೆಚ್ಚು ಸುದ್ದಿ ಮಾಡುತ್ತಿವೆ. ಅದರಲ್ಲೂ ದೆಹಲಿ ಕಛೇರಿಯ ಹೊರಗೆ ನಿಲ್ಲಿಸಿದ “ಗದ್ದಾರ್” ಪೋಸ್ಟರ್ ಮಾತ್ರ ಈ ದಿನದ ಹೆಚ್ಚು ಚರ್ಚಿತ ಮತ್ತು ಗಮನಾರ್ಹ ಪೋಸ್ಟರ್ ಆಗಿದೆ.

ರಾಷ್ಟ್ರವಾದಿ ವಿದ್ಯಾರ್ಥಿ ಕಾಂಗ್ರೆಸ್ ಬಾಹುಬಲಿ ಸಿನೆಮಾದಲ್ಲಿ ಕಟ್ಟಪ್ಪ ಬಾಹುಬಲಿಗೆ ಹಿಂಬದಿಯಿಂದ ಚುಚ್ಚಿದ ದೃಶ್ಯವನ್ನು ಬಿಂಬಿಸುವ ಪೋಸ್ಟರ್ ಅನ್ನು ಹಾಕಿದ್ದು, ಅಜಿತ್ ಪವಾರ್ “ಕಟ್ಟಪ್ಪ”ನಾಗಿ, “ಅಮರೇಂದ್ರ ಬಾಹುಬಲಿ”ಯಾಗಿ ಶರದ್ ಪವಾರ್ ಅವರ ಬೆನ್ನಿಗೆ ಚೂರಿಯಿಂದ ಇರಿದಂತೆ ತೋರಿಸಿದೆ. ಅದರ ಮೇಲೆ ಗದ್ದಾರ್ ಎಂದು ಬರೆಯಲಾಗಿದೆ.

“ಇಡೀ ದೇಶವು ಒಬ್ಬರ (ಮೋದಿ) ನಡುವೆ ಅಡಗಿರುವ ದೇಶದ್ರೋಹಿಗಳನ್ನು ನೋಡುತ್ತಿದೆ. ಅಂತಹ ಜನರನ್ನು ರಾಷ್ಟ್ರದ ಜನತೆ ಕ್ಷಮಿಸುವುದಿಲ್ಲ” ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ. ಆದರೆ ಯಾವ ಚಿತ್ರದಲ್ಲೂ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.

ಎನ್‌ಸಿಪಿಯ ಬಣದ ಹೋರಾಟವು ಇಂದು ಚುನಾವಣಾ ಆಯೋಗದ ಬಾಗಿಲನ್ನು ತಲುಪಿದೆ. ಅಜಿತ್ ಪವಾರ್ ಅವರ ಬೆಂಬಲಕ್ಕೆ ನಿಲ್ಲುವ 40 ಕ್ಕೂ ಹೆಚ್ಚು ಶಾಸಕರು ಮತ್ತು ಸಂಸದರು ಅಫಿಡವಿಟ್‌ಗಳನ್ನು ಸಲ್ಲಿಸಿದ್ದಾರೆ. ಶರದ್ ಪವಾರ್ ಪಾಳಯವು ಬಣ ಹೋರಾಟಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನವನ್ನು ರವಾನಿಸುವ ಮೊದಲು ತಾವೇ ಮೊದಲು ಒತ್ತಾಯಿಸಿ ಚುನಾವಣಾ ಸಂಸ್ಥೆಗೆ ಕೇವಿಯಟ್ ಸಲ್ಲಿಸಿದೆ. ಅಜಿತ್ ಪವಾರ್ ಬಣವು ಪಕ್ಷದ ಹೆಸರು ಮತ್ತು ಚಿಹ್ನೆಯ ಮೇಲೆ ಹಕ್ಕು ಸಾಧಿಸಿರುವ ಹಿನ್ನೆಲೆಯಲ್ಲಿ, ಶರದ್ ಪವಾರ್ ಗುರುವಾರ ಮಧ್ಯಾಹ್ನ 3 ಗಂಟೆಗೆ ದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯನ್ನು ಕರೆದಿದ್ದಾರೆ.

ಸಭೆಯಲ್ಲಿ ಶರದ್ ಪವಾರ್ ಬಣವು “ರಹಸ್ಯ ಪಕ್ಷಾಂತರ” ಮತ್ತು ಪಕ್ಷದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ 40 ಮಂದಿ ಶಾಸಕರನ್ನು ಅನರ್ಹಗೊಳಿಸುವಂತೆ ಸಭೆಯಲ್ಲಿ ಒತ್ತಾಯಿಸಿದೆ.

ಅಜಿತ್ ಪವಾರ್ ನಡೆ ಆಶ್ಚರ್ಯವೇನಲ್ಲ ; NCP ಗೆ ಮೋಸ ಮಾಡಿದವರ ವಿರುದ್ಧ ಕ್ರಮ ; ಶರದ್ ಪವಾರ್
ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ NCP ಪಕ್ಷದ ನಾಯಕ ಅಜಿತ್ ಪವಾರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇಂದು ತಮ್ಮ ಪಕ್ಷದ 9 ಮಂದಿ ಶಾಸಕರನ್ನು ಒಳಗೊಂಡಂತೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. NCP ಪಕ್ಷದ 53 ಶಾಸಕರಲ್ಲಿ ಸುಮಾರು 40 ಮಂದಿ ಶಾಸಕರು ಮಹಾರಾಷ್ಟ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿರುವ ಬಗ್ಗೆ ವರದಿಯಾಗಿದೆ.

ಭಾನುವಾರ ಬೆಳಿಗ್ಗೆ ತನ್ನ ನಿವಾಸದಲ್ಲಿ ಎನ್ಸಿಪಿ ಶಾಸಕರ ತುರ್ತು ಸಭೆ ಕರೆದ ನಂತರ ಅಜಿತ್ ಪವಾರ್ ರಾಜಭವನಕ್ಕೆ ಆಗಮಿಸಿದರು. ಸುಮಾರು 40 ಮಂದಿ NCP ಶಾಸಕರ ಸಹಿಯೊಂದಿಗೆ ಇಂದು ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿ ಮಾಡಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದರು. ಇದಾದ ಕೆಲವೇ ಗಂಟೆಗಳಲ್ಲಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಲ್ಲದೆ, ಅವರ ಜೊತೆಗೆ ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್, ಅದಿತಿ ತತ್ಕರೆ, ಧನಂಜಯ್ ಮುಂಡೆ, ಹಸನ್ ಮುಶ್ರೀಫ್, ರಾಮರಾಜೇ ನಿಂಬಾಳ್ಕರ್, ಸಂಜಯ್ ಬನ್ಸೋಡೆ, ಧರ್ಮರಾವ್ ಬಾಬಾ ಅತ್ರಮ್ ಹಾಗೂ ಅನಿಲ್ ಭೈದಾಸ್ ಪಾಟೀಲ್ ಕೂಡಾ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು

ಕೆಲವೇ ದಿನಗಳ ಹಿಂದೆ ಅಜಿತ್ ಪವಾರ್ ತಾವು ವಿರೋಧ ಪಕ್ಷದ ಸ್ಥಾನದಿಂದ ಕೆಳಗಿಳಿಯುವ ಹೇಳಿಕೆ ನೀಡಿದ್ದರು. ಇದರ ಹಿಂದೆ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ತಡವಾಗಿ ಮಾಹಿತಿ ಹೊರಬಿದ್ದಿದೆ.

ಈ ಮೂಲಕ ಮಹಾರಾಷ್ಟ್ರದಲ್ಲಿ NCP ಇಬ್ಭಾಗವಾದಂತಾಗಿದೆ. ಇತ್ತ NCP ಮುಖ್ಯಸ್ಥ ಶರದ್ ಪವಾರ್ ಇದೊಂದು ನಿರೀಕ್ಷಿತ ಬೆಳವಣಿಗೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 1980 ಕ್ಕೂ ಮುನ್ನ ಕೇವಲ 6 ಮಂದಿ ಶಾಸಕರನ್ನು ಹೊಂದಿ ಪಕ್ಷ ಕಟ್ಟಿದ್ದೆ. ಆ ನಂತರ 58 ಶಾಸಕರ ಬಲವನ್ನು NCP ಹೊಂದಿತ್ತು. ಆ ಸಂದರ್ಭದಲ್ಲಿ ಪಕ್ಷ ಬಿಟ್ಟ ಬಹುತೇಕರು ಆ ಕ್ಷೇತ್ರಗಳಲ್ಲಿ ಸೋಲನ್ನು ಅನುಭವಿಸಿದ್ದರು. ಇದು ನನಗೆ ಹೊಸತೇನಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ತಮ್ಮ ಸೋದರಳಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶರದ್ ಪವಾರ್ “ಜುಲೈ 6 ರಂದು ನಾನು ಪಕ್ಷದ ಎಲ್ಲಾ ನಾಯಕರ ಸಭೆ ಕರೆದಿದ್ದೆ, ಅಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುವುದಿತ್ತು. ಪಕ್ಷದೊಳಗೆ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿತ್ತು. ಆದರೆ ಆ ಸಭೆಯ ಮೊದಲೇ, ಕೆಲವು ನಾಯಕರು ವಿಭಿನ್ನ ನಿಲುವು ತಳೆದಿದ್ದಾರೆ. ಅದರ ಪರಿಣಾಮ ಇಂದಿನ ಬೆಳವಣಿಗೆ” ಎಂದು ಶರದ್ ಪವಾರ್ ಹೇಳಿದ್ದಾರೆ.

“ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದ ಶಾಸಕರ ನಿಲುವು ಎಷ್ಟು ಭಿನ್ನವಾಗಿದೆ ಎಂಬುದನ್ನು ಮುಂದಿನ 2-3 ದಿನಗಳಲ್ಲಿ ಸ್ಪಷ್ಟಪಡಿಸಲಾಗುವುದು. ಅವರಲ್ಲಿ ಕೆಲವರು ನನ್ನನ್ನು ಸಂಪರ್ಕಿಸಿ ಸರ್ಕಾರವನ್ನು ಬೆಂಬಲಿಸಲು ಸಹಿ ಹಾಕುವಂತೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ವಿರೋಧ ಪಕ್ಷಗಳು ಈಗಲೂ ನಮ್ಮೊಂದಿಗಿದ್ದೇವೆ ಎಂದು ಹೇಳಲು ನನಗೆ ಕರೆ ಮಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬೆಂಬಲ ಸೂಚಿಸಲು ಕರೆ ಮಾಡಿದ್ದಾರೆ.” ಎಂದು ಶರದ್ ಪವಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಅಜಿತ್ ಪವಾರ್ ಸೇರಿದಂತೆ ಪ್ರಮಾಣವಚನ ಸ್ವೀಕರಿಸಿದ ಎಲ್ಲಾ ಒಂಬತ್ತು ಜನರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಶರದ್ ಪವಾರ್ ಹೇಳಿದ್ದಾರೆ.

ಸೆಮಿಕಂಡಕ್ಟರ್‌ ಪ್ಲಾಂಟ್‌ ವಿಚಾರ : ಸಿಎಂ ಶಿಂಧೆಗೆ ಪತ್ರ ಬರೆದ ಅಜಿತ್‌ ಪವಾರ್‌
ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ಸೆಮಿಕಂಡಕ್ಟರ್‌ ಪ್ಲಾಂಟ್‌ ಸ್ಠಾಪಿಸುವಂತೆ ಅಲ್ಲಿನ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಅಜಿತ್‌ ಪವಾರ್‌ ಸಿಎಂ ಶಿಂಧೆ ಅವರಿಗೆ ಪತ್ರದ ಮುಖಾಂತರ ಮನವಿ ಮಾಡಿದ್ದಾರೆ.

ʼಸೆಮಿಕಂಡಕ್ಟರ್‌ ಪ್ಲಾಂಟ್‌ ಅನ್ನು ಮಹಾರಾಷ್ಟ್ರದಲ್ಲಿ ಇರಿಸಲು ಎಲ್ಲಾ ತೀರ್ಮಾನವೂ ಅಂತಿಮಗೊಳಿಸಿತ್ತು ಆದರೆ ಕೆಲವು ರಾಜಕೀಯ ಒತ್ತಡದಿಂದ ಅದನ್ನು ಗುಜಾರಾತ್‌ಗೆ ವರ್ಗಾಯಿಸಲಾಯಿತು. ಇದೀಗ ಗುಜರಾತ್‌ನಲ್ಲಿರುವ ಸೆಮಿಕಂಡಕ್ಟರ್ ಪ್ಲಾಂಟ್ ಅನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ವಿನಂತಿಸಿʼ ಅಜಿತ್‌ ಪವಾರ್‌ ಸಿಎಂ ಶಿಂಧೆ ಅವರಿಗೆ ಪತ್ರ ಬರೆದಿದ್ದಾರೆ.