Akshay Kumar – Peepal Media

BJP: ಬಿಜೆಪಿ ಮೊದಲ ಪಟ್ಟಿಯಲ್ಲಿ ಕಂಗನಾ ರಣಾವತ್, ಅಕ್ಷಯ್ ಕುಮಾರ್..?
ಲೋಕಸಭೆ ಚುನಾವಣೆ 2024 ಸಮೀಪಿಸುತ್ತಿದ್ದಂತೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಜ್ಜಾಗಿದೆ.

ಚುನಾವಣಾ ವೇಳಾಪಟ್ಟಿಗೂ ಮುನ್ನ ಮೊದಲ ಪಟ್ಟಿಯನ್ನು ಪ್ರಕಟಿಸಲಾಗುವುದು. ಈ ಪಟ್ಟಿಯಲ್ಲಿ ಹೊಸಬರು ಹಾಗೂ ಯುವ ನಾಯಕರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಬಾಲಿವುಡ್ ಖ್ಯಾತ ನಟರಾದ ಕಂಗನಾ ರಣಾವತ್ ಮತ್ತು ಅಕ್ಷಯ್ ಕುಮಾರ್ ಕೂಡಾ ಕಣಕ್ಕಿಳಿಯಲಿದ್ದಾರೆನ್ನುವ ಸುದ್ದಿಯೂ ಓಡಾಡುತ್ತಿದೆ.

ಇವರಿಬ್ಬರ ಹೆಸರು ಮೊದಲ ಪಟ್ಟಿಯಲ್ಲಿರಬಹುದು ಎಂದು ಹಲವು ಆಂಗ್ಲ ಮಾಧ್ಯಮದ ಲೇಖನಗಳು ಬಹಿರಂಗಪಡಿಸಿವೆ. ದೆಹಲಿಯ ಚಾಂದಿನಿ ಚೌಕ್‌ನಿಂದ ಅಕ್ಷಯ್ ಕುಮಾರ್ ಮತ್ತು ಹಿಮಾಚಲ ಪ್ರದೇಶದ ಮಂಡಿಯಿಂದ ಕಂಗನಾ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಪುಷ್ಟಿ ಕೊಡುವಂತೆ ರಾಜಕೀಯಕ್ಕೆ ಬರಲು ಇದೇ ಸರಿಯಾದ ಸಮಯ ಎಂದು ಕಂಗನಾ ಇತ್ತೀಚೆಗಷ್ಟೇ ಇಂಟರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದರು. ಈ ಹಿಂದೆ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ಬಿಜೆಪಿ ಸೇರಿದರೆ ಸ್ವಾಗತಿಸುವುದಾಗಿ ಹೇಳಿದ್ದರು. ಅಕ್ಷಯ್ ಕುಮಾರ್ ಅವರು ವಿವಿಧ ಸಂದರ್ಭಗಳಲ್ಲಿ ಬಿಜೆಪಿ ಸರ್ಕಾರದ ಪರವಾಗಿ ಮಾತನಾಡಿದ್ದರು.

ಬಿಜೆಪಿಯ ಮೊದಲ ಪಟ್ಟಿಯಲ್ಲಿ 110 ಹೆಸರುಗಳು

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಇತ್ತೀಚೆಗೆ ಮಹತ್ವದ ಸಭೆ ನಡೆಸಿದೆ. ಸದ್ಯದಲ್ಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ 110 ಕ್ಕೂ ಹೆಚ್ಚು ಹೆಸರುಗಳನ್ನು ಘೋಷಿಸಲಾಗುವುದು ಎಂದು ವರದಿಯಾಗಿದೆ. ಹಲವೆಡೆ ಹಾಲಿ ಸಂಸದರಿಗೆ ಮತ್ತೆ ಟಿಕೆಟ್ ಸಿಗಲಿದೆ ಎಂಬ ಸುದ್ದಿ ಕೇಳಿಬರುತ್ತಿರುವಾಗಲೇ ಹೊಸ ಮುಖಗಳಿಗೂ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ.

ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಲನಚಿತ್ರಗಳು
ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಗಳಿಸಿದ ನಂತರ, ಗದರ್-2, OMG-2 ಸೇರಿದಂತೆ ಐದು ಚಿತ್ರಗಳು ಒಟಿಟಿಯಲ್ಲಿ ರಿಲೀಸ್‌ ಆಗುತ್ತಿವೆ. ವಾರಾಂತ್ಯದಲ್ಲಿ ಆರಾಮಾಗಿ ಮನೆಯಲ್ಲಿ ಸಿನೇಮಾ ನೋಡುವವರು ಈ ಚಿತ್ರಗಳನ್ನು ತಪ್ಪದೇ ವೀಕ್ಷಿಸಿ.

1.’ಮುಂಬೈ ಡೈರೀಸ್ -2

‘ಮುಂಬೈ ಡೈರೀಸ್’ ಒಂದು ಸಂಕೀರ್ಣವಾಗಿ ಹೆಣೆಯಲಾಗಿರುವ ವೈದ್ಯಕೀಯ ಕಥನವನ್ನು ಹೊಂದಿರುವ ಸೀರಿಸ್‌ ಆಗಿದೆ. ಇದರಲ್ಲಿ ವೈದ್ಯರ ಮತ್ತು ಇತರ ವೈದ್ಯಕೀಯ ಸಿಬ್ಬಂದಿಗಳ ಬದುಕನ್ನು, ಸಾಹಸವನ್ನು ತೋರಿಸಲಾಗಿದೆ.   ‘ಮುಂಬೈ ಡೈರೀಸ್ ಸೀಸನ್ -2’ನಲ್ಲಿ  ಹಿಂದಿನ ಸೀಸನ್‌ನಲ್ಲಿ ಇದ್ದವರಲ್ಲದೇ, ಬೇರೆ ಕಲಾವಿದರೂ ನಟಿಸಿದ್ದಾರೆ. ಕೊಂಕಣ ಸೇನ್ ಶರ್ಮಾ, ಮೋಹಿತ್ ರೈನಾ, ಟೀನಾ ದೇಸಾಯಿ, ಶ್ರೇಯಾ ಧನ್ವಂತರಿ ಮತ್ತು ಇತರರು ನಟಿಸಿದ್ದಾರೆ. ಇದು ಅಕ್ಟೋಬರ್ 6 ರಿಂದ OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಲಿದೆ.

2. ಖುಫಿಯಾ

ವಿಶಾಲ್ ಭಾರದ್ವಾಜ್ ನಿರ್ದೇಶನದ, ಸ್ಪೈ ಥ್ರಿಲ್ಲರ್ ಚಿತ್ರ ‘ಖುಫಿಯಾ’ದಲ್ಲಿ ಟಬು, ಅಲಿ ಫಜಲ್, ವಾಮಿಕಾ ಗಬ್ಬಿ, ಆಶಿಶ್ ವಿದ್ಯಾರ್ಥಿ ಮತ್ತು ಅಜ್ಮೇರಿ ಹಕ್ ಬಧೋನ್ ನಟಿಸಿದ್ದಾರೆ. ‘ಖುಫಿಯಾ’ ನೈಜ ಘಟನೆಗಳನ್ನು ಆಧರಿಸಿರುವ ಕಥನವಾಗಿದ್ದು,  R&AW ನ ಕೌಂಟರ್ ಇಸ್ಪಿನೇಜ್ ಯೂನಿಟ್‌ನ ಮಾಜಿ ಮುಖ್ಯಸ್ಥ ಅಮರ್ ಭೂಷಣ್ ಬರೆದಿರುವ ʼಎಸ್ಕೇಪ್ ಟು ನೋವೇರ್ʼ ಪುಸ್ತಕವನ್ನು ಆಧರಿಸಿದೆ. ಇದು ಅಕ್ಟೋಬರ್ 5ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

3. OMG 2

ಥಿಯೇಟರ್‌ನಲ್ಲಿ ಬಿಡುಗಡೆಗೊಂಡು ಬಾಕ್ಸ್‌ ಆಫೀಸ್‌ ಹಿಟ್‌ ಆಗಿದ್ದ, ಅಕ್ಷಯ್ ಕುಮಾರ್ ಅಭಿನಯದ ‘OMG 2’ ಅಕ್ಟೋಬರ್ 8 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಅಮಿತ್ ರೈ ಅವರ ನಿರ್ದೇಶನದ ‘OMG 2’ನಲ್ಲಿ ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು 2012 ರಲ್ಲಿ ಬಿಡುಗಡೆಯಾದ ಪರೇಶ್ ರಾವಲ್ ಮತ್ತು ಅಕ್ಷಯ್ ಅವರ ‘OMG: ಓ ಮೈ ಗಾಡ್’ ನ ಮುಂದುವರಿದ ಭಾಗವಾಗಿದೆ. ಸನ್ನಿ ಡಿಯೋಲ್ ಅವರ ‘ಗದರ್ 2’ ನೊಂದಿಗೆ ಪೈಪೋಟಿ ಎದುರಿಸುತ್ತಿದ್ದ ಈ ಚಿತ್ರ ಉತ್ತಮ ಗಳಿಕೆಯನ್ನು ಕಂಡಿದೆ

4. ಗದರ್ – 2

ದಾಖಲೆಯು ಯಶಸ್ಸನ್ನು ಕಂಡಿರುವ ನಟ ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅಭಿನಯದ ಆಕ್ಷನ್ ಡ್ರಾಮಾ ಚಿತ್ರ ‘ಗದರ್ 2’ OTTಯಲ್ಲಿ ಸ್ಟ್ರೀಮ್  ಆಗಲಿದೆ. ‘ಗದರ್ 2’ ಅಕ್ಟೋಬರ್ 6 ರಿಂದ Zee5 ನಲ್ಲಿ ಸ್ಟ್ರೀಮ್ ಆಗಲಿದೆ. ಅನಿಲ್ ಶರ್ಮಾ ನಿರ್ದೇಶನದ ‘ಗದರ್ 2’ ಪ್ರಸ್ತುತ ಎರಡನೇ ಅತಿ ಹೆಚ್ಚು ಗಳಿಕೆ ಕಂಡಿರುವ ಹಿಂದಿ ಚಲನಚಿತ್ರವಾಗಿದೆ. ‘ಪಠಾನ್’ ನ ಜೀವಮಾನದ ಸಂಗ್ರಹವನ್ನೂ ಇದು ಮೀರಿಸಿದೆ.

5. ಲೋಕಿ: ಸೀಸನ್ – 2

ನಟ ಟಾಮ್ ಹಿಡಲ್‌ಸ್ಟನ್ ಅಭಿನಯದ ಲೋಕಿ-2 ಅಕ್ಟೋಬರ್ 6 ರಿಂದ Disney+ Hotstar ನಲ್ಲಿ ಸ್ಟ್ರೀಮ್ ಆಗಲಿದೆ. ಮಸೀಸನ್ 1 ರ ಮುಂದುವರಿದ ಕಥೆಯಾಗಿರುವ ಈ ಚಿತ್ರ ‘ಲೋಕಿಯ ಟೈಮ್‌ಲೈನ್ ಕೋಬ್‌ವೆಬ್‌ಗಳ ಕಥೆಯನ್ನು ಅನುಸರಿದೆ. ಈ ಸರಣಿಯಲ್ಲಿ ಓವನ್ ವಿಲ್ಸನ್ ಮತ್ತು ಸೋಫಿಯಾ ಡಿಮಾರ್ಟಿನೊ ನಟಿಸಲಿದ್ದಾರೆ. ಪ್ರಶಸ್ತಿ ವಿಜೇತ “ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್” ನಟಿ ಕೆ ಹುಯ್ ಕ್ವಾನ್ ಕೂಡ ಇರಲಿದ್ದಾರೆ.

ಭಾರತೀಯ ಪೌರತ್ವ ಪಡೆದ ನಟ ಅಕ್ಷಯ್ ಕುಮಾರ್
ಇತ್ತೀಚಿನ ದಿನಗಳಲ್ಲಿ ದೇಶಭಕ್ತಿಯ ಸಿನೆಮಾಗಳ ಮೂಲಕವೇ ಗಮನ ಸೆಳೆದಿದ್ದ ಬಾಲಿವುಡ್ ‘ಕಿಲಾಡಿ’ ಅಕ್ಷಯ್ ಕುಮಾರ್ ಪೌರತ್ವದ ವಿಚಾರದಲ್ಲೇ ಹೆಚ್ಚು ಟೀಕೆಗೆ ಗುರಿಯಾಗಿದ್ದರು. ಇವರ ಮೂಲ ಭಾರತೀಯನಾದರೂ ಕೆನಡಾ ದೇಶದ ಪೌರತ್ವದ ಕಾರಣಕ್ಕೆ ಅಕ್ಷಯ್ ಕುಮಾರ್ ವಿರೋಧಿಗಳ ಬಾಯಿಗೆ ಹೆಚ್ಚು ಆಹಾರವಾಗಿದ್ದರು. ಆದರೆ ಅಕ್ಷಯ್ ಕುಮಾರ್ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸಂದರ್ಭಕ್ಕೆ ಭಾರತೀಯ ಪೌರತ್ವ ಪಡೆದು ಸುದ್ದಿಯಲ್ಲಿದ್ದಾರೆ.

ದೇಶದ 77 ನೇ ಸ್ವಾತಂತ್ರೋತ್ಸವದ ಈ ಸಂದರ್ಭದಲ್ಲಿ ಅಕ್ಷಯ್‌ ಕುಮಾರ್‌ ಭಾರತೀಯ ಪೌರತ್ವ ದೊರೆತಿರುವ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಂಡು ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ತಿಳಿಸಿದ್ದಾರೆ.

ತೊಂಬತ್ತರ ದಶಕದಲ್ಲಿ ಸತತವಾಗಿ ಫ್ಲಾಪ್ ಸಿನಿಮಾಗಳನ್ನು ನೀಡಿ ಸೋಲಿನ ಸುಳಿಗೆ ಸಿಕ್ಕ ಕಾರಣಕ್ಕೆ ಅಕ್ಷಯ್‌ ಕುಮಾರ್‌ ಅನಿವಾರ್ಯವಾಗಿ ಕೆನಡಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬೇಕಾಯಿತು ಎಂದು ಹೇಳಿಕೊಂಡಿದ್ದರು. ಆ ನಂತರದ ದಿನಗಳಲ್ಲಿ ಈ ನಿರ್ಧಾರ ನನ್ನ ಜೀವನದಲ್ಲಿ ತೆಗೆದುಕೊಂಡ ಅತ್ಯಂತ ದೊಡ್ಡ ಮತ್ತು ಕಠಿಣ ನಿರ್ಧಾರ ಎಂದೂ ಕೂಡಾ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದರು.

ಇನ್ನು ನರೇಂದ್ರ ಮೋದಿ ಪ್ರಧಾನಿಯಾದ ನಂತರ ಅಕ್ಷಯ್ ಕುಮಾರ್ ಬಿಜೆಪಿ ಪಾಳಯಕ್ಕೆ ಹೆಚ್ಚು ಆಪ್ತರಾಗಿದ್ದರು. ಕಳೆದ 20 ವರ್ಷಗಳಿಂದ ಭಾರತದಲ್ಲಿ ಯಾವೊಂದು ಪತ್ರಿಕಾಗೋಷ್ಠಿಯೂ ನಡೆಸದ ನರೇಂದ್ರ ಮೋದಿ ಅಕ್ಷಯ್ ಕುಮಾರ್ ಜೊತೆಗೆ ನಡೆಸಿದ ಸಂದರ್ಶನದ ಕಾರ್ಯಕ್ರಮದಲ್ಲಿ ಭಾಗಿಯಾದದ್ದೂ ಹೆಚ್ಚು ಚರ್ಚೆ ಮತ್ತು ಟೀಕೆಗೆ ಗುರಿಯಾಗಿದ್ದರು. ಆಗಲೂ ಸಹ ಪೌರತ್ವದ ವಿಚಾರವಾಗಿಯೇ ಅಕ್ಷಯ್‌ ಕುಮಾರ್‌ ಹೆಚ್ಚು ಟೀಕೆಗೆ ಒಳಗಾದರು.

ಸಧ್ಯ ಈ ವರ್ಷದ ಆರಂಭದಲ್ಲೇ ಭಾರತೀಯ ಪೌರತ್ವ ಪಡೆಯುವ ಬಗ್ಗೆ ಸುಳಿವು ನೀಡಿದ್ದ ಅಕ್ಷಯ್ ಕುಮಾರ್, ಸಂದರ್ಶನವೊಂದರಲ್ಲಿ ಭಾರತವೆಂದರೇ ನನಗೆ ಸರ್ವಸ್ವ.. ಅದಕ್ಕೆ ನಾನು ಇಲ್ಲಿನ ಪೌರತ್ವ ಪಡೆಯಲು ಈಗಾಗಲೇ ಪಾಸ್‌ಪೋರ್ಟ್‌ ಬದಲಾವಣೆಗೆ ಅರ್ಜಿಯನ್ನು ಸಲ್ಲಸಿದ್ದೇನೆ ಎಂದು ಹೇಳಿದ್ದರು. ಸಧ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಕ್ಷಯ್ ಕುಮಾರ್ ಭಾರತೀಯ ಪೌರತ್ವ ಸಿಕ್ಕ ಖುಷಿಯನ್ನು ಹಂಚಿಕೊಂಡು, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ತಿಳಿಸಿದ್ದಾರೆ.