alt news – Peepal Media

ಆಪರೇಷನ್‌ ಸಿಂಧೂರ್: ಪಾಕಿಸ್ತಾನದ ಸುಳ್ಳು ಸುದ್ದಿಗಳನ್ನು ರಾತ್ರೋ ರಾತ್ರಿ ಬಯಲಿಗೆಳೆದ ಮೊಹಮ್ಮದ್ ಜುಬೈರ್
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ನೆಲೆಗಳ ಮೇಲೆ ಭಾರತ ನಡೆಸಿದ ಮಿಲಿಟರಿ ದಾಳಿಯ ನಂತರ ಸುಳ್ಳು ಸುದ್ದಿಗಳ ಫ್ಯಾಕ್ಟ್‌ ಚೆಕ್ಕರ್‌ ಮೊಹಮ್ಮದ್ ಜುಬೈರ್ ಆನ್‌ಲೈನ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಆಪರೇಷನ್ ಸಿಂಧೂರ್ ನಡೆಯುತ್ತಿದ್ದಂತೆ, ಮೊಹಮ್ಮದ್ ಜುಬೈರ್ ರಾತ್ರಿ ಹೊರಬರುತ್ತಿದ್ದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಡುತ್ತಿದ್ದ ಸುಳ್ಳು ಸುದ್ದಿಗಳನ್ನು ಬಯಲಿಗೆಳೆದಿದ್ದಾರೆ.

ಪಾಕಿಸ್ತಾನ ಆರಂಭಿಸಿದ ಸುಳ್ಳು ಮಾಹಿತಿ ಹರಡುವ ತಂತ್ರವನ್ನು ಜುಬೈರ್‌ ರಾತ್ರೋ ರಾತ್ರಿ ಬಟಾ ಬಯಲು ಮಾಡಿದ್ದಾರೆ. ರೈಟ್-ವಿಂಗ್ ಐಟಿ ಸೆಲ್‌ಗಳಿಂದ ಸತತ ಆನ್‌ಲೈನ್‌  ದಾಳಿಗಳಿಗೆ ಒಳಗಾಗುತ್ತಿದ್ದ ಜುಬೈರ್‌ ಈಗ ಪಾಕಿಸ್ತಾನದ ಸುಳ್ಳು ಸುದ್ದಿಗಳ ಬಣ್ಣವನ್ನು ಕಳಚಿದ್ದಾರೆ.  ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ಹಮೀದ್ ಮಿರ್ ಅವರಂತಹ ಹಿರಿಯ ಪತ್ರಕರ್ತರು ಹಂಚಿಕೊಂಡಿರುವ ತಪ್ಪು ಮಾಹಿತಿಯನ್ನು ಅವರು ಸುಳ್ಳೆಂದು ಸಾಬೀತು ಮಾಡಿದ್ದಾರೆ.

ಆಲ್ಟ್ ನ್ಯೂಸ್ ಸಂಸ್ಥಾಪಕರಾಗಿರುವ ಇವರು, ಭಾರತ ನಡೆಸಿದ ದಾಳಿಯ ನಂತರ ಪಾಕಿಸ್ತಾನ ಹರಡಲು ಆರಂಭಿಸಿದ ತಪ್ಪು ಮಾಹಿತಿ 90% ಪಾಕಿಸ್ತಾನಿ ಖಾತೆಗಳಿಂದ ಬಂದಿದೆ ಎಂದು ಹೇಳಿದ್ದಾರೆ.

X ನಲ್ಲಿ, ಜುಬೈರ್ ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಯಂತೆ ನಟಿಸುವ ಪಾಕಿಸ್ತಾನಿ ಖಾತೆಗಳ ಪಟ್ಟಿಯನ್ನು ಸಹ ಹಂಚಿಕೊಂಡಿದ್ದಾರೆ . ಅಂತಹ ಒಂದು ಖಾತೆಯ ಹೆಸರು ಅಡ್ಮಿರಲ್ ಅರುಣ್ ಪ್ರಕಾಶ್, ಈತ ತನ್ನನ್ನು ತಾನು ಮಾಜಿ ನೌಕಾಪಡೆಯ ನೌಕರ ಎಂದು ಬರೆದುಕೊಂಡಿದ್ದ,  “ಭಾರತ ನನ್ನ ರಕ್ತದಲ್ಲಿದೆ” ಎಂದು ತನ್ನ ಬಯೋದಲ್ಲಿ ಹೇಳಿಕೊಂಡಿದ್ದಾನೆ.

Beware! These are Pakistani propaganda accounts pretending to be Indian Army Personals.
Don't amplify their tweets. pic.twitter.com/uhoYFDvbUM
— Mohammed Zubair (@zoo_bear) May 7, 2025

ಮೂರನೇ ಪರಿಶೀಲಿಸಿದ ಎಕ್ಸ್ ಖಾತೆಯು ತನ್ನನ್ನು ತಾನು ಹೆಮ್ಮೆಯ ಭಾರತೀಯ ಮತ್ತು “ಕಾಂಗ್ರೆಸ್ ಬೆಂಬಲಿಗ” ಎಂದು ಕರೆದುಕೊಂಡಿದೆ. ಈ ಖಾತೆಯಿಂದ ಹಂಚಿಕೊಳ್ಳಲಾದ ನಕಲಿ ಸುದ್ದಿಗಳನ್ನು ಪಾಕಿಸ್ತಾನಿ ಪತ್ರಕರ್ತ ಹಮೀದ್ ಮಿರ್ ಶೇರ್‌ ಮಾಡಿದ್ದರು.

“ನಮ್ಮ ಪಡೆಗಳು ನಡೆಸಿದ ಆಪರೇಷನ್ ಸಿಂದೂರ್ ನಂತರ, ರಕ್ತಸಿಕ್ತ ಪಾಕಿಸ್ತಾನಿಗಳು ಅಖ್ನೂರ್ ಬಳಿ 1 ರಫೇಲ್ ಮತ್ತು 1 ಸು -30 ಅನ್ನು ಹೊಡೆದುರುಳಿಸಿದರು. ಮತ್ತು ನಮ್ಮ ಬ್ರಿಗೇಡ್ ಪ್ರಧಾನ ಕಚೇರಿಯನ್ನು ನಾಶಪಡಿಸಿದರು” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಪೋಸ್ಟ್‌ ಅನ್ನು ಹಮೀದ್‌ ಮೀರ್‌ ರಿಟ್ವೀಟ್‌ ಮಾಡಿದ್ದಾರೆ.

So Pak Senior Journalist @HamidMirPAK is amplifying tweets by @Tiju0Prakash whose earlier I'd was @tiju786 ( A Pakistan propaganda account pretending to be Congress Supporter). 😏 pic.twitter.com/pUJPlafWq6
— Mohammed Zubair (@zoo_bear) May 7, 2025

ಈ ಬಗ್ಗೆ ಸತ್ಯ ಪರಿಶೀಲನೆಗೆ ಇಳಿದ ಜುಬೈರ್‌ ಈ ಭಾರತೀಯ ವೇಷದ ನಕಲಿ ಪಾಕಿಸ್ತಾನಿ ಎಕ್ಸ್‌ ಹ್ಯಾಂಡಲ್‌ನ ನೈಜತೆಯನ್ನು ಬಯಲಿಗೆಳೆದರು.

ಪಾಕಿಸ್ತಾನದ ಪ್ರತೀಕಾರದ ಪುರಾವೆಯಾಗಿ ಹಂಚಿಕೊಳ್ಳಲಾಗುತ್ತಿರುವ ಹಲವಾರು ದೃಶ್ಯಗಳು ಹಳೆಯ ಘಟನೆಗಳಾಗಿದ್ದು, ಅವುಗಳಲ್ಲಿ ಹಲವು ಗಾಜಾದ ವೀಡಿಯೋಗಳಾಗಿವೆ.

“ಕೆಲವು ಗಾಜಾ ಮತ್ತು ಇಸ್ರೇಲ್‌ನಿಂದ ಬಂದಿವೆ, ಮತ್ತು ಭಾರತ ಮತ್ತು ಪಾಕಿಸ್ತಾನದ ಹಳೆಯ ಫೋಟೋಗಳು ಮತ್ತು ಘಟನೆಗಳು ಸಹ ಬಂದಿವೆ” ಎಂದು ಜುಬೈರ್ ಹೇಳಿದ್ದು, ಹರಿದಾಡುತ್ತಿರುವ ಕೆಲವು ದೃಶ್ಯಗಳು ಇರಾನ್‌ನಿಂದಲೂ ಬಂದಿವೆ ಎಂದು ಹೇಳಿದ್ದಾರೆ.

ಮೇ 4 ರವರೆಗೆ, ಪಾಕಿಸ್ತಾನದಲ್ಲಿ X ಅನ್ನು ನಿಷೇಧಿಸಲಾಗಿತ್ತು. ಅದರ ಈ ನಿಷೇಧವನ್ನು ತೆಗೆದು ಹಾಕಿದ ನಂತರ ಸುಳ್ಳು ಸುದ್ದಿ ಹರಡಲು ವ್ಯಾಪಕವಾಗಿ ಬಳಕೆಯಾಯಿತು.

“ಪ್ರಚಾರ ಮತ್ತು ಪ್ರಭಾವಿ ಖಾತೆಗಳು ಎರಡೂ ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ನಮ್ಮ ಮೂಲಗಳಿಂದ ನಮಗೆ ತಿಳಿದಾಗ, ನಾನು ಸತ್ಯ ಪರಿಶೀಲನೆ ಮಾಡಲು ಪ್ರಾರಂಭಿಸಿದೆ. ಅಲ್ಗಾರಿದಮ್ ನನಗೆ ಸಹಾಯ ಮಾಡಿತು,” ಎಂದು ಜುಬೈರ್ ಹೇಳಿದರು.

ಭಾರತ-ಪಾಕಿಸ್ತಾನ ಬಿಕ್ಕಟ್ಟಿನ ಹಿಂದಿನ ಅಧ್ಯಾಯವಾದ ಪುಲ್ವಾಮಾ ಮತ್ತು ಪ್ರತೀಕಾರದ ಬಾಲಕೋಟ್ ದಾಳಿಯಲ್ಲಿ ಎರಡೂ ಕಡೆಯಿಂದಲೂ ತಪ್ಪು ಮಾಹಿತಿ ಹರಡಲಾಗುತ್ತಿತ್ತು ಎಂದು ಅವರು ಹೇಳಿದರು.

ಭಾರತದಲ್ಲಿ ಕೂಡ ಎಕ್ಸ್, ವಿಶೇಷವಾಗಿ ಸಂಘರ್ಷದ ಸಮಯದಲ್ಲಿ, ತನ್ನ ನಕಲಿ ಮತ್ತು ಕೃತಕ ನಿರೂಪಣೆಗಳ ಪ್ರಚಾರಕ್ಕೆ ಕುಖ್ಯಾತವಾಗಿದೆ. ಉದಾಹರಣೆಗೆ, ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಸಮಯದಲ್ಲಿ, ಭಾರತೀಯ ಎಕ್ಸ್ ಖಾತೆಗಳಲ್ಲಿ ನಕಲಿ ಸುದ್ದಿಗಳೇ ತುಂಬಿದ್ದವು.  ಇವುಗಳ ಸುಳ್ಳನ್ನು ಬಯಲಿಗೆಳೆದ ಜುಬೈರ್‌ ಅವರನ್ನು ಭಾರತದಲ್ಲಿ ʼಪಾಕಿಸ್ತಾನಿʼ ಎಂದೆಲ್ಲಾ ಕರೆದಿದ್ದರು. ಈಗ ಪಾಕಿಸ್ತಾನದ ನಕಲಿ ಸುದ್ದಿಗಳನ್ನು ಬಯಲಿಗೆಳೆದು ತಮ್ಮ ವೃತ್ತಿನಿಷ್ಠೆಯನ್ನು ಮೆರೆದಿದ್ದಾರೆ.

ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜುಬೈರ್‌ ಅವರನ್ನು ಜನರು ಪ್ರಶಂಸೆ ಮಾಡುತ್ತಿದ್ದಾರೆ.

boss Zubair -my deep respects 🙏🙏🙏

fills my heart with pain to realize that your own countrymen give you gaalis daily. daily non-stop. call you anti-national, pakistani etc etc and feel proud to do this.

yet you soldier on. without getting any pat on the back. i admire Modi…
— Puneet Sharma (@PuneetSharmaX) May 7, 2025

ಭಾರತದ ಸಾರ್ವಭೌಮತ್ವ, ಏಕತೆ, ಸಮಗ್ರತೆಗೆ ಅಪಾಯ ತಂದಿದ್ದಾರೆ ಎಂದು ಜುಬೈರ್‌ ಮೇಲೆ ಯುಪಿ ಪೊಲೀಸ್‌ ಆರೋಪ
ಬೆಂಗಳೂರು: ಹಿಂದುತ್ವವಾದಿಯೊಬ್ಬನ ದ್ವೇಷಪೂರಿತ ಭಾಷಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪತ್ತೆದಾರ ಮೊಹಮ್ಮದ್ ಜುಬೇರ್ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕಾನೂನನ್ನು ಜಾರಿಗೊಳಿಸಿದ್ದಾರೆ.

ಪ್ರಕರಣದ ತನಿಖಾಧಿಕಾರಿ ಬುಧವಾರ (ನವೆಂಬರ್ 27) ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದ್ದು, ಬಿಎನ್‌ಎಸ್‌ನ ಸೆಕ್ಷನ್ 152 ರ ಅಡಿಯಲ್ಲಿ ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಅಪರಾಧದ ಅಡಿಯಲ್ಲಿ ಜುಬೈರ್ ವಿರುದ್ಧದ ಎಫ್‌ಐಆರ್‌ ದಾಖಲಾಗಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಅವರು ಎಫ್‌ಐಆರ್‌ಗೆ ‘ಕಂಪ್ಯೂಟರ್ ಅಪರಾಧಗಳಿಗೆ’ ಸಂಬಂಧಿಸಿದ ಐಟಿ ಕಾಯ್ದೆಯ ಸೆಕ್ಷನ್ 66 ಅನ್ನು ಕೂಡ ಸೇರಿಸಿದ್ದು, ಇದರಲ್ಲಿ ದ್ವೇಷವನ್ನು ಉತ್ತೇಜಿಸುವುದು, ಸಾಕ್ಷ್ಯವನ್ನು ಸೃಷ್ಟಿಸುವುದು, ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವುದು, ಮಾನನಷ್ಟ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ನಿಬಂಧನೆಗಳಿವೆ.

ಹಿಂದುತ್ವವಾದಿ ಯತಿ ನರಸಿಂಗಾನಂದ ಎಂಬಾತನ ಸಹಾಯಕನ ದೂರಿನ ಮೇರೆಗೆ ಗಾಜಿಯಾಬಾದ್ ಪೊಲೀಸರು ಕಳೆದ ತಿಂಗಳು ಜುಬೈರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಯತಿ ನರಸಿಂಹಾನಂದ ಸರಸ್ವತಿ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಉದಿತಾ ತ್ಯಾಗಿ, ಜುಬೇರ್ ಅವರು ಮುಸ್ಲಿಮರಿಂದ ಹಿಂಸಾಚಾರವನ್ನು ಪ್ರಚೋದಿಸುವ ಸಲುವಾಗಿ ನರಸಿಂಹಾನಂದರನ್ನು ಒಳಗೊಂಡ ಹಳೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ .

ಆ ತಿಂಗಳ ಆರಂಭದಲ್ಲಿ, ನರಸಿಂಹಾನಂದರು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ವಿವಾದವುಂಟಾಯಿತು .

ಸೆಪ್ಟೆಂಬರ್ 29 ರಂದು ಗಾಜಿಯಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನರಸಿಂಹಾನಂದ ಅವರು ಪ್ರವಾದಿಯವರ ಪ್ರತಿಕೃತಿಯನ್ನು ಸುಡುವಂತೆ ಜನರನ್ನು ಪ್ರಚೋದಿಸುವ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಉತ್ತರ ಪ್ರದೇಶದ ಹಲವೆಡೆ ಮುಸ್ಲಿಮರು ಬೀದಿಗಿಳಿದು ಪ್ರತಿಭಟನೆ ನಡೆಸಿ ಈತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಜುಬೇರ್ ತನ್ನ ವಿರುದ್ಧದ ಎಫ್‌ಐಆರ್ ಅನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ ಮತ್ತು ರಕ್ಷಣೆಯನ್ನು ಕೋರಿದ್ದಾರೆ.

ನರಸಿಂಹಾನಂದನ ಕುರಿತು ತಾವು ಮಾಡಿದ ಪೋಸ್ಟ್‌ನಲ್ಲಿ ಹಿಂಸಾಚಾರಕ್ಕೆ ಕರೆ ನೀಡಿರುವುದಿಲ್ಲ ಎಂದು ಜುಬೈರ್‌ ಹೇಳಿದ್ದಾರೆ, ಆದರೆ ನರಸಿಂಹಾನಂದನ ವಿರುದ್ಧ ಕ್ರಮ ತೆಗೆದುಕೊಳ್ಳಲು ಮತ್ತು ರಕ್ಷಣೆಗಾಗಿ ಕೋರಿದ್ದರು ಎಂದು ಪಿಟಿಐ ವರದಿ ಮಾಡಿದೆ.

ನರಸಿಂಹಾನಂದ ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ದ್ವೇಷ ಭಾಷಣ ಪ್ರಕರಣದಲ್ಲಿ ಕೇಸು ದಾಖಲಾಗಿ, ಆಮೇಲೆ ಕೋಮು ಸೌಹಾರ್ದತೆಯನ್ನು ಕದಡುವ ಯಾವುದೇ ಹೇಳಿಕೆಗಳನ್ನು ನೀಡಬಾರದು ಜಾಮೀನು ಷರತ್ತುಗಳ ಮೇಲೆ ಜಾಮೀನಿನ ಮೂಲಕ ಹೊರಬಂದಿದ್ದರು ಎಂದು ಅವರ ರಿಟ್ ಅರ್ಜಿಯಲ್ಲಿ ತಿಳಿಸಲಾಗಿದೆ.

ಲೈವ್‌ಲಾ ವರದಿಯ ಪ್ರಕಾರ, ಜುಬೈರ್ ಅವರು ನರಸಿಂಹಾನಂದ್ ಅವರ ವೀಡಿಯೊಗಳನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕೋರಿರುವುದು ಮಾನನಷ್ಟವಾಗುವುದಿಲ್ಲ ಎಂದು ವಾದಿಸಿದರು .

ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 3 ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ ಎಂದು ಬಾರ್ ಆಂಡ್‌ ಬೆಂಚ್ ವರದಿ ತಿಳಿಸಿದೆ.

ಬಿಎನ್‌ಎಸ್‌ ಸೆಕ್ಷನ್ 152 ಹೀಗೆ ಹೇಳುತ್ತದೆ:

“ಯಾರು, ಉದ್ದೇಶಪೂರ್ವಕವಾಗಿ ಅಥವಾ ಗೊತ್ತಿದ್ದು ಗೊತ್ತಿದ್ದೂ, ಪದಗಳಿಂದ, ಮಾತನಾಡುವ ಅಥವಾ ಬರೆಯುವ ಮೂಲಕ, ಅಥವಾ ಸಂಕೇತಗಳ ಮೂಲಕ, ಅಥವಾ ಕಣ್ಣಿಗೆ ಕಾಣುವಂತ ಯಾವುದೇ ರೀತಿಯಲ್ಲಿ, ಅಥವಾ ವಿದ್ಯುನ್ಮಾನ ಸಂವಹನದಿಂದ ಅಥವಾ ಆರ್ಥಿಕ ಉದ್ದೇಶದಿಂದ ಅಥವಾ ಇತರ ರೀತಿಯಲ್ಲಿ, ಪ್ರಚೋದಿಸುವ ಅಥವಾ ಪ್ರಚೋದಿಸಲು ಪ್ರಯತ್ನಿಸುವ, ಪ್ರತ್ಯೇಕತೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳು, ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಪ್ರೋತ್ಸಾಹಿಸುವುದು ಅಥವಾ ಭಾರತದ ಸಾರ್ವಭೌಮತ್ವ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುತ್ತದೆ; ಅಥವಾ ಅಂತಹ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅಥವಾ ಎಸಗಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡಕ್ಕೆ ಗುರಿಯಾಗಬಹುದು.”

ಜುಬೈರ್ ವಿರುದ್ಧ ಎಫ್‌ಐಆರ್ ದಾಖಲಾಗಿರುವುದು ಇದೇ ಮೊದಲಲ್ಲ. ಅವರು 2018 ರಲ್ಲಿ ಮಾಡಿದ ಪೋಸ್ಟ್‌ಗೆ ಸಂಬಂಧಿಸಿದಂತೆ ಅವರನ್ನು ಜೂನ್ 2022 ರಲ್ಲಿ ಬಂಧಿಸಲಾಯಿತು.

ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳು, ನಾಗರಿಕ ಸಮಾಜ ಮತ್ತು ವಿರೋಧ ಪಕ್ಷಗಳು ವಿರೋಧಕ್ಕೆ ಕಾರಣವಾಯ್ತು, ಇದು ಭಿನ್ನಾಭಿಪ್ರಾಯದ ಬಾಯಿ ಮುಚ್ಚಿಸುವ ಮತ್ತು ಸತ್ಯ-ಶೋಧಕರನ್ನು ಗುರಿ ಮಾಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದರು.

ಜುಬೈರ್ ಸಹ-ಸಂಸ್ಥಾಪಕರಾಗಿರುವ Alt News ಎಂಬ ಸತ್ಯ-ಪರಿಶೀಲನಾ ಡಿಜಿಟಲ್‌ ಮಾಧ್ಯಮವು ತನ್ನ ಹೇಳಿಕೆಯಲ್ಲಿ, ಬುಧವಾರ ತಾನು “ಜುಬೈರ್ ಈ ರೀತಿ ಪಟ್ಟುಬಿಡದೆ ಕಾನೂನು ಬೆದರಿಕೆಯನ್ನು ಎದುರಿಸುತ್ತಿರುವಾಗ ಅವರೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ” ಎಂದು ಹೇಳಿದೆ.

“ದ್ವೇಷ ಮತ್ತು ತಪ್ಪು ಮಾಹಿತಿಯನ್ನು ಬೆತ್ತಲುಗೊಳಿಸಲು ಬದ್ಧವಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಬೆದರಿಸಲು ಸರ್ಕಾರಿ ಯಂತ್ರವನ್ನು ಹೇಗೆ ಬಳಸಲಾಗುತ್ತಿದೆ ಎಂಬುದಕ್ಕೆ ಈ ಅಫಿಡವಿಟ್ ಮತ್ತೊಂದು ಉದಾಹರಣೆಯಾಗಿದೆ” ಎಂದು ಅದು ಹೇಳಿದೆ.

ಕೊಲ್ಕತ್ತಾ ಅತ್ಯಾಚಾರ ಪ್ರಕರಣದಲ್ಲಿ ಮುಸ್ಲಿಂ ಹೆಸರುಗಳು, ಇದರಲ್ಲಿ ನಿಜವೆಷ್ಟು? ALT ನ್ಯೂಸ್‌ ಫ್ಯಾಕ್ಟ್‌ ಚೆಕ್‌ ವರದಿ
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯೊಬ್ಬರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ನಂತರ ಎದ್ದ ಗದ್ದಲದಲ್ಲಿ ಹಲವಾರು ತಲೆಬುಡವಿಲ್ಲದ ಊಹಾಪೋಹಗಳನ್ನು ಹರಡಿ ಬಿಡಲಾಯಿತು.

ಆಗಸ್ಟ್ 9ರಂದು ವೈದ್ಯೆಯ ಶವ ಪತ್ತೆಯಾದ ಕೂಡಲೇ, ಇಬ್ಬರು ಕಿರಿಯ ವೈದ್ಯರ ಹೆಸರುಗಳನ್ನು ಹರಿಬಿಟ್ಟು – ಅರ್ಶಿಯಾನ್ ಆಲಂ ಮತ್ತು ಗೋಲಂ ಅಜಮ್ – ‘ಇವರೇ ನಿಜವಾದ ಅಪರಾಧಿಗಳು’ ಎಂದು ಸಾರಲಾಯಿತು. ಕೆಲವರು ಇವರಿಬ್ಬರು ಅಪರಾಧ ಎಸಗಿ ದೇಶ ಬಿಟ್ಟು ಹೋಗಿದ್ದಾರೆ ಎಂದೂ ಸಾಧಿಸತೊಡಗಿದರು.

ಆದರೆ ಸತ್ಯ ಪರಿಶೋಧನೆ ನಡೆಸುವ ವೆಬ್ಸೈಟ್‌ ಆಗಿರುವ ಆಲ್ಟ್‌ ನ್ಯೂಸ್‌ ಈ ಸುದ್ದಿಗಳ ಹಿಂದಿ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಅದು ಸಂಪೂರ್ಣ ಸುಳ್ಳು ಸುದ್ದಿ ಎಂದು ಘೋಷಿಸಿದೆ.

altnews.in ಪ್ರಕಾರ ಆ ದಿನ ಅರ್ಷಿಯಾನ್ ಅವರ ಮನೆಯಲ್ಲಿದ್ದರು; ಗೋಲಂ ತಮ್ಮ ಹಾಸ್ಟೆಲ್ಲಿನಲ್ಲಿದ್ದರು. ಅವರು ವಿದೇಶಕ್ಕೆ ಹೋಗಿದ್ದಾರೆ ಎನ್ನುವ ಸುದ್ದಿ ಕೂಡಾ ಸುಳ್ಳು.

ಇತ್ತೀಚೆಗೆ ಈ ಅಪರಾಧ ಎಸಗಿದ ನಿಜವಾದ ಅಪರಾಧಿಗಳು ಎಂದು ಹೇಳಿ ನ್ನೂ ಕೆಲವು ಹೆಸರುಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮತ್ತು WhatsApp ಸಂದೇಶಗಳಲ್ಲಿ ಹಂಚಿಕೊಳ್ಳಲಾಗಿದೆ. ಅವರಲ್ಲಿ ಒಬ್ಬರು ತಾನಿಯಾ ಯಾಸ್ಮಿನ್/ತಾನಿಯಾ ಯಾಸ್ಮಿನ್ ಖಾತೂನ್. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಪಾದಿತ ಅತ್ಯಾಚಾರ ಮತ್ತು ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ತಾನಿಯಾರ ಫೋಟೊಗಳನ್ನು ಸಹ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

@rajasolanki71070 ಎನ್ನುವ ಹೆಸರಿನ ಬಳಕೆದಾರ‌ ಅತ್ಯಾಚಾರ ಸಂತ್ರಸ್ತೆಯ ಫೋಟೋವನ್ನು ಹಸಿರು ಸ್ಕ್ರಬ್‌ ಮತ್ತು ಮಾಸ್ಕ್ ಧರಿಸಿರುವ ಮಹಿಳೆಯ ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ ಮತ್ತು ಆ ಮಹಿಳೆಯು ಸಂತ್ರಸ್ತೆಯ ಸ್ನೇಹಿತೆ ತಾನಿಯಾ ಯಾಸ್ಮಿನ್ ಎಂದು ಹೇಳಿಕೊಂಡಿದ್ದಾರೆ. ಈತ ತನ್ನ ಟ್ವೀಟಿನಲ್ಲಿ ʼವೈದ್ಯೆಯ ಮಾನವನ್ನು ಹರಣ ಮಾಡುತ್ತಿರುವಾಗ ನೀಡುತ್ತಿರುವಾಗ ಆಕೆಯ ಸ್ನೇಹಿತೆಯಾದ ಡಾಕ್ಟರ್ ತಾನಿಯಾ ವೈದ್ಯೆಯ ಕೈಯನ್ನು‌ ಮಿಸುಕಾಡದಂತೆ ಹಿಡಿದುಕೊಂಡಿದ್ದಳು. ʼಇಂತಹ ಹುಡುಗಿಯರೊಂದಿಗೆ ಹಿಂದೂ ಸಹೋದರಿಯರು ಸ್ನೇಹ ಬೆಳೆಸದಿರಿʼ ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನೂ ಕೆಲವರು ತಾನಿಯಾ ಅವರ ಫೋಟೊ ಜೊತೆಗೆ ಡಾ. ಶಹಬಾಜ್ ಖಾನ್ ಎನ್ನುವವರ ಫೋಟೊವನ್ನು ಕೊಲಾಜ್‌ ಮಾಡಿ ಶೇರ್‌ ಮಾಡಲಾಗಿದೆ. ಈ ಫೋಟೊಗಳ ಜೊತೆಗೆ ಅಪರಾಧದಲ್ಲಿ ಭಾಗಿಯಾಗಿರುವ ಹಿರಿಯ ವೈದ್ಯರಲ್ಲಿ ಶಹಬಾಜ್‌ ಖಾನ್‌ ಕೂಡ ಒಬ್ಬ ಎಂದು ಕ್ಯಾಪ್ಷನ್‌ ಬರೆಯಲಾಗಿದೆ.

ಆದರೆ, ಈ ಚಿತ್ರಗಳನ್ನು ರಿವರ್ಸ್ ಇಮೇಜ್ ಸರ್ಚಿಂಗ್ ಮತ್ತು ಕೀವರ್ಡ್ ಸರ್ಚಿಂಗ್ ಮೂಲಕ‌ ಹುಡುಕಿದಾಗ ಈ ಚಿತ್ರಗಳನ್ನು ಕಿಡಿಗೇಡಿಗಳು ಶಹಬಾಜ್ ಖಾನ್ ಮತ್ತು ತಾನಿಯಾ ಯಾಸ್ಮಿನ್ ಎಂಬ ವ್ಯಕ್ತಿಗಳ ಲಿಂಕ್ಡ್‌ಇನ್ ಪ್ರೊಫೈಲ್‌ಗಳಿಂದ ಎತ್ತಿಕೊಂಡಿರುವುದು ತಿಳಿದುಬಂದಿದೆ ಎಂದು ಆಲ್ಟ್‌ ನ್ಯೂಸ್‌ ಹೇಳಿದೆ.

ಈ ವ್ಯಕ್ತಿಗಳ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಶಹಬಾಜ್ ಕೋಲ್ಕತ್ತಾದ ಕಾಲೇಜು ವಿದ್ಯಾರ್ಥಿ. ತಾನಿಯಾ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಆಪರೇಷನ್-ಥಿಯೇಟರ್ ತಂತ್ರಜ್ಞೆ. ಇವರ ಸುರಕ್ಷತೆಯ ದೃಷ್ಟಿಯಿಂದ ಇನ್ನೂ ಹೆಚ್ಚಿನ ವಿವರಗಳನ್ನು ನಾವು ಪ್ರಸಾರ ಮಾಡುತ್ತಿಲ್ಲ ಎಂದು ಆಲ್ಟ್‌ ನ್ಯೂಸ್‌ ಹೇಳಿಕೊಂಡಿದೆ.

ಮೊದಲಿಗೆ ಯಾರೋ ಒಬ್ಬರು ತಾನಿಯಾ ಯಾಸ್ಮಿನ್‌ ಅವರ ಫೋಟೋವನ್ನು ಗೂಗಲ್‌ ಸರ್ಚ್‌ ಮೂಲಕ ಪಡೆದುಕೊಂಡು ಈ ರೀತಿಯಾಗಿ ಹರಿಬಿಟ್ಟು ನಂತರ ಅದು ವೈರಲ್‌ ಆಗಿದೆ.

ಆಲ್ಟ್‌ ನ್ಯೂಸ್‌ ಈ ಕುರಿತು ತಾನಿಯಾ ಯಾಸ್ಮಿನ್‌ ಅವರನ್ನು ಮಾತನಾಡಿಸಿದ್ದು, ಮೂಲತ ಹೂಗ್ಲಿಯವರಾದ ಅವರು ಪ್ರಸ್ತುತ ಕೊಲ್ಕತ್ತಾದಲ್ಲಿ ವಾಸವಿದ್ದಾರೆ. ಆದರೆ ಈ ಟ್ವೀಟುಗಳಲ್ಲಿ ಹೇಳಿರುವಂತೆ ಅವರು ವೈದ್ಯೆಯಲ್ಲ. ಆಪರೇಷನ್‌ ಥಿಯೇಟರ್‌ ಟೆಕ್ನಿಷಿಯನ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ತಾನಿಯಾ ಫೆಬ್ರವರಿ 2021ರಿಂದ ಮೇ 2023ರವರೆಗೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ಯಾರಾಮೆಡಿಕಲ್ ಡಿಪ್ಲೊಮಾ ಕೋರ್ಸ್ (OT ಟೆಕ್ನಿಷಿಯನ್) ಓದಿದ್ದಾರೆ.

ಅವರು ಹೇಳುವಂತೆ ಅವರು ಕೊನೆಯ ಬಾರಿ RG ಆಸ್ಪತ್ರೆಗೆ ಹೋಗಿದ್ದು 2023ರ ಡಿಸೆಂಬರ್‌ ತಿಂಗಳಿನಲ್ಲಿ. ತಮ್ಮ ಡಿಪ್ಲೋಮಾ ಸರ್ಟಿಫಿಕೇಟ್‌ ಪಡೆಯಲೆಂದು.

“ನಾನು ಆಗಸ್ಟ್ 9ರಂದು ನಾನು ಕೆಲಸಕ್ಕೆ ಹೋಗಿದ್ದೆ, ಆ ರಾತ್ರಿ ನಾನು ನನ್ನ ಪಿಜಿಯಲ್ಲಿದ್ದೆ. ಘಟನೆಯ ಕುರಿತು ನನಗೆ ತಿಳಿದಿದ್ದು ಮಾರನೇ ದಿನ. ನನಗೆ ಸಂತ್ರಸ್ತೆಯ ಪರಿಚಯ ಇತ್ತೇ ಎನ್ನುವ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ” ಎಂದು ತಾನಿಯಾ ಹೇಳಿದ್ದಾರೆ.

ಕೆಲವು ದಿನಗಳ ನಂತರ, ನನ್ನ ಹೆಸರು ಮತ್ತು ಫೇಸ್‌ಬುಕ್ ಪ್ರೊಫೈಲ್ ಲಿಂಕನ್ನು ಕೆಲವು ಬಳಕೆದಾರರು ಶೇರ್‌ ಮಾಡುತ್ತಿರುವುದು ನನಗೆ ತಿಳಿಯಿತು. ಅಲ್ಲಿ ಅವರು ನಾನು ಸಂತ್ರಸ್ತೆಯ ಸ್ನೇಹಿತೆಯಾಗಿದ್ದೆ ಮತ್ತು ಪ್ರಸ್ತುತ ನಾನು ದೇಶ ತೊರೆದಿದ್ದೇನೆ ಎಂದೂ ಬರೆಯಲಾಗಿತ್ತು.

ಇದರ ನಂತರ ನನಗೆ ಫೇಸ್ಬಕ್ಕಿನಲ್ಲಿ ನಿಂದನೆ ಹಾಗೂ ಬೆದರಿಕೆಗಳಿಂದ ಕೂಡಿದ್ದ ಸಂದೇಶಗಳು ಬರಲಾರಂಭಿಸಿದವು. ಇದಾದ ನಂತರ ನಾನು ಕೋಲ್ಕತ್ತಾ ಪೊಲೀಸರ ಸೈಬರ್ ಸೆಲ್‌ಗೆ ದೂರು ನೀಡಿದೆ ಎಂದು ತಾನಿಯಾ ಹೇಳಿದ್ದಾರೆ.

ತಾನಿಯಾ ಫೇಸ್‌ಬುಕ್ ಸಂದೇಶದ ಸ್ಕ್ರೀನ್‌ಶಾಟ್‌ಗಳನ್ನು ಆಲ್ಟ್ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ. ಪಟುಲಿ ಪೊಲೀಸ್ ಠಾಣೆಯಲ್ಲಿ ಕೋಲ್ಕತ್ತಾ ಪೊಲೀಸರ ಸೈಬರ್ ಕ್ರೈಮ್ ಸೆಲ್‌ಗೆ ನೀಡಿದ ದೂರಿನ ಪ್ರತಿಯನ್ನು ಸಹ ನಾವು ನೋಡಿದ್ದೇವೆ. ದೂರಿನಲ್ಲಿ ಹೆಸರಿಸಲಾದ ಬಳಕೆದಾರರು ಸುದೀಪ್ತ ಕರ್ ಮತ್ತು ಐಶ್ವರ್ಯಾ ಸರ್ಕಾರ್ ಎಂದು ಆಲ್ಟ್‌ ನ್ಯೂಸ್‌ ತನ್ನ ವರದಿಯಲ್ಲಿ ತಿಳಿಸಿದೆ.

ಈ ಕುರಿತು ಆಲ್ಟ್‌ ನ್ಯೂಸ್‌ ಆರ್‌ಜಿ ಆಸ್ಪತ್ರೆಯ ಕೆಲವು ವಿದ್ಯಾರ್ಥಿಗಳ ಬಳಿಯೂ ನಿಮಗೆ ತಾನಿಯಾ ಪರಿಚಯವಿದೆಯೇ ಎಂದು ವಿಚಾರಿಸಿದ್ದು ಅವರೆಲ್ಲರೂ ಇಲ್ಲ ಎಂದೇ ಉತ್ತರಿಸಿದ್ದಾರೆ. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆಗೊಳಪಡಿಸಿದ ಇತರ ನಾಲ್ವರು ಕಿರಿಯ ವೈದ್ಯರ ಹೆಸರೂ ಆಲ್ಟ್ ನ್ಯೂಸ್‌ಗೆ ತಿಳಿದಿದ್ದು, ಇವುಗಳಲ್ಲಿ ತಾನಿಯಾ ಯಾಸ್ಮಿನ್ ಅಥವಾ ತಾನಿಯಾ ಯಾಸ್ಮಿನ್ ಖಾತೂನ್ ಎಂಬ ಯಾವುದೇ ವ್ಯಕ್ತಿಯ ಹೆಸರಿಲ್ಲ ಎಂದು ಅದು ಹೇಳಿದೆ.

ಮಾಹಿತಿ: ಶಿಂಜಿನಿ ಮಜುಂದಾರ್ ಮತ್ತು ಓಶಾನಿ ಭಟ್ಟಾಚಾರ್ಯ

ಮೂಲ ವರದಿ: ಇಂದ್ರದೀಪ್‌ ಭಟ್ಟಾಚಾರ್ಯ

ಫ್ಯಾಕ್ಟ್‌ ಚೆಕರ್‌ ಜುಬೇರ್‌ಗೆ 2023ರ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಶಸ್ತಿ
ಬೆಂಗಳೂರು, ಅಕ್ಡೋಬರ್‌.20:  ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್‌ವರಿಗೆ ಅಕ್ಟೋಬರ್‌ 20, ಶುಕ್ರವಾರದಂದು ಪತ್ರಿಕಾರಂಗದ 2023 ರ Freedom of Expression Award ಘೋಷಣೆಯಾಗಿದೆ. ಈ ಪ್ರಶಸ್ತಿಯನ್ನು Index on Censorship ಸಂಸ್ಥೆ ನೀಡಿದೆ.

“ಆಡಳಿತ ಪಕ್ಷದ ಪ್ರಭಾವಿ ನಾಯಕರು ಹಂಚಿದ ತಪ್ಪು ಮಾಹಿತಿಗಳನ್ನು ಪ್ರಶ್ನಿಸಿ ಜುಬೈರ್  ಬೆದರಿಕೆಗಳನ್ನು ಎದುರಿಸಿದ್ದರು” ಎಂದು ಇಂಡೆಕ್ಸ್‌ ಆನ್‌ ಸೆನ್ಸಾರ್‌ಶಿಪ್ ಹೇಳಿದೆ.

ಲಂಡನ್ ಮೂಲದ Index on Censorship ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕೆಲಸ ಮಾಡುತ್ತಿದೆ. Freedom of Expression ಪ್ರಶಸ್ತಿಗಳನ್ನು ಕಲೆ, ಪ್ರಚಾರ, ಪತ್ರಿಕೋದ್ಯಮ ಮತ್ತು ಟ್ರಸ್ಟಿ – ಎಂಬ ನಾಲ್ಕು ವಿಭಾಗಗಳಲ್ಲಿ ನೀಡಲಾಗಿದೆ. ವಿಜೇತರನ್ನು ಯುನೈಟೆಡ್ ಕಿಂಗ್‌ಡಮ್‌ನ ಲಂಡನ್‌ನಲ್ಲಿ ಸನ್ಮಾನಿಸಲಾಗುತ್ತದೆ.

“ನನ್ನ ಮೇಲೆ ದಾಳಿಯಾದಾಗ, ನಿಂದಿಸಿದಾಗ ಮತ್ತು ನನ್ನ ಕೆಲಸವನ್ನು ಮಾಡಿದ್ದಕ್ಕಾಗಿ ಜೈಲಿಗೆ ಹಾಕಿದಾಗ ನನ್ನ ಬೆಂಬಲಕ್ಕೆ ನಿಂತ”ವರಿಗೆ ಜುಬೇರ್ ಕೃತಜ್ಞತೆಯನ್ನು ಅರ್ಪಿಸಿದ್ದಾರೆ.

ಪ್ರಶಸ್ತಿ ಘೋಷಣೆಯಾದ ಹಿನ್ನಲೆಯಲ್ಲಿ ಮೊಹಮ್ಮದ್ ಜುಬೇರ್‌ ಮಾತುಗಳು: ಮೊಹಮ್ಮದ್ ಜುಬೇರ್‌

ಕಳೆದ ವರ್ಷ ಜುಬೈರ್‌ 24 ದಿನಗಳ ಕಾಲ ಜೈಲು ವಾಸದಲ್ಲಿದ್ದು, ಸುಪ್ರೀಂ ಕೋರ್ಟ್‌ ಜಾಮೀನು ಮೇರೆಗೆ ಹೊರಬಂದಿದ್ದರು. ಜುಬೇರ್‌ ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿದ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಆರು ಮತ್ತು ದೆಹಲಿಯಲ್ಲಿ ಒಂದು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಸೊಮಾಲಿಯಾದ ಮೊದಲ ಮಹಿಳೆಯರೇ ನಡೆಸುವ ಮಾಧ್ಯಮ ಸಂಸ್ಥೆ ಬಿಲಾನ್ ಮೀಡಿಯಾ ಮತ್ತು ಈ ವರ್ಷದ ಜನವರಿಯಲ್ಲಿ ತಾಲಿಬಾನಿಗಳಿಂದ ಬಂಧನಕ್ಕೊಳಗಾದ ಅಫ್ಘಾನ್ ಪತ್ರಕರ್ತ ಮೊರ್ತಜಾ ಬೆಹಬೌಡಿ ಅವರ ಹೆಸರೂ ಪಟ್ಟಿಯಲ್ಲಿತ್ತು.

ಫ್ರೀಡಂ ಆಫ್ ಎಕ್ಸ್‌ಪ್ರೆಶನ್ ಅವಾರ್ಡ್ಸ್‌ ಪ್ರಶಸ್ತಿಗೆ ಈ ಹಿಂದೆ ಪತ್ರಿಕೋದ್ಯಮ ವಿಭಾಗದಿಂದ ತಮ್ಮ MeToo ಚಳವಳಿಯಲ್ಲಿ ವಹಿಸಿದ  ಮಹತ್ವದ ಪಾತ್ರಕ್ಕಾಗಿ 2022 ರಲ್ಲಿ ಚೀನಾದ ಪತ್ರಕರ್ತೆ ಹುವಾಂಗ್ ಕ್ಸುಕಿನ್ ಭಾಜನರಾಗಿದ್ದರು.  ಸೆಪ್ಟೆಂಬರ್ 2021 ರಲ್ಲಿ ಕಣ್ಮರೆಯಾದ ಇವರು ಮತ್ತು ಕಾರ್ಮಿಕಪರ ಹೋರಾಟಗಾರ ವಾಂಗ್ ಜಿಯಾನ್‌ಬಿಂಗ್ ವಿರುದ್ಧ “ದೇಶದ ಅಧಿಕಾರದ ವಿಧ್ವಂಸಕತೆಯನ್ನು ಪ್ರಚೋದಿಸುವ” ಆರೋಪದ ಮೇಲೆ ಚೀನಾ ಸರ್ಕಾರ ಬಂಧಿಸಿತು. ಸದ್ಯ ಇವರು ಬಂಧನದಲ್ಲಿಯೇ ಇದ್ದಾರೆ.

2021 ರಲ್ಲಿ ನೈಜೀರಿಯಾ ಪತ್ರಕರ್ತೆ ಸಮೀರಾ ಸಬೌ ಪ್ರಶಸ್ತಿಯನ್ನು ಗೆದ್ದಿದ್ದರು. 2020 ರಲ್ಲಿ ನಡೆದ ರಕ್ಷಣಾ ಸಚಿವಾಲಯದ ಭ್ರಷ್ಟಾಚಾರವನ್ನು ವರದಿ ಮಾಡಿದ್ದಕ್ಕಾಗಿ 2021 ರಲ್ಲಿ ಅವರನ್ನು ಅನೇಕ ಬಾರಿ ಬಂಧಿಸಿದರು.

ಮೊಹಮ್ಮದ್ ಜುಬೇರ್ 2023 ರ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಶಸ್ತಿಗೆ ನಾಮನಿರ್ದೇಶನ
ಬೆಂಗಳೂರು,ಅಕ್ಟೋಬರ್.‌5: ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರು 2023 ಫ್ರೀಡಂ ಆಫ್ ಎಕ್ಸ್‌ಪ್ರೆಶನ್ ಅವಾರ್ಡ್ಸ್‌ಗೆ ನಾಮಾಂಕಿತರಾಗಿದ್ದಾರೆ. ಪತ್ರಿಕೋದ್ಯಮ ವರ್ಗಕ್ಕೆ ನಾಮನಿರ್ದೇಶನಗೊಂಡ ಮೂವರು ನಾಮನಿರ್ದೇಶನಗಳಲ್ಲಿ ಒಬ್ಬರಾಗಿರುವ ಜುಬೇರ್ ಸುಳ್ಳು ಸುದ್ದಿಗಳ ವಿರುದ್ದದ ತಮ್ಮ ಕೆಲಸಕ್ಕೆ ಹೆಸರಾದವರು. ಸೆನ್ಸಾರ್ಶಿಪ್ ಮತ್ತು ಮುಕ್ತ ಅಭಿವ್ಯಕ್ತಿಗೆ ಬೆದರಿಕೆಗಳನ್ನು ಬಯಲಿಗೆ ತರುವ ಧೈರ್ಯವಂತ ಪತ್ರಿಕಾರಂಗಕ್ಕೆ ಈ ಪ್ರಶಸ್ತಿ ನೀಡಲಾಗುತ್ತದೆ.

ಭಾರತೀಯ ಮಾಧ್ಯಮ ರಂಗದಲ್ಲಿನ ನ್ಯೂನತೆಗಳನ್ನು ತಿಳಿಸುವ ಅವರ ಪ್ರಯತ್ನಗಳನ್ನು ಗುರುತಿಸಿ, ಮಾಧ್ಯಮಗಳ ಮೇಲಿನ ರಾಜಕೀಯ ಒತ್ತಡ ಮತ್ತು ಮಾಧ್ಯಮಗಳಿಗೆ ಸರ್ಕಾರ ನೀಡುವ ಹಣದ ಅಪಾರದರ್ಶಕ ವಿಧಾನಗಳು ಬಗ್ಗೆ ಇವರ ವರದಿಗಳಿಗಾಗಿ ಈ ಪ್ರಶಸ್ತಿಯಲ್ಲಿ ಗುರುತಿಸಲಾಗಿದೆ.  ಸತ್ಯಪರ ರಾಜಕೀಯ ವಿಶ್ಲೇಷಣೆಗಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ಬಯಲುಗೊಳಿಸುವ ಮತ್ತು ಮಾಧ್ಯಮಗಳು ಹರಡುವ ತಪ್ಪು ಮಾಹಿತಿ  ಹಾಗೂ ಅವುಗಳ ಪಕ್ಷಪಾತವನ್ನು ತೋರಿಸುವ ಆಲ್ಟ್ ನ್ಯೂಸ್‌ನ ಕೆಲಸವನ್ನು ಶ್ಲಾಘಿಸಲಾಗಿದೆ.

ಜೂನ್ 2022 ರಲ್ಲಿ ಜುಬೈರ್‌ರವತ ಬಂಧನವಾಗಿತ್ತು. ಇದು ಅಭಿವ್ಯಕ್ತಿ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸ್ಪಷ್ಟ ನಡೆಯಾಗಿ ದೇಶದಾದ್ಯಂತ ಟೀಕೆಗೆ, ಪ್ರತಿರೋಧಕ್ಕೆ ಒಳಗಾಗಿತ್ತು.

@IndexCensorship
in X

ಈ ಪ್ರಶಸ್ತಿಗೆ ಸೊಮಾಲಿಯಾದ ಮೊದಲ ಮಹಿಳೆಯರೇ ನಡೆಸುವ ಮಾಧ್ಯಮ ಸಂಸ್ಥೆ ಬಿಲಾನ್ ಮೀಡಿಯಾ ಮತ್ತು ಈ ವರ್ಷದ ಜನವರಿಯಲ್ಲಿ ತಾಲಿಬಾನಿಗಳಿಂದ ಬಂಧನಕ್ಕೊಳಗಾದ ಅಫ್ಘಾನ್ ಪತ್ರಕರ್ತ ಮೊರ್ತಜಾ ಬೆಹಬೌಡಿ ಅವರ ಹೆಸರೂ ಪಟ್ಟಿಯಲ್ಲಿದೆ.

Index on Censorship ನ ಸಿಇಒ ರುತ್ ಆಂಡರ್ಸನ್ ಅವರು Freedom of Expression Awards “ವಿಶ್ವದಾದ್ಯಂತ ಇರುವ ಕಲಾವಿದರು, ಪತ್ರಕರ್ತರು ಮಾಡುತ್ತಿರುವ ಅಸಾಧಾರಣ ಕೆಲಸಗಳನ್ನು ಗುರುತಿಸುವ ಅವಕಾಶ” ಎಂದು ಹೇಳಿದ್ದಾರೆ.

ಇಂಡೆಕ್ಸ್ ಒಂದು ಲಾಭ ರಹಿತ ಸಂಸ್ಥೆಯಾಗಿದ್ದು ಅದು ವಿಶ್ವಾದ್ಯಂತ ಮುಕ್ತ ಅಭಿವ್ಯಕ್ತಿಯ ಪ್ರಚಾರ ಹಾಗೂ ಅದರ ರಕ್ಷಣೆಯ ಕೆಲಸವನ್ನು ಮಾಡುತ್ತದೆ. ಸೆನ್ಸಾರ್ ಮಾಡಲಾದ ಬರಹಗಾರರು ಮತ್ತು ಕಲಾವಿದರ ಕೆಲಸವನ್ನು ಇದು ಪ್ರಕಟಿಸುತ್ತದೆ.

ಫ್ರೀಡಂ ಆಫ್ ಎಕ್ಸ್‌ಪ್ರೆಶನ್ ಅವಾರ್ಡ್ಸ್‌ ಪ್ರಶಸ್ತಿಗೆ ಈ ಹಿಂದೆ ಪತ್ರಿಕೋದ್ಯಮ ವಿಭಾಗದಿಂದ ತಮ್ಮ MeToo ಚಳವಳಿಯಲ್ಲಿ ವಹಿಸಿದ  ಮಹತ್ವದ ಪಾತ್ರಕ್ಕಾಗಿ 2022 ರಲ್ಲಿ ಚೀನಾದ ಪತ್ರಕರ್ತೆ ಹುವಾಂಗ್ ಕ್ಸುಕಿನ್ ಭಾಜನರಾಗಿದ್ದರು.  ಸೆಪ್ಟೆಂಬರ್ 2021 ರಲ್ಲಿ ಕಣ್ಮರೆಯಾದ ಇವರು ಮತ್ತು ಕಾರ್ಮಿಕಪರ ಹೋರಾಟಗಾರ ವಾಂಗ್ ಜಿಯಾನ್‌ಬಿಂಗ್ ವಿರುದ್ಧ “ದೇಶದ ಅಧಿಕಾರದ ವಿಧ್ವಂಸಕತೆಯನ್ನು ಪ್ರಚೋದಿಸುವ” ಆರೋಪದ ಮೇಲೆ ಚೀನಾ ಸರ್ಕಾರ ಬಂಧಿಸಿತು. ಸದ್ಯ ಇವರು ಬಂಧನದಲ್ಲಿಯೇ ಇದ್ದಾರೆ.

ಹುವಾಂಗ್ ಕ್ಸುಕಿನ್

2021 ರಲ್ಲಿ ನೈಜೀರಿಯಾ ಪತ್ರಕರ್ತೆ ಸಮೀರಾ ಸಬೌ ಪ್ರಶಸ್ತಿಯನ್ನು ಗೆದ್ದಿದ್ದರು. 2020 ರಲ್ಲಿ ನಡೆದ ರಕ್ಷಣಾ ಸಚಿವಾಲಯದ ಭ್ರಷ್ಟಾಚಾರವನ್ನು ವರದಿ ಮಾಡಿದ್ದಕ್ಕಾಗಿ 2021 ರಲ್ಲಿ ಅವರನ್ನು ಅನೇಕ ಬಾರಿ ಬಂಧಿಸಿದರು.

ಸಮೀರಾ ಸಬೌ