Amaranath Yathra – Peepal Media

ಅಮರನಾಥ ಯಾತ್ರೆಗೆ ತೆರಳಿದ್ದ ಸಕಲೇಶಪುರ ಮಂದಿ ಸೇಫ್
ಸಕಲೇಶಪುರ : ರಾಜ್ಯದಿಂದ ಅಮರ್‌ನಾಥ ಯಾತ್ರೆಗೆ ತೆರಳಿದ್ದ ಹಲವಷ್ಟು ಮಂದಿ ಅಲ್ಲಿನ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಸಕಲೇಶಪುರ ಪಟ್ಟಣದಿಂದ ತೆರಳಿದ್ದ 16 ಮಂದಿಯ ತಂಡ ಯಾವುದೆ ಅಪಾಯವಿಲ್ಲದೆ ಸುರಕ್ಷಿತವಾಗಿ ಹಿಂತಿರುಗಿದ್ದಾರೆ.

ನಿನ್ನೆ ಸುರಿದ ಬಾರಿ ಮಳೆಯಲ್ಲಿ ಸಾವಿರಾರು ಮಂದಿ ಸಿಲುಕಿದ ಬಗ್ಗೆ ವರದಿಯಾಗಿದೆ. ಅಮರನಾಥ್ ಯಾತ್ರೆಯಲ್ಲಿ ಜಲಪ್ರವಾಹಕ್ಕೆ ಸಿಲುಕಿದವರನ್ನು ಈಗಾಗಲೇ ಮಿಲಿಟರಿ ಪಡೆ ರಕ್ಷಣಾ ಕಾರ್ಯದ ಮೂಲಕ ಸೂಕ್ತ ಜಾಗಕ್ಕೆ ರವಾನಿಸುವ ಕೆಲಸ ಮಾಡುತ್ತಿದೆ. ಹಾಗೆಯೇ ರಾಜ್ಯದ ನಾನಾ ಭಾಗಗಳಿಂದ ಹೋದಂತಹ ಯಾತ್ರಾರ್ಥಿಗಳನ್ನು ಮಿಲಿಟರಿ ಪಡೆ ಮತ್ತು ಸ್ಥಳೀಯ ಆಡಳಿತ ರಕ್ಷಣೆ ಮಾಡುತ್ತಿದೆ.

ಸೋಮವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ಅಮರ್‌ನಾಥ್ ದರ್ಶನಕ್ಕೆ ಸಕಲೇಶಪುರದಿಂದ ತೆರಳಿದ್ದ ತಂಡ, ಸಂಜೆಯ ವೇಳೆಗೆ ವಿಪರೀತ ಮಳೆ ಆರಂಭವಾಗಿ ತೊಂದರೆಗೆ ಸಿಲುಕಿದೆ. ಈ ಸಂಧರ್ಭದಲ್ಲಿ ಮಿಲಿಟರಿ ಪಡೆಯ ಹೆಲಿಕ್ಯಾಪ್ಟರ್ ಮುಖಾಂತರ ಎಲ್ಲಾ 16 ಮಂದಿ ಹೊರ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆ ನಂತರ ಉತ್ತರ ಪ್ರದೇಶದ ಬಳ್ತಲ್ ಮಿಲಿಟರಿ ಕ್ಯಾಂಪ್‌ಗೆ ಈ ತಂಡ ಬಂದು ಆಗಮಿಸಿ ಆಶ್ರಯ ಪಡೆದಿದೆ. ನಂತರ ಮಂಗಳವಾರ ಮಧ್ಯಾಹ್ನದ ಸಕಲೇಶಪುರದ ಈ ತಂಡ ಶ್ರೀನಗರದ ಕಡೆಗೆ ಪ್ರಯಾಣ ಮುಂದುವರೆಸಿದೆ.

ತಂಡದಲ್ಲಿ ಮಾಜಿ ಪುರಸಭಾ ಸದಸ್ಯ ವೆಂಕಟೇಶ್, ವರ್ತಕರುಗಳಾದ ಮಧುಕುಮಾರ್, ಉಮಾಪತಿ, ನರೇಂದ್ರಸಿಂಗ್, ಯುವರಾಜ್ ಸೇರಿದಂತೆ ಒಟ್ಟು 8 ಪುರುಷರು ಹಾಗೂ 8 ಮಹಿಳೆಯರಿದ್ದಾರೆ.

ಅಮರನಾಥ ಯಾತ್ರಾರ್ಥಿಗಳ ಸುರಕ್ಷತೆ ನಮ್ಮ ಸರ್ಕಾರದ ಜವಾಬ್ದಾರಿ : ಸಚಿವ ಕೃಷ್ಣಬೈರೇಗೌಡ
ಬೆಂಗಳೂರು : ಅಮರನಾಥ ಯಾತ್ರೆಗೆ ತೆರಳಿ, ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ಯಾತ್ರಿಕರ ಬಗ್ಗೆ ಯಾವುದೇ ಆತಂಕ ಬೇಡ. ಎಲ್ಲ ಯಾತ್ರಿಕರೂ ಸುರಕ್ಷಿತವಾಗಿದ್ದು ಅವರನ್ನು ರಾಜ್ಯಕ್ಕೆ ವಾಪಾಸ್ ಕರೆತರುವುದು ನಮ್ಮ ಸರ್ಕಾರದ ಜವಾಬ್ದಾರಿ ಎಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಭರವಸೆ ನೀಡಿದ್ದಾರೆ.

ಜುಲೈ 1 ರಿಂದ ಅಮರನಾಥ ಯಾತ್ರೆ ಆರಂಭವಾಗಿದೆ.‌ ಕರ್ನಾಟಕದಿಂದಲೂ ಅಪಾರ ಜನ ಭಕ್ತಾದಿಗಳು ಯಾತ್ರೆಗೆ ತೆರಳಿದ್ದಾರೆ. ಆದರೆ, ಉತ್ತರ ಭಾರತದಲ್ಲಿ ವಿಪರೀಪತವಾಗಿರುವ ಮಳೆಯ ಕಾರಣಕ್ಕೆ ಭೂ ಕುಸಿತ ಉಂಟಾಗಿದ್ದು, ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.

ಇಂದಿನ ಅಧಿವೇಶನದಲ್ಲೂ ವಿರೋಧ ಪಕ್ಷದ ಸದಸ್ಯರು ಕರ್ನಾಟಕದ ಅಮರನಾಥ ಯಾತ್ರಾರ್ಥಿಗಳ ರಕ್ಷಣಾ ಕಾರ್ಯಾಚರಣೆ ಬಗ್ಗೆ ಪ್ರಶ್ನೆ ಎತ್ತಿದರು.

ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕೃಷ್ಣಭೈರೇಗೌಡ, “ಅಮರನಾಥ ಯಾತ್ರೆಗೆ ತೆರಳಿದ 18,000 ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪೈಕಿ ಕರ್ನಾಟಕದ ಯಾತ್ರಾರ್ಥಿಗಳೂ ಇದ್ದಾರೆ. ಈಗಾಗಲೇ ಎನ್ ಡಿ ಆರ್ ಎಫ್ ಹಾಗೂ ಸಿಆರ್ ಪಿಎಫ್ ಆರ್ಮಿ ಕ್ಯಾಂಪ್ ಸೈನಿಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸಿಎಂ ಕಚೇರಿಯಿಂದ ಸಂವಹನ ನಡೆಸಲಾಗುತ್ತಿದ್ದು, ರಾಜ್ಯದಿಂದ 4 ಜನ ಹಿರಿಯ ಐಎಎಸ್ ಐಪಿಎಸ್ ಅಧಿಕಾರಿಗಳನ್ನು ಈಗಾಗಲೇ ಕಾಶ್ಮೀರಕ್ಕೆ ಕಳುಹಿಸಿ ಕೊಡಲಾಗಿದೆ. ಎಲ್ಲ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಅವರ ಕುಟುಂಬಸ್ಥರು ಆತಂಕಪಡುವ ಅಗತ್ಯ ಇಲ್ಲ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಈಗಾಗಲೇ ಸಿಆರ್ ಪಿಎಫ್ ಕ್ಯಾಂಪ್ ನಲ್ಲಿರುವ 129 ಯಾತ್ರಾರ್ಧಿಗಳನ್ನು ಸುರಕ್ಷಿತವಾಗಿ ಕಾಶ್ಮೀರಕ್ಕೆ ಕರೆತರಲಾಗಿದೆ. ಆದರೆ, ಬಾಲ್ತಾಲ್ ಕ್ಯಾಂಪ್ ನಲ್ಲಿ ಹವಾಮಾನ ಹದಗೆಟ್ಟಿದ್ದು ವಿಪರೀತ ಮಂಜಿನ ಕಾರಣಕ್ಕೆ ರಸ್ತೆ ಬಂದ್ ಆಗಿದೆ. ಬುಧವಾರದ ನಂತರ ವಾತಾವರಣ ತಿಳಿಯಾಗಲಿದ್ದು,ರಸ್ತೆ ಕಾರ್ಯಾಚರಣೆ ಆರಂಭವಾಗಲಿದೆ. ಆನಂತರ ಅವರನ್ನೂ ಕಾಶ್ಮೀರಕ್ಕೆ ರವಾನಿಸಿ ಅಲ್ಲಿಂದ ಕರ್ನಾಟಕಕ್ಕೆ ಕರೆತರಲಾಗುವುದು” ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಲೇ-ಲಡಾಕ್ ನಲ್ಲಿ ಸಿಲುಕಿರುವ ಯಾತ್ರಾರ್ಧಿಗಳ ರಕ್ಷಣೆಯ ಬಗ್ಗೆಯೂ ಸದನದಲ್ಲಿ ವಿರೋಧ ಪಕ್ಷದ ನಾಯಕರಿಂದ ಗಮನ ಸೆಳೆಯಲಾಯಿತು.

ಈ ಪ್ರಶ್ನೆಗೂ ಸ್ಪಷ್ಟಣೆ ನೀಡಿದ ಸಚಿವರು, “ಲೇ-ಲಡಾಕ್ ಬೇರೆಯದೇ ರಾಜ್ಯ. ಮಿಲಿಟರಿ ಹಿಡಿತವಿರುವ ರಾಜ್ಯ. ಆ ಭಾಗದಲ್ಲಿ ಕೇವಲ ಏಕೈಕ ಹೆಲಿಪ್ಯಾಡ್ ಇದ್ದು, ಪ್ರೈವೇಟ್ ಹೆಲಿಕಾಪ್ಟರ್ ಗಳಿಗೆ ಅವಕಾಶ ಇಲ್ಲ. ಆದರೆ, ಲೇ-ಲಡಾಕ್ ನಲ್ಲಿ ಸಿಲುಕಿರುವ ಕನ್ನಡಿಗರ ಪರವಾಗಿಯೂ ನಮ್ಮ ಸಹಾಯ ಸಹಾನುಭೂತಿ ಇದೆ. ಅಲ್ಲಿ ಸಿಲುಕಿರುವ ಪ್ರಯಾಣಿಕರ ಬಗ್ಗೆ ಮಾಹಿತಿ ಇದ್ದರೆ ಕೊಡಿ, ಅವರ ರಕ್ಷಣೆಗೂ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ” ಎಂದರು.