America visit – Peepal Media

ಮೋದಿ ಪತ್ರಿಕಾಗೋಷ್ಠಿ; ಕರಾರಿನ ಮೇಲೆ ಪತ್ರಕರ್ತರ ಪ್ರಶ್ನೆ ಎದುರಿಸಲಿರುವ ಭಾರತದ ಪ್ರಧಾನಿ
2014 ರಲ್ಲಿ ಪ್ರಧಾನಿಯಾದ ಬಳಿಕ ಭಾರತದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡದವರು ಈಗ ಅಮೇರಿಕಾದಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವ ಅಪರೂಪದ ಪ್ರಸಂಗ ನರೇಂದ್ರ ಮೋದಿಗೆ ಎದುರಾಗಿದೆ. ಮೂರು ದಿನಗಳ ಅಮೇರಿಕಾ ಭೇಟಿಯ ಕೊನೆಯ ದಿನ ಜೋ ಬಿಡೆನ್ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರ ಮೋದಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂತರರಾಷ್ಟ್ರೀಯ ಮಾಧ್ಯಮ CNN ಮಾಡಿರುವ ವರದಿಯಲ್ಲಿ ನರೇಂದ್ರ ಮೋದಿಯವರ ಪತ್ರಿಕಾಗೋಷ್ಠಿ ಕುರಿತು ಪ್ರಸ್ತಾಪವಾಗಿದೆ. ಮೋದಿ ಮತ್ತು ಜೋ ಬಿಡೆನ್ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಶ್ವೇತಭವನದ ಪ್ರಸ್ತಾಪಕ್ಕೆ ಭಾರತೀಯ ಅಧಿಕಾರಿಗಳು ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಅಪರಿಚಿತ ಯುಎಸ್ ಅಧಿಕಾರಿಗಳು ಸಿಎನ್‌ಎನ್‌ಗೆ ತಿಳಿಸಿದ್ದಾರೆ. ಆದರೆ “ಸುದೀರ್ಘ ಮತ್ತು ಸೂಕ್ಷ್ಮ” ವಿಚಾರಗಳ ಹೊರತಾಗಿ ಕೇಳುವ ಪ್ರಶ್ನೆಗಳಿಗಷ್ಟೆ ಅವಕಾಶ ಎಂಬ ಭಾರತೀಯ ಅಧಿಕಾರಿಗಳ ಕರಾರಿಗೆ ಪತ್ರಿಕಾ ಕಾರ್ಯಕ್ರಮಕ್ಕೆ ಒಪ್ಪಿಕೊಂಡರು ಎಂದು CNN ವರದಿ ಮಾಡಿದೆ.

ಇಂದಿನ ಪತ್ರಿಕಾಗೋಷ್ಠಿಯ ಸ್ವರೂಪವು ಯುಎಸ್ ಪ್ರೆಸ್‌ನಿಂದ ಒಂದು ಮತ್ತು ಭಾರತೀಯ ಪತ್ರಕರ್ತರಿಂದ ಒಂದು ಪ್ರಶ್ನೆಗೆ ಮಾತ್ರ ಅವಕಾಶ ನೀಡುತ್ತದೆ. ಸಮಾವೇಶದ ಮೂಲಕ, ನಾಯಕರು ಪ್ರತಿ ಬದಿಯಲ್ಲಿ ಇಬ್ಬರು ವರದಿಗಾರರಿಂದ ಪ್ರಶ್ನೆಗಳನ್ನು ತೆಗೆದುಕೊಳ್ಳುತ್ತಾರೆ. ಆ ನಂತರ ಮೋದಿಯವರು ಪ್ರಶ್ನೆಗೆ ಉತ್ತರಿಸಲಾಗುತ್ತದೆ.

ಈ ಬೆಳವಣಿಗೆಯ ಬಗ್ಗೆ ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಪ್ರಧಾನಿ ಮೋದಿ ಅವರು ಭೇಟಿಯ ಕೊನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಒಪ್ಪಿದ್ದಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಡುವುದು ಅತ್ಯವಶ್ಯಕ ಎಂದು ನಾವು ಭಾವಿಸುತ್ತೇವೆ ಮತ್ತು ಅದು ಮುಖ್ಯವೆಂದು ಅವರು ಭಾವಿಸಿದರೆ ನಮಗೆ ಸಂತೋಷವಾಗುತ್ತದೆ.” ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿಯಾದ ನಂತರ ನರೇಂದ್ರ ಮೋದಿ ಐದು ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದರೂ, ಆ ಭೇಟಿಯ ಸಂಪೂರ್ಣ ರಾಜತಾಂತ್ರಿಕ ಸ್ಥಾನಮಾನದೊಂದಿಗೆ ನಡೆದದ್ದು ಇದೇ ಮೊದಲನೆಯದು. ಹಾಗಾಗಿ ಈ ಭೇಟಿಯಲ್ಲಿ 75 ಸೆನೆಟರ್ ಗಳು ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರು ಮೋದಿ ಅವರೊಂದಿಗೆ ಮಾನವ ಹಕ್ಕುಗಳ ಸಮಸ್ಯೆಗಳನ್ನು ಎತ್ತುವಂತೆ ಒತ್ತಾಯಿಸಿದ್ದರಿಂದ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಒತ್ತಡಕ್ಕೆ ಒಳಗಾಗಿದ್ದಾರೆ.

“ಸ್ವತಂತ್ರ, ವಿಶ್ವಾಸಾರ್ಹ ವರದಿಗಳ ಸರಣಿಯು ಭಾರತದಲ್ಲಿ ರಾಜಕೀಯ ಅವಕಾಶಗಳ ಕುಗ್ಗುವಿಕೆ, ಧಾರ್ಮಿಕ ಅಸಹಿಷ್ಣುತೆಯ ಏರಿಕೆ, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಪತ್ರಕರ್ತರನ್ನು ಗುರಿಯಾಗಿಸುವುದು ಮತ್ತು ಪತ್ರಿಕಾ ಸ್ವಾತಂತ್ರ್ಯ ಮತ್ತು ಇಂಟರ್ನೆಟ್ ಪ್ರವೇಶದ ಮೇಲೆ ಹೆಚ್ಚುತ್ತಿರುವ ನಿರ್ಬಂಧಗಳ ಕಡೆಗೆ ಹೆಚ್ಚಿನ ಪರಿಣಾಮಗಳನ್ನು ಪ್ರತಿಬಿಂಬಿಸುತ್ತದೆ” ಎಂದು ಶ್ವೇತಭವನಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದರು. ಇದರ ನಡುವೆ ಭಾರತ ಮತ್ತು ಅಮೇರಿಕಾ ಹಲವಷ್ಟು ವರ್ಷಗಳಿಂದ ಉತ್ತಮ ಬಾಂಧವ್ಯ ಹೊಂದಿದ್ದು, ಮುಜುಗರಕ್ಕೆ ಸಿಕ್ಕುವ ಪ್ರಶ್ನೆಗಳಿಂದ ಬಾಂಧವ್ಯದಲ್ಲಿ ಒಡಕು ಉಂಟಾಗಬಾರದು ಎಂಬ ಉದ್ದೇಶದಿಂದ ಕರಾರಿನ ಪತ್ರಿಕಾಗೋಷ್ಠಿಗೆ ಉತ್ತರಿಸಲಾಗುವುದು ಎಂದು ಶ್ವೇತ ಭವನದ ಮೂಲಗಳಿಂದ ತಿಳಿದು ಬಂದಿದೆ.

ಬುಧವಾರದ ದಿನ ಆರು ಜಾಗತಿಕ ಪತ್ರಕರ್ತ ಸಂಸ್ಥೆಗಳ ಗುಂಪು ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ನಡೆಯುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್‌ನಲ್ಲಿನ ವರದಿ ಹೇಳಿತ್ತು. ಪತ್ರಿಕಾ ಸಂಸ್ಥೆಗಳು ಭಾರತದಲ್ಲಿ ಪತ್ರಕರ್ತರು ದೈಹಿಕ ಹಿಂಸೆ, ಕಿರುಕುಳ, ನಕಲಿ ಮೊಕದ್ದಮೆಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ದ್ವೇಷದ ಪ್ರಚಾರಗಳನ್ನು ಎದುರಿಸುತ್ತಿದ್ದಾರೆ ಎಂಬ ಕಾರಣಕ್ಕೆ ಪ್ರತ್ಯೇಕ ಸಂವಾದ ಸಭೆಗಳನ್ನು ಆಯೋಜಿಸಿದ್ದೂ ಸಹ ಅಮೇರಿಕಾದಲ್ಲಿ ಈ ಭಾರಿಯ ಮೋದಿ ಭೇಟಿ ಸಂದರ್ಭದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಅಮೇರಿಕಾದಲ್ಲಿ ಮೋದಿಯ ಜಂಟಿ ಕಾಂಗ್ರೆಸ್ ಭಾಷಣವನ್ನು ಬಹಿಷ್ಕರಿಸಿರುವ ಶಾಸಕರು ಹೇಳೋದೇನು?
ಪ್ರಧಾನಿ ನರೇಂದ್ರ ಮೋದಿಯವರ ಅಮೇರಿಕಾ ಭೇಟಿ ಮತ್ತು ಇಂದು ನಡೆಯಲಿರುವ ಜಂಟಿ ಕಾಂಗ್ರೆಸ್ ಭಾಷಣದ ವಿಚಾರವಾಗಿ ಮತ್ತೆ ಅಪಸ್ವರ ಕೇಳಿ ಬಂದಿದೆ. ಅಮೇರಿಕಾದ ಇಬ್ಬರು ಶಾಸಕರುಗಳಾದ ಇಲ್ಹಾನ್ ಒಮರ್ ಮತ್ತು ರಶೀದಾ ತ್ಲೈಬ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಅವರ ಜಂಟಿ ಕಾಂಗ್ರೆಸ್ ಭಾಷಣವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ಆಡಳಿತ ಪಕ್ಷದ ಧಮನಕಾರಿ ನಡೆ, ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಆತಂಕದಲ್ಲಿ ಬದುಕು ನಡೆಸುತ್ತಿರುವ ಭಾರತದ ಅಲ್ಪಸಂಖ್ಯಾತರನ್ನು ಉಲ್ಲೇಖಿಸಿ ಇಬ್ಬರು ಶಾಸಕರು ಮೋದಿಯವರ ಜಂಟಿ ಕಾಂಗ್ರೆಸ್ ಭಾಷಣವನ್ನು ಬಹಿಷ್ಕರಿಸುವುದಾಗಿ ತಮ್ಮ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 ಮತ್ತು 25 ರ ನಡುವೆ ಅಮೇರಿಕಾ ಮತ್ತು ಈಜಿಪ್ಟ್‌ ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರ ಆಹ್ವಾನದ ಮೇರೆಗೆ ಇಂದಿನ ಕೊನೆಯ ದಿನದ ಅಮೇರಿಕಾ ಭೇಟಿಯಲ್ಲಿ ಜೂನ್ 22 ರಂದು ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಮಾತನಾಡಲು ಅವರನ್ನು ಆಹ್ವಾನಿಸಲಾಗಿದೆ.

ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಬಹಿಷ್ಕರಿಸಿರುವ ಶಾಸಕರಾದ ಇಲ್ಹಾನ್ ಒಮರ್ “ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡಿದೆ. ಹಿಂಸಾತ್ಮಕ ಹಿಂದೂ ರಾಷ್ಟ್ರೀಯತಾವಾದಿ ಗುಂಪುಗಳನ್ನು ಉತ್ತೇಜಿಸಿದೆ ಮತ್ತು ಭಾರತದ ಪತ್ರಕರ್ತರು / ಮಾನವ ಹಕ್ಕುಗಳ ಹೋರಾಟಗಾರರಿಗೆ ಭಯದ ವಾತಾವರಣ ನಿರ್ಮಿಸಿದೆ. ನಾನು ಮೋದಿ ಭಾಷಣದಲ್ಲಿ ಭಾಗವಹಿಸುವುದಿಲ್ಲ. ಮೋದಿಯವರ ದಮನ ಮತ್ತು ಹಿಂಸಾಚಾರದ ದಾಖಲೆಯನ್ನು ಚರ್ಚಿಸಲು ನಾನು ಮಾನವ ಹಕ್ಕುಗಳ ಗುಂಪುಗಳೊಂದಿಗೆ ಚರ್ಚೆ ನಡೆಸುತ್ತೇನೆ, ”ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

https://twitter.com/IlhanMN/status/1671302972699996160?t=ZDCUtPqkmi1gbjoC6_fgiQ&s=19

ಅಮೇರಿಕಾದ ಮತ್ತೋರ್ವ ಕಾಂಗ್ರೆಸ್ ಶಾಸಕಿಯಾದ ರಶೀದಾ ತ್ಲೈಬ್, “ನಮ್ಮ ರಾಷ್ಟ್ರದ ರಾಜಧಾನಿಯಲ್ಲಿ ಮೋದಿಗೆ ವೇದಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ. ಮಾನವ ಹಕ್ಕುಗಳ ಉಲ್ಲಂಘನೆ, ಪ್ರಜಾಪ್ರಭುತ್ವ ವಿರೋಧಿ ಕ್ರಮಗಳು, ಮುಸ್ಲಿಮರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದು ಮತ್ತು ಭಾರತೀಯ ಪತ್ರಕರ್ತರನ್ನು ದೂರವಿರಿಸುವುದನ್ನು ಮಾಡುವ ಮೋದಿಯವರ ಸುದೀರ್ಘ ಇತಿಹಾಸವು ಸ್ವೀಕಾರಾರ್ಹವಲ್ಲ. ನಾನು ಕಾಂಗ್ರೆಸ್ ಅನ್ನು ಉದ್ದೇಶಿಸುವ ಮೋದಿಯವರ ಜಂಟಿ ಭಾಷಣವನ್ನು ಬಹಿಷ್ಕರಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.

https://twitter.com/RepRashida/status/1671179922197340160?t=KCJI6cdYDRNZDI5j_XLkIw&s=19

ಏತನ್ಮಧ್ಯೆ, ಅಮೇರಿಕಾ ಕಾಂಗ್ರೆಸ್‌ನ 70 ಕ್ಕೂ ಹೆಚ್ಚು ಡೆಮಾಕ್ರಟಿಕ್ ಸದಸ್ಯರು ಅಧ್ಯಕ್ಷ ಜೋ ಬಿಡೆನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಭೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಮಾತನಾಡುವ ಅಧಿವೇಶನಕ್ಕೆ ಸಾಕ್ಷಿಯಾಗಲಿದೆ. ನಂತರ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಜೂನ್ 22 ರಂದು ಆಯೋಜಿಸಿರುವ ಭೋಜನಕೂಟದಲ್ಲಿ ಪ್ರಧಾನಿ ಮೋದಿಗೆ ಆತಿಥ್ಯ ನೀಡಲಿದ್ದಾರೆ.

ಇನ್ನು ಮೋದಿ ಭಾಷಣವನ್ನು ಬಹಿಷ್ಕರಿಸಿರುವ ಅಮೇರಿಕಾ ಶಾಸಕರು “ಭಾರತವು ತನ್ನ ಇತಿಹಾಸದಲ್ಲಿ ನಿಷ್ಪಕ್ಷಪಾತ ಮತ್ತು ಸ್ವತಂತ್ರ ಪತ್ರಿಕಾ ಮಾಧ್ಯಮಕ್ಕೆ ಹೆಸರುವಾಸಿಯಾಗಿತ್ತು. ಆದರೆ ಈಗ ಪತ್ರಿಕಾ ಸ್ವಾತಂತ್ರ್ಯದ ಶ್ರೇಯಾಂಕದಲ್ಲಿ ಗಣನೀಯವಾಗಿ ಕುಸಿದಿದೆ. ಭಾರತದಲ್ಲಿ ರಾಜಕೀಯ ಪಕ್ಷಗಳ ಮೇಲಿನ ಅಭಿವ್ಯಕ್ತಿಯ ಹಿಡಿತವನ್ನೂ ಕೂಡಾ ಅಲ್ಲಿನ ಮೋದಿ ಸರ್ಕಾರ ಬಿಗಿಗೊಳಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಅಂಶ. ಅದೇ ರೀತಿ, ಭಾರತದಲ್ಲಿನ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ 2022 ರ ವರದಿಯು ಆತಂಕಕಾರಿ ಎನ್ನಿಸಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ಒಂದು ವಾರದಿಂದ ಮೋದಿ ಅಮೇರಿಕಾ ಭೇಟಿಯ ಬಗ್ಗೆ ಅಲ್ಲಿನ ಮಾನವ ಹಕ್ಕು ಸಂಘಟನೆಗಳು ‘ವೈಟ್ ಹೌಸ್ ಗೆ ಅವಮಾನ’ ಎಂಬಂತೆ ಅಭಿಯಾನ ಮಾಡುತ್ತಿವೆ. ಇದರ ಜೊತೆಗೆ ಭಾರತದ ಒಳಗಿನ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆಯೂ ಚರ್ಚೆ ಮತ್ತು ಸಂವಾದಗಳನ್ನು ಏರ್ಪಡಿಸಿವೆ. ಮೋದಿ ಅಮೇರಿಕಾ ಭೇಟಿಗೆ ಸರಿಯಾಗಿ ಅಲ್ಲಿನ ಹ್ಯೂಮನ್ ರೈಟ್ಸ್ ವಾಚ್ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇತ್ತೀಚೆಗೆ BBC ಸಿದ್ದಪಡಿಸಿದ ಸಾಕ್ಷ್ಯಚಿತ್ರದ ಖಾಸಗಿ ಪ್ರದರ್ಶನವನ್ನು ನಿಗದಿಪಡಿಸಿದೆ. ಈ ಸಾಕ್ಷ್ಯಚಿತ್ರದಲ್ಲಿ ನರೇಂದ್ರ ಮೋದಿ ಮತ್ತು 2002 ರ ಗುಜರಾತ್ ಗಲಭೆಯಲ್ಲಿ ಅವರ ಪಾತ್ರದಿಂದ ಕನಿಷ್ಠ 1,000 ಜನರ ಹತ್ಯೆಗೆ ಕಾರಣವಾಗಿತ್ತು. ಅವರಲ್ಲಿ ಹೆಚ್ಚಿನವರು ಮುಸ್ಲಿಮರೇ ಆಗಿದ್ದಾರೆ. ಹತ್ಯಾಕಾಂಡದ ಸಮಯದಲ್ಲಿ, ಹಿಂದೂ ಉಗ್ರಗಾಮಿ ಗುಂಪುಗಳು ಮುಸ್ಲಿಂ ಮನೆಗಳು ಮತ್ತು ಮುಸ್ಲಿಂ ವ್ಯಾಪಾರಿಗಳನ್ನು ಅಕ್ಷರಶಃ ಸುಟ್ಟು ಹಾಕಿದ್ದರು. ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳನ್ನು ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಕೊಂದು ಹಾಕಿದ್ದರು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆ ಗಲಭೆಗಳು ಅವರ ಕುಮ್ಮಕ್ಕಿನಿಂದಲೇ ನಡೆದಿತ್ತು. ಈ ಬಗ್ಗೆ ಅಂದಿನ ಮಾಧ್ಯಮಗಳು ವಿಸ್ತೃತವಾಗಿ ವರದಿ ಮಾಡಿದ್ದವು. ಅದನ್ನೇ BBC ಕೂಡಾ ಇತ್ತೀಚೆಗೆ ಸಾಕ್ಷ್ಯಚಿತ್ರದ ಮೂಲಕ ಹೊರತಂದಿತ್ತು. ಈ ಸಾಕ್ಷ್ಯಚಿತ್ರ ಕೂಡಾ ಅಲ್ಲಿನ ಪ್ರತಿರೋಧ ಸಭೆಯಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.

ಮೋದಿ ಅಮೇರಿಕಾ ಭೇಟಿಗೆ ತೀವ್ರ ವಿರೋಧ ; ಮಾನವ ಹಕ್ಕುಗಳ ಸಂಘಟನೆಗಳು ಹೇಳೋದೇನು?
ನರೇಂದ್ರ ಮೋದಿ ಅಮೇರಿಕಾ ಭೇಟಿಗೆ ಅಲ್ಲಿನ ಮಾನವ ಹಕ್ಕುಗಳ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಭಾರತದ ಒಳಗಿನ ಜನಾಂಗೀಯ ದ್ವೇಷ, ಭಾರತದಲ್ಲಿ ಅಲ್ಪಸಂಖ್ಯಾತರನ್ನು ಇಲ್ಲಿನ ಆಡಳಿತ ಪಕ್ಷವೇ ತುಚ್ಛವಾಗಿ ಕಾಣುವುದನ್ನು ಉಲ್ಲೇಖಿಸಿ, ಮೋದಿ ಅಮೇರಿಕಾ ಭೇಟಿಯ ಬಗ್ಗೆ ಅಮೇರಿಕಾ ಮಾನವ ಹಕ್ಕುಗಳ ಸಂಘಟನೆ ವೈಟ್ ಹೌಸ್ ನ್ನು ಉಲ್ಲೇಖಿಸಿ ಗಂಭೀರವಾಗಿ ಟೀಕೆ ಮಾಡಿವೆ.

ಬಾಂಧವ್ಯ ವೃದ್ಧಿ ಮತ್ತು ವಿದೇಶಿ ಬಂಡವಾಳ ಹೂಡಿಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಆಹ್ವಾನದ ಬೆನ್ನಲ್ಲೇ ಅಲ್ಲಿನ ಮಾನವ ಹಕ್ಕುಗಳ ಸಂಘಟನೆಗಳು ಈ ಬೆಳವಣಿಗೆಯನ್ನು ಅಮೇರಿಕಾಕ್ಕೆ ಇದು ಅವಮಾನಕರ ಸಂಗತಿ ಎಂದು ಆರೋಪಿಸಿವೆ.

ಇದೇ ಸಂದರ್ಭದಲ್ಲಿ ಸಂಘಟನೆಗಳು ಮತ್ತು ವಿಮರ್ಶಕರು ‘ಭಾರತದಲ್ಲಿನ ಹಿಂದೂ ಧಾರ್ಮಿಕ ರಾಷ್ಟ್ರೀಯತೆಯ ಬಗ್ಗೆ ಎದ್ದಿರುವ ಸಂಘರ್ಷ ಹಾಗೂ ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಜೋ ಬಿಡೆನ್ ನರೇಂದ್ರ ಮೋದಿಯವರನ್ನು ಪ್ರಶ್ನಿಸಬೇಕು. ಭಾರತದಲ್ಲಿ ಇಂತಹದ್ದೊಂದು ಬೆಳವಣಿಗೆ ಜಾತ್ಯತೀತ ಮತ್ತು ವೈವಿಧ್ಯಮಯ ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗಿದೆ. ಆ ಮೂಲಕ ಇದು ಜನಾಂಗೀಯ ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸುವ ರಾಜಕೀಯ ಮತ್ತು ತೀವ್ರವಾದ ಸಿದ್ಧಾಂತವಾಗಿದೆ. ಭಾರತದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರು ಹಿಂದೆಂದಿಗಿಂತಲೂ ಹೆಚ್ಚು ಹಿಂಸಾಚಾರ ಮತ್ತು ಕಿರುಕುಳದ ಅಪಾಯದಲ್ಲಿದ್ದಾರೆ, ಅದರಲ್ಲಿ ಮೋದಿಯವರ ಪಾತ್ರವನ್ನು ಅಮೇರಿಕಾ ಪ್ರಶ್ನಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ಭಾರತದಲ್ಲಿ ಮೋದಿಯವರ ಆಡಳಿತ ಸರ್ವಾಧಿಕಾರಿ ಧೋರಣೆ ಹೊಂದಿದೆ. 2005 ರಲ್ಲಿ ಮೋದಿ ಅವರು ಪ್ರಧಾನಿಯಾಗುವ ಮೊದಲು, ತೀವ್ರವಾದ ಗಲಭೆ ಮತ್ತು ಮುಸ್ಲಿಮರನ್ನು ಗುರಿಯಾಗಿಸುವ ಹಿಂದೂ ಭಯೋತ್ಪಾದಕ ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸಿದ್ದಕ್ಕಾಗಿ ಅಮೇರಿಕಾದಿಂದಲೇ VISA ನಿಷೇಧಿಸಲ್ಪಟ್ಟರು. ಆದರೆ ಈಗ ನರೇಂದ್ರ ಮೋದಿಯವರದ್ದು ಮೂರನೇ ವೈಟ್ ಹೌಸ್ ಭೇಟಿಯಾಗಿದೆ. ಇದು ಅಮೇರಿಕಾಗೆ ಮತ್ತು ವೈಟ್ ಹೌಸ್ ಗೆ ಅವಮಾನಕರ ಎಂದು ಆರೋಪಿಸಲಾಗಿದೆ. ಹಾಗೂ ಅಂದು ಮತ್ತು ಇಂದಿನ ನರೇಂದ್ರ ಮೋದಿಯವರ ನಡೆ ಬಲಪಂಥೀಯ, ಮುಸ್ಲಿಂ ವಿರೋಧಿ ಮತ್ತು ಅಲ್ಪಸಂಖ್ಯಾತ ಆಡಳಿತವಾಗಿದೆ” ಎಂದು “ಮಿಡ್ನೈಟ್ಸ್ ಬಾರ್ಡರ್ಸ್: ಎ ಪೀಪಲ್ಸ್ ಹಿಸ್ಟರಿ ಆಫ್ ಮಾಡರ್ನ್ ಇಂಡಿಯಾ” ಲೇಖಕಿ ಸುಚಿತ್ರಾ ವಿಜಯನ್ ಆರೋಪಿಸಿದ್ದಾರೆ.

ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಮತ್ತು ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಅಮೇರಿಕಾಗೆ ಬಲವಾದ ಮಿತ್ರರಾಷ್ಟ್ರವಾಗಿ ನಡೆದುಕೊಂಡು ಬಂದಿದೆ. ಇಂತಹ ಶತಕೋಟಿ ಜನಸಂಖ್ಯೆಯ ದೇಶದಲ್ಲಿ ಏನಾಗುತ್ತದೆಯೋ ಅದು ಜಾಗತಿಕವಾಗಿಯೂ ಮುಂಚೂಣಿ ಪರಿಣಾಮಗಳನ್ನು ಹೊಂದಿರುತ್ತದೆ. ಆ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯಂತಹ ಸರ್ವಾಧಿಕಾರಿ ಮನೋಭಾವದ ವ್ಯಕ್ತಿಯನ್ನು ಅಮೇರಿಕಾ ಶ್ವೇತಭವನಕ್ಕೆ ಆಹ್ವಾನಿಸುವುದು ಜಗತ್ತಿನಾದ್ಯಂತ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅಪಾಯಕಾರಿ ಸಂದೇಶವನ್ನು ರವಾನಿಸುತ್ತಿದೆ. ಇದು ಅಮೇರಿಕಾ ಮತ್ತು ಅಲ್ಲಿನ ಶ್ವೇತ ಭವನಕ್ಕೆ ಅವಮಾನಕರ ಎಂದು ಸುಚಿತ್ರಾ ವಿಜಯನ್ ಆರೋಪಿಸಿದ್ದಾರೆ.

ಮೋದಿ ಅಮೇರಿಕಾ ಭೇಟಿಗೆ ಸರಿಯಾಗಿ ಅಲ್ಲಿನ ಹ್ಯೂಮನ್ ರೈಟ್ಸ್ ವಾಚ್ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇತ್ತೀಚೆಗೆ BBC ಸಿದ್ದಪಡಿಸಿದ ಸಾಕ್ಷ್ಯಚಿತ್ರದ ಖಾಸಗಿ ಪ್ರದರ್ಶನವನ್ನು ನಿಗದಿಪಡಿಸಿದೆ. ಈ ಸಾಕ್ಷ್ಯಚಿತ್ರದಲ್ಲಿ ನರೇಂದ್ರ ಮೋದಿ ಮತ್ತು 2002 ರ ಗುಜರಾತ್ ಗಲಭೆಯಲ್ಲಿ ಅವರ ಪಾತ್ರದಿಂದ ಕನಿಷ್ಠ 1,000 ಜನರ ಹತ್ಯೆಗೆ ಕಾರಣವಾಗಿತ್ತು. ಅವರಲ್ಲಿ ಹೆಚ್ಚಿನವರು ಮುಸ್ಲಿಮರೇ ಆಗಿದ್ದಾರೆ. ಹತ್ಯಾಕಾಂಡದ ಸಮಯದಲ್ಲಿ, ಹಿಂದೂ ಉಗ್ರಗಾಮಿ ಗುಂಪುಗಳು ಮುಸ್ಲಿಂ ಮನೆಗಳು ಮತ್ತು ಮುಸ್ಲಿಂ ವ್ಯಾಪಾರಿಗಳನ್ನು ಅಕ್ಷರಶಃ ಸುಟ್ಟು ಹಾಕಿದ್ದರು. ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳನ್ನು ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಕೊಂದು ಹಾಕಿದ್ದರು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆ ಗಲಭೆಗಳು ಅವರ ಕುಮ್ಮಕ್ಕಿನಿಂದಲೇ ನಡೆದಿತ್ತು. ಈ ಬಗ್ಗೆ ಅಂದಿನ ಮಾಧ್ಯಮಗಳು ವಿಸ್ತೃತವಾಗಿ ವರದಿ ಮಾಡಿದ್ದವು. ಅದನ್ನೇ BBC ಕೂಡಾ ಇತ್ತೀಚೆಗೆ ಸಾಕ್ಷ್ಯಚಿತ್ರದ ಮೂಲಕ ಹೊರತಂದಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಟ್ವಿಟ್ಟರ್ ನಂತಹ ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲಾ ವಲಯಗಳಲ್ಲಿ ಈ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

2002 ರ ಗುಜರಾತ್ ಗಲಭೆಯ ನಂತರ ಭಾರತ ಹಂತಹಂತವಾಗಿ ಅಲ್ಪಸಂಖ್ಯಾತರಿಗೆ ಸುರಕ್ಷಿತ ಅಲ್ಲದ ದೇಶವಾಗಿ ಬದಲಾಗುತ್ತಿದೆ. ಅದು ನರೇಂದ್ರ ಮೋದಿ ಪ್ರಧಾನಿ ಆದ ನಂತರ ಅದರ ವೇಗ ಹೆಚ್ಚಿಸಿಕೊಂಡಿದೆ. ಇದು ಒಳ್ಳೆಯ ಬೆಳವಣಿಗೆ ಖಂಡಿತಾ ಅಲ್ಲ. ಈ ಬಗ್ಗೆ ಅಮೇರಿಕಾದ ಸೇರಿದಂತೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಭಾರತದ ಈ ಬೆಳವಣಿಗೆಗಳನ್ನು ಗಮನಿಸಿಕೊಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಸಂಘಟನೆಗಳು ಮೋದಿಯ ಅಮೇರಿಕಾ ಭೇಟಿಯ ಬಗ್ಗೆ ವಿರೋಧ ವ್ಯಕ್ತಪಡಿಸಿವೆ. ಹಾಗೂ ಈ ಭೇಟಿ ಅಮೇರಿಕಾಕ್ಕೆ ಅವಮಾನಕರ ಎಂದು ಗಂಭೀರವಾಗಿ ಆರೋಪಿಸಿವೆ.