amith shah – Peepal Media

ಡಾ.ಅಂಬೇಡ್ಕರ್ ಎಂಬ ಡಿಮ್ಯಾಂಡು!
ಎಂಭತ್ತರ ದಶಕದ ನಂತರದಲ್ಲಿ ಯಾವಾಗ ಬಾಬಾಸಾಹೇಬರ ಪುಸ್ತಕಗಳು ಹೆಚ್ಚು ಜನರಿಗೆ ತಲುಪುತ್ತಾ ಬಂದವೋ ಆಗ ಮೊದಲಿಗೆ ಬೆತ್ತಲಾದದ್ದು ಕಮ್ಯೂನಿಸ್ಟರು! ಡಾ.ಅಂಬೇಡ್ಕರ್ ಅವರನ್ನು ಮೊದಲಿಗೆ ಲೆಕ್ಕಕ್ಕೆ ತೆಗೆದುಕೊಳ್ಳದಿದ್ದ ಇವರು ವಿದೇಶಿ ಚಿಂತಕರ ಚಿತ್ರಪಟಗಳನ್ನು ದಲಿತರ ಕೈಗಿಟ್ಟು ಮಾರ್ಕ್ಸ್, ಲೆನಿನ್ ಮುಂತಾದವರ ಫೋಟೋಗಳನ್ನು ದಲಿತರ ಎದೆಗಳಿಗೆ ನೇತುಹಾಕಿಬಿಟ್ಟರು! ಕರ್ನಾಟಕದ ದಲಿತ ಚಳುವಳಿ ದಿಕ್ಕು ತಪ್ಪಿದ್ದು ಸಹ ಇಲ್ಲೇ! ಕೇವಲ‌ ಪ್ರತಿಕ್ರಿಯಾತ್ಮಕ ಹೋರಾಟವೊಂದೆ ದಲಿತರ ಸಮಸ್ಯೆಗಳಿಗೆ ಪರಿಹಾರ ಅಂತ ಈಗಲೂ ಸಹ ಅದೇ ಎಡಪಂಥೀಯ ಚಳುವಳಿಗಳ ನೆರಳಿನ ಬಹಳಷ್ಟು ದಲಿತ ಪ್ರಾಧ್ಯಾಪಕರು, ಚಿಂತಕರು ಎನಿಸಿಕೊಂಡವರು ಭಾವಿಸಿರುವುದುಂಟು. ಬಹುಶಃ ಭಾರತದಲ್ಲಿ ಮಾನ್ಯವಾರ್ ಕಾನ್ಷಿರಾಮ್ ಅವರ ಬಹುಜನ ಚಳುವಳಿಯ ಪ್ರಭಾವದಿಂದ ಫುಲೆ-ಅಂಬೇಡ್ಕರ್ ಚಳುವಳಿಯೊಂದು ದೇಶಾದ್ಯಂತ ಸಂಚರಿಸಿತು.‌ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಹೆಚ್ಚು ಹೆಚ್ಚು ಚರ್ಚೆಗೊಳಗಾದಂತೆಲ್ಲಾ ದಲಿತಪರ ಎಂಬ ಮುಖವಾಡ ಹೊತ್ತಿದ್ದ ಕಮ್ಯುನಿಸ್ಟರು ಸೋತು ಸುಣ್ಣವಾದರು. ಬಾಬಾಸಾಹೇಬರು ವಿಚಾರಗಳಿಂದಾಗಿ ಕಾಂಗ್ರೆಸ್ ಕ್ರಮೇಣ ತನ್ನ ಬಲ ಕಳೆದುಕೊಳ್ಳುತ್ತಾ ಬಂದಿತು.‌ ಆದರೆ ದಲಿತರು ಮಾತ್ರ ಸೈದ್ಧಾಂತಿಕವಾಗಿ, ರಾಜಕೀಯವಾಗಿ ತನ್ನ ಏಕನೆಲೆಯೊಂದನ್ನು ಗುರುತಿಸಿಕೊಳ್ಳುವಲ್ಲಿ ವಿಫಲರಾದರು.

ಕಳೆದ ದಶಕದಿಂದೀಚೆಗೆ ಬಹುಜ‌ನ ಚಳುವಳಿಯ ನಾಯಕರುಗಳ ನಡೆ, ವಿಫಲತೆ, ಅದರ ಪರಿಣಾಮದಿಂದಾಗಿ ದೇಶಾದ್ಯಂತ ಚಳುವಳಿಯ ಫಲಿತಾಂಶಗಳು ಸೊನ್ನೆ ಸುತ್ತಿಕೊಂಡಿದ್ದಾಗಿದೆ.‌ ಈಗ ಬಹುಜನ ಚಳುವಳಿಯ ಯಾವುದೇ ನಾಯಕರಿಗೂ ಚಳುವಳಿಯೇ ಬೇಕಿಲ್ಲ, ತಮ್ಮ ಸಮುದಾಯದ ಹಿತಚಿಂತನೆಗೂ ಸಮಯವಿಲ್ಲ. ಇದರ ನಡುವೆ ಅಸಂಖ್ಯಾತ ದಲಿತ ಜನಸಮೂಹ ತಮ್ಮ ಪಾಡಿಗೆ ತಾವು ಬದುಕಿನ ನೊಗ ಹೊತ್ತು ದಿನಗಳನ್ನು ದೂಡುತ್ತಾ ಸಾಗಿವೆ. ಸರ್ಕಾರಗಳು ಯಾವುದೇ‌ ಇರಲಿ, ದಲಿತರ ಮೇಲಿನ ದೌರ್ಜನ್ಯ ಗಳು ಮಾತ್ರ ಇನ್ನೂ ನಿಂತಿಲ್ಲ ಎಂಬುದನ್ನು ಎನ್‌ಸಿಆರ್‌ಬಿ ವರದಿಗಳು ಹೇಳುತ್ತಲೇ ಇವೆ.‌ ಈಗ ಬದಲಾದ ಕಾಲಘಟ್ಟಕ್ಕೆ ಒಂದು ವಿಚಾರವಾಗಿ, ಎಚ್ಚರವಾಗಿ, ವಿಮೋಚನೆಯ ದಿಕ್ಕಾಗಿ ಉಳಿಯಬೇಕಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೋಟ್ಯಾಂತರ ಜನರ ಭಾವನೆಯಾಗಿ ಮಾತ್ರ ಉಳಿದಿದ್ದಾರೆ ಅಷ್ಟೇ. ಈ ಭಾವನೆಗೆ ಸಮಾಜದಲ್ಲಿ ತುಂಬಾ ಡಿಮ್ಯಾಂಡಿದೆ. ಈ ಡಿಮ್ಯಾಂಡನ್ನು ಆಧರಿಸಿ ಕೆಲವು ದಲಿತ ನಾಯಕರೆನಿಸಿಕೊಂಡವರು ಒಂದಷ್ಟು ಜನ ಬಿಜೆಪಿ ಪಕ್ಷಕ್ಕೆ, ಮತ್ತೊಂದಿಷ್ಟು ಜನ ಕಾಂಗ್ರೆಸ್ ಪಕ್ಷಕ್ಕೆ, ಇಲ್ಲೆಲ್ಲೂ ಅವಕಾಶವಿಲ್ಲದ ಮತ್ತಷ್ಟು ಜನ ಇತರ ಸಣ್ಣ ಪುಟ್ಟ ಪಕ್ಷಗಳ ಬುಟ್ಟಿಗೆ ದಲಿತರ ಮತಗಳನ್ನು ತುಂಬಿಸುವ ಕೆಲಸವನ್ನು ನಿಷ್ಠೆಯಿಂದ ಮಾಡುತ್ತ ತಮ್ಮ ಡಿಮ್ಯಾಂಡನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿಯೇ ತಮಗೆ ಬೇಕಾದಂತೆ ಸೈದ್ಧಾಂತಿಕ ನಿರೂಪಣೆಗಳು ಬದಲಾಗುತ್ತವೆ, ದಲಿತರ ರಾಜಕೀಯ ಅವಕಾಶಗಳ ವ್ಯಾಖ್ಯಾನವೂ ಬದಲಾಗುತ್ತದೆ.‌ ಅದಕ್ಕೆಲ್ಲಾ ಡಾ.ಅಂಬೇಡ್ಕರ್ ಅವರ ಬರಹಗಳ ಪುಟಗಳೇ ಸಾಕ್ಷಿಯೂ ಆಗುತ್ತವೆ, ಇಲ್ಲಿ ತಮಗೆ ಬೇಕಾದಂತೆ ಎಲ್ಲವೂ ಬದಲಾಗುತ್ತವೆ!

ಡಾ. ಅಂಬೇಡ್ಕರ್ ಎಂಬ ಭಾವನೆಗೆ ಇರುವ ಈ ಡಿಮ್ಯಾಂಡನ್ನು ಅರಿತಿರುವ ಎಲ್ಲಾ ಪಕ್ಷದ ರಾಜಕಾರಣಿಗಳು ಮತಕ್ಕಾಗಿ ಅಥವಾ ಇತರ ಜಾತಿಗಳನ್ನು ತಮ್ಮ ಪಕ್ಷದ ಅಡಿಯಲ್ಲಿ ಒಗ್ಗೂಡಿಸುವ ಸಲುವಾಗಿಯೂ ಇದನ್ನು ಒಂದು ಭಾವನಾತ್ಮಕ ವಿಷಯವನ್ನಾಗಿ ಬಳಸುತ್ತಲೇ ಇದ್ದಾರೆ. ನೆನ್ನೆ ಅಮಿತ್ ಶಾ ಮಾಡಿದ್ದು ಅದೇನೆ. ದಲಿತರ ಮತಗಳಿಗಾಗಿ ಅಂಬೇಡ್ಕರ್ ಪಂಚತೀರ್ಥ ಮಾಡೋದೆ ಇವರೆ, ಈಗ ಅಂಬೇಡ್ಕರ್ ಅವರ ಹೆಸರನ್ನು ಲೇವಡಿ ಮಾಡೋದು ಇವರೆ! ಯಾವಾಗ ಬೇಕೋ ಆಗ ಅಂಬೇಡ್ಕರ್ ಅವರನ್ನು ನಾವು ಮೆರೆಸುವುದು ಗೊತ್ತು, ಮರೆಸುವುದೂ ಗೊತ್ತು ಎಂಬ ಜಿದ್ದಿಗೆ ಬಿದ್ದಂತಿರುವ ಈ ರಾಜಕೀಯ ಪಕ್ಷಗಳ ಲಾಭ ನಷ್ಟದ ಆಟಗಳಿಗೆ ದಲಿತರ ಭಾವನೆಗಳನ್ನು ಕೆರಳಿಸುವ, ಅರಳಿಸುವ ತಾಕತ್ತು ಇದೆ ಅನ್ನೋದಾದರೆ, ಅದೇ ಸರಿ ಅನ್ನೋದಾದರೆ ಪ್ರತಿಯೊಬ್ಬ ದಲಿತನೂ ಸುಮ್ಮನೇ ಸತ್ತುಬಿಡಬೇಕು ಅಷ್ಟೇ, ‌ಇಲ್ಲವೆ ಇದೇ ಡಾ.ಅಂಬೇಡ್ಕರ್ ಎಂಬ ಡಿಮ್ಯಾಂಡನ್ನು ಬಳಸಿಕೊಂಡು ಸಮಾಜದಲ್ಲಿ ಗಟ್ಟಿಯಾಗಿ ಎದ್ದು ನಿಲ್ಲುವ ಹೊಸ ಚಳುವಳಿಯೊಂದನ್ನು ಕಟ್ಟಬೇಕು. ಯಾರಿದ್ದಾರೆ ಎಲ್ಲಾ ಆಸೆಗಳ ತೊರೆದು ತ್ಯಾಗ ಮಾಡಿ ಹೊಸ ಚಳುವಳಿಯೊಂದನ್ನು ಈಗ ಕಟ್ಟುವವರು???

ಅಂಕಣ: ಅಪ್ಪಗೆರೆ ಡಿ ಟಿ ಲಂಕೇಶ್

ರಾಜ್ಯಸಭೆ: ಅಂಬೇಡ್ಕರ್ ಕುರಿತು ಶಾ ಹೇಳಿಕೆಯನ್ನು ಪ್ರತಿಭಟಿಸಿ ಕಲಾಪ ಸ್ಥಗಿತಗೊಳಿಸಿದ ಪ್ರತಿಪಕ್ಷಗಳು
ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆಯಾಚಿಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ನಡೆಸಿದ ಪ್ರತಿಭಟನೆಯಿಂದ ಬುಧವಾರ ರಾಜ್ಯಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಒಂದು ದಿನದ ಹಿಂದೆ ಸದನದಲ್ಲಿ ಅವರು ನೀಡಿದ ಹೇಳಿಕೆಗಳು ಭಾರತದ ಸಂವಿಧಾನ ಶಿಲ್ಪಿ ಬಿಆರ್ ಅಂಬೇಡ್ಕರ್ ಅವರಿಗೆ ಮಾಡಿದ “ಅವಮಾನ” ಎಂದು ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿವೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು “ರಾಜ್ಯಸಭೆಯಲ್ಲಿ ಮಾಡಿದ ಷಾ ಹೇಳಿಕೆಗಳ ಒಂದು ಭಾಗವನ್ನು ಬಳಸಿಕೊಂಡು ಕಾಂಗ್ರೆಸ್ ದೇಶವನ್ನು ದಾರಿ ತಪ್ಪಿಸುತ್ತಿದೆ,” ಎಂದು ಆರೋಪಿಸಿದರು ಮತ್ತು ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರನ್ನು ಹೇಗೆ ಅವಮಾನಿಸಿದೆ ಎಂಬುದನ್ನು ಗೃಹ ಸಚಿವರು ಸ್ಪಷ್ಟವಾದ ಮಾತುಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ಪ್ರತಿಪಾದಿಸಿದರು.

“ನೀವು (ಕಾಂಗ್ರೆಸ್) ಷಾ ಅವರ ಸಂಪೂರ್ಣ ಭಾಷಣದ 11-12 ಸೆಕೆಂಡುಗಳ ಕ್ಲಿಪ್ ಅನ್ನು ಬಳಸಿ ರಾಷ್ಟ್ರದ ಹಾದಿ ತಪ್ಪಿಸಲು ಸಾಧ್ಯವಿಲ್ಲ,” ಎಂದು ಹೇಳಿದ ರಿಜಿಜು, ಬಿಜೆಪಿಗೆ ಅಂಬೇಡ್ಕರ್ ದೇವರಿಗೆ ಸಮಾನ ಎಂದು ಪ್ರತಿಪಾದಿಸಿದರು.

CAA ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ: ಅಮಿತ್ ಶಾ
ನವದೆಹಲಿ:  ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆಯನ್ನು) ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಕೇಂದ್ರ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

ಎಎನ್‌ಐ ಜೊತೆ ಮಾತನಾಡುವ ಸಂದರ್ಭದಲ್ಲಿ ‘ಸಿಎಎ ಅಸಾಂವಿಧಾನಿಕ’ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ ಅವರು,  ಈ ಕಾಯ್ದೆ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಾತ್ರಿಪಡಿಸಿಕೊಳ್ಳಲು ಇರುವ ಸಾರ್ವಭೌಮ ಹಕ್ಕಾಗಿದೆ. ಸಿಎಎ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಇದನ್ನು ಹಿಂಪಡೆಯುವ ಅವಕಾಶವೇ ಇಲ್ಲ ಎಂದರು.

ವಿರೋಧ ಪಕ್ಷಗಳ ನಾಯಕರು ಸಂವಿಧಾನದ 14ನೇ ವಿಧಿ ಬಗ್ಗೆ ಯಾವಾಗಲೂ ಮಾತನಾಡುತ್ತಾರೆ. ಆದರೆ, ಅದರಲ್ಲಿರುವ ಎರಡು ಅನುಚ್ಛೇದಗಳನ್ನು ಮರೆತಿದ್ದಾರೆ. ಅವುಗಳಲ್ಲಿ ಸ್ಪಷ್ಟ, ಸಮಂಜಸವಾದ ವರ್ಗೀಕರಣಗಳಿವೆ. ಈ ಕಾನೂನು 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ’ ಎಂದು ಶಾ ಹೇಳಿದರು.

2024ರಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೇರಿದರೆ, ಸಿಎಎ ರದ್ದುಗೊಳಿಸುವುದಾಗಿ ವಿರೋಧ ಪಕ್ಷಗಳು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೂ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸುತ್ತಿರುವ ಸಿಎಎ ಅನ್ನು ರದ್ದುಪಡಿಸುವುದು ಅಸಾಧ್ಯ. ಇದು ಸಂಪೂರ್ಣ ಸಾಂವಿಧಾನಿಕವಾಗಿದೆ. ಸುಪ್ರೀಂ ಕೋರ್ಟ್‌ ಸಹ ಈ ಕಾನೂನು ಜಾರಿಗೆ ತಡೆ ನೀಡಿಲ್ಲ ಎಂಬುದನ್ನು ಮರೆಯಬಾರದು ಎಂದರು. ಎಂದಿದ್ದಾರೆ.

ಇದು ಜಾರಿಯಾಗಬೇಕೇ ಅಥವಾ ಬೇಡವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಉದ್ಧವ್‌ ಠಾಕ್ರೆ ಅವರನ್ನು ಕೇಳಲು ಬಯಸುತ್ತೇನೆ. ಅವರು ಅಲ್ಪಸಂಖ್ಯಾತರ ಮತಗಳನ್ನು ಬಯಸುತ್ತಿದ್ದು, ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಠಾಕ್ರೆಯವರನ್ನು ಈ ಸಂದರ್ಭದಲ್ಲಿ ಶಾ ತಿವಿದರು.

ಈ ಕಾನೂನು ‘ಮುಸ್ಲಿಂ ವಿರೋಧಿ  ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ಓವೈಸಿ ಅವರ ಈ ಹೇಳಿಕೆ ಖಂಡನೀಯ, ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶವನ್ನು ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಿಸುವುದರಿಂದ ಮುಸ್ಲಿಮರ ಮೇಲೆ ಧಾರ್ಮಿಕ ದಬ್ಬಾಳಿಕೆ ನಡೆಸಲು ಸಾಧ್ಯವಿಲ್ಲ. ಹಾಗೆಯೇ ರಾಷ್ಟ್ರೀಯ ಪೌರತ್ವ ನೋಂದಣಿಗೆ  ಹಾಗೂ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವುದಕ್ಕೆ ಈ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಹೇಳಿದರು.

ನನ್ನನ್ನು ಮೋದಿʼಜೀʼ ಎಂದು ಕರೆಯಬೇಡಿ, ಮೋದಿ ಅನ್ನಿ ಸಾಕು!
ಹೊಸದಿಲ್ಲಿ: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂರು ರಾಜ್ಯಗಳ ಗೆಲುವಿಗೆ ಭಾರತೀಯ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಗುರುವಾರ ತಮ್ಮನ್ನು ಬಿಜೆಪಿ ಸಂಸದರು ‘ಮೋದಿʼ ಎಂದು ಸಂಬೋಧಿಸುವಂತೆ ಒತ್ತಾಯಿಸಿದ್ದಾರೆ. ಪೂರ್ವಪ್ರತ್ಯಯಗಳು ಅಥವಾ “ಆದರನೀಯ ಮೋದೀಜಿ” (ಗೌರವಾನ್ವಿತ ಶ್ರೀ ಮೋದಿ) ಅಥವಾ “ಮೋದೀಜಿ” ನಂತಹ ಪ್ರತ್ಯಯಳಗನ್ನು ಸೇರಿಸದೇ ಸಂಬೋಧಿಸಲು ಸೂಚಿಸಿದ್ದಾರೆ.

ಮೋದೀಜಿ, ಆದರನೀಯ ಮೋದೀಜಿ ಎಂದೆಲ್ಲಾ ಕರೆದದ್ದರಿಂದ ಪ್ರಧಾನಮಂತ್ರಿ ಹಾಗೂ ಜನರ ನಡುವೆ ಅಂತರವನ್ನು ಸೃಷ್ಟಿಸಿದೆ ಎಂದು ಅವರು ತಿಳಿಸಿದ್ದಾರೆ.

ಭಾನುವಾರ ಮೂರು ರಾಜ್ಯಗಳ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಬಿಜೆಪಿ ಸಂಸದೀಯ ಪಕ್ಷದ ಮೊದಲ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, “ಬಿಜೆಪಿ ಈಗ ದೇಶಾದ್ಯಂತ ಆದ್ಯತೆಯ ಪಕ್ಷವಾಗಿದೆ ಮತ್ತು ಪಕ್ಷದ ಕಾರ್ಯಕರ್ತರ ಶ್ರಮದಿಂದಾಗಿ ಇದನ್ನು ಸಾಧಿಸಲು ಸಾಧ್ಯವಾಯಿತು. ಈ ಮೂರು ರಾಜ್ಯಗಳಲ್ಲಿ ತಂಡ ಮಾಡಿದ ಕೆಲಸದ ಫಲಿತಾಂಶವಾಗಿದೆ. ನನ್ನದು ಮಾತ್ರವಲ್ಲದೆ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಗುರಿಯನ್ನು ಸಾಧಿಸಲು ಅವಿರತವಾಗಿ ಶ್ರಮಿಸಿದರು,” ಎಂದು ಅವರು ಹೇಳಿದ್ದಾರೆ.

“ಮೋದೀಜೀ ಕಾ ಸ್ವಾಗತ್ ಹೈ [ಮೋದಿ ಜಿ ಅವರಿಗೆ ಸ್ವಾಗತ]” ಮತ್ತು “ಮೋದಿ ಹ ತೋಹ್ ಮುಮ್ಕಿನ್ ಹೈ [ಮೋದಿ ಇದ್ದರೆ ಅದು ಸಾಧ್ಯ]” ಎಂಬ ಘೋಷಣೆಗಳೊಂದಿಗೆ ಈ ಸಂದರ್ಭದಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲಾಗಿತ್ತು.

ಸಭೆಯಲ್ಲಿ ಉಪಸ್ಥಿತರಿದ್ದವರನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ನಾನು ಪಕ್ಷದ ಪುಟಾಣಿ ಕಾರ್ಯಕರ್ತ ಮತ್ತು ಜನರು ನನ್ನನ್ನು ತಮ್ಮ ಕುಟುಂಬದ ಭಾಗವೆಂದು ಭಾವಿಸುತ್ತಾರೆ. ಗೌರವಾರ್ಥಗಳನ್ನು ಸೇರಿಸುವುದರಿಂದ ನಮ್ಮ ನಡುವೆ ಅಂತರ ಸೃಷ್ಟಿಯಾಗುತ್ತದೆ, ಆದ್ದರಿಂದ ನನ್ನನ್ನು ಮೋದಿ ಎಂದು ಮಾತ್ರ ಸಂಬೋಧಿಸಿ,” ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ದಿ ಪ್ರಿಂಟ್‌ ವರದಿ ಮಾಡಿದೆ.

ಗಡಿ ವಿವಾದ: ಕೇಂದ್ರ ಗೃಹ ಸಚಿವರ ಸಭೆಯಲ್ಲಿ ರಾಜ್ಯದ ನಿಲುವು ಸ್ಪಷ್ಟಪಡಿಸುತ್ತೇನೆ- ಬಸವರಾಜ ಬೊಮ್ಮಾಯಿ
ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆದಿರುವ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಮಹಾರಾಷ್ಟ್ರದೊಂದಿಗಿನ ಗಡಿ ವಿವಾದದ ಬಗ್ಗೆ ರಾಜ್ಯದ ನಿಲುವನ್ನು ಸ್ಪಷ್ಟಪಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಗಡಿ ವಿವಾದದ ಬಗ್ಗೆ ಚರ್ಚಿಸಲು ಕೇಂದ್ರ ಗೃಹ ಸಚಿವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದಿದ್ದಾರೆ, ಅಲ್ಲಿ ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತೇವೆ. ರಾಜ್ಯ ಪುನರ್ವಿಂಗಡಣೆ ಕಾಯ್ದೆಯ ನಂತರ ಇಲ್ಲಿಯವರೆಗೆ ನಡೆದಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ನಾನು ವಿವರಗಳನ್ನು ಹಂಚಿಕೊಳ್ಳುತ್ತೇನೆ-  ಸದ್ಯಕ್ಕೆ ಪ್ರಕರಣವು ಸುಪ್ರೀಂ ಕೋರ್ಟ್ ಮುಂದೆ ಇದೆ. ಈ ಹಿನ್ನಲೆಯಲ್ಲಿ ಬುಧವಾರ ಸಂಜೆ ನವದೆಹಲಿಯಲ್ಲಿ ಸಭೆ ನಡೆಯುವ ಸಾಧ್ಯತೆಯಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಗಡಿ ವಿವಾದವು ಕಳೆದ ವಾರ ತೀವ್ರಗೊಂಡಿತ್ತು, ಎರಡೂ ಕಡೆಯ ವಾಹನಗಳನ್ನು ಗುರಿಯಾಗಿಸಲಾಯಿತು, ಎರಡೂ ರಾಜ್ಯಗಳ ನಾಯಕರು ಮತ್ತು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಉದ್ವಿಗ್ನ ವಾತಾವರಣದ ನಡುವೆ ಕನ್ನಡ ಮತ್ತು ಮರಾಠಿ ಪರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು.ಇದಾದ ನಂತರ, ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ದೂರವಾಣಿಯಲ್ಲಿ ಪರಸ್ಪರ ಮಾತನಾಡಿ, ಎರಡೂ ಕಡೆ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದು ಒಪ್ಪಿಕೊಂಡಿದ್ದರು.

ಅಮಿತ್ ಶಾ ಕುದುರೆ ವ್ಯಾಪಾರದ ದಲ್ಲಾಳಿಯೋ? : ಕಾಂಗ್ರೆಸ್
ತೆಲಂಗಾಣ : ತೆಲಂಗಾಣದಲ್ಲಿ ಕಾನೂನು ಬಾಹಿರ “ಆಪರೇಷನ್ ಕಮಲ”ದ ವಿಫಲ ಯತ್ನ ಪ್ರಕರಣದ ಬೆನ್ನಲ್ಲೇ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಷ್ಟೂ ಸನ್ನಿವೇಶದ ವಿಡಿಯೋ ಒಂದನ್ನು ಇಂದು ಬಿಡುಗಡೆ ಮಾಡಿದ್ದಾರೆ. ಗಮನಾರ್ಹ ಸಂಗತಿಯೆಂದರೆ “ಆಪರೇಷನ್ ಕಮಲ” ಪ್ರಕರಣದ ಮುಖ್ಯ ರೂವಾರಿಗಳು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಅಮಿತ್ ಷಾ ಮತ್ತು ಜೆ.ಪಿ.ನಡ್ಡಾ ಎಂಬುದು ಬಿಡುಗಡೆಯಾದ ಆಡಿಯೋದಲ್ಲಿ ಬಹಿರಂಗವಾಗಿದ್ದು, ಅಮಿತ್‌ ಶಾ ವಿರುದ್ದ ರಾಜ್ಯ ಕಾಂಗ್ರೆಸ್‌ ಕಿಡಿಕಾರಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ʼಅಮಿತ್ ಶಾ ಗೃಹ ಸಚಿವರೋ ಅಥವಾ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಕುದುರೆ ವ್ಯಾಪಾರದ ದಲ್ಲಾಳಿಯೋ?ʼ ಎಂದು ಪ್ರಶ್ನೆ ಮಾಡಿದೆ.

ಆಪರೇಷನ್ ಕಮಲ ಎಂಬ ದಗಾಕೊರ ಕೆಲಸದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹಸಚಿವ ಅಮಿತ್‌ ಶಾ, ಬಿ.ಎಲ್‌ ಸಂತೋಷ್ ಅವರುಗಳ ಹೆಸರುಗಳು ಬಹಿರಂಗವಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಕಾಂಗ್ರೆಸ್‌ ಕಿಡಿಕಾರಿದೆ.

‌ʼತೆಲಂಗಾಣದಲ್ಲಿ 150 ಕೋಟಿಯ ಆಪರೇಷನ್ ಕಮಲದ ಡೀಲ್‌ನಲ್ಲಿ ಸಿಕ್ಕಿಬಿದ್ದವರು ಕರ್ನಾಟಕದ ಕುದುರೆ ವ್ಯಾಪಾರದಲ್ಲೂ ಪಾತ್ರ ವಹಿಸಿದ್ದರು ಎಂಬುದನ್ನು ಬಾಯ್ಬಿಟ್ಟಿದ್ದಾರೆ. ಬಿ ಎಲ್ ಸಂತೋಷ್ ಎಂಬ ವ್ಯಕ್ತಿಯ ಐನಾತಿ ಕೆಲಸ ಈಗ ಹೊರಬರುತ್ತಿದೆ, ಕುದುರೆವ್ಯಾಪಾರದಲ್ಲಿ ಸಂತೋಷ ಕೂಟದ ನೇತೃತ್ವ ಇದ್ದಿದ್ದಕ್ಕೆ ಬಿ.ಎಸ್‌ ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಿದ್ದೇ?ʼ ಎಂದು ಆಕ್ರೋಶ ವ್ಯಕ್ತ ಪಡಿಸಿದೆ.

“ಆಪರೇಷನ್ ಕಮಲ”ದಲ್ಲಿ ಬಿ.ಎಲ್.ಸಂತೋಷ್ ಹೆಸರು ; KCR ಬಿಡುಗಡೆ ಮಾಡಿದ ಸಾಕ್ಷ್ಯದಲ್ಲಿ ಏನೇನಿದೆ?
ತೆಲಂಗಾಣದಲ್ಲಿ ಕಾನೂನು ಬಾಹಿರ “ಆಪರೇಷನ್ ಕಮಲ”ದ ವಿಫಲ ಯತ್ನ ಪ್ರಕರಣದ ಬೆನ್ನಲ್ಲೇ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಷ್ಟೂ ಸನ್ನಿವೇಶದ ವಿಡಿಯೋ ಒಂದನ್ನು ಇಂದು ಬಿಡುಗಡೆ ಮಾಡಿದ್ದಾರೆ. ಗಮನಾರ್ಹ ಸಂಗತಿಯೆಂದರೆ “ಆಪರೇಷನ್ ಕಮಲ” ಪ್ರಕರಣದ ಮುಖ್ಯ ರೂವಾರಿಗಳು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಅಮಿತ್ ಷಾ ಮತ್ತು ಜೆ.ಪಿ.ನಡ್ಡಾ ಎಂಬುದು ಬಿಡುಗಡೆಯಾದ ಆಡಿಯೋದಲ್ಲಿ ಬಹಿರಂಗವಾಗಿದೆ.

ತೆಲಂಗಾಣದಲ್ಲಿ ಸಿನಿಮೀಯ ರೀತಿಯಲ್ಲಿ ಸಿಕ್ಕಿಬಿದ್ದ “ಆಪರೇಷನ್ ಕಮಲ”ದ ರೂವಾರಿಗಳು ತಾವು ಬಿಜೆಪಿ ಪಕ್ಷದ ಕಡೆಯಿಂದಲೇ ಬಂದದ್ದು, ‘ಶಾಸಕರ ಖರೀದಿಯ ಅಷ್ಟೂ ವ್ಯವಸ್ಥೆಯನ್ನು ನಮ್ಮ ಪಕ್ಷದ ರಾಷ್ಟ್ರ ಮಟ್ಟದ ತಂಡ ನಿರ್ವಹಿಸುತ್ತಿದ್ದು, ಇದರಲ್ಲಿ ಪಕ್ಷದ ರಾಜ್ಯ ಮುಖಂಡರ ಯಾವ ಪಾತ್ರವೂ ಇಲ್ಲ’ ಎಂದು ಆಡಿಯೋದಲ್ಲಿ ಹೇಳಿದ್ದಾರೆ. ಇದರ ಜೊತೆಗೆ ‘ಮೂರು ಪ್ರಮುಖ ವ್ಯಕ್ತಿಗಳು ಈ ವ್ಯವಸ್ಥೆಯಲ್ಲಿ ಇದ್ದು ಯಾವುದೇ ಸಮಸ್ಯೆ ಬಾರದಂತೆ ಕೆಲಸ ನಡೆಯಲಿದೆ. ಶಾಸಕರ ಯೋಗ್ಯತೆ ನೋಡಿ ಅವರ ಬೆಲೆ ನಿಗದಿ ಮಾಡಲಾಗುತ್ತದೆ. ಒಬ್ಬೊಬ್ಬ ಶಾಸಕನಿಗೆ ಕನಿಷ್ಟ 50 ಕೋಟಿಯಿಂದ 100 ಕೋಟಿ ವರೆಗೂ ನಿಗದಿ ಮಾಡಲಾಗಿದೆ. ಆ ಮೂರು ಪ್ರಮುಖ ವ್ಯಕ್ತಿಗಳೆಂದರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ’ ಎಂದು ಹೇಳಿದ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

‘We are ready to spend ₹50 Crores on each MLA. @blsanthosh will confirm & arrange a meeting with @AmitShah’ 👇 #LotusLeaks pic.twitter.com/2hoKBP1Fr7
— YSR (@ysathishreddy) November 4, 2022

ತೆಲಂಗಾಣ ಪೊಲೀಸರಿಗೆ ಸಿಕ್ಕಿಬಿದ್ದ ಮೂವರು ಪ್ರಮುಖ ಆರೋಪಿಗಳಾದ ಬಿಜೆಪಿ ಹಿನ್ನೆಲೆಯವರು ಎಂದು ಹೇಳಲಾದ ಹರಿಯಾಣದ ಫರಿದಾಬಾದ್ ಮೂಲದ ಪೂಜಾರಿಯಾಗಿರುವ ಸತೀಶ್ ಶರ್ಮಾ (33), ತಿರುಪತಿಯ ಶ್ರೀಮನಾಥ ರಾಜ ಪೀಠದ ಪೀಠಾಧಿಪತಿ D. ಸಿಂಹಯಾಜಿ(45), ಹಾಗೂ ಸರೂರನಗರದ ಉದ್ಯಮಿ ನಂದಕುಮಾರ್ (48) ಎನ್ನುವರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂವರು ಪ್ರಮುಖ ಆರೋಪಿಗಳು ತೆಲಂಗಾಣದ ಆಡಳಿತಾರೂಢ ಟಿಆರ್ಎಸ್ ಪಕ್ಷದ ಶಾಸಕ ರೋಹಿತ್ ರೆಡ್ಡಿ ಜೊತೆಗೆ ನಡೆಸಿದ ಸಂಭಾಷಣೆ ಇದಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ನಡೆಸುತ್ತಿರುವ “ಆಪರೇಷನ್ ಕಮಲ”ದ ಮಾದರಿ ಹೇಗೆ ಇರಲಿದೆ ಎಂಬುದನ್ನು ಈ ವಿಡಿಯೋ ಸಾಕ್ಷಿ ಒದಗಿಸುತ್ತಿದೆ.

ಖದೀಮರನ್ನು ಖೆಡ್ಡಾಗೆ ಉರುಳಿಸಿದ ಬಗೆ ಹೇಗಿತ್ತು? ಇದು “ಆಪರೇಷನ್ ನಾರಿಯಲ್ ಪಾನಿ”!
ಅಂದಹಾಗೆ ರಾಷ್ಟ್ರಾದ್ಯಂತ ಬಿಜೆಪಿ ಪಕ್ಷ ಆಪರೇಷನ್ ಕಮಲದ ಮೂಲಕ ಹಿಂಬಾಗಿಲ ರಾಜಕಾರಣ ಮಾಡುತ್ತಾ ಬಂದಿದ್ದು ಎಲ್ಲೂ ಸಹ ಅಧಿಕೃತವಾಗಿ ಸಿಕ್ಕಿ ಬಿದ್ದಿರಲಿಲ್ಲ. ಆದರೆ ತೆಲಂಗಾಣದಲ್ಲಿ ಆಪರೇಷನ್ ಕಮಲದ ಸೂಚನೆ ಸಿಕ್ಕ ತಕ್ಷಣವೇ ಟಿಆರ್ಎಸ್ ಪಕ್ಷದ ನಾಯಕರು ಜಾಗೃತಗೊಂಡಿದ್ದಾರೆ.

ತೆಲಂಗಾಣದ ಪೊಲೀಸರ ಸಹಕಾರ ಪಡೆದ ಟಿಆರ್ಎಸ್ ಪಕ್ಷದ ನಾಯಕರು ಮುಂಚಿತವಾಗಿಯೇ ವ್ಯವಸ್ಥೆಯಾಗಿದ್ದ ಶಾಸಕ ಪೈಲಟ್ ರೋಹಿತ್ ರೆಡ್ಡಿಯವರ ಫಾರಂ ಹೌಸ್ ನ ನಾಲ್ಕು ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಿದ್ದಾರೆ. ನಂತರ ರೋಹಿತ್ ರೆಡ್ಡಿ ಜೇಬಿನಲ್ಲಿ ಆಡಿಯೋ ರೆಕಾರ್ಡರ್ ಅಳವಡಿಸಿದ್ದಾರೆ. ನಂತರ ಅತಿಥಿಗಳಂತೆ ಬಂದಿದ್ದ ಬಿಜೆಪಿ ಹಿನ್ನೆಲೆಯ ವ್ಯಕ್ತಿಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಆಪರೇಷನ್ ಕಮಲದ ಅಷ್ಟೂ ಪ್ರಕ್ರಿಯೆಯನ್ನು ಬಾಯಿ ಬಿಡಿಸಿದ್ದಾರೆ. ಪ್ರಮುಖವಾಗಿ ಆಪರೇಷನ್ ಕಮಲ ಹೇಗೆ ನಡೆಯಲಿದೆ, ಇದರ ರೂವಾರಿಗಳು ಯಾರು, ಒಬ್ಬೊಬ್ಬ ಶಾಸಕರನ್ನು ಎಷ್ಟು ಹಣ ಕೊಟ್ಟು ಕೊಂಡುಕೊಳ್ಳಲಾಗುತ್ತದೆ, ರಾಜೀನಾಮೆ ನಂತರ ಚುನಾವಣೆಗೆ ಬಿ.ಫಾರಂ ನೀಡುವ ಬಗ್ಗೆ, ಚುನಾವಣೆ ಗೆಲ್ಲಲು ಬೇಕಾದ ವ್ಯವಸ್ಥೆ ಬಗ್ಗೆ, ಹೀಗೆ ಎಲ್ಲಾ ವಿಚಾರಗಳು ಚರ್ಚೆಯಾಗಿವೆ.

ನಂತರ ಪೂರ್ವ ನಿಯೋಜನೆಯಂತೆ ಶಾಸಕ ರೋಹಿತ್ ರೆಡ್ಡಿ ಫಾರಂ ಹೌಸ್ ನ ಸಿಬ್ಬಂದಿಗೆ “ನಾರಿಯಲ್ ಪಾನಿ”(ಎಳನೀರು) ಕೊಡಲು ಹೇಳುತ್ತಾರೆ. ಆ “ನಾರಿಯಲ್ ಪಾನಿ”ಯೇ ಪೊಲೀಸರಿಗೆ ಸೂಚನೆ ಕೊಡುವ ಕೋಡ್ ವರ್ಡ್ ಆಗಿರುತ್ತದೆ. ನಂತರ ಪೊಲೀಸರು ಬಂದ ಖದೀಮರು ಮತ್ತು ಅವರ ಬಳಿಯಲ್ಲಿದ್ದ ಹಣವನ್ನು ವಶಪಡಿಸಿಕೊಳ್ಳುತ್ತಾರೆ. ಈ ಅಷ್ಟೂ ಪ್ರಕ್ರಿಯೆ ಸಿನಿಮೀಯ ರೀತಿಯಲ್ಲಿದ್ದು ಟಿಆರ್ಎಸ್ ಪಕ್ಷದ ಪ್ರಮುಖರು ಖದೀಮರನ್ನು ಖೆಡ್ಡಾಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಾರೆ ಟಿಆರ್ಎಸ್ ಪಕ್ಷ ಆಪರೇಷನ್ ಕಮಲದ ರೂವಾರಿಗಳನ್ನು ಸಾಕ್ಷ್ಯ ಸಮೇತರಾಗಿ ಹಿಡಿದು ಹಾಕಿದ್ದು, ತನಿಖೆ ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತವಾಗಿ ನಡೆಯಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಮುಖ್ಯಮಂತ್ರಿಗಳಿಗೆ ನಿಜವಾಗಿಯೂ ಕನ್ನಡ, ಕರ್ನಾಟಕದ ಮೇಲೆ ಕಾಳಜಿ ಇದೆಯೇ?
ಕನ್ನಡ ರಾಜ್ಯೋತ್ಸವ ಹತ್ತಿರ ಬರುತ್ತಿದ್ದಂತೆ, ಕೋಟಿ ಕಂಠಗಾಯನ ಮತ್ತಿತರ ಕನ್ನಡಪರ ಕಾರ್ಯಕ್ರಮಗಳಿಗೆ ಚಾಲನೆ, ಬೆಂಬಲ, ಪ್ರೊತ್ಸಾಹ ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕನ್ನಡ ನಾಡು ನುಡಿಗಳ ಕುರಿತು ಎಷ್ಟರ ಮಟ್ಟಿಗೆ ಕಾಳಜಿ ಅಭಿಮಾನ ಹೊಂದಿದ್ದಾರೆ ಎಂಬ ಅನುಮಾನ ಕನ್ನಡಿಗರಲ್ಲಿ ಮೂಡಿದೆ.

ಕೇಂದ್ರೀಯ ಶಿಕ್ಷಣ ಸಂಸ್ಥೆಗಳಿಂದ ಹಿಡಿದು ಉನ್ನತ ತಾಂತ್ರಿಕ ಸಂಸ್ಥೆಗಳವರೆಗೂ ಇಂಗ್ಲೀಷ್‌ ಬದಲು ಹಿಂದಿ ಮಾಧ್ಯಮದಲ್ಲಿಯೇ ಪಠ್ಯಬೋಧನೆಯನ್ನು ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷರಾಗಿರುವ ಸಂಸತ್ತಿನ ಅಧಿಕೃತ ಭಾಷಾ ಸಮಿತಿ ಶಿಫಾರಸು ಮಾಡಿದೆ. ಇಂತಹ ಒಂದು ನಡೆ ದಕ್ಷಿಣ ರಾಜ್ಯಗಳ ದೃಷ್ಟಿಯಿಂದ ಬಹಳ ಅನಾಹುತಕಾರಿಯಾದದ್ದು. ಇದಕ್ಕೆ ನಮ್ಮ ನೆರೆ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ತೀವ್ರ ಅಸಮಧಾನ ವ್ಯಕ್ತಪಡಿಸಿ, ಕೇಂದ್ರದ ನಡೆಯನ್ನು ವಿರೋಧಿಸಿ ಶಿಫಾರಸ್ಸನ್ನು ಹಿಂಪಡೆಯುವಂತೆ ಆಗ್ರಹಿಸಿ ಪತ್ರ ಬರೆದಿದ್ದಾರೆ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಗ್ಗೆ ತುಟಿಕ್ ಪಿಟಿಕ್‌ ಎನ್ನದೆ ಮೌನವಹಿಸಿದ್ದಾರೆ. ಈ ಹಿಂದಿ ಹೇರಿಕೆಯ ನಡೆಗೆ ಯಾವುದೇ ಪ್ರತಿರೋಧ ಕರ್ನಾಟಕದ ಮುಖ್ಯಮಂತ್ರಿಗಳಿಂದ ವ್ಯಕ್ತವಾಗಿಲ್ಲ. ಹೀಗಾಗಿ ನಿಜವಾಗಿಯೂ ಕನ್ನಡ ನಾಡು, ಕನ್ನಡ ಭಾಷೆಯ ಬಗ್ಗೆ ಇವರಿಗೆ ನಿಜವಾಗಿ ಗೌರವ ಅಭಿಮಾನಗಳು ಇವೆಯೇ ಎಂಬ ಪ್ರಶ್ನೆ ಕಾಡುತ್ತದೆ.

ಕನ್ನಡಿಗರ ಪ್ರಶ್ನೆಗೆ ಕಾರಣವಾಗಿರುವ ಅಮಿತ್‌ ಶಾ ಶಿಫಾರಸ್ಸಿನಲ್ಲಿ ಏನಿದೆ?

ಅಮಿತ್‌ ಶಾ ಅವರ ಸಮಿತಿ ಶಿಫಾರಸು ನೀಡುವ ಮುಂಚೆಯೇ, ಅಧಿಕೃತ ಭಾಷಾ ಸಂಸದೀಯ ಸಮಿತಿ 37 ನೇ ಸಭೆಯಲ್ಲಿ, ಶಾ ಅವರು ‘ ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯ ಭಾಷೆಯಾಗಿ ಬಳಸಬೇಕೆ ಹೊರೆತು ಸ್ಥಳೀಯ ಭಾಷೆಗಳನ್ನಲ್ಲ ಎಂದು ಹೇಳಿದ್ದರು. ಹೀಗಾಗಿ ದೇಶದಲ್ಲೆಡೆ ಸಂಪರ್ಕ ಭಾಷೆಯಾಗಿ, ದೇಶಿಯ ಭಾಷೆ ಹಿಂದಿಯನ್ನು ಬಳಸಬೇಕು ಎಂದು ಸಭೆಯಲ್ಲಿ ಘೋಷಿಸಿದ್ದರು. ಇದಲ್ಲದೆ ಅಮಿತ್ ಶಾ ಅವರ ಅಧಿಕೃತ ಭಾಷಾ ಸಮಿತಿಗೆ ತನ್ನ ವರದಿಗಳನ್ನು ಹಂತ ಹಂತವಾಗಿ ಜಾರಿಗೆ ತರುವ ಹಾಗೆ ಸಮಿತಿಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು.

ಈ ಸೂಚನೆ ಮೇರೆಗೆ ಸಮಿತಿ ಸಲ್ಲಿಸಿದ ಶಿಫಾರಸ್ಸಿನಲ್ಲಿ, ಕೇಂದ್ರೀಯ ಶಿಕ್ಷಣ ಸಂಸ್ಥೆಗಳಿಂದ ಹಿಡಿದು ಉನ್ನತ ತಾಂತ್ರಿಕ ಸಂಸ್ಥೆಗಳವರೆಗೂ ಇಂಗ್ಲೀಷ್‌ ಬದಲು ಹಿಂದಿ ಮಾಧ್ಯಮದಲ್ಲಿಯೇ ಪಠ್ಯಬೋಧನೆಯನ್ನು ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ಅದಲ್ಲದೇ ಐಐಟಿ, ಐಐಎಂ, ನವೋದಯ ಕೇಂದ್ರೀಯ ವಿವಿ ಇತ್ಯಾದಿಗಳಿಗೆ ಅನ್ವಯವಾಗುವಂತೆ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್‌ ಬದಲು ಹಿಂದಿ ಮಾಧ್ಯಮ ಬರಬೇಕು. ಕೇಂದ್ರೀಯ ನೇಮಕಾತಿ ವೇಳೆ ಇಂಗ್ಲೀಷ್‌ ಬದಲು ಹಿಂದಿಯಲ್ಲಿ ಪ್ರಶ್ನೆಪತ್ರಿಕೆ ಇರಬೇಕು. ಕೇಂದ್ರೀಯ ಸರ್ಕಾರಿ ನೌಕರರ ನೇಮಕಾತಿ ವೇಳೆ ಹಿಂದಿ ಬಲ್ಲವರಿಗೆ ಆದ್ಯತೆ ನೀಡಬೇಕು. ಹಾಗೆಯೇ ಹಿಂದಿ ಬಳಸದ ನೌಕರರಿಗೆ ಎಚ್ಚರಿಕೆ ನೀಡಿ, ವಾರ್ಷಿಕ ವರದಿಯಲ್ಲಿ ನಮೂದಿಸಬೇಕು. ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿಯಲ್ಲೇ ಹೈಕೋರ್ಟ್‌ ಕಲಾಪಗಳನ್ನು ನಡೆಸಬೇಕು. ಕೇಂದ್ರ ಸರ್ಕಾರದ ಎಲ್ಲಾ ಪತ್ರ, ಇ-ಮೇಲ್‌ ವ್ಯವಹಾರ ಹಿಂದಿಯಲ್ಲೇ ನಡೆಯಬೇಕು. ಸರ್ಕಾರದ ಜಾಹೀರಾತಿನ ಹಣದಲ್ಲಿ ಶೇ.50 ರಷ್ಟು ಹಣವನ್ನು ಹಿಂದಿ ಜಾಹೀರಾತಿಗೆ ನೀಡಬೇಕು, ವಿಶ್ವ ಸಂಸ್ಥೆಯಲ್ಲಿ ಭಾರತದ ಅಧಿಕೃತ ಭಾಷೆಯನ್ನು ಹಿಂದಿ ಎಂದು ಪರಿಗಣಿಸಬೇಕು ಎಂದು ತಿಳಿಸಲಾಗಿತ್ತು.

ಹೀಗಾದರೆ ಏನಾಗುತ್ತದೆ?

ಶಿಫಾರಸ್ಸಿನಲ್ಲಿ ಇರುವಂತೆ ಆದರೆ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಉದ್ಯೋಗವಕಾಶಗಳನ್ನು ಕಳೆದುಕೊಳ್ಳುವಂತಾಗುತ್ತದೆ. ಹಿಂದಿ ಭಾಷೆ ಬಾರದ ಜನರು ಎರಡನೆ ದರ್ಜೆಯ ನಾಯಕರಾಗುತ್ತಾರೆ. ಪರ್ಯಾಯ ಭಾಷೆಯಾಗಿ ಹಿಂದಿ ಬಳಸುವುದರಿಂದ, ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಮಾನ್ಯತೆ ಇರುವುದಿಲ್ಲ. ಇದರಿಂದ, ಪ್ರಾದೇಶಿಕ ಭಾಷೆಯನ್ನಾಡುವ ಜನಸಮೂಹಕ್ಕೆ, ಶಿಕ್ಷಣ, ಉದ್ಯೋಗ, ಮತ್ತಿತರ ವಿಷಯಗಳಿಂದ ವಂಚಿತರಾಗಬೇಕಾಗುತ್ತದೆ.

ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಸೇರಿದಂತೆ ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿಸುವ ಕ್ರಮವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಬಲವಾಗಿ ವಿರೋಧಿಸಿದ್ದು ಅಲ್ಲದೇ, ಕೇಂದ್ರದ ಶಿಫಾರಸ್ಸನ್ನು ಹಿಂಪಡೆಯುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.

ಅ.10ರಂದು ಸ್ಟಾಲಿನ್‌ ತಾವು ಮಾಡಿದ್ದ ಸರಣಿ ಟ್ವೀಟ್‌ ನಲ್ಲಿ ಹಿಂದಿ ಹೇರಿಕೆ ಪ್ರಯತ್ನದ ವಿರುದ್ಧ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದರು. ಅವರು ತಮ್ಮ ಟ್ವೀಟ್‌ ನಲ್ಲಿ ʼಭಾರತದ ಭಾಷಾ ವೈವಿದ್ಯತೆಯನ್ನು ಕಡೆಗಣಿಸಿ ಹಿಂದಿ ಹೇರಿಕೆ ಮಾಡಲು ಕೇಂದ್ರದ ಬಿಜೆಪಿ ಸರ್ಕಾರ ತೀವ್ರ ರೀತಿಯಲ್ಲಿ ನಡೆಸುತ್ತಿರುವ ಪ್ರಯತ್ನ ಆತಂಕದ ಮಟ್ಟ ತಲುಪಿದೆ. ಅಧಿಕೃತ ಭಾಷೆ ಕುರಿತ ಸಂಸದೀಯ ಸಮಿತಿಯ ವರದಿಯ 11ನೆಯ ಸಂಪುಟದ ಪ್ರಸ್ತಾವಗಳು ಭಾರತದ ಆತ್ಮದ ಮೇಲೆ ನಡೆಸಿರುವ ನೇರವಾದ ಪ್ರಹಾರವಾಗಿʼ ಎಂದು ಬರೆದಿದ್ದರು. ಮುಂದುವರೆದು, ʼಹಿಂದಿ ಹೇರಿಕೆ ಮಾಡಿದ್ದೇ ಆದಲ್ಲಿ ಹಿಂದಿ ಮಾತನಾಡದ ವಿಶಾಲ ಜನಮೂಹವು ಎರಡನೆಯ ದರ್ಜೆಯ ನಾಗರಿಕರಾಗುತ್ತಾರೆ. ಹಿಂದಿ ಹೇರಿಕೆ ನಡೆಸುವುದು ಭಾರತದ ಸಮಗ್ರತೆಗೆ ವಿರುದ್ಧವಾದ ನಡೆ. ಆಳುವ ಬಿಜೆಪಿ ಸರ್ಕಾರವು ಹಿಂದೆ ನಡೆದ ಹಿಂದಿ ವಿರೋಧಿ ಚಳವಳಿಗಳಿಂದ ಪಾಠ ಕಲಿಯುವುದು ಒಳ್ಳೆಯದುʼ ಎಂದು ಸಹ ಬಿಜೆಪಿ ಸರ್ಕಾರವನ್ನು ಎಚ್ಚರಿಸಿದ್ದರು.

ಅದೇ ರೀತಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹ ಅ.12ರಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಹಿಂದಿಯನ್ನು ಹೇರಲು ನಡೆಸುತ್ತಿರುವ ಪ್ರಯತ್ನಗಳನ್ನು ʼಒಪ್ಪಲಸಾಧ್ಯʼ ಎಂದಿದ್ದರು. ಕೇಂದ್ರ ಸರ್ಕಾರದ ಸೇವೆಗಳ ಪರೀಕ್ಷೆಗಳ ಮಾಧ್ಯಮವನ್ನು ಹಿಂದಿಯನ್ನಾಗಿಸುವ ಮತ್ತು ಐಐಟಿ, ಐಐಎಂಗಳಲ್ಲಿ ಅಧ್ಯಯನ ಭಾಷೆಯನ್ನು ಹಿಂದಿಯನ್ನಾಗಿಸುವ ಅಧಿಕೃತ ಭಾಷಾ ಸಂಸದೀಯ ಸಮಿತಿಯ ಪ್ರಸ್ತಾಪಗಳನ್ನು ಕೇರಳ ಸರ್ಕಾರ ಒಪ್ಪಲು ಸಾದ್ಯವೇ ಇಲ್ಲ ಎಂದು ತಿಳಿಸಿದ್ದರು.

ಇನ್ನೂ ತೆಲಂಗಾಣ ಮಾಹಿತಿ ತಂತ್ರಜ್ಞಾನ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಕೆ.ಟಿ.ರಾಮರಾವ್ ಅವರು ಕೂಡ ಹಿಂದಿ ಹೇರಿಕೆ ವಿರೋಧಿಸಿ ನರೇಂದ್ರ ಮೋದಿಯವರಿಗೆ ಪತ್ರ ಬೆರಿದಿದ್ದು, ಶಿಫಾರಸು ಸಂವಿಧಾನ ಬಾಹಿರವಾಗಿದ್ದು, ಕೂಡಲೇ ಹಿಂಪಡೆಯಬೇಕು ಎಂದು ರಾಮರಾವ್ ಒತ್ತಾಯಿಸಿದ್ದರು. ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ, ಪ್ರಸ್ತುತವಾಗಿ ಪರೋಕ್ಷವಾಗಿ ಹಿಂದಿ ಹೇರಿಕೆಯು ಕೋಟ್ಯಂತರ ಯುವಕರ ಜೀವನವನ್ನು ಹೇಗೆ ಹಾಳುಮಾಡುತ್ತಿದೆ ಎಂಬುದರ ಕುರಿತು ವಿವರಿಸಲಾಗಿದ್ದು, ಕೇಂದ್ರೀಯ ಉದ್ಯೋಗಗಳಿಗೆ ನೀಡುವ ಅರ್ಹತಾ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಶ್ನೆಗಳು ಇರುವುದರಿಂದ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅಮಿತ್‌ ಶಾ ಸಮಿತಿ ನೀಡಿರುವ ಶಿಪಾರಸು ʼಪ್ರಸ್ತುತ ಮತ್ತು ಭವಿಷ್ಯದʼ ಪೀಳಿಗೆಯ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದರು.

ಕರ್ನಾಟಕಲ್ಲಿ ಇರುವ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ಜವಾಬ್ದಾರಿ ಸರ್ಕಾರವೇ ಆಗಿದ್ದಿದ್ದರೆ ಈ ವಿಷಯಗಳ ಕುರಿತು ತುಟಿ ಬಿಚ್ಚದೇ ಕುಳಿತುಕೊಳ್ಳಲು ಸಾಧ್ಯವಿತ್ತೆ? ಅಮಿತ್‌ಷಾ ನೀತಿ ಕನ್ನಡಿಗರಿಗೆ ಎಂತಹ ಮಾರಕ ನೀತಿ ಎಂಬುದು ತಿಳಿಯಲಾರದ ದಡ್ಡರೇ ನಮ್ಮ ಮುಖ್ಯಮಂತ್ರಿ?

ಹಿಂದಿಯ ಗುಲಾಮಗಿರಿಗೆ ತಳ್ಳುವ ಕೇಂದ್ರದ ಈ ನಡೆ ಕನ್ನಡಿಗರಿಗೆ ದೊಡ್ಡ ಅನ್ಯಾಯವಲ್ಲವೇ? ಲಕ್ಷಾಂತರ ಉದ್ಯೋಗಗಳಿಂದ ಕನ್ನಡಿಗರನ್ನು ಕೇವಲ ಭಾಷೆಯ ಕಾರಣಕ್ಕಾಗಿ ವಂಚಿಸುತ್ತಿರುವ ಇಂತಹ ಹುನ್ನಾರಗಳ ಬಗ್ಗೆ ಒಂದು ಸರ್ಕಾರವಾಗಿ ಯಾವುದೇ ನಿಲುವು ತಳೆಯದಿದ್ದರೆ ಅದಕ್ಕಿಂತ ಜನದ್ರೋಹ ಯಾವುದಿದೆ?

370ನೇ ವಿಧಿ ರದ್ದಿನ ನಂತರ ಭದ್ರತಾ ಪಡೆಗಳ ಸಾವು 64%ರಷ್ಟು ಇಳಿಕೆ: ಅಮಿತ್‌ ಶಾ
ಹರಿಯಾಣ: ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಭಯೋತ್ಪಾದಕ ಚಟುವಟಿಕೆಗಳು, ಸಾವು ನೋವುಗಳು ಸಾಕಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ

ಫೆಬ್ರವರಿ 6, 2020ರಲ್ಲಿ ಜಮ್ಮು ಮತ್ತು ಕಾಶ್ಮೀರ ಜನತೆಯ ಮೇಲಿನ ನಂಬಿಕೆಯಿಟ್ಟು ಸರ್ಕಾರ 370 ನೇ ರದ್ದುಗೊಳಿಸಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಭಯೋತ್ಪಾದಕ ಚಟುವಟಿಕೆಗಳಲ್ಲಿ 34% ಇಳಿಕೆಯಾಗಿದೆ. ಭದ್ರತಾ ಪಡೆಗಳ ಸಾವು  64%ರಷ್ಟು ಕಡಿಮೆಯಾಗಿದೆ. ಮತ್ತು ನಾಗರಿಕರ ಸಾವಿನಲ್ಲಿ 90% ಇಳಿಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹರಿಯಾಣದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ

ಏನಿದು 370 ವಿಧಿ? : 1947ರಲ್ಲಿ ಭಾರತ ಮತ್ತು ಪಾಕ್ ಸ್ವತಂತ್ರ ರಾಷ್ಟ್ರಗಳಾಗಿ ರೂಪಪಡೆದಿದ್ದರೂ ಕಾಶ್ಮೀರದ ರಾಜ ಹರಿಸಿಂಗ್ ಮಾತ್ರ ಯಾವ ರಾಷ್ಟ್ರದ ಜೊತೆಗೆ ಒಂದಾಗದೆ ಸ್ವತಂತ್ರ್ಯವಾಗಿ ಉಳಿಯುವ ಬಯಕೆಯನ್ನು ಹೊಂದಿದ್ದರು. ಆದರೆ, ಕಣಿವೆ ರಾಜ್ಯದ ಮೇಲೆ 1947ರಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದ್ದ ಸಂದರ್ಭದಲ್ಲಿ ರಾಜ ಹರಿಸಿಂಗ್ ಭಾರತದ ಸಹಕಾರ ಕೇಳುತ್ತಾರೆ. ಅಲ್ಲದೆ ಭಾರತದ ಜೊತೆ ವಿಲೀನಗೊಳ್ಳಲು ಒಪ್ಪಿ ಕೆಲವು ಷರತ್ತುಗಳನ್ನು ಮುಂದಿಡುತ್ತಾನೆ. ಹೀಗೆ ಹುಟ್ಟುಪಡೆದದ್ದೇ  370 ವಿಧಿ.

ಗುಜರಾತ್‌ ಚುನಾವಣೆ: ಬಿಜೆಪಿಯ ಪಾಲಿಗೆ ಕಾಮಧೇನುವಾಯಿತೇ ಅಮೂಲ್??
ಗುಜಾರಾತ್: ಬಿಜೆಪಿಯ‌ ಚುನಾವಣಾ ಆಟಕ್ಕೆ ದೇಶದ ದೊಡ್ಡ ಹಾಲು ಸಹಕಾರ ಮಂಡಳಿಯಾದ ಅಮೂಲ್‌ ಕೂಡ ದಾಳವಾಗಿದೆಯೇ ಎನ್ನುವ ಪ್ರಶ್ನೆ ಜನರಲ್ಲಿ ಮೂಡತೊಡಗಿದೆ. ಈ ವರ್ಷದಲ್ಲಿ ಮೂರನೇ ಸಲ ಹಾಲಿನ ಬೆಲೆ ಏರಿಸಿರುವ ಅಮೂಲ್‌ ಎಂದಿನಂತೆ ಎಲ್ಲೆಡೆ ಬೆಲೆಯೇರಿಸಿದೆ ತನ್ನ ಬೆಲೆಯೇರಿಕೆಯ ಪಟ್ಟಿಯಿಂದ ಇನ್ನು ಎರಡು-ಮೂರು ತಿಂಗಳುಗಳಲ್ಲಿ ಚುನಾವಣೆ ಎದುರಿಸಲಿರುವ ಗುಜರಾತ್‌ ರಾಜ್ಯವನ್ನು ಹೊರಗಿಟ್ಟಿರುವುದು ಅನುಮಾನಸ್ಪದವಾಗಿದ್ದು. ಸರಕಾರಿ ಸಂಸ್ಥೆಗಳನ್ನು ತನ್ನ ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದ ಬಿಜೆಪಿ ಈಗ ಸಹಕಾರಿ ಸಂಸ್ಥೆಗಳನ್ನೂ ಬಳಸಿಕೊಳ್ಳತೊಡಗಿದೆಯೇ ಎನ್ನುವ ಅನುಮಾನ ದಟ್ಟವಾಗಿ ಕಾಡತೊಡಗಿದೆ.

ಬರಲಿರುವ ದೀಪಾವಳಿಯನ್ನು ಗಮನದಲ್ಲಿಟ್ಟುಕೊಂಡು Gujarat Cooperative Milk Marketing Federation (GCMMF) ತನ್ನ ಹಾಲಿನ ಬೆಲೆಯನ್ನು ಗುಜರಾತ್‌ ಹೊರತುಪಡಿಸಿ ಎಲ್ಲೆಡೆ ಏರಿಸುವ ತೀರ್ಮಾನ ತೆಗೆದುಕೊಂಡಿತ್ತು. ಅದಾಗ್ಯೂ ಈ ಬೆಲೆಯೇರಿಕೆಯು ಅಮೂಲ್‌ ಗೋಲ್ಡ್ , ಮತ್ತು ಎಮ್ಮೆಯ ಹಾಲನ್ನು ಮಾತ್ರ ಒಳಗೊಂಡಿರುತ್ತದೆ ಎಂದು ಮೂಲಗಳು ಹೇಳಿವೆ.

ಈ ಬೆಲೆಯೇರಿಕೆಯಿಂದ ಚುನಾವಣೆ ಎದುರಿಸಲಿರುವ ಗುಜರಾತ್ ಏಕೆ ಹೊರತಾಗಿದೆ‌ ಎಂದು GCMMF ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಯನ್ ಮೆಹ್ತಾ “ಇದು ಆಡಳಿತದ ನಿರ್ಧಾರ ಮತ್ತು ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ.” ಎಂದು ಹೇಳಿದ್ದಾಗಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. GCMMF ವ್ಯವಸ್ಥಾಪಕ ನಿರ್ದೇಶಕ ಆರ್‌ಎಸ್ ಸೋಧಿ ಅವರು ಕರೆಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸಲಿಲ್ಲ ಎಂದೂ ಅದೇ ವರದಿ ಹೇಳಿದೆ.

ಪ್ರಸ್ತುತ ವಿಷಯಗಳ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ದಿ ದೇಶ್‌ ಭಕ್ತ್‌ ಎನ್ನುವ ಟ್ವಿಟರ್‌ ಹ್ಯಾಂಡ್‌ ಶೇರ್‌ ಮಾಡಿರುವ ಒಂದು ವ್ಯಂಗ್ಯಾತ್ಮಕ ಚಿತ್ರ

ಕೇಂದ್ರ ಮತ್ತು ರಾಜ್ಯದ ಒಂದೊಂದೇ ಸ್ವತಂತ್ರ ಸಂಸ್ಥೆಗಳನ್ನು ಬಿಜೆಪಿ ತನ್ನ ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಆತಂಕದ ವಿಷಯ ಎಂದು ಹಲವು ತಜ್ಞರು ಹಿಂದಿನಿಂದಲೂ ಆತಂಕ ವ್ಯಕ್ತಪಡಿಸುತ್ತಲೇ ಬಂದಿದ್ದು, ಈಗ ಆ ಪಟ್ಟಿಗೆ ಇನ್ನೊಂದು ಸಂಸ್ಥೆ ಸೇರಿಕೊಂಡಂತಾಗಿದೆ.

ಇತ್ತೀಚಿನ ದಿನಗಳಲ್ಲಿ ಬೆಲೆಯೇರಿಕೆ ಮತ್ತು ನಿರುದ್ಯೋಗ ದೇಶವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಯಾಗಿದೆ. ಇಂದು ಬೆಲೆಯೇರಿಕೆಯನ್ನು ಬಿಜೆಪಿ ಪರ ವಾದ ಮಂಡಿಸುವಂತಹ, ಆ ಪಕ್ಷದ ಕುರಿತು ಮೃದು ಧೋರಣೆಯನ್ನು ಹೊಂದಿರುವಂತಹ ಮಾಧ್ಯಮಗಳೂ ಚರ್ಚಿಸುತ್ತಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಈ ಹಿನ್ನೆಲೆಯಲ್ಲಿ ಗುಜಾರಾತಿನ ಅಮೂಲ್‌ ಸಂಸ್ಥೆ ತನ್ನ ಬೆಲೆಯೇರಿಕೆಯ ಪಟ್ಟಿಯಿಂದ ಗುಜರಾತನ್ನು ಹೊರಗಿಟ್ಟಿದ್ದನ್ನು ನೋಡಿ ಹಲವು ಜನರ ಹುಬ್ಬೇರಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ.