anand sing – Peepal Media

ವಿಜಯನಗರದಲ್ಲಿ ಪಿಕೆ ಹಳ್ಳಿ ಹೋಬಳಿಯಾಗಿ ಪರಿವರ್ತನೆ: ಸಿಎಂ
ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯ ಡಾ. ಪುನಿತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜನ ಸಂಕಲ್ಪ ಯಾತ್ರೆ ಯನ್ನು ಉದ್ಘಾಟಿಸಿ ಮಾತನಾಡಿದರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಿಕೆ ಹಳ್ಳಿಯನ್ನು ಹೋಬಳಿ ಯಾಗಿ ಪರಿವರ್ತಿಸಿ ಆದೇಶ ಹೊರಡಿಸಲಾಗುವುದು ಎಂದು  ತಿಳಿಸಿದರು.

ಜಿಲ್ಲೆಯ ಮರಿಯಮ್ಮನಹಳ್ಳಿ ಕುಡಿಯುವ ನೀರಿನ ಯೋಜನೆ ಡಿಪಿಆರ್ ಆಗಿದ್ದು, ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಎರಡೂ ಜಿಲ್ಲೆಯಿಂದ 10 ಸೀಟು ಗೆಲ್ಲಿಸಬೇಕು. ಎರಡು‌ ಜಿಲ್ಲೆಗಳಿಗೆ ಸುಪ್ರೀಂ ಕೊರ್ಟ್ ಆದೇಶದಿಂದ 20 ಸಾವಿರ ಕೋಟಿ ಬಂದಿದ್ದು, ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಮಾಡಿ, ಮಾದರಿ ಜಿಲ್ಲೆಗಳನ್ನಾಗಿ ಮಾಡಲಾಗುವುದು. ವಿಜಯನಗರ ಗತವೈಭವವನ್ನು ಪುನರ್ ಸ್ಥಾಪಿಸಲು ಭಾಜಪ ಸರ್ಕಾರ ಶ್ರಮವಹಿಸಲಿದ್ದು, ಜನರ ಆಶೀರ್ವಾದವಿರಲಿ ಎಂದು ತಿಳಿಸಿದರು.

ಆನಂದ ಸಿಂಗ್ ಅವರು ಹೃದಯ ಶ್ರೀಮಂತಿಕೆಯುಳ್ಳವರು. ಎಲ್ಲ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ‌. ಜಿಲ್ಲೆಯ ರಚನೆಗೆ ಕಾರಣೀಭೂತರಾಗಿದ್ದಾರೆ. ಜಿಲ್ಲೆಯಲ್ಲಿ ಅವರ ನಾಯಕತ್ವದಲ್ಲಿ ಎಲ್ಲರೂ ಮುಂದುವರೆಯಬೇಕು.75 ಸಮುದಾಯಗಳ ನಾಯಕರನ್ನು ಈ ವೇದಿಕೆಯಲ್ಲಿ ಒಗ್ಗೂಡಿಸಿದ್ದಾರೆ. ಆನಂದ್ ಸಿಂಗ್ ಹಾಗೂ ರಾಮುಲು ಅವರ ಸಂಘಟನಾ ಶಕ್ತಿ ಇದೆ. ಸೋಮಲಿಂಗಪ್ಪ, ಗೋಪಾಲಕೃಷ್ಣ, ಸೋಮಶೇಖರ್ ರೆಡ್ಡಿ ಎಲ್ಲರು ಇದ್ದಾರೆ. ಈ ಭಾಗದ ಜನರ ಒಳಿತಿಗಾಗಿ ಎಲ್ಲರೂ ಶ್ರಮಿಸುತ್ತಿದ್ದಾರೆ ಎಂದರು.

ಎಸ್ಸಿ ಎಸ್ಟಿ ಸಮುದಾಯವರಿಗೆ ನ್ಯಾಯ ಕೊಡಿಸುತ್ತೇನೆ: ಸಿಎಂ ಬೊಮ್ಮಾಯಿ
ಹೊಸಪೇಟೆ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯವರ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಈ ಸಮುದಾಯಗಳಿಗೆ ನ್ಯಾಯ ಕೊಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಡಾ. ಪುನಿತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜನ ಸಂಕಲ್ಪ ಯಾತ್ರೆ ಯನ್ನು ಉದ್ಘಾಟಿಸಿ ಮಾತನಾಡಿದರು.

ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಭಯವಿಲ್ಲ. ನಮ್ಮ ಸರ್ಕಾರ ರೈತ ಕೂಲಿಕಾರ್ಮಿಕರಿಗೆ, ನೇಕಾರರು, ಮೀನುಗಾರರು, ಟ್ಯಾಕ್ಸಿ ಹಾಗೂ ಆಟೋಚಾಲಕರ ಮಕ್ಕಳಿಗೂ ವಿದ್ಯಾನಿಧಿ ಕೊಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಬಡಿಗರು, ಕಮ್ಮಾರರು, ವಿಶ್ವಕರ್ಮರು, ಮೇದಾರರು ಸೇರಿದಂತೆ ಕುಶಲಕರ್ಮಿಗಳಿಗೆ 50 ಸಾವಿರ ಧನಸಹಾಯ ನೀಡಲಾಗುತ್ತಿದೆ. ಜಗಜೀವನರಾಂ ಹೆಸರಿನಲ್ಲಿ 100 ಯುವಕರಿಗೆ ಸ್ವಯಂ ಉದ್ಯೋಗ, ಸ್ತ್ರೀಶಕ್ತಿ ಸಂಘಗಳಿಗೆ ಸ್ತ್ರೀಸಾಮರ್ಥ್ಯ ಯೋಜನೆಯಡಿ 5 ಲಕ್ಷ ಮಹಿಳೆಯರಿಗೆ ಉದ್ಯೋಗ, ಯುವಕರ ಸಂಘಕ್ಕೆ ಆರ್ಥಿಕ ನೆರವು ನೀಡಿ, ಉತ್ಪಾದನೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ಯೋಜನೆಯಡಿ 5 ಲಕ್ಷ ಯುವಕರಿಗೆ ಉದ್ಯೋಗ ದೊರೆಯಲಿದೆ.

ಈಗ ಜನರಿಗೆ ಭಯವಿಲ್ಲ:

ದೀನದಲಿತರು, ವಿದ್ಯಾರ್ಥಿಗಳು, ಮಹಿಳೆಯರು, ಯುವಕರಿಗೆ ಭಯವಿಲ್ಲ. ಎಸ್ಸಿ ಎಸ್ಟಿ ಸಮುದಾಯವರಿಗೆ ಮೀಸಲಾತಿ ಹೆಚ್ಚಳ ಮಾಡುವ ಬೇಡಿಕೆ ಇದ್ದರೂ ನೀವು ನಿರ್ಧಾರ ಮಾಡಿಲ್ಲ. ನಾವು ನಿರ್ಧಾರ ಮಾಡಿದರೆ ಅದನ್ನು ಪ್ರಶ್ನಿಸುತ್ತೀರಾ. ನಮಗೂ ಕಾನೂನು ಗೊತ್ತಿದೆ.‌ಈ ಸಮುದಾಯಕ್ಕೆ ನ್ಯಾಯ ಕೊಡಿಸಲು ನಾನು ನಿಲ್ಲುತ್ತೇನೆ‌ ಎಂಬ ವಚನ ಕೊಡುತ್ತೇನೆ.
ಬಿಜೆಪಿ ಸರ್ಕಾರದಲ್ಲಿ ದೀನ ದಲಿತರು ಭಯಭೀತರಾಗಿದ್ದಾರೆ‌. ಅಂತ ಹೇಳಿದ್ದಿರಿ, ಆದರೆ ನೀವು ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಪ್ರಯತ್ನ ಮಾಡಿದ್ದಿರಿ ಆಗ ಜನರಿಗೆ ಭಯ ಇತ್ತು. ನಾವು ವೀರಶೈವ ಲಿಂಗಾಯತರನ್ನು ಒಂದಾಗುವಂತೆ ಮಾಡಿದ್ದೇವೆ.
ನಿಮ್ಮ ಕಾಲದಲ್ಲಿ ಕೊಲೆಗಳು ನಡೆಯುತ್ತಿದ್ದವು ಜನರು ಭಯಭೀತರಾಗಿದ್ದರು‌ . ಆ ಭಯ ಈಗ ಇಲ್ಲ ಎಂದರು.

ಏಕ್ ಭಾರತ ಶ್ರೇಷ್ಟ ಭಾರತ:

ಪ್ರಧಾನಿ ನರೇಂದ್ರ ಮೊದಿಯವರು ಏಕ್ ಭಾರತ ಶ್ರೇಷ್ಟ ಭಾರತ ಎಂದು ಹೇಳಿದ್ದಾರೆ‌. ಪ್ರಧಾನಿಮೋದಿಯವರ ನಾಯಕತ್ವದಲ್ಲಿ ದೇಶ ಮುನ್ನಡೆಯಲು ಜನ ಬಯಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು, ನವಕರ್ನಾಟಕ ನಿರ್ಮಾಣಕ್ಕಾಗಿ ನಿಮ್ಮೆಲ್ಲರ ಆಶೀರ್ವಾದವನ್ನು ಕೋರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಶಶಿಕಲಾ ಜೊಲ್ಲೆ, ಆನಂದ್ ಸಿಂಗ್, ಗೋವಿಂದ್ ಕಾರಜೋಳ, ಶ್ರೀರಾಮುಲು, ಹಾಲಪ್ಪ ಆಚಾರ್, ಸಂಸದರಾದ ವೈ.ದೇವೇಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಶಶೀಲ್ ನಮೋಶಿ, ಶಾಸಕರಾದ ರಾಜು ಗೌಡ, ಬಸವರಾಜ ದಡೆಸುಗೂರು, ಬಿಜೆಪಿ ಬಳ್ಳಾರಿ ವಿಭಾಗ ಪ್ರಭಾರಿಗಳು ಸಿದ್ದೇಶ್ ಯಾದವ್, ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಸಿಎಂ ಬೊಮ್ಮಾಯಿ

ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಸಿಎಂ ಬೊಮ್ಮಾಯಿ
ಹೊಸಪೇಟೆ: ಕಾಂಗ್ರೆಸ್ ನವರಿಗೆ ರಾಜಕೀಯವಾಗಿ ಭಯವಿದೆ. ಮಾಡಿದುಣ್ಣೋ ಮಹಾರಾಯ ಎನ್ನುವಂತೆ, ನಿಮಗೆ ಅಧಿಕಾರ ಬಂದಾಗ, ಜನರನ್ನು ಮರೆತಿರಿ, ಈಗ ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ವಿಜಯನಗರ ಜಿಲ್ಲೆ, ಹೊಸಪೇಟೆಯ ಡಾ. ಪುನಿತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜನ ಸಂಕಲ್ಪ ಯಾತ್ರೆ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೀನದಲಿತರು, ವಿದ್ಯಾರ್ಥಿಗಳು, ಮಹಿಳೆಯರು, ಯುವಕರ ಭವಿಷ್ಯ ಭದ್ರಗೊಳಿಸಲಾಗಿದ್ದು ಅವರಿಗೆ ಯಾವುದೇ ಭಯವಿಲ್ಲ. ಆದರೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರಿಗೆ ಭಯ ಇದೆ ಎಂದರು.

ಕಾಂಗ್ರೆಸ್ ನ ಭ್ರಷ್ಟಾಚಾರ ಬಣ್ಣ ಬಯಲಾಗುತ್ತದೆ:

ನಿಮ್ಮ ಕಾಲದಲ್ಲಿ ನಡೆದ ಭ್ರಷ್ಟಾಚಾರ ಮುಚ್ಚಿ ಹಾಕಲು ಎಸಿಬಿ ರಚನೆ ಮಾಡಿ ಲೋಕಾಯುಕ್ತ ಮುಚ್ಚುವ ಕೆಲಸ ಮಾಡಿದ್ದಿರಿ.ಈಗ ‌ಲೋಕಾಯುಕ್ತ ಬಲಗೊಂಡಿದೆ. ನೀವು ಮಾಡಿರುವ ಎಲ್ಲ ಹಗರಣಗಳು ಬೆಳಕಿಗೆ ಬರುತ್ತಿವೆ. ನಿಮ್ಮ ವಿರುದ್ದದ ಪ್ರಕರಣಗಳ ತನಿಖೆಯಾಗುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ. ಆಗ ಕಾಂಗ್ರೆಸ್ ನ ಭ್ರಷ್ಟಾಚಾರದ ಬಣ್ಣ ಬಯಲಾಗುತ್ತದೆ ಎಂದರು.

ರಾಜಾಹುಲಿಯ ಘರ್ಜನೆಗೆ ಕಾಂಗ್ರೆಸ್ ತತ್ತರ:

ನಿನ್ನೆ ನಮ್ಮ ರಾಜಾಹುಲಿಯ ಘರ್ಜನೆಗೆ ಕಾಂಗ್ರೆಸ್ ನವರು ತತ್ತರಿಸಿದ್ದಾರೆ‌ ಎಂದರು. ಅದಕ್ಕೆ ಯಡಿಯೂರಪ್ಪ ನವರ ಬಗ್ಗೆ ಒಂದು ಮಾತನಾಡಿದ್ದಾರೆ‌ ಯಡಿಯೂರಪ್ಪ ಅವರಿಗೆ ಅರಳು ಮರಳು ಅಂತ ಹೇಳಿದ್ದಾರೆ. ಆದರೆ ರಾಜಾ ಹುಲಿ ಯಾವುದಕ್ಕೂ ಜಗ್ಗುವುದಿಲ್ಲ ಬಗ್ಗುವುದಿಲ್ಲ. ಅವರನ್ನು ಹತ್ತಿಕ್ಕಲು ಸಾಕಷ್ಟು ಪ್ರಯತ್ನ ಮಾಡಿದ್ದೀರಿ, ಅವರನ್ನು ಅಧಿಕಾರದಿಂದ ದೂರ ಇಡಲು ಅವರ ಮೇಲೆ ಸುಳ್ಳು ಕೇಸ್ ಹಾಕಿಸಿದಿರಿ. ಅವರು ಮತ್ತೆ ಪುಟಿದೆದ್ದು ಮತ್ತೆ ಸಿಎಂ ಆದರು ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರಿಗೆ ಅರಳು ಮರಳು:

ಮೋದಿಯವರು ನೆಹರು ಅವರ ಪಾದದ ಧೂಳಿನ ಸಮಾನಾನ ಅಂತ ಕೇಳಿದ್ದಾರೆ‌ ನಾವೂ ಕೇಳಬಹುದು ನೆಹರೂ ಗಾಂಧೀಜಿ ಪಾದದ ಧೂಳಿಗೆ ಸಮಾನಾನಾ . ಕೊರೊನಾ ಸಂದರ್ಭದಲ್ಲಿ ಇಡೀ ದೇಶಕ್ಕೆ ಲಸಿಕೆ ಕೊಡಿಸಿ, ವಿಶ್ವವೇ ಮೆಚ್ಚುವ ಕೆಲಸ ಮಾಡಿದ್ದಾರೆ. ಅನೇಕ ದೇಶಗಳಿಗೆ ಲಸಿಕೆ ನೀಡಿದ್ದಾರೆ‌ ಉಜ್ವಲ ಯೋಜನೆ ಬೇಟಿ ಬಚಾವೋ ಬೇಟಿ ಪಢಾವೋ ಅಂತ ಯೋಜನೆ ಮಾಡಿದರು. ಕಿಸಾನ್ ಸಮ್ಮಾನ ಯೋಜನೆ ಜಾರಿಗೆ ತಂದರು. ಇಡೀ ವಿಶ್ವವೇ ಆರ್ಥಿಕ ಹಿಂಜರಿತ ಕಾಣುತ್ತಿದೆ ಆದರೆ ಭಾರತ ಮಾತ್ರ ಆರ್ಥಿಕವಾಗಿ ಸದೃಢವಾಗಿದೆ. ಸಿದ್ದರಾಮಯ್ಯ ನವರೇ ನಿಮಗೆ ಅರಳು ಮರಳಾಗಿದೆ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಹೆಸರೆತ್ತದೆ ಐದು ನಿಮಿಷ ಭಾಷಣ ಮಾಡಿ : ಬಿಜೆಪಿ ಮುಖಂಡರಿಗೆ ಸಿದ್ದು ಸವಾಲು

ಅಧಿಕಾರಕ್ಕಾಗಿ ದೇಶ ಒಡೆದ ಕಾಂಗ್ರೆಸ್:

ರಾಹುಲ್ ಗಾಂಧಿಗೆ ಡಿಕೆಶಿ ಸಿದ್ದರಾಮಯ್ಯ ಅವರನ್ನು ಜೋಡಿಸುವುದರಲ್ಲಿ ಸುಸ್ತಾಗಿ ಹೋಗಿದ್ದಾರೆ‌. ಎರಡು ದೇಶದ ಕಲ್ಪನೆ ಮೌಂಟ್ ಬ್ಯಾಟನ್ ಹಾಗೂ ಮಹಮದ್ ಅಲಿ ಜಿನ್ನಾ ಇಟ್ಟರು.‌ ಅವರ ಮಾತಿಗೆ ಒಪ್ಪಿ ಅಧಿಕಾರದ ಆಸೆಗೆ ಗಾಂಧಿಜಿ ಮಾತು ದಿಕ್ಕರಿಸಿ ದೇಶ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿತು. ನಿಮ್ಮ ಅಧಿಕಾರಕ್ಕಾಗಿ ದೇಶವನ್ನು ಒಡೆದು, ಈಗ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದೀರಿ. ಕಲಿಸ್ತಾನಕ್ಕೆ ಬೆಂಬಲ ಕೊಟ್ಟವರು ಇಂದಿರಾಗಾಂಧಿ , ತಮಿಳುನಾಡಿನಲ್ಲಿ ಎಲ್.ಟಿ.ಟಿ.ಇ ಗೆ ಬೆಂಬಲ ಕೊಟ್ಡವರು ಕಾಂಗ್ರೆಸ್ ನವರು, ನಿಮ್ಮ ಸ್ವಾರ್ಥಕ್ಕಾಗಿ ದೇಶದ ಹೃದಯದ ಮೇಲೆ ಗಾಯದ ಬರೆಗಳನ್ನು ಹಾಕಿದಿರಿ ಎಂದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಶಶಿಕಲಾ ಜೊಲ್ಲೆ, ಆನಂದ್ ಸಿಂಗ್, ಗೋವಿಂದ್ ಕಾರಜೋಳ, ಶ್ರೀರಾಮುಲು, ಹಾಲಪ್ಪ ಆಚಾರ್, ಸಂಸದರಾದ ವೈ.ದೇವೇಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಶಶೀಲ್ ನಮೋಶಿ, ಶಾಸಕರಾದ ರಾಜು ಗೌಡ, ಬಸವರಾಜ ದಡೆಸುಗೂರು, ಬಿಜೆಪಿ ಬಳ್ಳಾರಿ ವಿಭಾಗ ಪ್ರಭಾರಿಗಳು ಸಿದ್ದೇಶ್ ಯಾದವ್,ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮತ್ತಿತರರು ಹಾಜರಿದ್ದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದಯ ಬಿಜೆಪಿಯ ಮೂಲ ಸಿದ್ಧಾಂತ: ಸಿಎಂ ಬೊಮ್ಮಾಯಿ
ಹೊಸಪೇಟೆ: ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದಯದವೇ BJP ಸರ್ಕಾರ ಮೂಲ ಸಿದ್ಧಾಂತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹೊಸಪೇಟೆಯಲ್ಲಿ ಏರ್ಪಡಿಸಲಾಗಿದ್ದ ಜನಸಂಕಲ್ಪಯಾತ್ರೆ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಎಸ್ ಸಿ, ಎಸ್ ಟಿ ಮೀಸಲಾತಿ ಅವಧಿಯನ್ನು ವಿಸ್ತರಣೆ ಮಾಡುವ ದಿಟ್ಟ ನಿಲುವನ್ನು ತೆಗೆದುಕೊಂಡರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದಯದ ಆಶಯದಂತೆ ದೀನದಯಾಳ್ ಉಪಾಧ್ಯಾಯ ಅವರು ಅಂತ್ಯೋದಯ ಕಾರ್ಯಕ್ರಮ ಕೈಗೊಂಡರು. ಅಂತ್ಯೋದಯ ಮೂಲ ಸಿದ್ಧಾಂತವೇ ಬಿಜೆಪಿಯದ್ದು. ಸಿದ್ದರಾಮಯ್ಯ ಅವರಿಗೆ ಇದು ಗೊತ್ತಿಲ್ಲ ಎಂದರು.

ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ ಕ್ರಾಂತಿಕಾರಿ ಹೆಜ್ಜೆ:

ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದ್ದೇವೆ. ಮುಂದಿನ ಹೆಜ್ಜೆಗಳನ್ನು ಕೂಡ ಇಡುತ್ತೇವೆ. ಇದರ ಬಗ್ಗೆ ಸಂಪೂರ್ಣ ಅರಿವಿದೆ. 50 ವರ್ಷ ಈ ನಿರ್ಣಯ ತೆಗೆದುಕೊಳ್ಳಲು ಆಗಿರಲಿಲ್ಲ. ಈಗ ಮುಂದಿನ ಪ್ರಕ್ರಿಯೆಗೆ .ಇಂದಿನ ನಿರ್ಣಯ ಕಾರಣವಾಗುತ್ತದೆ. ಕಾನೂನು ತಜ್ಞರೊಂದಿಗೆ ನಾವು ಚರ್ಚೆ ನಡೆಸಿದ್ದು, ಇದನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದರು

ಮೀಸಲಾತಿ ಹೆಚ್ಚಳ ಸಂವಿಧಾನಬದ್ಧ:

ಶಾಸಕ ಅರವಿಂದ ಬೆಲ್ಲದ್ ಅವರ ಧರ್ಮಾಧಾರಿತ ಮೀಸಲಾತಿ ಕಡಿತಗೊಳಿಸಬೇಕೆಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಏನೇ ಮಾಡಿದರೂ ಸಂವಿಧಾನಬದ್ಧವಾಗಿ ಮಾಡುತ್ತೇವೆ. ಅದನ್ನು ಬಿಟ್ಟು ಏನೂ ಮಾಡಲಾಗುವುದಿಲ್ಲ. ಹಲವಾರು ಜನ ಹಲವಾರು ವಿಚಾರಗಳನ್ನು ಹೇಳುತ್ತಾರೆ. ಆದರೆ ಯಾವುದಾದರೂ ಒಂದು ವರದಿ , ಚಿಂತನೆ , ಅಂಕಿಅಂಶಗಳ ಆಧಾರದ ಮೇಲೆ ಮಾಡಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸುವಾಗಲೂ ನ್ಯಾ. ನಾಗಮೋಹನ್ ದಾಸ್ ಅವರ ವರದಿ ಅಧ್ಯಯನ ಮಾಡಿ ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ವೈಯಕ್ತಿಕ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

‘ಭಾರತ್ ತೋಡೋ’ ಯಾತ್ರೆಗೂ ನಮಗೂ ಸಂಬಂಧವಿಲ್ಲ:

ಜನಸಂಕಲ್ಪ ಯಾತ್ರೆಯ ತಯಾರಿ ಒಂದೂವರೆ ತಿಂಗಳ ಮುನ್ನವೇ ಆಗಿತ್ತು. ಮಳೆ ಬಂದಿದ್ದರಿಂದ ಸ್ವಲ್ಪ ಮುಂದೂಡಿಕೆಯಾಯಿತು. ಅಷ್ಟು ಬಿಟ್ಟರೆ, ‘ಭಾರತ್ ತೋಡೋ’ ಯಾತ್ರೆಗೂ ನಮಗೂ ಸಂಬಂಧವಿಲ್ಲ ಎಂದರು.

ಕಾಂಗ್ರೆಸ್ ನವರ ಎಸ್ ಸಿ, ಎಸ್ ಟಿ ವಿರೋಧಿ ಧೋರಣೆ:

ಮೀಸಲಾತಿ ಹೆಚ್ಚಳದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಪ್ರಿಯಾಂಕ ಖರ್ಗೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 50 ವರ್ಷದ ಬೇಡಿಕೆಯನ್ನು ಅವರು ಈಡೇರಿಸಲಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಅವಧಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ಸಮಿತಿ ರಚಿಸಿದರು. ವರದಿಯನ್ನು ಅನುಷ್ಠಾನ ಮಾಡುವ ಶಕ್ತಿ ಭಾಜಪ ಸರ್ಕಾರಕ್ಕಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಏಳಿಗೆಗೆ ಬದ್ಧತೆ ಇದೆ. ಕಾಂಗ್ರೆಸ್ ಅವರು ಮೀಸಲಾತಿ ಬಗ್ಗೆ ಎತ್ತಿರುವ ಅಪಸ್ವರ, ಅವರ ಎಸ್ ಸಿ, ಎಸ್ ಟಿ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ತಿಳಿಸಿದರು.

ಜನಸಂಕಲ್ಪ ಯಾತ್ರೆಗೆ ಜನರ ಆಶೀರ್ವಾದವಿದೆ:

ರಾಯಚೂರು ಗ್ರಾಮಾಂತರ ಪ್ರದೇಶದಲ್ಲಿ ಜನಸಂಕಲ್ಪ ಯಾತ್ರೆ ಪ್ರಾರಂಭವಾಗಿದೆ. ಅಭೂತಪೂರ್ವ ಉತ್ಸಾಹ , ಬೆಂಬಲ ಮತ್ತು ಸಂಕಲ್ಪ ದೊರೆತಿದೆ. ಇಂದೂ ಕೂಡ ಬಹಳ ದೊಡ್ಡ ಪ್ರಮಾಣದ ಜನಸ್ತೋಮ ಸೇರಿ ಜನಸಂಕಲ್ಪ ಯಾತ್ರೆಗೆ ಆಶೀರ್ವಾದ ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಎಲ್ಲಾ ಕ್ಷೇತ್ರ ಗಳಿಗೂ ನಾವು ಭೇಟಿ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳು ನಮ್ಮ ರಾಜ್ಯ ಸರ್ಕಾರದ ಬಿ.ಎಸ್.ಯಡಿಯೂರಪ್ಪ ಹಾಗೂ ನನ್ನ ಸರ್ಕಾರದ ಕಾರ್ಯಕ್ರಮ ಗಳು ಎಲ್ಲವೂ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ. ಬರುವ ದಿನಗಳಲ್ಲಿ ಸರ್ಕಾರದ ಕಾರ್ಯಕ್ರಮ ಗಳನ್ನು ಮುಂದಿಟ್ಟು ಕೊಂಡು ನಾವು ಜನರ ಆಶೀರ್ವಾದವನ್ನು ಕೇಳುತ್ತಿದ್ದೇವೆ. ಜನರೂ ಕೂಡ ಸ್ಪಂದಿಸುತ್ತಿದ್ದಾರೆ. ಜನಸಂಕಲ್ಪ ಯಾತ್ರೆ ಅಂತಿಮವಾಗಿ ವಿಜಯಸಂಕಲ್ಪವಾಗಿ ಪೂರ್ಣ ಗೊಳ್ಳುವ ವಿಶ್ವಾಸವಿದೆ ಎಂದರು.

ವಿಜಯನಗರ: ದಲಿತರ ಆತಿಥ್ಯ ಸ್ವೀಕರಿಸಿದ ಸಿ.ಎಂ ಬೊಮ್ಮಾಯಿ
ಹೊಸಪೇಟೆ: ಇಂದು ಕಮಲಾಪುರ ಗ್ರಾಮದ ಅಂಬೇಡ್ಕರ್ ನಗರದ ಹಿರಾಳ ಕೊಲ್ಲಾರಪ್ಪ ಅವರ ಮನೆಯಲ್ಲಿ ಬೆಳಿಗ್ಗೆಯಿಂದಲೇ ಸಡಗರದ ವಾತಾವರಣ ಮನೆಮಾಡಿತ್ತು. ಅಡುಗೆ ಮನೆಯಲ್ಲಿ ಅವರ ಪುತ್ರಿಯರಾದ ಹುಲಿಗೆಮ್ಮ ಹಾಗೂ ರೇಣುಕಾ ಬೆಳಗಿನ ಉಪಾಹಾರದ ತಯಾರಿಯಲ್ಲಿ ನಿರತರು.

ಕೆಲವೇ ಕ್ಷಣದಲ್ಲಿ ಆಗಮಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಾಗಿ ಕೇಸರಿಬಾತ್, ಮಂಡಕ್ಕಿ ಒಗ್ಗರಣೆ, ಮಿರ್ಚಿ, ಉಪ್ಪಿಟ್ಟಿನ ತಯಾರಿಯಲ್ಲಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆನಂದ್ ಸಿಂಗ್ ಅವರೊಂದಿಗೆ ಆಗಮಿಸಿದ ಮುಖ್ಯಮಂತ್ರಿಗಳು ಕಮಲಾಪುರ ಅಂಬೇಡ್ಕರ್ ನಗರದ ದಲಿತ ಹಿರಾಳ ಕೊಲ್ಲಾರಪ್ಪ ಅವರ ಮನೆಯಲ್ಲಿ ಬೆಳಗಿನ ಉಪಾಹಾರ ಸವಿದರು.

ಕೊಲ್ಲಾರಪ್ಪ ಕುಟುಂಬದವರೊಂದಿಗೆ ಕುಶಲೋಪರಿ ವಿಚಾರಿಸಿ, ಕೊಲ್ಲಾರಪ್ಪ ನವರ ಮೊಮ್ಮಗಳು ಅಶ್ವಿನಿ ತಡಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ವಿಷಯ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು. ಅವಳ ಶಿಕ್ಷಣ, ಕಾಲೇಜು ವಾತಾವರಣ ಮೊದಲಾದ ಕುರಿತು ಮಾಹಿತಿ ಪಡೆದರು.

ಕಾಲೇಜು ಚೆನ್ನಾಗಿದೆ, ಆದರೆ ಮೆಸ್ ಬಿಲ್ ದುಬಾರಿ ಎಂದು ಆಕೆ ಮುಖ್ಯಮಂತ್ರಿಯವರ ಗಮನ ಸೆಳೆದಾಗ ಇದನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.

ಮನೆಯವರು ಪ್ರೀತಿಯಿಂದ ಉಣಬಡಿಸಿದ ಉಪಾಹಾರ, ಚಹಾ ಸೇವಿಸಿ ಮುಂದಿನ ಕಾರ್ಯಕ್ರಮಕ್ಕೆ ತೆರಳಿದರು.