anand theldumbde – Peepal Media

ʼಮಹಾಡ್ʼ ಮರೆಯಲಾಗದ ಮೊದಲ ದಲಿತ ಕ್ರಾಂತಿ
ಆನಂದ್‌ ತೇಲ್ತುಂಬ್ಡೆ (ಕನ್ನಡಕ್ಕೆ: ಅಬ್ದುಲ್‌ ರೆಹಮಾನ್‌ ಪಾಷ)

(ಮಹಾಡ್ ಚೌಡರ್ ಕೆರೆ ಚಳವಳಿ ದಲಿತ ಚಳವಳಿಯಲ್ಲಿ ಒಂದು ಮರೆಯಲಾಗದ ಅಧ್ಯಾಯ. ಈ ಕುರಿತು 2016ರಲ್ಲಿ ಇಂಗ್ಲಿಷ್‌ನಲ್ಲಿ ಡಾ. ಆನಂದ್ ತೇಲ್ತುಂಬ್ಡೆ ಅವರು  “Mahad: The Making of the First Dalit Revolt” ಎಂಬ ಮಹತ್ವದ ವಿವರವಾದ ವಿಶ್ಲೇಷಣಾತ್ಮಕ ಪುಸ್ತಕ ಬರೆದು ಪ್ರಕಟಿಸಿದರು. ಈ ಪುಸ್ತಕವನ್ನು ಹಿರಿಯ ಲೇಖಕ ಅಬ್ದುಲ್ ರೆಹಮಾನ್ ಪಾಷಾ ಅವರು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದು, ಕ್ರಿಯಾ ಮಾಧ್ಯಮ  ಪ್ರಕಟಿಸಿದೆ. )

‘‘ಮಹಾಡ್ ದಲಿತರಿಗೆ ಮುಂದಿನ ಹಾದಿಯನ್ನು ತೋರಿಸುವ ದೀಪಸ್ತಂಭವಾಗಿದೆ. ಮಹಾಡ್ ಚಳವಳಿಗೆ ಎರಡು ದಶಕಕ್ಕೂ ಮುನ್ನ ಕೇರಳದಲ್ಲಿ ನಡೆದ ಅಯ್ಯಂಕಾಳಿ ಚಳವಳಿಯ ಗೌರವಾರ್ಹ ಉದಾಹರಣೆ ಬಿಟ್ಟರೆ, ದಲಿತರು ಮೊಟ್ಟ ಮೊದಲ ಬಾರಿಗೆ ಜಾತಿ ಗುಲಾಮಗಿರಿಯ ನೊಗವನ್ನು ಕಿತ್ತೊಗೆದು ತಮ್ಮ ಮಾನವ ಹಕ್ಕುಗಳನ್ನು ನಿಶ್ಚಿತವಾಗಿ ಪ್ರತಿಪಾದಿಸುವ ತಮ್ಮ ನಿರ್ಧಾರವನ್ನು ತೋರಿದ್ದು ಮಹಾಡ್‌ನಲ್ಲಿಯೇ. ಜಾತಿಗೆ ಸಂಬಂಧಿಸಿದ ಕೆಲವು ಅಂಶಗಳನ್ನು ವಿರೋಧಿಸಿದ್ದು ಮತ್ತು ದೇವಸ್ಥಾನದಲ್ಲಿ ಪ್ರವೇಶದ ಹಕ್ಕು, ಸಾರ್ವಜನಿಕ ನೀರಿನ ಮೂಲಗಳಿಂದ ನೀರನ್ನು ಬಳಸುವ ಹಕ್ಕು ಇಂಥ ನಾಗರಿಕ ಹಕ್ಕುಗಳಿಗಾಗಿ ಇತರ ಆಂದೋಲನಗಳೂ ಮಹಾಡ್‌ಗಿಂತ ಮುಂಚೆ ನಡೆದಿದ್ದವು. ನಿಜವೆಂದರೆ, ಮಹಾಡ್ ಆಂದೋಲನದ ಒಂದು ಭಾಗವಾಗಿ, ಸ್ವಲ್ಪವೇ ಮುಂಚೆ ದಾಸ್‌ಗಾಂವ್‌ನಲ್ಲಿರುವ ಕ್ರಾಫೋರ್ಡ್ ಬಾವಿಯನ್ನು ಬಳಸುವಲ್ಲಿ ಮಾಡಿದ ಆಂದೋಲನವು ಆ ಹೊತ್ತಿಗೆ ಯಶಸ್ವಿಯಾಗಿತ್ತು.

ದಲಿತ ಚಳವಳಿಯ ಹೆಗ್ಗುರುತುಗಳಾಗಿ ಮತ್ತು ದಲಿತ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ನೀಡಿದ ಕೊಡುಗೆಗಾಗಿ ಅವೆಲ್ಲವೂ ಬಹಳ ಮಹತ್ವವನ್ನು ಪಡೆದಿವೆ. ಆದರೆ, ಅವಕ್ಕೂ ಮತ್ತು ಮಹಾಡ್ ಚಳವಳಿಗೂ ಇರುವ ಪ್ರಮುಖ ವ್ಯತ್ಯಾಸವಿರುವುದು ಸಂಘಟನೆ ಮತ್ತು ನಾಯಕತ್ವದ ಸ್ವರೂಪದಲ್ಲಿ. ಸಂಘಟನೆಯ ದೃಷ್ಟಿಯಿಂದ ಮತ್ತು ಡಾ.ಅಂಬೇಡ್ಕರ್ ಅವರಂಥ ವರ್ಚಸ್ವಿ ನಾಯಕತ್ವದ ಕೊರತೆ ಅಲ್ಲಿತ್ತು. ಇದರಿಂದಾಗಿ ಅವು ತಮ್ಮ ಸ್ಥಳೀಯ ಮಿತಿಯನ್ನು ದಾಟಿ ಹೊರಗೆ ಸೈದ್ಧಾಂತಿಕ ಮತ್ತು ಐತಿಹಾಸಿಕ ಪ್ರಭಾವವನ್ನು ಬೀರಲಿಲ್ಲ. ಮಹಾಡ್‌ಗಿಂತ ಮುಂಚೆ, ದೇವಸ್ಥಾನದ ಪ್ರವೇಶದ ನಾಗರಿಕ ಹಕ್ಕಿಗಾಗಿ ನಡೆದ ವೈಕೊಮ್ ಸತ್ಯಾಗ್ರಹವೂ(1924-25) ಕೂಡ, ಮಹಾತ್ಮಾ ಗಾಂಧಿ ಮತ್ತು ಅವರಂಥ ಇನ್ನೂ ಹಲವಾರು ಮುಖ್ಯವಾಹಿನಿ ನಾಯಕರುಗಳ ದಂಡೇ ಅದರಲ್ಲಿ ಭಾಗವಹಿಸಿತ್ತು. ಮಹಾಡ್‌ನ ತೇಜಸ್ಸಾಗಲಿ, ಅದಕ್ಕೆ ಸಿಕ್ಕ ಪ್ರಚಾರದ ವ್ಯಾಪಕತೆಯಾಗಲಿ ವೈಕೊಮ್ ಸತ್ಯಾಗ್ರಹಕ್ಕೆ ಇರಲಿಲ್ಲ. ಅದು ಮುಖ್ಯವಾಹಿನಿಯ ಇತಿಹಾಸದಲ್ಲಿ ಮಹತ್ವವನ್ನು ಪಡೆದರೂ ದಲಿತರಲ್ಲಿ ಮಹಾಡ್‌ನಂಥ ಪ್ರತಿಷ್ಠಿತ ಸ್ಥಾನವನ್ನು ಗಳಿಸಿಕೊಳ್ಳುವಲ್ಲಿ ಸೋತಿತು. ವೈಕೊಮ್ ಚಳವಳಿಗೆ ಸ್ಫೂರ್ತಿಯಾಗಲಿ ನಾಯಕತ್ವವಾಗಲಿ ದಲಿತರಿಂದ ಬಂದಿರಲಿಲ್ಲ. ಆದರೆ ಮಹಾಡ್ ಚಳವಳಿ, ತನ್ನ ಸಂಘಟನೆಯ ಪರಿಮಾಣ, ಧ್ಯೇಯದೃಷ್ಟಿಯ ಸಂವಹನ, ಸ್ವಯಂಪ್ರೇರಣೆ ಮತ್ತು ನಾಯಕತ್ವದ ದೃಷ್ಟಿಯಿಂದ ದಲಿತರು ತಮ್ಮ ನಾಗರಿಕ ಹಕ್ಕುಗಳಿಗಾಗಿ ಹೂಡಿದ ಬಂಡಾಯದ ಅಭೂತಪೂರ್ವ ನಿದರ್ಶನವಾಗಿತ್ತು. ದಮನಿತರ ನಾಗರಿಕ ಹಕ್ಕುಗಳ ಹೋರಾಟವಾಗಿ ಅದು ದೇಶದ್ದಷ್ಟೇ ಅಲ್ಲ, ಜಾಗತಿಕ ಇತಿಹಾಸದಲ್ಲಿಯೂ ಪ್ರಮುಖ ಸ್ಥಾನವನ್ನು ಪಡೆಯಬೇಕು.

2. ಎರಡು ಚಾರಿತ್ರಿಕ ಚಳವಳಿಗಳ ರೋಮಾಂಚಕ ಭಾಗಗಳು

ಪುಸ್ತಕದಲ್ಲಿರುವ ಆರ್.ಬಿ. ಮೋರೆ ಅವರ ಮೂಲ ಕಥನದ ಕೆಲವು ರೋಮಾಂಚಕ ಭಾಗಗಳು ಹೀಗಿವೆ:

ಕೆರೆ ನೀರನ್ನು ನಿರಾಕರಿಸುವ ಅಸ್ಪಶ್ಯತೆಯನ್ನು ಧಿಕ್ಕರಿಸಿದವರ ಮೇಲೆ ದಾಳಿ

ಸಾಂಪ್ರದಾಯಿಕ ಮತ್ತು ಕ್ರೂರ ಪರಂಪರಾಗತ ಧೋರಣೆಯನ್ನು ಪೋಷಿಸಿಕೊಂಡು ಬಂದಿದ್ದವರಿಗೆ ಇದೆಲ್ಲವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ತಮ್ಮ ಜನರನ್ನು ಕಾಲ್ನಡಿಗೆಯಲ್ಲೋ ಸೈಕಲ್ ಹತ್ತಿಕೊಂಡೋ ಹೋಗಿ, ‘ಮಹಾರ್‌ರು ಈಗಾಗಲೇ ಕೆರೆಯನ್ನು ಕಲುಷಿತಗೊಳಿಸಿದ್ದಾರೆ, ಇನ್ನು ಅವರು ವೀರೇಶ್ವರ ದೇವಸ್ಥಾನವನ್ನು ಪ್ರವೇಶಿಸುವವರಿದ್ದಾರೆ’ ಎಂಬ ವದಂತಿಯನ್ನು ರೈತ ಸಮುದಾಯದಲ್ಲಿ ಹಬ್ಬಿಸಿದರು. ಇವರ ಸುಳ್ಳು ವದಂತಿಗೆ ಕಿವಿಗೊಟ್ಟು, ಮೇಲ್ಜಾತಿಯ ಭೂಮಾಲಕರು ಮತ್ತು ಲೇವಾದೇವಿ ಸಾಹುಕಾರರ ಚಿತಾವಣೆಗೆ ಬಲಿಯಾಗಿ ಸ್ಪೃಶ್ಯ ಜಾತಿಗಳ ಸಾವಿರಾರು ಬಡ ಜನ ತಮ್ಮ ದೇವರು ಮತ್ತು ಧರ್ಮವನ್ನು ಕಾಪಾಡಲು ಮಹಾಡ್‌ನತ್ತ ಧಾವಿಸಿದರು. ವೀರೇಶ್ವರ ದೇವಸ್ಥಾನದ ಆವರಣದಲ್ಲಿ ಒಗ್ಗೂಡಿದರು. ಅವರ ಉಪಸ್ಥಿತಿಯಿಂದ ಉತ್ತೇಜಿತರಾದ ಕೆಲವು ಅಶಿಸ್ತಿನ ವ್ಯಕ್ತಿಗಳು ಸಮ್ಮೇಳನದ ನಂತರ ಮಾರ್ಕೆಟ್‌ನಲ್ಲಿ ಓಡಾಡುತ್ತಿದ್ದ ಅಸ್ಪೃಶ್ಯ ವ್ಯಕ್ತಿಗಳನ್ನು ಹಿಡಿದು ಹೊಡೆಯತೊಡಗಿದರು.

ಅಸ್ಪೃಶ್ಯರು ಕೆರೆಯಿಂದ ಹಿಂದಿರುಗಿದ ಎರಡು ಮೂರು ಗಂಟೆಗಳ ಕಾಲ ಇದು ನಡೆಯಿತು. ಈ ಹೊತ್ತಿಗೆ ಸಮ್ಮೇಳನಕ್ಕೆ ಬಂದಿದ್ದ ಹೆಚ್ಚಿನ ಜನ ಊಟ ಮಾಡಿ ತಮ್ಮ ತಮ್ಮ ಗ್ರಾಮಗಳಿಗೆ ಹೊರಟಿದ್ದರು, ಕೆಲವರು ಆಗಲೇ ಹೋಗಿಯೇ ಬಿಟ್ಟಿದ್ದರು. ಇನ್ನು ಕೆಲವರು ಇನ್ನೂ ಊಟ ಮಾಡುತ್ತಿದ್ದರು, ತಮ್ಮ ಜನರ ಮೇಲೆ ಆಗುತ್ತಿರುವ ದಾಳಿಯ ಸುದ್ದಿ ಕೇಳಿ ಅವರು ಊಟವನ್ನು ಅರ್ಧದಲ್ಲಿಯೇ ಬಿಟ್ಟು ಎದ್ದರು. ಅವರು ದಾಳಿಕೋರರನ್ನು ಮುಖಾಮುಖಿ ಎದುರಿಸುವ ನಿರ್ಧಾರವನ್ನು ಮಾಡಿದ್ದರು. ಪೆಂಡಾಲುಗಳನ್ನು ಮುರಿದು ಅದರಿಂದ ಕೋಲು, ಬಡಿಗೆಗಳನ್ನು ಎತ್ತಿಕೊಂಡರು. ಕೆಲವು ಡಾಕ್ ಬಂಗಲೆಗೆ ಓಡಿ ಹೋಗಿ ಅಸಹಾಯಕ ಜನರ ಮೇಲೆ ದಾಳಿ ಮಾಡುತ್ತಿರುವ ಹೇಡಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಅನುಮತಿಯನ್ನು ಕೋರಿದರು. ಆದರೆ ಅವರಿಗೆ ಆಕ್ರೋಶಕ್ಕೆ ಒಳಗಾಗದೆ ಶಾಂತವಾಗಿ ತಮ್ಮ ತಮ್ಮ ಗ್ರಾಮಗಳಿಗೆ ಮರಳಲು ಹೇಳಲಾಯಿತು. ಬಸ್ ಡಿಪೋದ ಪಶ್ಚಿಮ ಭಾಗದಲ್ಲಿ ಸಾವಿರಾರು ಅಸ್ಪೃಶ್ಯರು ಸೇರಿದ್ದರು. ಮೇಲೆ ಹೇಳಿದ ಗೂಂಡಾಗಳು ಮಾರ್ಕೆಟ್ ಪ್ರದೇಶದಲ್ಲಿ, ಓಣಿ ಓಣಿಗಳಲ್ಲಿ ಮುಕ್ತವಾಗಿ ಓಡಾಡಿ ಅಸ್ಪಶ್ಯ ಜಾತಿಯ ಒಬ್ಬೊಬ್ಬರೇ ಸಿಗುವ ವ್ಯಕ್ತಿಗಳನ್ನು ಹಿಡಿದು ಹೊಡೆಯುವುದಕ್ಕಾಗಿ ನೋಡುತ್ತಿದ್ದರು. ಇಂಥವರ ಮಾರಣಾಂತಿಕ ಹಲ್ಲೆಗೆ ಸಿಕ್ಕವರಲ್ಲಿ ಒಬ್ಬರು ಮಹಾರ್ ಸಮಾಜ್ ಸೇವಾ ಸಂಘದ ಅಧ್ಯಕ್ಷರಾದ ಭಿಕಾಜಿ ಸಾಂಭಾಜಿ ಗಾಯಕ್ವಾಡ್ ಮತ್ತು ಬಾಂಬೆಯಿಂದ ಬಂದಿದ್ದ ಇನ್ನು ಕೆಲವರು.

ಪಟ್ಟಣದ ರಸ್ತೆಗಳು ತಮ್ಮ ಮೂಲಭೂತ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಮುಗ್ಧ ದಲಿತರ ರಕ್ತದಿಂದ ಕಲೆಯಾಗಿದ್ದವು. ಗೂಂಡಾಗಳು ಮಾರ್ಕೆಟ್‌ನಲ್ಲಿ ಬೇಸ್ ಕ್ಯಾಂಪ್‌ಗಳ ಮೇಲೆಯೂ ದಾಳಿ ನಡೆಸಲು ಏಳು ಬಾರಿ ಪ್ರಯತ್ನಿಸಿದ್ದರು; ಆದರೆ, ಬಾಗಿಲಲ್ಲೇ ಕೈಯಲ್ಲಿ ಕುಡಗೋಲು, ಕಬ್ಬಿಣದ ರಾಡುಗಳನ್ನು ಹಿಡಿದು ನಿಂತಿದ್ದ, ವಯಸ್ಸಾದ ಆದರೂ ಕಟ್ಟುಮಸ್ತಾದ ಶರೀರದ ಇಬ್ಬರು ಕಾರ್ಯಕರ್ತರು, ಶಿವರಾಮ್ ಗೋಪಾಲ್ ಜಾಧವ್ ಮತ್ತು ಸಾಂಭಾಜಿ ತುಕಾರಾಮ್ ಗಾಯಕ್ವಾಡ್ ಮತ್ತು ಅವರ ಬೆನ್ನಿಗೆ ನಿಂತಿದ್ದ ಯುವಜನರ ಬಲವಾದ ಗುಂಪನ್ನು ನೋಡಿ ಹಿಮ್ಮೆಟ್ಟಿದ್ದರು. ಅವರ ಕೋಪೋದ್ರಿಕ್ತ ಮುಖ ಮತ್ತು ಕೈಯಲ್ಲಿನ ಆಯುಧಗಳನ್ನು ನೋಡಿ ಅವರ ಮೇಲೆ ಹಲ್ಲೆ ಮಾಡುವ ಧೈರ್ಯ ಆ ಗೂಂಡಾಗಳಿಗೆ ಬರಲಿಲ್ಲ. ಹಾಗೆಯೇ ಗುಂಪುಗುಂಪುಗಳಲ್ಲಿ ಓಡಾಡುತ್ತಿದ್ದ ಅಸ್ಪೃಶ್ಯರನ್ನು ಅವರು ಮುಟ್ಟಲು ಹೋಗಲಿಲ್ಲ. ನಂತರ ಈ ಗೂಂಡಾಗಳು ತಮ್ಮ ಗಮನವನ್ನು ಮೋಚಿಗಳ ಅಂಗಡಿಗಳ ಮೇಲೆ ತಿರುಗಿಸಿದರು. ಕಂಡೇಶ್‌ನಿಂದ ಬಂದಿದ್ದ ಈ ಅಂಗಡಿಕಾರ ಪುರುಷರನ್ನಷ್ಟೇ ಅಲ್ಲ, ಎಳೆಯ, ವೃದ್ಧ ಮಹಿಳೆಯರನ್ನು ಚಚ್ಚಿದರು. ಈ ಕ್ರೌರ್ಯಕ್ಕೆ ಮಕ್ಕಳೂ ಬಲಿಯಾದರು. ಭಾನುದಾಸ್ ಕಾಂಬ್ಳಿ ಮತ್ತು ಪಿ.ಎನ್.ರಾಜ್‌ಭೋಗ್‌ರಂಥ ಹೆಸರಾಂತ ಅಸ್ಪೃಶ್ಯ ನಾಯಕರೂ ಈ ಹಲ್ಲೆಗಳಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.’’

ಮನುಸ್ಮತಿಯ ದಹನ

‘‘ಕೆಲವರು, ಸತ್ಯಾಗ್ರಹವನ್ನು ಮಾಡಬೇಕು, ಆದರೆ ಬಾಬಾಸಾಹೇಬರು ಅದರಲ್ಲಿ ಭಾಗವಹಿಸಬಾರದು ಎಂದು ಸಲಹೆ ನೀಡಿದರು. ಹೆಚ್ಚಿನವರು ಸತ್ಯಾಗ್ರಹದ ಪರವಾಗಿಯೇ ಇದ್ದರು. ಬಾಬಾಸಾಹೇಬ್ ಮೌನವಾಗಿ ಎಲ್ಲರ ಅಭಿಪ್ರಾಯಗಳನ್ನು ಜಾಗರೂಕತೆಯಿಂದ ಆಲಿಸುತ್ತಿದ್ದರು. ಕೊನೆಯಲ್ಲಿ, ಅವರೆಂದರು, ‘‘ಸತ್ಯಾಗ್ರಹವನ್ನು ಮಾಡಿ ಜೈಲಿಗೆ ಹೋಗಲು 1,000 ಜನ ಸಿದ್ಧವಾಗಿದ್ದರೆ ನಾವು ಸತ್ಯಾಗ್ರಹ ಮಾಡೋಣ.’’ ಈ ನಿರ್ಧಾರವನ್ನು ತೆಗೆದುಕೊಳ್ಳುವ ಹೊತ್ತಿಗೆ ರಾತ್ರಿ 12 ಆಗಿತ್ತು. ಸತ್ಯಾಗ್ರಹಿಗಳು ತೆಗೆದುಕೊಳ್ಳಬೇಕಾಗಿದ್ದ ಶಪಥದ ಕರಡನ್ನು ತಯಾರಿಸಲಾಯಿತು. ಕರಡಿನ ಮುಖ್ಯವಾದ ಭಾಗದ ಒಕ್ಕಣೆ ಹೀಗಿತ್ತು: ‘‘ನಾನು ಜೈಲಿಗೆ ಹೋಗಲು, ಹೋರಾಡಲು, ಸತ್ಯಾಗ್ರಹವನ್ನು ಮಾಡುತ್ತಾ ಮಡಿಯಲೂ ಸಿದ್ಧನಿದ್ದೇನೆ’’. ಧರ್ಮಶಾಲಾದ ಕಚೇರಿಯಲ್ಲಿ ಇದರ ಹಲವಾರು ಪ್ರತಿಗಳನ್ನು ತಯಾರಿಸಲಾಯಿತು. ಶಿಕ್ಷಿತ ಪ್ರತಿನಿಧಿಗಳಲ್ಲಿ ಅದನ್ನು ಹಂಚಿ, ಸತ್ಯಾಗ್ರಹಿಗಳಿಗೆ ಓದಿ ಹೇಳಿ ಅವರ ಸಮ್ಮತಿಗಾಗಿ ಹೆಬ್ಬೆಟ್ಟಿನ ಗುರುತನ್ನು ಪಡೆಯಲು ಹೇಳಲಾಯಿತು. ಬೆಳಗಿನ ಜಾವ 4 ಗಂಟೆಗೆ 3,500 ಜನ ತಮ್ಮ ಸಮ್ಮತಿಯನ್ನು ದಾಖಲಿಸಿದ್ದರು. ಇದಲ್ಲದೇ ಇನ್ನೂ ಹೆಚ್ಚಿನ ಜನ ಮುಂದೆ ಬರುತ್ತಲಿದ್ದರು. ಆದ್ದರಿಂದ ಸಹಿಯನ್ನು ಸಂಗ್ರಹಿಸುವ ಕೆಲಸವನ್ನು ನಿಲ್ಲಿಸಲಾಯಿತು.

ಬೆಳಗ್ಗೆ 4:30ರ ಹೊತ್ತಿಗೆ ಸತ್ಯಾಗ್ರಹಿಗಳು ಸಹಿ ಹಾಕಿದ್ದ ಕಾಗದಗಳ ಕಟ್ಟುಗಳನ್ನು ಬಾಬಾಸಾಹೇಬರ ಸಮ್ಮುಖದಲ್ಲಿ ಇಡಲಾಯಿತು. ಅಷ್ಟು ಹೊತ್ತಿಗೆ ಕ್ಯಾಂಪಿನಲ್ಲಿದ್ದ ಇತರರ ಹಾಗೆಯೇ ಅವರು ಎದ್ದು ಬಹಳ ಹೊತ್ತಾಗಿತ್ತು. ಬೆಳಗ್ಗೆ 7 ಗಂಟೆಗೆ ಅವರು ಕಲೆಕ್ಟರ್‌ರಿಗೆ ಒಂದು ಪತ್ರವನ್ನು ತಲುಪಿಸಲು ಹೇಳಿದರು. ನಾನು ಆ ಪತ್ರವನ್ನು ತೆಗೆದುಕೊಂಡು ಹೋಗುತ್ತಿರುವಾಗ ಡಾಕ್ ಬಂಗಲೆಯ ಹಾದಿಯಲ್ಲಿ ಒಬ್ಬ ಮನುಷ್ಯ ಜೀವಿಯನ್ನೂ ಕಾಣಲಿಲ್ಲ. ಇಡೀ ಮಾರ್ಕೆಟ್ ನಿರ್ಜನವಾಗಿತ್ತು. ನಾನು ಪತ್ರವನ್ನು ಕಲೆಕ್ಟರ್‌ಅವರ ಕೈಗೊಪ್ಪಿಸಿದೆ, ಅದರ ಮೇಲೆ ಕಣ್ಣಾಡಿಸಿದವರೇ ತಾವು ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಗೆ ಆಗಮಿಸುವುದಾಗಿ ನನ್ನ ಮೂಲಕ ಮೌಖಿಕ ಸೂಚನೆ ನೀಡಿ ನನ್ನನ್ನು ಕಳುಹಿಸಿಕೊಟ್ಟರು. ನಾನು ಬಂದು ಅದನ್ನು ಬಾಬಾಸಾಹೇಬರಿಗೆ ತಿಳಿಸಿದೆ.

ಬಾಬಾಸಾಹೇಬರ ಜೊತೆ ಸ್ನೇಹದಿಂದ ಇದ್ದ ಬಾಪು ಸಹಸ್ರಬುದ್ಧೆ, ತಮಾಷೆಯಾಗಿ ಹೇಳಿದರು, ‘‘ನಿನ್ನನ್ನು ಬಂಧಿಸದೇ ಹಿಂದಕ್ಕೆ ಹೇಗೆ ಕಳುಹಿಸಿದರು?’’ ಅದಕ್ಕೆ ನಾನು ಏನೂ ಹೇಳಲಿಲ್ಲ. ಆ ಹೊತ್ತಿನಲ್ಲಿ ಬಾಬಾಸಾಹೇಬ್ ಸುತ್ತ ಕೆಲವರಿದ್ದರು. ಉಳಿದವರು ಸಭಾಂಗಣಕ್ಕೆ ಹೊರಟು ಹೋಗಿದ್ದರು. ಆ ದಿನದ ಗೋಷ್ಠಿ ಬೆಳಗಿನ 9 ಗಂಟೆಗೆ, ಮನುಸ್ಮತಿಯ ಪ್ರತಿಯನ್ನು ಸುಡುವುದರೊಂದಿಗೆ ಆರಂಭವಾಯಿತು. ಪವಿತ್ರ ಚಿತೆಗಾಗಿ ಒಂದು ವಿಶೇಷ ಸ್ಥಳವನ್ನು ಪೆಂಡಾಲ್ ಹತ್ತಿರದಲ್ಲಿ ನಿರ್ಮಿಸಲಾಗಿತ್ತು. ಹೋಮ ಹವನಕ್ಕೆ ಬೇಕಾದ ಎಲ್ಲಾ ಸಾಮಗ್ರಿಯನ್ನು ವ್ಯವಸ್ಥೆ ಮಾಡಲಾಗಿತ್ತು. ಬಾಬಾಸಾಹೇಬ ಬೆಂಕಿಯ ಎದುರಿಗೆ ನಿಂತಿದ್ದರು ಮತ್ತು ಬಾಪು ಸಹಸ್ರಬದ್ಧೆ ಮನುಸ್ಮತಿಯ ಆಕ್ಷೇಪಾರ್ಹ ಭಾಗಗಳ ಹಾಳೆಗಳನ್ನು ಬಾಬಾಸಾಹೇಬರ ಕೈಗಳಿಂದ ತೆಗೆದುಕೊಂಡು, ಅದನ್ನೊಮ್ಮೆ ಓದಿ ಬೆಂಕಿಗೆ ಹಾಕುತ್ತಿದ್ದರು. ಈ ಕಾರ್ಯಕ್ರಮ ನಡೆಯುತ್ತಿರುವಾಗ ಜನರಲ್ಲಿ ಉತ್ಸಾಹ, ಹುಮ್ಮಸ್ಸು ತುಂಬಿ ತುಳುಕುತ್ತಿತ್ತು.’’

ವಿಚಾರವಾದಿ ಆನಂದ್ ತೇಲ್ತುಂಬ್ಡೆ ಬಿಡುಗಡೆ
ಎಲ್ಗಾರ್ ಪರಿಷತ್ ವಿವಾದಕ್ಕೆ ಸಂಬಂಧಿಸಿದಂತೆ ಸುಮಾರು 2 ವರ್ಷ 7 ತಿಂಗಳ ಸುದೀರ್ಘ ಜೈಲಿನಲ್ಲಿದ್ದ ಡಾ.ಬಿ.ಆರ್ ಅಂಬೇಡ್ಕರ್ ಕುಟುಂಬಸ್ಥರಾದ ಆನಂದ್ ತೇಲ್ತುಂಬ್ಡೆಯವರು ಇಂದು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ.

ಬಾಂಬೆ ಹೈಕೋರ್ಟ್ ಕಳೆದ ವಾರ ತೇಲ್ತುಂಬ್‌ಡೆಯವರಿಗೆ ಜಾಮೀನು ನೀಡಿತ್ತು. ಆದರೆ ಈ ಜಾಮೀನನ್ನು ಪ್ರಶ್ನಿಸಿ NIA ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಜೊತೆಗೆ ಬಿಡುಗಡೆಗೆ ಏಳು ದಿನಗಳ ತಡೆಯನ್ನೂ ಕೋರಿತ್ತು. ಆದರೆ ಸುಪ್ರೀಂಕೋರ್ಟ್ NIA ಕೋರಿದ ತಡೆ ಅರ್ಜಿಯನ್ನು ತಿರಸ್ಕರಿಸಿ ಬಾಂಬೆ ಹೈಕೋರ್ಟ್ ನಿರ್ಧಾರವನ್ನು ಎತ್ತಿ ಹಿಡಿದಿದೆ.

ನವೆಂಬರ್ 25 ರ ಶುಕ್ರವಾರ ತೇಲ್ತುಂಬ್ಡೆಯವರಿಗೆ ಸಂಬಂಧಿಸಿದಂತೆ ಬಿಡುಗಡೆಯ ಎಲ್ಲಾ ಪ್ರಕ್ರಿಯೆಗಳನ್ನೂ ಮುಗಿಸಿ ಇನ್ನು ಜೈಲಿನಿಂದ ಹೊರ ಬರುವ ಪ್ರಕ್ರಿಯೆ ಒಂದಕ್ಕೇ ಬಾಕಿ ಉಳಿಸಿಕೊಂಡಿತ್ತು. ಹಾಗೇ ನವೆಂಬರ್ 26 ರ ಶನಿವಾರ ಇಂದು ಮಧ್ಯಾಹ್ನದ ಸಮಯಕ್ಕೆ ಸರಿಯಾಗಿ ಆನಂದ್ ತೇಲ್ತುಂಬ್ಡೆಯವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಜೈಲಿನಿಂದ ಹೊರಬಂದಿದ್ದಾರೆ.

ಎಲ್ಗಾರ್‌ ಪರಿಷತ್‌ ಸಮಾವೇಶದ ಸಂಘಟಕರಲ್ಲಿ ಒಬ್ಬರಾದ ತೇಲ್ತುಂಬ್ಡೆ ಅವರು 2018ರ ಜನವರಿ 1ರಂದು ಮಾಡಿದ ಪ್ರಚೋದನಾಕಾರಿ ಭಾಷಣವು ಗಲಭೆಗೆ ಕಾರಣವಾಗಿದೆ ಎಂಬುದು NIA ದೂರಾಗಿದೆ. ತೇಲ್ತುಂಬ್ಡೆ ಅವರು ನಿಷೇಧಿತ ಸಿಪಿಐ (ಎಂ) ಪಕ್ಷದ ಸದಸ್ಯರಾಗಿದ್ದಾರೆ ಎಂದು NIA ವಿಶೇಷ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು.

ಈ ಆದೇಶವನ್ನು ಪ್ರಶ್ನಿಸಿ ತೇಲ್ತುಂಬ್ಡೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. NIA ಆರೋಪಿಸಿದಂತೆ ಯುಎಪಿಎ ಕಾಯಿದೆಯಡಿ ತೇಲ್ತುಂಬ್ಡೆ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದಾರೆ ಎನ್ನಲು ಯಾವುದೇ ಪ್ರಾಥಮಿಕ ಸಾಕ್ಷ್ಯಗಳಿಲ್ಲ ಎಂದು ಹೈಕೋರ್ಟ್‌ ಜಾಮೀನಿನ ಆದೇಶದ ವೇಳೆ ಹೇಳಿತ್ತು. ನಂತರ ಜಾಮೀನಿಗೆ ತಡೆ ಕೋರಿದ್ದ NIA ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿ ಬಾಂಬೆ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.

ಚಿಂತಕ ತೇಲ್ತುಂಬ್ಡೆಗೆ ಜಾಮೀನು: ಸಿಪಿಐ ಎಂಎಲ್ ಲಿಬರೇಶನ್ ಸ್ವಾಗತ
ಬೆಂಗಳೂರು: ಚಿಂತಕ. ಹೋರಾಟಗಾರ ಆನಂದ್ ತೇಲ್ತುಂಬ್ಡೆಗೆ ಜಾಮೀನು ಮಂಜೂರು ಮಾಡಿದ ಮುಂಬೈ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಎನ್ಐಎ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ನ ಆದೇಶವನ್ನು ಸಿಪಿಐ(ಎಂಎಲ್) ಲಿಬರೇಷನ್ ರಾಜ್ಯ ಸಮಿತಿ ಸ್ವಾಗತಿಸಿದೆ.

ಸುಮಾರು ಎರಡೂವರೆ ವರ್ಷಗಳ ಜೈಲಿನಲ್ಲಿರುವ ಅವರ ಬಿಡುಗಡೆಯನ್ನು ನಾವು ಸ್ವಾಗತಿಸುವಾಗ, ಭೀಮಾ ಕೋರೆಗೋವ್ ಪ್ರಕರಣದಲ್ಲಿ ಸುಳ್ಳು ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಇತರರೆಲ್ಲರನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಸಿಪಿಐ (ಎಂಎಲ್) ಲಿಬರೇಶನ್ ರಾಜ್ಯ ಸಮಿತಿ ಒತ್ತಾಯಿಸಿದೆ.

ಬಿಜೆಪಿ/ಆರ್‌ಎಸ್‌ಎಸ್‌ನ ಫ್ಯಾಸಿಸ್ಟ್ ಆಡಳಿತದ ವಿರುದ್ಧ ಇರುವ ಒಂದು ಕಾರಣದಿಂದ ಮಾತ್ರ ಜೈಲಿನಲ್ಲಿರುವ ಎಲ್ಲಾ ರಾಜಕೀಯ ಕೈದಿಗಳ ಬಿಡುಗಡೆಯನ್ನು ನಾವು ಆಗ್ರಹಿಸುತ್ತವೆ. ಮತ್ತು ಈ ಸಂದರ್ಭದಲ್ಲಿ ಹೋರಾಟಗಾರ ನಾಗರಿಕ ಸ್ವಾತಂತ್ರ್ಯಗಳನ್ನು ರಕ್ಷಿಸುವಲ್ಲಿ ನ್ಯಾಯಾಲಯಗಳು ತಮ್ಮ ಪಾತ್ರವನ್ನು ನಿರ್ವಹಿಸಬೇಕೆಂದು ಸಮಿತಿ ಆಗ್ರಹಿಸಿದೆ.

ಆನಂದ್‌ ತೇಲ್ತುಂಬ್ಡೆಗೆ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ, ಬಿಡುಗಡೆ ಹಾದಿ ಸುಗಮ
ಹೊಸದಿಲ್ಲಿ: ದಲಿತ ಹಕ್ಕುಗಳ ಹೋರಾಟಗಾರ ಆನಂದ್‌ ತೇಲ್ತುಂಬ್ಡೆ ಅವರಿಗೆ ಬಾಂಬೆ ಹೈಕೋರ್ಟ್‌ ನೀಡಿದ್ದ ಜಾಮೀನು ಆದೇಶವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌, ಈ ಸಂಬಂಧ ರಾಷ್ಟ್ರೀಯ ತನಿಖಾ ದಳ ( NIA ) ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹಾಗು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಇಂದು ಮಹತ್ವದ ತೀರ್ಪು ನೀಡಿ, ಬಾಂಬೆ ಹೈಕೋರ್ಟ್‌ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದೆ.
ಜಾಮೀನು ನೀಡುವ ಸಂದರ್ಭದಲ್ಲಿ ಬಾಂಬೆ ಹೈಕೋರ್ಟ್‌ ಮಾಡಿರುವ ಟಿಪ್ಪಣಿಯು, ಈ ಪ್ರಕರಣದ ವಿಚಾರಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಪೀಠ ಹೇಳಿದೆ.

2018ರಲ್ಲಿ ನಡೆದ ಭೀಮಾ ಕೋರೆಗಾವ್‌ ಹಿಂಸಾಚಾರದಲ್ಲಿ ಆನಂದ್‌ ತೇಲ್ತುಂಬ್ಡೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿ, ರಾಷ್ಟ್ರೀಯ ತನಿಖಾ ದಳ ಪ್ರಕರಣ ದಾಖಲಿಸಿದ್ದು, ಹಲವಾರು ಮಾನವ ಹಕ್ಕು ಹೋರಾಟಗಾರರು, ದಲಿತರ ಹಕ್ಕುಗಳ ಹೋರಾಟಗಾರರನ್ನು ಬಂಧಿಸಿ ಜೈಲಿನಲ್ಲಿಟ್ಟಿದೆ. 2017ರ ಡಿಸೆಂಬರ್‌ ನಲ್ಲಿ ನಡೆದ ಎಲ್ಗಾರ್‌ ಪರಿಷತ್‌ ಕಾರ್ಯಕ್ರಮದಲ್ಲಿ ತೇಲ್ತುಂಬ್ಡೆ ಮತ್ತು ಇತರರು ಪ್ರಚೋದನಾಕಾರಿ ಭಾಷಣ ಮಾಡಿದ್ದರಿಂದಾಗಿ 2018ರ ಜ.1ರಂದು ಹಿಂಸಾಚಾರ ಸಂಭವಿಸಿತ್ತು ಎಂದು NIA ಆರೋಪಿಸಿ ಮೊಕದ್ದಮೆ ಹೂಡಿದೆ.

ಹೋರಾಟಗಾರರು, ವಿದ್ವಾಂಸರೂ ಆದ ಆನಂದ್‌ ತೇಲ್ತುಂಬ್ಡೆ ಕಳೆದ ವರ್ಷ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮುನ್ನ NIA ವಿಶೇಷ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಆನಂದ್‌ ತೇಲ್ತುಂಬ್ಡೆ ಅವರು ನಿಷೇಧಿತ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾವೋವಾದಿ)ದ ಸದಸ್ಯರಾಗಿರುವ ಕಾರಣಕ್ಕೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.

ಬಾಂಬೆ ಹೈಕೋರ್ಟ್‌ ಜಾಮೀನು ಅರ್ಜಿ ಕುರಿತಂತೆ ವಿಸ್ತ್ರತ ವಿಚಾರಣೆ ನಡೆಸಿ, ಕಳೆದ ನವೆಂಬರ್‌ 18ರಂದು ಜಾಮೀನು ನೀಡಿತ್ತು. ತೇಲ್ತುಂಬ್ಡೆ ಅವರ ಮೇಲೆ ಭಯೋತ್ಪಾದನಾ ಚಟುವಟಿಕೆಯಲ್ಲಿ ಪಾಲ್ಗೊಂಡಿರುವ ಕುರಿತಂತೆ ಮೇಲ್ನೋಟಕ್ಕೆ ಕಾಣುವಂಥ ಯಾವುದೇ ಸಾಕ್ಷಿಗಳಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ತೇಲ್ತುಂಬ್ಡೆಯವರ ವಿರುದ್ಧ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಇರುವುವುದಕ್ಕೆ ಸಂಬಂಧಿಸಿದಂತೆ ಸೆಕ್ಷನ್‌ 38, 39 ರ ಅನ್ವಯ ಪ್ರಕರಣಗಳು ಕಂಡುಬಂದಿವೆಯೇ ಹೊರತು ಭಯೋತ್ಪಾದಕ ಚಟುವಟಿಕೆಯಲ್ಲಿ ಪಾಲ್ಗೊಂಡಿರುವ ಕುರಿತು ಯಾವುದೇ ಸಾಕ್ಷಿ ಇಲ್ಲ ಎಂದು ಬಾಂಬೆ ಹೈಕೋರ್ಟ್‌ ಹೇಳಿತ್ತು. ಸೆಕ್ಷನ್‌ 38. 39ರ ಪ್ರಕರಣಗಳಲ್ಲಿ ಅತಿಹೆಚ್ಚು ಎಂದರೆ ಹತ್ತು ವರ್ಷಗಳ ಶಿಕ್ಷೆ ವಿಧಿಸಬಹುದಾಗಿದೆ. ಆನಂದ್‌ ತೇಲ್ತುಂಬ್ಡೆ ಅವರು ಈಗಾಗಲೇ ಎರಡು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಒಂದು ಲಕ್ಷ ರುಪಾಯಿಗಳ ಶ್ಯೂರಿಟಿ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನ್ಯಾಯಾಲಯ ಆದೇಶಿಸಿತ್ತು.
ಹೈಕೋರ್ಟ್‌ ಆದೇಶದ ವಿರುದ್ಧ NIA ಮೇಲ್ಮನವಿ ಸಲ್ಲಿಸಲು ಒಂದು ವಾರದ ಕಾಲಾವಕಾಶವನ್ನು ಬಾಂಬೆ ಹೈಕೋರ್ಟ್‌ ನೀಡಿತ್ತು. ನಂತರ NIA ಈ ಕುರಿತು ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿ, ಬಾಂಬೆ ಹೈಕೋರ್ಟ್‌ ಜಾಮೀನು ಅರ್ಜಿ ವಿಚಾರಣೆಯನ್ನು ಮಿನಿ ಟ್ರಯಲ್‌ ರೀತಿಯಲ್ಲಿ ಮಾಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.

ಹೈಕೋರ್ಟ್‌ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ತನಿಖೆ ಸಂದರ್ಭದಲ್ಲಿ ವಶಕ್ಕೆ ಪಡೆಯಲಾದ ಐದು ಪ್ರಮುಖ ದಾಖಲೆಗಳನ್ನು ಅತಿಸೂಕ್ಷ್ಮವಾಗಿ ಪರಿಶೀಲನೆ ನಡೆಸಿದೆಯಲ್ಲದೆ, ತನಿಖಾ ಸಂಸ್ಥೆ ಪಡೆದ ಹೇಳಿಕೆಗಳನ್ನು ಪರಿಶೀಲಿಸಿದೆ. ಈ ದಾಖಲೆಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ತನ್ನ ಅಭಿಪ್ರಾಯಗಳನ್ನು ಹೇಳಿರುವುದರಿಂದ ಪ್ರಕರಣದ ವಿಚಾರಣೆ ಮತ್ತು ತನಿಖೆಯ ಮೇಲೆ ಪರಿಣಾಮ ಬೀರಿದಂತಾಗಿದೆ ಎಂದು NIA ತನ್ನ ಅರ್ಜಿಯಲ್ಲಿ ತಿಳಿಸಿತ್ತು. ಆನಂದ್‌ ತೇಲ್ತುಂಬ್ಡೆಯವರಿಗೆ ಜಾಮೀನು ನೀಡಿದರೆ, NIA ಇದುವರೆಗೆ ಮಾಡಿದ ಎಲ್ಲ ಪ್ರಯತ್ನಗಳಿಗೆ ದೊಡ್ಡ ಹೊಡೆತ ಬಿದ್ದಂತಾಗುತ್ತದೆ ಎಂದು ಅದು ಹೇಳಿತ್ತು.

ಇಂದು NIA ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ ಐಶ್ವರ್ಯಾ ಭಾಟಿ, ತೇಲ್ತುಂಬ್ಡೆ ಅವರಿಂದ ವಶಪಡಿಸಿಕೊಳ್ಳಲಾದ ದಾಖಲೆಗಳಿಂದಾಗಿ ಅವರು ಕಾನೂನು ಸುವ್ಯವಸ್ಥೆ ಹದಗೆಡಿಸಲು ಪ್ರಯತ್ನ ನಡೆಸಿದ್ದರು ಎಂಬುದು ಸ್ಪಷ್ಟವಾಗುತ್ತದೆ ಎಂದು ವಾದಿಸಿದರು, ಒಂದು ಪತ್ರ ನಕ್ಸಲ್‌ ಬಾರಿ ಚಳವಳಿಯನ್ನು ಸಂಭ್ರಮಿಸಿ ಎಂದು ಹೇಳುತ್ತದೆ, ಇದಕ್ಕೆ ಪೂರಕವಾಗಿ ತೇಲ್ತುಂಬ್ಡೆಯವರು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿ ಎಂದು ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

UAPA ಅಡಿಯಲ್ಲಿ ಮೊಕದ್ದಮೆ ದಾಖಲಿಸಲು ಇರುವ ಸ್ಪಷ್ಟ ಕಾರಣಗಳನ್ನು ತಿಳಿಸಿ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದಾಗ, ಅವರು ಭಯೋತ್ಪಾದಕ ಚಟುವಟಿಕೆಯಲ್ಲಿ ಪಾಲ್ಗೊಳ್ಳದೇ ಇದ್ದರೂ ನಿಷೇಧಿಸಿದ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿ ಇದ್ದಿದ್ದು ಕೂಡ ಅಪರಾಧ ಎಂದು ಐಶ್ವರ್ಯಾ ಹೇಳಿದರು. ನಂತರ ಸುಪ್ರೀಂ ಕೋರ್ಟ್‌ ವಿಭಾಗೀಯ ಪೀಠ, NIA ಅರ್ಜಿಯನ್ನು ವಜಾಗೊಳಿಸಿ, ಬಾಂಬೆ ಹೈಕೋರ್ಟ್‌ ತೀರ್ಪನ್ನು ಎತ್ತಿಹಿಡಿಯಿತು.

ತೇಲ್ತುಂಬ್ಡೆ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ NIA
ಹೊಸದಿಲ್ಲಿ : 2018ರ ಭೀಮಾ ಕೋರೆಗಾಂವ್‌ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತವಾಗಿದ್ದ ಆನಂದ್‌ ತೇಲ್ತುಂಬ್ಡೆ ಅವರ ಜಾಮೀನು ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಆರೋಪಿತ ಪಾತ್ರಕ್ಕಾಗಿ 2020ರಿಂದ ತಲೋಜಾ ಕೇಂದ್ರ ಕಾರಾಗೃಹದಲ್ಲಿ ಪ್ರಸ್ತುತ ಬಂಧಿತರಾಗಿರುವ ದಲಿತ ಹಕ್ಕುಗಳ ಹೋರಾಟಗಾರ ಮತ್ತು ವಿದ್ವಾಂಸ ಆನಂದ್ ತೇಲ್ತುಂಬ್ಡೆ ಅವರಿಗೆ ಬಾಂಬೆ ಹೈಕೋರ್ಟ್ ನವೆಂಬರ್‌ 18ರಂದು ಜಾಮೀನು ಮಂಜೂರು ಮಾಡಿತ್ತು.

ಈ ಹಿನ್ನಲೆಯಲ್ಲಿ, ಬಾಂಬೆ ಹೈಕೋರ್ಟ್‌ ಆನಂದ್‌ ತೇಲ್ತುಂಬ್ಡೆಯವರಿಗೆ ನೀಡಿದ್ದ ಜಾಮೀನಿನ ಆದೇಶವನ್ನು ಪ್ರಶ್ನಿಸಿ ಇಂದು ಎನ್‌ಐಎ ಸುಪ್ರೀಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾ. ಡಿ.ವೈ ಚಂದ್ರಚೂಡ್‌ ಅವರೆದುರು ಮಂಗಳವಾರದಂದು ಪ್ರಕರಣವನ್ನು ಪ್ರಸ್ತಾಪಿಸಿದ್ದು, ಈ ಕುರಿತು ಸಿಐಜೆ ನವೆಂಬರ್‌ 25ರಂದು ಪ್ರಕರಣ ವಿಚಾರಣೆಗೆ ಸಮ್ಮತಿ ನೀಡಿದ್ದಾರೆ.