Andaman nicobar – Peepal Media

ಮೋದಿ ಉದ್ಘಾಟಿಸಿದ ಐದೇ ದಿನಗಳಲ್ಲಿ ವಿಮಾನ ನಿಲ್ದಾಣದ ಮೇಲ್ಚಾವಣಿ ಕುಸಿತ
ಅಂಡಮಾನ್ ಮತ್ತು ನಿಕೋಬಾರ್ ನ ಪೋರ್ಟ್ ಬ್ಲೇರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿದಿದೆ. ನರೇಂದ್ರ ಮೋದಿ ಉದ್ಘಾಟನೆ ಮಾಡಿ ಕೇವಲ 5 ದಿನಗಳಲ್ಲೇ ಈ ಘಟನೆ ನಡೆದಿದ್ದು, ನೆಟ್ಟಿಗರು ಕಳಪೆ ಗುಣಮಟ್ಟದ ಕಾಮಗಾರಿ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ

ಕಳೆದ ವಾರದ ಆರಂಭದಲ್ಲಿ ಉದ್ಘಾಟನೆ ಆಗಿದ್ದ ಈ ವಿಮಾನ ನಿಲ್ದಾಣದ ಉದ್ಘಾಟನೆಯಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವ, ಜನರಲ್ (ನಿವೃತ್ತ) ವಿಕೆ ಸಿಂಗ್ ಮತ್ತು ಹಲವಾರು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ವಿಮಾನ ನಿಲ್ದಾಣದ ಹಲವು ಕಡೆಗಳಲ್ಲಿ ಬಿದ್ದು ಹೋದ ಟರ್ಮಿನಲ್ ಮೇಲ್ಛಾವಣಿ ಫೋಟೊ ಮತ್ತು ವಿಡಿಯೋಗಳು ಭಾನುವಾರದ ದಿನ ಎಲ್ಲೆಡೆ ವೈರಲ್ ಆಗಿದೆ. ಹಾಗೆಯೇ ನೆಟ್ಟಿಗರು ಬಿಜೆಪಿ ಪಕ್ಷದ ಆಡಳಿತದಲ್ಲಿನ ಕಳಪೆ ಕಾಮಗಾರಿ ಬಗ್ಗೆ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.

Not so good news … the ceiling of the new Veer Savarkar International Airport drops. #Andaman pic.twitter.com/yhjUOnXfQF
— Andaman Chronicle (@AndamanNews) July 23, 2023

ಕುಸಿದ ಭಾಗಗಳ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆದ ನಂತರ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದ ವಿರುದ್ಧ ಹರಿಹಾಯ್ದಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಈ ದಿನಗಳಲ್ಲಿ ಯಾವುದನ್ನು ಬೇಕಾದರೂ ಉದ್ಘಾಟನೆ ಮಾಡುತ್ತಾರೆ. ಅದು ಅಪೂರ್ಣ ಅಥವಾ ಕಳಪೆ (ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಸೇತುವೆಗಳು, ರೈಲುಗಳು, ಇತ್ಯಾದಿ) ಕಾಮಗಾರಿ ಯಾವುದಾದರೂ ಸರಿ. ಅವರ ಸಂಪುಟದ ಮಂತ್ರಿಗಳು ಸಹ ಮೋದಿ ಎದುರು ತಮ್ಮ ವಯಕ್ತಿಕ ಸೆನ್ಸೆಕ್ಸ್ ಹೆಚ್ಚಿಸಿಕೊಳ್ಳಲು ಉತ್ಸುಕತೆ ತೋರುತ್ತಾರೆ. ಇಂತಹ ಕಾಮಗಾರಿಗಳಿಗೆ ಭಾರತದ ತೆರಿಗೆದಾರರು ಮತ್ತು ಜನಸಾಮಾನ್ಯರು ಬೆಲೆ ತೆರುತ್ತಿದ್ದಾರೆ. ಇಂತಹ ವಿಷಾದಕರ ‘ನ್ಯೂ ಇಂಡಿಯಾ’ದಲ್ಲಿ ನಾವಿದ್ದೇವೆ” ಎಂದು ವ್ಯಂಗ್ಯವಾಡಿದ್ದಾರೆ.

The Prime Minister will inaugurate anything these days — even if it’s unfinished or substandard infrastructure (highways, airports, bridges, trains, etc)

More than willing ministers anxious to boost their Sensex with him oblige.

It’s the taxpayers and citizens who pay the cost.… https://t.co/TGUg128dsz
— Jairam Ramesh (@Jairam_Ramesh) July 23, 2023

“ಪೋರ್ಟ್ ಬ್ಲೇರ್‌ನಲ್ಲಿರುವ ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸುಲಭ ಪ್ರಯಾಣಕ್ಕೆ ದಾರಿಯಾಗಿದೆ. ವಿಶೇಷವಾಗಿ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನಕಾರಿಯಾಗಿದೆ. ಕಟ್ಟಡವು ನಾಳೆ, 18 ರಂದು, ಬೆಳಿಗ್ಗೆ 10:30 ಕ್ಕೆ ಉದ್ಘಾಟನೆಗೊಳ್ಳಲಿದೆ” ಎಂದು ಪ್ರಧಾನಿ ಮೋದಿ ಉದ್ಘಾಟನೆಗೂ ಮುನ್ನ ಟ್ವೀಟ್ ಮಾಡಿದ್ದರು.

The  new integrated terminal building at Veer Savarkar International Airport, Port Blair, will ensure easier travel to Andaman and Nicobar islands. This will be a big boost for tourism in particular. The building will be inaugurated tomorrow, 18th July, at 10:30 AM. https://t.co/iGP2ZLJxYl pic.twitter.com/i2QK2rwArO
— Narendra Modi (@narendramodi) July 17, 2023

ಅಂಡಮಾನ್ ನಿಕೋಬಾರ್ ನ ವೀರ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಂಬರುವ ಪ್ರಯಾಣಿಕರ ದಟ್ಟಣೆ ಮುನ್ಸೂಚನೆಯ ಆಧಾರದಲ್ಲಿ ನಿರ್ಮಿಸಲಾಗಿದೆ. ಅಂದಾಜು ₹707.73 ಕೋಟಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಂಡಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೇಳಿಕೊಂಡಿದೆ.