andhra pradesha – Peepal Media

3 ತಿಂಗಳ ಮಗನನ್ನು ಕೊಂದ ಆರೋಪ: ತಂದೆ ಬಂಧನ
ತಿರುಪತಿ: ಆಂಧ್ರಪ್ರದೇಶದ ತಿರುಪತಿಯ ಶ್ರೀಕಾಳಹಸ್ತಿ ಶುಕಬ್ರಹ್ಮ ಆಶ್ರಮದ ಬಳಿಯ ವಾಟರ್ ಹೌಸ್ ಕಾಲೋನಿಯಲ್ಲಿ ತನ್ನ ಮೂರು ತಿಂಗಳ ಮಗನನ್ನು ನೆಲಕ್ಕೆ ಎಸೆದು ಕೊಂದ ಆರೋಪದ ಮೇಲೆ ತಂದೆಯನ್ನು ಬಂಧಿಸಲಾಗಿದೆ ಎಂದು ಆಂಧ್ರಪ್ರದೇಶ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಮಗುವಿನ ಅಳುವಿನಿಂದ ಕೋಪಗೊಂಡ ಆತ ಈ ಕೃತ್ಯಕ್ಕೆ ಇಳಿದಿದ್ದಾನೆ ಎಂದು ಸ್ಥಳೀಯರ ಹೇಳಿಕೆ ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಸರ್ಕಲ್ ಇನ್ಸ್ಪೆಕ್ಟರ್‌ರೊಬ್ಬರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಸ್ಥಳೀರು ನೀಡಿರುವ ಮಾಹಿತಿ ಪ್ರಕಾರ, ನಾಲ್ಕು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾದ ಕಾರಣ ಮಗು ಅಳುತಿತ್ತು, ಈ ಕಾರಣ ಪತ್ನಿ ಸ್ವಾತಿಗೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಪತಿ ಅನಿಲ್‌ ಹೇಳಿದ್ದಾರೆ. ಆದರೆ ಇಬ್ಬರು ಯಾವುದೋ ಕಾರಣಕ್ಕೆ ಜಗಳವಾಡಲು ಪ್ರಾರಂಭಿಸಿದರು. ಆಗ ಮಗುವು ಜೋರಾಗಿ ಅಳಲು ಪ್ರಾರಂಭಿಸಿತು. ಈ ಕಾರಣ ಕೋಪಗೊಂಡ ಅನಿಲ್‌, ಮಗು ನಿಖಿಲ್‌ನನ್ನು ನೆಲದ ಮೇಲೆ ಎಸೆದಿದ್ದು, ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದದ್ದರಿಂದ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.

ಘಟನೆ ಬಳಿಕ ಸ್ಥಳೀಯರು ತಕ್ಷಣ ಪೊಲೀಸರನ್ನು ಸಂಪರ್ಕಿಸಿದ್ದು, ಅವರು ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಬಲವಾಗಿ ತೆಲೆಗೆ ಪೆಟ್ಟು ಬಿದ್ದಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ.

ಸರ್ಕಲ್ ಇನ್ಸ್ಪೆಕ್ಟರ್ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಲಾಗಿದ್ದು, ಏತನ್ಮಧ್ಯೆ, ಅನಿಲ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಲಾಗಿರುವುದಾಗಿ ತಿಳಿಸಿದ ಪೊಲೀಸರು, ಪ್ರಕರಣದ ಕುರಿತು ಮುಂದಿನ ಕಾನೂನು ಕ್ರಮವನ್ನು ಅನುಸರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕಾರ್ಖಾನೆಗೆ ಬೆಂಕಿ: 3 ಜನ ಸಾವು
ಆಂಧ್ರ ಪ್ರದೇಶ: ಚಿತ್ತೂರಿನ ಪೇಪರ್ ಪ್ಲೇಟ್ ತಯಾರಿಕಾ ಕಾರ್ಖಾನೆಯಲ್ಲಿ ನಿನ್ನೆ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ.

ಈ ಹಿನ್ನಲೆ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದ್ದು, ಅವಘಡದಲ್ಲಿ ಸಿಕ್ಕ ಕೆಲ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲುಮಾಡಲಾಗಿದೆ. ಈ ವಿಷಯದ ಕುರಿತು ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಕಾದು ನೋಡಬೇಕಾಗಿದೆ ಎಂದು ಚಿತ್ತೂರು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಂಧ್ರದಲ್ಲಿ ಮುಂದುವರೆದ ಮಳೆ : ಅಪಾರ ಪ್ರಮಾಣದ ಬೆಳೆ ನಾಶ
ಆಂಧ್ರಪ್ರದೇಶ: ರಾಜ್ಯದಲ್ಲಿ ಮುಂಜಾನೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಶ್ರೀಕಾಕುಳಂ ಜಿಲ್ಲೆಯಲ್ಲಿನ ಮನೆಗಳು, ರಸ್ತೆಗಳು ಜಲಾವೃತಗೊಂಡಿವೆ.

ಭಾರಿ ಮಳೆಯಿಂದಾಗಿ ಶ್ರೀಕಾಕುಳಂ ಜಿಲ್ಲೆಯಲ್ಲಿರುವ ನಾಗಾವಳಿ ನದಿ ನೀರು ಉಕ್ಕಿಹರಿಯುತ್ತಿದ್ದು, ನೀರಿನ ರಭಸಕ್ಕೆ ಸರ್ಕಾರಿ ಮತ್ತು  ಖಾಸಗಿ ಆಸ್ತಿಗಳು  ಕೊಚ್ಚಿಹೋಗಿವೆ. ಈ ಕಾರಣ 100ಕ್ಕೂ ಎಕರೆಗೂ ಹೆಚ್ಚು ಗೋಡಂಬಿ ಬೆಳೆ ನಾಶವಾಗಿದೆ. ಇದರಿಂದ ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು, ಮಳೆಯಿಂದಾಗಿ  ರೈತರು ಕಣ್ಣೀರಿಟ್ಟಿದ್ದಾರೆ.

ವಿಷಕಾರಿ ಅನಿಲ ಸೋರಿಕೆ: 121 ಮಹಿಳೆಯರು ಅಸ್ವಸ್ಥ‌
ವಿಶಾಖಪಟ್ಟಣಂ: ಅನಕಪಲ್ಲಿ ಜಿಲ್ಲೆಯ ಬ್ರಾಂಡಿಕ್ಸ್ ಎಸ್‌.ಇ.ಜೆಡ್‌ ನಲ್ಲಿರುವ ಸೀಡ್ಸ್ ಕಂಪನಿಯನ್ನು ಮುಚ್ಚಲು ಆಂದ್ರ-ರಾಜ್ಯ ಸರ್ಕಾರ ಆದೇಶಿಸಿದ್ದು, ಮಂಗಳವಾರ ರಾತ್ರಿ ವಿಷಕಾರಿ ಅನಿಲ ಸೋರಿಕೆ ನಂತರ 121 ಮಹಿಳೆಯರು ಅಸ್ವಸ್ಥರಾಗಿದ್ದಾರೆ. ಈ ವಿಚಾರವಾಗಿ ಮುಂದಿನ ಆದೇಶದವರೆಗೆ ಕಂಪನಿಯನ್ನು ಮುಚ್ಚುವಂತೆ ಸೂಚಿಸಲಾಗಿದೆ.

ಅನಕಪಲ್ಲಿಯಲ್ಲಿರುವ ಎನ್‌.ಟಿ.ಆರ್‌ ಆಸ್ಪತ್ರೆಯಲ್ಲಿ ಮಹಿಳಾ ಕಾರ್ಮಿಕರು ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಕೈಗಾರಿಕಾ ಸಚಿವ ಗುಡಿವಾಡ ಅಮರನಾಥ್‌, ಡಿಎಂಎಚ್‌ಒ ಹೇಮಂತ್‌ ಹಾಗೂ ಆಸ್ಪತ್ರೆ ಅಧೀಕ್ಷಕ ಶ್ರವಣಕುಮಾರ್‌ ಅವರನ್ನು ಭೇಟಿ ಮಾಡಿ ಕಾರ್ಮಿಕರ ಸ್ಥಿತಿಗತಿ ವಿಚಾರಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೀಡ್ಸ್ ಕಂಪನಿಯಲ್ಲಿ ಮಂಗಳವಾರ ಸಂಜೆ 6.45 ರಿಂದ 7.30 ರವರೆಗೆ 121 ಮಹಿಳಾ ಕಾರ್ಮಿಕರಿಗೆ ವಾಂತಿ, ವಾಕರಿಕೆ ಕಾಣಿಸಿಕೊಂಡಿದೆ.

ಎರಡು ತಿಂಗಳ ಹಿಂದೆ ಇದೇ ಘಟಕದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಮತ್ತೆ ಕಾರ್ಮಿಕರಲ್ಲಿ ಇದೇ ರೋಗಲಕ್ಷಣಗಳು ವರದಿಯಾಗಿವೆ. ತಕ್ಷಣ ಅವರನ್ನು ಅನಕಪಲ್ಲಿಯ ಐದು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ನಂತರ ಸರ್ಕಾರವು ಕಾರಣವನ್ನು ಕಂಡುಹಿಡಿಯಲು ಜಂಟಿ ಸಮಿತಿಯನ್ನು ರಚಿಸಿತ್ತು. ಇದಕ್ಕೆ ಹವಾನಿಯಂತ್ರಣ ಅನಿಲ ಸೋರಿಕೆಯೇ ಕಾರಣ ಎಂದು ಶಂಕಿಸಲಾಗಿದೆ ಎಂದು ಹೇಳಿದರು.

ಘಟನೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ. ವೈದ್ಯರ ಪ್ರಕಾರ ಎಲ್ಲಾ 121 ಕಾರ್ಮಿಕರ ಸ್ಥಿತಿ ಈಗ ಸ್ಥಿರವಾಗಿದೆ. ಎರಡನೇ ಬಾರಿಗೆ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಹೇಳಿದರು.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅವರು, ಸತ್ಯಾಂಶ ಹೊರಬೀಳುವವರೆಗೆ ಸ್ಥಾವರವನ್ನು ಮುಚ್ಚುವಂತೆ ಆದೇಶಿಸಿದರು.ಈ ಘಟನೆಗೆ ಕಂಪನಿಯೇ ಹೊಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.