Anekal – Peepal Media

ಮಹಿಳೆಯರ ಸಮಸ್ಯೆಗಳಿಗೆ ಆತ್ಮಹತ್ಯೆಯೆ ಪರಿಹಾರವಲ್ಲ: ನ್ಯಾ.ವಿನುತ ಬಿ.ಎಸ್‌
ಆನೇಕಲ್‌: ಮಹಿಳೆಯರ ಸಮಸ್ಯೆಗಳಿಗೆ ಆತ್ಮಹತ್ಯೆಯೆ ಪರಿಹಾರವಲ್ಲ. ಆಧುನಿಕತೆಯಿಂದ ನಮ್ಮ ಸಂಸ್ಕೃತಿಯನ್ನು ನಾವು ಮರೆಯುತ್ತಿದ್ದೇವೆ,ಹೀಗಾಗಿ ಮಹಿಳೆಯರು ಕಾನೂನು ತಿಳಿದುಕೊಳ್ಳಬೇಕು ಎಂದು 1 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿನುತ ಬಿ.ಎಸ್ ರವರು ಹೇಳಿದರು.

ಆನೇಕಲ್ ತಾಲೂಕಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು, ನಗರದ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಹೆಣ್ಷುಮಕ್ಕಳು ಸಮಾಜದಲ್ಲಿ ತುಂಬಾ ಹಿಂದೆ ಉಳಿದ್ದಾರೆ,ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಮುಂದೆಬರಬೇಕು,ಮಹಿಳೆಯರಿಗೆ ಆಗುತ್ತಿರುವಂತಹ ದೌರ್ಜನ್ಯವನ್ನು ವಿರೋಧಿಸಿ ಧ್ವನಿ ಎತ್ತಬೇಕು ಮತ್ತು  ಕಾನೂನಿನ ಬಗ್ಗೆ ಮಾಹಿತಿಗಳನ್ನು ತಿಳಿಸಿದುಕೊಂಡಿರಬೇಕು ಎಂದು ಹೇಳಿದರು.

ಟೆಲಿ ಲಾ ಕರ್ನಾಟಕ ವಕೀಲರಾದ ಪುರುಷೋತ್ತಮ ಎ. ಮಾತನಾಡಿ, ನ್ಯಾಯಾಧೀಶರು ಜನರ ಬಳಿಬರಬೇಕು, ಸಾಮಾನ್ಯ ಜನರಿಗೂ ಕಾನೂನು ತಲುಪಬೇಕು ಮತ್ತು ಕಾನೂನು ಉಚಿತವಾಗಿ ಸಿಗಬೇಕು ಎಂಬುದೇ ನವೆಂಬರ್ ತಿಂಗಳ 9 ನೇ ತಾರೀಖಿನ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಆಚರಣೆಯ ಉದ್ದೇಶ ಮತ್ತು 1987 ರ ಕಾನೂನು ಸೇವೆಗಳ ಕಾಯ್ದೆಯ ಉದ್ದೇಶ ಎಂದು ತಿಳಿಸಿದರು.

ಸಹಾಯಕ ಸರ್ಕಾರಿ ಅಭಿಯೋಜಕರಾದ ಆರ್.ಚಂದ್ರಶೇಖರ ಮಾತನಾಡಿ, ಹೊಲಿಗೆ ಯಂತ್ರದಿಂದ ಒಂದು ಕುಟುಂಬವನ್ನು ಸಾಕಬಹುದು, ನಮ್ಮ ತಂದೆ ಕೂಡ ಹೊಲಿಗೆ ಯಂತ್ರದಿಂದ ನಾವು ಈ ಮಟ್ಟಕ್ಕೆ ಬಂದಿದ್ದೇವೆ. ಆದರೆ ಕಾನೂನು ತಿಳಿದುಕೊಳ್ಳುವುದು ನಮ್ಮ ಜವಾಬ್ದಾರಿ ಎಲ್ಲರೂ ಕಾನೂನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷರಾದ ಆರ್.ರಮೇಶರವರು ಮಾತನಾಡಿ, ಮನುಷ್ಯ ‌ಹುಟ್ಟಿದಾಗಿನಿಂದ ಕಾನೂನು ನಿಮ್ಮನ್ನು ಹಿಂಬಾಲಿಸುತ್ತದೆ ಹಾಗೆಯೇ ಸತ್ತಮೇಲೂ ಕೂಡ ಕಾನೂನು ಬೇಕಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಕೀಲರ ಸಂಘ ಕಾರ್ಯದರ್ಶಿ ವೈ ಮಂಜುನಾಥ,  ಕಖಜಾಂಚಿ ಕೆ.ವಿ ರವಿ,  ವಕೀಲರಾದ ಶಿವರಾಜು, ಭಾಗ್ಯ, ನಾಗರತ್ನ, ನಿರ್ಮಲ,  ಕೌಶಲ್ಯ  ತರಬೇತಿ ಕೇಂದ್ರದ ರಾಜು, ಸೌಮ್ಯ, ಮಂಜುಳಾ, ಮುರಳಿ, ಜಯಶ್ರೀ ಮತ್ತು ಕಂಪ್ಯೂಟರ್ ತರಬೇತಿ ವಿದ್ಯಾರ್ಥಿಗಳು, ಮತ್ತು ಹೊಲಿಗೆ ತರಬೇತಿ ಶಿಬಿರದ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆನೆನಾಡಿನಲ್ಲಿ ದೀಪಾವಳಿ ಕವಿಗೋಷ್ಟಿ
ಆನೇಕಲ್‌: ಪ್ರಜಾತಾರೆ, ಸಂಕ್ರಮಣ ಬಳಗ ಮತ್ತು ಕಲಾ ಸಮೂಹ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಆನೆನಾಡಿನಲ್ಲಿ ದೀಪಾವಳಿ ಕವಿಗೋಷ್ಟಿ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ಆನೇಕಲ್‌ನ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ರಾಷ್ಟ್ರೀಯ ಕ್ರೀಡಾಪಟು ಶಾಲಿನಿ ಉದ್ಘಾಟಿಸಿದರು. ನಂತರ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕವನ ವಾಚನ ಮಾಡಿದರು.

ಕಾರ್ಯಕ್ರಮದ ಕುರಿತು ನೆರಳೂರು ಗ್ರಾಮ ಪಂಚಾಯತಿ ಸದಸ್ಯರು ಮಂಜುಳ ರಾಮಕೃಷ್ಣ ಮಾತನಾಡಿ, ಇಂತಹ ಕಾರ್ಯಕ್ರಮಗಳಿಗೆ ಮಕ್ಕಳ ಪಾಲ್ಗೊಳ್ಳುವಿಕೆ, ಆಸಕ್ತಿಯನ್ನು ಮೂಡಿಸುವುದು ಬಹಳ ಮುಖ್ಯ, ಕಾರ್ಯಕ್ರಮದಲ್ಲಿ ಮಕ್ಕಳ ಭಾಗವಹಿಸುವಿಕೆ ನೋಡಿ ಹಬ್ಬದ ದಿನ ಎಲ್ಲ ವಿಧಧ ತಿನಿಸು ತಿಂದು, ವಿವಿಧ ಪಟಕಿಗಳನ್ನಾ ಸಿಡಿಸಿದಂತೆ ಭಾಸವಾಯ್ತು, ಕಾರ್ಯಕ್ರಮದಲ್ಲಿ ಎಲ್ಲಾರ ಭಾಗವಹಿಸುಕೆ ದೊಡ್ಡವರು ಸಣ್ಣವರು ಎನ್ನುವ ಯಾವುದೇ ಭೇದ ಭಾವ ಇಲ್ಲದೆ ತುಂಬಾ ಚೆನ್ನಾಗಿ ಮೂಡಿಬಂದಿದೆ.  ಕವಿಗೋಷ್ಠಿಯಲ್ಲದೆ, ಗುರಿ, ಧ್ಯೇಯ ಹಾಗೂ ಕನಸುಗಳ ಹಾದಿ, ವಿಧ್ಯಾರ್ಥಿಗಳ ಪೋಷಕರ ಕರ್ತವ್ಯ ಬಗ್ಗೆ, ವಿಧ್ಯಾರ್ಥಿಗಳು ಇಂತಹ ಸಾಹಿತ್ಯಾಸಕ್ತಿ, IAS, KAS, ಲಾಯರ್ ಆಗುವ ಕನಸುಗಳ ಇಟ್ಟುಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಡಾ. ಚಿನ್ನಪ್ಪ ಚಿಕ್ಕಹಾಗಡೆ ಮಾತನಾಡಿ, ಸಾಹಿತ್ಯ ಸಂಸ್ಕೃತಿ ಭಾರತೀಯ ಪರಂಪರೆಯ ಜೀವಂತಿಕೆಯನ್ನು ಪ್ರಕಟಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಜೀವನದ ಅನುಭವವನ್ನು ಕಟ್ಟಿಕೊಟ್ಟಿದ್ದಾರೆ, ತಂದೆ, ತಾಯಿ ಪರಿಸರ, ಶಾಲೆ, ಶಿಕ್ಷಣ, ನೆರೆ ಹೊರೆ, ತಮ್ಮ ಗುರಿ ಉದ್ದೇಶಗಳನ್ನು ನಮ್ಮ ಪರಂಪರೆಯ ಬಗ್ಗೆ ಕವನಗಳನ್ನು ಬರೆದಿರುವುದು ಅರ್ಥಪೂರ್ಣವಾಗಿದೆ ಎಂದರು.

ಆದೂರು ಪ್ರಕಾಶ್ ಮಾತನಾಡಿ, ಹಿರಿಯರ ಅನುಭವ ನಮಗೆ ಬಹಳ ಮುಖ್ಯ, ನಮಗೆ ಆದರ್ಶವಾಗಬೇಕು, ನಮ್ಮ ಮನಸಿನ ಕತ್ತಲು ಹೋಡಿಸಿ ಬೆಳಕು ತುಂಬಿಕೊಳ್ಳಬೇಕು ಎಂದು ಹೇಳಿದರು.

ಮಮತಾ ಗಮನ ಮಾತನಾಡಿ, ಇಡೀ ದೇಶ ದ್ವೇಶದ ಗಾಳಿಯನ್ನು ಹರಡುತ್ತಿರುವಾಗ ಮನದೊಳಗಿನ ಕಸವನ್ನು, ಕಲ್ಮಶವನ್ನು ದ್ವೇಷ ಅಸುಯನ್ನು ಬಿಟ್ಟು ಪ್ರೀತಿಯ ದೀಪವನ್ನು ಬೆಳಗಿಸಿದೆ ಈ ಕವಿ ಗೋಷ್ಟಿ ಎಂದರು.

ವಕೀಲರಾದ ಅನುರಾಧಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ, ಯುವಜನರಲ್ಲಿನ ಸೃಜನಶೀಲತೆಯನ್ನು ಗುರುತಿಸಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ಅವರ ಭಾವನೆಗಳನ್ನು ಅಭಿವ್ಯಕ್ತಿಸಲು ಇದು ಉತ್ತಮ ವೇದಿಕೆ ಎಂದು ಹೇಳಿದರು.

ನೆಸೆನೂರು ಮುಖ್ಯೋಪಾಧ್ಯಾಯರಾದ ಯಶೋಧ, ವಕೀಲರಾದ ಪುರಷೋತ್ತಮ, ಸಾಮಾಜಿಕ ಕಾರ್ಯಕರ್ತೆ ಅನುರಾಧಾ ಆರ್, ಗಂಧದ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ವಿಜಯರಾಮ್‌, ಜಿಲ್ಲಾಧ್ಯಕ್ಷರಾದ ಸ್ವಾಭಿಮಾನಿ ಸತೀಶ್‌ರವರು, ಸಾಹಿತಿಗಳಾದ ಅಂಬರೀಶ್, ಮದನ್, ಮಿಥುನ್, ಅಂಜಲಿ, ದಿವ್ಯಕಿರುನಗೆ, ಸಂಧ್ಯ ಎಂ, ಕಾವ್ಯ, ಶಶಿಜನದಿನಿ, ತೇಜಸ್ವಿನಿ ಅನಲ, ಶೋಭಾ, ಶ್ರವಂತಿಸಿರಿ, ಸಿಂಚನ, ವಿಧ್ಯ, ಕವಿತ, ಉಮೇಕುಲ್ಸುಂ, ಸಾಹಿತ್ಯ, ರೈತರಾದ ಮುರುಗೇಶ್ ದಾಸನಪುರ ಮಂಜು, ವಾಣಿ, ಗೋವಿಂದ, ಶಿವು, ಮದುಶ್ರೀ ದನಲಕ್ಷ್ಮಿ, ರೂಪ,ಬಾನು, ಬಿನೀಷಾ, ಮದುಶ್ರೀ, ಹಾಡುಗಾರರಾದ ಚೈತ್ರ, ಹಿರಣ್ಣಯಿ, ಕಾರ್ಯಕ್ರಮದಲ್ಲಿ ಹಾಜರಿದ್ದರು.

ರಕ್ತಚಂದನ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ
ಆನೇಕಲ್‌ : ತಾಲ್ಲೂಕಿನ ಬೊಮ್ಮಸಂದ್ರದ ಬಳಿ ರಕ್ತಚಂದನ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಆನೇಕಲ್‌ ಉಪ ವಿಭಾಗದ ಪೊಲೀಸರು ಬಂಧಿಸಿದ್ದು ₹ 25 ಲಕ್ಷ ಮೌಲ್ಯದ ರಕ್ತಚಂದನ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಸರಕು ಸಾಗಣೆ ವಾಹನದಲ್ಲಿ ರಕ್ತಚಂದನ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ತಿಳಿದ ಡಿವೈಎಸ್‌ಪಿ ಮಲ್ಲೇಶ್‌ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದ್ದು, ₹ 25 ಲಕ್ಷ ಬೆಲೆ ಬಾಳುವ 750 ಕೆ.ಜಿಯಷ್ಟು ರಕ್ತಚಂದನ ವಶಪಡಿಸಿಕೊಂಡಿದ್ದಾರೆ.

ಸರ್ಜಾಪುರದ ಬಷೀರ್ ಅಹಮದ್, ಅಡಿಗಾರಕಲ್ಲಹಳ್ಳಿಯ ನಿಜಾಮ್‌ ಮತ್ತು ತೋಷಿದ್‌ ರಕ್ತಚಂದನ ಸಾಗಾಟನೆ ಮಾಡುತ್ತಿದ್ದ ವ್ಯಕ್ತಿಗಳು ಎಂದು ತಿಳಿದುಬಂದಿದೆ.