Aparna Funeral – Peepal Media

ಸರ್ಕಾರಿ ಗೌರವಗಳೊಂದಿಗೆ ನಟಿ ಅಪರ್ಣಾ ಅಂತ್ಯ ಸಂಸ್ಕಾರ
ಬೆಂಗಳೂರು: ಶ್ವಾಸಕೋಶ ಕ್ಯಾನ್ಸರ್‌ನಿಂದ ನಿನ್ನೆ ರಾತ್ರಿ ನಿಧನರಾದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರ ಅಂತ್ಯಸಂಸ್ಕಾರ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ  ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಚಿತ್ರರಂಗದ ಗಣ್ಯರು ಸೇರಿ ಕುಟುಂಬದ ಆಪ್ತರು ಸೇರಿದಂತೆ ನೂರಾರು ಜನರ ಸಮ್ಮುಖದಲ್ಲಿ ಪೊಲೀಸ್‌ ಗೌರವದೊಂದಿಗೆ, ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಯಿತು. ಹಿರಿಯ ನಟರಾದ ಶ್ರೀನಾಥ್‌, ಸೃಜನ್‌ ಲೋಕೇಶ್‌, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಶಾಸಕ ಮುನಿರತ್ನ ಅಂತಿಮ ದರ್ಶನ ಪಡೆದರು.

ಎಂಬಿ ಪಾಟೀಲ್ ಸಂತಾಪ: ಕನ್ನಡ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರ ನಿಧನಕ್ಕೆ ವಿಜಯಪುರದಲ್ಲಿ ಸಚಿವ ಎಂ ಬಿ ಪಾಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪರ್ಣಾ ಕನ್ನಡದ ಖ್ಯಾತ ನಿರೂಪಕಿಯಾಗಿದ್ದರು. ಇದು ಅತ್ಯಂತ ದು:ಖಕರ ಸಂಗತಿ. ಕಿರಿಯ ವಯಸ್ಸಿನಲ್ಲಿ ಅವರ ಸಾವಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ. ದು:ಖ ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.‌ ಅಪರ್ಣಾ ಅವರ ಸ್ವಭಾವ ಉಳಿದವರಿಗೆ ದಾರಿದೀಪ ಆಗಲಿ‌‌ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

ಕೋಟ ಶ್ರೀನಿವಾಸ ಪೂಜಾರಿ ವಿಷಾದ: ನಮ್ಮ ಸರ್ಕಾರ ಇದ್ದಾಗ ಮುಖ್ಯಮಂತ್ರಿಗಳು ಭಾಗವಹಿಸುವ ಎಲ್ಲ ಕಾರ್ಯಕ್ರಮಗಳ ನಿರೂಪಣೆಗೆ ಬರುತ್ತಿದ್ದರು. ನಿರೂಪಣೆ, ಸ್ವರಭಾರ, ಕನ್ನಡದ ಧ್ವನಿ ಎಲ್ಲವೂ ಅದ್ಭುತ. ಅಪರ್ಣಾ ಕನ್ನಡದ ಮನೆ ಮಗಳು. ಅವರ ಸಾವಿನಿಂದ ಕನ್ನಡದ ದ್ವನಿಯೊಂದು ಉಡುಗಿದಂತಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

ಕರಾವಳಿಯ ಕಂಬಳದ ಬಗ್ಗೆ ನಿರೂಪಕಿ ಅಪರ್ಣಾ ಅವರಿಗೆ ಕಲ್ಪನೆ ಇರಲಿಲ್ಲ. ಆದರೆ ವಿಚಾರವನ್ನು ತಿಳಿದುಕೊಂಡು ನಿರೂಪಣೆ ಮಾಡುತ್ತಿದ್ದರು. ಯಾವುದೇ ಕಾರ್ಯಕ್ರಮಗಳಿಗೆ ತಮ್ಮ ನಿರೂಪಣೆಯ ಮೂಲಕ ಇಡೀ ಕಾರ್ಯಕ್ರಮಕ್ಕೆ ಮೆರುಗು ನೀಡುತ್ತಿದ್ದರು. ಅಪರ್ಣಾ ನಿಧನದಿಂದ ಕನ್ನಡದ ಧ್ವನಿಯೊಂದು ಕಳೆದು ಹೋಗಿದೆ ಎಂದು ಮಾಧ್ಯಮಗಳೊಂದಿಗೆ ತಮ್ಮ ಭಾವುಕ ನುಡಿಗಳನ್ನು ಹಂಚಿಕೊಂಡರು.