aravindh kejriwal – Peepal Media

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ರಿಗೆ 5ನೇ ಸಮನ್ಸ್: ನನ್ನನ್ನು ಬಂಧಿಸುವ ಕುತಂತ್ರ ಎಂದ ಕೇಜ್ರಿವಾಲ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED)ವು ಮತ್ತೊಂದು ಸಮನ್ಸ್ ಜಾರಿ ಮಾಡಿದೆ.

ಕೇಜ್ರಿವಾಲ್‌ಗೆ ಸಲ್ಲಿಕೆಯಾಗುತ್ತಿರುವ 5ನೇ ಸಮನ್ಸ್ ಇದಾಗಿದೆ. ಫೆ.18ಕ್ಕೆ ವಿಚಾರಣೆಗೆ ಹಾಜರಾಗಲು ಆದೇಶಿಸಲಾಗಿದೆ. ಜ.18ರಂದು ಅವರು ವಿಚಾರಣೆಗೆ ಹಾಜರಾಗಬೇಕಿತ್ತು. ಅದಕ್ಕೆ ಅವರು ಗೈರಾಗಿದ್ದರು. ಇದಕ್ಕೂ ಮೊದಲು ಜನವರಿ 3, ಡಿಸೆಂಬರ್‌ 22 ಮತ್ತು ನವೆಂಬರ್ 2ರಂದು ಅವರಿಗೆ ಸಮನ್ಸ್ ಜಾರಿಯಾಗಿತ್ತು. ಅಬಕಾರಿ ನೀತಿಯ ವ್ಯವಹಾರದಲ್ಲಿ ಅವರ ಪಾತ್ರ ಕುರಿತು ಹೇಳಿಕೆ ದಾಖಲಿಸುವಂತೆ ಕೇಜ್ರಿವಾಲ್‌ಗೆ ನಿರ್ದೇಶನಾಲಯ ಸೂಚಿಸಿದೆ.

ನನ್ನನ್ನು ಬಂಧಿಸುವ ಉದ್ದೇಶ: ಸಮನ್ಸ್ ಕಳುಹಿಸುತ್ತಿರುವ ಹಿಂದೆ ದುರುದ್ದೇಶ ಅಡಗಿದೆ. ಅಕ್ರಮ ಸಮನ್ಸ್‌ ಇದಾಗಿದೆ ಎಂದಿರುವ ಕೇಜ್ರಿವಾಲ್‌, ‘ಜಾರಿ ನಿರ್ದೇಶನಾಲಯದ ಉದ್ದೇಶ ಸರಿಯಾಗಿದ್ದರೆ ನಾನು ವಿಚಾರಣೆ ಎದುರಿಸಲು ಸಿದ್ಧ. ಆದರೆ ನನ್ನನ್ನು ಬಂಧಿಸುವ ಉದ್ದೇಶ ಇದರ ಹಿಂದೆ ಅಡಗಿದೆ. ಈ ಮೂಲಕ ಲೋಕಸಭಾ ಚುನಾವಣೆಯಿಂದ ದೂರ ಇಡುವ ಕುತಂತ್ರ ಮಾಡುತ್ತಿದ್ದಾರೆ ಎಂದು ಮಾದ್ಯಮಗಳಿಗೆ ಅರವಿಂದ್ ಕೇಜ್ರಿವಾಲ್‌ ಹೇಳಿಕೆ ನೀಡಿದ್ದಾರೆ.

‘ಕಾನೂನು ದೃಷ್ಟಿಯಲ್ಲಿ ಈ ಎಲ್ಲಾ ನೋಟಿಸ್‌ಗಳೂ ಅಕ್ರಮ ಹಾಗೂ ಅಸಿಂಧು. ಈ ಹಿಂದೆ ಇಡಿ ಕಳುಹಿಸಿರುವ ಇಂಥ ನೋಟಿಸ್‌ಗಳನ್ನು ಅಸಿಂಧುಗೊಳಿಸಿ ನ್ಯಾಯಾಲಯಗಳು ಆದೇಶಿಸಿರುವ ಉದಾಹರಣೆಗಳು ಸಾಕಷ್ಟಿವೆ. ರಾಜಕೀಯ ಪ್ರೇರಣೆಯಿಂದ ಇಂಥ ನೋಟಿಸ್‌ಗಳನ್ನು ನನಗೆ ಕಳುಹಿಸಲಾಗುತ್ತಿದೆ’ ಎಂದು 4ನೇ ನೋಟಿಸ್‌ ಸಲ್ಲಿಕೆಯಾದಾಗ ಕೇಜ್ರಿವಾಲ್ ಹೇಳಿದ್ದರು.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ 2021–22ರಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನೀತಿಯನ್ನು ಹಿಂಪಡೆಯಲಾಗಿತ್ತು. 2023ರ ಡಿ. 2ರಲ್ಲಿ ಸಲ್ಲಿಸಿದ 6ನೇ ಆರೋಪಪಟ್ಟಿಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ಹಾಗೂ ಅವರ ಆಪ್ತ ಸರ್ವೇಶ್ ಮಿಶ್ರಾ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು. ಇಡಿ ಪ್ರಕಾರ 2022ರಲ್ಲಿ ಗೋವಾ ಚುನಾವಣಾ ಪ್ರಚಾರಕ್ಕಾಗಿ ಒಟ್ಟು ₹ 45 ಕೋಟಿ ಲಂಚ ಪಡೆಯಲಾಗಿದೆ ಎಂಬ ದೂರು ಕೇಳಿ ಬಂದಿತ್ತು.

ಪ್ರಕರಣದ ವಿಚಾರಣೆ ನಡೆಸುವಂತೆ ಹಾಗೂ ನೀತಿಯನ್ನು ರದ್ದುಪಡಿಸುವಂತೆ ದೆಹಲಿ ಲೆಫ್ಟಿನೆಂಟ್ ಜನರಲ್ ವಿನಯ್ ಕುಮಾರ್ ಸೆಕ್ಸೇನಾ ಅವರು ಆದೇಶಿಸಿದ್ದರು. ಈವರೆಗೂ ಎಎಪಿ ಮುಖಂಡರಾದ ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ (ಫೆ. 26) ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ (ಅ. 5) ಅವರನ್ನು ಬಂಧಿಸಿತ್ತು.

ದೆಹಲಿ ಸುಗ್ರೀವಾಜ್ಞೆ ಮಸೂದೆಗೆ ಅನುಮೋದನೆ.. ಕೇಜ್ರಿವಾಲ್ ಮಹತ್ವದ ನಿರ್ಧಾರ..
ದೆಹಲಿ: ದೆಹಲಿ ಸೇವಾ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತ ಬೆನ್ನಲ್ಲೇ ಸಿಎಂ ಕೇಜ್ರಿವಾಲ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸೇವೆ ಮತ್ತು ವಿಜಿಲೆನ್ಸ್ ಇಲಾಖೆಗಳ ಉಸ್ತುವಾರಿ ಹೊತ್ತಿರುವ ಸೌರಭ್ ಭಾರದ್ವಾಜ್ ಅವರಿಂದ ಈ ಪದವಿಯನ್ನು ವಾಪಸ್‌ ಪಡೆಯಲಾಗಿದೆ.

ಈ ಇಲಾಖೆಗಳನ್ನು ಲೋಕೋಪಯೋಗಿ ಸಚಿವ ಅತಿಶಿ ಅವರಿಗೆ ವಹಿಸಲಾಗಿದೆ. ಸಿಎಂ ಕೇಜ್ರಿವಾಲ್ ಅವರು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪತ್ರವನ್ನೂ ಕಳುಹಿಸಿದ್ದಾರೆ.

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್ ಜೈಲಿಗೆ ಹೋದ ನಂತರ, ಅವರಿಗೆ ನೀಡಲಾದ ಇಲಾಖೆಗಳನ್ನು ಸೌರಭ್ ಭಾರದ್ವಾಜ್ ಮತ್ತು ಅತಿಶಿಗೆ ವಹಿಸಲಾಯಿತು. ಕಳೆದ ಜೂನ್ ತಿಂಗಳಿನಲ್ಲಿ ಸಚಿವ ಅತಿಶಿ ಅವರಿಗೆ ಹೆಚ್ಚುವರಿಯಾಗಿ ಕಂದಾಯ, ಯೋಜನೆ ಮತ್ತು ಹಣಕಾಸು ಇಲಾಖೆಗಳ ಜವಾಬ್ದಾರಿಯನ್ನು ವಹಿಸಲಾಗಿತ್ತು. ಕಲ್ಕಿಜಿ ಕ್ಷೇತ್ರದಿಂದ ಗೆದ್ದಿರುವ ಅವರಿಗೆ 14 ಇಲಾಖೆಗಳನ್ನು ಹಂಚಿಕೆ ಮಾಡಲಾಗಿದೆ. ಇತ್ತೀಚಿನ ನಿರ್ಧಾರದೊಂದಿಗೆ ಅತಿಶಿ ದೆಹಲಿ ಸರ್ಕಾರದಲ್ಲಿ ಅತಿ ಹೆಚ್ಚು ಖಾತೆಗಳನ್ನು ಹೊಂದಿರುವ ಏಕೈಕ ಮಹಿಳಾ ಸಚಿವೆಯಾಗಿದ್ದಾರೆ.

ದೆಹಲಿ ಸುಗ್ರೀವಾಜ್ಞೆ ಮಸೂದೆಯ ಅನುಮೋದನೆಯ ನಂತರ, ಸರ್ಕಾರವು ಭಾರದ್ವಾಜ್ ಅವರಿಂದ ಇಲಾಖೆಗಳನ್ನು ಹಿಂಪಡೆಯುವ ಮೂಲಕ ಬದಲಾವಣೆಗಳನ್ನು ಮಾಡಿತು. ದೆಹಲಿ ಸುಗ್ರೀವಾಜ್ಞೆ ಮಸೂದೆ ಅಂಗೀಕಾರದ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಜಿಲೆನ್ಸ್ ಮತ್ತು ಸೇವೆಗಳಿಗೆ ಸಂಬಂಧಿಸಿದ ಇಲಾಖೆಗಳ ವಿರುದ್ಧ ಗಂಭೀರ ಆರೋಪ ಮಾಡಿದರು. ಬಳಿಕ ಸಿಎಂ ಕೇಜ್ರಿವಾಲ್ ಈ ಮಟ್ಟಿಗೆ ಬದಲಾವಣೆ ಮಾಡಿದ್ದಾರೆ. ಅತಿಶಿ ಮತ್ತು ಭಾರದ್ವಾಜ್ ಈ ವರ್ಷದ ಮಾರ್ಚ್‌ನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಾಂಚನ್‌ ಜರಿವಾಲಾ ನಾಪತ್ತೆ : ಬಿಜೆಪಿ ವಿರುದ್ದ ಎಎಪಿ ಕಿಡ್ನಾಪ್‌ ಆರೋಪ
ಗುಜರಾತ್‌: ಗುಜರಾತ್ ವಿಧಾನಸಭಾ ಚುನಾವಣೆ 2022ರ ಸೂರತ್‌ನ ಎಎಪಿ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರು ನಾಮಪತ್ರ ಅಂಗೀಕರಿಸಿದ ನಂತರ ಬಿಜೆಪಿ ಅವರನ್ನು  ಅಪಹರಿಸಿದೆ.ಅವರು ಮತ್ತು ಅವರ ಕುಟುಂಬದವರು ನಿನ್ನೆಯಿಂದ ಕಾಣೆಯಾಗಿದ್ದಾರೆ ಎಂದು ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅರವಿಂದ್‌ ಕೇಜ್ರೀವಾಲ್‌, “ಸೂರತ್ ಪೂರ್ವದಿಂದ ನಮ್ಮ ಅಭ್ಯರ್ಥಿ ಕಾಂಚನ್ ಜರಿವಾಲಾ ಮತ್ತು ಅವರ ಕುಟುಂಬ ನಿನ್ನೆಯಿಂದ ಕಾಣೆಯಾಗಿದೆ. ಮೊದಲಿಗೆ, ಬಿಜೆಪಿ ಅವರ ನಾಮಪತ್ರವನ್ನು ತಿರಸ್ಕರಿಸಲು ಪ್ರಯತ್ನಿಸಿತ್ತು. ಆದರೆ ಅವರ ನಾಮನಿರ್ದೇಶನವನ್ನು ಅಂಗೀಕರಿಸಿದ ನಂತರ, ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಅವರ ಮೇಲೆ ಒತ್ತಡ ಹೇರಲಾಯಿತು. ಇದೇ ಕಾರಣದಿಂದ ಅವರನ್ನು ಕಿಡ್ನಾಪ್‌ ಮಾಡಲಾಗಿದೆಯೇ ? ಎಂದು ಕೇಳಿದ್ದಾರೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: 117 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದ ಎಎಪಿ
ಹೊಸದಿಲ್ಲಿ: ಡಿಸೆಂಬರ್ 4 ರಂದು ನಡೆಯಲಿರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಆಮ್ ಆದ್ಮಿ ಪಕ್ಷವು 117 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ, ಎಎಪಿ ರಾಜಕೀಯ ವ್ಯವಹಾರಗಳ ಸಮಿತಿಯ ಮ್ಯಾರಥಾನ್ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಯಿತು.

ಈ ಹಿನ್ನಲೆಯಲ್ಲಿ, ʼತಮ್ಮ ಪ್ರದೇಶಗಳಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿರುವ 117 ಮಂದಿ ಪಕ್ಷದ ಹಳೆಯ ಮತ್ತು  ಕಠಿಣ ಪರಿಶ್ರಮಿ ಸ್ವಯಂಸೇವಕರು ಟಿಕೆಟ್ ಹಂಚಿಕೆಯಲ್ಲಿ ಆದ್ಯತೆ ಪಡೆದಿದ್ದಾರೆʼ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು 250 ಸದಸ್ಯರ ಸದನಕ್ಕೆ ಶುಕ್ರವಾರ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು. ಈ ಹಿಂದೆ ʼಜನರ ಆಯ್ಕೆ ಪಕ್ಷದ ಧ್ವನಿಯಾಗಿದೆʼ ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿತ್ತು. ಅದರಂತೆ ಎಲ್ಲಾ ಸಮೀಕ್ಷೆಗಳಲ್ಲಿ ಉನ್ನತ ಸ್ಥಾನ ಪಡೆದ ನಂತರ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಹಳೆಯ ಪಕ್ಷದ ಕಾರ್ಯಕರ್ತರು ಆದ್ಯತೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಟಿಕೆಟ್ ನೀಡುವ ಮೊದಲು, ಎಎಪಿ ಎಲ್ಲಾ ಅಭ್ಯರ್ಥಿಗಳನ್ನು ಸಮೀಕ್ಷೆ ಮಾಡಿ ಸಾರ್ವಜನಿಕರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಈ ಕಾರಣ ಮುಂಬರುವ ನಾಗರಿಕ ಚುನಾವಣೆಯಲ್ಲಿ ಸ್ಪರ್ಧಿಸಲು 20,000 ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದರು.

ಸತತ ಎರಡನೇ ದಿನವೂ ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಶನಿವಾರ ಸಭೆ ಸೇರಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಮತ್ತು ಚುನಾವಣೆಗೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಚರ್ಚಿಸಿತು.

ದೆಹಲಿ ಮದ್ಯ ನೀತಿ ಪ್ರಕರಣ: ಫಾರ್ಮಾ ಸಂಸ್ಥೆಯ ಮುಖ್ಯಸ್ಥ ಶರತ್ ರೆಡ್ಡಿ ಬಂಧನ
ನವದೆಹಲಿ: ಇತ್ತೀಚಿಗೆ ರದ್ದಾದ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮ ಹಾಗು ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಬುಧವಾರ ಜಾರಿ ನಿರ್ದೇಶನಾಲಯವು ಫಾರ್ಮಾ ಕಂಪನಿಯ ನಿರ್ದೇಶಕರಾದ ಶರತ್ ರೆಡ್ಡಿ ಅವರನ್ನು ಬಂಧಿಸಿದೆ.

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಹೈದರಾಬಾದ್ ಮೂಲದ ಅರಬಿಂದೋ ಫಾರ್ಮಾದ ನಿರ್ದೇಶಕ ಶರತ್ ರೆಡ್ಡಿ ಮತ್ತು ಪೆರ್ನೋಡ್ ರಿಕಾರ್ಡ್ನ ಬೆನಾಯ್ ಬಾಬು ಅವರನ್ನು, ಬುಧವಾರ ತಡರಾತ್ರಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಅಡಿಯಲ್ಲಿ ಏಜೆನ್ಸಿ ಬಂಧಿಸಿದೆ.

ತನಿಖಾ ಸಂಸ್ಥೆಯು ಈ ಹಿಂದೆ ಶರತ್ ರೆಡ್ಡಿ ಅವರಿಗೆ ಸಂಬಂಧಸಿದ ಸ್ಥಳಗಳಲ್ಲಿ ಶೋಧ ನಡೆಸಿತ್ತು ಮತ್ತು ಎರಡು ಬಾರಿ ವಿಚಾರಣೆ ನಡೆಸಿತ್ತು.

ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಇಲ್ಲಿಯವರೆಗೆ ಅನೇಕ ದಾಳಿಗಳನ್ನು ನಡೆಸಿದೆ. ಸೆಪ್ಟೆಂಬರ್‌ನಲ್ಲಿ ಇಂಡೋಸ್ಪಿರಿಟ್ ಎಂಬ ಮದ್ಯ ತಯಾರಿಕಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹಂದ್ರು ಅವರನ್ನೂ ಸಹ ಬಂಧಿಸಿತ್ತು.

ದೆಹಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಇತರರನ್ನು ಹೊರತುಪಡಿಸಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಆರೋಪಿ ಎಂದು ಹೆಸರಿಸಿ, ಸಿಬಿಐ ಸಲ್ಲಿಸಿದ ದೂರನ್ನು ಗಮನಿಸಿದ ನಂತರ ಕೇಂದ್ರ ಏಜೆನ್ಸಿ ಆಗಸ್ಟ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.

ಈ ತಿಂಗಳ ಆರಂಭದಲ್ಲಿ, ಸಂಸ್ಥೆಯು ಮನೀಶ್ ಸಿಸೋಡಿಯಾ ಅವರ ಸಹಾಯಕನ ನಿವಾಸವನ್ನು ಶೋಧಿಸಿತ್ತು ಮತ್ತು ನಂತರ ದೆಹಲಿಯ ತನ್ನ ಕಚೇರಿಯಲ್ಲಿ ಅವರನ್ನು ವಿಚಾರೆಣೆ ನಡೆಸಿತ್ತು.

ದೆಹಲಿಯ ಅಬಕಾರಿ ನೀತಿ 2021-22 ರ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು ಮಾಡಿದ ನಂತರ ಅಬಕಾರಿ ಯೋಜನೆ ಸ್ಕ್ಯಾನರ್ ಅಡಿಯಲ್ಲಿ ಬಂದಿದೆ. ಲೆಫ್ಟಿನೆಂಟ್ ಗವರ್ನರ್ ಅವರು 11ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರು.

ಗುಜರಾತ್ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಮದ್ಯ ನೀತಿ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಪ್ರಾರಂಭವಾಯಿತು.

ಈ ಹಿನ್ನಲೆಯಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಪರವಾಗಿ ಕೆಲಸ ಮಾಡುತ್ತಿರುವ ಕೇಂದ್ರವು, ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ, ಆಮ್ ಆದ್ಮಿ ಪಕ್ಷದ (ಎಎಪಿ) ಪ್ರಚಾರಕ್ಕೆ ಹಾನಿ ಮಾಡುವ ಉದ್ದೇಶದಿಂದ ಈ ರೀತಿ ತನಿಖೆ ಕೈಗೊಂಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು.

ಗುಜರಾತ್ ವಿಧಾನಸಭಾ ಚುನಾವಣೆ: ಇಂದು ಪಕ್ಷದ ಸಿಎಂ ಅಭ್ಯರ್ಥಿಯ ಹೆಸರು ಪ್ರಕಟಿಸಲಿರುವ ಅರವಿಂದ್‌ ಕೇಜ್ರಿವಾಲ್‌
ಅಹಮದಾಬಾದ್: ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇಂದು ಪ್ರಕಟಿಸಲಿದ್ದಾರೆ ಎಂದು ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ.

ಕೇಜ್ರಿವಾಲ್ ಅವರು ಶುಕ್ರವಾರ ಅಹಮದಾಬಾದ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ಮುಖ್ಯಮಂತ್ರಿ ಹೆಸರನ್ನು ಘೋಷಿಸಲಿದ್ದಾರೆ ಎಂದು ಪಕ್ಷವು ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ವಾರ ಕೇಜ್ರಿವಾಲ್‌ ಅವರು, ಗುಜರಾತ್‌ನಲ್ಲಿ ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕೆಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡಲು, SMS, ವಾಟ್ಸಾಪ್‌, ಈ ಮೇಲ್‌ ಮೂಲಕ ಪಕ್ಷವನ್ನು ಸಂಪರ್ಕಿಸುವಂತೆ ಜನರಲ್ಲಿ ಒತ್ತಾಯಿಸಿದ್ದರು.

ಈ ಹಿನ್ನಲೆಯಲ್ಲಿ, ರಾಜ್ಯದ ಜನರು ಪಕ್ಷಕ್ಕೆ ಸಲ್ಲಿಸುವ ಅಭಿಪ್ರಾಯದ ಆಧಾರದ ಮೇಲೆ ಅಭ್ಯರ್ಥಿಯನ್ನು ಹೆಸರಿಸಲಾಗುವುದು ಎಂದು ತಿಳಿದುಬಂದಿದೆ.

ಹೀಗಾಗಿ ನವೆಂಬರ್ 3ರ ಸಂಜೆಯವರೆಗೆ ಜನರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದ್ದು, ಅವರ ಅಭಿಪ್ರಾಯಗಳ ಆಧಾರದ ಮೇಲೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಮರುದಿನ ಪ್ರಕಟಿಸಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದರು.

ಈಗಾಗಲೇ ಭಾರತೀಯ ಚುನಾವಣಾ ಆಯೋಗ (ಇಸಿಐ) ನವೆಂಬರ್ 3ರಂದು ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ.

ಈ ಕಾರಣ, ಮುಖ್ಯಮಂತ್ರಿ ಅಭ್ಯರ್ಥಿಯೊಂದಿಗೆ ಕೇಜ್ರಿವಾಲ್ ಮುನ್ನಡೆ ಸಾಧಿಸುವ ಮೂಲಕ ಎಎಪಿ ಪ್ರತಿದಿನ ಎರಡರಿಂದ ಮೂರು ರೋಡ್‌ಶೋಗಳನ್ನು ನಡೆಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಮೂಲಕ ಎಎಪಿ, ಬಿಜೆಪಿ ಭದ್ರಕೋಟೆಯನ್ನು ಒಡೆಯಲು ಇಂದಿನಿಂದಲೇ ಪ್ರಯೋಗಗಳನ್ನು ನಡೆಸುತ್ತಿದೆ.

ಕನ್ನಡಿಗರ ಸಂತಸದೊಂದಿಗೆ ನಾನೂ ಭಾಗಿ : ಅರವಿಂದ್‌ ಕೇಜ್ರೀವಾಲ್‌
ಹೊಸದಿಲ್ಲಿ : ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ರವರು ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಕನ್ನಡಿಗರಿಗೆ ಟ್ವೀಟ್‌ ಮಾಡಿ ಶುಭಕೋರಿದ್ದಾರೆ.

ಕರ್ನಾಟಕ ಏಕೀಕರಣದ ಈ ಶುಭ  ಸಂದರ್ಭದಲ್ಲಿ ಸಮಸ್ತ ಕನ್ನಡಿಗರಿಗೆ ಶುಭಾಶಯವನ್ನು ತಿಳಿಸಿದ್ದಾರೆ. ವಿಶ್ವದ ಎಲ್ಲ ಕನ್ನಡಿಗರ  ಸಂತಸದೊಂದಿಗೆ ನಾನೂ ಸಹ ಇದ್ದೇನೆ ಎಂದು ತಮ್ಮ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.

ಕರೆನ್ಸಿ ನೋಟುಗಳ ಮೇಲೆ ಗಣೇಶ್ ಜೀ, ಲಕ್ಷ್ಮಿ ಜೀ ಫೋಟೋ ಹಾಕುವಂತೆ ಕೇಂದ್ರಕ್ಕೆ ಮನವಿ: ಅರವಿಂದ್ ಕೇಜ್ರಿವಾಲ್
ಹೊಸದಿಲ್ಲಿ: ನಮ್ಮ ಕರೆನ್ಸಿ ನೋಟುಗಳ ಮೇಲೆ ಶ್ರೀ ಗಣೇಶ್ ಜೀ ಮತ್ತು ಶ್ರೀ ಲಕ್ಷ್ಮಿ ಜೀ ಅವರ ಫೋಟೋವನ್ನು ಹಾಕುವಂತೆ ನಾನು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಅವರಿಗೆ ಮನವಿ ಮಾಡುತ್ತೇನೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.

ಇಂಡೋನೇಷ್ಯಾ ಇದನ್ನು ಮಾಡಲು ಸಾಧ್ಯವಾಗಿದೆ ಅಂದರೆ ನಾವು ಕೂಡ ಗಣೇಶ್ ಜೀ ಅವರನ್ನು ಆಯ್ಕೆ ಮಾಡಿಕೊಳ್ಳಬಹುದು.

I appeal to the central govt & the PM to put the photo of Shri Ganesh Ji & Shri Laxmi Ji, along with Gandhi Ji's photo on our fresh currency notes, says Delhi CM & AAP national convenor Arvind Kejriwal pic.twitter.com/t0AWliDn75
— ANI (@ANI) October 26, 2022

ನಾನು ಕೇಂದ್ರಕ್ಕೆ ನಾಳೆ ಅಥವಾ ಮರುದಿನ ಪತ್ರ ಬರೆದು ಮನವಿ ಮಾಡುತ್ತೇನೆ. ದೇಶದ ಆರ್ಥಿಕ ಪರಿಸ್ಥಿತಿ ಇತ್ಯರ್ಥಕ್ಕೆ ಪಣ ತೊಡುವುದರ ಹೊರತಾಗಿ ಪರಮಾತ್ಮನ ಆಶೀರ್ವಾದ ಬೇಕು ಎಂದು ಅರವಿಂದ್ ಕೇಜ್ರಿವಾಲ್ ಅವರು ಹೇಳಿದಾರೆ.

If Indonesia can do it; choose Ganesh Ji, so can we… I will write to the centre tomorrow or the day after tomorrow to appeal for it… we need the almighty's  blessings apart from the efforts to settle the economic condition of the country: Delhi CM Arvind Kejriwal pic.twitter.com/jqAOVPOhXg
— ANI (@ANI) October 26, 2022

ಸುಳ್ಳು ಪ್ರಕರಣ ದಾಖಲಿಸಿ ನನ್ನನ್ನು ಬಂಧಿಸಲು ಮುಂದಾಗಿದ್ದಾರೆ: ಮನೀಶ್ ಸಿಸೋಡಿಯಾ
ನವದೆಹಲಿ: ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸೋಮವಾರ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಶ್ನಿಸುವ ಮುನ್ನವೇ ʼನನ್ನನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲಾಗಿದೆʼ ಎಂದು ಆರೋಪಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಭಾನುವಾರ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಕರೆಸಿತ್ತು, ಆದರೆ ವಿಚಾರಣೆಯನ್ನು ಮುಂದೂಡಿ ಅಕ್ಟೋಬರ್ 16, ಸೋಮವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ತಿಳಿಸಿತ್ತು.

ಈ ಕುರಿತು ಟ್ವಿಟರ್‌ನಲ್ಲಿ ಹೇಳಿಕೆ ನೀಡಿರುವ ಮನೀಶ್ ಸಿಸೋಡಿಯಾ ಅವರು, ನನ್ನ ವಿರುದ್ಧ ಸಂಪೂರ್ಣ ನಕಲಿ ಪ್ರಕರಣ ದಾಖಲಿಸಿ ಬಂಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ನಾನು ಗುಜರಾತ್‌ಗೆ ಹೋಗಬೇಕಿತ್ತು. ಈ ಜನರು ಗುಜರಾತ್ ಅನ್ನು ಹೀನಾಯವಾಗಿ ಕಳೆದುಕೊಳ್ಳುತ್ತಿದ್ದಾರೆ. ನಾನು ಗುಜರಾತ್ ಚುನಾವಣಾ ಪ್ರಚಾರಕ್ಕೆ ಹೋಗದಂತೆ ತಡೆಯುವುದು ಅವರ ಉದ್ದೇಶವಾಗಿದೆ ಎಂದು ಆರೋಪಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಸಿಸೋಡಿಯಾ ಅವರು, ʼನಾನು ಗುಜರಾತ್‌ಗೆ ಹೋದಾಗ, ಅಲ್ಲಿನ ಜನರಿಗೆ ದೆಹಲಿಯಂತಹ ಅದ್ಭುತ ಶಾಲೆಗಳನ್ನು ರಾಜ್ಯದಲ್ಲಿಯೂ ನಿರ್ಮಿಸುತ್ತೇವೆ ಎಂದು ಹೇಳಿದ್ದೆ. ಈ ವಿಚಾರ ಕೇಳಿ ಜನ ತುಂಬಾ ಖುಷಿಯಾಗಿದ್ದರು. ಆದರೆ ಈಗಿನ ಸರ್ಕಾರದಲ್ಲಿನ ನಾಯಕರುಗಳು ಗುಜರಾತ್‌ನಲ್ಲಿ ಉತ್ತಮ ಶಾಲೆಗಳನ್ನು ನಿರ್ಮಿಸಲು ಮತ್ತು ಅಲ್ಲಿನ ಜನರು ಪ್ರಗತಿ ಸಾಧಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

मेरे ख़िलाफ़ पूरी तरह से फ़र्ज़ी केस बनाकर इनकी तैयारी मुझे गिरफ़्तार करने की है. मुझे आने वाले दिनों में चुनाव प्रचार के लिए गुजरात जाना था। ये लोग गुजरात बुरी तरह से हार रहे हैं। इनका मक़सद मुझे गुजरात चुनाव प्रचार में जाने से रोकना है। 1/N
— Manish Sisodia (@msisodia) October 17, 2022

ಸೋಮವಾರ ಸಿಬಿಐ ವಿಚಾರಣೆಗೆ ಮುನ್ನ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೂ ಕೂಡ ಮನೀಶ್ ಸಿಸೋಡಿಯಾ ವಿರುದ್ಧದ ಪ್ರಕರಣ ʼಸುಳ್ಳುʼ ಎಂದು ಹೇಳಿದ್ದಾರೆ.

मनीष के घर रेड में कुछ नहीं मिला, बैंक लॉकर में कुछ नहीं मिला। उन पर केस बिलकुल फ़र्ज़ी है

उन्हें चुनाव प्रचार के लिए गुजरात जाना था। उसे रोकने के लिए उन्हें गिरफ़्तार कर रहे हैं

पर चुनाव प्रचार रुकेगा नहीं। गुजरात का हर व्यक्ति आज “आप” का प्रचार कर रहा है।
— Arvind Kejriwal (@ArvindKejriwal) October 17, 2022

ʼಮನೀಶ್ ಅವರ ಮನೆ ಸಿಬಿಐ ದಾಳಿ ನಡಸಿದಾಗ ಅವರ ಮನೆಯಲ್ಲಿ, ಬ್ಯಾಂಕ್ ಲಾಕರ್‌ನಲ್ಲಿ ಏನೂ ಪತ್ತೆಯಾಗಿಲ್ಲ. ಹೀಗಾಗಿ ಅವರ ಮೇಲಿನ ಪ್ರಕರಣ ಸಂಪೂರ್ಣ ಸುಳ್ಳು. ಚುನಾವಣಾ ಪ್ರಚಾರಕ್ಕಾಗಿ ಅವರು ಗುಜರಾತ್‌ಗೆ ಹೋಗಬೇಕಿತ್ತು. ಆದರೆ ಉದ್ದೇಶಪೂರ್ವಕವಾಗಿ ಚುನಾವಣಾ ಪ್ರಚಾರಮಾಡದಂತೆ ತಡೆಯಲು ಅವರನ್ನು ಬಂಧಿಸಲಾಗುತ್ತಿದೆ ಆದರೆ ಚುನಾವಣಾ ಪ್ರಚಾರ ನಿಲ್ಲಿಸುವುದಿಲ್ಲ. ಗುಜರಾತಿನ ಪ್ರತಿಯೊಬ್ಬ ವ್ಯಕ್ತಿಯೂ ಇಂದು ‘ಎಎಪಿ’ ಅನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಇಂದು ಟ್ವೀಟ್ ಮಾಡಿದ್ದಾರೆ.

ಸೋಮವಾರ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿನ ವಿಚಾರಣೆಗಾಗಿ  ಮನೀಶ್ ಸಿಸೋಡಿಯಾ ಅವರಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ನೀಡಿರುವ ಸಮನ್ಸ್ ಅನ್ನು ʼಸ್ವಾತಂತ್ರ್ಯಕ್ಕಾಗಿ ಎರಡನೇ ಹೋರಾಟʼ ಎಂದು ಕರೆದಿದ್ದಾರೆ.

‘ತೆರಿಗೆ ಹಣ ಎಲ್ಲಿ?’ ಸರ್ಕಾರದ ವಿರುದ್ಧ ಕೇಜ್ರಿವಾಲ್‌ ಗರಂ
ನವದೆಹಲಿ: ದೇಶದಲ್ಲಿ ತೆರಿಗೆ ಹೆಚ್ಚಾಗಿದ್ದರು ಕೇಂದ್ರ ಸರ್ಕಾರ ತಮ್ಮ ಬಳಿ ಹಣವಿಲ್ಲ ಎಂದು ಹೇಳುತ್ತಿದೆ. ಹಾಗದರೆ ತೆರಿಗೆ ಹಣ ಎಲ್ಲಿ? ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಅಗ್ನಿಪಥ ಯೋಜನೆಯನ್ನು ಸಮರ್ಥಿಸಿಕೊಂಡ ಕೇಂದ್ರವು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಶದ ರಕ್ಷಣಾ ಸಿಬ್ಬಂದಿಗೆ ಪಿಂಚಣಿ ನೀಡಬೇಕಾಗಿಲ್ಲ ಎಂದು ಹೇಳುತ್ತಿದೆ ಎಂದರು.

2014 ಕ್ಕೆ ಹೋಲಿಸಿದರೆ ಪ್ರಸ್ತುತ ದಿನಮಾನಗಳಲ್ಲಿ ಹೆಚ್ಚು ತೆರಿಗೆ ಸಂಗ್ರಹಿಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುತ್ತಿದ್ದ ಹಣವನ್ನು ಕಡಿಮೆ ಮಾಡಿದೆ, ಕಳೆದ 75 ವರ್ಷಗಳಲ್ಲಿ ಯಾವತ್ತೂ ಸರ್ಕಾರ ಮೂಲ ಆಹಾರ ಧಾನ್ಯಗಳ ಮೇಲೆ ತೆರಿಗೆ ವಿಧಿಸಿಲ್ಲ. ಆದರೆ ಇಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ 1000 ಕೋಟಿ ಮೀರಿದೆ. ಸರ್ಕಾರಿ ಶಾಲೆಗಳು, ಆಸ್ಪತ್ರೆಗಳಲ್ಲಿ ಶುಲ್ಕ ವಿಧಿಸಬೇಕು. ಆದರೂ ಉಚಿತ ಪಡಿತರ ನಿಲ್ಲಿಸಲು ಹೇಳುತ್ತಿದ್ದಾರೆ, ಹಾಗದರೆ ದೇಶದಲ್ಲಿನ ತೆರಿಗೆ ಹಣ ಏನಾಯಿತು? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಸರ್ಕಾರದ ಹಣದಿಂದ ಅವರು ತಮ್ಮ ಬಿಲಿಯನೇರ್ ಸ್ನೇಹಿತರ ತೆರಿಗೆಯನ್ನು ಮನ್ನಮಾಡುತ್ತಿದ್ದಾರೆ ಎಂದು  ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.