Arrangements for Navratri Darshan package tour – Peepal Media

ಕರಾವಳಿ ಪ್ರವಾಸೋದ್ಯಮ ಉತ್ತೇಜನ : ನವರಾತ್ರಿ ದರ್ಶನ ಪ್ಯಾಕೇಜ್‌ ಟೂರ್‌ಗೆ ವ್ಯವಸ್ಥೆ
ಕರಾವಳಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ದಸರಾ ಪ್ಯಾಕೇಜ್ ಪ್ರವಾಸವನ್ನು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ಆಯೋಜಿಸಿದೆ. ಈ ಪ್ರವಾಸವು ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನ, ಮಡಿಕೇರಿ, ಕೊಲ್ಲೂರು ಮತ್ತು ಸಿಗಂದೂರುಗಳಿಗೆ ವಿಶೇಷ ಪ್ಯಾಕೇಜ್‌ಗಳನ್ನು ಒಳಗೊಂಡಿದೆ. ಕಡಿಮೆ ಖರ್ಚಿನಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ.

ಹೈಲೈಟ್ಸ್‌:

ಸೆ.22ರಿಂದ ಅ.2ರ ವರೆಗೆ ದರ್ಶನ ಪ್ಯಾಕೇಜ್‌ ಟೂರ್‌ಗೆ ವ್ಯವಸ್ಥೆ

ಬೆಳಗ್ಗೆ 8ರಿಂದ ರಾತ್ರಿ 8.30ರ ವರೆಗೆ ಸಾಗಲಿದೆ. ಪ್ರಯಾಣದರ ವಯಸ್ಕರಿಗೆ 500 ರೂ. ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ 400 ರೂ. ಇರಲಿದೆ.

ಈ ಬಾರಿ ಮತ್ತಷ್ಟು ವಿಶೇಷತೆಗಳ ಜತೆಗೆ ಸ್ಥಳೀಯ ಕೊಡ್ಯಡ್ಕ ದೇವಸ್ಥಾನ ಹಾಗೂ ಹೊಸಭಾಗದ ಸಿಗಂದೂರು ದೇವಸ್ಥಾನಕ್ಕೂ ಪ್ಯಾಕೇಜ್‌ನಲ್ಲಿಅವಕಾಶ ನೀಡಲಾಗಿದೆ.

ಮಂಗಳೂರು: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ನವರಾತ್ರಿ ಉತ್ಸವ ಸಂದರ್ಭ ಕರಾವಳಿಯ ದೇವಸ್ಥಾನಗಳಲ್ಲಿ ದೂರದೂರಿನ ಪ್ರವಾಸಿಗರು ಸೇರಿದಂತೆ ಸಾರ್ವಜನಿಕರು ಭಾಗವಹಿಸಲು ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ದಸರಾ ಪ್ಯಾಕೇಜ್‌ ಟೂರ್‌ ಆರಂಭಿಸಿ ದೇವರ ದರ್ಶನದ ಭಾಗ್ಯ ಕರುಣಿಸಿದೆ

ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನ ಹಾಗೂ ಮಂಗಳೂರು-ಮಡಿಕೇರಿ, ಮಂಗಳೂರು-ಕೊಲ್ಲೂರು, ಮಂಗಳೂರು-ಸಿಗಂದೂರು ವಿಶೇಷ ಪ್ಯಾಕೇಜ್‌ ಪ್ರವಾಸ ಕಾರ್ಯಾಚರಣೆಯನ್ನು ಸೆ.22ರಿಂದ ಅ.2ರವರೆಗೆ ಆಯೋಜಿಸಿದೆ. ಕಳೆದ ಕೆಲವು ವರ್ಷಗಳಿಂದ ಯೋಜನೆ ಮಾಡಿಕೊಂಡು ಬರಲಾಗುತ್ತಿದ್ದು, ಈ ಬಾರಿ ಮತ್ತಷ್ಟು ವಿಶೇಷತೆಗಳ ಜತೆಗೆ ಸ್ಥಳೀಯ ಕೊಡ್ಯಡ್ಕ ದೇವಸ್ಥಾನ ಹಾಗೂ ಹೊಸಭಾಗದ ಸಿಗಂದೂರು ದೇವಸ್ಥಾನಕ್ಕೂ ಪ್ಯಾಕೇಜ್‌ನಲ್ಲಿಅವಕಾಶ ನೀಡಲಾಗಿದೆ.

ಮಂಗಳೂರು ದಸರಾ ನವದುರ್ಗ ದರ್ಶನ ಪ್ಯಾಕೇಜ್‌:

ಮಂಗಳೂರು ಬಸ್‌ ನಿಲ್ದಾಣದಿಂದ-ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಬೋಳಾರ ಹಳೇ ಕೋಟೆ ದೇವಸ್ಥಾನ-ಶ್ರೀಮಂಗಳಾದೇವಿ ದೇವಸ್ಥಾನ- ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ- ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ (ಮಧ್ಯಾಹ್ನದ ಊಟ)- ಶ್ರೀ ಕಟೀಲು ದುರ್ಗಾಪರಮೆಶ್ವರಿ ದೇವಸ್ಥಾನ-ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೂಲ್ಕಿ-ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ-ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಶ್ರೀ ಉರ್ವ ಮಾರಿಯಮ್ಮ ದೇವಸ್ಥಾನ – ಕುದ್ರೋಳಿ ಗೋಕರ್ಣನಾಥ ದೇವಸ್ಥಾನ, ಮಂಗಳೂರು ಬಸ್‌ ನಿಲ್ದಾಣ. ಬೆಳಗ್ಗೆ 8 ರಿಂದ ರಾತ್ರಿ 8.30ರ ವರೆಗೆ ಸಾಗಲಿದೆ. ಪ್ರಯಾಣದರ ವಯಸ್ಕರಿಗೆ 500 ರೂ. ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ 400 ರೂ. ಇರಲಿದೆ.

ಮಂಗಳೂರು- ಮಡಿಕೇರಿ ಪ್ಯಾಕೇಜ್‌ ಪ್ರವಾಸ:

ಮಂಗಳೂರು-ಮಡಿಕೇರಿ-ರಾಜಾಸೀಟ್‌- ಅಬ್ಬಿಫಾಲ್ಸ್‌- ನಿಸರ್ಗಧಾಮ-ಗೋಲ್ಡನ್‌ ಟೆಂಪಲ್‌-ಮಂಗಳೂರು ಬಸ್‌ ನಿಲ್ದಾಣ. ಬೆಳಗ್ಗೆ 7ರಿಂದ ರಾತ್ರಿ 9.30ರ ವರೆಗೆ ಸಾಗಲಿದೆ. ಪ್ರಯಾಣದರ ವಯಸ್ಕರಿಗೆ 600 ರೂ., ಮಕ್ಕಳಿಗೆ (6ವರ್ಷದಿಂದ 12 ವರ್ಷದವರಿಗೆ) 500ರೂ. ಇರಲಿದೆ.

ಮಂಗಳೂರು- ಕೊಲ್ಲೂರು ಪ್ಯಾಕೇಜ್‌ ಪ್ರವಾಸ:

ಉಚ್ಚಿಲ ಶ್ರೀ ಮಹಾಲಕ್ಷಿತ್ರ್ಮೕ ದೇವಸ್ಥಾನ-ಕಾಪು ಮಾರಿಯಮ್ಮ ದೇವಸ್ಥಾನ- ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನದ ಊಟ)- ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ-ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ – ಮಂಗಳೂರು ಬಸ್‌ ನಿಲ್ದಾಣ. ಪ್ರಯಾಣದರ ವಯಸ್ಕರಿಗೆ 600 ರೂ., ಮಕ್ಕಳಿಗೆ 6ವರ್ಷದಿಂದ 12 ವರ್ಷದವರಿಗೆ 500 ರೂ. ಇರಲಿದೆ. ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಪ್ರಯಾಣ ಸಾಗಲಿದೆ.

ಮಂಗಳೂರು-ಸಿಗಂದೂರು ಪ್ಯಾಕೇಜ್‌ ಪ್ರವಾಸ

ಮಂಗಳೂರು ಬಸ್‌ ನಿಲ್ದಾಣ, ಕುಂದಾಪುರ-ಸಿಗಂದೂರ ಶ್ರೀ ಚೌಡೇಶ್ವರಿ ದೇವಸ್ಥಾನ-ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮಂಗಳೂರು ಬಸ್‌ ನಿಲ್ದಾಣ. ಪ್ರಯಾಣದರ ವಯಸ್ಕರಿಗೆ 700 ರೂ. ಮಕ್ಕಳಿಗೆ 600 ರೂ. ಇರಲಿದೆ. ಬೆಳಗ್ಗೆ 7ರಿಂದ ರಾತ್ರಿ 7.30ರ ವರೆಗೆ ಪ್ರಯಾಣ ಇರಲಿದೆ.

ದಸರಾ ದುರ್ಗಾ ದರ್ಶನ:

ದಸರಾ ದುರ್ಗಾ ದರ್ಶನದಲ್ಲಿ 8 ದೇವಾಲಯಗಳ ದರ್ಶನ ಮಾಡಿಸಲಾಗುತ್ತದೆ. ಬೆಳಗ್ಗೆ 7.30ಕ್ಕೆ ಉಡುಪಿ ನಗರ ಸಾರಿಗೆ ಬಸ್‌ ನಿಲ್ದಾಣದ ಬಳಿಯಿಂದ ಹೊರಟು, 8.30ಕ್ಕೆ ಬ್ರಹ್ಮಾವರದ ನೀಲಾವರ ಶ್ರೀ ಮಹಿಷ ಮರ್ಧಿನಿ ದೇವಸ್ಥಾನ, 9.30-10 ಗಂಟೆಯ ಅವಧಿಯಲ್ಲಿ ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, 11.30ರಿಂದ ಮಧ್ಯಾಹ್ನ 1 ಗಂಟೆಯ ಅವಧಿಯಲ್ಲಿ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗ ದೇವಸ್ಥಾನ, ಬಳಿಕ 2 ಗಂಟೆಗೆ ಕೊಲ್ಲೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನ, 4 ಗಂಟೆಗೆ ಮಾರಣಕಟ್ಟೆ ಶ್ರೀಬ್ರಹ್ಮಲಿಂಗೇಶ್ವರ ದೇವಸ್ಥಾನ ಬಳಿಕ ನೇರಳಕಟ್ಟೆ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಭೇಟಿ ಆಗಿ ರಾತ್ರಿ 7.30ಕ್ಕೆ ಉಡುಪಿ ನಗರ ನಗರ ಬಸ್‌ ನಿಲ್ದಾಣದ ಬಳಿ ಪ್ಯಾಕೇಜ್ ಮುಗಿಯುತ್ತದೆ.