Arrested – Peepal Media

ಬೆಂಗಳೂರಿನಲ್ಲಿ ಹಸುಗೂಸು ಕಳ್ಳರ ಜಾಲ ಬೇಧಿಸಿದ ಪೊಲೀಸರು ; ನಾಲ್ವರ ಬಂಧನ
ಬರೋಬ್ಬರಿ 900 ಹೆಣ್ಣುಭ್ರೂಣ ಹತ್ಯೆಯ ಜಾಲ ಬೆಳಕಿಗೆ ಬಂದು ಇಡೀ ರಾಜ್ಯದ ಜನರನ್ನೇ ಬೆಚ್ಚಿ ಬೀಳಿಸಿದ ನಂತರ ಈಗ ರಾಜಧಾನಿ ಬೆಂಗಳೂರಿನಲ್ಲೇ ಮತ್ತೊಂದು ಭಯಾನಕ ಪ್ರಕರಣ ಪತ್ತೆಯಾಗಿದ್ದು ಈ ಸಂಬಂಧ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಅಪಾಯಕಾರಿ ತಂಡವೊಂದರ ಜಾಲವನ್ನು ಬೇಧಿಸಿದ ಕರ್ನಾಟಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ನಾಲ್ವರೂ ತಮಿಳುನಾಡು ಮೂಲದವರು ಎಂದು ತಿಳಿದು ಬಂದಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ 20 ದಿನದ ಹಸುಗೂಸನ್ನು ಮಾರಾಟ ಮಾಡುತ್ತಿದ್ದ ವೇಳೆ ನೇರವಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಈ ತಂಡ ಎಳೆಯ ಮಕ್ಕಳ ಮಾರಾಟ ಮಾಡುತ್ತಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಹೇಮಲತಾ ಹಾಗೂ ಶರಣ್ಯ ಎನ್ನುವ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌.

ರಾಜರಾಜೇಶ್ವರಿ ನಗರದಲ್ಲಿ 20 ದಿನದ ಗಂಡು ಮಗುವನ್ನು ಮಾರಾಟ ಮಾಡುತ್ತಿದ್ದಾಗ ನೇರವಾಗಿ ರೆಡ್ ಹ್ಯಾಂಡ್ ಆಗಿ ಪೊಲೀಸರಿಗೆ ಸಿಕ್ಕಿದ ನಂತರ ಹಸುಗೂಸನ್ನು ಪೊಲೀಸರು ರಕ್ಷಿಸಿದ್ದಾರೆ.

ಆರೋಪಿಗಳು ಲಕ್ಷ ಲಕ್ಷ ಹಣ ಪಡೆದು ಹಸುಗೂಸುಗಳನ್ನು ಮಕ್ಕಳಾಗದ ದಂಪತಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಜಾಲದ ಹಿಂದೆ ಇನ್ನಷ್ಟು ಜನರು ಇರುವ ಶಂಕೆ ವ್ಯಕ್ತವಾಗಿದೆ. ಇಲ್ಲಿ ಮಗು ಕಳೆದುಕೊಂಡವರ ಜೊತೆಗೆ ಮಕ್ಕಳನ್ನು ಖರೀದಿಸಿದವರಿಗೂ ಆಪತ್ತು ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Atrocity Case : ಪುನೀತ್ ಕೆರೆಹಳ್ಳಿ ಬಂಧನ
ಹಲವು ಗಂಭೀರ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ, ಹಿಂದುತ್ವದ ಹೆಸರಿನಲ್ಲಿ ಗೂಂಡಾಗಿರಿ ಹಾಗೂ ಕೊಲೆ ಆರೋಪದಲ್ಲೂ ಹೆಸರು ಕೇಳಿಬಂದ ಪುನೀತ್ ಕೆರೆಹಳ್ಳಿ ಬಂಧನವಾಗಿದೆ. ಮಹಿಳೆಯನ್ನು ತುಚ್ಛವಾಗಿ ಅವಮಾನಿಸಿ, ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯ ಮೇಲೆ ಜಾತಿ ನಿಂದನೆ ಮಾಡಿದ ಆರೋಪದ ಅಡಿಯಲ್ಲಿ ಶುಕ್ರವಾರ ರಾತ್ರಿ ವೇಳೆಗೆ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈಗಾಗಲೇ ಇದ್ರಿಸ್ ಪಾಷಾ ಕೊಲೆ ಆರೋಪದಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ಆರೋಪಿಯಾಗಿದ್ದು, ರಾಷ್ಟ್ರ ರಕ್ಷಣಾ ಪಡೆ ಎಂಬ ಪುಂಡರ ಗುಂಪು ಕಟ್ಟಿಕೊಂಡು, ಸಮಾಜದಲ್ಲಿ ಸಾಮರಸ್ಯ ಕದಡುವ, ಸಮಾಜ ವಿರೋಧಿ ಕಾರ್ಯಗಳ ಮೂಲಕವೇ ಈತ ಗುರುತಿಸಿಕೊಂಡಿದ್ದ. 2013ರಲ್ಲೇ ವೇಶ್ಯಾವಾಟಿಕೆ ಪ್ರಕರಣವೊಂದರಲ್ಲಿ ಸಿಲುಕಿ ಬಿದ್ದಿದ್ದ ಈತ ಇತ್ತೀಚೆಗೆ ಹಿಂದುತ್ವದ ಹೆಸರಿನಲ್ಲಿ ಗೂಂಡಾಗಿರಿಗೆ ತೊಡಗಿದ ಬಗ್ಗೆಯೂ ಸಾರ್ವಜನಿಕ ಆರೋಪಗಳಿವೆ. ಇತ್ತೀಚೆಗೆ ವಿಧಾನಸೌಧಕ್ಕೆ ಕಲ್ಲು ಹೊಡೆಯುವ ಮತ್ತು ಬಸ್ಸಿಗೆ ಬೆಂಕಿ ಹಚ್ಚುವ ಬೆದರಿಕೆಯನ್ನು ಹಾಕಿದ್ದರ ಕುರಿತು ಪ್ರಕರಣ ದಾಖಲಾಗಿತ್ತು.

ಸಧ್ಯಕ್ಕೆ ಮಹಿಳೆಯ ಘನತೆಗೆ ಧಕ್ಕೆ ಬರುವಂತೆ ಪೋಸ್ಟ್ ಹಾಕಿ, ಪರಿಶಿಷ್ಟ ಜಾತಿಗೆ ಸೇರಿದ ಕನ್ನಡಪರ ಹೋರಾಟಗಾರ, ದಲಿತ ಮುಖಂಡ ರಣಧೀರ ಪಡೆಯ ಹರೀಶ್ ಕುಮಾರ್ ಭೈರಪ್ಪ ಅವರ ಕುರಿತು ಕೀಳುಮಟ್ಟದ ಭಾಷೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕಿದ್ದ. ಈ ಕುರಿತು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಧ್ಯ ಈ ಪ್ರಕರಣದ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿ ಬಂಧನವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹರೀಶ್ ಕುಮಾರ್ ಭೈರಪ್ಪನವರು, “ಕೊನೆಗೂ ನನ್ನ ದೂರಿನ ಮೇರೆಗೆ ಪುನೀತ್ ಕೆರೆಹಳ್ಳಿ ಎನ್ನುವ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವ್ಯಕ್ತಿ ಅರೆಸ್ಟ್ ಆಗಿದ್ದಾನೆ. ನನ್ನ ಹಾಗೂ ನನ್ನ ಕುಟುಂಬದ ಮೇಲೆ ವೈಯಕ್ತಿಕ ದಾಳಿಗೆ ಇಳಿದು ತನ್ನ ಹೀನ ಮನಸ್ಥಿತಿಯನ್ನು ಪ್ರದರ್ಶನ ಮಾಡಿದ, ಸಂಘ ಪರಿವಾರದ ಮುಖಂಡ ಎಂದು ಹೇಳಿಕೊಳ್ಳುವ ವಿಕೃತ ಮನಸ್ಸಿನ ಹಿಂದೂ ಮುಖವಾಡದ ಕೊಲೆ ಆರೋಪಿ ಹಾಗೂ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪಿ ಸಮಾಜಘಾತಕ ಪುನೀತ್ ಕೆರೆಹಳ್ಳಿಯನ್ನು ನೆನ್ನೆಯಿಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದರು. ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಕೇಳಿದರು. ಪೊಲೀಸರ ಬೇಡಿಕೆ ಪುರಸ್ಕರಿಸಿದ ನ್ಯಾಯಾಧೀಶರು ಪುನೀತ್ ಕೆರೆಹಳ್ಳಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಬಂಧನ
ಬ್ಯಾಂಕ್ ಗೆ ವಂಚಿಸಿದ ಆರೋಪದ ಮೇರೆಗೆ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಹಲವು ಬಾರಿ ಸಮನ್ಸ್ ಜಾರಿಯಾದರೂ ಸಮನ್ಸ್ ಗೆ ಉತ್ತರಿಸದ ನರೇಶ್ ಗೋಯಲ್ ಗೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿ ಬಂಧಿಸಿದ್ದಾರೆ.

ಕೆನರಾ ಬ್ಯಾಂಕ್ ಜೊತೆಗಿನ ವ್ಯವಹಾರದಲ್ಲಿ 538 ಕೋಟಿ ರೂ. ಬ್ಯಾಂಕ್ ಗೆ ಹಿಂತಿರುಗಿಸದೆ ವಂಚಿಸಿದ ಪ್ರಕರಣ ಇದಾಗಿದ್ದು, ನರೇಶ್ ಗೋಯಲ್ ಅವರನ್ನು ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ ಶುಕ್ರವಾರ ರಾತ್ರಿ ಬಂಧಿಸಿದೆ.

ಈ ಹಿಂದೆಯೇ ಗೋಯಲ್ ಅವರ ವಿರುದ್ಧ ವಂಚನೆ, ಕ್ರಿಮಿನಲ್ ಪ್ರೀತೂರಿ ಪ್ರಕರಣ ದಾಖಲಿಸಲಾಗಿತ್ತು. ಈ ಹಿಂದೆ ಸಿಬಿಐ ಅಧಿಕಾರಿಗಳು ನರೇಶ್ ಗೊಯಲ್ ಅವರ ನಿವಾಸ, ಕಚೇರಿ ಸೇರಿ ಗೋಯಲ್ ಗೆ ಸಂಬಂಧಿಸಿದ ಮುಂಬೈನ 7 ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು.

ಇದರ ಮಧ್ಯೆ ಇಡಿ ಅಧಿಕಾರಿಗಳು ಜಾರಿ ಮಾಡಿದ ಸಮನ್ಸ್ ನರೇಶ್ ಗೋಯಲ್ ಗೆ ತಲುಪಿದರೂ ಗೋಯಲ್ ಎರಡು ಬಾರಿ ಸಮನ್ಸ್ ಸ್ವೀಕರಿಸಿರಲಿಲ್ಲ. ಕೆನರಾ ಬ್ಯಾಂಕ್ ಜೊತೆಗಿನ ವ್ಯವಹಾರದಲ್ಲಿ 848 ಕೋಟಿ ರೂ. ಸಾಲ ಪಡೆದಿದ್ದ ಜೆಟ್ ವೇಸ್ ನ ನರೇಶ್ ಗೋಯಲ್ 538 ಕೋಟಿ ರೂ. ಸಾಲ ಮರುಪಾವತಿಸಿರಲಿಲ್ಲ. ಈ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದರು. ಈ ಸಂಬಂಧ ಕೆನರಾ ಬ್ಯಾಂಕ್ ಸಿಬಿಐಗೆ ದೂರು ನೀಡಿತ್ತು.

ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಬಿಐ ಆರೋಪದ ತನಿಖೆ ನಡೆಸಿ ಅದನ್ನು ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರಿಸಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಇಡಿ, ಶುಕ್ರವಾರ ತಡರಾತ್ರಿ ನರೇಶ್ ಗೋಯಲ್ ರನ್ನು ಬಂಧಿಸಿದ್ದಾರೆ.